2019ರ ಸೂರ್ಯ ಗ್ರಹಣ ಈ ನಾಲ್ಕು ರಾಶಿಚಕ್ರದವರ ಮೇಲೆ ಗಂಭೀರ ಪ್ರಭಾವ ಬೀರುವುದು!

ಜನವರಿ 5, 2019 ಭಾಗಶಃ ಸೂರ್ಯ ಗ್ರಹಣ | ಯಾವ ರಾಶಿಗಳ ಮೇಲೆ ಪ್ರಭಾವ? | Oneindia Kannada

ಹೊಸ ವರ್ಷ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಹೊಸ ಬದಲಾವಣೆಯ ಕಾತುರ ಹಾಗೂ ಉತ್ಸಾಹವಿರುತ್ತದೆ. ಅದಕ್ಕಾಗಿಯೇ ಹೊಸ ವರ್ಷದ ಆಗಮನಕ್ಕಾಗಿ ಸಾಕಷ್ಟು ಸಿದ್ಧತೆಗಳು ಹಾಗೂ ಸಂಭ್ರಮ ಪಡುವುದನ್ನು ನಾವು ಕಾಣಬಹುದು. ಬದಲಾವಣೆಯು ಧನಾತ್ಮಕವಾಗಿಯೇ ಇರಬಹುದು ಅಥವಾ ಋಣಾತ್ಮಕವಾಗಿಯೇ ಇರಬಹುದು. ಅದ್ಯಾವುದಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಹೊಸ ವರ್ಷದ ಸ್ವಾಗತ ಮಾತ್ರವೇ ಪ್ರಮುಖ ಉದ್ದೇಶವಾಗಿರುತ್ತದೆ. ಹೊಸ ವರ್ಷದ ಆಗಮನವೊಂದೇ ಹೆಚ್ಚಿನ ಸಂತಸ ನೀಡುವುದು.

ನಂತರದ ದಿನಗಳಲ್ಲಿ ನಮ್ಮ ಭವಿಷ್ಯದ ಬಗ್ಗೆ ಹಾಗೂ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ಚಿಂತನೆಯನ್ನು ನಡೆಸುತ್ತೇವೆ. ಹೌದು, ಇದೀಗ ಹೊಸ ವರ್ಷವನ್ನು ಸ್ವಾಗತಿಸಿ ಆಗಿದೆ. ಇನ್ನೇನಿದ್ದರೂ ಬದಲಾವಣೆಯ ಕುರಿತು ಚಿಂತಿಸಬೇಕು. ಅಂತಹ ಒಂದು ಚಿಂತನೆ ಎಂದರೆ ಇದೀಗ ಮುಂದೆ ನಿಂತಿರುವ ಸೂರ್ಯ ಗ್ರಹಣ. ಖಗೋಳದಲ್ಲಿ ಕಾಣಿಸಿಕೊಳ್ಳುವ ಈ ಗ್ರಹಣವನ್ನು ಸೂತಕ ಅಥವಾ ದುಃಖದ ಸಂಗತಿ ಎಂದು ಪರಿಗಣಿಸಲಾಗುವುದು. ಇದೀಗ ಜನವರಿ 5 ರಂದು ಕಾಣಿಸಿಕೊಳ್ಳಲಿರುವ ಭಾಗಶಃ ಸೂರ್ಯ ಗ್ರಹಣವು ಎಲ್ಲಾ ರಾಶಿಚಕ್ರಗಳ ಮೇಲೂ ಪ್ರಭಾವ ಬೀರಲಿದೆ....

