For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ: ಮಿಥುನ ರಾಶಿಯವರು ಚರ್ಚೆಗಳ ಸಮಯದಲ್ಲಿ ತುಂಬಾ ಜಾಗರೂಕರಾಗಿರಿ

|

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ವಾನರ ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆ ಎಂದು ಹನುಮಂತನನ್ನು ಪೂಜಿಸಲಾಗುತ್ತದೆ. ವಾನದ ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ

ಋತು: ಶರತ್

ಮಾಸ: ಅಧಿಕ ಅಶ್ವಿನ

ಪಕ್ಷ: ಶುಕ್ಲ

ತಿಥಿ: ದಶಮಿ

ನಕ್ಷತ್ರ: ಉತ್ತರ ಆಷಾಢ

ರಾಹುಕಾಲ: ಬೆಳಿಗ್ಗೆ 9.12 ರಿಂದ 10.42 ರವರೆಗೆ

ಗುಳಿಕಕಾಲ: ಬೆಳಿಗ್ಗೆ 6.12 ರಿಂದ 7.42 ರವರೆಗೆ

ಯಮಗಂಡಕಾಲ: ಮಧ್ಯಾಹ್ನ 1.42 ರಿಂದ 3.12 ರವರೆಗೆ

ದುರ್ಮುಹೂರ್ತ: ಬೆಳಿಗ್ಗೆ 6.12 ರಿಂದ 7.00 ರವರೆಗೆ

ಸೂರ್ಯೋದಯ: ಬೆಳಿಗ್ಗೆ 6.12

ಸೂರ್ಯಾಸ್ತ: ಸಂಜೆ 6.13

ಮೇಷ ರಾಶಿ

ಮೇಷ ರಾಶಿ

ಇಂದು ನೀವು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿರುತ್ತೀರಿ. ನಿಮ್ಮ ಸಂಗಾತಿಯು ಜೀವನದ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ ನಿಮ್ಮೊಂದಿಗೆ ನಿಲ್ಲುತ್ತಾರೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಕೆಲವು ಅವಕಾಶಗಳನ್ನು ನೀವು ಪಡೆಯುತ್ತೀರಿ. ಇಂದು ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಮತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು. ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಸಹೋದ್ಯೋಗಿಗಳೊಂದಿಗೆ ಕೆಲಸದ ಸ್ಥಳದಲ್ಲಿ ಹಂಚಿಕೊಳ್ಳುವುದು ನಿಮಗೆ ತೊಂದರೆಯಾಗಬಹುದು. ಬಹುಶಃ ಕೆಲವು ಸಹೋದ್ಯೋಗಿಗಳು ಈ ಪರಿಸ್ಥಿತಿಯ ಲಾಭವನ್ನು ಪಡೆಯಲು ಮತ್ತು ನಿಮ್ಮನ್ನು ಕಾಡಲು ಪ್ರಯತ್ನಿಸುತ್ತಾರೆ. ವೈಯಕ್ತಿಕ ಸಂಬಂಧಗಳ ವಿಷಯದಲ್ಲಿ ಇಂದು ನಿಮಗೆ ಶುಭ ದಿನವಾಗಿರುತ್ತದೆ. ಬಹಳ ಸಮಯದ ನಂತರ, ನೀವು ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಇಂದು ಮಾಡಿದ ಪ್ರಯಾಣವು ನಿಮಗೆ ಸಂತೋಷಕರವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 10

