For Quick Alerts
ALLOW NOTIFICATIONS  
For Daily Alerts

ರಾಶಿ ಚಕ್ರದ ಪ್ರಕಾರ ನಿಮ್ಮಲ್ಲಿ ನಿಮಗೆ ಅರಿವಿಲ್ಲದೆ ತೋರುವ ವರ್ತನೆಗಳು ಯಾವುದು ನೋಡಿ

|

ವ್ಯಕ್ತಿತ್ವ ಎನ್ನುವುದು ವ್ಯಕ್ತಿಯ ಸಂಪೂರ್ಣ ವಿಚಾರಗಳಿಗೆ ಕನ್ನಡಿ ಹಿಡಿಯುತ್ತದೆ. ವ್ಯಕ್ತಿತ್ವದಲ್ಲಿ ತೋರುವ ವಿಷಯಗಳು ವ್ಯಕ್ತಿ ಹೇಗೆ ಅಥವಾ ಏನು ಎನ್ನುವುದನ್ನು ಅರಿಯಲು ಸಹಾಯ ಮಾಡುವುದು. ಹಾಗಾಗಿ ಕುಟುಂಬ ಅಥವಾ ಸಮಾಜದಲ್ಲಿ ವ್ಯಕ್ತಿ ಇರುವಾಗ ಅವನಿಗೆ ಅರಿವೇ ಇಲ್ಲದಂತೆ ಸಾಮಾನ್ಯವಾಗಿ ತೋರ್ಪಡಿಸುವ ವರ್ತನೆಯೇ ಅವನ ನಿಜವಾದ ವ್ಯಕ್ತಿತ್ವ ಆಗಿರುತ್ತದೆ. ಅಂತಹ ವ್ಯಕ್ತಿತ್ವದಿಂದಲೇ ಜನರ ಮನಸ್ಸನ್ನು ಗೆಲ್ಲುವರು ಅಥವಾ ಜನರಿಂದ ದೂರವಾಗಬಹುದು. ಅದಕ್ಕಾಗಿ ವ್ಯಕ್ತಿ ತಾನು ಯಾವ ವರ್ತನೆಯನ್ನು ತೋರ ಬೇಕು? ಯಾವ ವರ್ತನೆಯನ್ನು ವ್ಯಕ್ತಪಡಿಸಬಾರದು ಎನ್ನುವುದರ ಬಗ್ಗೆ ಸಾಕಷ್ಟು ಕಾಳಜಿ ಅಥವಾ ತಿಳಿವಳಿಕೆಯನ್ನು ಹೊಂದಿರಬೇಕಾಗುವುದು.

ವ್ಯಕ್ತಿ ಚಿಕ್ಕವನಿರುವಾಗ ಅಮ್ಮ-ಅಪ್ಪನ ಮಾರ್ಗದರ್ಶನದಲ್ಲಿ ಒಳ್ಳೆಯದ್ದು ಮತ್ತು ಕೆಟ್ಟದ್ದು ಎನ್ನುವುದನ್ನು ತಿಳಿದುಕೊಳ್ಳುತ್ತಾನೆ. ತನ್ನ ವಿಕಾಸ ಅಥವಾ ಬೆಳವಣಿಗೆ ಕಾಣುತ್ತಿದ್ದಂತೆ ಸುತ್ತಲಿನ ಪರಿಸರ ಹಾಗೂ ತಾನು ಬೆರೆಯುವ ವ್ಯಕ್ತಿಗಳ ಸ್ವಭಾವದಿಂದ ಸಾಕಷ್ಟು ಪ್ರಭಾವಿತನಾಗುತ್ತಾನೆ. ಅದು ಅವನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಹಾಗೂ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ಅವುಗಳನ್ನು ಹೇಗೆ ಸ್ವೀಕರಿಸುತ್ತಾನೆ ಎನ್ನುವುದರ ಮೇಲೆ ವ್ಯಕ್ತಿತ್ವ ನಿರ್ಧಾರವಾಗುವುದು.

