For Quick Alerts
ALLOW NOTIFICATIONS  
For Daily Alerts

ಮದುವೆಯಾದ ಮೂರೇ ನಿಮಿಷಕ್ಕೆ ಪತಿಗೆ ವಿಚ್ಛೇದನ ನೀಡಿದ ಮಹಿಳೆ!

|

ದಾಂಪತ್ಯಕ್ಕೆ ಅಡಿಯಿಟ್ಟ ಬಳಿಕ ಪತಿ ಪತ್ನಿಯರ ನಡುವೆ ಎದುರಾಗುವ ಕೆಲವು ವೈರುಧ್ಯಗಳು ವೈಮನಸ್ಯಕ್ಕೆ ಕಾರಣವಾಗಿ ವಿಚ್ಛೇದನಕ್ಕೆ ದಾರಿಯಾಗಬಹುದು. ಪತಿ ಪತ್ನಿಯರ ನಡುವಣ ಜಗಳ, ಇಬ್ಬರ ನಡವಳಿಕೆ ಇನ್ನೊಬ್ಬರಿಗೆ ಸರಿಹೋಗದಿರುವುದು, ಒಬ್ಬರು ಇನ್ನೊಬ್ಬರ ಮೇಲೆ ಹೇರುವ ಒತ್ತಡ, ಸ್ವಾತಂತ್ರ್ಯಕ್ಕೆ ಕಡಿವಾಣ, ವೈಯಕ್ತಿಕ ಆಯ್ಕೆಗಳು, ಕುಟುಂಬದ ಹಿರಿಯರಿಗೆ ನೀಡಬೇಕಾದ ಗೌರವ ಸಲ್ಲಿಸದಿರುವುದು ಮೊದಲಾದವು ವಿಚ್ಛೇದನಕ್ಕೆ ಗಂಭೀರ ಕಾರಣಗಳಾದರೆ ಕೆಲವು ದಂಪತಿಗಳು ಕ್ಷುಲ್ಲುಕ ಕಾರಣಕ್ಕೂ ವಿಚ್ಛೇದನ ಪಡೆದಿದ್ದಾರೆ.

ಇಂತಹದ್ದೇ ಒಂದು ಪ್ರಕರಣ ಕುವೈಟ್ ನಿಂದ ವರದಿಯಾಗಿದ್ದು ಮಹಿಳೆಯೊಬ್ಬರು ವಿವಾಹ ಸಂಪನ್ನಗೊಂಡ ಮೂರೇ ನಿಮಿಷದಲ್ಲಿ ತನ್ನ ಪತಿಗೆ ವಿಚ್ಛೇದನ ನೀಡಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಈಕೆ ಏಕಾಗಿ ಈ ಕ್ರಮ ಕೈಗೊಂಡಳು? ಇದು ದಿಟ್ಟತನವೇ ಅಥವಾ ದಡ್ಡತನವೇ? ಬನ್ನಿ, ಇದಕ್ಕೇನು ಕಾರಣ ನೋಡೋಣ....

ಈ ದಂಪತಿಗಳು ಈಗತಾನೇ ವಿವಾಹ ವಿಧಿಗಳನ್ನು ಪೂರೈಸಿದ್ದರು

ಈ ದಂಪತಿಗಳು ಈಗತಾನೇ ವಿವಾಹ ವಿಧಿಗಳನ್ನು ಪೂರೈಸಿದ್ದರು

ಕುವೈಟ್ ನಗರದಲ್ಲಿ ನಡೆದ ಈ ವಿವಾಹ ನ್ಯಾಯಾಲಯದ ಆವರಣದಲ್ಲಿ ಜರುಗಿತ್ತು. ಈಗತಾನೇ ನ್ಯಾಯಾಧೀಶರ ಎದುರು ವಿವಾಹದ ಕರಾರುಪತ್ರಕ್ಕೆ ಇಬ್ಬರೂ ಸಹಿ ಹಾಕಿ ಜೀವನದಲ್ಲಿ ಜೊತೆಜೊತೆಯಾಗಿ ನಡೆಯುವ ಭರವಸೆಯೊಂಗಿದೆ ಜೊತೆಯಾಗಿ ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆಯಿಡುತ್ತಿದ್ದರು. ಆಗ....

Most ReadL: ಮುಖ ನೋಡಿದ ತಕ್ಷಣ ನಿಮ್ಮ ಮದುವೆ ಬಗ್ಗೆ ಹೇಳಬಹುದು!

