For Quick Alerts
ALLOW NOTIFICATIONS  
For Daily Alerts

ಈ ತಿಂಗಳ ಸೂರ್ಯ ಗ್ರಹಣದ ಪ್ರಭಾವದಿಂದ ಕೆಲವು ರಾಶಿಯವರು ಅದ್ಭುತ ಬದಲಾವಣೆ ಕಾಣುವರು

|

ಹೊಸ ವರ್ಷದ ಆರಂಭ ಆಗುತ್ತಿದ್ದಂತೆ ಎಲ್ಲರಿಗೂ ಹೊಸತನ ಸಿಗಲಿ, ಹೊಸ ಬದಲಾವಣೆ ಬದುಕಿನುದ್ದಕ್ಕೂ ಸಂತಸವನ್ನು ನೀಡಲಿ ಎನ್ನುವ ಮನೋಭಾವ ಕಾಡುತ್ತದೆ. ಆದರೆ ಈ ಬಾರಿಯ ಹೊಸ ವರ್ಷ ಆರಂಭದಲ್ಲಿಯೇ ಗ್ರಹಣ ಕುಳಿತಿದೆ. ಅಂದರೆ 2019ರ ಆರಂಭದಲ್ಲಿ ಕಾಣಿಸಿಕೊಳ್ಳುತ್ತಿರುವ ಸೂರ್ಯಗ್ರಹಣವು ಮನಸ್ಸಿಗೆ ಒಂದು ಬಗೆಯ ಗೊಂದಲ ಹಾಗೂ ಬೇಸರ ಹುಟ್ಟಿಸಿದೆ ಎನ್ನಬಹುದು. ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ನಡೆಯುವ ಈ ವಿದ್ಯಮಾನವು ಜನರ ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳನ್ನು ಹಾಗೂ ಕೌತುಕಗಳನ್ನು ಇಮ್ಮಡಿಗೊಳಿಸಿದೆ ಎನ್ನಬಹುದು.

ಜನವರಿ ತಿಂಗಳಲ್ಲಿ ಕಾಣಿಸಿಕೊಳ್ಳುವ ಈ ಗ್ರಹಣವು ಪ್ರಪಂಚದ ವಿವಿಧೆಡೆ ಗೋಚರಿಸುತ್ತದೆ. ವರ್ಷದ ಮೊದಲ ಸೂರ್ಯ ಗ್ರಹಣವು ಸೂರ್ಯನ ಭಾಗಶಃ ಗ್ರಹಣ ಎಂದು ಹೇಳಲಾಗುತ್ತಿದೆ. ಭಾರತೀಯ ಪಂಚಾಂಗದ ಪ್ರಕಾರ ಸಂಜೆ 5 ಗಂಟೆ 4 ನಿಮಿಷದಿಂದ ರಾತ್ರಿ 9 ಗಂಟೆ 18 ನಿಮಿಷದ ವರೆಗೆ ಗೋಚರಿಸುತ್ತದೆ. ಹಾಗಾಗಿ ಭಾರತೀಯರಿಗೆ ಈ ಗ್ರಹಣದ ಗೋಚರವು ಅಷ್ಟಾಗಿ ಗೋಚರಿಸುವುದಿಲ್ಲ ಎಂದು ಹೇಳಬಹುದು. ಸೂತಕ ಎಂದು ಕರೆಯಲ್ಪಡುವ ಗ್ರಹಣದ ಪ್ರಭಾವ ಮಾತ್ರ ಎಲ್ಲರ ಮೇಲೂ ಪ್ರಭಾವ ಬೀರುತ್ತದೆ ಎಂದು ಹೇಳಲಾಗುವುದು....

