For Quick Alerts
ALLOW NOTIFICATIONS  
For Daily Alerts

2019ರ ಸೂರ್ಯ ಗ್ರಹಣವು ಈ 3 ರಾಶಿಯವರಿಗೆ ಬಹಳಷ್ಟು ಕೆಟ್ಟ ಪರಿಣಾಮ ಬೀರಲಿದೆಯಂತೆ- ಆದರೆ ಭಯ ಪಡಬೇಕಾಗಿಲ್ಲ

|

ಗ್ರಹಣ ಎಂದರೆ ಭಯ, ದುಃಖ, ಸೂತಕ, ಕೆಟ್ಟದ್ದು, ಕಷ್ಟ ಎನ್ನುವಂತಹ ಅರ್ಥವನ್ನು ನೀಡುತ್ತದೆ. ಪ್ರಪಂಚಕ್ಕೆ ಬೆಳಕು ಅಥವಾ ಒಳಿತನ್ನು ಮಾಡುವವನು ಸೂರ್ಯ. ನಮ್ಮನ್ನು ಕಾಪಾಡುವವನಿಗೆ ಅಹಿತಕರವಾದ ಸ್ಥಿತಿ ಎದುರಾಗಿದೆ ಅಥವಾ ಎದುರಾಗುವುದು ಎಂದಾಗ ನಮ್ಮ ಸ್ಥಿತಿಯು ಸಾಕಷ್ಟು ಚಿಂತನೀಯ ವಾಗಿರುತ್ತದೆ ಎಂದು ಹೇಳಬಹುದು. ಗ್ರಹಣ ಎನ್ನುವುದು ಸೂರ್ಯನಿಗೆ ಎದುರಾದರೆ ಅಥವಾ ಬಂದರೆ ಅದರಿಂದ ಪರಿಸರದಲ್ಲಿ ಇರುವ ಜೀವ ಸಂಕುಲಕ್ಕೆ ಸಾಕಷ್ಟು ಅಹಿತಕರವಾದ ಸ್ಥಿತಿಯು ಎದುರಾಗುವುದು. ಅದರಿಂದ ನಿಧಾನವಾಗಿ ಚೇತರಿಕೆಯನ್ನು ಕಂಡುಕೊಳ್ಳಬೇಕಾಗುವುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

2019ರ ವರ್ಷದಲ್ಲಿ ಸಾಕಷ್ಟು ಗ್ರಹಣದ ಸ್ಥಿತಿ ಎದುರಾಗುವುದು. ಅದರಲ್ಲಿ ಸೂರ್ಯನ ಭಾಗಶಃ ಗ್ರಹಣದ ಸಮಯವು ಭಾರತದಲ್ಲಿ ಅಷ್ಟಾಗಿ ಗೋಚರವಾಗದೆ ಇರಬಹುದು. ಆದರೆ ಭೌಗೋಳಿಕವಾಗಿ ಹಾಗೂ ರಾಶಿಚಕ್ರಗಳ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಲಿದೆ. ನಿರೀಕ್ಷಿತ ಹಾಗೂ ಅನಿರೀಕ್ಷತ ಸಮಸ್ಯೆಗಳು ಎದುರಾಗಬಹುದು. ಜನರ ವಾಸ್ತವಿಕ ನೆಲೆಯ ಮೇಲೆ ಗಂಭೀರವಾದ ಬದಲಾವಣೆ ಉಂಟಾಗುವುದು. ಅದನ್ನು ನಿಭಾಯಿಸಿಕೊಂಡು ನಿಧಾನವಾಗಿ ಸಾಗಬೇಕಾಗುವುದು ಒಂದು ಸವಾಲಿನ ಕೆಲಸ ಎನಿಸಿಕೊಳ್ಳುತ್ತದೆ. ಪ್ರತಿಯೊಂದು ರಾಶಿ ಚಕ್ರಗಳ ಮೇಲೆ ನೇರವಾದ ಪ್ರಭಾವ ಬೀಳುತ್ತದೆ. ಆದರೆ ಆಯಾ ರಾಶಿಚಕ್ರದವರ ಪ್ರಮುಖ ಮನೆಗಳ ಆಧಾರದ ಮೇಲೆ ಪ್ರಭಾವ ತೀವ್ರ ಹಾಗೂ ಅಲ್ಪ ಪ್ರಮಾಣದಿಂದ ಕೂಡಿರುತ್ತದೆ ಎಂದು ಹೇಳಲಾಗುವುದು....ಮುಂದೆ ಓದಿ

