For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಾಣಿಕ್ಯ ಹರಳು ಧರಿಸಿದರೆ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ

|

ಮಾಣಿಕ್ಯದ ಹರಳು ಅಥವಾ ರೂಬಿ ಎಂದು ಕರೆಯಲಾಗುವ ಈ ನೈಸರ್ಗಿಕ ಪಚ್ಚೆ ಕಲ್ಲು ಅದೃಷ್ಟವನ್ನು ತರಬಲ್ಲ ಪ್ರಮುಖ ಹರಳಾಗಿದೆ. ಸೂರ್ಯನಿಂದ ಪ್ರೇರಣೆಯನ್ನು ಪಡೆಯುವ ಮಾಣಿಕ್ಯವು ಧರಿಸಲು ಶ್ರೇಷ್ಠ ಹರಳಾಗಿದೆ. ಜಗತ್ತಿನ ಪೋಷಕ, ಶಕ್ತಿಯ ಮೂಲ, ಬ್ರಹ್ಮಾಂಡದ ಆತ್ಮನೇ ಆಗಿರುವ ಸೂರ್ಯನ ಎಲ್ಲ ಗುಣಗಳನ್ನು ಮಾಣಿಕ್ಯವು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಹೀಗಾಗಿಯೇ ಇದನ್ನು ಧರಿಸುವುದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ.

ಮಾಣಿಕ್ಯ ಧರಿಸುವುದರಿಂದಾಗುವ ಪ್ರಯೋಜನಗಳು

ಮಾಣಿಕ್ಯ ಧರಿಸುವುದರಿಂದಾಗುವ ಪ್ರಯೋಜನಗಳು

ಹಲವಾರು ಕ್ಷೇತ್ರಗಳಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಸೆಲೆಬ್ರಿಟಿಗಳು ಮಾಣಿಕ್ಯದ ಹರಳನ್ನು ಧರಿಸುವುದನ್ನು ನಾವು ನೋಡಿದ್ದೇವೆ. ಕೆಲವರು ಇದನ್ನು ಶೋಕಿಗಾಗಿ ಧರಿಸಿದರೆ ಇನ್ನು ಕೆಲವರು ಇದರ ಜ್ಯೋತಿರ್ವಿಜ್ಞಾನದ ಪ್ರಯೋಜನಗಳಿಗಾಗಿ ಧರಿಸುತ್ತಾರೆ.

ನಾಯಕತ್ವ ಗುಣ ಬೆಳವಣಿಗೆಗೆ ಸಹಕಾರಿ

ನಾಯಕತ್ವ ಗುಣ ಬೆಳವಣಿಗೆಗೆ ಸಹಕಾರಿ

ಸೂರ್ಯನಿಂದ ಪ್ರೇರಿತವಾದ ಮಾಣಿಕ್ಯವು ಸೂರ್ಯನಂತೆಯೇ ನಾಯಕತ್ವ ಗುಣವನ್ನು ಹೊಂದಿರುತ್ತದೆ. ಹೀಗಾಗಿ ಇದನ್ನು ಧರಿಸುವವರು ಸಹಜವಾಗಿಯೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.

ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ

ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ

ಇದರ ಧಾರಣೆಯಿಂದ ಕೆಲವೊಂದು ಭಯದ ಹಾಗೂ ಆತಂಕದ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ. ಕಷ್ಟದ ಸಂದರ್ಭಗಳಲ್ಲಿ ಬೇಗನೆ ಧೈರ್ಯ ಕಳೆದುಕೊಳ್ಳುವವರು ಹಾಗೂ ತಮ್ಮ ನಿರ್ಣಯಕ್ಕೆ ಯಾರೂ ಬೆಲೆ ಕೊಡುತ್ತಿಲ್ಲ ಎಂದು ಅನಿಸುತ್ತಿರುವವರು ಮಾಣಿಕ್ಯದ ಹರಳು ಧರಿಸಬೇಕು. ನೈಸರ್ಗಿಕ ಆತ್ಮ ಕಾರಕನಾದ ಸೂರ್ಯನ ಕಾಂತಿಯು ದೇಹದೊಳಗೆ ಪ್ರವೇಶಿಸಿ ಆತ್ಮವಿಶ್ವಾಸ ವೃದ್ಧಿಸುತ್ತದೆ.

ಸಂಗಾತಿಯ ಪ್ರೀತಿ ಪಡೆಯಲು ಸಹಕಾರಿ

ಸಂಗಾತಿಯ ಪ್ರೀತಿ ಪಡೆಯಲು ಸಹಕಾರಿ

ಗಾಢ ಕೆಂಪು ವರ್ಣದ ಮಾಣಿಕ್ಯದ ಹರಳು ಗಾಢ ಪ್ರೀತಿಯ ಸಂಕೇತವೂ ಆಗಿದೆ. ಇದನ್ನು ಧರಿಸುವವರ ಮನದಲ್ಲಿ ಸಹಜವಾಗಿಯೇ ಪ್ರೀತಿಯ ಅಲೆಗಳು ಪುಟಿದೇಳುವಂತೆ ಮಾಡುತ್ತದೆ.

