For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮಾಡಬಾರದ 10 ಕಾರ್ಯಗಳು

By Super
|

ಪ್ರತಿಯೊಬ್ಬ ಮಹಿಳೆಯು ತನಗೆ ಹುಟ್ಟುವ ಮಗು, ಯಾವುದೇ ಹುಟ್ಟಿನ ದೋಷವಿಲ್ಲದೆ, ರೋಗ ನಿರೋಧಕ ಶಕ್ತಿಯ ಕೊರತೆ ಇಲ್ಲದೆ, ಆರೋಗ್ಯಕರವಾಗಿರಬೇಕೆಂದು ಆಶಿಸುತ್ತಾಳೆ. ಕೆಲವು ಬಾರಿ ತಾಯಿಯ ಗರ್ಭದಲ್ಲಿ, ಭ್ರೂಣ ರೂಪದಲ್ಲಿದ್ದಾಗಲೇ ಅಪಾಯಕ್ಕೆ ಒಳಪಟ್ಟರೆ, ಇನ್ನು ಕೆಲವರಿಗೆ ರೋಗನಿರೋಧಕ ಶಕ್ತಿಯ ಬೆಳವಣಿಗೆ ಮೇಲೆ ಪ್ರಭಾವ ಬೀರಿ, ಶಿಶು ಜನಿಸಿದ ನಂತರದ ಜೀವನದಲ್ಲಿ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

ಆದ್ದರಿಂದ ಗರ್ಭಿಣಿಯರು ಈ ಕೆಳಕಂಡ 10 ವಿಷಯಗಳನ್ನು ದೂರವಿಡಬೇಕು.

1. ಸಿಗರೇಟ್ ಸೇದಬಾರದು

1. ಸಿಗರೇಟ್ ಸೇದಬಾರದು

ಗರ್ಭಿಣಿ ಸ್ತ್ರೀಯರು ಯಾವುದೇ ಕಾರಣಕ್ಕೂ ಸಿಗರೇಟನ್ನು ಸೇದಬಾರದು. ಅಷ್ಟೇ ಅಲ್ಲ, ಸಿಗರೇಟನ್ನು ಸೇದುವವರ ಅಕ್ಕಪಕ್ಕದಲ್ಲಿ ಸಹ ಕುಳಿತುಕೊಳ್ಳಬಾರದು. ನೇರವಾಗಿ ಅಥವಾ ಪರೋಕ್ಷವಾಗಿ ಸಿಗರೇಟಿನ ಹೊಗೆ, ತಾಯಿ ಹಾಗು ಮಗುವಿನ ಸ್ವಾಸ್ಥ್ಯಕ್ಕೆ ಅಪಾಯಕಾರಿಯಾಗಿದೆ. ಅಧ್ಯಯನದ ಪ್ರಕಾರ ಮೇಲಿಂದ ಮೇಲೆ ಸಿಗರೇಟಿನ ಹೊಗೆಯನ್ನು ಒಳಗೆ ಎಳೆದುಕೊಳ್ಳುವುದರಿಂದ ಅಕಾಲಿಕ ಜನನ, ಸಹಜವಾಗಿ ಆಗುವ ಗರ್ಭಪಾತಗಳು, ಕಡಿಮೆ ತೂಕದ ಮಗುವಿನ ಜನನ, ಭ್ರೂಣ ಅಥವಾ ಶಿಶುವಿನ ಮರಣ ಮುಂತಾದ ದುಷ್ಪರಿಣಾಮಗಳು ತಾಯಿ ಹಾಗು ಆಕೆಯ ಮಗುವಿನ ಮೇಲೆ ಬೀರುತ್ತದೆ. ಇದರ ಜೊತೆಗೆ ಬೆಳವಣಿಗೆಗೆ ಸಂಬಂಧಪಟ್ಟ ತೊಂದರೆಗಳನ್ನು ಸಹ ಎದುರಿಸಬೇಕಾಗುತ್ತದೆ. ಏಕಂದರೆ, ಇದು ಭ್ರೂಣದ ರಕ್ತ ನಾಳವನ್ನು ಕಿರಿದಾಗಿಸಿ, ಮೆದುಳಿಗೆ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದು ಬಹಳ ಸಮಯದಿಂದಲೂ ಜನಸಾಮಾನ್ಯರ ಅರಿವಿನಲ್ಲಿದ್ದರೂ, ಇಂದಿಗೂ ಸಹ, ಕೆಲವು ಗರ್ಭಿಣಿ ಸ್ತ್ರೀಯರು ಸಿಗರೇಟನ್ನು ಸೇದುತ್ತಿರುವುದು ವಿಷಾದದ ಸಂಗತಿ.

