For Quick Alerts
ALLOW NOTIFICATIONS  
For Daily Alerts

ಈ ಮೂರು ರಾಶಿಚಕ್ರದವರಿಗೆ ಹೊಸ ವರ್ಷವು ಊಹೆಗೂ ಮಿಗಿಲಾದ ಹೊಸ ಬದಲಾವಣೆಯನ್ನು ತಂದುಕೊಡುವುದು

|

ಇಂಗ್ಲಿಷ್ ಪಂಚಾಂಗದ ಪ್ರಕಾರ 2018ರ ವರ್ಷಕ್ಕೆ ನಮಸ್ಕಾರ ಹೇಳಿ 2019ಕ್ಕೆ ಸ್ವಾಗತವನ್ನು ಕೋರಿದ್ದೇವೆ. 2018ರ ವರ್ಷದಲ್ಲಿ ಸಾಕಷ್ಟು ನೋವು, ವಿಫಲತೆ, ನಷ್ಟ, ಕಿರಿ ಕಿರಿಗಳನ್ನು ಅನುಭವಿಸಿದ್ದರೆ ಹೊಸ ವರ್ಷದಲ್ಲಾದರೂ ನಮ್ಮ ಪರಿಸ್ಥಿತಿ ಬದಲಾಗಲಿ ಎನ್ನುವ ಆಶಯವಿರುತ್ತದೆ. ಅದೇ ರೀತಿ 2018ರಲ್ಲಿ ಸಾಕಷ್ಟು ಲಾಭ, ಯಶಸ್ಸು, ನೆಮ್ಮದಿ, ಗುರಿ ಸಾಧನೆಯಂತಹ ತೃಪ್ತ ಭಾವವನ್ನು ಹೊಂದಿದ್ದೀರಿ ಎಂದಾದರೆ ಮುಂದಿನ ವರ್ಷವು ಈ ಅನುಭವಗಳು ನಿರಂತರವಾಗಿ ಮುಂದುವರಿಯಲಿ ಎಂದು ಬಯಸುತ್ತೇವೆ. ನಮ್ಮ ಬಯಕೆಗಳು ಅಥವಾ ಆಶಯಗಳು ಏನೇ ಆಗಿದ್ದರೂ ಅದು ನಡೆಯುವುದು ಕೇವಲ ನಮ್ಮ ಗ್ರಹಗತಿಗಳ ಅನುಕೂಲತೆಗಳಿಂದ ಅಥವಾ ಬದಲಾವಣೆಗಳಿಂದ ಎನ್ನುವುದನ್ನು ಅರಿಯಬೇಕು.

ವರ್ಷದ ಆರಂಭದ ಮಾಸ ಜನವರಿ. ಈ ತಿಂಗಳಲ್ಲಿ ಸೂರ್ಯ ತನ್ನ ಸ್ಥಾನವನ್ನು ಬದಲಿಸುತ್ತಾನೆ. ಅದನ್ನು ಮಕರ ಸಂಕ್ರಾಂತಿ ಎನ್ನುವ ಧಾರ್ಮಿಕ ಹಿನ್ನೆಲೆಯಲ್ಲಿ ಹಬ್ಬವಾಗಿ ಆಚರಿಸಲಾಗುವುದು. ಈ ವರ್ಷದ ಇನ್ನೊಂದು ವಿಶೇಷತೆ ಎಂದರೆ ಜನವರಿ 5 ರಂದು ಅಮವಾಸ್ಯೆ ಆರಂಭವಾಗುವುದು. ಅಲ್ಲದೆ ಪ್ರಪಂಚದ ಕೆಲವೆಡೆ ಭಾಗಶಃ ಸೂರ್ಯ ಗ್ರಹಣ ಕಾಣಿಸಿಕೊಳ್ಳುವುದು ಎಂದು ಸಹ ಹೇಳಲಾಗುವುದು. ಯುರೇನಸ್ ಗ್ರಹವು ಮೇಷ ರಾಶಿಯ ಮೇಲೆ ನೇರ ಚಲನೆಯನ್ನು ಪಡೆದುಕೊಳ್ಳುವುದು.