ಮಾನಸಿಕ ಏಕಾಗ್ರತೆಗೆ ಬೇಕು ಮಾಣಿಕ್ಯದ ಹರಳು

ಮಾನಸಿಕ ಏಕಾಗ್ರತೆಗೆ ಬೇಕು ಮಾಣಿಕ್ಯದ ಹರಳು

ಮನದಲ್ಲಿನ ಗೊಂದಲಗಳನ್ನು ದೂರ ಮಾಡಿ ಮಾನಸಿಕ ಏಕಾಗ್ರತೆ ಹೆಚ್ಚಿಸಲು ಮಾಣಿಕ್ಯವು ಅತ್ಯಂತ ಶಕ್ತಿಶಾಲಿಯಾದ ಮಾರ್ಗವಾಗಿದೆ. ಚುರುಕುತ, ತೀಕ್ಷ್ಣತೆ ಹೆಚ್ಚಾಗುತ್ತವೆ. ವೈಯಕ್ತಿಕ ಅಥವಾ ವೃತ್ತಿ ಜೀವನದಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸಲು ಏನಾದರೂ ಅಡೆ ತಡೆ ಬರುತ್ತಿದ್ದಲ್ಲಿ ಇಂದೇ ಮಾಣಿಕ್ಯದ ಹರಳು ಧರಿಸಲು ಆರಂಭಿಸಿ ಉತ್ತಮ ಪರಿಣಾಮಗಳನ್ನು ನೀವೇ ನೋಡುವಿರಿ.

ವ್ಯಕ್ತಿತ್ವ ಬೆಳವಣಿಗೆಗೆ ಪೂರಕ

ವ್ಯಕ್ತಿತ್ವ ಬೆಳವಣಿಗೆಗೆ ಪೂರಕ

ಮಾಣಿಕ್ಯವು ತನ್ನಲ್ಲಿರುವ ಶಾಖ ಹಾಗೂ ಪ್ರಖರತೆಯಿಂದ ಇದನ್ನು ಧರಿಸುವವರ ವ್ಯಕ್ತಿತ್ವವು ಬೆಳಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ.

ಖಿನ್ನತೆ ನಿವಾರಕ ರೂಬಿ ಸ್ಟೋನ್

ಖಿನ್ನತೆ ನಿವಾರಕ ರೂಬಿ ಸ್ಟೋನ್

ಮಾನಸಿಕ ಖಿನ್ನತೆಯ ನಿವಾರಿಸಲು ರೂಬಿ ಸಹಕಾರಿಯಾಗಿದ್ದು ಕಣ್ಣಿನ ದೃಷ್ಟಿ ಹಾಗೂ ರಕ್ತ ಪರಿಚಲನೆಯನ್ನು ಉತ್ತಮ ಪಡಿಸಲು ಸಹ ಉಪಯುಕ್ತವಾಗಿದೆ.

ದೈಹಿಕ ಸಾಮರ್ಥ್ಯ ಹೆಚ್ಚಿಸಲು ಮಾಣಿಕ್ಯದ ಹರಳು ಉಪಯುಕ್ತ

ದೈಹಿಕ ಸಾಮರ್ಥ್ಯ ಹೆಚ್ಚಿಸಲು ಮಾಣಿಕ್ಯದ ಹರಳು ಉಪಯುಕ್ತ

ಮಾಣಿಕ್ಯದ ಧಾರಣೆಯಿಂದ ಕೇವಲ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಸದೃಢರಾಗಬಹುದಾಗಿದೆ. ಒಟ್ಟಾರೆಯಾಗಿ ದೇಹ ಸಾಮರ್ಥ್ಯವನ್ನು ಹೆಚ್ಚಿಸಿ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸೂರ್ಯನ ಕೃಪಾಕಟಾಕ್ಷಕ್ಕೆ ಬೇಕು ಮಾಣಿಕ್ಯ

ಸೂರ್ಯನ ಕೃಪಾಕಟಾಕ್ಷಕ್ಕೆ ಬೇಕು ಮಾಣಿಕ್ಯ

ಒಂದು ವೇಳೆ ನಿಮ್ಮ ಗ್ರಹಗತಿಯಲ್ಲಿ ಸೂರ್ಯನ ಪ್ರಭಾವ ಉತ್ತಮವಾಗಿರದಿದ್ದಲ್ಲಿ ಮಾಣಿಕ್ಯದ ಧಾರಣೆಯಿಂದ ಸೂರ್ಯನ ಕೃಪಾಕಟಾಕ್ಷವನ್ನು ಮರಳಿ ಪಡೆಯಬಹುದು. ಇದನ್ನು ಧರಿಸಿದಲ್ಲಿ ಸೂರ್ಯನ ಪ್ರಭಾವ ಹೆಚ್ಚಳಗೊಂಡು ಜೀವನದಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಸಹಾಯಕವಾಗುವುದು.