ಸೂರ್ಯ, ಭೂಮಿ ಹಾಗೂ ಚಂದ್ರ

ಸೂರ್ಯ, ಭೂಮಿ ಹಾಗೂ ಚಂದ್ರ

ಪಂಚಭೂತಗಳಲ್ಲಿ ಒಂದಾಗಿರುವ ಸೂರ್ಯ, ಭೂಮಿ ಹಾಗೂ ಚಂದ್ರರ ನಡುವೆ ನಡೆಯುವ ಈ ವಿದ್ಯಮಾನವು ಇತರ ಗ್ರಹಗಳ ಮೇಲೆ ಸಾಕಷ್ಟು ಪರಿಣಾಮ ಬೀರುವುದು. ಗ್ರಹಗತಿಗಳ ಚಲನೆ ಹಾಗೂ ಬದಲಾವಣೆಯು ಪ್ರತಿಯೊಂದು ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತದೆ. ಇದು ಆಯಾ ವ್ಯಕ್ತಿಯ ಕುಂಡಲಿ ಹಾಗೂ ಗ್ರಹಗಳ ಬದಲಾವಣೆಗೆ ಅನುಗುಣವಾಗಿ ವ್ಯಕ್ತಿ ಫಲಾಫಲವನ್ನು ಅನುಭವಿಸುತ್ತಾನೆ. ಗ್ರಹಣವು ಸಾಮಾನ್ಯವಾಗಿ ಅಹಿತವನ್ನುಂಟುಮಾಡುವುದು ಎನ್ನುವ ನಂಬಿಕೆ ಇರುವುದು ಸಹಜ. ದುಷ್ಟ ಶಕ್ತಿಗಳ ಹುಟ್ಟು ಹಾಗೂ ಪರಿಸರದಲ್ಲಿ ವಿಷಮಯ ಗಾಳಿ ಗೋಚರವಾಗುವುದು. ಇಂತಹ ಸಂದರ್ಭದಲ್ಲಿ ಎಲ್ಲವೂ ಮಲೀನ ಹಾಗೂ ನಕಾರಾತ್ಮಕ ಬದಲಾವಣೆಯನ್ನು ನೀಡುತ್ತದೆ ಎಂದು ಹೇಳಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷದ ಆರಂಭದಲ್ಲಿಯೇ ಕಾಣಿಸಿಕೊಳ್ಳುತ್ತಿರುವ ಈ ಭಾಗಶಃ ಸೂರ್ಯ ಗ್ರಹಣವು ಕೆಲವು ರಾಶಿಚಕ್ರದವರಿಗೆ ಧನಾತ್ಮಕ ರೀತಿಯಲ್ಲಿ ಬದಲಾವಣೆಯನ್ನು ತಂದುಕೊಡುವುದು. ಅದು ಅವರಿಗೆ ಹೊಸ ಬದಲಾವಣೆ ಅಥವಾ ಕಷ್ಟದ ಸಂಗತಿ ಎನಿಸಬಹುದು. ಆದರೆ ದೀರ್ಘ ಸಮಯದಲ್ಲಿ ಹೊಸತನವನ್ನು ನೀಡುವುದರ ಮೂಲಕ ಧನಾತ್ಮಕ ಪರಿವರ್ತನೆ ಹಾಗೂ ಪ್ರತಿಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಕಷ್ಟ ಎನಿಸಿದರೂ ನಿಧಾನ ಗತಿಯಲ್ಲಿ ವ್ಯಕ್ತಿಗೆ ಸ್ವಾತಂತ್ರ್ಯದ ಹೊಸ ಆರಂಭ ಎನಿಸಿಕೊಳ್ಳುವುದು. ಜೊತೆಗೆ ವ್ಯಕ್ತಿಗೆ ತನ್ನ ಸಾಮಥ್ರ್ಯದ ಅರಿವನ್ನು ಮೂಡಿಸುತ್ತದೆ ಎಂದು ಹೇಳುವರು. ಗ್ರಹಣ ಅಥವಾ ಸೂತಕ ಎನ್ನುವ ಸಂಗತಿಯ ನಡುವೆ ಸಾಕಷ್ಟು ಬದಲಾವಣೆ ಅಥವಾ ಕಷ್ಟದ ಸವಾಲುಗಳನ್ನು ಎದುರಿಸುತ್ತಾ ಹೋದರೂ ಉತ್ತಮ ಬದಲಾವಣೆಯ ದಾರಿಯಲ್ಲಿ ನಿಂತಿರುವ ರಾಶಿಚಕ್ರದವರು ಯಾರು? ಆ ರಾಶಿಚಕ್ರಗಳ ಪಟ್ಟಿಯಲ್ಲಿ ನಿಮ್ಮ ರಾಶಿಚಕ್ರವಿದೆಯೇ? ಇದ್ದರೆ ಯಾವ ಬದಲಾವಣೆಯನ್ನು ನೀವು ಕಂಡುಕೊಳ್ಳಲಿದ್ದೀರಿ? ಇವುಗಳಿಂದ ಜೀವನದಲ್ಲಿ ಹೊಸ ವರ್ಷದ ಹೊಸ ಬದಲಾವಣೆ ಏನು? ಎನ್ನುವಂತಹ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಇದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ. ನಿಮ್ಮ ಜೀವನದಲ್ಲಿ ಕಾಣಲಿರುವ ಬದಲಾವಣೆಯ ಬಗ್ಗೆ ಅರಿಯಿರಿ.

