For Quick Alerts
ALLOW NOTIFICATIONS  
For Daily Alerts

  ಜುಲೈ ತಿಂಗಳಲ್ಲಿ ಈ 6 ರಾಶಿಯವರ ಲವ್ ಸಕ್ಸಸ್ ಆಗಲಿದೆಯಂತೆ!

  By Hemanth
  |

  ಪ್ರತಿಯೊಬ್ಬರಿಗೂ ತನ್ನ ರಾಶಿಚಕ್ರದ ಫಲಾಫಲಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ, ಕುತೂಹಲ ಇದ್ದೇ ಇರುತ್ತದೆ. ಯಾಕೆಂದರೆ ಇದರ ಮೂಲಕ ಬರಬಹುದಾದ ಕಠಿಣ ಸಮಯವನ್ನು ನಿವಾರಣೆ ಮಾಡಲು ನೆರವಾಗುವುದು. ಇಂತಹ ಸಮಯದಲ್ಲಿ ನಿಮಗಿಲ್ಲಿ ನಾವು ಪ್ರತಿತಿಂಗಳ ರಾಶಿಭವಿಷ್ಯದೊಂದಿಗೆ ಆಕಾಶದಲ್ಲಿ ಆಗುವಂತಹ ಬದಲಾವಣೆಗಳಿಂದ ನಿಮ್ಮ ರಾಶಿಗಳ ಮೇಲೆ ಯಾವ್ಯಾವ ಪರಿಣಾಮ ಬೀರಬಹುದು ಎಂದು ಹೇಳುತ್ತೇವೆ.

  ಜುಲೈ ತಿಂಗಳಲ್ಲಿ ಕೆಲವು ರಾಶಿಯವರಿಗೆ ಪ್ರೀತಿ ವಿಚಾರದಲ್ಲಿ ತುಂಬಾ ಒಳ್ಳೆಯ ತಿಂಗಳಾಗಿರಲಿದೆ. ಯಾವ್ಯಾವ ರಾಶಿಯವರಿಗೆ ಜುಲೈ ತಿಂಗಳಲ್ಲಿ ಪ್ರೀತಿ ವಿಚಾರದಲ್ಲಿ ತುಂಬಾ ಅದೃಷ್ಟವನ್ನು ತರಲಿದೆ ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ...

