Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆರಿಗೆಯ ಬಳಿಕ, ಬಾಣಂತಿಯರಿಗೆ ಶಕ್ತಿ ನೀಡುವ 'ಆಹಾರ ಪಥ್ಯ'
ಮಗು ಜನಿಸಿದ ನಂತರ ತಾಯಿಯು ತನ್ನಲ್ಲಿ ಸಂಪೂರ್ಣತೆಯನ್ನು ಕಂಡುಕೊಳ್ಳುತ್ತಾಳೆ. ಒಂಬತ್ತು ತಿಂಗಳುಗಳ ಕಾಲ ತನ್ನ ಉದರದಲ್ಲಿ ಮಗುವನ್ನು ಹೊತ್ತುಕೊಂಡು ಪ್ರಸವ ವೇದನೆಯನ್ನು ಅನುಭವಿಸಿ ಪುಟ್ಟ ಕಂದನಿಗೆ ಜನ್ಮ ನೀಡಿದ ನಂತರ ಅದರ ಅಳು, ಕೇಕೆ ನಗು ಕೇಳಿದ ನಂತರ ತನ್ನೆಲ್ಲಾ ದುಃಖವನ್ನು ಆಕೆ ಮರೆತು ಬಿಡುತ್ತಾಳೆ. ಪ್ರಕೃತಿ ನಿಯಮ ಕೂಡ ಇದೇ ಆಗಿದೆ.
ಗರ್ಭಾವಸ್ಥೆಯಲ್ಲಿ ತಾಯಿಯ ಆರೈಕೆಯನ್ನು ಹೇಗೆ ಮಾಡಬೇಕೋ ಅಂತೆಯೇ ಮಗು ಹೆತ್ತ ನಂತರ ಬಾಣಂತನದ ಸಮಯದಲ್ಲಿ ಕೂಡ ಕೆಲವೊಂದು ಆರೈಕೆಯನ್ನು ಆಕೆಗೆ ಮಾಡಬೇಕಾಗುತ್ತದೆ. ಬಾಣಂತಿ ಮೈ ಹಸಿ ಮೈ ಎಂಬುದಾಗಿ ಕೂಡ ಹೇಳುವುದರಿಂದ ಈ ಸಮಯದಲ್ಲಿ ಆಕೆ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಹೆಚ್ಚುವರಿ ಪ್ರೋಟೀನ್ ವಿಟಮಿನ್‌ಗಳು ಆಕೆಗೆ ಬೇಕಾಗುತ್ತದೆ.
ಇಂದಿನ ಲೇಖನದಲ್ಲಿ ಇಂತಹ ಪೂರಕ ಪೋಷಕಾಂಶಗಳನ್ನು ನೀಡುವ ಆಹಾರಗಳೇನು ಎಂಬುದನ್ನು ನಾವು ತಿಳಿಸುತ್ತಿದ್ದು, ಮಗುವಿನ ಹೆರಿಗೆಯ ಬಳಿಕ ಇಂತಹ ಆಹಾರಗಳು ತಾಯಿಗೆ ದೊರಕುತ್ತಿದೆಯೇ ಎಂಬುದನ್ನು ನೀವು ಗಮನಿಸಬೇಕಿದೆ....

ಓಟ್ಸ್
ಇದು ಕಾರ್ಬೋಹೈಡ್ರೇಟ್‌ಗಳ ಹೆಚ್ಚುವರಿ ಅಂಶವನ್ನು ಒಳಗೊಂಡಿದ್ದು, ಫೈಬರ್, ಐರನ್ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿದೆ. ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟಲು ಓಟ್ಸ್ ಸಹಾಯ ಮಾಡಲಿದೆ. ಪೋರಿಡ್ಜ್, ಕಿಚಡಿ ಅಥವಾ ಉಪ್ಮಾದಂತೆ ಮಾಡಿಕೊಂಡು ಓಟ್ಸ್ ಅನ್ನು ಸೇವಿಸಬಹುದಾಗಿದೆ. ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ನೀವು ಓಟ್ಸ್‌ನೊಂದಿಗೆ ಸೇರಿಸಿಕೊಳ್ಳಬಹುದು.

ಅರಿಶಿನ
ಅನಾದಿ ಕಾಲದಿಂದಲೂ ಔಷಧವಾಗಿ ಅರಶಿನವನ್ನು ಬಳಸಲಾಗುತ್ತಿದೆ. ಇದು ಗಾಯವನ್ನು ಒಣಗಿಸಲು ನೆರವಾಗಲಿದೆ ಮತ್ತು ಉರಿಯೂತ ಅಲರ್ಜಿಯನ್ನು ನಿವಾರಣೆ ಮಾಡಲಿದೆ. ವಿಟಮಿನ್ ಸಿ ಮತ್ತು ಬಿ6 ನಂತಹ ಅಗತ್ಯ ಪೋಷಕಾಂಶಗಳನ್ನು ಅರಶಿನವು ಒಳಗೊಂಡಿದೆ. ಪೊಟ್ಯಾಶಿಯಂ, ಮೆಗ್ನೇಶಿಯಂಗಳನ್ನು ಇದು ಒಳಗೊಂಡಿದೆ. ಬಿಸಿ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ನಿಮಗೆ ಹೆಚ್ಚು ಪ್ರಯೋಜನ ಉಂಟಾಗಲಿದೆ. ಬೇಕಿದ್ದರೆ ಸಕ್ಕರೆ ಇಲ್ಲವೇ ಜೇನನ್ನು ನಿಮಗೆ ಸೇರಿಸಿಕೊಳ್ಳಬಹುದು.

