For Quick Alerts
ALLOW NOTIFICATIONS  
For Daily Alerts

ವಿಶ್ವ ಎಮೋಜಿ ದಿನ 2019: ಎಮೋಜಿಗಳ ನಿಜವಾದ ಅರ್ಥ ತಿಳಿಯಿರಿ

|

ಸಂದೇಶ ಕಳುಹಿಸುವ ವೇಳೆ ನಾವೆಲ್ಲರೂ ಇಮೋಜಿ ಬಳಕೆ ಮಾಡುತ್ತೇವೆ. ಆದರೆ ಕೆಲವೊಂದು ಸಲ ಇದರ ಹಿಂದೆ ಇರುವಂತಹ ನಿಜವಾದ ಕಾರಣವು ನಮಗೆ ತಿಳಿದಿರುವುದಿಲ್ಲ. ಜನಪ್ರಿಯ ಎಮೋಜಿಗಳನ್ನು ನಾವು ವಾಟ್ಸಪ್ ಮತ್ತು ಇತರ ಕೆಲವೊಂದು ಚಾಟ್ ಆ್ಯಪ್ ಗಳಲ್ಲಿ ಬಳಕೆ ಮಾಡುತ್ತೇವೆ.

ನಾವು ದಿನನಿತ್ಯವು ಬಳಕೆ ಮಾಡುವಂತಹ ಇಮೋಜಿಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ನಾವು ಊಹಿಸಿ ರುವುದಕ್ಕಿಂತಲೂ ಹೆಚ್ಚು ಈ ಎಮೋಜಿಗಳು ಅರ್ಥವನ್ನು ನೀಡುತ್ತವೆ ಎಂದು ನಿಮಗೆ ತಿಳಿದಿದೆಯಾ? ಹಾಗಾದರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಇಮೋಜಿಗಳ ಅರ್ಥ ತಿಳಿಯಿರಿ.

ಕೆಂಪು ಮಾಸ್ಕ್

ಕೆಂಪು ಮಾಸ್ಕ್

ಕೆಂಪು ಮಾಸ್ಕ್ ಕೋಪದ ಸೂಚಕವಾಗಿದೆ. ಇದು ಜಪಾನ್ ನ `ನಮಹಾಗೆ'ಯಿಂದ ಬಂದಿದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯೊಬ್ಬ ತುಂಬಾ ಹುಚ್ಚನಂತೆ ವರ್ತಿಸಿದಾಗ ಮತ್ತು ಕೋಪದಿಂದ ಮುಖ ಕೆಂಪಾಗಿದೆ ಎಂದು ತೋರಿಸಲು ಇದನ್ನು ಬಳಕೆ ಮಾಡಲಾಗುತ್ತದೆ.

ಬನ್ನಿ ಕಿವಿಗಳ ಮಹಿಳೆ

ಬನ್ನಿ ಕಿವಿಗಳ ಮಹಿಳೆ

ಹೆಚ್ಚಿನವರು ಇದನ್ನು ನೃತ್ಯ ಮಾಡುತ್ತಿರುವ ಹುಡುಗಿ ಎಂದು ಭಾವಿಸಿರುವರು. ಈ ಇಮೋಜಿಯು ಸ್ನೇಹಿತರೊಂದಿಗೆ ಹೊರಗಡೆ ಹೋಗಿ ಮಾತನಾಡಲು ಬಳಸುವ ಇಮೋಜಿ ಆಗಿದೆ. ಆದರೆ ಇದಕ್ಕೆ ಸಂಪೂರ್ಣವಾಗಿ ಭಿನ್ನ ಅರ್ಥವಿದೆ ಮತ್ತು ಇದನ್ನು ಕೇಳಿದರೆ ನಿಮಗೆ ಅಚ್ಚರಿ ಆಗಬಹುದು. ಇಮೋಜಿಯು ಜಪಾನ್ ನ ಬನ್ನಿ ಡ್ರೆಸ್ ನಿಂದ ಪ್ರೇರಿತವಾಗಿದೆ. ಇದು ಹಲವರೊಂದಿಗೆ ಫ್ಲರ್ಟ್ ಮಾಡುವುದು ಎಂದು ಹೇಳಲಾಗುತ್ತದೆ.