Most Read:2019ರ ಸೂರ್ಯ ಗ್ರಹಣ ಈ ನಾಲ್ಕು ರಾಶಿಚಕ್ರದವರ ಮೇಲೆ ಗಂಭೀರ ಪ್ರಭಾವ ಬೀರುವುದು!

ವೃಷಭ:ಇವರು ಸುಂದರವಾದ ಅನುಭವ ಹೊಂದಿರುವ ಪ್ರಯಾಣವನ್ನು ಹೊಂದುವರು

ವೃಷಭ:ಇವರು ಸುಂದರವಾದ ಅನುಭವ ಹೊಂದಿರುವ ಪ್ರಯಾಣವನ್ನು ಹೊಂದುವರು

ನಿಮಗೆ ಯಾವುದಾದರೂ ಆಶ್ಚರ್ಯಕರ ಸಂಗತಿಯನ್ನು ತಿಳಿಯಲು ಅಥವಾ ಅದನ್ನು ಅನುಭವಿಸುವ ಉದ್ದೇಶಕ್ಕಾಗಿ ಪ್ರಯಾಣ ಕೈಗೊಂಡಿದ್ದೀರಿ ಎಂದಾದರೆ ಅದೆಷ್ಟು ಸಂತೋಷ ಹಾಗೂ ಉತ್ಸುಕತೆ ಇರುತ್ತದೆ ಅಲ್ಲವೇ? ಅದರೊಟ್ಟಿಗೆ ನೀವು ಸೇರಬೇಕು ಅಂದುಕೊಂಡ ತಾಣಕ್ಕೆ ಕೈಗೊಳ್ಳುವ ಪ್ರಯಾಣದ ಬಗ್ಗೆಯೂ ಸಾಕಷ್ಟು ಅಂಜಿಕೆ ಹಾಗೂ ಸುಗಮವಾಗಿ ಸಾಗಲಿ ಎನ್ನುವ ಎಚ್ಚರಿಕೆ ಅಥವಾ ಕಾಳಜಿಯ ಭಾವನೆ ಇರುತ್ತದೆ. ಅಂತಹ ಒಂದು ಭಾವನೆಗಳನ್ನು ಅನುಭವಿಸುತ್ತಾ ಹೊಸ ವರ್ಷದಲ್ಲಿ ಹೊಸ ಬದಲಾವಣೆಯನ್ನು ಕಂಡುಕೊಳ್ಳುವಿರಿ ನೀವು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

