For Quick Alerts
ALLOW NOTIFICATIONS  
For Daily Alerts

ಮಹಿಳಾ ಶೌಚಾಲಯದ ಗೋಡೆಯಲ್ಲಿ ಪುರುಷನ ಶವ!

|

ಅದೊಂದು ದೊಡ್ಡ ಮಾಲ್. ಇದ್ದಕಿದ್ದಂತೆ ಅಲ್ಲಿನ ಮಹಿಳಾ ಶೌಚಾಲಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇದು ಸಾಮಾನ್ಯವಾಗಿ ಬ್ಲಾಕ್ ಆಗಿರುವ ಸಮಸ್ಯೆ ಎಂದು ಹೆಚ್ಚಿನವರು ಭಾವಿಸಿದ್ದರು. ಕಾಲ್ಗರಿ ಶಾಪಿಂಗ್ ಮಾಲ್ ನ ನಾಲ್ಕನೇ ಮಹಡಿಯಲ್ಲಿ ಇದ್ದ ಶೌಚಾಲಯದಲ್ಲಿ ಫ್ಲಶ್ ಮಾಡಲು ಆಗುತ್ತಿರಲಿಲ್ಲ. ಇದಕ್ಕಾಗಿ ಮಾಲ್ ನ ನಿರ್ವಹಣಾ ಉದ್ಯೋಗಿಯನ್ನು ಕರೆಸಲಾಯಿತು. ಶೌಚಾಲಯದಲ್ಲಿರುವ ಹಿಂಬದಿಯ ಗೋಡೆಯಲ್ಲಿ ಒಂದು ಸೆನ್ಸರ್ ನ್ನು ಅಳವಡಿಸಲಾಗಿದೆ. ಇದರಲ್ಲಿ ಯಾರ ಚಲನೆ ಕಾಣಿಸಿಕೊಂಡರೂ ಅದು ಫ್ಲಶ್ ಆಗುವುದು ಎಂದು ಕೆನಡಾದ ಮಾಧ್ಯಮಗಳಿಗೆ ಕಾಲ್ಗರಿ ಪೊಲೀಸ್ಅಧಿಕಾರಿಯಾಗಿರುವ ಎಮ್ಮಾ ಪೂಲೆ ತಿಳಿಸಿದ್ದಾರೆ.

ಟಾಯ್ಲೆಟ್ ಹೊರಗಡೆಯ ಗೋಡೆಯಲ್ಲಿ ಶವ!

ಟಾಯ್ಲೆಟ್ ಹೊರಗಡೆಯ ಗೋಡೆಯಲ್ಲಿ ಶವ!

ನಿರ್ವಹಣಾ ಸಿಬ್ಬಂದಿಯು ಪ್ಯಾನೆಲ್‌ನ್ನು ತೆಗೆದ ವೇಳೆ ಅವರಿಗೆ ದೊಡ್ಡ ಮಟ್ಟದ ಅಚ್ಚರಿಯು ಕಾದಿತ್ತು. ಯಾಕೆಂದರೆ ಟಾಯ್ಲೆಟ್ ಹೊರಗಡೆಯ ಗೋಡೆಯಲ್ಲಿ ಒಂದು ಶವ ಕಾಣಿಸಿಕೊಂಡಿತು. ಸುಮಾರು 9.30ರ ವೇಳೆಗೆ ಪೊಲೀಸರಿಗೆ ಕರೆ ಹೋಯಿತು. ಅದು ಸುಮಾರು 140 ಅಂಗಡಿಗಳನ್ನು ಹೊಂದಿದ್ದಂತಹ ದೊಡ್ಡ ಮಟ್ಟದ ಐಷಾರಾಮಿ ಮಾಲ್. ಫುಡ್ ಕೋರ್ಟ್ ನ ಮೂಲೆಯಲ್ಲಿ ಜನರು ಮತ್ತು ಅಧಿಕಾರಿಗಳು ಶೌಚಾಲಯವನ್ನು ಸರಿಪಡಿಸಿದರು. ಈ ವೇಳೆ ಪೊಲೀಸರು ಪ್ರವೇಶದ್ವಾರವನ್ನು ಹಳದಿ ಟೇಪ್ ನಿಂದ ಬಂದ್ ಮಾಡಿದರು. ಪೊಲೀಸರಿಗೆ ಪುರುಷನೊಬ್ಬನ ಶವವು ಅಲ್ಲಿ ಕಾಣಿಸಿಕೊಂಡಿತು. ಇದನ್ನು ಹೊರತರುತ್ತಿರುವಂತೆ ಅಲ್ಲಿ ಜನರು ಸೇರಿದ್ದರು.