ಶುಂಠಿ ಅಥವಾ ಒಣ ಶುಂಠಿ
ಶುಂಠಿಯನ್ನು ಒಣಗಿಸಿ ಮಾಡಿಟ್ಟುಕೊಂಡು ಹುಡಿ ಅಥವಾ ಒಣ ಶುಂಠಿಯನ್ನು ಗರ್ಭಾವಸ್ಥೆಯಲ್ಲಿ ನಿಮಗೆ ಬಳಸಿಕೊಳ್ಳಬಹುದಾಗಿದೆ. ಇದು ಉರಿಯೂತ ನಿವಾರಣೆಯಂತಹ ಅಂಶವನ್ನು ಹೊಂದಿದೆ. ಇದು ಬಾಣಂತನದ ಸಮಯದಲ್ಲಿ ನಿಮಗೆ ಶಕ್ತಿಯನ್ನು ಒದಗಿಸುವಲ್ಲಿ ನೆರವಾಗಲಿದೆ. ಇದರಿಂದ ಲಾಡು ತಯಾರಿಸಿ ಬಾಣಂತಿಯರಿಗೆ ನೀಡಲಾಗುತ್ತದೆ. ನಿಮ್ಮ ಊಟದಲ್ಲಿ ಸ್ವಲ್ಪ ಶುಂಠಿ ಹುಡಿಯನ್ನು ಬೆರೆಸಿ ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ಬೇಳೆಕಾಳುಗಳು
ಇವುಗಳಲ್ಲಿ ಹೆಚ್ಚುವರಿ ಪ್ರೋಟೀನ್ ಅಂಶಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಮಾಂಸಹಾರದಿಂದ ದೊರಕುವ ಅಷ್ಟೇ ಪ್ರಮಾಣದ ಪೋಷಕಾಂಶಗಳನ್ನು ಸಸ್ಯಾಹಾರಿಗಳು ಬೇಳೆಕಾಳುಗಳಿಂದ ಪಡೆದುಕೊಳ್ಳಬಹುದಾಗಿದೆ. ಇವುಗಳನ್ನು ಬೇಯಿಸಿ ಹಾಗೆಯೆ ಅಥವಾ ಸಾಂಬಾರು, ಸಾರಿನ ರೂಪದಲ್ಲಿ ಕೂಡ ಸೇವಿಸಬಹುದಾಗಿದೆ. ಮಸೂರ್ ದಾಲ್ ಅಥವಾ ಮೂಂಗ್ ದಾಲ್ ಬಾಣಂತಿಯರಿಗೆ ಅತ್ಯುತ್ತಮ ಆಹಾರ ಎಂದೆನಿಸಿದೆ.

ಕ್ಯಾರಮ್ ಬೀಜಗಳು
ಹೆರಿಗೆಯ ನಂತರ ಈ ಬೀಜಗಳನ್ನು ಪ್ರತಿಯೊಬ್ಬ ತಾಯಿಯೂ ಸೇವಿಸಬೇಕು. ಇದು ಮಲಬದ್ಧತೆಯಂತಹ ಸಮಸ್ಯೆಯನ್ನು ದೂರಮಾಡುತ್ತದೆ. ಅಂತೆಯೇ ಅಜೀರ್ಣ, ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತಾಯಿಯಲ್ಲಿ ಎದೆಹಾಲನ್ನು ವೃದ್ಧಿಸುತ್ತದೆ. ಇದು ಗರ್ಭಾಶಯದ ಕುಗ್ಗುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅದು ಮೂಲ ರೂಪಕ್ಕೆ ಹಿಂತಿರುಗಲು ಸಹಾಯ ಮಾಡುತ್ತದೆ. ಅತ್ಯಂತ ಪರಿಣಾಮಕಾರಿ ಜೀವಿವಿರೋಧಿ ಮತ್ತು ಶಿಲೀಂಧ್ರಗಳ ಘಟಕಾಂಶವಾಗಿದೆ. ಇದು ಉತ್ಕರ್ಷಣ ನಿರೋಧಿ ಲಕ್ಷಣಗಳನ್ನು ಹೊಂದಿದೆ. ನೀವು ಸೇವಿಸುವ ಯಾವುದೇ ಆಹಾರದಲ್ಲಿ ಕೂಡ ಈ ಬೀಜಗಳನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ತಾಯಂದಿರು ಇದನ್ನು ಬಿಸಿನೀರಿನೊಂದಿಗೆ ಬೆರೆಸಿ ಸೇವಿಸುತ್ತಾರೆ.



Click it and Unblock the Notifications
