ಮನೆಮದ್ದು: ಎದೆ ಹಾಲು ಹೆಚ್ಚಿಸಲು ಆಯುರ್ವೇದ ಔಷಧ

By: Hemanth
Subscribe to Boldsky

ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ರೋಮಾಂಚನದ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಮಗುವಿಗೆ ಹಾಲುಣಿಸುವ ಸಮಯ ವಿಶೇಷವಾಗಿರುವಂತಹದ್ದು.  ಮಗುವಿನ ದೈಹಿಕ ಕ್ಷಮತೆಗೆ ತಾಯಿಯ ಎದೆ ಹಾಲು ಅತ್ಯಗತ್ಯ  

breast feeding
 

ಎದೆ ಹಾಲು ಮಗುವಿನ ಸಿಗುವ ಅತೀ ಶ್ರೇಷ್ಠ ನೈಸರ್ಗಿಕ ಆಹಾರ. ಇದು ಕೇವಲ ಮಗುವಿಗೆ ಆಹಾರ ಮಾತ್ರವಲ್ಲದೆ, ಹಲವಾರು ರೀತಿಯ ಅನಾರೋಗ್ಯದಿಂದ ಮಗುವನ್ನು ಕಾಪಾಡುತ್ತದೆ. ಯಾಕೆಂದರೆ ಎದೆ ಹಾಲು ರಕ್ತಕ್ಕೆ ವಿವಿಧ ರೀತಿಯ ರೋಗನಿರೋಧಕಗಳನ್ನು ಪೂರೈಸುತ್ತದೆ. ಅಷ್ಟೇ ಅಲ್ಲದೆ ಎದೆ ಹಾಲಿನಲ್ಲಿ ಮೂರು ಖನಿಜಗಳು ಅಂದರೆ ಕ್ಯಾಲ್ಶಿಯಂ, ರಂಜಕ ಮತ್ತು ಕಬ್ಬಿಣಾಂಶಗಳು ಸಹ ಇರುತ್ತವೆ. ಎದೆಹಾಲಿನಲ್ಲಿ ಈ ಖನಿಜಗಳು ಉನ್ನತವಾದ ಜೈವಿಕ ಲಭ್ಯತೆಯ ಪರಿಮಾಣಗಳಲ್ಲಿ ಲಭಿಸುತ್ತದೆ. ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು 

ಮಗು ಹಾಗೂ ತಾಯಿ ನಡುವಿನ ಬಾಂಧವ್ಯ ಹೆಚ್ಚಾಗಲು ಮೊಲೆಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವರಿಗೆ ಮಗುವಿಗೆ ಹಾಲುಣಿಸಲು ಬೇಕಾದಷ್ಟು ಹಾಲು ಮೊಲೆಗಳಲ್ಲಿ ಉತ್ಪತ್ತಿಯಾಗುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಇಂತಹ ಸಮಯದಲ್ಲಿ ಮಗುವಿಗೆ ದನದ ಹಾಲನ್ನು ನೀಡಬೇಕಾಗುತ್ತದೆ. 

seeds
 

ಆದರೆ ಆರಂಭದಲ್ಲೇ ಮಗುವಿಗೆ ದನದ ಹಾಲನ್ನು ನೀಡುವುದು ಅಷ್ಟೊಂದು ಸರಿಯಾದ ನಿರ್ಧಾರವಲ್ಲ. ಮಗುವಿಗೆ ಬೇಕಾದಷ್ಟು ಹಾಲು ತಾಯಿಯ ಸ್ತನಗಳಲ್ಲಿ ಉತ್ಪತ್ತಿಯಾಗಬೇಕು. ಒಂದು ವೇಳೆ ತಾಯಿಯ ಸ್ತನಗಳಲ್ಲಿ ಹಾಲು ಉತ್ಪತ್ತಿಯಾಗದೆ ಇದ್ದರೆ ಅದಕ್ಕೆ ಕೆಲವೊಂದು ಆಯುರ್ವೇದದ ಔಷಧಿಗಳಿವೆ. ಹಾಲನ್ನು ಉತ್ಪಾದಿಸುವ ಈ ಔಷಧಿ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಎದೆ ಹಾಲನ್ನು ಹೆಚ್ಚಿಸುವ 10 ಮನೆಮದ್ದುಗಳು

ಬೇಕಾಗುವ ಸಾಮಗ್ರಿಗಳು

*ಎಳ್ಳು- 1 ಚಮಚ

*ಬಾದಾಮಿ ಹಾಲು ಅರ್ಧ ಕಪ್   

Badami milk
 

ಹೆರಿಗೆಯಾದ ಆರಂಭದಲ್ಲಿ ಮಗುವಿಗೆ ಹಾಲುಣಿಸಲು ಸರಿಯಾಗಿ ಹಾಲು ಉತ್ಪತ್ತಿಯಾಗದೆ ಇದ್ದ ಪಕ್ಷದಲ್ಲಿ ಈ ಔಷಧಿಯನ್ನು ನಿಯಮಿತವಾಗಿ ಸೇವಿಸಿದರೆ ಇದು ಅದ್ಭುತವಾಗಿ ಕೆಲಸ ಮಾಡಲಿದೆ. ಹಾಲು ಮಗುವಿಗೆ ಸರಿಯಾದ ಪೋಷಕಾಂಶವು ಲಭ್ಯವಾಗಲಿದೆ. ಈ ಔಷಧಿಯೊಂದಿಗೆ ಆರೋಗ್ಯಕರ ಆಹಾರ, ಯಥೇಚ್ಛ ನೀರು ಹಾಗೂ ಹಾಲು ಸೇವನೆ ಮಾಡಬೇಕು.  ಎದೆ ಹಾಲು vs ಬಾಟಲಿ ಹಾಲು, ಮಗುವಿಗೆ ಯಾರು ಹಿತವರು?

ಎಳ್ಳಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮತ್ತು ಇದು ಹಾಲಿನ ನಾಳಗಳನ್ನು ಉತ್ತೇಜಿಸುತ್ತದೆ. ಇದು ಹೆಚ್ಚು ಹಾಲು ಉತ್ಪತ್ತಿಯಾಗುವಂತೆ ಮಾಡುತ್ತದೆ. ಎಳ್ಳು ತುಂಬಾ ಆರೋಗ್ಯಕರ. ಬಾದಾಮಿ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿದ್ದು, ಇದು ತಾಯಂದಿರಲ್ಲಿ ಮೊಲೆಹಾಲು ಉತ್ಪತ್ತಿಗೆ ನೆರವಾಗಲಿದೆ. 

breast feeding
 

ತಯಾರಿಸುವ ವಿಧಾನ

*ಹೇಳಿದಷ್ಟು ಪ್ರಮಾಣದ ಸಾಮಗ್ರಿಯನ್ನು ಒಂದು ಮಿಕ್ಸಿಗೆ ಹಾಕಿಕೊಂಡು ರುಬ್ಬಿ. ಇದನ್ನು ತೆಗೆದು ಒಂದು ಕಪ್ ಗೆ ಹಾಕಿಕೊಳ್ಳಿ.

*ಬೆಳಿಗ್ಗೆ ಉಪಹಾರದ ಬಳಿಕ ಎರಡು ತಿಂಗಳ ಕಾಲ ಇದನ್ನು ಸೇವಿಸಿ.

English summary

ayurvedic-remedy-to-increase-breast-milk

As breast-feeding could be the only source of nutrition for the baby during the initial few months, it is important that the baby is getting enough milk to keep the baby satisfied and well nourished. So, follow this amazing home remedy that can help boost the production of breast milk.
Subscribe Newsletter