ಜ್ಯೋತಿಷ್ಯ ಶಾಸ್ತ್ರದ ಅನುಸಾರ

ಜ್ಯೋತಿಷ್ಯ ಶಾಸ್ತ್ರದ ಅನುಸಾರ

ಜ್ಯೋತಿಷ್ಯ ಶಾಸ್ತ್ರದ ಅನುಸಾರ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭಾವನಾತ್ಮಕ ವಿಷಯಗಳೆಲ್ಲವೂ ಅವರ ರಾಶಿಚಕ್ರ, ನಕ್ಷತ್ರ ಹಾಗೂ ಗ್ರಹಗತಿಗಳ ಪ್ರಭಾವದಿಂದ ಉಂಟಾಗುವುದು. ಅವುಗಳ ಅನ್ವಯದಂತೆಯೇ ಜೀವನದಲ್ಲಿ ಫಲಾ-ಫಲಗಳನ್ನು ಪಡೆದುಕೊಳ್ಳುವನು ಎಂದು ಹೇಳಲಾಗುವುದು. ರಾಶಿಚಕ್ರದ ಅನುಸಾರ ವ್ಯಕ್ತಿಯ ವರ್ತನೆಯಲ್ಲಿ ಒಂದು ಬಗೆಯ ಸಂಯೋಜಿತ ವಿಚಾರಗಳು ಅಡಕವಾಗಿರುತ್ತವೆ. ಅವು ಒಂದು ರಾಶಿಯ ವ್ಯಕ್ತಿಗಳಿಂದ ಇನ್ನೊಂದು ರಾಶಿಯ ವ್ಯಕ್ತಿಗಳಿಗೆ ಭಿನ್ನವಾಗಿರುತ್ತವೆ ಎಂದು ಹೇಳಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಅನುಸಾರ

ಜ್ಯೋತಿಷ್ಯ ಶಾಸ್ತ್ರದ ಅನುಸಾರ

ಸಂಯೋಜಿತ ಗುಣಗಳು ಸಾಮಾನ್ಯವಾಗಿ ವ್ಯಕ್ತಿಯ ಬೆಳವಣಿಗೆಯ ಸಮಯದಲ್ಲಿ ತಾನು ಅನುಭವಿಸಿದ ಸನ್ನಿವೇಶ, ಎದುರಿಸಿದ ಪರಿಸ್ಥಿತಿಗಳು ಹಾಗೂ ತನ್ನ ಸುತ್ತಲಲ್ಲಿ ಇರುವ ವ್ಯಕ್ತಿಗಳ ಪ್ರಭಾವಗಳಿಂದ ಪ್ರೇರೇಪಿತನಾಗಿರುತ್ತಾನೆ. ಅದು ಅವನ ಗಮನಕ್ಕೆ ಮರದೆ ಹೋದರೂ ಇತರರು ಅವನನ್ನು ವೀಕ್ಷಿಸಿದಾಗ ತಿಳಿಯುವುದು. ಅಂತಹ ಒಂದು ಅಪರೂಪದ ಸಂಯೋಜಿತ ಗುಣಗಳು ಪ್ರತಿಯೊಂದು ರಾಶಿಚಕ್ರದವರಲ್ಲೂ ಇರುತ್ತದೆ. ಅದು ಒಬ್ಬರಿಗಿಂತ ಒಬ್ಬರಲ್ಲಿ ವಿಭಿನ್ನತೆಯನ್ನು ಹೊಂದಿರುತ್ತದೆ ಎನ್ನುವುದನ್ನು ತಿಳಿಯಬಹುದು.

