Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎದೆ ಹಾಲನ್ನು ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು
ಮಗುವಿಗೆ ಜನನದ ಕ್ಷಣದಿಂದ ಅತ್ಯಂತ ಶ್ರೇಷ್ಠ ಆಹಾರವೆಂದರೆ ತಾಯಿಯ ಹಾಲು. ಮಗುವಿಗೆ ಆರು ತಿಂಗಳಾಗುವವರೆಗೂ ತಾಯಿಹಾಲು ಪ್ರಮುಖ ಆಹಾರವಾಗಿರಬೇಕು. ಬಳಿಕ ಇತರ ಮೃದುವಾದ ಆಹಾರಗಳ ಜೊತೆ ತಾಯಿಹಾಲನ್ನು ಮುಂದುವರೆಸಿ ಸುಮಾರು ಒಂದು ವರ್ಷದವರೆಗೂ ಮುಂದುವರೆಸಬೇಕು. ತದನಂತರ ಇಂತಹ ಆಹಾರಗಳನ್ನು ಕೊಂಚ ಹೆಚ್ಚಿಸಿ ತಾಯಿಹಾಲನ್ನು ಕೊಂಚ ಕಡಿಮೆ ನೀಡುವ ಮೂಲಕ ಎರಡು ವರ್ಷಗಳವರೆಗೂ ಮುಂದುವರೆಸಬಹುದು. ಇದಕ್ಕಾಗಿ ತಾಯಿಹಾಲಿನ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿರುವುದು ಅವಶ್ಯವಾಗಿದೆ. ಮಗುವಿನ ದೈಹಿಕ ಕ್ಷಮತೆಗೆ ತಾಯಿಯ ಎದೆ ಹಾಲು ಅತ್ಯಗತ್ಯ
ಇದಕ್ಕಾಗಿ ದಿನನಿತ್ಯದ ಆಹಾರಗಳಲ್ಲಿ ತಾಯಿ ಹಾಲನ್ನು ಹೆಚ್ಚಿಸಲು ನೆರವಾಗುವ ಆಹಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಈ ಬಗ್ಗೆ ನಿಮ್ಮ ವೈದ್ಯರು ಅತ್ಯುತ್ತಮ ಸಲಹೆ ನೀಡಬಲ್ಲರು. ತಾಯಿ ಹಾಲನ್ನು ಹೆಚ್ಚಿಸಲು ನೆರವಾಗುವ ಪ್ರಮುಖ ಆಹಾರಗಳನ್ನು ಇಲ್ಲಿ ವಿವರಿಸಲಾಗಿದೆ. ಇವುಗಳಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯವನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ನೈಸರ್ಗಿಕವಾಗಿ ಹೆಚ್ಚಿಸಲೂ ನೆರವಾಗುತ್ತವೆ. ನಿಮ್ಮ ವೈದ್ಯರು ಒಪ್ಪಿಗೆ ನೀಡಿದ ಆಹಾರಗಳನ್ನು ನಿಯಮಿತವಾಗಿ ಸೇವಿಸಿ ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸಿ.

ಸೋರೆಕಾಯಿ
ಸಾಮಾನ್ಯವಾಗಿ ಎಲ್ಲಾ ಹಸಿರು ಬಣ್ಣದ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿವೆ. ಆದರೆ ತಾಯಿಹಾಲು ಹೆಚ್ಚಿಸಲು ಸೋರೆಕಾಯಿಯಲ್ಲಿ ಅತಿಹೆಚ್ಚಿನ ಪೋಷಕಾಂಶಗಳಿವೆ. ಸೋರೆಕಾಯಿಯ ಸಾರು, ಸಾಗು, ಪಲ್ಯ, ಹಲ್ವಾ, ಖೀರು ಮೊದಲಾದ ರೂಪಗಳಲ್ಲಿ ಸೇವಿಸಬಹುದು. ಆದರೆ ತೆಂಗಿನ ತುರಿಯೊಂದಿಗೆ ಸುಮಾರು ತೊಂಬತ್ತು ಭಾಗ ಬೇಯಿಸಿ ತಯಾರಿಸಿದ ಪಲ್ಯ ಅತ್ಯುತ್ತಮವಾಗಿದೆ.

ಅಡುಗೆಯಲ್ಲಿ ಆಲಿವ್ ಎಣ್ಣೆಯನ್ನೇ ಬಳಸಿ
ಆರೋಗ್ಯದದ ದೃಷ್ಟಿಯಿಂದಲೂ ಆಲಿವ್ ಎಣ್ಣೆ ಉತ್ತಮವಾಗಿರುವುದರಿಂದ ನಿಮ್ಮ ಅಡುಗೆಗಳಲ್ಲಿ ಸಾಧ್ಯವಾದಷ್ಟು ಆಲಿವ್ ಎಣ್ಣೆಯನ್ನು ಬಳಸಿ. ಒಂದು ವೇಳೆ ಆಲಿವ್ ಎಣ್ಣೆ ಲಭ್ಯವಿಲ್ಲದಿದ್ದರೆ ಎಳ್ಳೆಣ್ಣೆಯನ್ನೂ ಬಳಸಬಹುದು. ಜೊತೆಗೆ ಕೊಂಚ ಪ್ರಮಾಣದಲ್ಲಿ ಬೆಣ್ಣೆಯನ್ನೂ ಸೇವಿಸಬೇಕು. ಬೆಣ್ಣೆಯನ್ನು ಬೆಳಗಿನ ಉಪಾಹಾರದಲ್ಲಿ ಉಪಯೋಗಿಸುವುದು ಉತ್ತಮ.