ಅದೃಷ್ಟ ಸಮಯ: ಮಧ್ಯಾಹ್ನ 12 ರಿಂದ ಮಧ್ಯಾಹ್ನ 3:30 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಕುಟುಂಬಲ್ಲಿ ಇಂದು ಕೆಲವು ಸಮಸ್ಯೆಗಳು ಎದುರಾಗಬಹುದು. ಪೂರ್ವಜರ ಆಸ್ತಿ ಮತ್ತು ಹಣದ ಬಗ್ಗೆ ಕೆಲವು ವಿವಾದಗಳಿರಬಹುದು. ಅಲ್ಲದೆ, ಕಾನೂನು ವಿಷಯಗಳೊಂದಿಗೆ ವ್ಯವಹರಿಸಲು ಇಂದು ಉತ್ತಮ ದಿನವಲ್ಲ. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಆಳುತ್ತದೆ. ಬಿಡುವಿನ ವೇಳೆಯಲ್ಲಿ ಉತ್ತಮ ಪುಸ್ತಕವನ್ನು ಓದುವುದು ಉತ್ತಮ. ಕಚೇರಿಯಲ್ಲಿನ ನಿರ್ಲಕ್ಷ್ಯವು ಬೇಡ. ಆರ್ಥಿಕ ರಂಗದಲ್ಲಿ ದಿನಗಳು ಉತ್ತಮವಾಗಿವೆ. ಇಂದು ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯ ಸಾಧ್ಯತೆಯಿದೆ. ಆಸ್ತಿಗಳೊಂದಿಗೆ ವ್ಯವಹರಿಸುವವರು ಅಥವಾ ಆಮದು-ರಫ್ತು ವ್ಯವಹಾರವನ್ನು ಹೊಂದಿರುವವರು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಕೆಲಸದ ದಕ್ಷತೆಯು ಹೆಚ್ಚಾಗುತ್ತದೆ ಮತ್ತು ಇಂದು ಹೆಚ್ಚು ಶ್ರಮಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ಕಷ್ಟಕರವಾಗಿರುತ್ತದೆ.

ಅದೃಷ್ಟ ಬಣ್ಣ: ತಿಳಿ ನೀಲಿ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಮಧ್ಯಾಹ್ನ 12 ರಿಂದ ಸಂಜೆ 5:15 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಇಂದು ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ನೀವು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಸಾಧ್ಯತೆಯಿದೆ. ಹಿಂದಿನ ಕೆಲವು ಉತ್ತಮ ನೆನಪುಗಳು ಮತ್ತೊಮ್ಮೆ ರಿಫ್ರೆಶ್ ಆಗುತ್ತವೆ. ಇಂದು ನಿಮ್ಮ ಕ್ಷೇತ್ರಕ್ಕೆ ಸಂಪರ್ಕ ಹೊಂದಿದ ಕೆಲವು ಪ್ರಮುಖ ಜನರನ್ನು ಭೇಟಿ ಮಾಡಲು ಸಾಧ್ಯವಿದೆ. ನಿಮ್ಮ ಸಣ್ಣ ತಪ್ಪು ನಿಮಗೆ ಹಾನಿಕಾರಕವಾಗಲಿದೆ, ವಿಶೇಷವಾಗಿ ಚರ್ಚೆಗಳ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಆರ್ಥಿಕ ಸ್ಥಿತಿ ಇಂದು ಸಾಮಾನ್ಯವಾಗಲಿದೆ. ಈ ದಿನ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸಗಳು ಹೆಚ್ಚು ಇರುತ್ತದೆ. ಬಹುಶಃ ನೀವು ಮನೆಯಲ್ಲಿ ಪೂಜೆ ಅಥವಾ ಹೋಮ ಮಾಡಿಸಬಹುದು ಅಥವಾ ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ಇದರೊಂದಿಗೆ ನೀವು ಶಾಂತಿಯನ್ನು ಅನುಭವಿಸುವಿರಿ.