 ವೃಷಭ

ವೃಷಭ

ಕುಂಡಲಿಯ 9ನೇ ಮನೆಯು ಸಾಹಸ ಮತ್ತು ತೆರೆದ ಮನಸ್ಸಿಗೆ ಸಂಬಂಧಿಸಿದ ವಿಷಯವನ್ನು ಪ್ರಭಾವವನ್ನು ನೀಡುತ್ತದೆ. ಹೊಸ ವರ್ಷದಲ್ಲಿ ಕಾಣಿಸಿಕೊಳ್ಳುವ ಭಾಗಶಃ ಸೂರ್ಯ ಗ್ರಹಣವು ನಿಮ್ಮ 9ನೇ ಮನೆಯ ಮೇಲೆ ಪ್ರಭಾವ ಬೀರುತ್ತದೆ. ಈ ಸೂರ್ಯ ಗ್ರಹಣವು ಸ್ವಾಭಾವಿಕವಾಗಿ ನಿಮ್ಮ ದೈನಂದಿನ ಜೀವನದ ಏಕತಾನತೆಯಿಂದ ಹೊರಗುಳಿಯುತ್ತದೆ. ನಿಮಗೆ ನಿಮ್ಮ ಜೀವನವು ಯಾವ ಸ್ಥಿತಿ ಅಥವಾ ಸ್ಥಾನದಲ್ಲಿ ನಿಂತುಕೊಂಡಿದೆ ಎನ್ನುವುದು ನಿಮಗೆ ತಿಳಿದಿಲ್ಲ ಎಂದು ಹೇಳಲಾಗುವುದು. ಆದರೆ ಅದರ ಚಿಂತನೆಯಲ್ಲಿ ನೀವು ಸಾಕಷ್ಟು ಭಯ ಅಥವಾ ಕುತೂಹಲದ ಗೊಂದಲದಲ್ಲಿ ಅವಕಾಶಗಳನ್ನು ಎದುರು ನೋಡುತ್ತಿದ್ದೀರಿ. ಸೌರ ಮಂಡಲದಲ್ಲಿ ನಡೆಯುವ ಈ ವಿದ್ಯಮಾನವು ನಿಮಗೆ ಸುಂದರವಾದ ಅನಿರೀಕ್ಷಿತ ಸಂಗತಿಗಳನ್ನು ತಂದುಕೊಡುವುದು. ಅದಕ್ಕಾಗಿ ನೀವು ಅನಿರೀಕ್ಷಿತ ರೀತಿಯಲ್ಲಿಯೇ ಶರಣಾಗುವಿರಿ. ಈ ಹಿನ್ನೆಲೆಯಲ್ಲಿಯೇ ಹೊಸ ವ್ಯಕ್ತಿಗಳನ್ನು, ಹೊಸ ಸ್ಥಳಗಳನ್ನು ಹಾಗೂ ಹೊಸ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಒಟ್ಟಿನಲ್ಲಿ ಹೊಸ ವರ್ಷದ ಆರಂಭದಲ್ಲಿಯೇ ಬಂದಿರುವ ಸೂರ್ಯಗ್ರಹಣದ ಪ್ರಭಾವ ನಿಮ್ಮ ಜೀವನದಲ್ಲಿ ಧನಾತ್ಮಕ ರೀತಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದೊಡ್ಡುವುದು.