ಗ್ರಹಣ

ಗ್ರಹಣ

ಗ್ರಹಣ ಎನ್ನುವುದು ಸೂತಕ ಅಥವಾ ಚಿಂತನೆಗೆ ಸಂಬಂಧಿಸಿದ ವಿಚಾರವಾದರೂ ಅದು ಕೆಲವರಿಗೆ ಒಳ್ಳೆಯ ಹಾಗೂ ಇನ್ನೂ ಕೆಲವರಿಗೆ ಕೆಟ್ಟ ಪರಿಣಾಮವನ್ನು ಬೀರುವುದು. ಗ್ರಹಣದ ಸಂದರ್ಭದಲ್ಲಿ ಗ್ರಹಗತಿಗಳ ಪ್ರಭಾವ ಹಾಗೂ ಬದಲಾವಣೆ, ಚಲನೆಗಳು ಹೇಗೆ ಇರುತ್ತವೆ ಎನ್ನುವುದರ ಆಧಾರದ ಮೇಲೆ ರಾಶಿಚಕ್ರಗಳಲ್ಲಿ ಉಂಟಾಗುವ ಬದಲಾವಣೆಯನ್ನು ಪರಿಗಣಿಸಲಾಗುವುದು. ಯಾವ ರಾಶಿ ಮೇಲೆ ಗ್ರಹಣ ಹಿಡಿದಿದೆ? ಅದು ಇತರ ರಾಶಿಗಳಲ್ಲಿ ಯಾವ ಮನೆಯನ್ನು ಹೆಚ್ಚು ಬಾಧಿಸುವುದು ಎನ್ನುವುದನ್ನು ಗುರುತಿಸಬೇಕು. ಅವುಗಳ ನಿಯಮದಂತೆ ಸಮಸ್ಯೆಗಳು ಅಥವಾ ಬದಲಾವಣೆಗಳು ಪ್ರಭಾವ ಬೀರುತ್ತವೆ ಎಂದು ಹೇಳಲಾಗುವುದು.

ಮೇಷ, ಕರ್ಕ, ತುಲಾ ಮತ್ತು ಮಕರ ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ

ಮೇಷ, ಕರ್ಕ, ತುಲಾ ಮತ್ತು ಮಕರ ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ

2019ರ ಜನವರಿ 5 ರಂದು ನಡೆಯಲಿರುವ ಭಾಗಶಃ ಸೂರ್ಯ ಗ್ರಹಣವು ಮೇಷ, ಕರ್ಕ, ತುಲಾ ಮತ್ತು ಮಕರ ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಇದು ಭಾಗಶಃ ಇರುವುದರಿಂದ ಸಮಸ್ಯೆಗಳು ಉಂಟಾಗುವುದು ಸಹಜ. ಆದರೆ ಅವುಗಳ ಸುಧಾರಣೆ ಹಾಗೂ ನಿರ್ವಹಣೆಯಲ್ಲಿ ನಾವು ನಮ್ಮ ಬುದ್ಧಿಯನ್ನು ಬಳಸದಿ ನಡೆದರೆ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮ ರಾಶಿಯೂ ಈ ರಾಶಿಚಕ್ರಗಳ ಪಟ್ಟಿಯಲ್ಲಿದ್ದರೆ, ನೀವು ಯಾವ ಬಗೆಯ ಬದಲಾವಣೆಯನ್ನು ಎದುರಿಸಬೇಕಾಗುವುದು? ಎನ್ನುವುದನ್ನು ಲೇಖನದ ಮುಂದಿನ ಭಾಗದ ವಿವರಣೆಯಿಂದ ತಿಳಿದುಕೊಳ್ಳಬಹುದು.

ಮೇಷ

ಮೇಷ

ಮೇಷ ರಾಶಿಯವರು ಸಾಮಾನ್ಯವಾಗಿ ಉತ್ಸಾಹಿಗಳು ಹಾಗೂ ಚಟುವಟಿಕಾ ಶೀಲರು ಎನ್ನಬಹುದು. ಆದರೆ ಈ ಬಾರಿಯ ಸೂರ್ಯ ಗ್ರಹಣದ ಪ್ರಭಾವ ಮೇಷ ರಾಶಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರುವುದರಿಂದ ಕೆಲವು ಸಂಗತಿಗಳಲ್ಲಿ ಹಿನ್ನಡೆ ಹಾಗೂ ಸಂಕಷ್ಟವನ್ನು ಅನುಭವಿಸಬೇಕಾಗುವುದು. ನಾಯಕತ್ವ ವ್ಯಕ್ತಿತ್ವದವರಾದ ಇವರು ಎಲ್ಲಾ ಕೆಲಸ ಕಾರ್ಯಗಳಲ್ಲೂ ನಿರಂತರವಾದ ಉತ್ಸಾಹ ಹಾಗೂ ಶ್ರಮವನ್ನು ವಹಿಸ ಬೇಕಾಗುವುದು. ಕೆಲಸದಲ್ಲಿ ನೀವು ನಿರೀಕ್ಷಿಸಿದ ಮಟ್ಟಕ್ಕಿಂತ ಬದಲಾದ ಅಥವಾ ಹೊಸ ಆಶ್ಚರ್ಯಗಳು ಎದುರಾಗಬಹುದು. ಅದು ನಿಮಗೆ ಹೊಸ ಅವಕಾಶಗಳಾಗಿರುತ್ತವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಹೇಗೆ ಬಳಸಿಕೊಳ್ಲುವುದು ಎನ್ನುವುದರ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಬುದ್ಧಿಯನ್ನು ಉಪಯೋಗಿಸಬೇಕು.