ಮಿಥುನ, ಕರ್ಕ ಮತ್ತು ಕುಂಭ ರಾಶಿ

ಮಿಥುನ, ಕರ್ಕ ಮತ್ತು ಕುಂಭ ರಾಶಿ

ಹನ್ನೆರಡು ರಾಶಿ ಚಕ್ರಗಳಲ್ಲಿ ಮಿಥುನ, ಕರ್ಕ ಮತ್ತು ಕುಂಭ ರಾಶಿಯವರು ಹೆಚ್ಚಿನ ಕೆಟ್ಟ ಸ್ಥಿತಿ ಅಥವಾ ಪ್ರಭಾವವನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು. ಅವರಿಗೆ ಇದೊಂದು ವಿಚಿತ್ರ ಸಮಯವಾಗಿ ಪರಿಣಮಿಸುತ್ತದೆಯಾದರೂ ಅದರ ಕುರಿತು ಗಂಭೀರವಾದ ಚಿಂತೆ ಅಥವಾ ದುಃಖಕ್ಕೆ ಒಳಗಾಗಬೇಕೆಂದೇನು ಇಲ್ಲ. ಸಮಸ್ಯೆಗಳು ವಿವಿಧ ಬಗೆಯಲ್ಲಿ ಎದುರಾಗಬಹುದು. ಆದರೆ ಅದನ್ನು ನಿಯಂತ್ರಿಸುವ ಅಥವಾ ಎದುರಿಸುವಂತಹ ಸಾಮಥ್ರ್ಯ ನಿಮ್ಮಲ್ಲಿ ಇರುತ್ತದೆ. ಅದಕ್ಕೆ ಅನುಗುಣವಾಗಿ ಸಮಸ್ಯೆಗಳು ನಿಧಾನವಾಗಿ ತಿಳಿಯಾಗುತ್ತಾ ಹೋಗುವುದು ಎಂದು ಹೇಳಲಾಗುವುದು.

Most Read: ಈ ತಿಂಗಳ ಸೂರ್ಯ ಗ್ರಹಣದ ಪ್ರಭಾವದಿಂದ ಕೆಲವು ರಾಶಿಯವರು ಅದ್ಭುತ ಬದಲಾವಣೆ ಕಾಣುವರು

ಗ್ರಹಣದಿಂದ ಸಮಸ್ಯೆಗಳು ಎದುರಾದರೆ ಭಯಪಡಬೇಕಾಗಿಲ್ಲ

ಗ್ರಹಣದಿಂದ ಸಮಸ್ಯೆಗಳು ಎದುರಾದರೆ ಭಯಪಡಬೇಕಾಗಿಲ್ಲ

ಒಮ್ಮೆ ಕತ್ತಲು ಆವರಿಸಿದರೆ ಬೆಳಕು ಎನ್ನುವುದನ್ನು ನಿಧಾನವಾಗಿಯಾದರೂ ಬರಲೇ ಬೇಕು ಎನ್ನುವುದು ಪ್ರಕೃತಿ ಸಹಜವಾದ ಸತ್ಯ. ಅಂತೆಯೇ ಯಾವುದೇ ಕಷ್ಟ ಎದುರಾದರೂ ಅಂತ್ಯ ಎನ್ನುವುದು ಇರಲೇ ಬೇಕು. ಕಷ್ಟಗಳು ಕಳೆದು ಸುಖದ ಸಮಯ ಬರಲೇ ಬೇಕು. ಎಲ್ಲದಕ್ಕೂ ನಮ್ಮಲ್ಲಿ ಸಹನೆ ಎನ್ನುವ ಅಸ್ತ್ರ ಇರಬೇಕು. ನಮ್ಮಲ್ಲಿ ಸಹನೆ ಇರುವ ವರೆಗೆ ಎಂತಹ ಪರಿಸ್ಥಿತಿಯನ್ನಾದರೂ ಎದುರಿಸುವ ಸಾಮಥ್ರ್ಯ ಇರುತ್ತದೆ. ಈ ರಾಶಿಚಕ್ರದವರಿಗೂ ಸಹ ಗ್ರಹಣದಿಂದ ಸಮಸ್ಯೆಗಳು ಅಥವಾ ಅನಿರೀಕ್ಷಿತ ಪರಿಸ್ಥಿತಿಗಳು ಎದುರಾಗಬಹುದು. ಅದನ್ನು ಹೇಗೆ ನಿಭಾಯಿಸಬೇಕು? ಎನ್ನುವಂತಹ ಧೈರ್ಯ ಹಾಗೂ ಸಹನೆಯನ್ನು ಹೊಂದಿದ್ದರೆ ಎಲ್ಲವೂ ಸುಲಭವಾಗಿ ಹೋಗುವುದು. ಆ ಕುರಿತು ಅತಿಯಾದ ಭಯ ಅಥವಾ ಚಿಂತೆಗೆ ಒಳಗಾಗುವ ಅಗತ್ಯವಿರುವುದಿಲ್ಲ.

