For Quick Alerts
ALLOW NOTIFICATIONS  
For Daily Alerts

  ಈ ನಾಲ್ಕು ರಾಶಿಯವರು ಪ್ರೀತಿಗಾಗಿ ಸ್ನೇಹಿತರನ್ನೇ ಕಡೆಗಣಿಸುತ್ತಾರೆ

  By Hemanth
  |

  ಪ್ರೀತಿಯ ಅಮಲು ತಲೆಗೇರಿದರೆ ಆಗ ಜಗತ್ತೇ ಕಾಣಿಸದಂತಹ ಪರಿಸ್ಥಿತಿ ಕೆಲವರಲ್ಲಿ ಬರುವುದು. ಇಂತಹವರು ಪ್ರೀತಿಗಾಗಿ ಇತರ ಎಲ್ಲಾ ಸಂಬಂಧಗಳಿಂದ ದೂರವಾಗುವರು. ಪ್ರೀತಿ ಮಾತ್ರ ಅವರ ಉಸಿರಾಗಿರುವುದು. ಇಂತವರು ಪ್ರೀತಿಯ ಮೋಹ ಪಾಶದಲ್ಲಿ ಸಿಲುಕುವ ಮೊದಲು ಸ್ನೇಹಿತರೆಂದರೆ ತಮ್ಮ ಪ್ರಾಣವೆಂದು ಹೇಳುತ್ತಲಿದ್ದವರು.

  ಆದರೆ ಪ್ರೀತಿಸುವ ಹುಡುಗಿ ಸಿಕ್ಕಿದ ಬಳಿಕ ನೀನ್ಯಾರು ಎನ್ನುವ ಪರಿಸ್ಥಿತಿ ಇವರದ್ದಾಗುತ್ತದೆ. ಇದಕ್ಕೆ ಕಾರಣ ಅವರ ರಾಶಿಚಕ್ರಗಳು. ಹೌದು, ಕೆಲವು ರಾಶಿಯವರು ಪ್ರೀತಿಗಾಗಿ ತಮ್ಮ ಸ್ನೇಹವನ್ನೇ ಬಲಿಕೊಡುವರು. ಇದರ ಬಗ್ಗೆ ನೀವು ತಿಳಿದುಕೊಳ್ಳಿ.... 

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ವೃಶ್ಚಿಕ ರಾಶಿಯವರ ಒಂದು ಗುಣವೆಂದರೆ ಅವರು ಪ್ರೀತಿಯಲ್ಲಿ ಬಿದ್ದರೆ ಆ ಸಂಬಂಧವನ್ನು ತುಂಬಾ ಗಂಭೀರವಾಗಿ ಪರಿಗಣಿಸುವರು. ಕೇವಲ ಗಂಭೀರವಾಗಿರುವುದು ಮಾತ್ರವಲ್ಲದೆ, ಅವರಿಗೆ ಇದರ ಗೀಳು ಅಂಟಿಕೊಂಡಿರುವುದು. ಇವರ ಸಂಪೂರ್ಣ ಜೀವನವು ಈ ಸಂಬಂಧದ ಸುತ್ತ ತಿರುಗುತ್ತಾ ಇರುವುದು. ಸಂಬಂಧಕ್ಕಾಗಿ ಅವರು ಏನು ಬೇಕಾದರೂ ಮಾಡಬಹುದು. ಈ ರಾಶಿಯವರು ಎಷ್ಟು ಗೀಳಿಗೆ ಬೀಳುತ್ತಾರೆಂದರೆ ಒಂದು ಹಂತದಲ್ಲಿ ಸಂಬಂಧದ ಮೇಲೆ ಹೆಚ್ಚಿನ ಒತ್ತಡ ಹಾಕುವರು. ಇದರಿಂದಾಗಿ ಅವರು ತಮ್ಮ ಸ್ನೇಹಿತರನ್ನು ಕಡೆಗಣಿಸುವರು.ಪ್ರೀತಿಯ ಜೀವನದಲ್ಲಿ ಅಥವಾ ಸಂಬಂಧಗಳಲ್ಲಿ ವೃಶ್ಚಿಕ ರಾಶಿಯವರು ಒಂದಿಷ್ಟು ಬದ್ಧತೆಯನ್ನು ಹೊಂದಿರುತ್ತಾರೆ. ಗ್ರಹಗತಿಗಳ ಸಹಕಾರ ಅಷ್ಟಾಗಿ ಅನುಕೂಲಕರವಾಗಿರದೆ ಇರುವುದರಿಂದ ಸಂಗಾತಿಯೊಂದಿಗೆ ನಿರಾಶೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ನಡುವೆ ತುಸು ವೈಮನಸ್ಸು ಅಥವಾ ಕಹಿಯಾದ ಸ್ಥಿತಿ ಉಂಟಾಗ ಬಹುದು. ನಿಮ್ಮ ನಡವಳಿಕೆಯು ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇಬ್ಬರಿಂದಲೂ ನಕಾರಾತ್ಮಕ ವರ್ತನೆ ಇರುವುದರಿಂದ ಕೊಂಚ ಬೇಸರ ಉಂಟಾಗಬಹುದು. ನಿಮ್ಮ ಭಾವನೆಗಳನ್ನು ಸ್ವಲ್ಪ ನಿಯಂತ್ರಣದಲ್ಲಿ ಇಡಬೇಕು. ಸಂದರ್ಭಗಳನ್ನು ಅರಿತು ನಡೆಯುವುದನ್ನು ಅರಿಯಬೇಕಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಒಂದಿಷ್ಟು ಸಮಯ ನೀಡುವುದು ಉತ್ತಮ. ಪ್ರೀತಿಯ ಕುರಿತು ವ್ಯವಹರಿಸುವಾಗ ವಿವಿಧ ದೃಷ್ಟಿಕೋನಗಳಿಂದ ಚಿಂತಿಸುವುದು ಸೂಕ್ತ.