ಅಲ್ಲದೆ 2019ರ ವರ್ಷದಲ್ಲಿ ಹೆಚ್ಚಿನ ಗ್ರಹಣಗಳು ಕರ್ಕ ಮತ್ತು ಮಕರ ರಾಶಿಯ ಮೇಲೆ ಹಿಡಿಯುವುದು ಎಂದು ಹೇಳಲಾಗುತ್ತದೆ. ಅಂದರೆ ಇವೆರಡು ರಾಶಿಯ ಮನೆಗಳು ಅವಲಂಬನೆ ಮತ್ತು ಸಮೃದ್ಧತೆಯನ್ನು ಸೂಚಿಸುವುದಾಗಿರುತ್ತದೆ. ಅಲ್ಲದೆ ಜನವರಿ 21 ರಂದು ಸಿಂಹ ರಾಶಿಯ ಮೇಲೆ ಚಂದ್ರ ಗ್ರಹಣ ಹಿಡಿಯುತ್ತದೆ ಎನ್ನಲಾಗುತ್ತಿದೆ.

 ಮೇಷ, ಕನ್ಯಾ ಮತ್ತು ಧನು ರಾಶಿ

ಮೇಷ, ಕನ್ಯಾ ಮತ್ತು ಧನು ರಾಶಿ

ಗ್ರಹಗಳು ಬದಲಾವಣೆಯನ್ನು ತೆಗೆದುಕೊಳ್ಳುವ ರಾಶಿ ಮತ್ತು ಗ್ರಹಣಗಳು ಹಿಡಿಯುವ ರಾಶಿಯ ಮೇಲೆ ಗಂಭೀರವಾದ ಪ್ರಭಾವ ಉಂಟಾಗುವುದು. ಅಂತಹ ರಾಶಿಯ ವ್ಯಕ್ತಿಗಳ ದೈನಂದಿನ ಬದುಕಿನ ಮೇಲೆ ಹಾಗೂ ಆ ವರ್ಷದ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಸಾಕಷ್ಟು ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಸಹ ಜ್ಯೋತಿಷ್ಯ ಶಾಸ್ತ್ರ ಸಲಹೆಯನ್ನು ನೀಡುವುದು. ಬದಲಾವಣೆ ಅಥವಾ ಹೊಸ ಆರಂಭ ಎಂದ ತಕ್ಷಣ ಮನಸ್ಸಿಗೆ ಸಾಮಾನ್ಯವಾಗಿ ಧನಾತ್ಮಕ ಬದಲಾವಣೆ ಎನ್ನುವುದು ಅರಿವಾಗುತ್ತದೆ. ಆದರೆ ಬದಲಾವಣೆ ಎನ್ನುವುದು ಮೊದಲು ಕಷ್ಟಗಳನ್ನು ಎದುರಿಸುವುದರ ಮೂಲಕ ಹೊಸ ತಿರುವನ್ನು ಕಾಣುವುದು ಆಗಿರಬಹುದು. ಇಲ್ಲವೇ ಸುಖವನ್ನು ಕಾಣುತ್ತಾ ಕಷ್ಟದ ಸವಾಲುಗಳನ್ನು ಎದುರಿಸುವ ಪರಿಸ್ಥಿತಿಯೂ ಆಗಿರಬಹುದು. ಹಾಗಾಗಿ ವ್ಯಕ್ತಿ ಗ್ರಹಗಳ ಪ್ರಭಾವಕ್ಕೆ ಅನುಗುಣವಾಗಿ ತಮ್ಮ ಸ್ಥಿತಿಯನ್ನು ಎದುರಿಸುವುದನ್ನು ಕಲಿಯಬೇಕಾಗುವುದು. ಈ ವರ್ಷ ಇಂತಹ ಒಂದು ಹೊಸ ಬಗೆಯ ಬದಲಾವಣೆಯು ಮೇಷ, ಕನ್ಯಾ ಮತ್ತು ಧನು ರಾಶಿಯವರು ಎದುರಿಸುವರು ಎನ್ನಲಾಗುವುದು.

