For Quick Alerts
ALLOW NOTIFICATIONS  
For Daily Alerts

2019ರ ವರ್ಷವು ಯಾವ್ಯಾವ ರಾಶಿಯವರಿಗೆ ಕಂಕಣ ಭಾಗ್ಯ ತಂದುಕೊಡಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

|

ವಿವಾಹ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬದಲಾವಣೆಯನ್ನು ತಂದುಕೊಡುವುದು. ಜವಾಬ್ದಾರಿಯ ಜೀವನದೊಂದಿಗೆ ಸಾಗುತ್ತಾ ಜೀವನದ ಸುಖವನ್ನು ಅನುಭವಿಸಲು ಇರುವ ಮಾರ್ಗ ಎಂದು ಸಹ ಹೇಳಬಹುದು. ಅಪರಿಚಿತರಾಗಿದ್ದ ವಧು ವರನು ವಿವಾಹ ಬಂಧನದಿಂದ ಸಂಗಾತಿಯಾಗಿ, ಜೀವನದುದ್ದಕ್ಕೂ ಜೊತೆಯಾಗಿ ಇರುತ್ತೇನೆ ಎನ್ನುವ ವಚನದ ಮೂಲಕ ಜೀವನವನ್ನು ನಡೆಸುತ್ತಾರೆ. ಮಧುರವಾದ ವಿವಾಹ ಬಂಧನಕ್ಕೆ ಒಳಗಾದ ವ್ಯಕ್ತಿಗಳು ಪರಸ್ಪರ ಅರಿತು ಬೆರೆತು ಬಾಳಿದಾಗ ಅವರ ಜೀವನವು ನಂದನವನವಾಗುವುದು. ಹಾಗಾಗಿಯೇ ವ್ಯಕ್ತಿಗೆ ವಿವಾಹ ಎನ್ನುವುದು ಬಹುಮುಖ್ಯವಾದ ಸಂಗತಿಯಾಗಿರುತ್ತದೆ.

ವಿವಾಹದ ಪದ್ಧತಿ ಅಥವಾ ಆಚರಣೆಗಳು ಆಯಾ ಪ್ರದೇಶ ಮತ್ತು ದೇಶಗಳಿಗೆ ಅನುಗುಣವಾಗಿ ಭಿನ್ನತೆಯನ್ನು ಹೊಂದಿರಬಹುದು. ಆದರೆ ವಿವಾಹದ ಅರ್ಥ, ಮಹತ್ವ ಹಾಗೂ ಸತ್ಯಸಂಗತಿಗಳು ಒಂದೇ. ಹುಡುಗಾಟದ ಬುದ್ಧಿಯನ್ನು ತೊರೆದು, ಸಂಸಾರದ ಹೊರೆಯನ್ನು ಹೊರಲು ಬದ್ಧನಾಗಿದ್ದೇನೆ ಎನ್ನುವ ಭರವಸೆಯಿಂದ ಬದುಕನ್ನು ನಡೆಸುವುದು, ಹೊಸ ಸಂಬಂಧಗಳ ಬಂಧನಕ್ಕೆ ಒಳಗಾಗಿ ಸಂಬಂಧಗಳ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಪರಸ್ಪರ ಪ್ರೀತಿ ವಿಶ್ವಾಸದಿಂದ ದಿನಕಳೆಯುವುದು ಒಂದು ವಿಶೇಷ ಸಂಗತಿ. ತಾನು, ತಮ್ಮವರು, ತನ್ನ ಕುಟುಂಬ ಹೀಗೆ ಒಂದು ಸ್ಥಿರವಾದ ಸಂಸಾರದೊಂದಿಗೆ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಮನ್ನಣೆ ಪಡೆದುಕೊಳ್ಳುತ್ತಾರೆ.

