For Quick Alerts
ALLOW NOTIFICATIONS  
For Daily Alerts

ಮುಟ್ಟಿನ ನೋವಿಗೆ ಇಲ್ಲಿದೆ ಸುಲಭ ಪರಿಹಾರ!

|

ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಈ ನೋವಿಗೆ ಪರಿಹಾರ ಹುಡುಕುವುದು ಎಷ್ಟೋ ಮಹಿಳೆಯರಿಗೆ ಸಾಧ್ಯವಾಗಿರುವುದಿಲ್ಲ. ಆದರೆ ಕೆಲವೊಂದು ವಿಧಾನವನ್ನು ಅನುಸರಿಸಿದರೆ ತಿಂಗಳ ಮುಟ್ಟಿನ ನೋವನ್ನು ಸುಲಭವಾಗಿ ನಿಯಂತ್ರಣಕ್ಕೆ ತರುವುದು ಸಾಧ್ಯವಿದೆ.

ಒತ್ತಡ, ಹಾರ್ಮೋನಲ್ ಅಸಮತೋಲನ ನಿಯಮಿತ ತಿಂಗಳ ಚಕ್ರದಲ್ಲಿ ಏರುಪೇರು ಆಗುವುದರಿಂದ ಕೂಡ ಇಂತಹ ಸಮಸ್ಯೆ ಕಂಡುಬರುತ್ತದೆ. ಸೂಕ್ತವಲ್ಲದ ದೈಹಿಕ ಸ್ಥಿತಿಯಿಂದಾಗಿ ಕೂಡ, ಈ ಲೇಖನದಲ್ಲಿ ನಾವು ಅಡ್ಡ ಪರಿಣಾಮಗಳು ಇಲ್ಲದ ಸ್ವಾಭಾವಿಕವಾಗಿ ನೋವನ್ನು ಗುಣಪಡಿಸುವ ಮಾರ್ಗಗಳ ಬಗ್ಗೆ ಸಲಹೆ ನೀಡಿದ್ದೇವೆ.

ಈ ವಿಧಾನದಿಂದ ಕೇವಲ ಹೊಟ್ಟೆ ನೋವು ಮಾತ್ರವಲ್ಲ ಆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಇತರ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ. ಈ ವಿಧಾನಗಳನ್ನು ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗಿದ್ದು ಮನೆಯಲ್ಲಿ ದೊರೆಯುವ ಪದಾರ್ಥಗಳಿಂದ ಇದನ್ನು ತಯಾರಿಸಿಕೊಳ್ಳಬಹುದು ಮತ್ತು ಖರ್ಚೂ ಕಡಿಮೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

 1. ಬಿಸಿ ನೀರು:

1. ಬಿಸಿ ನೀರು:

ಹೊಟ್ಟೆ ತುಂಬಾ ನೋಯುತ್ತಿದ್ದರೆ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತುಪ್ಪವನ್ನು ಬೆರೆಸಿ ಕುಡಿದರೆ ನೋವು ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ಮುಟ್ಟಿನ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯುವುದರಿಂದ (8 ಲೋಟ), ಅದರಲ್ಲೂ ಬಿಸಿ ನೀರನ್ನು ಕುಡಿಯುವುದರಿಂದ ನೋವಿಗೆ ಬೇಗನೆ ಉಪಶಮನ ನೀಡುತ್ತದೆ.

2. ಹಣ್ಣುಗಳು:

2. ಹಣ್ಣುಗಳು:

ಮುಟ್ಟಿನ ಸಮಯದಲ್ಲಿ ಆದಷ್ಟು ಹಣ್ಣುಗಳನ್ನು ಸೇವಿಸುವುದು ಉತ್ತಮ. ಮಿಟಮಿನ್ ಹೆಚ್ಚಿರುವ ಆಹಾರದ ಸೇವನೆ ಈ ಸಮಯಕ್ಕೆ ಸೂಕ್ತ. ಅದರಲ್ಲೂ ಪಪ್ಪಾಯ ತಿಂದರೆ ನೋವು ಬೇಗ ಕಳೆಯುತ್ತದೆ.

3. ಮಜ್ಜಿಗೆ:

3. ಮಜ್ಜಿಗೆ:

ತುಂಬಾ ಹೊಟ್ಟೆ ನೋವು ನಿಮ್ಮನ್ನು ಕಾಡುತ್ತಿದೆ ಎಂದಾದರೆ ಮಜ್ಜಿಗೆಯಲ್ಲಿ ಸ್ವಲ್ಪ ಹೊತ್ತು ನೆನೆಹಾಕಿದ ಮೆಂತ್ಯೆ ಬೆರೆಸಿ ಕುಡಿಯಬೇಕು.