2. ಮದ್ಯಪಾನ

2. ಮದ್ಯಪಾನ

ಗರ್ಭಿಣಿ ಸ್ತ್ರೀಯರು ಮದ್ಯಪಾನದಿಂದ ದೂರವಿರಬೇಕು. ಭ್ರೂಣಗಳಿಗೆ ಮದ್ಯಪಾನದ ವಿಷಯದಲ್ಲಿ ಸುರಕ್ಷಿತ ಮಟ್ಟ ಎಂಬುದು ಇರುವುವೇ ಇಲ್ಲ. ಇದರಿಂದ ಭ್ರೂಣಕ್ಕೆ ಆಗುವ ಹಾನಿ ಸೇವಿಸಿದ ಮದ್ಯದ ಮಟ್ಟ ಹಾಗು ಅದರ ಕಾಲಾವಧಿ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚು ಪ್ರಮಾಣದ ಮದ್ಯಕ್ಕೆ ಭ್ರೂಣ ತೆರೆದುಕೊಂಡರೆ ಹೆಚ್ಚು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಆಗುವ ದುಷ್ಪರಿಣಾಮವೆಂದರೆ, ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್ (FAS).

ಇದರಿಂದ ನ್ಯೂನತೆವುಳ್ಳ ಮಗು ಹಾಗು ಅಸಹಜ(ವಿಕೃತ)ಶಿಶುವಿನ ಜನನಕ್ಕೆ ಕಾರಣವಾಗುತ್ತದೆ. ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್ (FAS) ಶಿಶುವಿನ ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ. ಇದು ಶಿಶುವಿನಲ್ಲಿ ಸಹಜಾತ (ಹುಟ್ಟಿನಿಂದಲೇ ಬಂದ) ದೋಷಗಳಿಗೆ ಕಾರಣವಾಗುತ್ತದೆ. ಅವು ಯಾವುವೆಂದರೆ, ಸಿಎನ್ಎಸ್ ಡಿಸ್ ಫಂಕ್ಷನ್, ಮೂಳೆಗಳ ಜೋಡಣೆಯ ವ್ಯವಸ್ಥೆಯಲ್ಲಿ ದೋಷ, ಪ್ರಸವ ಪೂರ್ವ ಹಾಗು ಪ್ರಸವದ ನಂತರದ ಬೆಳವಣಿಗೆಯಲ್ಲಿ ಕೊರತೆಗಳು, ಮುಖದ ಆಕಾರದಲ್ಲಿ ನ್ಯೂನತೆ, ಅಂಗಗಳಲ್ಲಿ ಊನ ಮುಂತಾದವು. ಇಲ್ಲಿ ಮತ್ತೆ ಹೇಳಬೇಕೆಂದರೆ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಜನಸಾಮಾನ್ಯರ ಅರಿವಿನಲ್ಲಿದ್ದರೂ, ಇಂದಿಗೂ ಸಹ, ಕೆಲವು ಗರ್ಭಿಣಿ ಸ್ತ್ರೀಯರು ಮದ್ಯಪಾನವನ್ನು ಮಾಡುತ್ತಿರುವುದು ವಿಷಾದದ ಸಂಗತಿ.