  ಕರ್ಕಾಟಕ: ಜೂನ್ 21- ಜುಲೈ 22

  ಕರ್ಕಾಟಕ: ಜೂನ್ 21- ಜುಲೈ 22

  ಕರ್ಕಾಟಕ ರಾಶಿಯವರು ತುಂಬಾ ಭಾವನಾತ್ಮಕವಾಗಿರುವ ವ್ಯಕ್ತಿಗಳು ಎನ್ನುವುದು ತಿಳಿದಿದೆ. ಇವರು ಪ್ರೀತಿಯಲ್ಲಿ ಬಿದ್ದಾಗ ಇವರು ಬೇರೆಯವರಿಗಿಂತ ಹೆಚ್ಚು ಭಾವನಾತ್ಮಕವಾಗಿರುವರು. ಇವರು ತುಂಬಾ ಅಗತ್ಯವಿರುವ ವ್ಯಕ್ತಿಗಳಾಗಿರುವ ಮತ್ತು ಪ್ರೀತಿಯ ಜೀವನದಲ್ಲಿ ಕೂಡ ಇವರು ತುಂಬಾ ಅಗತ್ಯತೆಯ ಪ್ರವೃತ್ತಿ ತೋರಿಸುವರು. ಇವರು ಸ್ನೇಹಕ್ಕೆ ಹೆಚ್ಚಿನ ಮೌಲ್ಯ ನೀಡುತ್ತಾರೆ. ಆದರೆ ಪ್ರೀತಿಯ ಜೀವನ ಇದನ್ನು ಮುಸುಕಾಗಿಸುವುದು.

  ವೃಷಭ: ಎ.20-ಮೇ 20

  ವೃಷಭ: ಎ.20-ಮೇ 20

  ವೃಷಭ ರಾಶಿಯವರು ತುಂಬಾ ಲೋಲುಪ ವ್ಯಕ್ತಿತ್ವದವರಾಗಿರುವರು. ಇವರು ತುಂಬಾ ಭಾವೋದ್ರೀಕ್ತರಾಗುವರು. ಇವರು ಪ್ರೀತಿಗೆ ಬಿದ್ದಾಗ ನಿಜವಾಗಿಯೂ ಪ್ರೀತಿಸುವರು. ಭಾವನೆಯು ಇವರಿಂದ ಶ್ರೇಷ್ಠವಾಗಿರುವುದನ್ನು ಹೊರಹಾಕಲು ಬಯಸುವುದು. ಇವರು ಪ್ರೀತಿಯಲ್ಲಿ ಬಿದ್ದಾಗ ಅದಕ್ಕಿಂತ ದೊಡ್ಡ ವಿಚಾರ ಇವರಿಗೆ ಬೇರೊಂದಿಲ್ಲ. ಇವರು ರೋಮ್ಯಾಂಟಿಕ್ ಜೀವನದ ಮೇಲೆ ಹೆಚ್ಚಿನ ಗಮಹರಿಸುವ ಕಾರಣದಿಂದಾಗಿ ಇವರು ಸ್ನೇಹವನ್ನು ಕಡೆಗಣಿಸುವರು.

