For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಜೀವನದಲ್ಲಿ ಎರಡು ಬಗೆಯ ಬದಲಾವಣೆಗಳು ಆಗಲಿದೆಯಂತೆ

|

ಹೊಸತನ ಹಾಗೂ ಬದಲಾವಣೆ ಎನ್ನುವುದು ವ್ಯಕ್ತಿಯ ಜೀವನದಲ್ಲಿ ವಿಶೇಷತೆಯನ್ನು ಮೂಡಿಸುವುದು. ಅಲ್ಲದೆ ವ್ಯಕ್ತಿಯಲ್ಲಿ ಚೈತನ್ಯತೆಯನ್ನು ತುಂಬಿ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಉತ್ಸಾಹವನ್ನು ತೋರುವಂತೆ ಮಾಡುವುದು. ಅಲ್ಲದೆ ವ್ಯಕ್ತಿಯು ವೈಯಕ್ತಿಕವಾಗಿಯೂ ಹೆಚ್ಚು ಕ್ರಿಯಾಶೀಲನಾಗಿ ಇರುವನು. ಜೀವವು ಅನೇಕ ವಿಶೇಷತೆ ಹಾಗೂ ವಿಭಿನ್ನತೆಯಿಂದ ಕೂಡಿದೆ, ಅದನ್ನು ತಾನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವಂತಹ ಮನೋಭಾವವು ವ್ಯಕ್ತಿಯಲ್ಲಿ ಹೆಚ್ಚುವುದು. ಸಕಾರಾತ್ಮಕ ಚಿಂತನೆಗಳು ಹಾಗೂ ನೆಮ್ಮದಿಯ ಸಂಗತಿಗಳು ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ಸಹ ಹೆಚ್ಚಿಸುವುದು.

ಜೀವನದಲ್ಲಿ ಎರಡು ಬಗೆಯ ಬದಲಾವಣೆಗಳು ಆಗಲಿದೆಯಂತೆ

ಜೀವನದಲ್ಲಿ ಎರಡು ಬಗೆಯ ಬದಲಾವಣೆಗಳು ಆಗಲಿದೆಯಂತೆ

ಜೀವನ ಎಂದರೆ ಸಾಮಾನ್ಯವಾಗಿ ದುರಂತಗಳು, ಅದೃಷ್ಟಗಳು, ಸೋಲು, ಗೆಲುವು, ಮೋಸ, ಪ್ರೀತಿ, ಸಹಕಾರ, ವಂಚನೆ, ನಷ್ಟ, ದುಃಖ, ಉದ್ಯೋಗ, ಸಂಸಾರ, ವಿದ್ಯೆ, ಸಾಧನೆ ಹೀಗೆ ವಿವಿಧ ಸಂಗತಿಗಳಿಂದ ಕೂಡಿರುತ್ತದೆ. ಒಂದೇ ಜೀವನಾವಧಿಯಲ್ಲಿ ವ್ಯಕ್ತಿ ಎಲ್ಲವನ್ನು ಹೇಗೆ ಸ್ವೀಕರಿಸುತ್ತಾನೆ? ಯಾವ ಸಂಗತಿಯು ಹೆಚ್ಚು ಅದೃಷ್ಟ ಹಾಗೂ ಸಂತೋಷವನ್ನು ತಂದುಕೊಡುವುದು ಎನ್ನುವುದರ ಆಧಾರದ ಮೇಲೆ ತನ್ನ ಜೀವನದಲ್ಲಿ ಸಾಕ್ಷಾತ್ಕಾರ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ. ಜೀವನದಲ್ಲಿ ಹೆಚ್ಚಿನ ಭಾಗವು ದುಃಖ ಹಾಗೂ ಕಷ್ಟಗಳಿಂದಲೇ ಕೂಡಿದ್ದರೆ ಬದುಕು ಸಾಕಷ್ಟು ಗೊಂದಲ ಹಾಗೂ ಭಯದಿಂದ ಸಾಗುವುದು. ಅದೇ ಬದುಕು ಸಾಕಷ್ಟು ಉತ್ತಮ ಫಲಗೊಂದಿಗೆ ಸಂತೋಷವನ್ನು ನೀಡುತ್ತಾ ಹೋದರೆ ನೆಮ್ಮದಿ ಹಾಗೂ ಪರಿಪೂರ್ಣತೆಯ ಅನುಭವವನ್ನು ಪಡೆದುಕೊಳ್ಳುವನು.