ಬೆಕ್ಕಿನ ಕೊಳಕನ್ನು ಸ್ವಚ್ಛ ಮಾಡಬಾರದು

ಬೆಕ್ಕಿನ ಕೊಳಕನ್ನು ಸ್ವಚ್ಛ ಮಾಡಬಾರದು

3. ಗರ್ಭಿಣಿ ಸ್ತ್ರೀಯರು ಬೆಕ್ಕಿನ ಕೊಳಕನ್ನು ಸ್ವಚ್ಛ ಮಾಡುವ ಕೆಲಸವನ್ನು ಕೈಗೊಳ್ಳಬಾರದು. ಏಕೆಂದರೆ, ಇದರಲ್ಲಿರುವ ಪರೋಪ ಜೀವಿ ಟಾಕ್ಸೋಪ್ಲಾಸ್ಮೋಸಿಸ್ ಗೆ ಕಾರಣವಾಗುತ್ತದೆ. ಇದು ಸ್ಟಿಲ್ ಬರ್ಥ್ (ನಿಶ್ಚಲ ಜನನ), ಜನನ ದೋಷ, ಎಕ್ಟೋಪಿಕ್ ಗರ್ಭಾವಸ್ಥೆಗೆ ಕಾರಣವಾಗುತ್ತದೆ. ಅನೇಕ ಪ್ರಸಂಗಗಳಲ್ಲಿ, ಮಹಿಳೆಯರು ಬಹಳ ಸಮಯದಿಂದ ಬೆಕ್ಕಿನ ಜೋಡಿ ಒಡನಾಟವನ್ನು ಹೊಂದಿರುತ್ತಾರಾದ್ದರಿಂದ ಟಾಕ್ಸೋಪ್ಲಾಸ್ಮೋಸಿಸ್ ಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಆದರೂ, ನಿಮ್ಮ ಬೆಕ್ಕನ್ನು ಕಾಲಕಾಲಕ್ಕೆ ಪಶು ವೈದ್ಯರ ಬಳಿ ತಪಾಸಣೆಗೆ ಕರೆದುಕೊಂಡು ಹೋಗುವುದು ಹೆಚ್ಚು ಸೂಕ್ತ.

4. ಅರ್ಧ ಬೆಂದ ನಾನ್ ವೆಜ್ ತಿನ್ನಬಾರದು

4. ಅರ್ಧ ಬೆಂದ ನಾನ್ ವೆಜ್ ತಿನ್ನಬಾರದು

ಗರ್ಭಿಣಿ ಸ್ತ್ರೀಯರು ಹಸಿ ಅಥವಾ ಅರ್ಧ ಬೆಂದ ಮಾಂಸವನ್ನು, ಸೀ ಫುಡ್ ಅನ್ನು ತಿನ್ನಬಾರದು. ಹಸಿ ಅಥವಾ ಅರ್ಧ ಬೆಂದ ಮಾಂಸದಲ್ಲಿಯೂ ಪರೋಪ ಜೀವಿ ಇರುವುದರಿಂದ ಟಾಕ್ಸೋಪ್ಲಾಸ್ಮೋಸಿಸ್ ಗೆ ಕಾರಣವಾಗುತ್ತದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು ಸಂಪೂರ್ಣವಾಗಿ ಬೇಯಿಸಿದ ಮಾಂಸವನ್ನು ಸೇವಿಸಬೇಕು. ಹಸಿ ಅಥವಾ ಅರ್ಧ ಬೆಂದ ಮಾಂಸದಲ್ಲಿ ಹಾಗು ಸೀ ಫುಡ್ ನಲ್ಲಿರುವ ಸಾಲ್ಮೋನೆಲ್ಲಾ ಮತ್ತು ಕೊಲಿಫಾರ್ಮ್ ಎಂಬ ಬ್ಯಾಕ್ಟೀರಿಯಾಗೆ ಒಡ್ಡಲ್ಪಡುವ ಸಂಭವ ಹೆಚ್ಚಾಗಿರುವುದರಿಂದ ಸ್ಟಿಲ್ ಬರ್ಥ್, ಗರ್ಭಪಾತ ಅಥವಾ ಭ್ರೂಣದ ಮೆದುಳಿಗೆ ಹಾನಿಯಾಗುತ್ತದೆ.