ಮೇಷ

ಮೇಷ

ಯಾವುದೇ ಕೆಲಸ ಅಥವಾ ಹೊಸ ಯೋಜನೆಯನ್ನು ಕೈಗೊಳ್ಳುವಾಗ ಎರಡು ಬಾರಿ ಯೋಚಿಸಿ. ಕೆಲಸ ನಿಧಾನವಾಗಬಹುದು ಆದರೆ ಅದರ ಬಗ್ಗೆ ಸೂಕ್ತ ಚಿಂತನೆ ಮತ್ತು ಶ್ರಮವನ್ನು ವಹಿಸಿದಾಗ ಪ್ರತಿಫಲ ದೊರೆಯುವುದು. ಗ್ರಹಗತಿಗಳ ಅನುಗ್ರಹ ಅನುಕೂಲಕರವಾಗಿರದೆ ಇರುವುದರಿಂದ ಸಾಕಷ್ಟು ಶ್ರಮ ಹಾಗೂ ಚಿಂತನೆಯಿಂದಲೇ ಮೇಲೇಳಬೇಕಾಗುವುದು. ಅಗತ್ಯವಿರುವ ಕೆಲಸ ಹಾಗೂ ಮಹತ್ವಕಾಂಕ್ಷೆಯುಳ್ಳ ಕೆಲಸಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸೂಕ್ತ.

ಕರ್ಕ

ಕರ್ಕ

ಕುಟುಂಬ ಹಾಗೂ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡುವವರು ಕರ್ಕ ರಾಶಿಯ ವ್ಯಕ್ತಿಗಳು. ಇವರು ತಾವು ಮಾಡುವ ಕೆಲಸ ಹಾಗೂ ಭಾವನೆಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಇವರಿಗೆ ಹೊಸ ವರ್ಷದ ಆರಂಭದಲ್ಲಿ ಕಾಣಿಸಿಕೊಳ್ಳುವ ಸೂರ್ಯ ಗ್ರಹಣವು ಸಾಕಷ್ಟು ಪ್ರಭಾವ ಬೀರುವುದು. ಇದರಿಂದ ಕುಟುಂಬದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗ ಬಹುದು. ನೀವು ಅಂದುಕೊಂಡ ಕೆಲಸ ಅಥವಾ ಗುರಿಯು ಸುಗಮವಾಗಿ ಸಾಗದೆ ಇರಬಹುದು. ಸಾಕಷ್ಟು ಕೆಲಸದಲ್ಲಿ ಅಥವಾ ವಿಷಯದ ಕುರಿತು ನೀವು ಸ್ಪಷ್ಟತೆಯನ್ನು ಕಂಡುಕೊಳ್ಳಲು ಕಷ್ಟವಾಗುವುದು.