ನಿಮಗೂ ನಿಮ್ಮ ರಾಶಿಚಕ್ರಗಳ ಅನುಸಾರ ನಿಮ್ಮ ವರ್ತನೆ, ಸಂಯೋಜಿತ ಗುಣಗಳು ಯಾವವು? ನಿಮ್ಮವರಲ್ಲಿ ಇರುವ ಆ ಗುಣಗಳನ್ನು ನೀವು ಪರಿಗಣಿಸಿದ್ದೀರಾ ಎನ್ನುವುದನ್ನು ತಿಳಿಯುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ಹನ್ನೆರಡು ರಾಶಿಚಕ್ರಗಳ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮೇಷ ರಾಶಿಯವರು ಸಾಮಾನ್ಯವಾಗಿ ಬಹುಬೇಗ ಅಸಮಧಾನಕ್ಕೆ ಒಳಗಾಗುವ ಪ್ರವೃತ್ತಿಯನ್ನು ತೋರುತ್ತಾರೆ. ಉದಾಹರಣೆಗೆ ಶಾಲೆಯಲ್ಲಿ ಅವರ ಅಂಕಗಳು ಅಥವಾ ಶ್ರೇಯಾಂಕವು ನಿರೀಕ್ಷೆಗಿಂತ ಎರಡು ಅಂಕ ಕಡಿಮೆ ಇದ್ದರೂ ಬಹು ಚಿಂತಿತರಾಗಿರುತ್ತಾರೆ. ಮಕ್ಕಳಾಗಿರುವುದರಿಂದ ಅವರಿಗೆ ಅದೇ ಬಹಳ ದೊಡ್ಡ ಸಂಗತಿಯಾಗಿರುತ್ತದೆ ಅದರ ಬಗ್ಗೆಯೇ ಹೆಚ್ಚು ಚಿಂತನೆಗೆ ಒಳಗಾಗುತ್ತಾರೆ. ಅದೇ ದೊಡ್ಡವರಾಗಿದ್ದರೆ ಅವರು ಸಹ ತಮ್ಮ ಕಾರ್ಯ ಕ್ಷೇತ್ರದಲ್ಲಿ ಕೊಂಚ ಅನಿರೀಕ್ಷಿತ ಘಟನೆ ಅಥವಾ ಅಸಮಧಾನ ಉಂಟಾದರೂ ತೀವ್ರವಾದ ಬೇಸರ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಒಳಗಾಗುವರು. ಹಾಗಾಗಿ ಇವರು ಸದಾ ಗುರಿಯ ಸಾಧನೆಯ ಕಡೆಗೆ ಹೆಚ್ಚಿನ ಗಮನ ನೀಡುವುದು ಒಳಿತು ಎಂದು ಸಲಹೆ ನೀಡಲಾಗುವುದು.

ವೃಷಭ

ವೃಷಭ

ಇವರು ಎಲ್ಲೆಡೆಯೂ ತಮ್ಮ ಆದೇಶ ವ್ಯಕ್ತಪಡಿಸಲು ಬಯಸುವರು. ಅದು ಅಸಾಧ್ಯವಾದ ಸಂಗತಿ ಎನ್ನುವುದು ಅವರ ಅರಿವಿಗೆ ಬರುವುದಿಲ್ಲ. ಕಾನೂನು ರೀತಿಯಲ್ಲಿ ಅಥವಾ ಕ್ರಮದಲ್ಲಿ ಯಾವ ರೀತಿಯಲ್ಲಿ ತೀರ್ಮಾನ ನೀಡಬೇಖು ಎನ್ನುವುದು ನಿಖರವಾಗಿ ಹೀಗೆ ಇರಬೇಕು ಎಂದು ಬಯಸುವ ವ್ಯಕ್ತಿಗಳು ನೀವು. ಕೆಲವು ಸಂಗತಿಗಳು ನಮ್ಮ ಅನಿಸಿಕೆಯಂತೆ ಇರುವುದಿಲ್ಲ ಎನ್ನುವುದು ತಿಳಿಯಬೇಕು. ಅದನ್ನು ತಿಳಿಯದ ಇವರು ಸಾಕಷ್ಟು ತರ್ಕ ಮಾಡಬಹುದು. ಇಲ್ಲವೇ ಮಾನಸಿಕವಾಗಿ ಅಸಮಧಾನವನ್ನು ಪಡೆದುಕೊಳ್ಳುವರು.

