For Quick Alerts
ALLOW NOTIFICATIONS  
For Daily Alerts

ಮೃಗಾಲಯದ ಈ ಫೋಟೋಗಳು ನಿಮ್ಮನ್ನು ಬೆಚ್ಚಿ ಬೀಳಿಸಬಹುದು!

|

ಮೃಗಾಲಯದಲ್ಲಿ ಹೆಚ್ಚಾಗಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ತಾವು ಯಾವ ರೀತಿಯಲ್ಲಿ ಹಿಂಸೆ ನೀಡುತ್ತಿದ್ದೇವೆ ಎನ್ನುವುದು ತಿಳಿಯಬಾರದು ಎನ್ನುವ ಕಾರಣಕ್ಕಾಗಿ ಇವುಗಳನ್ನು ಗೌಪ್ಯವಾಗಿಡಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅತಿಯಾದ ವೇಳೆ ಅಲ್ಲಿನ ಜನರೇ ಅಂತಹ ಕೃತ್ಯಗಳ ಫೋಟೊ ಅಥವಾ ವಿಡಿಯೋ ಮಾಡಿಕೊಂಡು ಹೊರಜಗತ್ತಿಗೆ ಅಲ್ಲಿ ನಡೆಯುತ್ತಿರುವ ಬಗ್ಗೆ ತಿಳಿಸುವರು.

ನಾವು ಇದನ್ನು ನೋಡಿದಾಗ ಖಂಡಿತವಾಗಿಯೂ ಆಘಾತಕ್ಕೆ ಒಳಗಾಗುತ್ತೇವೆ. ಕೆಲವೊಂದು ಫೋಟೊಗಳನ್ನು ಮೃಗಾಲಯಕ್ಕೆ ಬರುವಂತಹ ಜನರು ನೋಡಬಾರದು ಎಂದು ಅಲ್ಲಿನ ಯಜಮಾನ ಬಯಸುತ್ತಿರಬಹುದು. ಅಂತಹ ಮಟ್ಟದಲ್ಲಿ ಕೆಲವು ಫೋಟೊಗಳು ಇವೆ. ಈ ಫೋಟೊಗಳನ್ನು ನೋಡಿದ ಬಳಿಕ ಮೃಗಾಯಲದ ಬಗ್ಗೆ ನಿಮಗಿರುವಂತಹ ದೃಷ್ಟಿಕೋನವೇ ಬದಲಾಗುವುದು. ಈ ಕ್ರೂರತೆಯನ್ನು ಬೆಂಬಲಿಸುವ ಮೊದಲು ನೀವು ಎರಡು ಸಲ ಆಲೋಚನೆ ಮಾಡಿ. ಮೃಗಾಲಯದಲ್ಲಿ ನಡೆಯುವಂತಹ ಈ ನಿಜ ಘಟನೆಗಳ ಫೋಟೊವನ್ನು ನೀವು ನೋಡಲೇಬೇಕು.

ಜನರನ್ನು ಮೂರ್ಖರನ್ನಾಗಿಸಲು ಪ್ರಾಣಿಗಳಿಗೆ ಬಣ್ಣ ಬಳಿಯಲಾಗುತ್ತದೆ!

ಜನರನ್ನು ಮೂರ್ಖರನ್ನಾಗಿಸಲು ಪ್ರಾಣಿಗಳಿಗೆ ಬಣ್ಣ ಬಳಿಯಲಾಗುತ್ತದೆ!

ಒಂದು ಪ್ರಾಣಿಯನ್ನು ಮತ್ತೊಂದು ಪ್ರಾಣಿಯಂತೆ ಕಾಣುವಂತೆ ಮಾಡಲು ಕೆಲವೊಂದು ಸಲ ಅವುಗಳಿಗೆ ಬಣ್ಣ ಬಳಿಯಲಾಗುತ್ತದೆ. ಈ ಚಿತ್ರವನ್ನು ತುಂಬಾ ಏಕಾಗ್ರತೆಯಿಂದ ನೋಡಿದರೆ ಇಲ್ಲಿ ನಿಮಗೆ ಕತ್ತೆಯೊಂದಕ್ಕೆ ಜಿಬ್ರಾದ ಬಣ್ಣ ಬಳಿದಿರುವುದು ಕಂಡುಬರುವುದು. ಈ ರೀತಿಯ ಮಾರಕವಾದ ರಾಸಾಯನಿಕವಿರುವ ಬಣ್ಣ ಬಳಿಯುವ ಕಾರಣದಿಂದ ಪ್ರಾಣಿಗಳಿಗೆ ದೊಡ್ಡ ಹಿಂಸೆ ಆಗುತ್ತದೆ ಎಂದು ಮೃಗಾಲಯದ ಯಜಮಾನನಿಗೆ ತಿಳಿದಿಲ್ಲವೇ? ಅವರೆಲ್ಲರೂ ವೀಕ್ಷಕರ ಲೆಕ್ಕ ಹಾಕುವುದರಲ್ಲಿ ತೊಡಗಿದ್ದಾರೆ.

ಪ್ರಾಣಿಯ ಹುಡುಕಿಕೊಡಿ!

ಪ್ರಾಣಿಯ ಹುಡುಕಿಕೊಡಿ!