ಕನ್ಯಾ: ಇವರಿಗೆ ಹೊಸ ವರ್ಷವು ಒಂದು ಮೋಜಿನ ವರ್ಷವಾಗಿ ಬದಲಾಗುವುದು

ಕನ್ಯಾ: ಇವರಿಗೆ ಹೊಸ ವರ್ಷವು ಒಂದು ಮೋಜಿನ ವರ್ಷವಾಗಿ ಬದಲಾಗುವುದು

ಕೆಲವೊಮ್ಮೆ ನಾವು ಜೀವನದಲ್ಲಿ ಸಾಮಾನ್ಯವಾದ ಸಂತೋಷ ಹಾಗೂ ಸೌಲಭ್ಯವಾದರೂ ದೊರೆಯಲಿ ಎಂದು ಬಯಸುತ್ತೇವೆ. ನಾವು ಅಂದುಕೊಂಡ ಸಂಗತಿಯು ಸಿಗದೆ ಹೋದಾಗ ಅಥವಾ ನಮ್ಮ ನಿರೀಕ್ಷೆಗಿಂತ ವಿಷಯವು ಕೆಳಮಟ್ಟಕ್ಕೆ ಹೋದಾಗ ಖಿನ್ನತೆ ಹಾಗೂ ಒತ್ತಡ ಉಂಟಾಗುವುದು ಸಹಜ. ಅಂತೆಯೇ ನಮ್ಮ ನಿರೀಕ್ಷೆಗೂ ಮಿಗಿಲಾದ ಸಂಗತಿಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ ಅಥವಾ ನಮಗಾಗಿಯೇ ಕಾದಿದೆ ಎಂದಾಗ ಅದರಿಂದ ಉಂಟಾಗುವ ಸಂತೋಷದ ಪರಿಯೇ ಬೇರೆ. ಅಂತಹ ಒಂದು ಅಪರೂಪದ ಬದಲಾವಣೆ ಹಾಗೂ ಸಂತೋಷವನ್ನು ತಂದುಕೊಡುವುದು ಈ ಸೂರ್ಯ ಗ್ರಹಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಶುದ್ಧ ಹಾಗೂ ಉತ್ತಮ ಭಾವನೆಯನ್ನು ಹೊಂದಿರುವ ವ್ಯಕ್ತಿಗಳು ಕನ್ಯಾ ರಾಶಿಯವರು. ಇತರರಿಗೆ ಸಹಾಯ ಹಾಗೂ ಕರುಣೆ ತೋರುವ ಸ್ವಭಾವದವರೂ ಹೌದು. ಇವರ ಈ ಗುಣಗಳಿಂದಲೇ ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ಹಾಗೂ ಪ್ರತಿಫಲವನ್ನು ಪಡೆದುಕೊಳ್ಳುವರು. ಇವರ ಭಾವನೆಗಳಿಗೆ ಅನುಗುಣವಾಗಿ ಈ ವರ್ಷ ಪೂರ್ತಿ ಸಾಕಷ್ಟು ಮೋಜಿನ ಸಂಗತಿಯನ್ನು ಇವರು ಅನುಭವಿಸುವರು. ಗ್ರಹಣದ ಪ್ರಭಾವವು ಇವರಿಗೆ ಋಣಾತ್ಮಕ ಬದಲಾವಣೆಗಳಿಗಿಂತಲೂ ಹೆಚ್ಚು ಧನಾತ್ಮಕ ಸಂಗತಿ ಅಥವಾ ಬದಲಾವಣೆಯನ್ನು ತಂದುಕೊಡುವುದು. ಇವರು ತಾವು ಅಂದುಕೊಂಡಂತೆಯೇ ಬಣ್ಣ, ಸಂಗೀತ, ಕಲೆ ಸೇರಿದಂತೆ ಇನ್ನಿತರ ಆಸಕ್ತಿದಾಯಕ ವಿಷಯದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳುವುದರ ಮೂಲಕ ತಮ್ಮ ಹಾದಿಯಲ್ಲಿ ಮೊದಲ ಹೆಜ್ಜೆಯನ್ನು ಇಡುವರು.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯ ವ್ಯಕ್ತಿಗಳು ಅತ್ಯಂತ ವಿಶ್ಲೇಷಣಾತ್ಮಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಾವು ಆದೇಶ ನೀಡುವುದು, ವಿಷಯಗಳ ಬಗ್ಗೆ ತಾರ್ಕಿಕ ಪದಗಳನ್ನು ಬಳಸುವುದು ಹಾಗೂ ತಮ್ಮದೇ ದಾರಿಯಲ್ಲಿ ನಡೆಯುವಂತಹ ಪ್ರವೃತ್ತಿಯನ್ನು ಪಕ್ಕಕ್ಕೆ ಇರಿಸಬೇಕು. ಅವಕಾಶಗಳು ಹಾಗೂ ವಿಷಯಗಳು ದೊರೆತಾಗ ಮುಗ್ಧತೆಯಿಂದ ಸ್ವೀಕರಿಸಿ, ಅದರಿಂದ ಸಂತೋಷ ಹಾಗೂ ಯಶಸ್ಸನ್ನು ಪಡೆದುಕೊಳ್ಳುವುದರ ಬಗ್ಗೆ ಚಿಂತಿಸಬೇಕು. ಆಗ ಎಲ್ಲಾ ವಿಷಯ ಅಥವಾ ಕೆಲಸ ಕಾರ್ಯಗಳಲ್ಲೂ ನೀವು ಸಂತೋಷ ಮತ್ತು ಮೋಜನ್ನು ಅನುಭವಿಸುವಿರಿ. ಇದಕ್ಕಾಗಿ ನಿಮಗೆ ಅತ್ಯುತ್ತಮ ಸಮಯ ಇದು ಎಂದು ಸಲಹೆ ನೀಡಲಾಗುವುದು.