ಮಿಥುನ

ಮಿಥುನ

ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಮಾತು ಕಡಿಮೆ ಹಾಗೂ ಕೆಲವು ಸ್ಥಿರವಾದ ವರ್ತನೆ ಹಾಗೂ ಗುಣವನ್ನು ಹೊಂದಿರುತ್ತಾರೆ. ಇದರ ಅರ್ಥ ಅವರು ಒಂಟಿಯಾಗಿರಲು ಬಯಸುತ್ತಾರೆ ಎಂದಲ್ಲ. ಅದು ಅವರ ವರ್ತನೆಯಲ್ಲಿ ಸಂಯೋಜಿತವಾದ ಒಂದು ಸಂಗತಿ ಎನ್ನಬಹುದು. ಇವರು ಸಾಮಾನ್ಯವಾಗಿ ಸ್ನೇಹಿತರು ಹಾಗೂ ಅವರೊಂದಿಗೆ ಮಾತನಾಡುವುದು, ಕೆಲವು ಸಂಗತಿಗಳನ್ನು ಕೇಳುವುದರಲ್ಲಿ ಹೆಚ್ಚಿನ ಸಂತೋಷವನ್ನು ಅನುಭವಿಸುವರು. ಯಾರು ಇವರಿಗೆ ವಿಷಯಗಳಿಗೆ ಅನುಗುಣವಾಗಿ ಅತಿಯಾಗಿ ಮಾತನಾಡುವರು ಹಾಗೂ ಆಲೋಚನೆಗೆ ಒಳಪಡಿಸುವಂತೆ ಮಾಡುವರು. ಆಗ ಅವರು ಹೆಚ್ಚಿನ ಒತ್ತಡಕ್ಕೆ ಒಳಗಾಗುವರು. ಜೊತೆಗೆ ಅವರ ಆ ಸ್ವಭಾವವು ಇವರಲ್ಲಿ ಒಂದು ಬಗೆಯ ಚಿಂತನೆಗೆ ಒಳಗಾಗುವರು.

ಕರ್ಕ

ಕರ್ಕ

ನಿಮ್ಮ ಎರಡು ಸ್ನೇಹಿತರು ಯಾವುದೋ ವಿಚಾರದ ಕುರಿತು ಸಾಕಷ್ಟು ಭಿನ್ನಾಭಿಪ್ರಾಯಕ್ಕೆ ಒಳಗಾಗಿದ್ದಾರೆ ಅಥವಾ ಜಗಳವನ್ನು ಮಾಡುತ್ತಿದ್ದಾರೆ ಎಂದಾಗ ನಿಮಗೆ ಒಂದು ಬಗೆಯ ಸಂಕಟ ಹಾಗೂ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕಷ್ಟವಾಗುವುದು. ಅದು ಕೆಲವೊಮ್ಮೆ ಗಾಸಿಪ್ ರೂಪದಲ್ಲಿ ಎಲ್ಲೆಡೆ ಹಬ್ಬಬಹುದು. ಅಂತಹ ಸ್ಥಿತಿಯಿಂದ ಕಳೆದುಕೊಂಡ ಮನಃಶಾಂತಿಯನ್ನು ಪುನಃ ಪಡೆದುಕೊಳ್ಳಲು ನಿಮಗೆ ಬಹಳ ಕಷ್ಟವಾಗುವುದು. ಚಿಂತೆಯು ಅಥವಾ ಅಶಾಂತವಾದ ನಿಮ್ಮ ಸ್ಥಿತಿಯು ನಿಮಗೆ ಸಾಕಷ್ಟು ಒತ್ತಡವನ್ನು ಸೃಷ್ಟಿಸುವುದು.

Most Read: ದೇಹದ ಈ ಭಾಗದಲ್ಲಿ ಮಚ್ಚೆ ಇರುವವರು ತುಂಬಾನೇ ಅದೃಷ್ಟವಂತರಂತೆ!