ಮೂರು ರಾಶಿಚಕ್ರದವರಿಗೆ 2019ರ ವರ್ಷ ಹೊಸ ಆರಂಭವನ್ನು ತಂದುಕೊಡುತ್ತದೆ

ಮೂರು ರಾಶಿಚಕ್ರದವರಿಗೆ 2019ರ ವರ್ಷ ಹೊಸ ಆರಂಭವನ್ನು ತಂದುಕೊಡುತ್ತದೆ

ಬ್ರಹ್ಮಾಂಡದಲ್ಲಿ ನಡೆಯುವ ಬದಲಾವಣೆಗಳು ಹಾಗೂ ಗ್ರಹಗಳ ಸಂಚಾರ ಕ್ರಮದಿಂದ ಕೇವಲ ನಕಾರಾತ್ಮಕ ವಿಷಯಗಳು ಅಥವಾ ನತದೃಷ್ಟಗಳೇ ಸಂಭವಿಸುತ್ತವೆ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ಅತಿಯಾದ ಅದೃಷ್ಟಗಳು, ಜೀವನದಲ್ಲಿ ನೆನಪಿಟ್ಟುಕೊಳ್ಳುವಂತಹ ಲಾಭ, ಸ್ಥಾನ ಮಾನಗಳು ಸಿಗುತ್ತವೆ ಎಂದು ಹೇಳಲಾಗುವುದು. ಈ ವರ್ಷದಲ್ಲಿ ಉಂಟಾಗುವ ಗ್ರಹಗಳ ಬದಲಾವಣೆಯು ರಾಶಿಚಕ್ರಗಳ ಮೇಲೆ ಸಾಕಷ್ಟು ಧನಾತ್ಮಕ ಪ್ರಭಾವವನ್ನು ಬೀರಲಿವೆ. ಅವುಗಳಲ್ಲಿ ಮೂರು ರಾಶಿಚಕ್ರದವರಿಗೆ ವರ್ಷದ ಆರಂಭವು ಸಾಕಷ್ಟು ಆಶ್ಚರ್ಯಕರ ರೀತಿಯಲ್ಲಿ ಬದಲಾವಣೆಯ ಹಾದಿಯನ್ನು ತೋರಿಸುವುದು ಎಂದು ಹೇಳಲಾಗುತ್ತದೆ. ಹಾಗಾದರೆ ಆ ಮೂರು ರಾಶಿಚಕ್ರಗಳು ಯಾವವು? ಅವುಗಳ ಹಾದಿಯಲ್ಲಿ ಕಷ್ಟ-ನಷ್ಟಗಳು ಹಾಗೂ ಸು-ಸಂತೋಷವು ಯಾವರೀತಿಯಲ್ಲಿ ಬದಲಾವಣೆಯನ್ನು ತಂದುಕೊಡುವವು? ಆ ಮೂರು ರಾಶಿಚಕ್ರದ ವ್ಯಕ್ತಿಗಳು ಎಂತಹ ಸ್ಥಿತಿಯನ್ನು ಮೊದಲು ಎದುರು ನೋಡಬೇಕಾಗುವುದು? ಅವು ಯಾವ ಬದಲಾವಣೆಯ ಪಾಠ ಕಲಿಸುತ್ತವೆ? ಎನ್ನುವುದನ್ನು ತಿಳಿಯಲು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೇಷ: ಹಲವಾರು ಅವಕಾಶಗಳು ನಿಮ್ಮನ್ನು ಮೇಲೆತ್ತುವುದು