ಈ ಮೂರು ರಾಶಿಚಕ್ರದವರಿಗೆ ಪರಿಸ್ಥಿತಿಗಳು ಹೇಗಿರುತ್ತವೆ?

ಈ ಮೂರು ರಾಶಿಚಕ್ರದವರಿಗೆ ಪರಿಸ್ಥಿತಿಗಳು ಹೇಗಿರುತ್ತವೆ?

ಈ ಮೂರು ರಾಶಿಚಕ್ರದವರಿಗೆ ಪರಿಸ್ಥಿತಿಗಳು ಹೇಗಿರುತ್ತವೆ? ಅದನ್ನು ಎದುರಿಸಲು ಎಂತಹ ಸಂಕಲ್ಪ ಅವರಲ್ಲಿ ಇರಬೇಕು? ಕಷ್ಟದ ನಂತರ ಸುಖ ಹೇಗಿದೆ? ಎನ್ನುವಂತಹ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಬೇಕು ಎನ್ನುವ ಹಂಬಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ. ಈ ಮೂರು ರಾಶಿಚಕ್ರಗಳಲ್ಲಿ ನಿಮ್ಮ ರಾಶಿಚಕ್ರವೂ ಒಂದು ಎಂದಾದರೆ ನೀವು ಮಾನಸಿಕವಾಗಿ ಎಂತಹ ಸಿದ್ಧತೆಯನ್ನು ಪಡೆದುಕೊಳ್ಳಬೇಕು ಎನ್ನುವುದನ್ನು ಅರಿಯಿರಿ.

ಮಿಥುನ: ಗ್ರಹಣವು ಇವರಿಗೆ ಭಾವನಾತ್ಮಕವಾಗಿ ಕಷ್ಟಕರವಾದ ಸಮಯವಾಗಿರುತ್ತದೆ

ಮಿಥುನ: ಗ್ರಹಣವು ಇವರಿಗೆ ಭಾವನಾತ್ಮಕವಾಗಿ ಕಷ್ಟಕರವಾದ ಸಮಯವಾಗಿರುತ್ತದೆ

ನಾವು ಎದುರಿಸುವ ಎಲ್ಲಾ ಸಂಗತಿಗಳು ಕಷ್ಟಕರವಾಗಿದೆ ಅಥವಾ ಮಾನಸಿಕವಾಗಿ ನೋವನ್ನುಂಟುಮಾಡುತ್ತಿದೆ ಎಂದಾದರೆ ಮನಸ್ಸು ಸಾಕಷ್ಟು ದಣಿಯುತ್ತದೆ. ಅಂತಹ ಸ್ಥಿತಿಯು ಮಿಥುನ ರಾಶಿಯವರಿಗೆ ಎದುರಾಗುವುದು ಎಂದು ಹೇಳಬಹುದು. ಗ್ರಹಣದ ಪ್ರಭಾವ ಸಾಕಷ್ಟು ಕಷ್ಟಕರವಾದ ಸ್ಥಿತಿಯನ್ನು ತಂದೊಡ್ಡುವುದು. ಕರಾಳವಾದ ನೆರಳು ನಿಮ್ಮಲ್ಲಿ ಮಂಕಾದ ಭಾವನೆಯನ್ನು ಮೂಡಿಸುವುದು. ಎಂತಹದ್ದೇ ಗೊಂದಲದ ಪರಿಸ್ಥಿತಿ ಅಥವಾ ಕಷ್ಟದ ಸಂಗತಿಗಳು ಎದುರಾದರೂ ನೀವು ನಿಮ್ಮದೇ ರೀತಿಯಲ್ಲಿ ಅದನ್ನು ಸುಧಾರಿಸಿಕೊಳ್ಳಬೇಕು ಅಥವಾ ಎದುರಿಸಬೇಕು. ಆಗ ನೀವು ಅಗಾಧವಾದ ವ್ಯತ್ಯಾಸವನ್ನು ಅನುಭವಿಸುವಿರಿ.