ಜೀವನದಲ್ಲಿ ಎರಡು ಬಗೆಯ ಬದಲಾವಣೆಗಳು ಆಗಲಿದೆಯಂತೆ

ಜೀವನದಲ್ಲಿ ಎರಡು ಬಗೆಯ ಬದಲಾವಣೆಗಳು ಆಗಲಿದೆಯಂತೆ

ಬದುಕು ಎನ್ನುವುದು ಹೀಗೆ ಇರುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಮಗಾಗಿ ಬರುವ ಅವಕಾಶಗಳು ಹಾಗೂ ಅದೃಷ್ಟಗಳು ನಮ್ಮ ಬದುಕಿನ ಹಾದಿಯಲ್ಲಿ ಸಾಕಷ್ಟು ತಿರುವುಗಳನ್ನು ತಂದುಕೊಡುವುದು. ಅನಿರೀಕ್ಷಿತವಾಗಿ ಬರುವ ಸಂಗತಿಗಳೇ ಜೀವನದ ನಿಜವಾದ ಅರ್ಥ ಹಾಗೂ ಪಾಠವನ್ನು ಹೇಳಿಕೊಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಖಗೋಳದಲ್ಲಿ ನಡೆಯುವ ವಿದ್ಯಮಾನಗಳು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ತಿರುವುಗಳನ್ನು ಹಾಗೂ ಬದಲಾವಣೆಯನ್ನು ಸೃಷ್ಟಿಸುತ್ತವೆ. ಅವುಗಳನ್ನು ನಾವು ಅಲ್ಲಗಳೆಯುವಂತಿರುವುದಿಲ್ಲ. ಏನಿದ್ದರೂ ಅದನ್ನು ಅನುಭವಿಸಲೇ ಬೇಕು. 2019ರ ಈ ವರ್ಷದಲ್ಲಿ ಗ್ರಹಗತಿಗಳು ಸಾಕಷ್ಟು ಬಗೆಯಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಬದಲಾವಣೆ ಅಥವಾ ಪ್ರಭಾವವನ್ನು ನೀಡುತ್ತವೆ ಎಂದು ಹೇಳಲಾಗುವುದು. ಅವು ಪ್ರತಿಯೊಂದು ರಾಶಿ ಚಕ್ರಗಳಿಗೆ ಅನುಗುಣವಾಗಿ ಎರಡು ಬಗೆಯ ಅದ್ಭುತ ಸಂಗತಿಗಳನ್ನು ನೀಡಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ಎರಡು ಬಗೆಯ ಬದಲಾವಣೆಗಳು ಯಾವವು? ಅವು ನಿಮ್ಮ ಬದುಕಲ್ಲಿ ಯಾವ ರೀತಿಯ ತಿರುವನ್ನು ತಂದುಕೊಡುತ್ತವೆ ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ.

ಮೇಷ

ಮೇಷ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ನೀವು ಪುಸ್ತಕ ಅಥವಾ ವಿಶೇಷ ಲೇಖನವನ್ನು ಬರೆಯಲು ಬಯಸುತ್ತೀರಿ ಎಂದಾದರೆ ಬ್ಲಾಗ್‍ಗಳಲ್ಲಿ ಬರವಣಿಗೆಯನ್ನು ಪ್ರಾರಂಭಿಸಿ. ಯೂ ಟ್ಯೂಬ್ ಪ್ರಾರಂಭಿಸಿ. ಜೂನ್ ತಿಂಗಳಲ್ಲಿ ನಡೆಯುವ ಗ್ರಹಗಳ ಸಂಚಾರ ಹಾಗೂ ಬದಲಾವಣೆಯಿಂದಾಗಿ ಸಂಹನಕ್ಕೆ ಸಂಬಂಧಿಸಿದ ವೃತ್ತಿ ಜೀವನವು ನಿಮಗೆ ಹೆಚ್ಚು ಯಶಸ್ಸು ಹಾಗೂ ಕೀರ್ತಿಯನ್ನು ತಂದುಕೊಡುವುದು. ಗಮನಿಸಬೇಕಾದ ಸಂಗತಿ:ಜುಲೈ 2ರಂದು ನಡೆಯಲಿರುವ ಸೂರ್ಯ ಗ್ರಹಣದ ಪ್ರಭಾವದಿಂದ ಕೆಲವು ಬದಲಾವಣೆಯನ್ನು ಅನುಭವಿಸಬೇಕಾಗುವುದು. ಎಂದಿಗಿಂತಲೂ ಹೆಚ್ಚು ಖರ್ಚನ್ನು ಮಾಡುವಿರಿ. ನಿಮ್ಮ ಮನೆಯಲ್ಲಿ ಕೆಲವು ನಿರ್ದಿಷ್ಟ ನಿಯಮಗಳನ್ನು ವಿಧಿಸುವುದರ ಮೂಲಕ ಮಕ್ಕಳನ್ನು ನಿಯಂತ್ರಿಸಬೇಕಾಗುವುದು. ಎಂದು ನೀವು ಎಲ್ಲಾ ಸಂಗತಿಗಳಲ್ಲೂ ಅಂತಿಮ ಗಟ್ಟ ಅಥವಾ ಸುಧಾರಣೆಯನ್ನು ಕಂಡುಕೊಳ್ಳುತ್ತೀರಿ ಆಗ ಸಾಕಷ್ಟು ವಿಶ್ರಾಂತಿ ಹಾಗೂ ನಿರಾಳವಾದ ಮನಃಸ್ಥಿತಿಯನ್ನು ಪಡೆದುಕೊಳ್ಳುವಿರಿ.