ಪೊಲೀಸರಿಗೆ ಶವದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ

ಪೊಲೀಸರಿಗೆ ಶವದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ

ಈ ವ್ಯಕ್ತಿ ಯಾರು ಎನ್ನುವ ಬಗ್ಗೆ ಇನ್ನು ಗೊಂದಲಗಳು ಇತ್ತು ಮತ್ತು ಆತ ಸತ್ತಿರುವುದು ಹೇಗೆ ಎನ್ನುವುದು ಕೂಡ ಒಂದು ರಹಸ್ಯವಾಗಿತ್ತು. ಪೊಲೀಸರಿಗೆ ಶವದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ ಕೊಲೆಯಾಗಿರುವ ಸಾಧ್ಯತೆಯನ್ನು ಅವರು ಅಲ್ಲಗಳೆದಿದ್ದಾರೆ. ಈ ವ್ಯಕ್ತಿಯು ಹಾಗಾದರೆ ಮಹಿಳೆಯರ

ಶೌಚಾಲಯದ ಗೋಡೆಯ ಒಳಗಡೆ ಹೇಗೆ ಹೋದ ಮತ್ತು ಅಲ್ಲಿ ಆತ ಎಷ್ಟು ಸಮಯದಿಂದ ಇದ್ದ ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು.

Most Read:ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!

ಮಹಿಳೆಯರ ಶೌಚಾಲಯದ ಗೋಡೆಯಲ್ಲಿ ಸಿಲುಕಿಕೊಂಡಿರಬಹುದು

ಮಹಿಳೆಯರ ಶೌಚಾಲಯದ ಗೋಡೆಯಲ್ಲಿ ಸಿಲುಕಿಕೊಂಡಿರಬಹುದು

ಆ ವ್ಯಕ್ತಿಯು ಮೇಲಿನಿಂದ ಬಿದ್ದಿರಬಹುದು ಮತ್ತು ಮಹಿಳೆಯರ ಶೌಚಾಲಯದ ಗೋಡೆಯಲ್ಲಿ ಸಿಲುಕಿಕೊಂಡಿರಬಹುದು ಎಂದು ಪೊಲೀಸರ ವಕ್ತಾರೆಯಾದ ಪೂಲೆ ತಿಳಿಸಿದ್ದಾರೆ. ಆತ ಮೇಲಿನಿಂದಲೇ ಬಿದ್ದಿರುವುದು ಈಗ ನಾವು ಕಂಡುಕೊಂಡಿರುವ ತರ್ಕ ಎಂದು ಅವರು ತಿಳಿಸಿದ್ದಾರೆ.ಬುಧವಾರ ಪೊಲೀಸರು ಈ ವಿಚಿತ್ರ ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ಬಹಿರಂಗ ಮಾಡಿದರು. ಪೊಲೀಸರ ಹೇಳಿಕೆ ಪ್ರಕಾರ ಈ ಸಾವು ಆಕಸ್ಮಿಕವಾಗಿತ್ತು. ಶುಕ್ರವಾರ ರಾತ್ರಿ ವೇಳೆ 20ರ ಹರೆಯದ ವ್ಯಕ್ತಿಯೊಬ್ಬ ಮಹಿಳೆಯರ ಶೌಚಾಲಯದೊಳಗಡೆ ಹೋಗಿದ್ದ. ಆ ವೇಳೆ ಯಾರೂ ಕೂಡ ಅಲ್ಲಿ ಇರಲಿಲ್ಲ.ಇದರ ಬಳಿಕ ಆ ವ್ಯಕ್ತಿಯು ಶೌಚಾಲಯದ ಹಿಂದಿನಿಂದ ಇರುವಂತಹ ಸುಮಾರು ಏಳು ಅಡಿ ಎತ್ತರದ ಗೋಡೆ ಮೇಲೆ ಏರಿದ್ದಾನೆ. ಈ ಗೋಡೆಯಲ್ಲಿ ಕೆಲವೊಂದು ಸಾಮಗ್ರಿಗಳನ್ನು ಬಚ್ಚಿಡಲು ಬಳಸಲಾಗುತ್ತದೆ.

