For Quick Alerts
ALLOW NOTIFICATIONS  
For Daily Alerts

  ಜೂನ್ ತಿಂಗಳ ಅಮಾವಾಸ್ಯೆ, ಈ ನಾಲ್ಕು ರಾಶಿಯವರಿಗೆ ಒಳ್ಳೆಯದಾಗಲಿದೆ...

  |
  ಜೂನ್ ತಿಂಗಳ ಅಮಾವಾಸ್ಯೆ ಈ 4 ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ | Oneindia Kannada

  ಪ್ರತಿಯೊಂದು ಅಮವಾಸ್ಯೆಯ ಮುಕ್ತಾಯದ ಅವಧಿಯು ಹುಣ್ಣಿಮೆಯ ಆರಂಭವನ್ನು ಸೂಚಿಸುತ್ತದೆ. ಈ ಪರಿವರ್ತನಾ ಅವಧಿಯು ಸಕಾರಾತ್ಮಕ ಶಕ್ತಿ ಮತ್ತು ತರಂಗಗಳನ್ನು ಪ್ರಚೋದಿಸುತ್ತದೆ. ಜೊತೆಗೆ ಉತ್ತಮ ವಿಚಾರಗಳ ಕುರಿತು ಸಮಯವು ಪ್ರೇರಣೆ ನೀಡುವುದು. ಜೂನ್ ತಿಂಗಳಲ್ಲಿ ಉಂಟಾಗುವ ಅಮವಾಸ್ಯೆ ಪರಿಸರ ಹಾಗೂ ರಾಶಿಚಕ್ರಗಳ ಮೇಲೆ ತೀವ್ರವಾದ ಬದಲಾವಣೆಯನ್ನು ಪ್ರಚೋದಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಬಹಿರಂಗಪಡಿಸುತ್ತದೆ.

  ಚಂದ್ರನು ಪ್ರತಿಯೊಂದು ರಾಶಿಚಕ್ರಗಳ ಮೇಲೂ ವಿಶೇಷವಾದ ಪ್ರಭಾವವನ್ನು ಬೀರುವುದು. ಅಮವಾಸ್ಯೆ ಎಂದರೆ ಒಂದು ಬಗೆಯ ಆತಂಕದ ವಿಚಾರಗಳು ಸಂಭವಿಸುತ್ತದೆ ಹಾಗೂ ಹುಣ್ಣಿಮೆಯಂದು ಒಂದು ಬಗೆಯ ಸಕಾರಾತ್ಮಕ ಶಕ್ತಿ ಗೋಚರವಾಗುವುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮವಾಸ್ಯೆ ಅಥವಾ ಹುಣ್ಣಿಮೆ ಯಾವುದೇ ಆಗಿದ್ದರೂ ಅದು ಅವರ ರಾಶಿಚಕ್ರಗಳ ಆಧಾರದ ಮೇಲೆ ಪರಿಣಾಮ ಬೀರುವುದು ಎನ್ನಲಾಗುವುದು.

  ಜೂನ್ ತಿಂಗಳಲ್ಲಿ ಬರುವ ಅಮವಾಸ್ಯೆಯು ಕೆಲವು ರಾಶಿಚಕ್ರಗಳ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುವುದು. ಅವುಗಳ ಪರಿಣಾಮ ಹೇಗಿರುತ್ತದೆ? ಅವು ಯಾವ ರಾಶಿಚಕ್ರದವರ ಮೇಲೆ ಹೆಚ್ಚಿನ ಬದಲಾವಣೆ ಉಂಟಾಗುವುದು? ಎನ್ನುವದನ್ನು ತಿಳಿಯುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿಶೇಷ ಮಾಹಿತಿಯನ್ನು ಪರಿಶೀಲಿಸಿ....

  ಮಿಥುನ

  ಮಿಥುನ

  ಜೂನ್ ತಿಂಗಳಲ್ಲಿ ಉಂಟಾಗುವ ಅಮವಾಸ್ಯೆಯು ಈ ವ್ಯಕ್ತಿಗಳ ಮೇಲೆ ಹೆಚ್ಚು ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದ ಒಳನೋಟ, ಸಂಬಂಧ, ಕೆಲಸ ಸೇರಿದಂತೆ ಇನ್ನಿತರ ವಿಷಯಗಳ ಕುರಿತಾಗಿ ಸಲಹೆ ಪಡೆಯಲು ಬಯಸುತ್ತಾರೆ. ಪರಿವರ್ತನೆಯ ವಿಚಾರದಲ್ಲಿ ಹೆಚ್ಚಿನ ಆಕಾಂಕ್ಷೆಗಳು ಇವರದ್ದಾಗಿರುವುದು. ಈಗಾಗಲೇ ಇವರು ಹೊಂದಿದ್ದ ಯೋಜನೆಯನ್ನು ಕಟ್ಟಲು ಮತ್ತು ಹೊಸದರ ಎಡೆಗೆ ಹೆಜ್ಜೆ ಹಾಕಲು ಇವರಿಗೆ ಉತ್ತಮ ಸಮಯ ಎಂದು ಹೇಳಲಾಗುವುದು. ಇದು ಇವರಿಗೆ ಉತ್ತಮ ಸಮಯವಾಗಿರುವುದರಿಂದ ತಮ್ಮ ಕೌಶಲ್ಯ ಮತ್ತು ಪ್ರತಿಭೆಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಲಾಗುವುದು.