ಮಕರ ಹಿಂದೆಂದು ಕಾಣದಂತಹ ದೃಢತೆಯನ್ನು ಪಡೆದುಕೊಳ್ಳುವಿರಿ

ಮಕರ ಹಿಂದೆಂದು ಕಾಣದಂತಹ ದೃಢತೆಯನ್ನು ಪಡೆದುಕೊಳ್ಳುವಿರಿ

ಒಂದು ಮರದ ತುಂಡನ್ನು ಕೆತ್ತಿದಷ್ಟು ಸುಂದರ ಕಲಾಕೃತಿಯನ್ನು ಪಡೆದುಕೊಳ್ಳುವುದು. ಜೊತೆಗೆ ಸುಂದರವಾದ ಮೂರ್ತಿಯಾಗಿನಿಲ್ಲುವುದು. ಅದು ತನ್ನ ಮೊದಲ ಸ್ಥಿತಿಯಲ್ಲಿ ಇರುವಾಗ ಯಾಗುದೇ ಕಲೆ ಅಥವಾ ವಿಷಯವನ್ನು ಪ್ರತಿಬಿಂಬಿಸದೆ ಇರುವಂತಹ ವಸ್ತುವಾಗಿರುತ್ತದೆ. ಹಾಗಾಗಿ ಆ ಸಮಯದಲ್ಲಿ ಮರದ ತುಂಡು ಅಷ್ಟಾಗಿ ಕೀರ್ತಿ ಅಥವಾ ಶ್ರೇಷ್ಠತೆ ಪಡೆದು ಕೊಂಡಿರುವುದಿಲ್ಲ. ಆದರೆ ಅದೇ ಮರದ ತುಂಡಿಗೆ ಶಿಲ್ಪಿಯು ಸುಂದರವಾದ ಚಿತ್ರಣ ಹಾಗೂ ಕೆತ್ತನೆಯನ್ನು ನೀಡಿದಾಗ ಮೊದಲಿಗಿಂತಲೂ ಹೆಚ್ಚು ಆಕರ್ಷಣೆ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಳ್ಳುವುದು. ಅಂತೆಯೇ ನಿಮ್ಮ ಸ್ಥಿತಿಯೂ ಸಹ ಈ ಉದಾಹರಣೆಗೆ ಸಾಕ್ಷಿಯಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Most Read:2019 ಹೊಸ ವರ್ಷದಲ್ಲಿ ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ ತರಲಿದೆ?