ಮೇಷ: ಹಲವಾರು ಅವಕಾಶಗಳು ನಿಮ್ಮನ್ನು ಮೇಲೆತ್ತುವುದು

ಮೇಷ ರಾಶಿಯ ಆಡಳಿತಾತ್ಮಕ ಗ್ರಹವಾದ ಮಂಗಳನು ಮೇಷ ರಾಶಿಯನ್ನೇ ಪ್ರವೇಶಿಸುವನು. ಇದರ ಫಲವಾಗಿ ನೀವು ಯಾವ ವಿಷಯಗಳಲ್ಲಿ ಸೋಲನ್ನು ಅನುಭವಿಸಿದ್ದೀರಿ ಅಥವಾ ಕಷ್ಟಗಳನ್ನು ಕಾಣುತ್ತಿದ್ದೀರಿ ಅದೆಲ್ಲವೂ ನಿವಾರಣೆ ಕಾಣುವುದು. ಅಂಕಿ ಅಂಶದ ಪ್ರಕಾರ ಹೇಳಬಹುದು ಎಂದಾದರೆ ಇಷ್ಟು ದಿನ ನೀವು ಸೊನ್ನೆಯ ಸ್ಥಾನದಲ್ಲಿದ್ದೀರಿ ಎಂದಾದರೆ ಇದೀಗ ನೀವು 100ರ ಸ್ಥಾನವನ್ನು ಪಡೆದುಕೊಳ್ಳುವಿರಿ. ಕೆಲಸ ಕಾರ್ಯಗಳು ಅಥವಾ ನಿಮ್ಮ ಗುರಿ ಸಾಧನೆಯ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದಂತೆ ನಿಮಗೆ ಕಾಣಿಸಬಹುದು. ಆದರೆ ವೇಗವು ನಿಧಾನಗತಿಯಲ್ಲಿದ್ದರೂ ಅದರ ಫಲಿತಾಂಶ ಉತ್ತಮ ವಾಗಿರುತ್ತದೆ. ಯಾವುದೇ ಕಾರಣಕ್ಕೂ ನೀವು ನಿಷ್ಕ್ರಿಯರಾಗುವುದು, ಆಕ್ರಮಣಕಾರಿ ಪ್ರವೃತ್ತಿ ತೋರುವಂತಹ ವರ್ತನೆಯನ್ನು ತೋರಬಾರದು. ಎಲ್ಲವೂ ನಿಮ್ಮ ನಿಯಂತ್ರಣದಲ್ಲಿ ಇರುವಂತೆ ಕಾಳಜಿ ವಹಿಸಬೇಕು.

Most Read: ಹೊಸ ವರ್ಷ 2019: ಜನವರಿ ತಿಂಗಳ ರಾಶಿ ಭವಿಷ್ಯ

ಮೇಷ: ಹಲವಾರು ಅವಕಾಶಗಳು ನಿಮ್ಮನ್ನು ಮೇಲೆತ್ತುವುದು

ಮೇಷ: ಹಲವಾರು ಅವಕಾಶಗಳು ನಿಮ್ಮನ್ನು ಮೇಲೆತ್ತುವುದು

ಮಂಗಳ ಗ್ರಹವು ಮೀನ ರಾಶಿಯನ್ನು ಪ್ರವೇಶಿಸಿದಾಗ ಸ್ವಲ್ಪ ತೊಂದರೆಗಳು ಉಂಟಾಗಬಹುದು. ಅಂದರೆ ಡಿಸೆಂಬರ್ ವೇಳೆಯಲ್ಲಿ ಕೆಲವು ಸಮಸ್ಯೆಗಳು ಅಥವಾ ಅಡೆತಡೆಗಳು ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಸಾಕಷ್ಟು ಕಾಳಜಿ ಅಥವಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಆಗ ಸಾಕಷ್ಟು ಅಹಿತಕರ ಸಂಗತಿಗಳಿಂದ ದೂರ ಇರಲು ಸಹಾಯವಾಗುವುದು. ಆ ಸಮಯದಲ್ಲಿ ನೀವು ಸಮಯಕ್ಕೆ ತಕ್ಕಂತೆ ಪ್ರತಿಬಿಂಬಿಸುವುದು ಹಾಗೂ ನಿಮ್ಮದೇ ಆದ ನೇತೃತ್ವದ ದಾರಿಯಲ್ಲಿ ಸಾಗಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಸಮಸ್ಯೆಗಳು ಎದುರಾದಾಗ ನಿಮ್ಮಲ್ಲಿರುವ ಧೈರ್ಯ ಹಾಗೂ ಸಾಧಿಸುವ ಛಲವನ್ನು ರೂಪಿತ ಗೊಳಿಸಿದರೆ ಅಥವಾ ವರ್ತನೆಯಲ್ಲಿ ತಂದುಕೊಂಡರೆ ಅತ್ಯುತ್ತಮ ಬದಲಾವಣೆಯನ್ನು ಕಂಡುಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

