For Quick Alerts
ALLOW NOTIFICATIONS  
For Daily Alerts

ವೈವಾಹಿಕ ಜೀವನಕ್ಕೆ ಹೊಂದಿಕೊಳ್ಳದ ರಾಶಿ ಚಕ್ರದವರು, ಇವರಿಗೆ ಜವಾಬ್ದಾರಿ ತುಂಬಾನೇ ಕಡಿಮೆ!

|

ಜೀವನದಲ್ಲಿ ಅತೀ ಪ್ರಾಮುಖ್ಯವಾಗಿರುವ ಘಟ್ಟವೆಂದರೆ ಅದು ವಿವಾಹ. ಯಾಕೆಂದರೆ ಜೀವನಪೂರ್ತಿ ಬಾಳ ಸಂಗಾತಿ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಇಂತಹ ಸಮಯದಲ್ಲಿ ವಿವಾಹವೆನ್ನುವುದು ಅತೀ ಮುಖ್ಯ ಘಟ್ಟವಾಗಿರುವುದು. 12 ರಾಶಿ ಚಕ್ರಗಳಲ್ಲಿ ಕೆಲವೊಂದು ರಾಶಿಗಳು ಮದುವೆಗೆ ಹೇಳಿ ಮಾಡಿಸಿದಂತಿರುತ್ತದೆ. ಇದು ಇಂತಹ ರಾಶಿಯವರು ನಿಮಗೆ ಜೀವನಪೂರ್ತಿ ಪ್ರೀತಿ ಹಾಗೂ ರೊಮ್ಯಾನ್ಸ್ ನೀಡುತ್ತಲಿರುವರು. ಇದಕ್ಕಾಗಿ ನೀವು ಕೆಲವೊಂದು ರಾಶಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಇಂತಹ ರಾಶಿಯವರನ್ನು ಹುಡುಕುವುದು ತುಂಬಾ ಸುಲಭದ ಮಾತಲ್ಲ. ಯಾವುದೇ ಸಂಬಂಧವು ಪರಿಪೂರ್ಣವಾಗಿರಲ್ಲ ಮತ್ತು ಇಂತಹ ಅಪರಿಪೂರ್ಣತೆಯಿಂದಾಗಿ ಹಲವಾರು ರೀತಿಯ ವೈವಾಹಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ದಂಪತಿಯು ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ವಿಫಲವಾದ ಸಮಯದಲ್ಲಿ ವೈವಾಹಿಕ ಜೀವನವು ತೊಂದರೆಗೆ ಸಿಲುಕುವುದು. ಮದುವೆಯ ವಿಚಾರದಲ್ಲಿ ದಂಪತಿಯು ತುಂಬಾ ತಾಳ್ಮೆ, ಹೊಂದಾಣಿಕೆ, ಪ್ರೀತಿ, ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು. ಸಂಬಂಧದಲ್ಲಿ ಯಾವಾಗಲೂ ಮುಕ್ತವಾಗಿರಬೇಕು ಮತ್ತು ಸಂಬಂಧದಲ್ಲಿನ ಸಂವಹನವು ಪರಸ್ಪರರನ್ನು ಮತ್ತಷ್ಟು ಬೆಸೆಯುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಈ ರೀತಿಯ ದಂಪತಿಯು ಸಂಬಂಧದಲ್ಲಿ ತುಂಬಾ ಬಲಿಷ್ಠವಾದ ಅಡಿಪಾಯ ಹಾಕುವರು. ಪರಸ್ಪರರು ಜತೆಯಾಗಿರುವ ತನಕ ಪ್ರೀತಿಗಾಗಿ ಕೆಲಸ ಮಾಡುವುದಾಗಿ ಅವರು ಹೇಳುವರು.

ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವುದು ಅತ್ಯಗತ್ಯ:

ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವುದು ಅತ್ಯಗತ್ಯ:

ಸಂಗಾತಿ ಜತೆಗೆ ಪ್ರತಿನಿತ್ಯವು ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾಗಿರುವುದು ವೈವಾಹಿಕ ಜೀವನದ ಅತೀ ಮುಖ್ಯ ಸಂಗತಿಯಾಗಿರುವುದು. ಇಂತಹ ಸಮಯದಲ್ಲಿ ಇಂತಹ ವ್ಯಕ್ತಿತ್ವ ಹೊಂದಿರುವವರಿಗೆ ದೈನಂದಿನ ಏರಿಳಿತಗಳನ್ನು ನಿಭಾಯಿಸಲು ಕಷ್ಟವಾಗುವುದು ಮತ್ತು ಅವರಿಗೆ ಹೊಂದಿಕೊಂಡು ಹೋಗಲು ಆಗಲ್ಲ. ಈ ಕಾರಣದಿಂದಾಗಿ ಹೊಸ ಸಂಬಂಧದಲ್ಲಿನ ಕುತೂಹಲ ಬೇಗನೆ ಮಾಯವಾಗುವುದು. ಈ ರೀತಿ ಆದಾಗ ಹೆಚ್ಚಿನ ಜನರು ತುಂಬಾ ನಿರಾಶೆಗೆ ಒಳಗಾಗುವರು. ಈ ಲೇಖನದಲ್ಲಿ ತಿಳಿಸಲಾಗಿರುವಂತಹ ಐದು ರಾಶಿಯವರು ಹೆಚ್ಚು ಪ್ರಾಮುಖ್ಯತೆ ಪಡೆಯಲು ಕಾರಣವೇನು ಎಂದು ತಿಳಿಯಿರಿ. ದೀರ್ಘಕಾಲದ ಸಂಬಂಧ ಅಥವಾ ಮದುವೆಯಲ್ಲಿ ಇವರು ಪ್ರೀತಿ ಪಡೆಯುವುದಿಲ್ಲವೆಂದಲ್ಲ. ಆದರೆ ಇವರು ಇದೇ ರೀತಿಯಲ್ಲಿ ಬೆಳೆದಿರುವರು ಮತ್ತು ಇವರ ವ್ಯಕ್ತಿತ್ವ ಕೂಡ ಇದೇ ರೀತಿಯಿಂದ ನಿರ್ಮಾಣವಾಗಿರುವುದು. ಇದರ ಬಗ್ಗೆ ನೀವು ಮುಂದಕ್ಕೆ ಓದುತ್ತಾ ಸಾಗಿ...

ಧನು

ಧನು

ಧನು ರಾಶಿಯವರಿಗೆ ಯಾವಾಗಲೂ ಸ್ವಾತಂತ್ರ್ಯ ಮತ್ತು ಸಾಹಸವು ಬೇಕಾಗಿರುವುದು. ಅದಾಗ್ಯೂ, ಸಂಬಂಧವು ಯಾವಾಗಲೂ ಒಂದು ಮಟ್ಟದ ಪಳಗುವಿಸುವಿಕೆ ಮತ್ತು ಮುನ್ನೋಟ ಬೇಕು. ಇದು ಧನು ರಾಶಿಯವರಿಗೆ ಭೀತಿ ಮೂಡಿಸುವುದು. ಇವರು ಬದ್ಧತೆಯ ವ್ಯಕ್ತಿಗಳಾಗಿರಲ್ಲ. ಇದರಿಂದಾಗಿ ದೀರ್ಘಕಾಲದ ಸಂಬಂಧವೆನ್ನುವುದು ಇವರಿಗೆ ಹೇಳಿ ಮಾಡಿಸಿರುವ ವಿಚಾರವಲ್ಲ.

ಕುಂಭ

ಕುಂಭ

ಕುಂಭ ರಾಶಿಯವರು ಯಾವಾಗಲೂ ತಮ್ಮ ಬಗ್ಗೆ ಹೆಚ್ಚು ಆಲೋಚನೆ ಮಾಡುವವರು. ಇವರು ತುಂಬಾ ವಿಶ್ಲೇಷಣೆ ಮಾಡುವರು. ಆದರೆ ಇವರು ಭಾವನಾತ್ಮಕವಾಗಿ ತುಂಬಾ ದುರ್ಬಲರು. ಇವರಿಗಾಗಿಯೇ ಹೆಚ್ಚು ಸಮಯ ವ್ಯಯ ಮಾಡುವರು. ಇವರು ತಮ್ಮ ಖಾಸಗಿತನ ಮತ್ತು ಏಕಾಂತಕ್ಕೆ ಬೆಲೆ ಕೊಡುವರು. ಸಂಬಂಧಲ್ಲಿ ಇಂತಹ ವಿಚಾರಗಳು ಯಾವಾಗಲೂ ತುಂಬಾ ಕೆಟ್ಟ ಪರಿಣಾಮ ಬೀರುವುದು.