ಸಿಂಹ

ಸಿಂಹ

ಸಿಂಹ ರಾಶಿಯವರಿಗೂ ಕೆಲವೊಮ್ಮೆ ಕೆಲಸದ ಸಂಗತಿಗಳು ಹೆಚ್ಚಿನ ಒತ್ತಡವನ್ನು ನೀಡುವುದು. ಇವರ ನಿರೀಕ್ಷೆಯಂತೆ ಕೆಲಸಗಳು ನೆರವೇರದೆ ಇದ್ದಾಗೆ ಅಥವಾ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳುವಲ್ಲಿ ವಿಫಲರಾದಾಗ ಸಾಮಾನ್ಯವಾಗಿ ಬಹುಬೇಗ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗಾಗಿಇವರು ಹೆಚ್ಚಿನ ಸಮಯದಲ್ಲಿ ಮೋಜಿನಿಂದ ಕೂಡಿರುವ ಕೆಲಸವನ್ನು ಮಾಡಲು ಇಷ್ಟಪಡುವರು. ಕೆಲಸದಲ್ಲಿ ವಿನೋದ ಅಥವಾ ಮೋಜು ಇಲ್ಲದೆ ಹೋದರೆ ಕೆಲಸವು ನಿಮಗೆ ಒತ್ತಡವನ್ನುಂಟುಮಾಡುವುದು.

ಕನ್ಯಾ

ಕನ್ಯಾ

ಇವರು ಸಾಮಾನ್ಯವಾಗಿ ಒತ್ತಡವನ್ನು ಸಹಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲದೆ ಯಾವಾಗಲೂ ಕೇಂದ್ರ ಬಿಂದುವಿನಂತಹ ಆಕರ್ಷಣೆ ಪಡೆಯಲು ಸಹ ಬಯಸುವುದಿಲ್ಲ. ಹಾಗೊಮ್ಮೆ ಸಭೆ ಅಥವಾ ಸಮಾರಂಭದಲ್ಲಿ ಇವರನ್ನು ನಿರ್ಲಿಕ್ಷಿಸಿದ್ದರೂ ಇವರು ಯಾವುದೇ ರೀತಿಯ ಬೇಸರ ಅಥವಾ ಒತ್ತಡಕ್ಕೆ ಒಳಗಾಗುವುದಿಲ್ಲ. ಇವರು ತೆರೆ ಮರೆಯ ರೀತಿಯಲ್ಲಿ ಕೆಲಸಮಾಡಲು ಬಯಸುತ್ತಾರೆ. ಇವರು ಕೆಲಸವನ್ನು ನಿರ್ವಹಿಸುವಾಗ ಅತಿ ಕಡಿಮೆ ಸಮಯದ ಮಿತಿ ಕೊಟ್ಟಾಗ ಹಾಗೂ ಜನರು ಇವರನ್ನೇ ಹೆಚ್ಚು ವೀಕ್ಷಿಸುತ್ತಿದ್ದಾರೆ ಎಂದಾಗ ಸಾಮಾನ್ಯವಾಗಿಯೇ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ.

ತುಲಾ

ತುಲಾ

ಸಮಾನತೆ ಹಾಗೂ ನ್ಯಾಯ ಪರವಾದ ವ್ಯಕ್ತಿಗಳು ಇವರಾಗಿರುತ್ತಾರೆ. ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ರೀತಿಯ ತೀರ್ಮಾನ ಅಥವಾ ತೀರ್ಪುನೀಡಲು ಬಯಸುವರು. ಕೆಲವೊಮ್ಮೆ ನಿರಾತಂಕವಾಗಿ ತಮ್ಮ ಅಭಿಪ್ರಾಯವನ್ನು ಹೇಳುವರು. ಇವರು ಎಲ್ಲಾ ಸಂಗತಿಯಲ್ಲೂ ಯಾವುದೇ ಸಮಸ್ಯೆ ಇಲ್ಲದೆ ಅಥವಾ ಅಡೆತಡೆ ಇಲ್ಲದೆ, ಸೂಕ್ತ ಸಮಯದ ಒಳಗೆ ಮುಕ್ತಾಯವಾಯಿತು, ಇಲ್ಲವೇ ಅವರ ನಿರೀಕ್ಷೆಯಂತೆ ಎಲ್ಲವೂ ನೆರವೇರಿತು ಎಂದರೆ ಸಮಾಧಾನವಾಗಿ ಇರುತ್ತಾರೆ. ಅದೇ ಎಲ್ಲಾ ಕೆಲಸವು ಸಾಕಷ್ಟು ಅಡೆತಡೆ ಹಾಗೂ ಸಮಯಲ್ಲೆ ಸರಿಯಾಗಿ ಪೂರ್ಣಗೊಳ್ಳದೆ ಹೋದರೆ ಒತ್ತಡ ಎನ್ನುವುದು ಆವರಿಸುತ್ತದೆ. ಜೊತೆಗೆ ಭಾವನಾತ್ಮಕವಾಗಿ ಸಾಕಷ್ಟು ಕಿರಿಕಿರಿಗೆ ಒಳಗಾಗುವರು.