ವೃಷಭ

ವೃಷಭ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ಈ ಹಿಂದೆ ಜನವರಿಯಲ್ಲಿ ನಡೆದ ಚಂದ್ರಗ್ರಹಣದ ಪ್ರಭಾವದಿಂದ ಸಾಕಷ್ಟು ಬದಲಾವಣೆಯನ್ನು ಅನುಭವಿಸುವಿರಿ. ಈ ಗ್ರಹಣದಿಂದಾಗಿ ವೃಷಭ ರಾಶಿಯವರು ಕೆಲವು ನಿರ್ದೇಶನಗಳಿಗೆ ಒಳಗಾಗಿದ್ದಾರೆ. ಅದು ಮಾರ್ಗದರ್ಶನದ ರೂಪದಲ್ಲಿ ಇರುವುದು. ನೀವು ಮನೆಯನ್ನು ಖರೀದಿಸುವ ಅಥವಾ ಕಟ್ಟುವ ಯೋಜನೆಯನ್ನು ಹೊಂದಿದ್ದರೆ ಇದೀಗ ನಿಮಗೆ ಉತ್ತಮ ಸಮಯ. ಹಾಗೊಮ್ಮೆ ನೀವು ಸ್ವಂತ ಮನೆಯಲ್ಲಿ ವಾಸವಾಗಿದ್ದೀರಿ ಎಂದಾದರೆ ಅಡುಗೆ ಮನೆ ಹಾಗೂ ನೆಲಮಾಳಿಗೆ ಸೇರಿದಂತೆ ಇನ್ನಿತರ ಮನೆಯ ಕೆಲವು ಪೀಠೋಪಕರಣ ಹಾಗೂ ನಿರ್ಮಾಣಗಳ ವಿಚಾರದಲ್ಲಿ ಮರು ರೂಪಣೆ ಅಥವಾ ಮರು ವಿನ್ಯಾಸವನ್ನು ಕೈಗೊಳ್ಳುವಿರಿ.

ಗಮನಿಸಬೇಕಾದ ಸಂಗತಿ: ನೀವು ಈಗಾಗಲೇ ಕೆಲವು ಸ್ನೇಹಿತರನ್ನು ಹೊಂದಿದ್ದೀರಿ. ಅವರಿಂದ ಸಾಕಷ್ಟು ನಾಟಕ ಹಾಗೂ ಅನವಶ್ಯಕ ಖರ್ಚುಗಳು ಸಂಭವಿಸುತ್ತಿದೆ. ಅಲ್ಲದೆ ಅನಗತ್ಯ ಸಂಗತಿಗಳಿಗಾಗಿ ಓಡಾಟ ಹಾಗೂ ವಿನೋದದಲ್ಲಿ ತೊಡಗಿಕೊಂಡಿದ್ದೀರಿ ಎಂದಾದರೆ ಮೊದಲು ಅಂತಹ ಸ್ನೇಹಿತರಿಂದ ದೂರ ಇರಬೇಕು. ಕೆಲವು ಗ್ರಹಗಳ ಹಿಮ್ಮುಖ ಚಲನೆಯು ನಿಮ್ಮ ಮೇಲೆ ಗಂಭೀರವಾದ ಬದಲಾವಣೆ ನೀಡುವುದರಿಂದ ಸಾಕಷ್ಟು ವಿವೇಕದಿಂದ ವರ್ತಿಸಬೇಕಾಗುವುದು. ನಿಮ್ಮ ನಡವಳಿಕೆಯಲ್ಲಿ ವಿನಯತೆ ಹಾಗೂ ಸದ್ಗುಣಗಳಿದ್ದರೆ ಸಾಕಷ್ಟು ಪ್ರಶಂಸೆಯನ್ನು ಪಡೆದುಕೊಳ್ಳುವಿರಿ.

Most Read: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಾಣಿಕ್ಯ ಹರಳು ಧರಿಸಿದರೆ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ

ಮಿಥುನ

ಮಿಥುನ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: 2019ರ ವರ್ಷವು ನಿಮಗೆ ಉತ್ತಮ ಉಸಿರಾಟ ಕ್ರಿಯೆಯನ್ನು ಒದಗಿಸುವುದು. ನಿಮ್ಮ ಕೆಲಸಕಾರ್ಯಗಳಲ್ಲೂ ಯಶಸ್ಸು ದೊರೆಯುವುದು. ಈ ವರ್ಷದಲ್ಲಿ ನಡೆಯುವ ಗ್ರಹಣಗಳ ಪ್ರಭಾವಗಳು ಸಾಕಷ್ಟು ಧನಾತ್ಮಕ ಪ್ರಭಾವವನ್ನು ನೀಡುತ್ತವೆ. ಕೆಲಸದ ವಿಷಯದಲ್ಲಿ ಅಥವಾ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹಣಗಳ ಹರಿವನ್ನು ಕಾಣುವಿರಿ. ಹೊಸ ಹೂಡಿಕೆಯನ್ನು ಮಾಡಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೂ ಉತ್ತಮ ವರ್ಷವಾಗುವುದು. ಸಾಲ ಪಡೆಯಲು ಬಯಸಿದರೂ ಸುಲಭವಾಗಿ ದೊರೆಯುವುದು. ನೀವು ಸ್ವಂತ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತೀರಿ ಎಂದಾದರೆ ಜನವರಿ 31 ರಿಂದ ಜೂನ್ 18ರ ಒಳಗೆ ಪ್ರಾರಂಭಿಸಿ. ಅದು ನಿಮಗೆ ಉತ್ತಮ ಸಮಯವಾಗಿರುತ್ತದೆ. ಬ್ಯಾಂಕ್‍ನಿಂದ ಸಾಲ ಪಡೆಯಲು 8ನೇ ತಾರೀಖು ಉತ್ತಮವಾದದ್ದು.

ಗಮನಿಸಬೇಕಾದ ಸಂಗತಿ: 2019ರಲ್ಲಿ ಬುಧನ ಹಿಮ್ಮುಖ ಚಲನೆಯು ನಿಮ್ಮ ಮೇಲೆ ಸಾಕಷ್ಟು ಪ್ರಭಾವವನ್ನು ಬೀಡುವುದು. ಹಾಗಾಗಿ ನೀವು ನಿಮ್ಮ ನಾಲಿಗೆಯ ಮೇಲೆ ಸಾಕಷ್ಟು ಹಿಡಿತವನ್ನು ಹೊಂದಿರಬೇಕು. ನಿಮ್ಮ ಮಾತುಗಳು ಅನುಚುತವಾಗಿದೆ ಎಂದರೆ ಅದು ನಿಮ್ಮ ಅನೇಕ ಸಂಗತಿಗಳ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುವುದು. ನಿಮ್ಮ ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ಸಾಕಷ್ಟು ಎಚ್ಚರಿಕೆ ಹಾಗೂ ಕಾಳಜಿಯಿಂದ ಇರಬೇಕು. ಸಾಮಾಜಿಕ ತಾಣಗಳಲ್ಲಿ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಅನಗತ್ಯ ಮಾತುಕತೆಗೆ ಮುಂದಾಗದಿರಿ. ಮಾತು ಮತ್ತು ಕೃತ್ಯವು ನಿಮ್ಮ ನಿಯಂತ್ರಣದಲ್ಲಿ ಇರಬೇಕಾದ ಅನಿವಾರ್ಯತೆ ಇದೆ.

ಕರ್ಕ

ಕರ್ಕ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ಯುರೇನಸ್ ಗ್ರಹವು ಮಾರ್ಚ್ ತಿಂಗಳಲ್ಲಿ ಮೇಷರಾಶಿಯಿಂದ ಹಿಮ್ಮುಖ ಚಲನೆಯನ್ನು ಪಡೆದುಕೊಳ್ಳುವುದು. ಇದು ಕರ್ಕ ರಾಶಿಯವರಿಗೆ ಅತ್ಯುತ್ತಮ ಬದಲಾವಣೆ ಹಾಗೂ ಸಂತಸದ ಸಂಗತಿಗಳನ್ನು ತಂದುಕೊಡುವುದು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಚಾರ, ಹೊಸ ನಿರ್ವಾಹಕ ನಿಯಮ ಹಾಗೂ ಉದ್ಯೋಗದಲ್ಲಿ ಬದಲಾವಣೆಯನ್ನು ತಂದುಕೊಡುವುದು. ನೀವು ಹೊಲಿಗೆಗೆ ಸಂಬಂಧಿಸಿದಂತೆ ವೃತ್ತಿ ಜೀವನವನ್ನು ಬಯಸುತ್ತಿದ್ದರೆ ಅದನ್ನು ಆರಂಭಿಸಲು ನಿಮಗೆ ಸೂಕ್ತವಾದ ಸಮಯ. ಹೊಲಿಗೆಗೆ ಸಂಬಂಧಿಸಿದ ತರಬೇತಿಯನ್ನು ಪಡೆಯಲು ಬಯಸಿದರೂ ಅದಕ್ಕೂ ಉತ್ತಮ ವರ್ಷವಾಗಿರುತ್ತದೆ.

