For Quick Alerts
ALLOW NOTIFICATIONS  
For Daily Alerts

ಜಪಾನ್‌ನಲ್ಲಿ ಈ ಮೀನುಗಳು ಕಂಡುಬಂದರೆ ಭೂಕಂಪ ಖಚಿತ!

|

ಆಳ ಸಮುದ್ರದಲ್ಲಿ ಜೀವಿಸುವಂತಹ ದೊಡ್ಡ ಗಾತ್ರದ ಮೀನೊಂದು ದಡಕ್ಕೆ ಬಂದು ಸತ್ತು ಬಿದ್ದಿದ್ದು, ಜಪಾನ್ ನ ಜನರು ಇದನ್ನು ಕಂಡು ತುಂಬಾ ಭಯಭೀತರಾಗಿದ್ದಾರೆ. ಯಾಕೆಂದರೆ ಇಂತಹ ಮೀನುಗಳು ಹಾಗೆ ದಡಕ್ಕೆ ಬಂದು ಸಾಯುವುದಿಲ್ಲ. ಬಂದರೆ ಅದು ಭೂಕಂಪ ಅಥವಾ ಸುನಾಮಿಯ ಬರುವ ಮುನ್ಸೂಚನೆಯಾಗಿರುವುದು ಎಂದು ಹೇಳಲಾಗುತ್ತದೆ.

Tsunami

ಜಪಾನ್ ನ ಕಡಲಕಿನಾರೆಯಲ್ಲಿ ಕಂಡುಬಂದಿರುವಂತಹ ಒರಾ ಮೀನುಗಳು ಭೂಕಂಪ ಮತ್ತು ಸುನಾಮಿಯ ಮುನ್ಸೂಚನೆಯೇ ಎಂದು ನಾವು ಈ ಲೇಖನದಲ್ಲಿ ತುಂಬಾ ವಿವರವಾಗಿ ತಿಳಿದುಕೊಳ್ಳುವ... ಜಪಾನ್ ನ ಜನರಲ್ಲಿ ಭೀತಿಯು ಹೆಚ್ಚಾಗಲು ಕಾರಣವೇನೆಂದರೆ ಕಳೆದ ಸಲ ಸುನಾಮಿ ಬರುವ ಮೊದಲು ಕೂಡ ಒರಾ ಮೀನು ಕಾಣಿಸಿಕೊಂಡಿತ್ತು. ಈ ಬಗ್ಗೆ ತಿಳಿಯಲು ತಯಾರಾಗಿ...

ಒರಾ ಮೀನಿನ ಬಗ್ಗೆ

ಒರಾ ಮೀನಿನ ಬಗ್ಗೆ

ನಾಲ್ಕು ಮೀಟರ್ ಉದ್ದ ಒರಾ ಮೀನು ಇಮಿಜು ಬಂದರಿನಲ್ಲಿ ಮೀನಿನ ಬಲೆಗೆ ಸಿಲುಕಿಕೊಂಡಿದೆ. ಆದರೆ ಇದರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ. ಆಳ ಸಮುದ್ರದ ಮೀನಾಗಿರುವ ಒರಾ ಮೀನುಗಳು ಸುಮಾರು 11 ಮೀಟರ್ ತನಕ ಬೆಳೆಯಬಲ್ಲದು. ಜಪಾನ್ ನ ಪುರಾಣದ ಪ್ರಕಾರ ಒರಾ ಮೀನುಗಳು ಸಮುದ್ರ ತೀರದಲ್ಲಿ ಕಂಡುಬಂದರೆ ಅದು ಭೂಕಂಪ ಅಥವಾ ಸುನಾಮಿಯ ಸೂಚನೆಯಾಗಿರುವುದು ಎಂದು ಸ್ಥಳೀಯರು ಹೇಳುತ್ತಾರೆ.

