For Quick Alerts
ALLOW NOTIFICATIONS  
For Daily Alerts

ಭ್ರೂಣದ ಮೇಲೆ ಪರೋಕ್ಷ ಧೂಮಪಾನದ ಪರಿಣಾಮಗಳು

By Hemanth P
|

ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಅತೀ ಮುಖ್ಯವಾಗಿರುವ ಮತ್ತೊಂದು ವಿಷಯವೆಂದರೆ ತಂಬಾಕು ವಿಷಕಾರಿ ವಸ್ತುಗಳಿಗೆ ಒಡ್ಡಲ್ಪಟ್ಟಿರುವ ವ್ಯಕ್ತಿಗೆ ಪರೋಕ್ಷ ಧೂಮಪಾನವು ಅಷ್ಟೇ ಹಾನಿಕಾರಕ. ಗರ್ಭಿಣಿ ಮಹಿಳೆಯರಿಗೂ ಇದೇ ರೀತಿಯಾಗಿರುತ್ತದೆ. ಗರ್ಭಿಣಿ ಮಹಿಳೆಯರು ಪರೋಕ್ಷ ಧೂಮಪಾನಕ್ಕೆ ಒಡ್ಡಲ್ಪಡುವ ಕಾರಣ ಅದು ನೇರವಾಗಿ ಗರ್ಭದಲ್ಲಿರುವ ಭ್ರೂಣದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಪರೋಕ್ಷ ಧೂಮಪಾನಕ್ಕೆ ಹಲವಾರು ರೀತಿ ಒಡ್ಡಲ್ಪಡುವರು. ಇದು ತನ್ನ ಪೋಷಕರು, ಸಂಗಾತಿ ಅಥವಾ ಕಚೇರಿಯಲ್ಲಿ ಆಗಿರಬಹುದು.

ವೈದ್ಯಕೀಯ ನಿಯತಕಾಲಿಕ ಪೀಡಿಯಾಟ್ರಿಕ್ಸ್ ನಲ್ಲಿ ಬಂದ ಹೊಸ ಅಧ್ಯಯನದ ಪ್ರಕಾರ ಧೂಮಪಾನ ಮಾಡುತ್ತಿರುವವರ ಬಳಿಯಲ್ಲಿ ನಿಲ್ಲುವುದರಿಂದ ಇದು ನಿಮ್ಮ ಗರ್ಭದಲ್ಲಿರುವ ಮಗುವಿಗೆ ಭಾರೀ ಹಾನಿಯನ್ನು ಉಂಟು ಮಾಡಬಹುದು. ಮಕ್ಕಳಲ್ಲಿ ಕಂಡುಬರುವಂತಹ ಕೆಲವೊಂದು ಅಂಗ ವೈಫಲ್ಯಗಳು ಧೂಮಪಾನದಲ್ಲಿನ ತಂಬಾಕಿನ ಪರಿಣಾಮದಿಂದಾಗಿ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಧೂಮಪಾನ ಮಾಡುವ ತಾಯಿಯಿಂದ ಭ್ರೂಣದ ಮೇಲೆ ಉಂಟಾಗುವ ಹಾನಿಯಷ್ಟೇ ಪರೋಕ್ಷ ಧೂಮಪಾನದಿಂದಲೂ ಆಗುತ್ತದೆ. ಧೂಮಪಾನ ಮಾಡುವ ಸಂಗಾತಿಯಿದ್ದರೆ ಅವರನ್ನು ದೂರವಿರುವಂತೆ ತಿಳಿಸಿ ಮತ್ತು ಅವರಿಗೆ ಹುಟ್ಟುವ ಮಗುವಿಗೆ ಆಗುವ ಅಂಗಾಂಗಗಳ ತೊಂದರೆ ಬಗ್ಗೆ ತಿಳಿಸಿ. ಹಾವರ್ಡ್ ಮೆಡಿಕಲ್ ಸ್ಕೂಲ್ ನ ಡಾ. ಜೊನಾಥನ್ ವಿನಿಕೊಫ್ ಪ್ರಕಾರ, ತಾಯಿ ಮತ್ತು ತಂದೆ ಪೂರ್ವಾವವಧಿ ಮತ್ತು ಗರ್ಭಧಾರಣೆ ವೇಳೆ ಧೂಮಪಾನದಿಂದ ದೂರವಿರಬೇಕು.