2019ರಲ್ಲಿ ಕಂಕಣ ಭಾಗ್ಯ

2019ರಲ್ಲಿ ಕಂಕಣ ಭಾಗ್ಯ

ವಿವಾಹ ಇಲ್ಲದೆ ಇರುವ ವ್ಯಕ್ತಿಯ ಜೀವನದಲ್ಲಿ ಎಲ್ಲವೂ ನಿರಸದಿಂದ ಕೂಡಿರುತ್ತವೆ. ಯಾರಿಗಾಗಿ, ಯಾಕಾಗಿ ಎನ್ನುವಂತಹ ಪ್ರಶ್ನೆಗಳು ಪದೇ ಪದೇ ಮನಸ್ಸನ್ನು ಕಾಡುವುದರಿಂದ ಬದುಕು ಬೇಸರವನ್ನು ಮೂಡಿಸುವುದು. ಜೊತೆಗೆ ಯಾವ ಕೆಲಸ-ಕಾರ್ಯಗಳಲ್ಲೂ ನೆಮ್ಮದಿ ಮತ್ತು ಆಸಕ್ತಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರು ಸೂಕ್ತ ವಯಸ್ಸಿನಲ್ಲಿ ವಿವಾಹವಾಗಬೇಕು. ಇಲ್ಲವಾದರೆ ಸಂಸಾರ ಅಥವಾ ವಿವಾಹ ಎನ್ನುವ ಬಂಧನದಿಂದ ಸಿಗುವಂತಹ ಸಮಾಧಾನದ ಬದುಕು ದೊರೆಯದು ಎನ್ನುತ್ತಾರೆ. ಹಾಗಾಗಿಯೇ ಮನೆಯಲ್ಲಿ ವಯಸ್ಸಿಗೆ ಬಂದ ಮಗಳು ಅಥವಾ ಮಗನಿದ್ದಾನೆ ಎಂದರೆ ಅವರಿಗೆ ಮೊದಲು ವಿವಾಹ ಮಾಡಲು ಯೋಚಿಸುತ್ತಾರೆ.

ಉದ್ಯೋಗದಲ್ಲಿ ಸ್ಥಿರತೆ ಇಲ್ಲದೆ ಇರುವುದರಿಂದ, ವಿದ್ಯಾಭ್ಯಾಸ ಪೂರ್ಣಗೊಳ್ಳದೆ ಇರುವುದು, ಜನ್ಮ ಕುಂಡಲಿಯಲ್ಲಿ ದೋಷಗಳು ಇರುವುದು, ಗ್ರಹಗತಿಗಳ ಪ್ರಭಾವ ವಿವಾಹ ಯೋಗವನ್ನು ಕರುಣಿಸದೆ ಇರುವುದು ಅಥವಾ ಇನ್ಯಾವುದೋ ಅನಿರೀಕ್ಷಿತ ಹಾಗೂ ಅನುಚಿತ ಕಾರಣಗಳಿಂದ ಸಾಕಷ್ಟು ಜನರು ಯೋಗ್ಯ ವಯಸ್ಸಿನಲ್ಲಿ ವಿವಾಹವಾಗದೆ ಇರಬಹುದು. ವಿವಾಹ ಎಂದು ಆಗುವುದು ಎನ್ನುವ ಕಾತುರದಲ್ಲಿಯೂ ಇರುತ್ತಾರೆ. ಶೀಘ್ರ ವಿವಾಹಕ್ಕಾಗಿ ಮತ್ತು ಯೋಗ್ಯ ವಧು/ವರರನ್ನು ಪಡೆದುಕೊಳ್ಳುವ ಕಾರಣಕ್ಕೆ ಸಾಕಷ್ಟು ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ನಂತರ ದೋಷಗಳು ಇದ್ದರೆ ನಿವಾರಣೆಯಾಗುವುದು. ಬಯಸಿದ ವ್ಯಕ್ತಿಗಳೊಂದಿಗೆ ವಿವಾಹ ಆಗುವುದು ಎನ್ನುವ ನಂಬಿಕೆ ಇದೆ. ನೀವು ಸಹ ಸಾಕಷ್ಟು ದಿನಗಳಿಂದ ವಿವಾಹಕ್ಕಾಗಿ ಕಾಯುತ್ತಿದ್ದೀರಿ, ನಿಮ್ಮ ಬಯಕೆಯಂತಹ ವರ ಸಿಗದೆ ಇರಬಹುದು. ಈ ವರ್ಷದಲ್ಲಿ ಅಂದರೆ 2019ರಲ್ಲಾದರೂ ಕಂಕಣ ಭಾಗ್ಯ ಕೂಡಿ ಬರಬಹುದೇ ಎನ್ನುವ ಚಿಂತೆ ಅಥವಾ ಪ್ರಶ್ನೆಯು ನಿಮ್ಮ ಮನಸ್ಸನ್ನು ಕಾಡುತ್ತಿದೆ ಎಂದಾದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರಗಳ ವಿವರಣೆಯನ್ನು ಪರಿಶೀಲಿಸಿ.