ಮೀನುಗಳು ಸಮುದ್ರ ತೀರಕ್ಕೆ ಬಂದಿದ್ದವು ಎಂದು ನಂಬಲಾಗಿದೆ

ಮೀನುಗಳು ಸಮುದ್ರ ತೀರಕ್ಕೆ ಬಂದಿದ್ದವು ಎಂದು ನಂಬಲಾಗಿದೆ

ಭೂಕಂಪ ಅಥವಾ ಸುನಾಮಿ ಬರುವ ಸೂಚನೆಯಿದ್ದರೆ ಆಗ ಒರಾ ಮೀನುಗಳು ಕಡಲಕಿನಾರೆಗೆ ಬರುತ್ತವೆ ಎಂದು ಹೇಳಲಾಗುತ್ತದೆ. ಈ ಪುರಾಣವನ್ನು ವೈಜ್ಞಾನಿಕವಾಗಿ ಬೆಂಬಲಿಸಿರುವ ಕಾರಣದಿಂದಾಗಿ ಸಮುದ್ರದ ತಳಭಾಗದಲ್ಲಿ ವಾಸಿಸುವಂತಹ ಈ ಮೀನುಗಳು ಭೂಕಂಪದ ಗಡಿರೇಖೆಯಲ್ಲಿ ಚಲನೆಗಳಿಗೆ ಒಳಗಾಗಿರಬಹುದು ಎಂದು ನಂಬಲಾಗಿದೆ. ಈ ಬದಲಾವಣೆಗಳಿಂದಾಗಿ ಅವುಗಳು ಭೂಕಂಪದ ಮೊದಲು ಅಸಾಮಾನ್ಯವಾಗಿ ವರ್ತಿಸಲು ಆರಂಭಿಸುವುದು.

Most Read: ಈ ಮಹಿಳೆ ಏನು ಮಾಡಿದಳು ಗೊತ್ತೇ? ನಿದ್ರೆಯಲ್ಲಿ ಮಾತ್ರೆಗಳ ಪ್ಯಾಕೆಟ್‌ನ್ನೇ ನುಂಗಿದಳು!!

ಜಪಾನ್ ನ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ

ಜಪಾನ್ ನ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ

ಕಡಲತೀರದಲ್ಲಿ ಒರಾ ಮೀನು ಪತ್ತೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ. ಇಲ್ಲಿನ ಸ್ಥಳೀಯರು ಏನೋ ಒಂದು ಅವಘಡ ಎದುರಾಗಲಿದೆ ಎಂದು ನಂಬಿದ್ದಾರೆ.

ಟ್ವಿಟರ್ ನಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ: ``ಇದು ಭೂಕಂಪದ ಮುನ್ಸೂಚನೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಇದು ನಾಂಕೈ ತೊಟ್ಟಿ ಆಗಿದ್ದರೆ, ಅದು ಭೂಮಿಯ ಪದರಗಳನ್ನು ಬದಲಾಗುವ ಜಾಗ. ಇದರಿಂದ ದೊಡ್ಡ ಮಟ್ಟದ ಭೂಕಂಪವೇ ಆಗುವ ಸಂಭವವು ಇದೆ.''

Most Read: ದೇವರು ಕನಸಿನಲ್ಲಿ ಬಂದರೆ, ಇದರ ಅರ್ಥ ಏನು ಗೊತ್ತೇ?

ಒರಾ ಮೀನುಗಳು ಪತ್ತೆಯಾಗಿರುವ ಬಗ್ಗೆ ಒಂದು ಸಾಧ್ಯತೆಯ ವಿವರಣೆ

ಒರಾ ಮೀನುಗಳು ಪತ್ತೆಯಾಗಿರುವ ಬಗ್ಗೆ ಒಂದು ಸಾಧ್ಯತೆಯ ವಿವರಣೆ

ವಿಜ್ಞಾನಿಗಳ ಪ್ರಕಾರ ಒರಾ ಮೀನುಗಳು ಸಮುದ್ರ ತೀರದಲ್ಲಿ ಕಂಡುಬರಲು ಭೂಮಿಯ ಪದರಲ್ಲಿ ಭೂಕಂಪಕ್ಕೆ ಮೊದಲು ಆಗುವಂತಹ ಬದಲಾವಣೆಯು ಕಾರಣವಾಗಿರಬಹುದು. ಈ ಚಲನೆಯಿಂದಾಗಿ ನೀರಿನ ಗತಿಯು ಬದಲಾಗಿ ಅದರ ಪರಿಣಾಮ ತಳಭಾಗದ ಮೀನುಗಳು ಮೇಲ್ಭಾಗಕ್ಕೆ ಬಂದಿರಬಹುದು. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

English summary

Tsunami Warning After Oar Fish Appeared

The appearance of oarfishes on the beaches of Japan is being considered to be a major concern as people believe that the fishes being washed ashore are a Tsunami warning. The authorities are alert and have already started mock drills for the citizens in case of emergency.Tsunami Warning After Oar Fish Appeared
X
Desktop Bottom Promotion