 ವೃಶ್ಚಿಕ

ವೃಶ್ಚಿಕ

ಕೆಲವು ಸಿದ್ಧಾಂತಗಳು ಅಥವಾ ಸಂಗತಿಗಳು ಅವಮಾನವನ್ನು ಉಂಟುಮಾಡುವಂತಿದ್ದರೆ ಅದು ನಿಮೆ ಸಾಕಷ್ಟು ವಿಚಿತ್ರ ಅಥವಾ ಬೇಸರದ ಸಂಗತಿ ಎನಿಸಿಕೊಳ್ಳುವುದು. ನೀವು ಯಾವ ವ್ಯಕ್ತಿಯ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದೀರಿ, ಅವರು ಕೆಲವು ಸಿದ್ಧಾಂತಗಳ ಅಡಿಯಲ್ಲಿ ಸಾಗುತ್ತಿದ್ದಾರೆ ಅಥವಾ ಅದು ಅವರಿಗೆ ಗೊಂದಲವನ್ನುಂಟುಮಾಡುತ್ತಿದೆ ಎಂದಾಗ ನೀವು ಹೆಚ್ಚಿನ ಒತ್ತಡಕ್ಕೆ ಒಳಗಾಗುವಿರಿ. ನಕಾರಾತ್ಮಕತೆಯನ್ನು ಇವರು ದ್ವೇಷಿಸುವರು. ಅಂತಹ ನಕಾರಾತ್ಮಕ ಸಂಗತಿಗಳಿಗೆ ಒಳಗಾದರೆ ಅಥವಾ ಅದನ್ನು ಎದುರಿಸುವ ಪರಿಸ್ಥಿತಿ ಒದಗಿ ಬಂದರೆ ಇವರ ಒತ್ತಡದ ಮಟ್ಟವು ದ್ವಿಗುಣವಾಗುವುದು.

ಧನು

ಧನು

ಈ ರಾಶಿಯ ವ್ಯಕ್ತಿಗಳು ಸದ್ಗುಣಗಳನ್ನು ಹಾಗೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಇವರು ಬಯಸದ ಜವಾಬ್ದಾರಿಗಳನ್ನು ಎದುರಿಸಬೇಕು ಅಥವಾ ನಿರ್ವಹಿಸಬೇಕು ಎಂದಾದರೆ ಬಹುಬೇಗ ಒತ್ತಡಕ್ಕೆ ಒಳಗಾಗುವರು. ತಳ್ಮೆಯನ್ನು ಹೊಂದಿರದ ಇವರು ಎಲ್ಲಾ ಸಂಗತಿಗಳಲ್ಲೂ ಒತ್ತಡ ಹಾಗೂ ಚಿಂತಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಮಕರ

ಮಕರ

ಮಕರ ರಾಶಿಯವರು ಸಾಮಾನ್ಯವಾಗಿ ಗಂಭೀರ ಚಿತ್ತರಾಗಿರುತ್ತಾರೆ. ಅಲ್ಲದೆ ಅವರನ್ನು ಅವರೇ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ ಸಹ. ಇವರ ಕೆಲವು ಕಾರಣಗಳಿಂದಲೇ ಒತ್ತಡಕ್ಕೆ ಒಳಗಾಗುವರು. ಅದು ಅವರು ಮಾಡುವ ಅಡುಗೆಯ ವಿಚಾಋದಲ್ಲಿ, ತೊಡುವ ಬಟ್ಟೆಯ ಬಗ್ಗೆ, ಇಟ್ಟ ವಸ್ತು ಕಣ್ಮರೆಯಾದರೆ ಹೀಗೆ ಸಣ್ಣ ಪುಟ್ಟ ಸಂಗತಿಗಳಿಗೂ ಬಹುಬೇಗ ಒತ್ತಡ ಹಾಗೂ ಚಿಂತೆಗೆ ಒಳಗಾಗುವರು. ಹಾಗಾಗಿ ಇವರು ಎಲ್ಲಾ ವಿಷಯದಲ್ಲಿ ಅಚ್ಚುಕಟ್ಟನ್ನು ಬಯಸುವುದು ನಿಲ್ಲಿಸಬೇಕು ಎಂದು ಸಲಹೆ ನೀಡಲಾಗುವುದು.