ಮೇಷ:

ಮೇಷ:

ವಿವಾಹದ ಸಂಗತಿಗೆ ಅಥವಾ ವಿಚಾರಕ್ಕೆ ಸಂಬಂಧಿಸಿದಂತೆ ಈ ವರ್ಷ ನಿಮಗೆ ಸ್ವಲ್ಪ ಕಷ್ಟವಾಗಬಹುದು. ನಿಮಗೆ ಸೂಕ್ತವಾದ ಸಂಗಾತಿಯನ್ನು ಪಡೆದುಕೊಳ್ಳಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾದ ಅನಿವಾರ್ಯತೆ ಇದೆ. ಅಗ್ನಿಯ ಚಿಹ್ನೆಯನ್ನು ಹೊಂದಿರುವ ನೀವು ಆಕ್ರೋಷ ಹಾಗೂ ಬಹುಬೇಗ ಬೇಸರಕ್ಕೆ ಒಳಗಾಗುವ ಸಾಧ್ಯತೆಗಳಿವೆ. ನೀವು ಆದಷ್ಟು ತಾಳ್ಮೆ ಹಾಗೂ ಭರವಸೆಯನ್ನು ಹೊಂದಬೇಕಾಗುವುದು. ವಿವಾಹ ಯೋಗವು ನಿಮಗೆ ಖಂಡಿತವಾಗಿಯೂ ಬರುವುದು. ಆದರೆ ಈಗ ನಕ್ಷತ್ರಗಳು ಹಾಗೂ ಗ್ರಹಗಳ ಸಹಕಾರ ಇಲ್ಲದೆ ಇರುವುದರಿಂದ ಕೊಂಚ ನಿಧಾನವಾಗುತ್ತಿದೆ. ನೀವು ನಿಮ್ಮ ಸ್ನಾತಕೋತ್ತರ ಪದವಿಯನ್ನು ಹೊಂದುವಲ್ಲಿ ಮನಸ್ಸನ್ನು ಮಾಡಿ. ನಂತರದ ದಿನಗಳಲ್ಲಿ ನಿಮ್ಮ ಬಯಕೆಗೆ ಅನುಗುಣವಾದ ಸಂಗಾತಿಯೊಂದಿಗೆ ವಿವಾಹವಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

ವೃಷಭ:

ವೃಷಭ:

ಸಹನಾ ಶೀಲರು ಹಾಗೂ ಸ್ಥಿರ ಮನಸ್ಸಿನವರು ವೃಷಭ ರಾಶಿಯ ವ್ಯಕ್ತಿಗಳು. ನಿಮಗೆ 2019ರ ವರ್ಷ ನಿಮ್ಮ ಅದೃಷ್ಟದಲ್ಲಿ ಕಂಕಣ ಭಾಗ್ಯ ಅಥವಾ ವಿವಾಹ ಯೋಗವನ್ನು ಕಲ್ಪಿಸುತ್ತಿದೆ ಎಂದು ಹೇಳಲಾಗುವುದು. ನಿಮಗೆ ನಿಮ್ಮ ಪ್ರೀತಿಯನ್ನು ಪಡೆದುಕೊಳ್ಳಲು ಮತ್ತು ಸಂಗಾತಿಯೊಂದಿಗೆ ಜೀವನ ನಡೆಸಲು ಉತ್ತಮ ಸಮಯ. ಮಾರ್ಚ್ ನಂತರ ಹಾಗೂ ಏಪ್ರಿಲ್ ತಿಂಗಳಲ್ಲಿ ಮೂರು ಗಂಟುಗಳನ್ನು ಹಾಕುವ ಅಥವಾ ಹಾಕಿಸಿಕೊಳ್ಳುವ ಯೋಗವಿದೆ. ಈ ಸಮಯದಲ್ಲಿ ಹೊಂದುವ ಸಂಬಂಧಗಳಿಂದ ಇನ್ನಷ್ಟು ಬಲವನ್ನು ಪಡೆದುಕೊಳ್ಳುವಿರಿ ಎಂದು ಹೇಳಲಾಗುವುದು.