5. ಮೀನು ತಿನ್ನದಿದ್ದರೆ ಒಳ್ಳೆಯದು

5. ಮೀನು ತಿನ್ನದಿದ್ದರೆ ಒಳ್ಳೆಯದು

ಗರ್ಭಿಣಿ ಸ್ತ್ರೀಯರು ಮೀನು ತಿನ್ನುವುದನ್ನು ಬಿಡಬೇಕು. ಇದರ ಅರ್ಥ ಮೀನು ತಿನ್ನುವುದು ಹಾನಿಕರ ಎಂದಲ್ಲ. ಆದರೆ, ಕಾರ್ಖಾನೆಯಿಂದ ಹೊರಬರುವ ಕೊಳಚೆ ನೀರಲ್ಲಿ ಮರ್ಕ್ಯುರಿ ಇರುತ್ತದೆ. ಇದು ಬೆಳೆಯುತ್ತಿರುವ ಭ್ರೂಣಕ್ಕೆ ವಿಷಕಾರಿಯಾಗಿ ಪರಿಣಮಿಸಬಹುದು. ಶಾರ್ಕ್, ಸ್ವೋರ್ಡ್ ಮೀನು, ಟೂನ ಮೀನುಗಳು ಮಿಥೈಲ್ ಮರ್ಕ್ಯುರಿಯನ್ನು ಒಂದೆಡೆ ಸೇರಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಇದು ಭ್ರೂಣದ ಮೆದುಳಿನ ಬೆಳವಣಿಗೆಗೆ ಹಾನಿಕಾರಕವಾಗುತ್ತದೆ.

6. ಕೀಟನಾಶಕಗಳಿಂದ ದೂರವಿರಬೇಕು

6. ಕೀಟನಾಶಕಗಳಿಂದ ದೂರವಿರಬೇಕು

ಕೀಟನಾಶಕ, ಕ್ರಿಮಿನಾಶಕ, ಕಳೆಕುಲಿ (ಹರ್ಬಿಸೈಡ್), ಬೂಸಳಿಕ (ಫಂಗಿಸೈಡ್) ಮತ್ತು ಇತರ ವಿಷಕಾರಕ ರಾಸಾಯನಿಕಗಳು ಗರ್ಭದಲ್ಲಿರುವ ಶಿಶುವಿಗೆ ಹಾನಿಯುಂಟು ಮಾಡುತ್ತವೆ. ಇದು ವಿಷಯುಕ್ತ ರಾಸಾಯನಿಕವನ್ನು ಬಹಿರಂಗ ಪಡಿಸಿದ ಅವಧಿ ಮತ್ತು ಅದರಲ್ಲಿರುವ ವಿಷ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಇದರಿಂದ ಮೊದಲನೆಯ ಹಂತದಲ್ಲಿರುವ, ಭ್ರೂಣದ ಬೆಳವಣಿಗೆ ತಡವಾಗುತ್ತದೆ. ದುರದೃಷ್ಟವಶಾತ್, ಯುಎಸ್ ನಲ್ಲಿ ಕೀಟನಾಶಕಗಳನ್ನು ಬಹಳ ವ್ಯಾಪಕವಾಗಿ ಬಳಸುತ್ತಾರೆ. ನಿಮ್ಮ ಮನೆಗಳಲ್ಲಿ, ಗೃಹ ಬಳಕೆಯ ಕೀಟ ನಿಯಂತ್ರಣ ಉತ್ಪನ್ನಗಳಲ್ಲಿ, ಕೀಟನಾಶಕ ಇರುತ್ತದೆ. ಲಾನ್ ಗಳಲ್ಲಿ, ಉದ್ಯಾನವನಗಳಲ್ಲಿ, ಬಳಸುವ ಕೀಟನಾಶಕಗಳು ಬಹಳ ಹಾನಿಕಾರಕವಾಗಿರುತ್ತದೆ. ಎಲ್ಲಾ ತರಹದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮುನ್ನ ಚೆನ್ನಾಗಿ ತೊಳೆಯಬೇಕು. ಸಾಧ್ಯವಾದ ಮಟ್ಟಿಗೆ ಮನೆಗಳಲ್ಲಿ ಮತ್ತು ತೋಟಗಳಲ್ಲಿ, ಜೈವಿಕ ಉತ್ಪನ್ನಗಳನ್ನು ಮತ್ತು ಅದನ್ನು ಬೆಳೆಯುವ ಕ್ರಮವನ್ನು ಅಳವಡಿಸಿಕೊಳ್ಳಬೇಕು.