Effects Of Secondhand Smoke On Fetus

ಗರ್ಭಿಣಿ ಮಹಿಳೆಯರು ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಂಡಷ್ಟು ಹುಟ್ಟುವ ಮಕ್ಕಳಲ್ಲಿ ಅಂಗವೈಫಲ್ಯದ ಸಾಧ್ಯತೆ ಹೆಚ್ಚುತ್ತದೆ. ಗರ್ಭಿಣಿ ಮಹಿಳೆಯರು ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಂಡಷ್ಟು ಎದುರಿಸಬಹುದಾದ ಸಾಮಾನ್ಯ ಸಮಸ್ಯೆಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಲಾಗಿದೆ.

ವಿರೂಪಗಳು
ಗರ್ಭಿಣಿ ಮಹಿಳೆಯರು ಹೆಚ್ಚಾಗಿ ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ಗರ್ಭದಲ್ಲಿರುವ ಮಗುವಿನಲ್ಲಿ ಅಂಗವಿಕಾರಗಳು ಆಗಬಹುದು. ಪರೋಕ್ಷ ಧೂಮಪಾನದಿಂದಾಗಿ ಹುಟ್ಟುವ ಮಗು ಕಾಲು, ವೃಷಣ ಅಥವಾ ಮೆದುಳು ಇಲ್ಲದೆ ಹುಟ್ಟಬಹುದು.

ಸಹಜ ಗರ್ಭಪಾತ
ಗರ್ಭಿಣಿ ಮಹಿಳೆಯರು ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ಸಹಜ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚಿವೆ. ಪರೋಕ್ಷ ಧೂಮಪಾನ ಭ್ರೂಣದ ತಳಿ ರೂಪಾಂತರಗಳಿಗೆ ಕಾರಣವಾಗಬಹುದು. ಇದರಿಂದ ಭ್ರೂಣದ ಬೆಳವಣಿಗೆ ತಗ್ಗಿ ಸಹಜ ಗರ್ಭಪಾತವಾಗಹುದು.

ಜನನ ದೋಷಗಳು
ಪರೋಕ್ಷ ಧೂಮಪಾನದಿಂದ ಉಂಟಾಗುವ ಸಾಮಾನ್ಯ ಆರೋಗ್ಯ ಪರಿಣಾಮವೆಂದರೆ ಜನನ ದೋಷಗಳು. ಧೂಮಪಾನದಲ್ಲಿರುವ ಟಾಕ್ಸಿಸ್ ಅಂಶಗಳು ರೂಪಾಂತರಕ್ಕೆ ಕಾಣವಾಗುತ್ತದೆ. ಇದರಿಂದ ಜೀವನಪೂರ್ತಿಯ ಉಂಟಾಗುವ ಗಂಭೀರ ಅಥವಾ ಬದಲಾಯಿಸಲಾಗದ ಜನ್ಮದೋಷಗಳು ಉಂಟಾಗಬಹುದು.

ಮೃತಾವಸ್ಥೆ
ಗರ್ಭಿಣಿ ಮಹಿಳೆಯರು ಪರೋಕ್ಷ ಧೂಮಪಾನಕ್ಕೆ ಒಡ್ಡಲ್ಪಡುವುದರಿಂದ ಶೇ. 23ರಷ್ಟು ಮೃತಾವಸ್ಥೆಯ ಸಾಧ್ಯತೆಗಳಿವೆ. ಪರೋಕ್ಷ ಧೂಮಪಾನವು ಭ್ರೂಣದ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಕಾರಣ ಮೃತಾವಸ್ಥೆ ಉಂಟಾಗಬಹುದು.

ಕಡಿಮೆ ತೂಕದ ಮಗು
ಧೂಮಪಾನ ಮಾಡದೆ ಇರುವ ಮಹಿಳೆ ತನ್ನ ಗರ್ಭಧಾರಣೆಯ ಸಂದರ್ಭ ಸತತವಾಗಿ ಪರೋಕ್ಷ ಧೂಮಪಾನಕ್ಕೆ ಒಡ್ಡಲ್ಪಟ್ಟಿದ್ದರೆ ಆಗ ಜನಿಸುವ ಮಗುವಿನ ಭಾರವು ಕಡಿಮೆ ಇರುವ ಸಾಧ್ಯತೆ ಹೆಚ್ಚಿದೆ. ಪರೋಕ್ಷ ಧೂಮಪಾನವು ಭ್ರೂಣದಲ್ಲಿ ಆಮ್ಲಜನಕದ ಕೊರತೆ ಮತ್ತು ರಕ್ತನಾಳಗಳ ಸಂಕೋಚನದಿಂದ ತಾಯಿಯ ರಕ್ತನಾಳಗಳಿಂದ ಜರಾಯುವಿಗೆ ರಕ್ತಪರಿಚನೆ ಕಡಿಮೆಯಾಗುತ್ತದೆ.