ಗಮನಿಸಬೇಕಾದ ಸಂಗತಿ: ಉತ್ತಮ ಅಥವಾ ನಿಜವಾದ ಪ್ರೀತಿಯು ಹೆಚ್ಚಿನ ಕೆಲಸವನ್ನು ಕಲ್ಪಿಸಿಕೊಡುವುದು. ಆದರೆ ಈ ವರ್ಷ ನಿಮ್ಮ ಪ್ರೀತಿಗೆ ಸಂಬಂಧಿಸಿದಂತೆ ಕೆಲವು ಹಿನ್ನಡೆ ಉಂಟಾಗಬಹುದು. ನೀವು ವಿವಾಹಿತರಾಗಿದ್ದರೆ ಅಥವಾ ಸ್ಥಿರ ಸಂಬಂಧದಲ್ಲಿ ಇದ್ದರೆ ನಿಮ್ಮ ಪ್ರೀತಿಯ ವಿಷಯದಲ್ಲಿ ಕೆಲವು ಸಂಗತಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡುವುದು. ಹಾಗಾಗಿ ಸಿಕ್ಕ ಅವಕಾಶಗಳನ್ನು ಸೂಕ್ತ ಹಾಗೂ ನ್ಯಾಯಬದ್ಧವಾಗಿ ಬಳಸಿಕೊಳ್ಳಲು ನೀವು ಮರೆಯಬಾರದು.

ಸಿಂಹ

ಸಿಂಹ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: 2019ರ ವರ್ಷದಲ್ಲಿ ಸಿಂಹ ರಾಶಿಯವರಿಗೆ ಪ್ರೀತಿ ಎನ್ನುವುದು ಅವರ ಸುತ್ತಲಿನ ಗಳಿಯಲ್ಲಿ ತುಂಬಿಕೊಂಡೇ ಇರುತ್ತದೆ. ಪ್ರಣಯದ ಸಂಗತಿಯು ವರ್ಷದ ಆರಂಭದಿಂದ ಅತ್ಯದ ವರೆಗೂ ಅತ್ಯುತ್ತಮರೀತಿಯಲ್ಲಿ ಉಳಿದುಕೊಳ್ಳುವುದು. ನೀವು ಅವಿವಾಹಿತರು ಅಥವಾ ಯಾರನ್ನಾದರೂ ಪ್ರೀತಿಸುತ್ತಿದ್ದರೆ ವಿವಾಹವಾಗಲು ಹಾಗೂ ಪ್ರೀತಿಯ ಪ್ರಸ್ತಾಪವನ್ನು ಮುಂದಿಡಲು ಉತ್ತಮ ಸಮಯ. ನಿಮಗೆ ಪ್ರೀತಿಗೆ ಸಂಬಂಧಿಸಿದಂತೆ ಅತ್ಯುತ್ತಮ ಯಶಸ್ಸು ಹಾಗೂ ಅವಕಾಶಗಳು ದೊರೆಯುತ್ತವೆ.

ಗಮನಿಸಬೇಕಾದ ಸಂಗತಿ: ನೈಸರ್ಗಿಕವಾಗಿಯೇ ನಾಯಕತ್ವ ಗುಣವನ್ನು ಸಿಂಹ ರಾಶಿಯವರು ಹೊಂದಿರುತ್ತಾರೆ. ಕೆಲಸದಲ್ಲಿ ಸಾಕಷ್ಟು ಎಚ್ಚರಿಕೆ ಹಾಗೂ ಜವಾಬ್ದಾರಿಯನ್ನು ವಹಿಸಿಕೊಂಡರೆ ಬಹು ಪ್ರತಿಫಲ ದೊರೆಯುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಒಳ್ಳೆಯ ಜನರಿಂದ ಸ್ನೇಹ ಪಡೆಯಲು ಅಥವಾ ಸಾನಿಧ್ಯವನ್ನು ಹೊಂದಲು ಸಾಕಷ್ಟು ಅವಕಾಶಗಳು ದೊರೆಯುವುದು. ಅದನ್ನು ಸೂಕ್ತರೀತಿಯಲ್ಲಿ ನಿರ್ವಹಿಸುವುದನ್ನು ನೀವು ಅರಿತಿರಬೇಕು.

ಕನ್ಯಾ

ಕನ್ಯಾ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷವು ನಿಮಗೆ ಅತ್ಯುತ್ತಮ ಫಲಗಳು ಹೆಚ್ಚಾಗಿ ದೊರೆಯುತ್ತವೆ. ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ದೊಡ್ಡ ಹೂಡಿಕೆಯ ಖಾತೆಯನ್ನು ತೆರೆಯಬಹುದು. ಪ್ಲುಟೋ ಕನ್ಯಾ ರಾಶಿಯ ಮನೆಯಲ್ಲಿ ಪ್ರವೇಶ ಪಡೆಯುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುವುದು. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಯಶಸ್ಸನ್ನು ಪಡೆದುಕೊಳ್ಳುವಿರಿ. ಹಣವನ್ನು ಹೇಗೆ ಉಳಿಸುವುದು ಹಾಗೂ ಹೂಡಿಕೆ ಮಾಡುವುದು ಎನ್ನುವುದರ ಕುರಿತು ಸಾಕಷ್ಟು ಗಮನ ನೀಡಬೇಕಾಗುವುದು.