Most Read: ಈ ರಾಶಿಚಕ್ರದವರು ಅತ್ಯಂತ ಆಕ್ರಮಣಶೀಲ ಮತ್ತು ಹಿಂಸಾತ್ಮಕ ಪ್ರವೃತ್ತಿಯನ್ನು ತೋರುವರು!

ಸಿಂಹ

ಸಿಂಹ

ಸಿಂಹ ರಾಶಿಯವರು ತುಂಬಾ ಸ್ವಾರ್ಥಿ ಸ್ವಭಾವದ ವ್ಯಕ್ತಿಗಳಾಗಿರುವರು. ಇವರು ತುಂಬಾ ಸ್ವಹಿತಾಸಕ್ತಿ ಹೊಂದಿರುವವರು ಮತ್ತು ಬೇರೆಯವರ ಬಗ್ಗೆ ಆಲೋಚನೆ ಮಾಡುವುದು ತುಂಬಾ ಕಡಿಮೆ. ಬೇರೆ ಜನರ ಆಲೋಚನೆ, ಬೇಡಿಕೆ ಮತ್ತು ಭಾವನೆಗಳನ್ನು ಇವರು ಅರ್ಥ ಮಾಡಿಕೊಳ್ಳುವುದು ತುಂಬಾ ಕಡಿಮೆ. ಸಂಬಂಧದಲ್ಲಿ ಇವರು ತುಂಬಾ ಹಾನಿಕಾರಕವಾಗಿರುವರು.

ವೃಷಭ

ವೃಷಭ

ವೃಷಭ ರಾಶಿಯವರೊಂದಿಗೆ ಜೀವನ ಸಾಗಿಸುವುದು ತುಂಬಾ ಕಠಿಣ ಕೆಲಸವಾಗಿರುವುದು. ಇವರು ತುಂಬಾ ಹಠಮಾರಿಗಳು ಹಾಗೂ ತಮ್ಮದೇ ವಾದ ಮಂಡಿಸುವವರು. ಇತರರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಇವರಿಗೆ ತಿಳಿದೇ ಇಲ್ಲ. ಇವರಲ್ಲಿ ಇರುವಂತಹ ನಿಷ್ಠೆ ಮತ್ತು ಬದ್ಧತೆಯು ತುಂಬಾ ಕಡಿಮೆ.

Most Read: ಈ ಆರು ರಾಶಿಚಕ್ರದವರು ಹೆಚ್ಚು ಬಿಗುಮಾನ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ

ಮಿಥುನ

ಮಿಥುನ

ಮಿಥುನ ರಾಶಿಯ ವ್ಯಕ್ತಿಗಳು ತುಂಬಾ ಚಂಚಲ ಮನಸ್ಸಿನವರಾಗಿರುವರು. ಇವರಿಗೆ ಸಂಬಂಧದಲ್ಲಿ ಗಮನಕೇಂದ್ರೀಕರಿಸಲು ತುಂಬಾ ಸಮಸ್ಯೆಯಾಗುವುದು. ಯಾಕೆಂದರೆ ಇವರು ತಾವು ಕಳೆದುಕೊಳ್ಳುವ ವಿಚಾರಗಳ ಬಗ್ಗೆ ಅತಿಯಾಗಿ ಚಿಂತೆ ಮಾಡುತ್ತಲಿರುವರು. ಈ ಕಾರಣದಿಂದಾಗಿ ಇವರಿಗೆ ವೈವಾಹಿಕ ಜೀವನದಲ್ಲಿ ಸರಿಯಾದ ಅರ್ಥ ಮತ್ತು ಸಂತೃಪ್ತಿ ಪಡೆಯಲು ಸಾಧ್ಯವಾಗದು.

English summary

Zodiac Signs With The Worst Chances Of Ever Getting Married

The best kinds of marriages are always those that are composed of couples who are able to practice patience, understanding, love, sensitivity, and humility with one another. These are the couples who really know that it takes a great deal of openness and communication in a relationship in order for them both to get as close to one another as possible. These couples know that it’s not enough that they build strong foundations for their relationship; they know that they continuously have to be working on their love for as long as they stay together.
Story first published: Friday, December 14, 2018, 14:40 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more