ಅದೃಷ್ಟ ಬಣ್ಣ: ಗಾಢ ಹಳದಿ

ಅದೃಷ್ಟ ಸಂಖ್ಯೆ: 2

ಅದೃಷ್ಟ ಸಮಯ: ಮಧ್ಯಾಹ್ನ 3 ರಿಂದ 8 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ನೀವು ಹಿಂದಿನದನ್ನು ಮರೆತು ಹೊಸ ಹೆಜ್ಜೆ ಇಡಬೇಕು. ಕಳೆದುಹೋದ ದಿನಗಳ ನೆನಪುಗಳೊಂದಿಗೆ ಈ ರೀತಿ ಕುಳಿತಿದ್ದರೆ, ಮುಂದೆ ಸಾಗುವ ನಿಮ್ಮ ಕನಸು ಅಪೂರ್ಣವಾಗಿ ಉಳಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲಸದ ಮೇಲೆ ನಿಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳಿಂದ ನಿಮ್ಮನ್ನು ದೂರವಿರಿಸಬೇಕಾಗುತ್ತದೆ. ಶಾಂತವಾಗಿರಲು ಪ್ರಯತ್ನಿಸಿ. ಹಣದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ. ಲಾಭದಾಯಕ ಒಪ್ಪಂದವನ್ನು ಮಾಡಬಹುದು, ಅದು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಇಂದು ಪ್ರಮುಖ ವ್ಯವಹಾರ ಸಂಬಂಧ ನಿರ್ಧಾರವನ್ನು ಸಹ ಮಾಡಬಹುದು. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿದ್ದರೆ ಸಮಯಕ್ಕೆ ತ್ವರಿತವಾಗಿ ಪರಿಹಾರವನ್ನು ಕಂಡುಹಿಡಿಯಬೇಕಾಗುತ್ತದೆ. ತುಂಬಾ ಚಿಂತೆ ಮಾಡುವುದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 28

ಅದೃಷ್ಟ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ

ಸಿಂಹ ರಾಶಿ

ಸಿಂಹ ರಾಶಿ

ವೈವಾಹಿಕ ಜೀವನವು ಇಂದು ಆನಂದಮಯವಾಗಿರುತ್ತದೆ ಮತ್ತು ಸಂಗಾತಿಯೊಂದಿಗೆ ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಬಾಸ್‌ನ ಉತ್ತಮ ಮನಸ್ಥಿತಿ ವಾತಾವರಣವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ, ಈ ಕಾರಣದಿಂದಾಗಿ ಕಚೇರಿಯಲ್ಲಿ ಕೆಲಸ ಮಾಡುವಾಗ ನಿರಾಳರಾಗುತ್ತೀರಿ. ಹಣಕ್ಕೆ ಸಂಬಂಧಿಸಿದ ವಿಷಯಗಳು ಇಂದು ಸಾಮಾನ್ಯವಾಗುತ್ತವೆ, ಸಾಧ್ಯವಾದಷ್ಟು ಎಚ್ಚರಿಕೆಯಿಂದ ವ್ಯರ್ಥವಾಗುವುದನ್ನು ತಪ್ಪಿಸಿ. ಇಂದು ನೀವು ಪ್ರಣಯ ಸಂಬಂಧದಲ್ಲಿದ್ದರೆ ಏನಾದರೂ ವಿಶೇಷವಾಗಲಿದೆ. ಏನನ್ನೂ ಮಾಡಲು ಇತರರಿಗೆ ಒತ್ತಡ ಹೇರಬೇಡಿ ಮತ್ತು ನೀವು ಅವರ ಆಸಕ್ತಿಗಳು ಮತ್ತು ಭಾವನೆಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು.

ಅದೃಷ್ಟ ಬಣ್ಣ: ಮರೂನ್

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಬೆಳಿಗ್ಗೆ 5 ರಿಂದ 9 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ನಿಮ್ಮ ಸಂಗಾತಿಯೊಂದಿಗೆ ಕೆಲವು ವ್ಯತ್ಯಾಸಗಳು ಇರಬಹುದು, ಆದರೆ ಸಂಜೆಯ ಹೊತ್ತಿಗೆ ಅವರಿಗೆ ಮನವರಿಕೆ ಮಾಡುತ್ತೀರಿ ಮತ್ತು ಅವರ ಅಸಮಾಧಾನವೂ ಹೋಗುತ್ತದೆ. ಅವರ ಮನಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸಲು ಕೆಲವು ಸುಂದರ ಮತ್ತು ವಿಶೇಷ ಯೋಜನೆಗಳನ್ನು ಮಾಡಬಹುದು. ಇಂದು ವೆಚ್ಚಗಳು ಹೆಚ್ಚಿಸಲು ಸಾಧ್ಯವಿದೆ. ಅನಗತ್ಯ ವಿಷಯಗಳಿಗಾಗಿ ಹೆಚ್ಚು ಹಣ ಖರ್ಚು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ಬಜೆಟ್ ಗೊಂದಲಕ್ಕೊಳಗಾಗಬಹುದು. ದುಬಾರಿ ಸ್ವಭಾವದಿಂದಾಗಿ ಮುಂದಿನ ಯೋಜನೆಗಳಿಗೆ ಸಹ ಅಡ್ಡಿಯಾಗಬಹುದು. ಕೆಲಸದಲ್ಲಿ ಉತ್ತಮ ದಿನವಾಗಿರುತ್ತದೆ. ಕೆಲಸವು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ ಮತ್ತು ಇಂದು ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಎರಡು ಪಟ್ಟು ವೇಗವಾಗಿ ಮಾಡುತ್ತೀರಿ, ಇದರಿಂದಾಗಿ ಇಂದು ನಿಮಗಾಗಿ ಸ್ವಲ್ಪ ಸಮಯವನ್ನು ಪಡೆಯಲು ಸಾಧ್ಯವಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು ಉತ್ತಮವಾಗಿರುತ್ತವೆ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 40

