For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಧೂಮಪಾನ-ಮಗುವಿನ ಕಿಡ್ನಿಗೆ ಹಾನಿಕಾರಕ!

ಗರ್ಭಿಣಿಯರ ಧೂಮಪಾನದಿಂದ ಭ್ರೂಣದ ಬೆಳವಣಿಗೆಗೆ ಹೆಚ್ಚು ತೊಂದರೆಯನ್ನುಂಟು ಮಾಡುತ್ತದೆ.. ಅಷ್ಟೇ ಅಲ್ಲದೆ ಹುಟ್ಟಲಿರುವ ಕಂದಮ್ಮನ ಕಿಡ್ನಿಗೂ ಹಾನಿಕಾರಕ ಎಂಬುದನ್ನು ಸಂಶೋಧನೆಯೊಂದು ಖಚಿತಪಡಿಸಿದೆ

By Manu
|

ಧೂಮಪಾನ ಕೆಟ್ಟದು ಎಂದು ತಿಳಿದ ಬಳಿಕವೂ ಇದನ್ನು ಸೇದುವುದು ಏಕೆ ಎಂದು ಇದುವರೆಗೆ ಅರ್ಥವಾಗದ ಒಂದು ರಹಸ್ಯವಾಗಿಯೇ ಉಳಿದಿದೆ. ಅದರಲ್ಲೂ ಮಹಿಳೆಯರು ಸೇದುವುದು ಇನ್ನೂ ಹೆಚ್ಚು ಹಾನಿಕಾರಕವಾಗಿದೆ. ಗರ್ಭವತಿಯರು ಸೇದುವುದಂತೂ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.

ಒಂದು ವೇಳೆ ನೀವು ಗರ್ಭವತಿಯಾಗಿದ್ದು ಧೂಮಪಾನಿಯೂ ಆಗಿದ್ದರೆ ಕೆಲವು ಸುರಕ್ಷತಾ ವಿಧಾನಗಳನ್ನು ನೀವು ಅನಿವಾರ್ಯವಾಗಿ ಅನುಸರಿಸಲೇಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಧೂಮಪಾನ ನಿಮ್ಮ ಗರ್ಭದಲ್ಲಿರುವ ಕಂದನ ಆರೋಗ್ಯಕ್ಕೆ ಅತಿ ಹೆಚ್ಚು ಹಾನಿಯುಂಟುಮಾಡಬಹುದು. ಗರ್ಭಿಣಿಯರೇ ಧೂಮಪಾನ ಮಾಡದಿರಿ, ಎಚ್ಚರ!

ಗರ್ಭವತಿ ಸೇವಿಸುವ ಅಹಾರ, ಪಾನೀಯಗಳು, ಔಷಧಿಗಳು ಮೊದಲಾದವು ಗರ್ಭದಲ್ಲಿರುವ ಕಂದನ ಆರೋಗ್ಯದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನುಂಟುಮಾಡಬಹುದು. ಉದಾಹರಣೆಗೆ ಒಂದು ವೇಳೆ ಗರ್ಭವತಿ ವೈದ್ಯರು ಸೂಚಿಸಿದ ಆಹಾರವನ್ನು ಸಂತುಲಿತ ಪ್ರಮಾಣದಲ್ಲಿ ಸೇವಿಸಿದಾಗ ಮತ್ತು ವೈದ್ಯರು ಬೇಡವೆಂದ ಯಾವುದೇ ಆಹಾರ, ಔಷಧ ಅಥವಾ ವ್ಯಸನಗಳನ್ನು ಸ್ವೀಕರಿಸದೇ ಇದ್ದಾಗ ಕಂದನ ಆರೋಗ್ಯವೂ ಉತ್ತಮವಾಗಿರುತ್ತದೆ. ಗರ್ಭಿಣಿಯರೇ ಎಚ್ಚರ: ದಿನನಿತ್ಯ ಆಹಾರ ಶೈಲಿಯ ಬಗ್ಗೆ ಎಚ್ಚರವಿರಲಿ!