  ಕನ್ಯಾ

  ಕನ್ಯಾ

  ಈ ಸಮಯದಲ್ಲಿ ಇವರು ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಕೆಲವು ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸಬಹುದು. ಈ ಅಮವಾಸ್ಯೆಯ ಸಮಯವು ಉತ್ತಮ ಚಿಂತನೆಗಳೆಡೆಗೆ ಸಾಗಲು ಸೂಕ್ತವಾಗಿದೆ. ಇವರು ತಮ್ಮ ವೃತ್ತಿಯನ್ನು ಬದಲಾಯಿಸುವ ಹವಣಿಕೆಯಲ್ಲಿದ್ದರೆ ಇದು ಅವರಿಗೆ ಉತ್ತಮ ಸಮಯ. ಈ ರಾಶಿಯವರು ಉದ್ಯಮಿಯಾಗಿದ್ದರೆ ಅನಿರೀಕ್ಷಿತವಾಗಿ ಶೀರ್ಘರದಲ್ಲಿಯೇ ಯಶಸ್ಸು ಹಾಗೂ ಖ್ಯಾತಿಯನ್ನು ಸಾಧಿಸುತ್ತಾರೆ. ಈ ಪರಿವರ್ತನೆಯ ಅವಧಿಯು ಇವರ ವೃತ್ತಿಜೀವನದ ಮೇಲೆ ಪ್ರಮುಖವಾಗಿ ಕೇಂದ್ರೀಕರಿಸುವುದು.

  ಧನು

  ಧನು

  ಈ ಅಮವಾಸ್ಯೆಯು ಇವರಿಗೆ ವಿಶೇಷವಾದ ಬದಲಾವಣೆಯನ್ನು ತಂದುಕೊಡುವುದು. ಅದರಲ್ಲೂ ವಿಶೇಷವಾಗಿ ಸಂಬಂಧಗಳ ವಿಚಾರದಲ್ಲಿ ಎನ್ನಬಹುದು. ವಿವಾಹಿತರಾಗಿದ್ದರೆ ಅಥವಾ ಅವಿವಾಹಿತರೇ ಆಗಿದ್ದರೂ ತಮ್ಮ ಪ್ರೇಯಸಿ ಅಥವಾ ಸಂಗಾತಿಯ ಸಂಬಂಧಗಳಲ್ಲಿ ಬದಲಾವಣೆ ಕಾಣುವರು. ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ಒಂದಿಷ್ಟು ಕೆಲಸ ಮಾಡಲು ಪ್ರೇರಣೆ ದೊರೆಯುವುದು. ಇದೇ ಜೂನ್ 13ರಂದು ಇವರ ಪ್ರಣಯ ಜೀವನವು ವಿಶೇಷವಾದ ಬೆಳಕಿನಿಂದ ಬೆಳಗುವುದು.

  ಮೀನ

  ಮೀನ

  ಸೂರ್ಯನ ಚಿಹ್ನೆಯಡಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಈ ಪರಿವರ್ತನೆಯ ಸಮಯವು ಅತ್ಯುತ್ತಮ ಫಲಿತಾಂಶವನ್ನು ಹಾಗೂ ಬದಲಾವಣೆಯನ್ನು ತಂದುಕೊಡುವುದು. ಪರಿವರ್ತನೆಯ ಅವಧಿಯು ಅವರಲ್ಲಿರುವ ಭಯವನ್ನು ಕಡಿಮೆಮಾಡುವುದು. ಈ ವ್ಯಕ್ತಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವರು. ಈ ತಿಂಗಳ ಅಮವಾಸ್ಯೆಯ ದಿನ ಕುಟುಂಬ ಮತ್ತು ಮನೆ ಸಮಸ್ಯೆಗಳು ನಿವಾರಣೆಯಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

  English summary

  Zodiacs That Will Get Affected By The New Moon

  A new moon is always said to represent the end of one cycle and the beginning of another. This transition period comes with positive energy and vibes which can give you the motivation to start something different. Astrologers reveal that a new moon in Gemini rises on June 13th, and it also happens to be a supermoon, which means it will be even more intense. Check out and find out if your zodiac sign is listed here...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more