ಅದೃಷ್ಟ ಸಮಯ: ಬೆಳಿಗ್ಗೆ 8:25 ರಿಂದ ಮಧ್ಯಾಹ್ನ 12:00 ರವರೆಗೆ

ತುಲಾ ರಾಶಿ

ತುಲಾ ರಾಶಿ

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಯಾವುದೇ ಸಮಸ್ಯೆ ಇದ್ದರೆ ತಾಳ್ಮೆ ಹೊಂದಿರಿ. ವೈಯಕ್ತಿಕ ಜೀವನದ ತೊಂದರೆಗಳನ್ನು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ವಿವಾದವನ್ನು ಹೊಂದಿದ್ದರೆ ಇಂದು ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳು ಸಾಧ್ಯ. ಹಳೆಯ ಸ್ನೇಹಿತನನ್ನು ಭೇಟಿ ಮಾಡಬಹುದು ಮತ್ತು ನೀವು ಪರಸ್ಪರ ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ಕೆಲವು ಸಮಯದಿಂದ ನಡೆಸುತ್ತಿದ್ದ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗಲಿದೆ. ಯಶಸ್ವಿಯಾಗಲು ಆರೋಗ್ಯವಾಗಿರುವುದು ಅವಶ್ಯಕ. ಇಂದು ನೀವು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 17

ಅದೃಷ್ಟ ಸಮಯ: ಮಧ್ಯಾಹ್ನ 1 ರಿಂದ 4 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಅನಗತ್ಯವಾಗಿ ಚಿಂತೆ ಮಾಡಿ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ಸಹಾಯ ಮಾಡಿ ಹಾಗೂ ಜೀವನದ ಕಷ್ಟಕರ ಸನ್ನಿವೇಶಗಳ ಮೂಲಕ ಹೋರಾಡುವ ಮೂಲಕ ನೀವು ಗೆಲ್ಲಬಹುದು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಮತ್ತು ನೀವು ನಿರಾಳರಾಗಿರುತ್ತೀರಿ. ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ದಿನವು ತುಂಬಾ ವಿಶೇಷವಾಗಿರುತ್ತದೆ. ದಿನವನ್ನು ಸ್ಮರಣೀಯವಾಗಿಸಲು, ಇಂದು ಪ್ರಿಯತಮೆಯೊಂದಿಗೆ ಕ್ಯಾಂಡಲ್‌ಲೈಟ್ ಭೋಜನಕ್ಕೆ ಹೋಗುತ್ತೀರಿ. ತಂದೆಯ ಬೆಂಬಲದೊಂದಿಗೆ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ವಿವಾದಾಸ್ಪದ ಸಮಸ್ಯೆಗಳಿಂದ ದೂರವಿರಿ ಮತ್ತು ನಿಮ್ಮ ಮೌಲ್ಯಗಳನ್ನು ಬದಿಗಿಡುವುದನ್ನು ತಪ್ಪಿಸಿ. ಕೆಲಸದಲ್ಲಿ ದಿನಗಳು ಅತ್ಯುತ್ತಮವಾಗಿವೆ. ಇಂದು, ಕೆಲವು ದೊಡ್ಡ ಅವಕಾಶಗಳು ನಿಮಗೆ ಬರಬಹುದು.

