For Quick Alerts
ALLOW NOTIFICATIONS  
For Daily Alerts

ಎದೆ ಹಾಲನ್ನು ಹೆಚ್ಚಿಸುವ 10 ಮನೆಮದ್ದುಗಳು

By Super
|

ತಾಯಿಯ ಹಾಲು ಅಮೃತ. ಮಗುವಿಗೆ ಸರಿಯಾದ ಪ್ರಮಾಣದಲ್ಲಿ ಹಾಲು ಕೊಡಲೇಬೇಕು. ಕೆಲವೊಮ್ಮೆ ಹಲವಾರು ಕಾರಣಗಳಿಂದ ತಾಯಿಯಲ್ಲಿ ಎದೆ ಹಾಲಿನ ಉತ್ಪತ್ತಿ ಕಡಿಮೆ ಆಗಿರುತ್ತದೆ. ಇದು ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಎದೆ ಹಾಲನ್ನು ಕಡ್ಡಾಯವಾಗಿ ಕುಡಿಸಲೇಬೇಕು ಇದರಿಂದ ಮಗುವಿನ ನೆನಪಿನ ಶಕ್ತಿ ಹೆಚ್ಚುತ್ತದೆ. ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಎದೆಹಾಲನ್ನು ಹೆಚ್ಚಿಸಲು ಮನೆಯಲ್ಲಿಯೇ ಸಾಕಷ್ಟು ವಿಧಾನಗಳಿವೆ ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.

ಮೆಂತೆ

ಮೆಂತೆ

1 . ಮೆಂತೆ ಯನ್ನು ಪುಡಿಮಾಡಿ ಈ ಹಿಟ್ಟನ್ನು ಹಾಲಿಗೆ ಬೆರೆಸಿ ದಿನಕ್ಕೆ 2-3 ಬಾರಿ ಕುಡಿದರೆ ಇದರಿಂದ ಎದೆ ಹಾಲು ಹೆಚ್ಚುತ್ತದ .

ತಾಯಿಯ ದೇಹಕ್ಕೆ ಅಗತ್ಯವಾದ ಆಹಾರಗಳು

ತಾಯಿಯ ದೇಹಕ್ಕೆ ಅಗತ್ಯವಾದ ಆಹಾರಗಳು

2 . ಮಗುವಿಗೆ ಹಾಲು ಕೊಡುವಾಗ ತಾಯಿಯ ದೇಹವು ಸ್ವಸ್ಥವಾಗಿರಬೇಕು ಮತ್ತು ನೀರಿನ ಅಂಶವೂ ಹೆಚ್ಚಿರಬೇಕು . ಆದ್ದರಿಂದ ನೀರು , ಜ್ಯೂಸ್ , ಹಸುವಿನ ಹಾಲು ಇವನ್ನು ಆಗಾಗ ಕುಡಿಯುತ್ತಿರಿ ಇದರಿಂದ ದೇಹ ಒಣಗಿ ಹಾಲಿನ ಉತ್ಪತ್ತಿ ಕಡಿಮೆ ಆಗುವುದನ್ನು ನಿಲ್ಲಿಸಬಹುದು .

3 . ನುಗ್ಗೆಕಾಯಿ ಸೊಪ್ಪಿನ ರಸವ

3 . ನುಗ್ಗೆಕಾಯಿ ಸೊಪ್ಪಿನ ರಸವ

ನುಗ್ಗೆಕಾಯಿ ಸೊಪ್ಪಿನ ರಸವನ್ನು ತೆಗೆದು ಹಾಲಿನೊಂದಿಗೆ ಬಾಣಂತಿಗೆ ಕೊಟ್ಟರೆ ಹಾಲು ಹೆಚ್ಚಿಸುತ್ತದೆ .

4. ಓಟ್ಸ್

4. ಓಟ್ಸ್

ನುಗ್ಗೆಕಾಯಿ ಸೊಪ್ಪಿನ ರಸವನ್ನು ತೆಗೆದು ಹಾಲಿನೊಂದಿಗೆ ಬಾಣಂತಿಗೆ ಕೊಟ್ಟರೆ ಹಾಲು ಹೆಚ್ಚಿಸುತ್ತದೆ.

5. ಸೊಪ್ಪು ಬಳಸಿ

5. ಸೊಪ್ಪು ಬಳಸಿ

ಸೊಪ್ಪುಗಳು ಕೂಡ ಎದೆ ಹಾಲನ್ನು ಹೆಚ್ಚಿಸುತ್ತವೆ ಎಂದು ಅಧ್ಯಯನದಿಂದ ಹೇಳಲಾಗಿದೆ. ಮೆಂತೆ ಸೊಪ್ಪುಶತಾವರಿ, ಹುರುಳಿ, ನುಗ್ಗೆ ಸೊಪ್ಪು ಇವುಗಳನ್ನು ಪ್ರತಿದಿನ ಬಳಸುವುದು ಒಳ್ಳೆಯದು.