ಕನ್ಯಾ: ಏನಾಗುವುದು ಎನ್ನುವುದನ್ನು ನೀವು ಮೊದಲೇ ಊಹಿಸುವಿರಿ

ಕನ್ಯಾ: ಏನಾಗುವುದು ಎನ್ನುವುದನ್ನು ನೀವು ಮೊದಲೇ ಊಹಿಸುವಿರಿ

ಹೊಸ ವರ್ಷದ ಆರಂಭದಿಂದಲೇ ನೀವು ಸೃಜನಾತ್ಮಕ ರಸವನ್ನು ಅರಿಯಲು ಸಿದ್ಧರಾಗಿದ್ದೀರಿ ಎನ್ನಲಾಗುವುದು. ಇದಕ್ಕೆ ಕಾರಣ ನಿಮ್ಮ ಗ್ರಹಗತಿಗಳಲ್ಲಿ ಉಂಟಾಗುವ ಬದಲಾವಣೆಯೇ ಪ್ರಮುಖ ಕಾರಣ ಎನ್ನಲಾಗುವುದು. ಸಾಕಷ್ಟು ಅನುಕೂಲತೆಗಳು, ನಿಮ್ಮ ಕನಸಿನ ದಾರಿಗಳು ತೆರೆದುಕೊಳ್ಳುತ್ತವೆ. ಆದರೆ ಜನವರಿ 5 ರಂದು ಕಾಣಿಸಿಕೊಳ್ಳುವ ಭಾಗಶಃ ಸೂರ್ಯ ಗ್ರಹಣವು ಕನ್ಯಾ ರಾಶಿಯ ಮೇಲೆ ಸಾಕಷ್ಟು ಪ್ರಭಾವ ಬೀರುವುದು. ಇದರ ಪ್ರಭಾವವು ಐದನೇ ಮನೆಯ ಮೇಲೆ ಹೆಚ್ಚಾಗುವುದರಿಂದ ಐದನೇ ಮನೆಗೆ ಸಂಬಂಧಿಸಿದ ವಿನೋದ, ಪ್ರಣಯ, ಸೃಜನಶಿಲತೆ, ಆತ್ಮೀಯತೆ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳಲ್ಲಿ ಆಘಾತ ಅಥವಾ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ.

Most Read: 2019ರಲ್ಲಿ ಈ ಐದು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳು ಕಾಣಲಿದೆಯಂತೆ!

ಕನ್ಯಾ: ಏನಾಗುವುದು ಎನ್ನುವುದನ್ನು ನೀವು ಮೊದಲೇ ಊಹಿಸುವಿರಿ

ಕನ್ಯಾ: ಏನಾಗುವುದು ಎನ್ನುವುದನ್ನು ನೀವು ಮೊದಲೇ ಊಹಿಸುವಿರಿ

ನಂತರದ ದಿನಗಳಲ್ಲಿ ಇಂತಹ ಅಸಹಜ ಸ್ಥಿತಿಯನ್ನು ತರುವಂತಹ ಯಾವುದೇ ಬದಲಾವಣೆಯನ್ನು ಗ್ರಹಗಳು ಕಂಡುಕೊಳ್ಳುವುದಿಲ್ಲ. ಅಂತಹ ಸಮಯದಲ್ಲಿ ನಿಮ್ಮ ಸ್ಥಿತಿ ಉತ್ತಮವಾಗುವುದು. ಹಾಗಾಗಿ ನಿಧಾನವಾಗಿ ನೀವು ಹೆಚ್ಚು ಶಕ್ತಿಶಾಲಿಯಾಗುತ್ತಾ ಸಾಗುವಿರಿ. ನೀವು ಅಧಿಕೃತವಾಗಿರುವುದಕ್ಕಿಂತ ಹೆಚ್ಚು ಪ್ರಭಾವಿಗಳಾಗಿರುತ್ತೀರಿ. ನೀವು ನಿಮ್ಮದೇ ಆದ ಸತ್ಯ ಹಾಗೂ ನಿಷ್ಠೆಯಿಂದ ಮುಂದೆಸಾಗುವುದರಿಂದ ಸಾಕಷ್ಟು ಯಶಸ್ಸು, ಸಂತೋಷ ಹಾಗೂ ಲಾಭವನ್ನು ಪಡೆದುಕೊಳ್ಳುತ್ತಾ ಸಾಗುವಿರಿ ಎಂದು ಹೇಳಲಾಗುವುದು. ಆಗ ನಿಮ್ಮನ್ನು ಅಲ್ಲಾಡಿಸುವ ಶಕ್ತಿ ಯಾರಿಗೂ ಇರದು. ಅದೇ ಕನ್ಯಾ ರಾಶಿಯವರ ಅತಿದೊಡ್ಡ ಶಕ್ತಿ ಎಂದು ಹೇಳಲಾಗುವುದು.