7. ದೇಹದ ಉಷ್ಣತೆ ಏರಲು ಬಿಡಬಾರದು

7. ದೇಹದ ಉಷ್ಣತೆ ಏರಲು ಬಿಡಬಾರದು

ಗರ್ಭಿಣಿ ಸ್ತ್ರೀಯರು ತಮ್ಮ ದೇಹದ ಉಷ್ಣಾಂಶ ಹಠಾತ್ತನೆ ಏರದಂತೆ ಎಚ್ಚರ ವಹಿಸಬೇಕು. ಉಷ್ಣಾಂಶವು 102 ಡಿಗ್ರಿ ಮೇಲೇರಿದರೆ ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಯುಂಟಾಗಬಹುದು. ಹಲವು ಬಗೆಯನ್ನು ಅನುಸರಿಸಿ ನಿಮ್ಮ ದೇಹದ ಹೊರಭಾಗವನ್ನು ತಂಪಾಗಿಸಿಕೊಳ್ಳಬಹುದು. ಆದರೆ ಗರ್ಭದಲ್ಲಿರುವ ಶಿಶುವಿಗೆ ಈ ಅವಕಾಶ ಇರುವುದಿಲ್ಲ. ದೇಹದ ಒಳಭಾಗ ಮತ್ತು ಭ್ರೂಣಕ್ಕೆ ತಂಪಾಗಿಸಲು ಬಹಳ ಸಮಯ ಬೇಕಾಗುತ್ತದೆ. ಭ್ರೂಣ ತನಗೆ ಬೇಕಾಗುವಷ್ಟು ತಂಪಾಗಿಸುವ ವ್ಯವಸ್ಥೆ ಮಾಡಿಕೊಂಡಿರುವುದಿಲ್ಲ. ಆದ್ದರಿಂದ ಅದಕ್ಕೆ ಅಪಾಯ ತಪ್ಪಿದ್ದಲ್ಲ. ಜ್ವರ ಬಂದರೆ, ದೇಹಕ್ಕೆ ಆಯಾಸವಾಗುವಷ್ಟು ವ್ಯಾಯಾಮ ಮಾಡಿದರೆ, ಬಿಸಿಲು ಕಾಲದಲ್ಲಿ ಹೊರಗಿನ ಕೆಲಸ ಮಾಡಿದರೆ ದೇಹದ ಉಷ್ಣಾಂಶ ಏರುತ್ತದೆ.

8. ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ

8. ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ

ಮೇಲೆ ತಿಳಿಸಿದ ಪ್ರಕಾರ, ಗರ್ಭಿಣಿ ಸ್ತ್ರೀಯರು ದೀರ್ಘಾವಧಿಯ ಬಿಸಿನೀರಿನ ಸ್ನಾನ ಮಾಡುವುದು, ಬಿಸಿ ಹಬೆಯನ್ನು ತೆಗೆದುಕೊಳ್ಳುವುದು ತಡೆಯಬೇಕು. ಇದರಿಂದ ದೇಹದ ಉಷ್ಣಾಂಶವು 102 ಡಿಗ್ರಿಗಿಂತ ಮೇಲೇರುವ ಸಾಧ್ಯತೆ ಇರುತ್ತದೆ. ಭ್ರೂಣದ ಹಿತಕ್ಕಾಗಿ ಗರ್ಭಿಣಿ ಸ್ತ್ರೀಯರು ಇದರಿಂದ ದೂರವಿರಬೇಕು.