  ಇನ್ನು ಈ ತಿಂಗಳು ವೈಯಕ್ತಿಕ ಆಕರ್ಷಣೆಯು ಪಾಲುದಾರರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ನೀವು ಇನ್ನೂ ವಿವಾಹವಾಗದವರಾಗಿದ್ದರೆ ನಿಮ್ಮ ಜೀವನದಲ್ಲಿ ವರ್ಧಕವನ್ನು ಕಾಣುವಿರಿ. ಶುಕ್ರನು ನಿಮ್ಮ ರಾಶಿಚಕ್ರದ ಮನೆಯಲ್ಲಿಯೇ ಸಕ್ರಿಯನಾಗಿರುತ್ತಾನೆ. ಇದರಿಂದ ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ವಿವಾಹಿತರಲ್ಲಿ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ ನೀವು ವಿಷಯವನ್ನು ದೀರ್ಘ ಸಮಯದವರೆಗೆ ಎಳೆಯದೆ ಅಲ್ಲಿಯೇ ಬಿಟ್ಟುಬಿಡಿ. ಸಣ್ಣ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಸಂತೋಷವನ್ನು ಅನುಭವಿಸಬಹುದಾಗಿದೆ. ವಿವಾಹಿತರಲ್ಲಿ ಸಂಗಾತಿಯನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು.

  ಮೀನ: ಫೆ.19-ಮಾ.20

  ಮೀನ: ಫೆ.19-ಮಾ.20

  ಹುಡುಗಿಗಾಗಿ ಮೀನ ರಾಶಿಯವರ ಸ್ನೇಹಿತರನ್ನು ಇವರನ್ನು ಕಡೆಗಣಿಸಲು ಆರಂಭಿಸಿದಾಗ ಅವರು ತುಂಬಾ ನೋವಿಗೆ ಒಳಗಾಗುವವರು ಮತ್ತು ಬೇಸರಗೊಳ್ಳುವರು. ಆದರೆ ಇವರಾಗಿಯೇ ಪ್ರೀತಿಯಲ್ಲಿ ಬಿದ್ದಾಗ ಇವರು ಕೂಡ ತಮ್ಮ ಸ್ನೇಹಿತರು ಮಾಡಿದಂತೆ ಮಾಡುವರು. ಇವರು ಪ್ರೀತಿಯಲ್ಲಿ ಮುಳುಗಿದಾಗ ಅದರಲ್ಲೇ ಮಗ್ನರಾಗಿರುವರು. ಇವರು ಪ್ರೀತಿಗೆ ಬಿದ್ದಾಗ ಅದನ್ನು ಉಳಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುವರು.

  ವೃತ್ತಿ ಜೀವನದಂತೆ ನಿಮ್ಮ ಪ್ರೀತಿಯ ಜೀವನವು ಅನುಕೂಲಕರವಾಗಿರದೆ ಇರಬಹುದು. ನಿಮ್ಮ ಜೀವನದಲ್ಲಿ ಕೆಲವು ವಿಚಾರದ ಅಂಗವಾಗಿ ನಿಮ್ಮ ಭಾವನೆಗಳ ಮೇಲೆ ಗಂಭೀರವಾದ ಪರಿಣಾಮ ಬೀರುವುದು. ಈ ತಿಂಗಳ ಪೂರ್ತಿ ನಿಮ್ಮ ಪ್ರಣಯದ ಭಾವನೆಯು ಉಲ್ಬಣಗೊಳ್ಳುವುದು. ನಿಮ್ಮ ಸಂಗಾತಿಗೆ ಅಥವಾ ಪ್ರೀತಿಪಾತ್ರರಿಗೆ ಪ್ರಣಯದ ಭಾವನೆಯನ್ನು ವಿನಿಮಯ ಮಾಡುವುದರಲ್ಲಿ ನಿರಾಶೆಗೆ ಒಳಗಾಗಬಹುದು. ಹಾಗಾಗಿ ಈ ತಿಂಗಳು ಪ್ರೀತಿಯ ವಿಚಾರದಲ್ಲಿ ನೀವು ಆದಷ್ಟು ತಾಳ್ಮೆಯಿಂದ ಇರುವುದನ್ನು ಕಲಿಯಬೇಕು.

  English summary

  Zodiacs Who Would Ditch Friends For Love Sake

  The moment that when an individual tends to fall in love with someone special, there are many chances that all of the other casual relationships tend to suffer in a way or other. In this article, we are mentioning about the zodiac signs which are known to ditch their friends for the sake of love. These individuals will not blink their eye to lend their support for their loved one rather than being supportive to their friends. So, go ahead and find out if your favourite zodiac sign is listed here
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more