Most Read: 2019ರ ಸೂರ್ಯ ಗ್ರಹಣ ಈ ನಾಲ್ಕು ರಾಶಿಚಕ್ರದವರ ಮೇಲೆ ಗಂಭೀರ ಪ್ರಭಾವ ಬೀರುವುದು!

ಮಿಥುನ

ಮಿಥುನ

ಸೂರ್ಯಗ್ರಹಣದ ಪ್ರಭಾವವು ನಿಮ್ಮ ಎಂಟನೇ ಮನೆಯನ್ನು ಬಾಧಿಸುವುದು. ಇದು ಸೋಲು ಗೆಲುವನ್ನು ನಿರ್ಧರಿಸುತ್ತದೆ. ಸಮಸ್ಯೆಗಳನ್ನು ಎದುರಿಸಲು ನೀವು ಮಾನಸಿಕವಾಗಿ ಸಿದ್ಧತೆಯನ್ನು ಪಡೆದಂತೆ ನಿಮ್ಮಲ್ಲಿ ಶಕ್ತಿಯು ಪ್ರಬಲತೆಯನ್ನು ಪಡೆಯುತ್ತಾ ಸಾಗುವುದು. ಕಷ್ಟಗಳನ್ನು ಎದುರಿಸಿದಂತೆ ನಿಮ್ಮಲ್ಲಿ ಆತ್ಮವಿಶ್ವಾಸದ ದೃಢತೆ ಹೆಚ್ಚುವುದು. ಇದು ನಿಮಗೆ ಬೆಳಕಿನ ಹಾದಿಯನ್ನು ತೋರಿಸುವುದರ ಜೊತೆಗೆ ಕಷ್ಟಗಳು ಕರಗುವಂತೆ ಮಾಡುವುದು. ಹಾಗಾಗಿ ನೀವು ಎಂತಹ ಸಮರ್ಥನೆಯನ್ನು ಹೊಂದಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಕರ್ಕ: ಸೂರ್ಯ ಗ್ರಹಣದ ಪ್ರಭಾವದಿಂದ ಇವರು ಸಂಬಂಧಗಳಲ್ಲಿ ನೈಜತೆಯನ್ನು ಎದುರಿಸಬೇಕಾಗುವುದು