  ಮೀನ: ಫೆ.19-ಮಾ.20

  ಮೀನ: ಫೆ.19-ಮಾ.20

  ಮೀನ ರಾಶಿಯವರಿಗೆ ಕೆಲವು ಅಸಮವಾದ ವಿಚಾರಗಳು ಕಂಡುಬರಲಿದೆ. ಇವರು ತಮ್ಮ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಇವರು ತಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ರಾತ್ರಿಗಳನ್ನು ಕಳೆಯಲಿದ್ದಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಈ ರಾಶಿಯವರಿಗೆ ಈ ತಿಂಗಳು ತುಂಬಾ ಸಾಹಸಮಯ, ರೋಮ್ಯಾಂಟಿಕ್ ಮತ್ತು ಸಮತೋಲನದ ಸಮಯ.ಇನ್ನು ಈ ರಾಶಿಯವರು ಇವರು ವೈಯಕ್ತಿಕ ಕ್ರಿಯಾತ್ಮಕತೆ ಮತ್ತು ಆತ್ಮಾಭಿವ್ಯಕ್ತಿಗೆ ಹೆಚ್ಚಿನ ಸಮಯ ನೀಡಲಿರುವರು. ಇನ್ನೊಂದು ಕಡೆಯಲ್ಲಿ ಇವರ ಅಸ್ತಿತ್ವದ ಉದ್ದೇಶವು ದೊಡ್ಡ ಮಟ್ಟದ ಚಿಂತೆಯಾಗಿದೆ. ಇವರ ದೈನಂದಿನ ಜೀವನವು ವ್ಯಸ್ತವಾಗಿರಲಿದೆ. ಆರೋಗ್ಯದ ಸಮಸ್ಯೆಯು ಇವರನ್ನು ಕಾಡಬಹುದು. ಮನೆ ಹಾಗೂ ಕುಟುಂಬದ ವಾತಾವರಣವು ಉತ್ತಮವಾಗಿರಲಿದೆ.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ವೃಶ್ಚಿಕ ರಾಶಿಯವರು ಕೆಲವು ಸಮಯದಿಂದ ತಮ್ಮ ಸಂಬಂಧದ ಬಗ್ಗೆ ತುಂಬಾ ಗೊಂದಲದಲ್ಲಿದ್ದರು. ಆದರೆ ಜುಲೈ ತಿಂಗಳು ಇವರಿಗೆ ಒಳ್ಳೆಯದಾಗಿರಲಿದೆ. ಇವರು ಈ ತಿಂಗಳಲ್ಲಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಈ ತಿಂಗಳಲ್ಲಿ ಇವರ ರೋಮ್ಯಾನ್ಸ್ ಆರಂಭವಾಗಲಿದೆ ಮತ್ತು ಇದು ಉತ್ತುಂಗದಲ್ಲಿರಲಿದೆ. ಸಂಗಾತಿ ಜತೆಗೆ ಇವರಿಗೆ ಈ ತಿಂಗಳಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ. ಇನ್ನು ಈ ತಿಂಗಳು ವೃಶ್ಚಿಕ ರಾಶಿಯವರಿಗೆ ನಿರಂತರ ಪಾಲ್ಗೊಳ್ಳುವಿಕೆ ಮತ್ತು ಭಾವನಾತ್ಮಕವಾಗಿ ರೂಪಾಂತವಾಗುವುದು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಇವರಿಗೆ ನೆರವಾಗುವುದು. ಹೊಸದೊಂದು ಅಧ್ಯಯನವು ಇವರಿಗೆ ವೃತ್ತಿಯಲ್ಲಿ ನೆರವಿಗೆ ಬರಲಿದೆ. ಆದರೆ ಇವರು ತಮ್ಮ ಜೀವನದ ಅರ್ಥಕ್ಕಾಗಿ ಹುಡುಕುತ್ತಲಿರುವರು. ಪ್ರಯಾಣಕ್ಕೆ ಈ ತಿಂಗಳು ಅತ್ಯುತ್ತಮವಾಗಿರಲಿದೆ. ಇನ್ನೊಂದು ಬದಿಯಲ್ಲಿ ವೃತ್ತಿಪರ ಬದುಕಿನಲ್ಲಿ ಇವರ ಸಂವಹನವು ಅತೀ ಅಗತ್ಯವಾಗಿದೆ. ಇವರ ಸಾಮಾಜಿಕವಾಗಿ ತಮ್ಮ ಹೆಸರನ್ನು ಉತ್ತಮಪಡಿಸಬೇಕು. ಇದರ ಹೊರತಾಗಿ ಇವರ ಕ್ರಿಯಾತ್ಮಕ ಶಕ್ತಿಯು ಇವರ ವೃತ್ತಿಗೆ ನೆರವಾಗಲಿದೆ. ಬೇರೆಯವರ ಜತೆ ವಾಗ್ವಾದ ಮಾಡದಂತೆ ಎಚ್ಚರಿಕೆ ವಹಿಸಬೇಕು. ಈ ತಿಂಗಳಲ್ಲಿ ಇವರು ಲೈಂಗಿಕ ಜೀವನವು ಹೆಚ್ಚು ಆಳ ಹಾಗೂ ತೀವ್ರತೆಯಿಂದ ಕೂಡಿರಲಿದೆ.

  ವೃಷಭ: ಎಪ್ರಿಲ್ 20-ಮೇ 20

  ವೃಷಭ: ಎಪ್ರಿಲ್ 20-ಮೇ 20

  ಈ ವಾರ ವೃಷಭ ರಾಶಿಯವರು ತಮ್ಮ ಕನಸಿನ ಸಂಗಾತಿಯ ಭೇಟಿಯಾಗಲಿರುವರು. ಇವರು ಮನಸ್ಸು ಮತ್ತು ಸ್ಪೂರ್ತಿಗೆ ಸಂಗಾತಿಯು ಪ್ರಭಾವ ಬೀರಲಿರುವರು. ಇವರು ಕ್ರಿಯಾತ್ಮಕತೆಗೆ ಪ್ರೇರಣೆಯಾಗಲಿರುವರು. ಇಡೀ ತಿಂಗಳಲ್ಲಿ ಭಾವನೆಯು ಉತ್ತುಂಗದಲ್ಲಿರುವ ಕಾಲವಾಗಿದೆ. ಅಷ್ಟೇ ಅಲ್ಲದೆ ವೃಷಭ ರಾಶಿಯವರಿಗೆ ಜುಲೈ ತಿಂಗಳ ಪ್ರತಿಯೊಂದು ದಿನವೂ ಶ್ರೇಷ್ಠವಾಗಿರುವುದು. ಇವರ ಮಾತನಾಡುವ, ಬರೆಯುವ ಮತ್ತು ಕಲಿಯುವ ಸಾಮರ್ಥ್ಯವು ಅಗ್ರ ಪ್ರಾಶಸ್ತ್ಯ ಪಡೆಯಲಿದೆ. ಈ ವ್ಯಕ್ತಿಗಳು ತಮ್ಮ ಅಸ್ತಿತ್ವದ ಬಗ್ಗೆ ಆಳವಾದ ಜ್ಞಾನ ಪಡೆದು ಕೊಳ್ಳಲು ಹೆಚ್ಚಿನ ಸಮಯ ಕಳೆಯುವರು. ಇವರ ವೈಯಕ್ತಿಕ ಬದುಕು ಹಲವಾರು ಚಟುವಟಿಕೆಗಳಿಂದ ಕೂಡಿರಲಿದೆ. ಈ ತಿಂಗಳಲ್ಲಿ ಅವರು ತಮ್ಮ ಪ್ರೀತಿಪಾತ್ರರೊಂದಿಗೆ ಹಲವಾರು ಮಾತುಕತೆಗಳನ್ನು ನಡೆಸಲಿದ್ದಾರೆ. ಕುಟುಂಬದವರೊಂದಿಗೆ ವಾಗ್ವಾದವಾಗುವುದನ್ನು ತಪ್ಪಿಸಬೇಕು. ಇದರ ಹೊರತಾಗಿ ಹೊಸ ಮನೆ ಕಟ್ಟುವುದು, ಮನೆ ರಿಪೇರಿಯ ಕೆಲಸಗಳು ಬುಧನ ವಿರುದ್ಧಗತಿಯ ಮೊದಲು ನಡೆಯಬೇಕು.