9. ಕಠಿಣವಾದ ವ್ಯಾಯಾಮ ಮಾಡಬಾರದು

9. ಕಠಿಣವಾದ ವ್ಯಾಯಾಮ ಮಾಡಬಾರದು

ಗರ್ಭಿಣಿ ಸ್ತ್ರೀಯರಿಗೆ ಹಗುರವಾದ ವ್ಯಾಯಾಮ ಹೆಚ್ಚು ಸೂಕ್ತ. ಯಾವ ಕ್ರೀಡೆಗಳಲ್ಲಿ, ದೇಹದ ಚಟುವಟಿಕೆಗಳಲ್ಲಿ ಘಾಸಿಯಾಗುವ ಸಂಭವವಿರುತ್ತದೆಯೋ, ಅವುಗಳಿಂದ ದೂರವಿರಬೇಕು. ಉದಾಹರಣೆಗೆ ಬ್ಯಾಸ್ಕೆಟ್ ಬಾಲ್, ಹಾಕಿ, ಸ್ಕೀಯಿಂಗ್ ಇತರ ಪಂದ್ಯಾವಳಿಗಳಿಂದಾಗುವ ಘಾಸಿಯಿಂದ ಆಂತರಿಕ ರಕ್ತಸ್ರಾವ, ಗರ್ಭಪಾತ ಮತ್ತು ಭ್ರೂಣದ ಮೂಳೆಗೆ ಹಾನಿಯಾಗುವ ಸಂಭವವಿರುತ್ತದೆ. ಆದ್ದರಿಂದ ಮಗುವಿನ ಜನನವಾಗುವವರೆಗೂ, ಇಂಥಹ ವ್ಯಾಯಾಮದಿಂದ ದೂರವಿರಬೇಕು. ನೀವು ಗರ್ಭಾವಸ್ಥೆಯಲ್ಲಿದ್ದಾಗ ಬಿದ್ದು ಅಥವಾ ಹೊಟ್ಟೆಯ ಮೇಲೆ ಪೆಟ್ಟು ಬಿದ್ದರೆ ತಕ್ಷಣವೇ ವೈದ್ಯರ ಸಲಹೆ ಪಡೆಯತಕ್ಕದ್ದು.

10. ಎಕ್ಸ್ ರೇ

10. ಎಕ್ಸ್ ರೇ

ಇನ್ನು ಗರ್ಭಿಣಿ ಸ್ತ್ರೀಯರು ಎಕ್ಸ್ ರೇ ಅಥವಾ ಇನ್ನಿತರ ಯಾವುದೇ ವಿಕಿರಣದಿಂದ ದೂರವಿರುವುದು ಹೆಚ್ಚು ಸೂಕ್ತ. ಇದರಿಂದ ಆಗುವ ದುಷ್ಪರಿಣಾಮ ಹೆಚ್ಚಿನ ಮಟ್ಟದಲ್ಲಿಲ್ಲದಿದ್ದರೂ, ಗರ್ಭ ಧರಿಸಿದ ಮೊದಲ ದಿನಗಳಲ್ಲಿ ಈ ಕಿರಣದಿಂದಾದುವ ಅಪಾಯ ಹೆಚ್ಚು. ಆದ್ದರಿಂದ ವೈದ್ಯರ ಬಳಿಗೆ ಹೋದಾಗ, ಗರ್ಭಾವಸ್ಥೆಯ ಬಗ್ಗೆ ತಿಳಿಸಿದರೆ, ಎಕ್ಸ್ ರೇ ಯನ್ನು ಮುಂದೂಡಬಹುದು. ಅಧ್ಯಯನದ ಪ್ರಕಾರ, ಸಣ್ಣಪ್ರಮಾಣದ, ಎಲೆಕ್ಟ್ರೋ ಮ್ಯಾಗ್ನೆಟಿಕ್ ಕಿರಣಗಳಿಂದಲೂ ಜೀವಕೋಶಕ್ಕೆ ಅಪಾಯವಿರುತ್ತದೆ. ಆದ್ದರಿಂದ ಬಹಳ ಸಮಯದವರೆಗೂ ಟಿ.ವಿ ಇಥವಾ ಮೈಕ್ರೋವೇವ್ ಮುಂದೆ ನಿಲ್ಲುವುದು ತಡೆಯಬೇಕು. ವಿದ್ಯುತ್ ಹೊದಿಕೆಯನ್ನು ಬಳಸಬಾರದು.

English summary

10 Things Women Must Avoid During Pregnancy

Everyone wants their baby to be born healthy and without any birth defects. While some things harm the fetus immediately others may affect the proper development of the immune system and make the child prone to several illnesses in later life. Here are few tips to avoid that.
X
Desktop Bottom Promotion