Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!
ಪ್ರೇಮವು ಕೆಲವೊಮ್ಮೆ ಎರಡು ಬದಿಯಿಂದಲೂ ಇದ್ದರೆ ಮಾತ್ರ ಅದು ಮುಂದೆ ಗಟ್ಟಿಯಾದ ಸಂಬಂಧದಲ್ಲಿ ಬೆಳೆಯಲು ಸಾಧ್ಯ. ಆದರೆ ಕೆಲವೊಮ್ಮೆ ಪ್ರೇಮವು ಮಧ್ಯ ಹಾದಿಯಲ್ಲೇ ಕಡಿದು ಹೋಗುವುದು. ಇಂತಹ ಸಂದರ್ಭದಲ್ಲಿ ನೋವು ಎರಡು ಜನರಿಗೂ ಆಗುವುದು. ಹುಡುಗ ಹಾಗೂ ಹುಡುಗಿ ಸಮಾನ ನೋವನ್ನು ಉಣ್ಣುವರು. ಆದರೆ ಕೆಲವು ಮಂದಿ ಈ ನೋವನ್ನು ಮರೆತು ಹೊಸ ಜೀವನ ಆರಂಭಿಸುವರು. ಆದರೆ ಇನ್ನು ಕೆಲವು ಮಂದಿ ಇದೇ ನೋವನ್ನು ಕಟ್ಟಿಕೊಂಡು ಮುಂದೆ ಅದನ್ನೇ ಹಗೆತನದಲ್ಲಿ ಬದಲಾಯಿಸಿಕೊಳ್ಳುವರು.
ಅದರಲ್ಲೂ ಪ್ರಿಯತಮೆಯು ತುಂಬಾ ಸೌಂದರ್ಯವತಿಯಾಗಿದ್ದರೆ ಆಗ ಹುಡುಗರಲ್ಲಿ ಮತ್ತಷ್ಟು ನೋವು ಕಾಡುವುದು. ಇಂತಹ ಸಂದರ್ಭದಲ್ಲಿ ಕೆಲವರು ದ್ವೇಷ ಸಾಧಿಸಲು ಪ್ರಯತ್ನಿಸುವರು. ಇಂತಹ ಘಟನೆಯ ಬಗ್ಗೆ ನೀವು ಲೇಖನದಲ್ಲಿ ಓದುತ್ತಾ ಸಾಗಿ....ಅನಿಕ್ ಎಂಬ ಯುವಕ ಕೂಡ ಇದೇ ರೀತಿಯಾಗಿ ಪ್ರೇಮದಲ್ಲಿ ಮುಳುಗಿದ್ದ. ಆದರೆ ಒಂದು ದಿನ ಬೆಳಗ್ಗೆ ಆತನಿಗೆ ತನ್ನ ಪ್ರಿಯತಮೆಯಿಂದ ಸಂಬಂಧ ಕಡಿದುಕೊಂಡ ಬಗ್ಗೆ ಸಂದೇಶ ಬರುತ್ತದೆ. ಇದರ ಬಗ್ಗೆ ನೀವು ಇನ್ನಷ್ಟು ಓದಿಕೊಳ್ಳಿ.

ಸಂಬಂಧ ಕಡಿದುಕೊಂಡ ಸಂದೇಶ ಬಂತು…
ಆ ಹುಡುಗಿ ಸಮಿಯಾ ಎಂಬಾಕೆ ಒಂದು ದಿನ ಬೆಳಗ್ಗೆ ಅನಿಕ್ ಗೆ ಮೆಸೇಜ್ ಮಾಡಿ, ತಮ್ಮಿಬ್ಬರ ಸಂಬಂಧವನ್ನು ಇಲ್ಲಿಗೆ ಮುಗಿಸುವುದಾಗಿ ಹೇಳುತ್ತಾಳೆ. ಸಂಬಂಧದಲ್ಲಿ ಮುಂದುವರಿಯುವಂತೆ ಅನಿಕ್ ತನ್ನ ಪ್ರಿಯತಮೆಯಲ್ಲಿ ಮನವೊಲಿಸಲು ಕಠಿಣ ಪ್ರಯತ್ನ ಮಾಡುತ್ತಾನೆ. ಆದರೆ ಸಮಿಯಾ ಈ ಸಂಬಂಧ ಮುರಿಯುವ ಬಗ್ಗೆ ದೃಢವಾಗಿದ್ದಳು.