  ಮಿಥುನ: ಮೇ 21- ಜೂನ್ 20

  ಮಿಥುನ: ಮೇ 21- ಜೂನ್ 20

  ಕಳೆದ ಕೆಲವು ವಾರಗಳಿಂದ ಮಿಥುನ ರಾಶಿಯವರಿಗೆ ಪ್ರೀತಿ ವಿಚಾರದಲ್ಲಿ ತುಂಬಾ ಬರಗಾಲ ಎದುರಾಗಿತ್ತು. ಆದರೆ ಈ ತಿಂಗಳು ಆರಂಭವಾಗುತ್ತಿದ್ದಂತೆ ಪ್ರೀತಿಯ ಸುರಿಮಳೆಯಾಗಲಿದೆ. ಈ ತಿಂಗಳಲ್ಲಿ ಇವರು ಸಂಗಾತಿ ಜತೆಗೆ ಮನಸ್ಸಿಗೆ ಬಂದಂತೆ ವರ್ತಿಸಬಹುದು. ಇನ್ನು ಮಿಥುನ ರಾಶಿಯವರಿಗೆ ಈ ತಿಂಗಳು ಆರ್ಥಿಕ ಮತ್ತು ವೈಯಕ್ತಿಕ ಬದಲಾವಣೆಗಳ ತಿಂಗಳಾಗಲಿದೆ. ಇವರು ಸಂಪತ್ತು, ಸ್ಥಾನಮಾನ ಮತ್ತು ಸ್ವಯಂಮೌಲ್ಯದ ಕಡೆಗೆ ಹೆಚ್ಚಿನ ಗಮನಹರಿಸುವರು. ಇನ್ನೊಂದು ಕಡೆಯಲ್ಲಿ ಪ್ರೀತಿಪಾತ್ರರೊಂದಿಗೆ ಇವರ ಸಂವಹನವು ಹೆಚ್ಚಾಗಲಿದೆ. ಇವರು ಬಳಸುವಂತಹ ಶಬ್ಧಗಳ ಬಗ್ಗೆ ಹೆಚ್ಚಿನ ಗಮಹರಿಸುವುದು ಉತ್ತಮ. ಯಾಕೆಂದರೆ ಇವು ವಿಧ್ವಂಸಕಕಾರಿ ಯಾಗಬಹುದು. ಎಪ್ರಿಲ್ ತಿಂಗಳಿಂದ ಶುಕ್ರನು ಈ ರಾಶಿಯಲ್ಲಿ ಪಯಣಿಸುತ್ತಿರುವ ಕಾರಣದಿಂದ ವೈಯಕ್ತಿಕ ಹಾಗೂ ಸಮಾಜ ಮುಖಿಯಾಗಿರುವರು.

  ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಪ್ರೀತಿಯ ಗ್ರಹ ಶುಕ್ರನು ಕನ್ಯಾ ರಾಶಿಗೆ ಜುಲೈ 10ರಂದು ಜತೆಯಾಗುವನು. ಸಂಬಂಧದ ವಿಚಾರದಲ್ಲಿ ಈ ರಾಶಿಯವರಿಗೆ ದೊಡ್ಡ ಮಟ್ಟದ ಸಂಭ್ರಮ ಎದುರಾಗಲಿದೆ. ಈ ಸಂಭ್ರಮವು ಇವರ ಜೀವನದ ಮೇಲೆ ಒಳ್ಳೆಯ ಪರಿಣಾಮ ಬೀರುವುದು. ಒಳ್ಳೆಯ ಮಾತುಗಳು ಒಳ್ಳೆಯ ಜನರನ್ನು ಸೆಳೆಯುವುದು. ಇದರಿಂದ ಧನಾತ್ಮಕವಾಗಿರಿ. ಈ ತಿಂಗಳಲ್ಲಿ ಕನ್ಯಾ ರಾಶಿಯ ಜನರ ಪ್ರಾಯೋಗಿಕ, ವಿಶ್ಲೇಷಣಾತ್ಮಕ ಮತ್ತು ಆತ್ಮಸಾಕ್ಷಿಯ ವ್ಯಕ್ತಿತ್ವವು ಬೆಳಕಿಗೆ ಬರುವುದು. ಉನ್ನತ ಮಟ್ಟದ ಗುರಿಗಾಗಿ ಇವರು ಸ್ವಲ್ಪ ಮಟ್ಟದಲ್ಲಿ ಧ್ಯಾನಾಸಕ್ತರಾದರೆ ತುಂಬಾ ಒಳ್ಳೆಯದು. ಇವರಿಗೆ ಉದ್ಯಮ ಹಾಗೂ ವೃತ್ತಿ ಬದುಕಿನಲ್ಲಿ ತುಂಬಾ ಒಳ್ಳೆಯ ಪರಿಸ್ಥಿತಿ ಒದಗಿ ಬರಲಿದೆ. ಇವರು ತಮ್ಮಲ್ಲಿರುವ ಕೆಲವು ರಹಸ್ಯ ಹಾಗೂ ಮಾತನಾಡದೆ ಇರುವಂತಹ ಶಬ್ಧಗಳ ಬಗ್ಗೆ ಗಮನಹರಿಸಬೇಕು. ಯಾಕೆಂದರೆ ಇದೇ ಇವರಿಗೆ ತೊಂದರೆ ನೀಡಬಹುದು.

  ಧನು: ನ.23-ಡಿ.22

  ಧನು: ನ.23-ಡಿ.22

  ಧನು ರಾಶಿಯವರಿಗೆ ದೀರ್ಘ ಸಮಯದ ಕಾಯುವಿಕೆಯು ಅಂತ್ಯವಾಗಲಿದ್ದು, ಇವರ ಸಂಬಂಧವು ಕೆಲಸ ಮಾಡುವುದು. ಇವರ ಸಂಬಂಧವು ದೊಡ್ಡ ಮಟ್ಟದ ಕಿಡಿ ಹಚ್ಚಿದ್ದು, ಈ ಸಂಬಂಧವನ್ನು ಅಧಿಕೃತವಾಗಿಸಲು ಇವರು ಮತ್ತೊಮ್ಮೆ ಯೋಚಿಸಬೇಕಿಲ್ಲ. ಕನಸಿನ ಸಂಗಾತಿಯ ಭೇಟಿಯಾಗಲು ಸಿಗುವ ಅವಕಾಶವನ್ನು ಬಳಸಿಕೊಳ್ಳಿ ಮತ್ತು ಇದರ ಬಳಿಕ ಹಿಂತಿರುಗಿ ನೋಡಬೇಡಿ. ಇನ್ನು ಈ ರಾಶಿಯವರಿಗೆ ಹೊಸ ವೃತ್ತಿಯು ಇವರ ಜೀವನದಲ್ಲಿ ಹೊಸ ದಾರಿ ಮಾಡಿ ಕೊಡುವುದು ಮಾತ್ರವಲ್ಲದೆ ಆತ್ಮದಲ್ಲಿಯೂ ಇವರನ್ನು ಆಳವಾಗಿ ಎಚ್ಚರಿಸಲಿದೆ. ಕೆಲವರು ಈ ತಿಂಗಳಲ್ಲಿ ಮದುವೆಯಾಗಬಹುದು. ಇನ್ನೊಂದು ಕಡೆಯಲ್ಲಿ ಕಾನೂನು ಸಂಬಂಧಿಸಿದ ವಿಚಾರಗಳು ಕೋರ್ಟ್ ನ ಹೊರಗಡೆ ಬಗೆಹರಿಯಲಿದೆ. ಹೊಸ ಅನುಭವಗಳು ಇವರನ್ನು ಎದುರು ನೋಡುತ್ತಲಿದೆ. ಈ ತಿಂಗಳಲ್ಲಿ ಪ್ರಯಾಣದ ಅವಕಾಶವಿದೆ.

  English summary

  Zodiac Signs Who Will Have The Best Love Lives In July 2018

  With so many celestial movements happening, there are chances that each of the zodiac signs will be affected in a way or the other. According to zodiacs, there are those signs which will be lucky regarding love during July.
  Story first published: Thursday, July 5, 2018, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more