ಪೂಪ್ ಇಮೋಜಿ

ಪೂಪ್ ಇಮೋಜಿ

ಈ ಎಮೋಜಿ ಅಸಹ್ಯ ಮತ್ತು ದುರ್ವಾಸನೆಯನ್ನು ಪ್ರತಿನಿಧಿಸುತ್ತದೆ. ಅಚ್ಚರಿ ಎಂದರೆ ಇದು ಅದೃಷ್ಟವನ್ನು ಕೂಡ ಸೂಚಿಸುತ್ತದೆ. ಹೌದು, ಜಪಾನ್ ನಲ್ಲಿ ಮಲ ಅದೃಷ್ಟ ಎಂದು ಭಾವಿಸಲಾಗಿದೆ. ಯಾರಿಗಾದರೂ ಕನಸಿನಲ್ಲಿ ಕೈಗೆ ಮಲ ತಾಗಿರುವುದು ಕಂಡುಬಂದರೆ ಆಗ ಇದು ಭವಿಷ್ಯದಲ್ಲಿ ಹೆಚ್ಚಿನ ಹಣ ನೀಡುತ್ತದೆ ಎಂದು ಜಪಾನ್ ನ ಜನರು ನಂಬಿದ್ದಾರೆ.

ಕಟ್ಟಡ ಕಾರ್ಮಿಕ

ಕಟ್ಟಡ ಕಾರ್ಮಿಕ

ಈ ಇಮೋಜಿಯಲ್ಲಿ ಇರುವಂತಹ ಹಸಿರು ನಿಶಾನೆಯಿಂದಾಗಿ ಇದನ್ನು ಆಸ್ಪತ್ರೆಯಲ್ಲಿ ಕೆಲಸ ಮಾಡುವಾತ ಎಂದು ತಿಳಿಯಲಾಗಿದೆ. ಆದರೆ ಇದರು ನಿಜವಾಗಿಯೂ ಕಟ್ಟಡ ಕಾರ್ಮಿಕನ ಇಮೋಜಿ. ಜಪಾನ್ ನ ಕಟ್ಟಡ ಕಾರ್ಮಿಕರು ಇದನ್ನು ಬಳಕೆ ಮಾಡುವರು ಮತ್ತು ಇದೇ ರೀತಿಯ ಹೆಲ್ಮೆಟ್ ನಲ್ಲಿ ಹಸಿರು ಚಿಹ್ನೆಯಿದೆ.

ನೇಮ್ ಬ್ಯಾಡ್ಜ್

ನೇಮ್ ಬ್ಯಾಡ್ಜ್

ಇದು ಹೂಗಳಿಗೆ ಬೆಂಕಿ ನೀಡುವುದು ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಆದರೆ ನಿಜವಾಗಿಯೂ ಇದು ನೇಮ್ ಬ್ಯಾಡ್ಜ್ ಆಗಿದೆ. ಗ್ರೂಪ್ ಗಳಲ್ಲಿ ನಿಮ್ಮನ್ನು ಪರಿಚಯಿಸಲು ಇದನ್ನು ಬಳಸಿಕೊಳ್ಳಬಹುದು.

ಓಕೆ ಇಮೋಜಿ

ಓಕೆ ಇಮೋಜಿ

ಇದು ತುಂಬಾ ಜನಪ್ರಿಯ ಇಮೋಜಿಯಾಗಿದೆ. ಇದನ್ನು ನಾವೆಲ್ಲರೂ ಅಚ್ಚರಿ ಅಥವಾ ಆಲೋಚಿಸುವ ಹುಡುಗಿಯನ್ನು ಬಳಸಿಕೊಳ್ಳುತ್ತೇವೆ. ಆದರೆ ಇದು ನಿಜವಾಗಿಯೂ ಓಕೆ ಎಂದು ಅರ್ಥ ನೀಡುವ ಇಮೋಜಿ ಆಗಿದೆ.