ಅದೃಷ್ಟ ಬಣ್ಣ: ಕಿತ್ತಳೆ

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಬೆಳಿಗ್ಗೆ 9:50 ರಿಂದ ಮಧ್ಯಾಹ್ನ 2:25

ಧನು ರಾಶಿ

ಧನು ರಾಶಿ

ಇಂದು ವಿಷಯಗಳು ನಿಮ್ಮ ಪರವಾಗಿರುವಂತೆ ತೋರುತ್ತಿದೆ. ಏಕೆಂದರೆ ನಿಮ್ಮ ಇಚ್ಛೆೆಯಂತೆ ಪ್ರತಿಯೊಂದು ಕೆಲಸವೂ ನಡೆಯುತ್ತದೆ. ಕೆಲಸದಲ್ಲಿ ನಿರಂತರ ಶ್ರಮವು ಫಲ ನೀಡುತ್ತದೆ. ಉದ್ಯಮಿಗಳು ದೀರ್ಘಕಾಲದಿಂದ ಕಾಯುತ್ತಿದ್ದ ಕೆಲಸವನ್ನು ಪಡೆಯುತ್ತಾರೆ ಮತ್ತು ಈ ಕೆಲಸವು ನಿಮ್ಮ ವ್ಯವಹಾರಕ್ಕೆ ಹೊಸ ನಿರ್ದೇಶನವನ್ನು ನೀಡುತ್ತದೆ. ಉದ್ಯೋಗದಲ್ಲಿರುವವರಿಗೆ ಇಂದು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವಿದೇಶಕ್ಕೆ ಹೋಗಬೇಕೆಂಬ ಆಸೆ ಈಡೇರುವ ಸಾಧ್ಯತೆ ಇದೆ. ಪ್ರಯಾಣವು ಶುಭವಾಗಿರುತ್ತದೆ, ನಿಮಗೆ ಆರ್ಥಿಕ ಲಾಭಗಳು ಸಿಗುತ್ತವೆ. ವೈಯಕ್ತಿಕ ಸಂಬಂಧಗಳ ಸಮಸ್ಯೆಗಳನ್ನು ಪರಿಹರಿಸಲಾಗುವುದು ಮತ್ತು ಇಂದು ಚಿಂತೆಗಳಿಂದ ಮುಕ್ತರಾಗುವಿರಿ.