ಧನು: ಬ್ರಹ್ಮಾಂಡದಲ್ಲಿ ನಿಮ್ಮ ಅದೃಷ್ಟವು ಅತ್ಯುತ್ತಮ ಸ್ಥಾನದಲ್ಲಿದೆ

ಧನು: ಬ್ರಹ್ಮಾಂಡದಲ್ಲಿ ನಿಮ್ಮ ಅದೃಷ್ಟವು ಅತ್ಯುತ್ತಮ ಸ್ಥಾನದಲ್ಲಿದೆ

ಧನು ರಾಶಿಯವರಿಗೆ 2019ರ ವರ್ಷವು ಅತ್ಯುತ್ತಮ ಸ್ಥಿತಿಯನ್ನು ಕಲ್ಪಿಸಿಕೊಡುವುದು. ಕಾರಣವರನ್ನು ಆಳುವ ಗ್ರಹಗಳು ಅವರ ಸ್ವಂತ ಮನೆಯಲ್ಲಿಯೇ ಇರುತ್ತವೆ. ಹಾಗಾಗಿ ಇವರನ್ನು ಗ್ರಹಗಳು ಅತ್ಯುತ್ತಮ ರೀತಿಯಲ್ಲಿ ಆಶಿರ್ವಾದ ಮಾಡುತ್ತವೆ ಎಂದು ಹೇಳಲಾಗುವುದು. ಜನವರಿ 5ರಂದು ನಡೆಯುವ ಭಾಗಶಃ ಸೂರ್ಯ ಗ್ರಹಣದ ಪ್ರಭಾವವು ಮಕರ ರಾಶಿಯಲ್ಲಿ ಪ್ರಭಾವ

ಬೀರುತ್ತದೆ. ಇದರ ಪ್ರಭಾವವು ಧನು ರಾಶಿಯವರಿಗೆ ಮಿಶ್ರ ಫಲವನ್ನು ನೀಡುವುದು. ಆದಾಯ, ಹಣಕಾಸಿನ ವಿಚಾರ,ಸ್ವ-ಮೌಲ್ಯ, ಆಸ್ತಿಯ ವಿಷಯದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ.ಇದರಿಂದ ನಿಮ್ಮ ಭದ್ರತಾ ನೆಲೆಯು ಬುಡಮೇಲು ಆಗಬಹುದು.

ಧನು

ಧನು

ಗುರು ಗ್ರಹವು ಧನು ರಾಶಿಯವರ ಪರವಾಗಿ ನಿಲ್ಲುವುದರಿಂದ ಸಾಕಷ್ಟು ಅಹಿತಕರವಾದ ಘಟನೆಯನ್ನು ಅಥವಾ ನಷ್ಟಗಳನ್ನು ತಪ್ಪಿಸುವಲ್ಲಿ ಸಹಾಯ ಮಾಡುವನು. ಅಲ್ಪ ಅವಧಿಯು ನಿಮಗೆ ನೋವು ಅಥವಾ ಕಷ್ಟವನ್ನು ತಂದೊಡ್ಡಿದಂತೆ ಮಾಡಬಹುದು. ಆದರೆ ನಂತರದ ದಿನದಲ್ಲಿ ವರ್ಷಾಂತ್ಯದ ವರೆಗೂ ಸಾಕಷ್ಟು ಎಚ್ಚರಿಕೆಯ ಗಂಟೆಯನ್ನು ಮೊದಲೇ ಪಡೆದುಕೊಳ್ಳುವಿರಿ. ಅದಕ್ಕೆ ಅನುಗುಣವಾಗಿ ಪರಿಸ್ಥಿತಿಯನ್ನು ಎದುರಿಸುವಂತಹ ಎಚ್ಚರವನ್ನು ಪಡೆದುಕೊಳ್ಳುವಿರಿ. ಅದು ನಿಮಗೆ ಒಂದಿಷ್ಟು ಪೂರ್ವ ಯೋಜಿತ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುವುದು. ಇವುಗಳೊಂದಿಗೆ ಸಾಕಷ್ಟು ಹಿತಕರವಾದ ಅನುಭವ ಹಾಗೂ ಲಾಭಗಳನ್ನು ಸಹ ಪಡೆದುಕೊಳ್ಳುವುದರಿಂದ ಸಂತೋಷದ ಸಮಯವನ್ನು ನೀವು ಹೊಂದುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

These 3 Zodiac Signs Will Have The Best Start To 2019

These 3 Zodiac Signs Will Have The Best Start To 2019, and They're Ready For New Beginnings
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more