ಮಿಥುನ:

ಮಿಥುನ:

ಹಿಂದಿನ ವರ್ಷದಲ್ಲಿ ನೀವು ವಿವಾಹವಾಗಲು ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು ಆದರೆ ಕೆಲವು ಕಾರಣಗಳಿಂದ ಅವಕಾಶಗಳು ಕೈತಪ್ಪಿ ಹೋಗಿರಬಹುದು. ಆದರೆ ಈ ವರ್ಷ ಅಂದರೆ 2019ರಲ್ಲಿ ಸಾಕಷ್ಟು ಉತ್ತಮ ಅವಕಾಶಗಳು ಹಾಗೂ ಸಮಯವು ಉತ್ತಮವಾಗಿ ಇರುವುದು. ವಿವಾಹವಾಗಲು ನಿಮಗೆ ಈ ವರ್ಷ ಮಂಗಳಕರವಾಗಿರುತ್ತದೆ. ನೀವು ನಿಮ್ಮ ಉತ್ತಮ ಪಾಲುದಾರರ ಭೇಟಿಯನ್ನು ಮಾಡಬಹುದು. ಮನಸ್ಸಿಗೆ ಇಷ್ಟವಾದ ವ್ಯಕ್ತಿಯೊಂದಿಗೆ ವಿವಾಹವಾಗುವ ಅದೃಷ್ಟವಿದೆ. ಆದರೆ ನಿಮ್ಮ ಕುಂಡಲಿ ಹಾಗೂ ಸಂಗಾತಿಯ ಕುಂಡಲಿಗೆ ಅನುಗುಣವಾಗಿ ದಿನಾಂಕವನ್ನು ನಿರ್ಧರಿಸಿ. ಉತ್ತಮ ದಿನದಲ್ಲಿ ವಿವಾಹವಾಗುವುದರಿಂದ ಉತ್ತಮವಾದ ಪ್ರೀತಿಯ ಜೀವನವನ್ನು ಆಶೀರ್ವಾದದ ರೂಪದಲ್ಲಿ ಪಡೆದುಕೊಳ್ಳುವಿರಿ.

ಕರ್ಕ:

ಕರ್ಕ:

ಭಾವನಾತ್ಮಕ ವ್ಯಕ್ತಿಗಳು ಹಾಗೂ ಸಂಬಂಧಗಳಿಗೆ ವಿಶೇಷ ಮಾನ್ಯತೆಯನ್ನು ನೀಡುವವರು ಕರ್ಕ ರಾಶಿಯವರು. ಈ ವರ್ಷ ನೀವು ವಿವಾಹ ಆಗಲು ಬಯಸುತ್ತಿದ್ದೀರಿ ಎಂದಾದರೆ ನಿಮಗೆ ಸ್ವಲ್ಪ ಕಾಯಿರಿ ಎಂದು ಹೇಳಬೇಕಾಗುವುದು. ವಿವಾಹದ ವಿಷಯದಲ್ಲಿ ನೀವು ಸಾಕಷ್ಟು ಯೋಚನೆ ಹಾಗೂ ಪುನರ್ವಿಮರ್ಶೆ ಕೈಗೊಳ್ಳಬೇಕಾಗುವುದು. ನಿಮ್ಮ ಪಾಲುದಾರರು ಅಥವಾ ಸಂಗಾತಿಯಾಗುವವರು ಸರಿಯಾಗಿಲ್ಲ ಎನ್ನುವ ಅರ್ಥವಲ್ಲ. ಗ್ರಹಗತಿಗಳ ಪ್ರಭಾವ ಅಷ್ಟಾಗಿ ಉತ್ತಮವಾಗಿಲ್ಲದೆ ಇರುವುದರಿಂದ ನಿಮಗೆ ಈಗ ಸರಿಯಾದ ಸಮಯವಲ್ಲ ಎಂದು ಹೇಳಲಾಗುವುದು. ವಿವಾಹವಾಗಲು 2019ರ ವರ್ಷದ ಆರಂಭದ ಎರಡು ತಿಂಗಳು ಹಾಗೂ ವರ್ಷದ ಅಂತ್ಯದಲ್ಲಿ ಬರುವ ಎರಡು ತಿಂಗಳು ಉತ್ತಮವಾಗಿರುತ್ತದೆ ಎಂದು ಹೇಳಲಾಗುವುದು.