ಆದರೆ ಗರ್ಭವತಿ ತನ್ನ ಆಲಸಿ ಮತ್ತು ಅನಾರೋಗ್ಯಕರ ಜೀವನಕ್ರಮವನ್ನು ಗರ್ಭವತಿಯಾದ ಬಳಿಕವೂ ಬದಲಿಸಿಕೊಳ್ಳದೇ ಧೂಮಪಾನದಂತಹ ಕೆಟ್ಟ ಚಟಗಳನ್ನು ಮುಂದುವರೆಸಿದರೆ ಮಾತ್ರ ಮಗುವಿನ ಆರೋಗ್ಯ ಬಾಧೆಗೊಳಗಾಗುವುದು ಖಚಿತ. ಈ ವಿಷಯವನ್ನು ವಿಜ್ಞಾನವೇ ಪುರಸ್ಕರಿಸಿದೆ. ಆದ್ದರಿಂದ ಬರಲಿರುವ ಪುಟ್ಟ ಕಂದನ ಆರೋಗ್ಯಕ್ಕಾಗಿಯಾದರೂ ನೀವು ಈ ಕೆಟ್ಟ ಚಟವನ್ನು ಬಿಡಲೇಬೇಕು. ಇದರಿಂದ ನಿಮಗೆ ತೊಂದರೆಯಾದರೂ ಸಹಾ! ಗರ್ಭಿಣಿಯರು ಮಾಡಬಾರದ 10 ಕಾರ್ಯಗಳು

ಒಂದು ವೇಳೆ ನೀವು ಹಠ ಹಿಡಿದು ಧೂಮಪಾನವನ್ನು ಮುಂದುವರೆಸಿದರೆ ನಿಮ್ಮ ಕಂದನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವುಂಟಾಗುತ್ತದೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ನಿಮಗೆ ಮಾನಸಿಕವಾಗಿ ದೃಢನಿಶ್ಚಯ ತಾಳಲು ನೆರವಾಗುತ್ತದೆ...

ನಿಮ್ಮ ಧೂಮಪಾನದಿಂದ ಏನಾಗುತ್ತದೆ?

ನಿಮ್ಮ ಧೂಮಪಾನದಿಂದ ಏನಾಗುತ್ತದೆ?

ಧೂಮಪಾನದಿಂದ ಮೊತ್ತ ಮೊದಲನೆಯದಾಗಿ ಶ್ವಾಸಕೋಶಗಳ ಮೇಲೆ ದುಷ್ಟರಿಣಾಮವುಂಟಾಗುತ್ತದೆ. ರಕ್ತದಲ್ಲಿ ನಿಕೋಟಿನ್ ಬೆರೆಯುವ ಮೂಲಕ ಹತ್ತು ಹಲವು ತೊಂದರೆಗಳು ಎದುರಾಗುತ್ತವೆ. ಇವು ಇತರರಿಗೆ ಎಷ್ಟು ಹಾನಿಕಾರವೋ ಅದಕ್ಕಿಂತಲೂ ಹೆಚ್ಚು ಗರ್ಭವತಿಗೆ ಹಾನಿಕಾರಕವಾಗಿದೆ.

ಧೂಮಪಾನದ ಹೊಗೆಯಲ್ಲಿ ಏನೇನಿದೆ?

ಧೂಮಪಾನದ ಹೊಗೆಯಲ್ಲಿ ಏನೇನಿದೆ?

ಈ ಹೊಗೆಯಲ್ಲಿ ಪ್ರಮುಖವಾಗಿ ವಿಷಕಾರಕವಾದ ಟಾರಿನಂತಹ ಗಾಢವಾದ ದ್ರವ ನಿಕೋಟಿನ್ ಇದೆ. ಹೆಚ್ಚೂ ಕಡಿಮೆ ಬೆಲ್ಲದ ನೀರಿನಷ್ಟು ಗಾಢವಾಗಿರುವ ಈ ದ್ರವ ರಕ್ತನಾಳಗಳ ಒಳಗೆ ಸುಲಭವಾಗಿ ಅಂಟಿಕೊಳ್ಳುತ್ತದೆ. ಶ್ವಾಸನಾಳಗಳ ಒಳಭಾಗದಲ್ಲಿಯೂ ಅಂಟಿಕೊಂಡು ಗಟ್ಟಿಯಾಗಿಬಿಡುತ್ತದೆ.

ಧೂಮಪಾನದ ಹೊಗೆಯಲ್ಲಿ ಏನೇನಿದೆ?

ಧೂಮಪಾನದ ಹೊಗೆಯಲ್ಲಿ ಏನೇನಿದೆ?