ಗಮನಿಸಬೇಕಾದ ಸಂಗತಿ: ಶನಿ ಗ್ರಹದ ಪ್ರಭಾವ ಇರುವುದರಿಂದ ನೀವು ನಿಮ್ಮ ಸಂಸಾರ, ಮಕ್ಕಳು ಹಾಗೂ ಸಂಬಂಧಗಳ ಮೇಲೆ ಹೆಚ್ಚು ಗಮನ ನೀಡಬೇಕು. ಸಂಗಾತಿಗೆ ಸಹಾಯ, ಮಕ್ಕಳೊಂದಿಗೆ ಆಟ ಹಾಗೂ ಹೊಸ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವುದರ ಮೂಲಕ ನಿಮ್ಮವರನ್ನು ಸಂತೋಷದಲ್ಲಿ ಇಡಲು ಹಾಗೂ ಕಾಳಜಿ ವಹಿಸಲು ಮರೆಯಬಾರದು.

Most Read: 2019ರಲ್ಲಿ 7 ರಾಶಿ ಚಕ್ರದವರು ಪ್ರೀತಿಯ ಜೀವನವನ್ನು ಪಡೆದುಕೊಳ್ಳುವರು

ತುಲಾ

ತುಲಾ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ನೀವು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಲು ಬಯಸುವಿರಿ. ಅದರಂತೆಯೇ ನಿಮ್ಮ ನಿಮ್ಮ ಕನಸುಗಳು ನನಸಾಗುವುದು. ಗಮನಾರ್ಹ ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಹೊಸ ಅವಕಾಶಗಳು ಹಾಗೂ ಸಂತೋಷವನ್ನು ಪಡೆದುಕೊಳ್ಳುವಿರಿ. ಹೊಸ ಸ್ನೇಹಿತರ ಪರಿಚಯ ನಿಮ್ಮಲ್ಲಿ ಸಂತೋಷ ಹಾಗೂ ನಿಮ್ಮ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ತಂದುಕೊಡುವುದು.

ಗಮನಿಸಬೇಕಾದ ಸಂಗತಿ: ಶನಿಯ ಪ್ರಭಾವ ಇರುವುದರಿಂದ ನೀವೂ ಸಹ ನಿಮ್ಮ ಕುಟುಂಬದ ಕಡೆಗೂ ಗಮನ ನೀಡುವುದನ್ನು ಮರೆಯಬಾರದು. ನಿಮ್ಮ ಜೀವನದಲ್ಲಿ ಇತರ ವಿಷಯಗಳು ಹೇಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದೋ ಹಾಗೆಯೇ ಕುಟುಂಬದ ಸಂಗತಿಯು ಅತ್ಯಗತ್ಯ ಎನ್ನುವುದನ್ನು ಮರೆಯಬಾರದು. ಕುಟುಂಬದಿಂದ ದೂರ ಉಳಿಯುವ ಪ್ರಯತ್ನವನ್ನು ಮಾಡದಿರಿ.

ವೃಶ್ಚಿಕ

ವೃಶ್ಚಿಕ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ನೀವು ಯಾವುದೇ ಗುರಿ ಅಥವಾ ಯೋಜನೆಯನ್ನು ಸಾಧಿಸುವ ಹವಣಿಕೆಯಲ್ಲಿ ಇದ್ದರೆ ಅದು ನಿಮಗೆ ಧನಾತ್ಮಕ ಫಲಿತಾಂಶದಿಂದ ಹೆಚ್ಚಿನ ಸಂತೋಷವನ್ನು ತಂದುಕೊಡುವುದು. ಹೊಸ ಕೌಶಲ್ಯದ ಸಂಗತಿಯಾಗಿರಬಹುದು, ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದಾಗಿರಬಹುದು, ಮಕ್ಕಳೊಂದಿಗೆ ಸಮಯ ಕಳೆಯುವುದೇ ಆಗಿರಬಹುದು ಎಲ್ಲಾ ವಿಷಯದಲ್ಲೂ ಧನಾತ್ಮಕ ಹಾಗೂ ಅತ್ಯುತ್ತಮ ಸಮಯವನ್ನು ಕಂಡುಕೊಳ್ಳುವಿರಿ. ಉತ್ತಮ ಗ್ರಹಗಳ ಪ್ರಭಾವದಿಂದ ನೀವು ಈ ವರ್ಷ ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಭರವಸೆ ಹಾಗೂ ಲಾಭವನ್ನು ಪಡೆದುಕೊಳ್ಳುವರು.