ಕರ್ಕ

ಕರ್ಕ

ಪಾಲುದಾರಿಕೆಯಲ್ಲಿ ಕೈಗೊಂಡ ವ್ಯವಹಾರ ಅಥವಾ ಕೆಲಸಗಳಲ್ಲಿ ಸಮಸ್ಯೆಗಳು ತಲೆದೂರುವುದು. ಏಕೆಂದರೆ ನೀವು ಇನ್ನೊಬ್ಬರ ಮೇಲೆ ಶಕ್ತಿ ಹಾಗೂ ನಿಯಂತ್ರಣವನ್ನು ಹೇರಲು ಬಯಸುವಿರಿ. ಅದು ನಿಮಗೆ ಅನಾನುಕೂಲತೆ ಹಾಗೂ ಸಮಸ್ಯೆಗಳನ್ನು ತಂದೊಡ್ಡುವುದು. ಸಮಸ್ಯೆಯನ್ನು ಗುರುತಿಸುವುದು ಹಾಗೂ ಅದಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳುವುದು ನಿಮ್ಮ ಕೆಲಸ ಅಥವಾ ಉದ್ದೇಶವಾಗಿದ್ದರೆ ಸಮಸ್ಯೆ ದೂರ ಸರಿಯುವುದು. ಸ್ವಾಭಾವಿಕವಾಗಿ ಬದಲಾಗುವ ಸನ್ನಿವೇಶಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಿ ಮುಂದೆ ನಡೆಯುವುದು ಜಾಣ್ಮೆ ಹಾಗೂ ನಿಮಗೆ ಅನುಕೂಲತೆಯನ್ನು ಕಲ್ಪಿಸಿಕೊಡುವುದು.

ತುಲಾ

ತುಲಾ

ಸೂರ್ಯ ಗ್ರಹಣದ ಪ್ರಭಾವ ಹಾಗೂ ಗ್ರಹಗತಿಗಳ ಪ್ರಭಾವಕ್ಕೆ ಒಳಗಾಗುವ ನೀವು ನಿಮ್ಮ ಸಾರ್ವಜನಿಕ ಜೀವನ ಹಾಗೂ ವೃತ್ತಿಯ ಬಗ್ಗೆ ಸಾಕಷ್ಟು ಗಮನವನ್ನು ಕೇಂದ್ರೀಕರಿಸಲು ಸೂಕ್ತವಾದ ಸಮಯವಾಗಿರುತ್ತದೆ. ಇತರರ ಅಭಿಪ್ರಾಯ ಅಥವಾ ಯೋಜನೆಯಂತೆ ಕೆಲಸವನ್ನು ಕೈಗೊಂಡರೆ ಸಮಸ್ಯೆಗಳು ಅಥವಾ ಅಡೆತಡೆಗಳನ್ನು ನೀವು ಎದುರಿಸಬೇಕಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಹಾಗೂ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಮಾತುಗಳು ಅಥವಾ ಅಭಿಪ್ರಾಯಗಳನ್ನು ನೀವು ಪಡೆದುಕೊಳ್ಳುವಿರಿ. ಅದರ ಕುರಿತು ಹೆಚ್ಚಿನ ಚಿಂತನೆ ನಡೆಸದೆ ಅಂತಃಪ್ರಜ್ಞೆಯನ್ನು ಉಪಯೋಗಿಸಿ ಸಮಸ್ಯೆಯನ್ನು ಬಗೆಹರಿಸಬೇಕು.

ತುಲಾ

ತುಲಾ

ನಿಮ್ಮ ಮೌಲ್ಯಗಳು ಬದಲಾಗಬಹುದು. ನೀವು ಸತ್ಯದ ಸ್ವಯಂ ಹೊಳಪನ್ನು ಜನರಿಗೆ ತೋರಿಸಲು ಮುಂದಾಗಬೇಕು. ಆಗ ವಿಷಯದ ನಿಜವಾದ ಗುಣ ಬೆಳಕಿಗೆ ಬರುವುದು. ನಿಮ್ಮ ಧೈರ್ಯ ಹಾಗೂ ಸಾಮಥ್ರ್ಯವನ್ನು ಬಳಸಿಕೊಂಡು ಮುನ್ನಡೆದರೆ ಸಮಸ್ಯೆಗಳು ಬಗೆ ಹರಿಯುವವರು. ಜೊತೆಗೆ ನಿಮ್ಮ ತನದ ಮಹತ್ವವನ್ನು ಇತರರಿಗೆ ಸೂಕ್ತ ರೀತಿಯಲ್ಲಿ ಪರಿಚಯಿಸಿದಂತಾಗುವುದು. ಇದೊಂದು ನಿಮಗೆ ಪರೀಕ್ಷೆಯ ಅಥವಾ ನಿಮ್ಮ ತನವನ್ನು ಪ್ರದರ್ಶಿಸಲು ಸೂಕ್ತವಾದ ಸಮಯ ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುತ್ತದೆ.