ಸಂಬಂಧಗಳ ಸುಧಾರಣೆಗೂ ಬೆಸ್ಟ್ ಮಾಣಿಕ್ಯ

ಸಂಬಂಧಗಳ ಸುಧಾರಣೆಗೂ ಬೆಸ್ಟ್ ಮಾಣಿಕ್ಯ

ಒಂದು ವೇಳೆ ನಿಮ್ಮ ಜಾತಕದಲ್ಲಿ ಸೂರ್ಯನು ೨ನೇ ಅಥವಾ ೪ನೇ ಮನೆಯಲ್ಲಿದ್ದರೆ ನೀವು ಕೌಟುಂಬಿಕ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಇಂಥವರು ಮಾಣಿಕ್ಯದ ಹರಳು ಧಾರಣೆ ಮಾಡಿದಲ್ಲಿ ಸಂಬಂಧಗಳು ಉತ್ತಮಗೊಂಡು ನೆಮ್ಮದಿ ಮೂಡಿಸಲು ಸಹಕಾರಿಯಾಗುವುದು.

ಆರೋಗ್ಯ ಸುಧಾರಣೆಗೂ ಉತ್ತಮ ಮಾಣಿಕ್ಯ ಧಾರಣೆ

ಆರೋಗ್ಯ ಸುಧಾರಣೆಗೂ ಉತ್ತಮ ಮಾಣಿಕ್ಯ ಧಾರಣೆ

ಒಂದು ವೇಳೆ ನೀವು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಲ್ಲಿ ತಾಮ್ರದ ಉಂಗುರದಲ್ಲಿ ಮಾಣಿಕ್ಯದ ಹರಳನ್ನು ಧರಿಸುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದಾಗಿದೆ.

ಸೃಜನಶೀಲತೆ ಹೆಚ್ಚಿಸಲು ಬೇಕು ಮಾಣಿಕ್ಯ

ಸೃಜನಶೀಲತೆ ಹೆಚ್ಚಿಸಲು ಬೇಕು ಮಾಣಿಕ್ಯ

ಸೃಜನಾತ್ಮಕ ಕೆಲಸ ಮಾಡುವ ಎಂಜಿನಿಯರಗಳು, ಚಿತ್ರ ನಟರು, ವಿಶ್ವಕರ್ಮರು, ಕಲಾವಿದರು, ಸರಕಾರಿ ಅಧಿಕಾರಿಗಳು, ಶೇರು ಬ್ರೋಕರ್ಸ್, ಬಟ್ಟೆ ಮಾರಾಟಗಾರರು ಅಥವಾ ಇನ್ನಾವುದೇ ಸೃಜನಶೀಲ ಕೆಲಸ ಮಾಡುವವರು ಮಾಣಿಕ್ಯವನ್ನು ಧರಿಸಿದಲ್ಲಿ ಅವರ ವೃತ್ತಿ ಜೀವನ ಉತ್ತುಂಗಕ್ಕೇರಲು ಸಹಕಾರಿಯಾಗುತ್ತದೆ.

ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಮಾಣಿಕ್ಯದ ಹರಳು

ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಮಾಣಿಕ್ಯದ ಹರಳು

ಜಾತಕದಲ್ಲಿ ಸೂರ್ಯನ ದೃಷ್ಟಿ ಬಲಿಷ್ಠವಾಗಿರದ ಕಾರಣ ಹಲವರು ಅಜೀರ್ಣತೆ, ಕಾಮಾಲೆ, ಭೇದಿ, ಬೆನ್ನುನೋವು, ಕಡಿಮೆ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುತ್ತಾರೆ. ಇಂಥವರು ಮಾಣಿಕ್ಯದ ಹರಳನ್ನು ಧರಿಸಲು ಆರಂಭಿಸಿದರೆ ಬೇಗನೆ ಆರೋಗ್ಯವಂತರಾಗಲು ಸಹಕಾರಿಯಾಗುತ್ತದೆ.

English summary

Astrological Benefits Of Wearing Ruby Gemstone

The Ruby gemstone draws inspiration from the Sun. The Sun holds a pivotal position in our culture and traditions. A nurturer, a vital energy provider, the Sun is the soul of our universe. The Ruby gemstone imbibes most of these qualities from the Sun, making it strong and much-revered gemstone by all.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more