ತುಳಸಿ ಎಲೆಗಳು
ತುಳಸಿ ಎಲೆಗಳಲ್ಲಿ ಅತ್ಯುತ್ತಮ ಪ್ರಮಾಣದ ವಿಟಮಿನ್ ಕೆ. ಇದೆ. ಈ ಪೋಷಕಾಂಶ ರಕ್ತಹೆಪ್ಪುಗಟ್ಟುವ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ಹೆಚ್ಚಿಸಲೂ ನೆರವಾಗುತ್ತದೆ. ಈಗ ತಾನೇ ಹೂಬಿಟ್ಟ ತುಳಸಿ ಗಿಡದ ಎಲೆಗಳು ತಾಯಿಹಾಲಿಗೆ ಅತ್ಯುತ್ತಮವಾಗಿವೆ. ಹೂಗಳ ಕೆಳಭಾಗದ ಸುಮಾರು ಹತ್ತು ಎಲೆಗಳನ್ನು ಚೆನ್ನಾಗಿ ಕೊಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ. ಒಂದು ನಿಮಿಷ ಕುದಿದ ಬಳಿಕ ಉರಿಯನ್ನು ತುಂಬಾ ಚಿಕ್ಕದಾಗಿಸಿ ಐದು ನಿಮಿಷ ಬಿಡಿ. ಬಳಿಕ ಈ ನೀರನ್ನು ನೋಸಿ ಎರಡು ಹನಿ ಜೇನುತುಪ್ಪವನ್ನು ಸೇರಿಸಿ. ತಣಿದ ಬಳಿಕ ಈ ನೀರನ್ನು ದಿನಕ್ಕೆರಡು ಬಾರಿ ಕುಡಿಯಿರಿ. (ಒಂದು ಬಾರಿಗೆ ಅರ್ಧ ಕಪ್). ಮಗುವಿಗೆ ಆರು ತಿಂಗಳು ತುಂಬುವವರೆಗೂ ಈ ನೀರನ್ನು ಕುಡಿಯಬಹುದು.

ಓಟ್ಸ್
ಓಟ್ಸ್ ಕಾಳುಗಳನ್ನು ಬೆಳಗ್ಗಿನ ಉಪಾಹಾರದಲ್ಲಿ ಸೇವಿಸುವ ಮೂಲಕ ತಾಯಿಹಾಲನ್ನು ಹೆಚ್ಚಿಸಬಹುದು. ಹಾಲಿನೊಂದಿಗೆ ಕುದಿಸಿ ಸಕ್ಕರೆ ಸೇರಿಸಿದ ಖಾದ್ಯ ರುಚಿಕರವೂ ಆರೋಗ್ಯಕರವೂ ಹೌದು. ಒಂದು ವೇಳೆ ಓಟ್ಸ್ ಲಭ್ಯವಿಲ್ಲದಿದ್ದರೆ ನವಣೆಯನ್ನೂ ಬಳಸಬಹುದು.

ಮೆಂತೆಕಾಳುಗಳು
ಮೆಂತೆಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ತಾಯಿಹಾಲನ್ನು ಹೆಚ್ಚಿಸಬಹುದು. ಒಂದು ಕಪ್ ಕುದಿಯುವ ನೀರಿನಲ್ಲಿ ಸುಮಾರು ಇಪ್ಪತ್ತು ಮೆಂತೆಕಾಳುಗಳನ್ನು ಹಾಕಿ ಅರ್ಧ ಗಂಟೆ ಬಿಡಿ. ಬಳಿಕ ಇದನ್ನು ಸೋಸಿ ಟೀ ಯಂತೆ ದಿನಕ್ಕೆರಡು ಬಾರಿ ಕುಡಿಯಿರಿ. ಇದನ್ನು ಪ್ರಥಮ ಒಂದು ಅಥವಾ ಎರಡು ತಿಂಗಳು ಮಾತ್ರ ಸೇವಿಸಿ. ಇನ್ನೊಂದು ವಿಧಾನದಲ್ಲಿ ಅರ್ಧ ಕಪ್ ಜೀರಿಗೆ, ಅರ್ಧ ಕಪ್ ಮೆಂತೆ ಮತ್ತು ಒಂದು ಚಿಕ್ಕ ತುಂಡು ಕಲ್ಲುಸಕ್ಕರೆಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಅರೆದು ಪುಡಿಮಾಡಿ. ಈ ಪುಡಿಯನ್ನು ತಣ್ಣನೆಯ ಹಾಲಿನಲ್ಲಿ ಸೇರಿಸಿ ಪ್ರತಿದಿನ ಮೂರು ಬಾರಿ ಹದಿನೈದು ದಿನಗಳ ಕಾಲ ಕುಡಿಯಿರಿ.

ಶುಂಠಿಯ ಪೇಸ್ಟ್
ನಿಮ್ಮ ನಿತ್ಯದ ಅಡುಗೆಗಳಲ್ಲಿ ಶುಂಠಿ ಯಥೇಚ್ಛವಾಗಿರುವಂತೆ ನೋಡಿಕೊಳ್ಳಿ. ಹಸಿಶುಂಠಿಯ ಪೇಸ್ಟ್ ಮಾಡಿಕೊಂಡು ನಿಮ್ಮ ನಿತ್ಯದ ಅಡುಗೆಗಳಾದ ಸಾರು, ಪಲ್ಯ ಮೊದಲಾದವುಗಳ ಜೊತೆ ಸೇರಿಸುವ ಮೂಲಕ ರುಚಿಯನ್ನು ಹೆಚ್ಚಿಸುವ ಜೊತೆಗೆ ತಾಯಿಹಾಲಿನ ಉತ್ಪಾದನೆಯಲ್ಲಿಯೂ ಹೆಚ್ಚಳವಾಗುತ್ತದೆ.



Click it and Unblock the Notifications