ಅದೃಷ್ಟ ಬಣ್ಣ: ಗಾಢ ನೀಲಿ

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಸಂಜೆ 4:30 ರಿಂದ 10 ರವರೆಗೆ

ಮಕರ ರಾಶಿ

ಮಕರ ರಾಶಿ

ನಿಮ್ಮ ಕುಟುಂಬದ ಜವಾಬ್ದಾರಿ ಹೆಚ್ಚಾಗುವುದರಿಂದ ಇಂದು ನೀವು ಸ್ವಲ್ಪ ಚಿಂತೆ ಮಾಡಬಹುದು. ನಿಮ್ಮ ದಿನವನ್ನು ಮುಂಚಿತವಾಗಿ ಯೋಜಿಸುವುದು ಉತ್ತಮ. ಆರೋಗ್ಯ ಸಮಸ್ಯೆಗಳು ಬರಬಹುದು. ಕಾರ್ಯನಿರತ ದಿನಚರಿಯಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಆರೋಗ್ಯದ ಬಗ್ಗೆ ಗಮನ ಕೊಡಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿ ಪಡೆಯಿರಿ. ಆರ್ಥಿಕ ರಂಗದಲ್ಲಿ ಇಂದು ವಿಶೇಷ ಏನೂ ಇರುವುದಿಲ್ಲ. ಅಲ್ಲದೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಮದುವೆಯಾದವರಿಗೆ ಇಂದು ಉತ್ತಮ ದಿನವಾಗಲಿದೆ. ಪರಸ್ಪರ ಸಂಪೂರ್ಣ ಸಹಕಾರವನ್ನು ನೀಡುತ್ತೀರಿ. ಕಚೇರಿಯಲ್ಲಿ ಕಷ್ಟಪಟ್ಟು ದುಡಿಯುವ ಉದ್ಯೋಗಿ ಎಂಬ ಹೆಸರು ನಿಮಗೆ ಬರಲಿದೆ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಬೆಳಿಗ್ಗೆ 9:45 ರಿಂದ ಮಧ್ಯಾಹ್ನ 12:30 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪವನ್ನು ತಡೆಯಿರಿ. ಹೆಚ್ಚುವರಿ ಒತ್ತಡವು ನಿಮ್ಮ ಸಕಾರಾತ್ಮಕ ಶಕ್ತಿಯನ್ನು ಸಹ ಕುಂದಿಸಬಹುದು, ತಾಳ್ಮೆಯಿಂದಿರಿ. ಜನರ ಪ್ರಭಾವಕ್ಕೆ ಒಳಪಡದೆ ಪ್ರಮುಖ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಲು ಪ್ರಯತ್ನಿಸಿ. ಪ್ರತಿ ಹೆಜ್ಜೆಯನ್ನೂ ಇಂದು ಚಿಂತನಶೀಲವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತವೆ, ಆದ್ದರಿಂದ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ. ಆರ್ಥಿಕ ರಂಗದಲ್ಲಿ ಉತ್ತಮ ಫಲಿತಾಂಶ ಬರಲಿದೆ. ಇಂದು ದೊಡ್ಡ ಆರ್ಥಿಕ ಲಾಭವನ್ನು ಹೊಂದಿರುತ್ತೀರಿ, ಆದ್ದರಿಂದ ನಿಮ್ಮ ಹಳೆಯ ಸಾಲಗಳನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗುತ್ತದೆ. ಹೊಸ ಹಿರಿಯರು ನಿಮ್ಮ ಕಾರ್ಯಕ್ಷಮತೆಯಿಂದ ತುಂಬಾ ಪ್ರಭಾವಿತರಾಗುತ್ತಾರೆ ಮತ್ತು ಅದರಿಂದ ನೀವು ಪ್ರಯೋಜನ ಪಡೆಯುತ್ತೀರಿ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಮಧ್ಯಾಹ್ನ 2

ಮೀನ ರಾಶಿ

ಮೀನ ರಾಶಿ

ಇಂದು ನಿಮಗೆ ಸ್ವಲ್ಪ ಕಷ್ಟದ ದಿನವಾಗಿರಲಿದೆ, ಜಾಗರೂಕರಾಗಿರಬೇಕು. ಸಣ್ಣ ತೊಂದರೆಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಮನೆಯಲ್ಲಿ ವಾದಗಳನ್ನು ತಪ್ಪಿಸಬೇಕು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ಅದು ನಿಮ್ಮ ಮನೆಯ ಶಾಂತಿಯನ್ನು ಭಂಗಗೊಳಿಸುತ್ತದೆ. ನಿಮ್ಮ ಕೆಲಸದ ವಿಚಾರದಲ್ಲಿ ಇಂದು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಇದು ವೈಯಕ್ತಿಕ ಜೀವನದ ತೊಂದರೆಗಳ ಮೇಲೂ ಪರಿಣಾಮ ಬೀರುವುದು. ಹಿರಿಯರು ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸದಿರಬಹುದು. ಉದ್ಯಮಿಗಳು ನಷ್ಟವನ್ನು ಎದುರಿಸಬೇಕಾಗಬಹುದು. ಹಿಂದೆ ತೆಗೆದುಕೊಂಡ ನಿರ್ಧಾರವು ಇಂದು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ನಿಮ್ಮನ್ನು ನಿರಾಶೆಗೊಳಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಸಂಜೆ 4 ರಿಂದ 9:15 ರವರೆಗೆ

English summary

Dina Bhavishya 26 September 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Saturday, September 26, 2020, 4:00 [IST]
X