ಮಕರ

ಮಕರ

ಈ ರಾಶಿಯ ಮೇಲೆ ಗ್ರಹಣದ ಪ್ರಭಾವ ತೀವ್ರವಾಗಿರುವುದರಿಂದ ಹೊಸ ವರ್ಷದ ಆರಂಭವು ನಿಮಗೊಂದು ಪರೀಕ್ಷೆಯ ಸಮಯ ಅಥವಾ ಜೀವನದ ಕೆಲವು ಸತ್ಯಗಳನ್ನು ತಿಳಿದುಕೊಳ್ಳುವ ಸಮಯ ಎಂದು ಹೇಳಬಹುದು. ನೀವು ಶಕ್ತಿಯ ತೀವ್ರತೆಯನ್ನು ಅನುಭವಿಸಬೇಕಾಗುವುದು. ಗ್ರಹಣದ ಪ್ರಭಾವದಿಂದ ನೀವು ಸನ್ನಿವೇಶಗಳನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಮುಂದಾಗುವಿರಿ. ಅಲ್ಲದೆ ಇತರರ ನೋಟಕ್ಕೆ ಅಥವಾ ಕಣ್ಣಿಗೆ ಗುರಿಯಾಗುವಿರಿ. ಇದರಿಂದ ನೀವು ಋಣಾತ್ಮಕವಾದ ಪರಿಣಾಮವನ್ನು ಅನುಭವಿಸಬೇಕಾಗುವುದು. ಸಮಯ ಹಾಗೂ ಗ್ರಹಗಳ ಅನುಕೂಲತೆಯು ಸಮಾಧಾನಕರವಾಗಿ ಇಲ್ಲದೆ ಇರುವುದರಿಂದ ಪ್ರತಿಯೊಂದು ನಿರ್ಧಾರ ಹಾಗೂ ಹೆಜ್ಜೆಯ ಬಗ್ಗೆಯೂ ನೀವು ಎಚ್ಚರಿಕೆಯಿಂದ ಮುನ್ನಡೆಯಬೇಕಾಗುವುದು.

ಮಕರ

ಮಕರ

ಇತರರ ಮೇಲೆ ಪ್ರಭಾವ ಬೀರಲು ನೀವು ಸಾಕಷ್ಟು ಪ್ರಭಾವವನ್ನು ಅಥವಾ ಶಕ್ತಿಯನ್ನು ಹೊಂದಿದ್ದೀರಿ ಆದರೆ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ನಡೆಯಬೇಕಾಗುವುದು. ಈ ಬಾರಿ ನೀವು ಸಾಕಷ್ಟು ಸಮಸ್ಯೆ ಹಾಗೂ ಕಿರಿಕಿರಿಗಳು, ಸೂಲು ನಿಮ್ಮ ಹಾದಿಯಲ್ಲಿ ಎದುರಾಗಬಹುದು. ಆದರೆ ನೀವು ನಿಮ್ಮ ಆತ್ಮವಿಶ್ವಾಸದೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಾ ಹೆಜ್ಜೆಯನ್ನು ಇಡಬೇಕು. ಆಗ ಎಲ್ಲಾ ಕೆಲಸ ಕಾರ್ಯಗಳು ನಿಮ್ಮ ಪರವಾಗಿ ನಿಲ್ಲುವುದು. ಕೊಂಚ ನೆಮ್ಮದಿಯನ್ನು ನೀವು ಪಡೆದುಕೊಳ್ಳುವಿರಿ.

English summary

These four Zodiac sign 2019 Solar Eclipse Will Affect The Most

Everyone is going to feel the energy of this lunar/solar power event, but the handful of zodiac signs most affected by January 2019's partial solar eclipse should expect an even more intense first week of the year. Get ready to chase your goals and make the most of your 2019 with the upcoming new moon and partial solar eclipse energy on your side.
X
Desktop Bottom Promotion