ಕರ್ಕ: ಸೂರ್ಯ ಗ್ರಹಣದ ಪ್ರಭಾವದಿಂದ ಇವರು ಸಂಬಂಧಗಳಲ್ಲಿ ನೈಜತೆಯನ್ನು ಎದುರಿಸಬೇಕಾಗುವುದು

ಭಾವನೆಗಳಿಗೆ ಹಾಗೂ ಕುಟುಂಬಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವವರು ಇವರು. ಗ್ರಹಣದ ಪ್ರಭಾವವು ಇವರ ವೈಯಕ್ತಿಕ ವಿಚಾರ ಹಾಗೂ ಭಾವನೆಗಳಿಗೆ ನೋವುಂಟು ಮಾಡುವಂತೆ ಮಾಡುವುದು. ಇವರು ತಮ್ಮ ವಿರೋಧಿಗಳನ್ನು ಮತ್ತು ವಂಶಸ್ಥರನ್ನು ಸಕ್ರಿಯ ಗೊಳಿಸುವಂತೆ ಮಾಡುವುದು. ನಿಮ್ಮ ಕೊರತೆಯನ್ನು ನೀವೇ ಎತ್ತಿ ತೋರಿಸಿಕೊಳ್ಳುವಂತಹ ಸ್ಥಿತಿ ಎದುರಾಗುವುದು. ಅಗತ್ಯತೆಗಳನ್ನು ಗುರುತಿಸಿಕೊಳ್ಳಲು ಒತ್ತಾಯಿಸುವಂತಹ ಪ್ರಭಾವವನ್ನು ಎದುರಿಸಬೇಕಾಗುವುದು. ಮಾನಸಿಕ ಸ್ಥಿತಿಯನ್ನು ಅಲ್ಲಾಡಿಸುವಂತಹ ಸವಾಲುಗಳು ಎದುರಾಗುವವು. ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಸೂಕ್ತ ರೀತಿಯಲ್ಲಿ ಎದುರಿಸಬೇಕು ಎಂದು ಹೇಳಲಾಗುವುದು.

ಕರ್ಕ

ಕರ್ಕ

ಭಾಗಶಃ ಗೋಚರಿಸುವ ಗ್ರಹಣವು ನಿಮ್ಮ ಏಳನೇ ಮನೆಯನ್ನು ಬಾಧಿಸುವುದು. ಇದು ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಕೆಲವರು ತಮ್ಮ ಸಂಬಂಧಗಳಲ್ಲಿ ಗಂಭೀರವಾದ ಬದಲಾವಣೆಯನ್ನು ಅನಿವಾರ್ಯವಾಗಿ ಕಂಡುಕೊಳ್ಳಬೇಕಾಗುವುದು. ಇಲ್ಲವೇ ನೀವು ಇಷ್ಟ ಪಡುವ ಅಥವಾ ನಿಮ್ಮ ಆತ್ಮೀಯರು ಎನಿಸಿಕೊಂಡವರ ನಡುವೆ ಅಹಿತಕರವಾದ ಸ್ಥಿತಿ ಉದ್ಭವಿಸಬಹುದು. ವೈಫಲ್ಯಗಳು ಉಂಟಾಗುವುದರಿಂದ ಹೊಸ ಸಂಬಂಧ ಹುಟ್ಟಿಕೊಳ್ಳಬಹುದು. ಭಾವನೆ ಹಾಗೂ ಕುಟುಂಬಗಳಿಗೆ ಮಹತ್ವ ನೀಡುವ ನಿಮಗೆ ನಿಮ್ಮ ಆಧ್ಯತೆಯ ವಿಷಯದಿಂದಲೇ ನೋವಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಂಗತಿಗಳನ್ನು ಸೂಕ್ಷ್ಮ ರೀತಿಯಲ್ಲಿ ಅರಿತುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುತ್ತದೆ.

ಕುಂಭ: ಗ್ರಹಣದ ಪ್ರಭಾವದಿಂದ ನೀವು ದೀರ್ಘ ಸಮಯಗಳ ಕಾಲ ಯಾವ ಸಂಗತಿಗಳಿಂದಲೂ ದೂರ ಸರಿಯಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳುವಿರಿ

ಕುಂಭ: ಗ್ರಹಣದ ಪ್ರಭಾವದಿಂದ ನೀವು ದೀರ್ಘ ಸಮಯಗಳ ಕಾಲ ಯಾವ ಸಂಗತಿಗಳಿಂದಲೂ ದೂರ ಸರಿಯಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳುವಿರಿ

ನೀವು ಸಾಮಾನ್ಯವಾಗಿ ಸ್ವಾತಂತ್ರ್ಯ ಹಾಗೂ ಏಕಾಂತವನ್ನು ಬಯಸುವ ವ್ಯಕ್ತಿಗಳಾಗಿರುತ್ತೀರಿ. ನಿಮ್ಮಲ್ಲಿ ಇರುವ ಅಂತದೃಷ್ಟಿಯು ನಿಮ್ಮ ಸಾಮಥ್ರ್ಯವನ್ನು ಹೆಚ್ಚಿಸುವುದು. ಅದು ನಿಮಗೆ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಲು ಸಹಾಯಮಾಡುವುದು ಎನ್ನಲಾಗುವುದು. ಸೂರ್ಯ ಗ್ರಹಣವು ಭಾಗಶಃವಾಗಿದ್ದರೂ ಅದರ ಪ್ರಭಾವ ನಿಮ್ಮ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ನೀವು ಮರೆಯುವಂತಿಲ್ಲ. ಸಮಸ್ಯೆಗಳನ್ನು ಎದುರಿಸುವಾಗ ನಿಮ್ಮಲ್ಲಿರುವ ಅಂತದೃಷ್ಟಿಯನ್ನು ಬಳಸಿಕೊಂಡು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ನೀವು ಸಾಮಾನ್ಯವಾಗಿರುವುದಕ್ಕಿಂತ ಹೆಚ್ಚಿನ ಸಾಮಥ್ರ್ಯವನ್ನು ಹೊಂದಿದ್ದೀರಿ. ಮೌನ ಮತ್ತು ಏಕಾಂತದಿಂದಲೂ ಕೆಲವು ಸಮಸ್ಯೆಗಳನ್ನು ಬಹುಬೇಗ ನಿವಾರಿಸಬಹುದು ಎನ್ನುವುದನ್ನು ನೀವು ಅರಿಯಬೇಕಿದೆ. ನಿಮ್ಮಲ್ಲಿರುವ ಮೌನ ಸಂದೇಶವೇ ಕೆಲವೊಂದಕ್ಕೆ ಸೂಕ್ತ ಉತ್ತರವನ್ನು ನೀಡುವುದು.

Most Read:ಈ ಮೂರು ರಾಶಿಚಕ್ರದವರಿಗೆ ಹೊಸ ವರ್ಷವು ಊಹೆಗೂ ಮಿಗಿಲಾದ ಹೊಸ ಬದಲಾವಣೆಯನ್ನು ತಂದುಕೊಡುವುದು

ಕುಂಭ

ಕುಂಭ

ಈ ಗ್ರಹಣವು ನಿಮ್ಮ ಹನ್ನೆರಡನೇ ಮನೆಯನ್ನು ಬಾಧಿಸುವುದು. ಹನ್ನೆರಡನೇ ಮನೆಯು ಆಧ್ಯಾತ್ಮಿಕತೆ ಹಾಗೂ ಭಾವನೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸನ್ನಿವೇಶಗಳನ್ನು ಎದುರಿಸಬೇಕಾಗುವುದು. ಇದರ ಪರಿಣಾಮಗಳಿಂದಾಗಿ ಮಾನಸಿಕ ಗೊಂದಲ ಅಥವಾ ಒತ್ತಡವು ನಿಮ್ಮನ್ನು ಕಾಡಬಹುದು. ಕೆಲವೊಮ್ಮೆ ನಮ್ಮ ಅಂತರಾಳದಲ್ಲಿ ಅಡಗಿರುವ ಸುಳ್ಳು ಮಾಹಿತಿಗಳು ಮೇಲುಗೈ ಪಡೆಯಬಹುದು. ಕಷ್ಟದ ಸಮಯದಲ್ಲಿ ನೀವು ನಿಮ್ಮ ಅಂತಃಪ್ರಜ್ಞೆಯನ್ನು ನಂಬಬೇಕು. ನಿಮಗಿಂತ ಉತ್ತಮವಾಗಿರುವುದು ಯಾವುದು ಇಲ್ಲ ಎನ್ನುವ ರೀತಿಯಲ್ಲಿ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ ಆಗ ಮಾನಸಿಕವಾಗಿ ಧೈರ್ಯವನ್ನು ಪಡೆದುಕೊಳ್ಳುವಿರಿ. ಜೊತೆಗೆ ಸಾಕಷ್ಟು ಉತ್ತಮ ಫಲಿತಾಶಂವನ್ನು ಪಡೆಯುವಿರಿ. ಯಾವುದೇ ಸಂಗತಿಯ ಕುರಿತಾಗಿ ಅತಿರೇಕದ ಚಿಂತನೆಗೆ ಒಳಗಾಗುವ ಅಗತ್ಯವಿಲ್ಲ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

English summary

These Zodiac Signs Will Have The Worst Solar Eclipse in 2019

As per the astrology these Zodiac Signs Will Have The Worst Solar Eclipse.
X
Desktop Bottom Promotion