ಇದು ನಿಮಗೆ ಮಕ್ಕಳ ಪುಟದಲ್ಲಿ ಬರುವಂತಹ ಸ್ಪರ್ಧೆ ಎಂದು ಅನಿಸಬಹುದು. ಆದೆ ಮುಗ್ದ ಪ್ರಾಣಿಗಳ ಪಂಜರದೊಳಗಡೆ ಅಲ್ಲಿಗೆ ಭೇಟಿ ನೀಡುವ ವೀಕ್ಷಕರು ಬಾಟಲಿ ಮತ್ತು ಇತರ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಎಸೆಯುತ್ತಾರೆ. ಮೃಗಾಲಯದ ಸ್ವಚ್ಛತಾ ಕಾರ್ಮಿಕರು ಅಲ್ಲಿಗೆ ಬಂದಾಗ ಅವರಿಗೆ ಪ್ರಾಣಿಗಳನ್ನು ಹುಡುಕಲು ತುಂಬಾ ಕಷ್ಟವಾಗುತ್ತದೆ.

Most Read: ಭೂತ-ಪ್ರೇತಗಳಂತೆ ಕಾಣುವ ಜೊಂಬಿ ಗೊಂಬೆ ಜತೆಗೆ ಮದುವೆಯಾದ ಮಹಿಳೆ!!

ವಯಸ್ಸಾದ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ!

ವಯಸ್ಸಾದ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ!

ಪ್ರಾಣಿಗಳಿಗೆ ಹೆಚ್ಚು ವಯಸ್ಸಾದಾಗ ಮತ್ತು ಯಾವುದೇ ಉಪಯೋಗಕ್ಕೆ ಬರುವುದಿಲ್ಲವೆಂದು ತಿಳಿದಾಗ ಮತ್ತು ಅವುಗಳು ಇನ್ನು ಮೃಗಾಲಯದ ಯಜಮಾನನಿಗೆ ಹಣ ಮಾಡಿಕೊಡುವುದಿಲ್ಲವೆಂದು ತಿಳಿದಾಗ ಅವುಗಳನ್ನು ಹತ್ಯೆ ಮಾಡಲಾಗುತ್ತದೆ ಮತ್ತು ಅವುಗಳ ಮಾಂಸವನ್ನು ಬೇರೆ ಪ್ರಾಣಿಗಳಿಗೆ ಹಾಕಲಾಗುತ್ತದೆ.

ಸ್ವಚ್ಛಗೊಳಿಸುವ ವೇಳೆ

ಸ್ವಚ್ಛಗೊಳಿಸುವ ವೇಳೆ

ಸಮುದ್ರ ಪ್ರಾಣಿಗಳು, ಮೀನುಗಳು ಮತ್ತು ಡಾಲ್ಫಿನ್ ಗಳನ್ನು ಸ್ವಚ್ಛತೆ ಮಾಡುವುದು ತುಂಬಾ ಕಠಿಣ ಕೆಲಸವಾಗಿರುವುದು. ಯಾಕೆಂದರೆ ಕೊಳದಲ್ಲಿನ ಸಂಪೂರ್ಣ ನೀರನ್ನು ಖಾಲಿ ಮಾಡಿದ ಬಳಿಕ ಸ್ವಚ್ಛ ಮಾಡಬೇಕಾಗುತ್ತದೆ.

Most Read: ಈ ದೇಶಗಳಲ್ಲಿ ಮದುವೆಯಾಗಲು ಪುರುಷರಿಗೆ ಹೆಣ್ಣು ಸಿಗುವುದು ತುಂಬಾ ಕಷ್ಟ!

ಖಿನ್ನತೆ ವಿರೋಧಿ ಔಷಧಿ ನೀಡಲಾಗುವುದು

ಖಿನ್ನತೆ ವಿರೋಧಿ ಔಷಧಿ ನೀಡಲಾಗುವುದು

ಹೆಚ್ಚಿನ ಪ್ರಾಣಿಗಳಿಗೆ ಖಿನ್ನತೆ ವಿರೋಧಿ ಔಷಧಿ ನೀಡಿ ಬೆಳೆಸಲಾಗುತ್ತದೆ. ಇದರ ಪರಿಣಾಮವಾಗಿ ಪ್ರಾಣಿಗಳು ತುಂಬಾ ವಿಚಿತ್ರವಾಗಿ ವರ್ತಿಸುತ್ತವೆ. ಇದರಿಂದ ಕೆಲವೊಂದು ಸಲ ಅವುಗಳಿಗೆ ಹಾನಿಯಾಗುವುದು. ಪ್ರಾಣಿಗಳಿಗೆ ಮಾತು ಬರುತ್ತಲಿದ್ದರೆ ಆಗ ಖಂಡಿತವಾಗಿಯೂ ಅವುಗಳು ತಾವು ಸಹಿಸುತ್ತಿರುವ ಹಿಂಸೆಯನ್ನು ಜನರ ಮುಂದೆ ಹೇಳುತ್ತಿದ್ದರು.

English summary

Disturbing Pictures Of Zoo That Staff Does Not Wish You To See!

Animals living in a zoo are known to be tortured thoroughly. Some of the pictures of what happens with these animals behind the scenes will leave you feeling shocked. These are the images which no zoo owner would like their visitors to see what they actually do with the animals!Disturbing Pics Of Zoo
X
Desktop Bottom Promotion