ಸಿಂಹ:

ಸಿಂಹ:

ಈ ವರ್ಷ ನಿಮ್ಮ ವಿವಾಹದ ಸಂಗತಿಯಲ್ಲಿ ಸಮಯವು ಸಂಪೂರ್ಣವಾಗಿ ನಿಮ್ಮ ಪರವಾಗಿದೆ ಎಂದು ಹೇಳಲಾಗುವುದು. ನೀವು ಪ್ರೀತಿಯಲ್ಲಿ ಬೀಳಬಹುದು ಅಥವಾ ನಿಮ್ಮ ಪ್ರೀತಿಗಾಗಿ ಒಪ್ಪಿಗೆಯನ್ನು ಕೇಳುವ ಸಾಧ್ಯತೆಗಳು ಇವೆ ಎಂದು ಹೇಳಲಾಗುವುದು. ಪಾಲಕರು ಸಹ ನಿಮ್ಮ ವಿವಾಹದ ಕುರಿತು ಸಾಕಷ್ಟು ಚಿಂತನೆ ಹಾಗೂ ಕಾರ್ಯವನ್ನು ಕೈಗೊಳ್ಳುವರು. ನಿಮಗೆ ಇಷ್ಟವಾದ ಅಥವಾ ನೀವು ಬಯಸಿದ ವ್ಯಕ್ತಿಯೊಂದಿಗೆ ವಿವಾಹವಾಗುವ ಮೊದಲು ಸೂಕ್ತ ದಿನಾಂಕ ಹಾಗೂ ಸಮಯವನ್ನು ನೋಡಿ ವಿವಾಹವಾಗಿ. ಇದರಿಂದ ನಿಮ್ಮ ಜೀವನದಲ್ಲಿ ನಡೆಯುವ ವಿವಾಹಹವು ಉತ್ತಮವಾದ ಫಲದೊಂದಿಗೆ ಜೀವನವನ್ನು ಮುಂದೆ ಸಾಗುವಂತೆ ಮಾಡುವುದು.

ಕನ್ಯಾ:

ಕನ್ಯಾ:

ನೀವು ನಿಮ್ಮ ಮನಸ್ಸಿನಲ್ಲಿ ಯಾರನ್ನಾದರೂ ಬಯಸುತ್ತಿದ್ದರೆ ಅದನ್ನು ರಹಸ್ಯವಾಗಿ ಇಡುವ ಬದಲು ನೀವು ಬಯಸಿದ ವ್ಯಕ್ತಿಗೆ ಹೇಳಿ. 2019ರಲ್ಲಿ ನಿಮ್ಮ ವಿವಾಹಕ್ಕೆ ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್ ತಿಂಗಳು ಬಹಳ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುವುದು. ನಿಮಗೆ ಇಷ್ಟು ಬೇಗ ವಿವಾಹಕ್ಕೆ ಇಷ್ಟ ಇಲ್ಲ ಎಂದಾದರೆ ಜೂನ್, ಅಕ್ಟೋಬರ್, ಡಿಸೆಂಬರ್ ತಿಂಗಳಲ್ಲಿ ದಿನವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ನಿಮಗೆ ಸಲಹೆ ನೀಡುತ್ತದೆ. ಈ ತಿಂಗಳಲ್ಲಿ ವಿವಾಹವಾಗಲು ಎಲ್ಲಾ ದಿನವು ನಿಮಗೆ ಸೂಕ್ತವಾಗಿರುವುದು ಎಂದು ಹೇಳಲಾಗುವುದು.

Most Read: ಮದುವೆಯಾದ ಮೂರೇ ನಿಮಿಷಕ್ಕೆ ಪತಿಗೆ ವಿಚ್ಛೇದನ ನೀಡಿದ ಮಹಿಳೆ!

ತುಲಾ:

ತುಲಾ:

2019ರ ವರ್ಷವು ನಿಮ್ಮ ವಿವಾಹಕ್ಕೆ ಯೋಗ್ಯವಾದ ವರ್ಷವಾಗಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಉತ್ತಮ ಸಂಬಂಧ ಹಾಗೂ ಅನುಕೂಲಕರ ಸ್ಥಿತಿಯು ಕೈಗೂಡಿ ಬರುವುದು. ಈ ವರ್ಷ ನೀವು ವಿವಾಹವಾದರೆ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುವುದು. ಹಿಂದಿನ ವರ್ಷಗಳಿಂದ ತುಲಾ ರಾಶಿಯವರು ಉತ್ತಮ ಸಮಯಕ್ಕಾಗಿ ಕಾಯುತ್ತಿದ್ದರು. ಈ ವರ್ಷ ಇವರು ಯಾವ ತಿಂಗಳಲ್ಲಾದರೂ ತಮ್ಮ ವಿವಾಹ ಕಾರ್ಯವನ್ನು ಕೈಗೊಳ್ಳಬಹುದು. ವರ್ಷ ಪೂರ್ತಿ ನಿಮಗೆ ಮಂಗಳಕರವಾದ ಸಮಯವಾಗಿರುತ್ತದೆ ಎನ್ನಲಾಗುವುದು.