ಗಮನಿಸಬೇಕಾದ ಸಂಗತಿ: ಬುಧನ ಹಿಮ್ಮುಖ ಚಲನೆಯ ಪ್ರಭಾವದಿಂದ ನೀವು ಸಾಕಷ್ಟು ಎಚ್ಚರಿಕೆಯನ್ನು ಹೊಂದಿರಬೇಕು. ಅದರಲ್ಲೂ ಸಂವಹನದ ಸಂಗತಿಯಲ್ಲಿ ಎಂದು ಹೇಳಲಾಗುವುದು. ಇತರರೊಂದಿಗೆ ಮಾತನಾಡುವಾಗ ಹಾಗೂ ಭಾಷಣ ಮಾಡುವಾಗ ನೀವು ಬಳಸುವ ಪದಗಳು ಹಾಗೂ ಮಾತಿನ ಮೇಲೆ ನಿಯಂತ್ರಣ ಹಾಗೂ ಎಚ್ಚರಿಕೆ ಹೊಂದಿರಬೇಕಾಗುವುದು.

ಧನು

ಧನು

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: 2019ರ ಫೆಬ್ರುವರಿ ತಿಂಗಳು ನಿಮಗೆ ಪ್ರೀತಿಯ ತಿಂಗಳು ಎನ್ನಬಹುದು. ಪ್ರಣಯದ ವಿಷಯದಲ್ಲಿ ಉತ್ತಮ ಅವಕಾಶ ಹಾಗೂ ಸಂತೋಷವನ್ನು ಪಡೆದುಕೊಳ್ಳುವಿರಿ. ಅವಿವಾಹಿತರು ವಿವಾಹ ಯೋಗವನ್ನು ಪಡೆದುಕೊಳ್ಳುವರು. ಸಂಸಾರದಲ್ಲಿ ಇರುವವರು ಸಂಗಾತಿ ಹಾಗೂ ಮಕ್ಕಳೊಂದಿಗೆ ವಿಹಾರ ಕೈಗೊಳ್ಳುವುದರ ಮೂಲಕ ಸಂತೋಷವನ್ನು ಅನುಭವಿಸುವರು.

ಗಮನಿಸಬೇಕಾದ ಸಂಗತಿ: ಸಾಮಾಜಿಕ ಕೆಲಸಕಾರ್ಯಗಳಲ್ಲಿ ಅತಿಯಾಗಿ ತೊಡಗಿಕೊಳ್ಳುವುದು ಹಾಗೂ ಕುಟುಂಬವನ್ನು ನಿರ್ಲಕ್ಷಿಸುವ ಕೆಲಸವನ್ನು ಮಾಡಬಾರದು. ನಿಮ್ಮವರು ಹಾಗೂ ಮನೆಯವರಿಗಾಗಿ ಸಾಕಷ್ಟು ಸಮಯವನ್ನು ಮೀಸಲಾಗಿಡಬೇಕು. ನಿಮ್ಮವರಿಗೆ ನಿಮ್ಮ ಸಮಯ ಹಾಗೂ ನಿಮ್ಮ ಪ್ರೀತಿಯ ಅಗತ್ಯವಿದೆ ಎನ್ನುವುದನ್ನು ಅರಿತುಕೊಳ್ಳಬೇಕು.

ಮಕರ

ಮಕರ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ಪ್ಲುಟೋ ಗ್ರಹದ ಸಂಚಾರದಿಂದ ನೀವು ಸಾಕಷ್ಟು ಉತ್ತಮ ಫಲವನ್ನು ಪಡೆದುಕೊಳ್ಳುವಿರಿ. ಹೊಸ ಪರಿಸರದ ಭೇಟಿ, ಒಳ್ಳೆಯ ನೆರೆಹೊರೆಯವರನ್ನು ಪಡೆದುಕೊಳ್ಳುವುದು, ಹೊಸ ಮನೆಯ ಪ್ರವೇಶಗಳನ್ನು ಮಾಡುವುದರ ಮೂಲಕ ಹೊಸತನ ಹಾಗೂ ಸಂತೋಷವನ್ನು ಕಂಡುಕೊಳ್ಳುವಿರಿ.

ಗಮನಿಸಬೇಕಾದ ಸಂಗತಿ: ಯುರೇನಸ್ ಗ್ರಹದ ಪ್ರಭಾವದಿಂದ ಈ ಹಿಂದೆ ಹೊಂದಿದ್ದ ಕೆಲವು ಸಮಸ್ಯೆಗಳು ಪುನಃ ಎದುರಾಗುವ ಸಾಧ್ಯತೆಗಳಿವೆ. ಅವುಗಳನ್ನು ಹೇಗೆ ಮೊದಲು ನಿಭಾಯಿಸಿದ್ದೀರಿ ಎನ್ನುವುದನ್ನು ನೆನಪಿಸಿಕೊಂಡು ನಿರ್ವಹಿಸಬೇಕು. ನಿಮ್ಮನ್ನು ನೀವು ಪೋಷಿಸಿಕೊಳ್ಳಲು ಒಂದಷ್ಟು ಸಮಯವನ್ನು ಮೀಸಲಾಗಿಡಿ. ಮಾರ್ಚ್ ತಿಂಗಳ ನಂತರ ಕಷ್ಟದ ಸಮಯಗಳು ನಿವಾರಣೆ ಹೊಂದುವುದು. ಕುಟುಂಬದವರೊಂದಿಗೆ ಶಾಂತಿಯುತವಾದ ಜೀವನ ನಡೆಸಲು ಸಾಧ್ಯವಾಗುವುದು.