ವಿದೇಶಿ ಹುಡುಗನೊಂದಿಗೆ ಮದುವೆ
ಸಮಿಯಾ ಶ್ರೀಮಂತನಾಗಿರುವ ಅನಿವಾಸಿ ಭಾರತೀಯನ ಜತೆಗೆ ಮದುವೆಯಾಗುತ್ತಿದ್ದಾಳೆ ಮತ್ತು ಮುಂದಿನ ತಿಂಗಳು ಅವಳ ಮದುವೆಯು ನಡೆಯಲಿದೆ ಎಂದು ಆಕೆಯ ಗೆಳತಿಯರು ಅನಿಕ್ ಗೆ ತಿಳಿಸುತ್ತಾರೆ. ಇದರಿಂದ ಅನಿಕ್ ಮತ್ತಷ್ಟು ನೋವಿಗೊಳ ಗಾಗುವನು.

ಪಾಠ ಕಲಿಸಲು ಆತ ಬಯಸಿದ
ತನ್ನ ಜತೆಗೆ ಸಮಿಯಾ ಹಂಚಿಕೊಂಡಿದ್ದ ಕೆಲವೊಂದು ಅನ್ಯೋನ್ಯತೆಯ ಮೆಸೇಜ್ ಗಳನ್ನು ಆತ ಎಲ್ಲರೊಂದಿಗೆ ಹಂಚಿಕೊಂಡು ಆಕೆಯ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಲು ಅನಿಕ್ ಬಯಸಿದ ಮತ್ತು ಆತ ಈ ಮೆಸೇಜ್ ಗಳನ್ನು ಆಕೆಯ ಸಂಬಂಧಿಕರ ಜತೆಗೆ ಹಂಚಿಕೊಳ್ಳಲು ನಿರ್ಧರಿಸಿದ.

ಆಕೆಯ ಮದುವೆಯಲ್ಲಿ ಊಟ ಮಾಡಿದ…
ಆತ ತನ್ನ ಪ್ರಿಯತಮೆಯ ಮದುವೆಗೆ ಹೋಗಿ ಅಲ್ಲಿ ಭರ್ಜರಿಯಾಗಿ ಊಟ ಮಾಡಿ ಮತ್ತು ಮದುವೆಯಲ್ಲಿ ಸೆಲ್ಫಿ ಕೂಡ ತೆಗೆಸಿಕೊಂಡ. ತನ್ನ ಫೋಟೊ ತೆಗೆಸಿಕೊಂಡ ಬಳಿಕ ಆತ ಮದುವೆ ಹಾಲ್ ನಲ್ಲಿ ತಿರುಗಾಡಿ ಸಮಿಯಾ ತನಗೆ ಕಳುಹಿಸಿದ್ದ ಕೆಲವೊಂದು ಅನ್ಯೋನ್ಯತೆಯ ಮೆಸೇಜ್ ಗಳಿದ್ದ ಭಿತ್ತಿಪತ್ರವನ್ನು ಅಲ್ಲಿದ್ದವರಿಗೆ ಹಂಚಿದ್ದ.

ಆತನಿಗೆ ತುಂಬಾ ಖುಷಿ ನೀಡಿತು
ಆತ ಮದುವೆ ಹಾಲ್ ನಿಂದ ಗರ್ವದಿಂದ ಹೊರನಡೆದ ಮತ್ತು ಆ ದಿನವನ್ನು ನೆನೆಸಿಕೊಂಡ ವೇಳೆ ಆತನಿಗೆ ಈಗಲೂ ತುಂಬಾ ಖುಷಿಯಾಗುತ್ತಿದೆ. ಸಮಿಯಾಗೆ ಪತಿಯಿಂದ ಯಾವ ರೀತಿಯ ಪ್ರತಿಕ್ರಿಯೆ ಬಂದಿರಬಹುದು ಮತ್ತು ಅವರ ಸಂಬಂಧ ಹೇಗಿರಬಹುದು ಎಂದು ನೀವು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.



Click it and Unblock the Notifications