Most Read: ಶನಿ ದೇವರಿಗೆ ತನ್ನ ಪತ್ನಿಯೇ ಶಾಪ ನೀಡಿದಳು! ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ

ಕುಂಭ

ಕುಂಭ

ಇವರು ಮಕರ ರಾಶಿಯವರಂತೆ ಒತ್ತಡವನ್ನು ಹೊಂದಿದ್ದರೂ ಸಹ ಕೆಲವೊಂದು ವ್ಯತ್ಯಾಸಗಳಿವೆ. ವ್ಯತ್ಯಾಸ ಎಂದರೆ ನಿಮ್ಮ ವಿಷಯದ ಬಗ್ಗೆ ಅಥವಾ ನೀವು ಮಾಡಿರುವ ಕೆಲಸದ ಬಗ್ಗೆ ಮೂರನೇ ವ್ಯಕ್ತಿಗಳಿಂದ ಅಥವಾ ಹೊರಗಿನ ವ್ಯಕ್ತಿಗಳಿಂದ ನಕಾರಾತ್ಮಕ ಅಭಿಪ್ರಾಯಗಳು ಬಂದರೆ ಬೇಸರಕ್ಕೆ ಒಳಗಾಗುತ್ತಾರೆ. ಎಲ್ಲಾ ಸಂಗತಿಯಲ್ಲೂ ಅಚ್ಚುಕಟ್ಟನ್ನು ಅನುಸರಿಸುವ ಇವರು ಇತರರ ಅನುಚಿತ ಉಪದೇಶ ಹಾಗೂ ಅಭಿಪ್ರಾಯಗಳನ್ನು ಬಯಸುವುದಿಲ್ಲ. ಹಾಗೊಮ್ಮೆ ಅದು ನಕಾರಾತ್ಮಕ ರೀತಿಯಲ್ಲಿದ್ದರೆ ಸಾಕಷ್ಟು ಬೇಸರಕ್ಕೆ ಒಳಗಾಗುವರು.

ಮೀನ

ಮೀನ

ನಿಮ್ಮ ಜೀವನದ ಹಿಂದಿನ ಕಥೆಗಳು ಅಥವಾ ವಿಷಾದಕರವಾದ ವಿಷಯಗಳು ವಿಶೇಷವಾಗಿ ನಿಮಗೆ ಹೆಚ್ಚಿನ ಒತ್ತಡವನ್ನುಂಟು ಮಾಡುವುದು. ಅಲ್ಲದೆ ಆ ಸಂಗತಿಗಳು ಪದೇ ಪದೇ ಮನಸ್ಸಿಗೆ ಬಂದು ಮಾನಸಿಕ ಒತ್ತಡವನ್ನುಂಟುಮಾಡುವುದು. ಇವರು ಕಳೆದು ಹೋಗಿರುವುದರ ಬಗ್ಗೆ ಹೆಚ್ಚು ಚಿಂತಿಸುತ್ತೀರಿ. ಹಾಗಾಗಿ ಇವರು ಭವಿಷ್ಯದಲ್ಲಿ ಅಥವಾ ಮುಂದಿನ ದಿನದಲ್ಲಿ ನಡೆಯುವ ಮತ್ತು ನಡೆಯ ಬೇಕಿದ್ದ ಸಂಗತಿಗಳ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

English summary

What Frazzles You The Most Based On Your Zodiac Sign

The moment we realise how correct and deep astrology is, it surprises us with another revelation of our personality through our zodiac sign, and thus, leaves us wondering how far astrology can actually go uncovering the layers of a person's personality. One of the astrological predictions can even tell what stresses you out the most based on your zodiac sign.
X
Desktop Bottom Promotion