ವೃಶ್ಚಿಕ:

ವೃಶ್ಚಿಕ:

ಈ ವರ್ಷ ನಿಮಗೆ ಸಲಹೆ ನೀಡುವುದಾದರೆ ವಿವಾಹದ ಸಂಗತಿ ಅಥವಾ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆತುರದ ನಿರ್ಧಾರ ಸೂಕ್ತವಲ್ಲ. ವಿವಾಹವಾಗಲು ಸಹ ನಿಮಗೆ ಈ ವರ್ಷ ಅಷ್ಟು ಉತ್ತಮವಾದ ಸಮಯವಲ್ಲ ಎಂದು ಹೇಳಲಾಗುವುದು. ವಿವಾಹ ವಾಗುವ ಮುನ್ನ ನಿಮ್ಮ ಸಂಗಾತಿಯಾಗಲಿರುವವರ ಬಗ್ಗೆ ಹಾಗೂ ಅವರ ಆಸೆ ಆಕಾಂಕ್ಷೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಅದಕ್ಕಾಗಿಯೇ ಒಂದಷ್ಟು ಸಮಯವನ್ನು ಮೀಸಲಿಡಿ. ನಿಮಗೆ ಈ ವರ್ಷ ಸಾಕಷ್ಟು ವಿಷಯದಲ್ಲಿ ಜವಾಬ್ದಾರಿಯನ್ನು ಕೈಗೊಳ್ಳಬೇಕಾಗುವುದು. ನೀವು ಈ ವರ್ಷ ನಿಶ್ಚಿತಾರ್ಥವನ್ನು ಮಾಡಿಕೊಳ್ಳಬಹುದು. ಯಾರು ದೀರ್ಘ ಸಮಯದಿಂದ ವಿವಾಹವಾಗಲು ಕಾಯುತ್ತಿದ್ದಾರೋ ಅಂತಹವರು ಸೂಕ್ತ ದಿನಾಂಕವನ್ನು ನೋಡಿ ವಿವಾಹವಾಗಬಹುದು.

ಧನು:

ಧನು:

ಈಗಾಗಲೇ ಪ್ರೀತಿಯಲ್ಲಿ ಬಿದ್ದವರು ಅಥವಾ ಸಂಗಾತಿಯ ಆಯ್ಕೆಯನ್ನು ಮಾಡಿಕೊಂಡವರು ಈ ವರ್ಷ ವಿವಾಹವಾಗಲು ಯೋಗ್ಯವಾದ ಸಮಯ. ಸೂಕ್ತ ಸಮಯಕ್ಕೆ ಕಾಯುತ್ತಿರುವವರಿಗೂ 2019ರ ವರ್ಷ ಅತ್ಯುತ್ತಮವಾದದ್ದು. ಪಾಲುದಾರರ ಹುಡುಕಾಟದಲ್ಲಿ ಇರುವವರಿಗೂ ಯೋಗ್ಯ ಸಂಗಾತಿಯು ಸಿಗುವರು. ನೀವು ಬಯಸಿದ ವ್ಯಕ್ತಿಯೊಂದಿಗೆ ವಿವಾಹ ಬಂಧನಕ್ಕೆ ಒಳಗಾಗುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಕರ:

ಮಕರ:

ರಹಸ್ಯವಾಗಿ ಪ್ರೀತಿಯನ್ನು ಮಾಡುತ್ತಿರುವ ವ್ಯಕ್ತಿಗಳು ನಿಸ್ಸಂದೇಹವಾಗಿ ತಮ್ಮ ಹೃದಯದ ಮಾತನ್ನು ತೆರೆದಿಡಬಹುದು. ಅದಕ್ಕೆ ಒಪ್ಪಿಗೆ ಅಥವಾ ಸಮ್ಮತಿಯು ದೊರೆಯುವುದು. ನೀವು ಬಯಸಿದ ವ್ಯಕ್ತಿಯೊಂದಿಗೆ ಅಥವಾ ನಿಮ್ಮ ತಂದೆ ತಾಯಿಗಳೇ ಮುಂದಾಗಿ ಮಾಡುವ ವಿವಾಹಕ್ಕೆ ಮಾರ್ಚ್ ತಿಂಗಳವರೆಗೆ ಕಾಯಬೇಕಾಗುವುದು. ವಿವಾಹಕ್ಕೆ ಒಪ್ಪಿಗೆ ಅಥವಾ ತಯಾರಿಯ ಕೆಲಸವನ್ನು ಕೈಗೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