6. ಆಹಾರ ಕ್ರಮ

6. ಆಹಾರ ಕ್ರಮ

ಆಹಾರ ಕ್ರಮ ಕೂಡ ಹಿತ ಮಿತವಾಗಿರಲಿ. ಹಸಿರು ತರಕಾರಿಗಳು, ಹಸಿರು ಬಟಾಣಿ, ಮೊಳಕೆ ಬರಿಸಿದ ಕಾಳುಗಳು ಇವುಗಳನ್ನು ಹೆಚ್ಚು ಬಳಸಿ. ಉಪಯೋಗಿಸುವ ಮೊದಲು ಅಥವಾ ಆಹಾರ ಕ್ರಮವನ್ನು ಬದಲಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ.

7.ಹಾಲು ಕುಡಿಸುವ ಸಮಯ ಹೆಚ್ಚಿಸಿ

7.ಹಾಲು ಕುಡಿಸುವ ಸಮಯ ಹೆಚ್ಚಿಸಿ

ಮಗುವಿಗೆ ಆಗಾಗ ಹಾಲು ಕೊಡಿ ಮತ್ತು ಹೆಚ್ಚು ಸಮಯ ಹಾಲು ಕುಡಿಸಿ ಜೊತೆಗೆ ನೀವೂ ವಿಶ್ರಾಂತಿಯನ್ನು ಪಡೆದುಕೊಳ್ಳಿ, ಸರಿಯಾದ ಪೋಷಕಾಂಶ ಇರುವ ಆಹಾರ ಕ್ರಮ ರೂಡಿಸಿಕೊಳ್ಳಿ. ಇದರಿಂದ ಕೂಡ ಹಾಲಿನ ಉತ್ಪತ್ತಿ ಹೆಚ್ಚುತ್ತದೆ.

8. ಬೆಳ್ಳುಳ್ಳಿ ಮತ್ತು ಶುಂಠಿ

8. ಬೆಳ್ಳುಳ್ಳಿ ಮತ್ತು ಶುಂಠಿ

ಪ್ರತಿದಿನ ಒಂದು ಬೆಳ್ಳುಳ್ಳಿ ಮತ್ತು ಸ್ವಲ್ಪ ಶುಂಠಿ ಉಪಯೋಗಿಸಿ ಇದು ಹಾಲು ಹೊರಬರಲು ಸಹಾಯ ಮಾಡುತ್ತದೆ ಆದರೆ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ . ಮಗು ಹುಟ್ಟುವ ಸಮಯದಲ್ಲಿ ಹೆಚ್ಚು ರಕ್ತ ನಷ್ಟವಾಗಿದ್ದರೆ ಶುಂಟಿ ಉಪಯೋಗ ಸೂಕ್ತವಲ್ಲ.

9. ಮೊಸರು

9. ಮೊಸರು

ಮೊಸರಿನಲ್ಲಿರುವ ಲ್ಯಾಕ್ತೊಜನ್ ಹಾಲನ ಉತ್ಪತ್ತಿ ಹೆಚ್ಚಿಸುತ್ತದೆ . ಪ್ರತಿದಿನ ಊಟದಲ್ಲಿ ಮೊಸರನ್ನು ಬಳಸಿ . ಇದು ದೇಹವನ್ನು ತಂಪಾಗಿ ಕೂಡ ಇಡುತ್ತದೆ .

10. ಕಪ್ಪು ಎಳ್ಳು ಮತ್ತು ಅರಿಶಿಣ

10. ಕಪ್ಪು ಎಳ್ಳು ಮತ್ತು ಅರಿಶಿಣ

ಕಪ್ಪು ಎಳ್ಳು ಮತ್ತು ಅರಿಶಿನ ವನ್ನು ಆಹಾರದಲ್ಲಿ ಬಳಸಿ ಇದು ಎದೆ ಹಾಲನ್ನು ಹೆಚ್ಚಿಸುತ್ತದೆ.

ದಿನದಲ್ಲಿ ಒಮ್ಮೆಯಾದರೂ ಬಿಸಿ ಬಿಸಿ ಊಟವನ್ನು ಹೊಟ್ಟೆ ತುಂಬಾ ತಿನ್ನಿ . ಸರಿಯಾದ ಸಮಯ ರೂಡಿಸಿಕೊಳ್ಳಿ . ಆರೋಗ್ಯಯುತ ಆಹಾರ ಕ್ರಮವನ್ನು ರೂಡಿಸಿಕೊಳ್ಳಿ. ನೀವು ಆರೋಗ್ಯ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

English summary

10 home remedies to increase breast milk

It's quite normal to worry about your milk supply when you start breastfeeding your baby. Certain foods are popularly believed to increase the supply of breast milk. Here's a list of them.
X
Desktop Bottom Promotion