4. ತರಕಾರಿಗಳು:

4. ತರಕಾರಿಗಳು:

ಹೂಕೋಸು, ಮೀನು, ಸೀಗಡಿ, ಸೇಬು, ಬಾದಾಮಿ, ಬೀನ್ಸ್, ದೊಡ್ಡ ಅವರೆ, ಗೋಡಂಬಿ, ಪಾಲಾಕ್, ಎಲೆಕೋಸು, ಇನ್ನಿತರ ಹಸಿರು ತರಕಾರಿಗಳು ಮಿನರಲ್ ಗಳ ಮೂಲ. ಆದ್ದರಿಂದ ಇದರ ಸೇವನೆ ಅವಶ್ಯಕ ಶಕ್ತಿ ಒದಗಿಸುತ್ತದೆ.

5. ಹಾಲು ಹಾಗೂ ಹಾಲಿನ ಉತ್ಪನ್ನಗಳು:

5. ಹಾಲು ಹಾಗೂ ಹಾಲಿನ ಉತ್ಪನ್ನಗಳು:

ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ ಈ ಸಮಯಕ್ಕೆ ದೇಹಕ್ಕೆ ಅವಶ್ಯವಿರುವ ಕ್ಯಾಲ್ಸಿಯಂ ದೊರೆಯಲು ಅನುಕೂಲವಾಗುತ್ತದೆ.

6. ಶುಂಟಿ ಉಪಯೋಗಿಸಿ:

6. ಶುಂಟಿ ಉಪಯೋಗಿಸಿ:

ಒಂದು ಲೋಟ ನೀರಿನಲ್ಲಿ 29 ಗ್ರಾಂ ನಷ್ಟು ಶುಂಟಿ ಹಾಕಿ ಕುದಿಸಿ.ನಂತರ ಅರ್ಧದಷ್ಟಾದ ಆ ನೀರನ್ನು ಒಂದು ಲೋಟಕ್ಕೆ ಸೋಯಿಸಿ ಇಡಿ.ದಿನದಲ್ಲಿ 2 ಬಾರಿ ಈ ನೀರನ್ನು ಕುಡಿಯುತ್ತಾ ಬನ್ನಿ.

7. ಸಾಸಿವೆ ಉಪಯೋಗಿಸಿ:

7. ಸಾಸಿವೆ ಉಪಯೋಗಿಸಿ:

ನೀರಿಗೆ ಸಾಸಿವೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಇದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ,ಹಿಂಡಿ,ಹೊಟ್ಟೆ ನೋವಿರುವಾಗ ಹೊಟ್ಟೆಯ ಮೇಲೆ ಈ ಬಟ್ಟೆಯನ್ನು ಹಾಕಿ ಇದರಿಂದ ಹೊಟ್ಟೆ ನೋವು ನಿವಾರಿಸಬಹುದು.

8. ಓಮಿನ ಕಾಳನ್ನು ಬಳಸಿ:

8. ಓಮಿನ ಕಾಳನ್ನು ಬಳಸಿ:

ಬಿಸಿ ಹಾಲಿಗೆ ಅರ್ಧ ಚಮಚ ಅಜವಾನ ಅಥವಾ ಓಮಿನ ಕಾಳನ್ನು ಬಳಸಿ ದಿನದಲ್ಲಿ ಎರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ ಇದರಿಂದ ನೋವು ಕಡಿಮೆಯಾಗುತ್ತದೆ.15 ದಿನ ಮುಂಚಿನಿಂದಲೇ ಮುಟ್ಟಿನ ಸಮಯದವರೆಗೆ ತೆಗೆದುಕೊಳ್ಳಿ.

9. ಮೆಂತೆಯನ್ನು ಬಳಸಿ:

9. ಮೆಂತೆಯನ್ನು ಬಳಸಿ:

ಮೆಂತೆಯನ್ನು ನೀರಿನಲ್ಲಿ ಕುದಿಸಿ.ಮುಟ್ಟಿನ ಸಮಯದಲ್ಲಿ ದಿನದಲ್ಲಿ ಎರಡು ಬಾರಿ ಒಂದು ಲೋಟ ಕುಡಿಸಿದ ಮೆಂತೆ ನೀರನ್ನು ಕುಡಿಯಿರಿ ಮತ್ತು ನೋವು ನಿವಾರಿಸಿಕೊಳ್ಳಿ.

10. ಕಾಳು ಜೀರಿಗೆ ಬಳಸಿ:

10. ಕಾಳು ಜೀರಿಗೆ ಬಳಸಿ:

ಕಾಳುಜೀರಿಗೆಯನ್ನು ಎರಡು ಲೋಟ ನೀರಿನಲ್ಲಿ ಕುದಿಸಿ.ಇದು ಒಂದು ಲೋಟ ಆಗುವವರೆಗೆ ಕುದಿಸಿ ನಂತರ ಸೋಯಿಸಿ ದಿನದಲ್ಲಿ ಒಮ್ಮೆ ಕುಡಿಯಿರಿ.ಇದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ.

English summary

Home remedies to Stop Pain during Periods

During periods Pain is very common problem in women. So many medicines are available in the market to cure this problem but these medicines may have side effects. In this article we are going to tell about the natural and side effect free methods to cure this problem.
X
Desktop Bottom Promotion