Most Read: ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಜೀವನದಲ್ಲಿ ಎರಡು ಬಗೆಯ ಬದಲಾವಣೆಗಳು ಆಗಲಿದೆಯಂತೆ

ಕುಂಭ:

ಕುಂಭ:

ಅಂತರ್ಮುಖಿ ಸ್ವಭಾವದವರು ಕುಂಭ ರಾಶಿಯವರು. ವಿವಾಹದ ವಿಷಯದಲ್ಲಿ ನೀವು ಸ್ವಲ್ಪ ಸಮಯಗಳ ಕಾಲ ನಿರೀಕ್ಷಿಸುವ ಮನಸ್ಸು ಮಾಡುವುದು ಅಥವಾ ಪಾಲುದಾರರ ಕುಟುಂಬದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ನಿರ್ಧಾರ ಕೈಗೊಳ್ಳುವುದು ತಪ್ಪಲ್ಲ. ಅವಿವಾಹಿತರು ಈ ವರ್ಷ ತಮ್ಮ ಪ್ರೀತಿ ಅಥವಾ ಪಾಲುದಾರರನ್ನು ಭೇಟಿ ಮಾಡಲು ಮತ್ತು ವಿವಾಹವಾಗಲು ಅವಕಾಶವಿದೆ ಎಂದು ತೋರುವುದು. ಆದರೂ ಹೊಸ ಸಂಬಂಧವನ್ನು ಸ್ವೀಕರಿಸುವ ಮುನ್ನ ಸ್ವಲ್ಪ ವಿಚಾರಣೆ ಹಾಗೂ ಸ್ವಲ್ಪ ಸಮಯಗಳ ಕಾಲ ನಿರೀಕ್ಷೆ ಮಾಡುವುದು ಉತ್ತಮ ಎಂದು ಸಲಹೆ ನೀಡಲಾಗುವುದು.

ಮೀನ:

ಮೀನ:

ಮದುವೆ ವಿಚಾರದಲ್ಲಿ ನಿಮ್ಮ ಯೋಜನೆಗಳು ಸ್ವಲ್ಪ ಸಮಯದ ವರೆಗೆ ವಿಳಂಬವಾಗುವುದು. ಆದರೆ ಅದರ ಬಗ್ಗೆ ಬೇಸರ ಅಥವಾ ತಾತ್ಸಾರಕ್ಕೆ ಒಳಗಾಗುವುದು ಉಚಿತವಲ್ಲ. ನಿಮ್ಮ ನಿರೀಕ್ಷೆಯಂತಹ ಸಂಗಾತಿಯೊಂದಿಗೆ ವಿವಾಹವಾಗಲು ಈ ವರ್ಷ ಉತ್ತಮ ಸಮಯವಾಗಿದೆ. ಈ ವರ್ಷದಲ್ಲಿ ನೀವು ವಿವಾಹವಾದರೆ ಮಂಗಳಕರವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅವಿವಾಹಿತರು ತಮ್ಮ ಹೃದಯದ ಮಾತನ್ನು ಹೇಳಬೇಕು ಎನ್ನುವ ಹವಣಿಕೆ ಅಥವಾ ಆಸೆಯನ್ನು ಹೊಂದಿದ್ದರೆ ತಮ್ಮ ಪ್ರೀತಿಯ ಯೋಜನೆಯಲ್ಲಿ ಮುಂದುವರಿಯಬಹುದು ಎಂದು ಸಹ ಹೇಳಲಾಗುವುದು.

English summary

Will You Get Married In 2019? Check It Out Here

Waiting for the right time or the right partner? Want to know if the year will be an auspicious one for you to get married? Astrology has all the answers. Whether it has been a long wait for marriage or the future of a newly started relationship, astrological predictions based on your zodiac sign can help you know all that.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more