ದೋಷಪೂರಿತ ಆಂತರಿಕ ಅಂಗಾಂಗಗಳು
ಪರೋಕ್ಷ ಧೂಮಪಾನಕ್ಕೆ ಒಡ್ಡಲ್ಪಡುವ ಗರ್ಭಿಣಿಯರ ಜರಾಯುವಿನ ಕ್ರಿಯಾಶೀಲತೆ ತುಂಬಾ ಕಡಿಮೆಯಿರುತ್ತದೆ. ನಿಕೋಟಿನ್ ಅಂಶವು ಜರಾಯುವನ್ನು ದಾಟಿ ಭ್ರೂಣಕ್ಕೆ ರಕ್ತಪರಿಚಲನೆ ಕಡಿಮೆ ಮಾಡಬಹುದು. ಇದರಿಂದ ಭ್ರೂಣದ ಹೃದಯನಾಳದ ವ್ಯವಸ್ಥೆ, ಜೀರ್ಣಾಂಗವ್ಯೂಹ ಮತ್ತು ಕೇಂದ್ರ ನರಮಂಡಲಗಳ ಮೇಲೆ ಪರಿಣಾಮ ಬೀರಬಹುದು.

ನರಸಂಬಂಧಿ ಸಮಸ್ಯೆ
ಗರ್ಭಧಾರಣೆ ವೇಳೆ ನೀವು ಪರೋಕ್ಷ ಧೂಮಪಾನಕ್ಕೆ ಒಡ್ಡುತ್ತಿರುವ ಅನುಭವವಾಗುತ್ತಿದ್ದರೆ ನಿಮಗೆ ಹುಟ್ಟಲಿರುವ ಮಗುವಿಗೆ ನರಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಅಧ್ಯಯನಗಳ ಪ್ರಕಾರ ಗರ್ಭಾಶಯದಲ್ಲಿ ಸಿಗರೇಟಿನ ಹೊಗೆ ತೆಗೆದುಕೊಂಡಿದ್ದರೆ ಅಂತಹ ಮಗು ಅಸಹಜ ನರಬೆಳವಣಿಗೆ ಉಂಟಾಗುತ್ತದೆ.

ಉಸಿರಾಟದ ಸಮಸ್ಯೆ
ಪರೋಕ್ಷ ಧೂಮಪಾನಕ್ಕೆ ಒಡ್ಡಲ್ಪಡುವ ಗರ್ಭಿಣಿ ಮಹಿಳೆಯ ಭ್ರೂಣವು ಅಸಹಜ ಶ್ವಾಸೇಂದ್ರಿಯ ಬೆಳವಣಿಗೆಯ ಅಪಾಯಕ್ಕೆ ಸಿಲುಕುತ್ತದೆ. ಇದರಿಂದ ಜನನದ ಬಳಿಕ ಉಸಿರಾಟದ ಸಮಸ್ಯೆ ಮತ್ತು ಭವಿಷ್ಯದಲ್ಲಿ ಅಸ್ತಮಾಕ್ಕೆ ಒಳಗಾಗುವ ಸಾಧ್ಯತೆಯಿದೆ.

ಅವಧಿಪೂರ್ವ ಜನನ
ಗರ್ಭಿಣೆ ಮಹಿಳೆಯರು ಪರೋಕ್ಷ ಧೂಮಪಾನಕ್ಕೆ ಒಳಗಾಗುವ ಕಾರಣ ಭ್ರೂಣದ ಅವಧಿಪೂರ್ವ ಜನನವಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮಗುವಿನ ಸಾಮಾನ್ಯ ಬೆಳವಣಿಗೆ ಮೇಲೆ ಪರಿಣಾಮ ಬೀರಿ ಭವಿಷ್ಯದಲ್ಲಿ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

English summary

Effects Of Secondhand Smoke On Fetus

It is a well known fact that smoking is injurious to health. But, one thing that requires more importance is that passive smoking also has the same effect on a person exposed to the toxic materials of tobacco.
Story first published: Monday, December 16, 2013, 14:19 [IST]
X
Desktop Bottom Promotion