Most Read: ವಿದೇಶದಲ್ಲಿ ನೌಕರಿ ಮಾಡುವ ಇಚ್ಛೆಯೆ? ಜ್ಯೋತಿಷ್ಯದ ಈ ನಿಯಮಗಳನ್ನು ಪಾಲಿಸಿ..

ಕುಂಭ

ಕುಂಭ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ಈ ವರ್ಷ ಕುಂಭರಾಶಿಯವರು ಕಂಪ್ಯೂಟರ್ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ವ್ಯಾಪಾರ ಹಾಗೂ ಕೆಲಸವನ್ನು ಕೈಗೊಳ್ಳಲು ಸೂಕ್ತವಾದ ಸಮಯ. ಸಾಮಾಜಿಕ ತಾಣದ ಖಾತೆಗಳಲ್ಲಿಯೂ ವ್ಯವಹಾರವನ್ನು ಕೈಗೊಳ್ಳಬಹುದು. ಅದು ಉತ್ತಮ ಲಾಭವನ್ನು ತಂದುಕೊಡುವುದು. ಸ್ನೇಹಿತರ ಬಳಗದಲ್ಲೂ ಹೆಚ್ಚಿನ ಗೌರವ ಮತ್ತು ಸಹಕಾರ ದೊರೆಯುವುದು.

ಗಮನಿಸಬೇಕಾದ ಸಂಗತಿ: ನೀವು ನಿಮ್ಮ ವಸ್ತು ಹಾಗೂ ಹಣದ ವಿಷಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಜನವರಿ, ಜೂನ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಗುರುವಿನ ಅನುಗ್ರಹ ಅಥವಾ ಪ್ರಭಾವ ಉತ್ತಮವಾಗಿರದೆ ಇರುವುದರಿಂದ ಸಾಕಷ್ಟು ನಷ್ಟ ಹಾಗೂ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಅಪಾಯಕಾರಿ ಹೂಡಿಕೆಗಳಲ್ಲಿ ಹೂಡಿಕೆ ಮಾಡದಂತೆ ಎಚ್ಚರಿಕೆ ವಹಿಸಿ.

ಮೀನ

ಮೀನ

ನಿಮಗೆ ಅತ್ಯುತ್ತಮ ಸಂಗತಿ ಎಂದರೆ: ಈ ವರ್ಷವು ನಿಮಗೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅತ್ಯದ್ಭುತವಾದ ವರ್ಷವಾಗುವುದು. ಪ್ರಸ್ತುತ ಕೆಲಸದಲ್ಲಿ ಪ್ರಗತಿಯನ್ನು ಕಂಡುಕೊಳ್ಳುವಿರಿ. ಹೊಸ ಕೆಲಸದಲ್ಲಿ ಯಶಸ್ಸು ದೊರೆಯುವುದು. ನೀವು ಮಾಡುವ ಕೆಲಸದ ಸ್ಥಳದಲ್ಲಿ ಮತ್ತು ಆರ್ಥಿಕ ವಿಷಯದಲ್ಲಿ ಸಾಕಷ್ಟು ತೃಪ್ತಿ ಹಾಗೂ ಸಂತೋಷವನ್ನು ಕಂಡುಕೊಳ್ಳುವಿರಿ.

ಗಮನಿಸಬೇಕಾದ ಸಂಗತಿ: ಕೆಲವು ಗ್ರಹಗಳ ಹಿಮ್ಮುಖ ಚಲನೆಯ ಪ್ರಭಾವದಿಂದ ಕೆಲವು ಸಂಗತಿಯಲ್ಲಿ ಮಾನಸಿಕವಾಗಿ ಬೇಸರ ಉಂಟಾಗಬಹುದು. ಕೆಲವು ಕೆಲಸದಲ್ಲಿ ಹಿನ್ನಡೆ ಉಂಟಾಗಬಹುದು. ಈ ವಿಷಯಗಳ ಕುರಿತಾಗಿ ಸಾಕಷ್ಟು ದೃಢ ಮನಸ್ಸು ಹಾಗೂ ಸಿದ್ಧತೆಯನ್ನು ನಡೆಸಿಕೊಳ್ಳಬೇಕು ಎಂದು ಜ್ಯೋತಿಷ್ಯ ಶಾಸ್ತ್ರಸಲಹೆ ನೀಡುವುದು.

English summary

As per the zodiac these 2 Biggest Things That Will Happen To You

As per the Astrology these 2 Biggest Things That Will Happen To You In 2019, Based On Your Zodiac, have a look...
Story first published: Thursday, February 7, 2019, 13:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more