ಉಸಿರುಗಟ್ಟಿ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ

ಉಸಿರುಗಟ್ಟಿ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ

ಇದು ಮೇಲ್ಛಾವಣಿಗೆ ಸಂಪರ್ಕ ಹೊಂದಿಲ್ಲ. ಗೋಡೆಯ ಮೇಲ್ಭಾಗದಲ್ಲಿ ಇದ್ದ ವೆಂಟ್ ಕವರ್ ನ್ನು ತೆಗೆದ ಮತ್ತು ಅದರ ಮೂಲಕವಾಗಿ ಆತ ಗೋಡೆಗೆ ಹತ್ತಿದ. ಈ ವೇಳೆ ಆತ ಗೋಡೆಯ ಒಳಗಡೆ ಸಿಲುಕಿಕೊಂಡು ಉಸಿರುಗಟ್ಟಿ ಸತ್ತಿರಬಹುದು ಎಂದು ಕಾಲ್ಗರಿ ಪೊಲೀಸರು ತಿಳಿಸಿದ್ದಾರೆ. ಗೋಡೆಯ ಒಳಗಡೆ ಹೋಗುವ ವ್ಯಕ್ತಿ ಉದ್ದೇಶ ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲವೆಂದುಪೊಲೀಸರು ಹೇಳಿದ್ದಾರೆ. ದೇಹವನ್ನು ನೋಡಿರುವ ಉದ್ಯೋಗಿಗಳಿಗೆ ಮಾಲ್ ಕೌನ್ಸಿಲಿಂಗ್ ಮಾಡಿಸುತ್ತಲಿದೆ ಎಂದು ಶಾಪಿಂಗ್ ಮಾಲ್ ನ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶವ ನೋಡಿದ ವ್ಯಕ್ತಿಯು ಆಘಾತದಿಂದ ಚೇತರಿಸಿಕೊಳ್ಳಲು ಸಮಯ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Most Read:ಈತ ಇದುವರೆಗೆ ತನ್ನ ಶಿಶ್ನವನ್ನು ಸ್ವಚ್ಛ ಮಾಡಿಯೇ ಇಲ್ಲವಂತೆ! ಅಲ್ಲದೆ 40 ಹುಡುಗಿಯರ ಜತೆಗೆ ಹಾಸಿಗೆ ಹಂಚಿಕೊಂಡಿದ್ದಾನೆ

ಫುಡ್ ಕೋರ್ಟ್ ನಲ್ಲಿ ಬಂದಿದ್ದ ಜನರು

ಫುಡ್ ಕೋರ್ಟ್ ನಲ್ಲಿ ಬಂದಿದ್ದ ಜನರು

ಫುಡ್ ಕೋರ್ಟ್ ನಲ್ಲಿ ಬಂದಿದ್ದ ಜನರು ಶವವನ್ನು ನೋಡಿದ ಬಳಿಕ ಅಲ್ಲಿ ಹೆಚ್ಚಿನ ಜನರು ಕಾಣಿಸಲಿಲ್ಲ. ಸಾಮಾನ್ಯ ಸೋಮವಾರದಂತೆ ಅಲ್ಲಿ ಜನರು ಇರಲಿಲ್ಲ. ನಾನು ಉಪಾಹಾರ ಮಾಡಲೆಂದು ಅಲ್ಲಿಗೆ ತೆರಳಿದ್ದೆ ಎಂದು ಟೆಡ್ ಪೆಟ್ರೊವ್ ತಿಳಿಸಿದ್ದಾರೆ. ಆದರೆ ಅವರು ಪುರುಷರ ಶೌಚಾಲಯವನ್ನು ಉಪಯೋಗಿಸುತ್ತಿದ್ದ ವೇಳೆ ಅಧಿಕಾರಿಗಳು ಎರಡು ಶೌಚಾಲಯವನ್ನು ಹುಡುಕಾಟಕ್ಕಾಗಿ ಮುಕ್ತಗೊಳಿಸಿದರು. ನಾನು ಅಲ್ಲಿ ಕೆಲವು ಜನರನ್ನು ಭೇಟಿಯಾಗಲು ಹೋಗಿದ್ದೆ. ಆದರೆ ಅಲ್ಲಿ ಇದೆಲ್ಲವೂ ನಡೆಯಿತು. ಇದರ ಬಳಿಕ ನಾನು ಅವರನ್ನು ಭೇಟಿಯಾಗಲು ಆಗಲಿಲ್ಲ ಎಂದು ಅವರು ಹೇಳಿದರು.

English summary

Man who died in women's washroom!

It seemed just like any other maintenance problem at first. In a downtown Calgary shopping mall Monday morning, a toilet in the fourth-floor women’s bathroom wouldn’t flush. A mall employee was called to fix it.Attached to the wall behind the toilet was a panel with sensors that automatically flush when someone moves, Emma Poole, a spokes woman for the Calgary Police Service, told the Canadian Press. When the maintenance worker removed that \panel, he found a gruesome sight.
X
Desktop Bottom Promotion