ಮಕರ

ಮಕರ

2019ರ ಹೊಸ ವರ್ಷದಲ್ಲಿ ಕಾಣಿಸಿಕೊಳ್ಳುತ್ತಿರುವ ಭಾಗಶಃ ಸೂರ್ಯಗ್ರಹಣವು ಮಕರ ರಾಶಿಯ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ ಎನ್ನಲಾಗುವುದು. ಮಕರ ರಾಶೀಯ ಮೇಲೆ ಗ್ರಹಣ ಗೋಚರವಾಗುತ್ತಿರುವುದರಿಂದ ಇತರ ರಾಶಿಚಕ್ರಗಳಿಗೆ ಉಂಟಾಗುವ ಪ್ರಭಾವಗಳಿಗಿಂತ ಹೆಚ್ಚಿನ ಪ್ರಭಾವ ಮಕರ ರಾಶಿಯ ಮೇಲೆ ಉಂಟಾಗುವುದು. ಹಾಗಾಗಿ ಮಕರ ರಾಶಿಯ ವ್ಯಕ್ತಿಗಳ ದೈನಂದಿನ ಜೀವನ ಹಾಗೂ ಭವಿಷ್ಯದ ಮೇಲೆ ಸಾಕಷ್ಟು ಬದಲಾವಣೆಗಳು ಉಂಟಾಗಬಹುದು. ಅದು ಧನಾತ್ಮಕ ಹಾಗೂ ಋಣಾತ್ಮಕ ರೀತಿಯಲ್ಲಿ ಉಂಟಾಗಬಹುದು. ಅವುಗಳನ್ನು ಅನುಭವಿಸಿಯೇ ಮುಂದೆ ಸಾಗಬೇಕಾಗುವುದು ಎಂದು ಹೇಳಲಾಗುವುದು.

ಮಕರ

ಮಕರ

ಗ್ರಹಣದ ಪ್ರಭಾವ ಮಕರ ರಾಶಿಯವರ ಮೇಲೆ ಕೊಂಚ ನಾಟಕೀಯ ಪ್ರಭಾವವನ್ನು ಬೀರುವುದು ಎನ್ನಲಾಗುವುದು. ಅಂದರೆ ನೀವು ಕೈಗೊಳ್ಳುವ ಕೆಲಸ ಕಾರ್ಯಗಳು ಅಥವಾ ಯೋಜನೆಗಳು ಯಾವುದೇ ಇದ್ದರೂ ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಹಾಗೂ ಕಷ್ಟವನ್ನು ನೀಡಬಹುದು. ಇದನ್ನು ಬಗೆಹರಿಸಲು ನೀವು ನಿಮ್ಮದೇ ಆದ ಚಿಂತನೆ ಹಾಗೂ ಪರಿಶ್ರಮವನ್ನು ವಿನಿಯೋಗಿಸುವಿರಿ. ಇದರ ಫಲವಾಗಿ ನಿಮ್ಮಲ್ಲಿ ಒಂದು ಬಗೆಯ ದೃಢತೆಯನ್ನು ಕಂಡುಕೊಳ್ಳುವಿರಿ. ವಿಫಲತೆಯಲ್ಲಿ ಕಂಡುಕೊಂಡ ದೃಢತೆ ಹಾಗೂ ವಿಶ್ವಾಸವು ನಿಮ್ಮನ್ನು ನಿಧಾನವಾಗಿ ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಮಾಡುವುದು. ಅಂತ್ಯದಲ್ಲಿ ಸಂತೋಷ ಹಾಗೂ ಸಂತೃಪ್ತ ಭಾವನೆಯನ್ನು ಪಡೆದುಕೊಳ್ಳುವಿರಿ. ಇದು ನಿಮಗೆ ಒಂದು ಬಗೆಯ ಸಂತಸದ ಜೀವನ ಹಾಗೂ ದೃಢತೆಯ ತೃಪ್ತಿಯನ್ನು ನೀಡುವುದು. ವರ್ಷದ ಆರಂಭ ಕೊಂಚ ಜಟಿಲ ಎನಿಸಬಹುದು. ಆದರೆ ಪ್ರತಿಫಲವು ಸಕಾರಾತ್ಮಕ ರೀತಿಯಲ್ಲಿ ನಿಮ್ಮನ್ನು ಸೇರುವುದು.

English summary

These Zodiac Signs Will Have The Best Solar Eclipse In 2019

As per the Astrology These Zodiac Signs Will Have The Best Solar Eclipse In Capricorn 2019
X
Desktop Bottom Promotion