Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ ಧೂಮಪಾನ ಮಾಡದಿರಿ, ಎಚ್ಚರ!
ಬಹುಬೇಗ ಪ್ರಾಣಕ್ಕೆ ಕುತ್ತುತರುವಂತಹ ಮಾರ್ಗಗಳಲ್ಲಿ ಧೂಮಪಾನ ಮಾಡುವುದು ಸಹ ಒಂದು ಮಾರ್ಗವಾಗಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. 'ಧೂಮಪಾನದಿಂದ ಆರೋಗ್ಯಕ್ಕೆ ಹಾನಿಕರ' ಎಂಬ ವಾಕ್ಯವು ಎಲ್ಲರಿಗೂ ಚಿರಪರಿಚಿತ. ಹೀಗಿದ್ದಾಗ್ಯೂ ಸಹ ವಿದ್ಯಾವಂತ ಮಹಿಳೆಯರೂ ಒಳಗೊಂಡಂತೆ ಹೆಚ್ಚಿನವರು ಈ ಚಟಕ್ಕೆ ದಾಸರಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಈಗೀಗಲಂತೂ ಗರ್ಭಿಣಿಯರು ಧೂಮಪಾನ ಮಾಡುತ್ತಿರುವ ಬೆಳವಣಿಗೆ ಹುಟ್ಟಿಕೊಂಡಿದೆ. ಇದೊಂದು ಕಳವಳಕಾರಿ ಬೆಳವಣಿಗೆಯಾಗಿದೆ. ಪ್ರಸ್ತುತ ಅಂದಾಜಿನ ಪ್ರಕಾರ ಶೇಖಡಾ 8 ರಷ್ಟು ಗರ್ಭಿಣಿಯರು ವಿಶ್ವಾದ್ಯಂತ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ.
ಆಹಾರ ತಜ್ಞರು ಈ ಬಗ್ಗೆ ಹೆಚ್ಚಿನ ಆತಂಕ ವ್ಯಕ್ತಪಡಿಸಿದ್ದು, ಗರ್ಭಿಣಿಯರ ಧೂಮಪಾನದಿಂದ ಭ್ರೂಣದ ಬೆಳವಣಿಗೆಗೆ ಹೆಚ್ಚು ತೊಂದರೆಯನ್ನುಂಟು ಮಾಡುತ್ತದೆ. ಮಹಿಳೆಯರು ಧೂಮಪಾನದ ಕೆಟ್ಟ ಚಟದಿಂದ ದೂರವಿರಬೇಕು. ಎಲ್ಲರಿಗೂ ತಿಳಿದಂತೆ ಹೆಚ್ಚು ಧೂಮಪಾನ ಮಾಡಿದ ಪುರುಷನ ವೀರ್ಯವು ದುರ್ಬಲವಾಗಿದ್ದು, ಅದರಂತೆಯೇ ಗರ್ಭಿಣಿಯರು ಧೂಮಪಾನ ಮಾಡಿದಲ್ಲಿ ನಿಮ್ಮೊಳಗೆ ಬೆಳವಣಿಗೆಯಾಗುತ್ತಿರುವ ಶಿಶುವಿನ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತದೆ.
ಇದರಿಂದ ಹೆಚ್ಚು ಅಪಾಯಕಾರಿ ವಿಚಾರವೇನೆಂದರೆ ಹಾನಿಕಾರಕ ರಾಸಾಯನಿಕ ಅಂಶಗಳಾದ ಕಾರ್ಬನ್ ಮೋನೋಕ್ಸೈಡ್ ಮತ್ತು ಇತ್ಯಾದಿ ಅಂಶಗಳು ರಕ್ತದಲ್ಲಿ ಬೆರೆತುಕೊಂಡರೆ ಶಿಶುವಿಗೆ ಪರಿಣಾಮ ಬೀರುತ್ತದೆ. ಗರ್ಭಿಣಿಯರಿದ್ದಾಗ ಧೂಮಪಾನ ಮಾಡಿದರೆ ಉಂಟಾಗುವ ಅಪಾಯಗಳ ಬಗ್ಗೆ ಕೆಲ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ವಿವರಗಳಿಗೆ ಮುಂದೆ ಓದಿ...

ಅಪಾಯ-1
ತಕ್ಷಣಕ್ಕೆ ಭ್ರೂಣ ಅಸುನೀಗುವ ಅಪಾಯವಿರುತ್ತದೆ. ಈ ಸಮಸ್ಯೆಯು ಹೆಚ್ಚಾಗಲು ಗರ್ಭಿಣಿಯರ ಧೂಮಪಾನವು ಕಾರಣವಾಗುತ್ತದೆ.

ಅಪಾಯ-2
ಆರೋಗ್ಯ ತಜ್ಞರು ಹೇಳುವ ಪ್ರಕಾರ ಗರ್ಭಿಣಿಯರ ಧೂಮಪಾನದಿಂದ ಶಿಶು ಜನ್ಮ ನೀಡುವ ಮುನ್ನವೇ ಸಾವನ್ನಪ್ಪುತ್ತದೆ ಅಥವಾ ಗರ್ಭಪಾತದ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತದೆ.

ಅಪಾಯ-3
ನಿಗದಿತ ಅವಧಿಗೂ ಮುನ್ನವೇ ಜನನ ಅಥವಾ ಕಡಿಮೆ ತೂಕವಿರುವ ಶಿಶುವಿನ ಜನನದ ಪ್ರಮಾಣ ಇದರಿಂದ ಏರಿಕೆಯಾಗುತ್ತದೆ.

ಅಪಾಯ-4
ಧೂಮಪಾನ ಮಾಡುವ ಮಹಿಳೆಯರಿಗೆ ಅಂಗಾಂಗ ವೈಫಲ್ಯದ ಶಿಶುವಿನ ಜನನವಾಗುವ ಅಪಾಯ ಎದುರಾಗುತ್ತದೆ.

ಅಪಾಯ-5
ಗರ್ಭಿಣಿಯರ ಧೂಮಪಾನದಿಂದ ಭ್ರೂಣದ ಶ್ವಾಸಕೋಶದಲ್ಲಿ ತೊಂದರೆಯುಂಟಾಗುವ ಅಪಾಯ ಉಂಟಾಗುತ್ತದೆ.

ಅಪಾಯ-6
ಇದರಿಂದ ಶಿಶುವಿಗೆ ಅವಶ್ಯಕ ಆಮ್ಲಜನಕದ ಕೊರತೆಯುಂಟಾಗಿ ಆರೋಗ್ಯದಲ್ಲಿ ಏರುಪೇರುಗಳುಂಟಾಗುತ್ತದೆ. ಆದ್ದರಿಂದ ಇದೊಂದು ಸಕಾಲವಾಗಿದ್ದು, ಕೂಡಲೇ ಧೂಮಪಾನವನ್ನು ನಿಷೇದಿಸಿರಿ. ಇದರಿಂದ ನಿಮ್ಮ ಮತ್ತು ನಿಮ್ಮ ಶಿಶುವಿನ ಭವಿಷ್ಯದ ಬದುಕು ಹಸನಾಗುತ್ತದೆ.



Click it and Unblock the Notifications