ಸೊಶಿನಶ ಮಾರ್ಕ್

ಸೊಶಿನಶ ಮಾರ್ಕ್

ಪ್ರತಿಯೊಂದು ರಾಷ್ಟ್ರದ ಧ್ವಜವನ್ನು ಅವಲೋಕಿಸಲು ನಮಗೆ ಪುರುಸೊತ್ತಿಲ್ಲ ಮತ್ತು ಈ ಇಮೋಜಿ ಕೂಡ ಹಾಗೆ. ಆದರೆ ಈ ಇಮೋಜಿಯು ಜಪಾನ್ ನಲ್ಲಿ ಚಾಲಕರು ಬಳಸುವ ಚಿಹ್ನೆ ಆಗಿದೆ. ಡ್ರೈವಿಂಗ್ ಲೈಸನ್ಸ್ ಪಡೆದ ಬಳಿಕ ಆ ವ್ಯಕ್ತಿಯು ತನ್ನ ಕಾರಿನ ಹಿಂದುಗಡೆ ಈ ಚಿಹ್ನೆಯನ್ನು ಹಾಕಿಕೊಳ್ಳಬೇಕು. ಇದರಿಂದ ಈ ವ್ಯಕ್ತಿಯು ಇತ್ತೀಚೆಗೆ ಕಾರು ಚಾಲನೆ ಕಲಿತ್ತಿದ್ದಾನೆ ಎಂದು ತಿಳಿದುಬರುವುದು.

ಮಲಗುವ ಮುಖ

ಮಲಗುವ ಮುಖ

ಈ ಇಮೋಜಿಯನ್ನು ತುಂಬಾ ಬೇಸರ ವ್ಯಕ್ತಪಡಿಸಲು ಬಳಸಲಾಗುತ್ತದೆ. ಆದರೆ ಇದು ನಿಜವಾಗಿಯೂ ತುಂಬಾ ಆಯಾಸ ಅಥವಾ ನಿದ್ರೆ ಇಲ್ಲದೆ ಇರುವ ಸೂಚನೆ ಆಗಿದೆ. ಮಲಗಿರುವ ವೇಳೆ ಕೆನ್ನೆ ಮೇಲೆ ಕಣ್ಣೀರ ಹನಿ ಬರುವುದು.

ಮಾಹಿತಿ ನೀಡುವ ವ್ಯಕ್ತಿ

ಮಾಹಿತಿ ನೀಡುವ ವ್ಯಕ್ತಿ

ಈ ಇಮೋಜಿಯು ವ್ಯಕ್ತಿಯು ಯಾವುದೇ ಮಾಹಿತಿ ನೀಡುವ ಸೂಚನೆ ಆಗಿದೆ ಅಥವಾ ಯಾವುದೇ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿರುವುದು. ಆದರೆ ನಾವೆಲ್ಲರೂ ಇದನ್ನು ತಪ್ಪಾಗಿ ತಿಳಿದುಕೊಂಡಿದ್ದೇವೆ. ಆಕೆಯ ಅಂತಿಮ ಉದ್ವೇಗದ ಭಾವನೆಯನ್ನು ಇದು ತೋರಿಸುತ್ತದೆ.

ತೆರೆದ ಕೈಯ ಚಿಹ್ನೆ

ತೆರೆದ ಕೈಯ ಚಿಹ್ನೆ

ಇದು ಅಪ್ಪುವಿಕೆಯನ್ನು ಪ್ರತಿನಿಧಿಸುವುದು ಅಥವಾ ಇದು ನಿಲ್ಲಿಸು ಎನ್ನುವ ಸೂಚನೆಯನ್ನು ತಿಳಿಸುವುದು. ಆದರೆ ಈ ಇಮೋಜಿಯು ಮುಕ್ತ ಭಾವನೆ ಮತ್ತು ಪ್ರಾಮಾಣಿಕತೆಯ ಸೂಚನೆ ಎಂದು ತಿಳಿಸುತ್ತದೆ.

English summary

World Emoji Day 2019: Whatsapp Emojis & Their Hidden Meanings

We all use a lot of emojis while texting. But do you even know the actual meaning that is hidden behind the most popular emojis that we use on Whataspp or other chat apps? Here, we bring to you the hidden meaning of the emojis that we use in our daily lives. These emojis depict something else from what we have assumed.
X
Desktop Bottom Promotion