ಅಕಸ್ಮಾತ್ತಾಗಿ ಆಕೆ ಎಡವಿದಳು

ಅಕಸ್ಮಾತ್ತಾಗಿ ಆಕೆ ಎಡವಿದಳು

ನ್ಯಾಯಾಲಯದ ಅವರಣದಿಂದ ಹೊರಹೋಗಲು ನವವಿವಾಹಿತ ಜೋಡಿ ನಡೆದು ಹೋಗುತ್ತಿದ್ದಾಗ ವಧು ಅಕಸ್ಮಾತ್ತಾಗಿ, ಕಾಲಿಗೇನೋ ತೊಡರಿ ಎಡವಿ ಬಿದ್ದಳು. ಆದರೆ ಕೆಳಕ್ಕೆ ಬಿದ್ದ ಆಕೆಯನ್ನು ಎದ್ದು ನಿಲ್ಲಲು ನೆರವಾಗುವ ಬದಲು ವರ, ತಕ್ಷಣ ಎಲ್ಲರೆದುದು ಎಡವಿ ಮಾನ ಕಳೆದಳು ಎಂಬಂತೆ ಜರೆಯುತ್ತಾ ಜೋರಾಗಿಯೇ ಎಲ್ಲರೆದುದು 'ಸ್ಟುಪಿಡ್' ಎಂದು ತನ್ನ ಪತ್ನಿಯನ್ನು ಬೈದಿದ್ದ.

Most Read: ಈ ಮಹಿಳೆ ಏನು ಮಾಡಿದಳು ಗೊತ್ತೇ? ನಿದ್ರೆಯಲ್ಲಿ ಮಾತ್ರೆಗಳ ಪ್ಯಾಕೆಟ್‌ನ್ನೇ ನುಂಗಿದಳು!!

ಈ ಬೈಗುಳವೇ ಆಕೆಗೆ ವಿಚ್ಛೇದನಕ್ಕೆ ಸಾಕಾಗಿತ್ತು

ಬೇರೆ ಯಾವುದೇ ಸಂದರ್ಭದಲ್ಲಿ ಪತಿ ಪತ್ನಿಗೆ ಬೈದಾಗ ಸುಮ್ಮನೇ ಒಪ್ಪಿಕೊಳ್ಳಬಹುದಾಗಿದ್ದರೂ ಈ ದಿಟ್ಟ ಹೆಣ್ಣು ತನ್ನ ತಪ್ಪಿಲ್ಲದೇ ಆದ ಪ್ರಮಾದಕ್ಕೆ ಪತಿಯಿಂದ ದೊರೆತ ಈ ಬಗೆಯ ಪ್ರತಿಕ್ರಿಯೆಯನ್ನು ಸಹಿಸಳಾದಳು. ಈ ಕ್ಷಣದಲ್ಲಿ ಜರೆದ ಆತ ಜೀವಮಾನವಿಡೀ ತನಗೆ ಆತ್ಮಸನ್ಮಾನ ನೀಡುವ ಬಗ್ಗೆ ಆಕೆಯಲ್ಲಿ ಅನುಮಾನ ಉಂಟಾಗಿತ್ತು. ಈ ಭಾವನೆ ಮನದಲ್ಲಿ ಮೂಡಿದ್ದೇ ತಡ, ಮುಂದಿನ ಹೆಜ್ಜೆ ಆಕೆ ಹಿಂದಿನ ದಿಕ್ಕಿನತ್ತ ಇಟ್ಟಿದ್ದಳು, ಮುಂದಿನ ಮೂರೇ ನಿಮಿಷದಲ್ಲಿ ಆಕೆ ಕೆಲವೇ ನಿಮಿಷಗಳ ಹಿಂದೆ ನ್ಯಾಯಾಧೀಶರ ಮುಂದೆ ಸಹಿ ಮಾಡಿದ್ದ ಸ್ಥಳಕ್ಕೆ ತಲುಪಿದ್ದಳು. ಮರುಕ್ಷಣವೇ ಆಕೆ ಈ ಕರಾರು ಪತ್ರವನ್ನು ಹರಿದು ತನ್ನ ವಿಚ್ಚೇದನವನ್ನು ಪ್ರಕಟಿಸಿದಳು.

ಈಕೆಯ ಈ ಪ್ರತಿಕ್ರಿಯೆ ಎಲ್ಲರನ್ನು ದಂಗುಬಡಿಸಿತು

ಈಕೆಯ ಈ ದಿಟ್ಟತನದ ಕ್ರಮವನ್ನು ಅಲ್ಲಿದ್ದ ಹಲವರು ಪ್ರಶಂಸಿಸಿ ಈಕೆಯ ಕ್ರಮವನ್ನು ಸರಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಉಳಿದವರು ಮಾತ್ರ ಈಕೆಗೆ ಈತನನ್ನು ವರಿಸಲು ಮೊದಲೇ ಇಷ್ಟವಿರಲಿಲ್ಲವೇನೋ, ಯಾವುದೋ ಬಲವಂತಕ್ಕೆ ಬಿದ್ದು ವಿವಾಹವಾಗಲು ಒಪ್ಪಿ ಬಳಿಕ ಕ್ಷುಲ್ಲುಕ ಕಾರಣವನ್ನೇ ನೆಪವಾಗಿಸಿ ಈ ವಿಚ್ಚೇದನ ಪಡೆದಿದ್ದಾಳೆ ಎಂದು ತಮ್ಮ ಪಾಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನೀವೇನಂತೀರಿ?

English summary

Woman Divorces Man Just 3 Minutes After Marrying Him!

A woman divorced her man after she tripped. The groom instead of helping the poor bride decided to call her stupid and did not let out his hand to help her. She divorced the man in a span of just 3 minutes! Well, this case is the fastest divorce in the history of Kuwait, and probably of the whole world.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more