ಅಷ್ಟೇ ಅಲ್ಲದೇ ಹಲ್ಲುಗಳ ಮೇಲೆ ಅಂಟಿಕೊಂಡು ಹಲ್ಲುಗಳ ಬಣ್ಣವನ್ನು ಹಳದಿಯಾಗಿಸುತ್ತದೆ. ಉಸಿರಾಟದಲ್ಲಿ ದುರ್ವಾಸನೆ, ತುಟಿಗಳು ಕಪ್ಪಾಗುವುದು, ಅಜೀರ್ಣತೆ, ವಾಕರಿಕೆ, ಹಸಿವಾಗದಿರುವುದು, ಅನಾರೋಗ್ಯಕರ ಕ್ರಮದಲ್ಲಿ ತೂಕದಲ್ಲಿ ಇಳಿಕೆ, ಸೈನಸ್ ಭಾಗ ಅಥವಾ ಕುಹರದಲ್ಲಿ ಸೋಂಕು, ಗಂಟಲ ಕ್ಯಾನ್ಸರ್, ಬಾಯಿ ದವಡೆ, ಕೆನ್ನೆಯ ಕ್ಯಾನ್ಸರ್, ತುಟಿ, ಶ್ವಾಸಕೋಶದ ಕ್ಯಾನ್ಸರ್, ಒಸಡುಗಳು ಸಡಿಲವಾಗಿ ಹಲ್ಲು ಸುಲಭವಾಗಿ ಉದುರುವುದು ಮೊದಲಾದ ಹತ್ತು ಹಲವು ತೊಂದರೆಗಳಿಗೆ ಕಾರಣವಾಗುತ್ತದೆ.

ಧೂಮಪಾನ ಮತ್ತು ಮಗುವಿನ ಮೂತ್ರಪಿಂಡಗಳ ವೈಫಲ್ಯ

ಧೂಮಪಾನ ಮತ್ತು ಮಗುವಿನ ಮೂತ್ರಪಿಂಡಗಳ ವೈಫಲ್ಯ

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಬಂದಿರುವಂತೆ ಗರ್ಭಾವಸ್ಥೆಯಲ್ಲಿ ಮಹಿಳೆ ಅತಿ ಹೆಚ್ಚಾಗಿ ಧೂಮಪಾನ ಮಾಡಿದರೆ ಇವರ ಗರ್ಭದಲ್ಲಿರುವ ಮಗುವಿನ ಮೂತ್ರಪಿಂಡಗಳಲ್ಲಿ ತೊಂದರೆ ಕಂಡುಬಂದಿರುತ್ತದೆ.

ಧೂಮಪಾನ ಮತ್ತು ಮಗುವಿನ ಮೂತ್ರಪಿಂಡಗಳ ವೈಫಲ್ಯ

ಧೂಮಪಾನ ಮತ್ತು ಮಗುವಿನ ಮೂತ್ರಪಿಂಡಗಳ ವೈಫಲ್ಯ

ಮಗುವಿನ ಜನನವಾದ ಬಳಿಕ ಮೂತ್ರಪಿಂಡಗಳು ಅಗತ್ಯವಿದ್ದಷ್ಟು ಗಾತ್ರ ಪಡೆದಿರದೇ

ಕಡಿಮೆ ಸಾಮರ್ಥ್ಯ ಹೊಂದಿರುತ್ತವೆ. ಮೂತ್ರಪಿಂಡಗಳು ಕಡಿಮೆ ಕ್ಷಮತೆ ಹೊಂದಿರುವ ಈ ಸಾಧ್ಯತೆ ಇತರ ತಾಯಿಯರಿಗಿಂತ ಧೂಮಪಾನಿ ತಾಯಂದಿರ ಮಕ್ಕಳಲ್ಲಿ 16.7%ರಷ್ಟು ಹೆಚ್ಚಾಗಿದೆ.

ಸಂಶೋಧನೆಗಳ ನಿರ್ಣಯ

ಸಂಶೋಧನೆಗಳ ನಿರ್ಣಯ

ಸಂಶೋಧನೆಗಳ ಮೂಲಕ ಖಚಿತಪಡಿಸಿಕೊಂಡ ವಿಷಯವೆಂದರೆ ಗರ್ಭಾವಸ್ಥೆಯಲ್ಲಿ ತಾಯಿ ಧೂಮಪಾನ ಮಾಡುವುದರಿಂದ ಮಗುವಿನ ಮೂತ್ರಪಿಂಡಗಳು ಅತಿ ಹೆಚ್ಚು ಪ್ರಭಾವಕ್ಕೊಳಗಾಗುತ್ತವೆ. ಆದ್ದರಿಂದ ತಾಯಿಯಾಗುತ್ತಿರುವವಳು ಗರ್ಭಾವಸ್ಥೆಯಲ್ಲಿ ಧೂಮಪಾನ, ಮದ್ಯಪಾನಗಳನ್ನು ಖಂಡಿತಾ ಅನುಸರಿಸಕೂಡದು.

English summary

Smoking During Pregnancy Damage The Baby's Kidneys?

If you are a woman who is pregnant, then you would surely know that there are many precautions you must take during this phase. If you are wondering what are some of the negative effects of smoking during pregnancy, then you have come to the right place! Pregnant women have to take utmost care of their health, as their health directly impacts the baby in their womb.
X
Desktop Bottom Promotion