For Quick Alerts
ALLOW NOTIFICATIONS  
For Daily Alerts

ಈ ಆರು ರಾಶಿಯವರು ವಿಶಾಲ ಹೃದಯದವರು! ಕೈಲಾದ ಸಹಾಯ ಮಾಡುತ್ತಾರೆ...

By Deepu
|

ಇನ್ನೊಬ್ಬರಿಗೆ ಸಹಾಯ ಮಾಡುವುದು, ಅವರ ದುಃಖಕ್ಕೆ ಸಾಂತ್ವನ ನೀಡುವುದು ಎಂದರೆ ಅದು ಸಾಮಾನ್ಯವಾದ ಕೆಲಸವಲ್ಲ. ಏಕೆಂದರೆ ಅಂತಹ ಸಂದರ್ಭ ಅಥವಾ ಸನ್ನಿವೇಶದಲ್ಲಿ ವ್ಯಕ್ತಿ ತನ್ನ ಸ್ವಾರ್ಥ ಗುಣವನ್ನು ತ್ಯಜಿಸಿರಬೇಕಾಗುತ್ತದೆ. ನಿಸ್ವಾರ್ಥ ಮಸ್ಸಿದ್ದಾಗ ಮಾತ್ರ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವು ಮನಸ್ಸಿನಲ್ಲಿ ನೆಲೆಯೂರುವುದು. ಸಾಮಾನ್ಯವಾಗಿ ಪ್ರತಿಯೊಬ್ಬರು ಸ್ವಾರ್ಥ ಗುಣವನ್ನು ಹೊಂದಿರುತ್ತಾರೆ. ಅದರಲ್ಲಿ ಕೆಲವರು ಮಾತ್ರ ಇತರರಿಗೂ ಸಹಾಯ ಮಾಡುವಂತಹ ಗುಣವನ್ನು ಹೊಂದಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಸ್ವಭಾವತಃ ಒಳ್ಳೆಯ ಗುಣಗಳನ್ನು ಹೊಂದಿರುತ್ತಾರೆ. ಅವರು ತಮ್ಮಂತೆಯೇ ಇತರರು ಎಂದು ಭಾವಿಸುವರು. ಜೊತೆಗೆ ಇತರರಿಗೂ ಕೈಲಾದ ಸಹಾಯ ಮಾಡಲು ಮುಂದಾಗುವರು ಎಂದು ಹೇಳಲಾಗುತ್ತದೆ. ಹಾಗೊಮ್ಮೆ ಅಂತಹ ಉದಾರ ಗುಣದ ವ್ಯಕ್ತಿಗಳು ನಿಮ್ಮ ಸ್ನೇಹಿತರು ಅಥವಾ ಬಂಧುಗಳಾಗಿದ್ದರೆ ಅದು ನಿಮ್ಮ ಅದೃಷ್ಟ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಆ ರಾಶಿಚಕ್ರದವರು ಯಾವರೀತಿಯಲ್ಲಿ ಇತರರಿಗೆ ಸಹಾಯ ಮಾಡಲು ಮುಂದಾಗುವರು? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ನೋಡಿ ಅರಿಯಿರಿ....

1.ಮೀನ

1.ಮೀನ

ಮೀನ ರಾಶಿಯವರು ಅತ್ಯಂತ ಶಾಂತ ಸ್ವಭಾವದವರು ಎಂದು ಹೇಳಲಾಗುವುದು. ಅತ್ಯಂತ ಮೃದು ಸ್ವಭಾವದವರಾದ ಇವರು ವಿನಮ್ರತೆಯನ್ನು ಹಾಗೂ ಸಹಾನುಭೂತಿಯನ್ನು ತೋರುವರು. ಇವರ ಆಪ್ತರು ಅಥವಾ ಸ್ನೇಹಿತರು ಯಾರಾದರೂ ಕಷ್ಟದಲ್ಲಿದ್ದಾರೆ ಎಂದಾದರೆ ಮೊದಲು ಅವರಿಗೆ ಸಹಾಯ ಮಾಡಲು ಮುಂದಾಗುವರು. ಸೃಜನಾತ್ಮಕ ಗುಣಗಳನ್ನು ಒಳಗೊಂಡಿದ್ದರೂ ಸಹ ಸರಳವಾದ ಗುಣವನ್ನು ತೋರಿಸುವುದರ ಮೂಲಕ ಇತರರಿಗೆ ದಯೆಯನ್ನು ತೋರುವರು. ಇನ್ನು ಸ್ವಭಾವದಲ್ಲಿ ಸ್ನೇಹಪರರಾಗಿದ್ದು, ಶಾಂತ ಚಿತ್ತದವರು ಎಂದರೆ ಮೀನ ರಾಶಿಯವರು. ಇವರ ಸ್ನೇಹದ ಗುಣವು ಇವರ ಸುತ್ತಲು ಒಂದಷ್ಟು ಜನರು ಸುತ್ತಿರುವಂತೆ ಮಾಡುತ್ತದೆ. ಇವರಲ್ಲಿ ನೈಸರ್ಗಿಕವಾಗಿಯೇ ಒರಟುತನವಿದ್ದರೂ ಅದನ್ನು ಸುಂದರವಾಗಿ ಮರೆ ಮಾಚುವುದರ ಮೂಲಕ ಸಮಾಜಕ್ಕೆ ಮೃದು ಗುಣವನ್ನು ತೋರ್ಪಡಿಸುತ್ತಾರೆ. ಸೂರ್ಯನ ಚಿಹ್ನೆಯನ್ನು ಹೊಂದಿರುವ ಇವರು ತಮ್ಮ ಭಾವನೆಯನ್ನು ಮತ್ತು ಪ್ರೀತಿಯನ್ನು ಇತರರಿಗೆ ಸುಲಭವಾಗಿ ತೋರುತ್ತಾರೆ. ಈ ಗುಣಗಳೇ ಅವರಿಗೆ ಹೆಚ್ಚು ಪಾರದರ್ಶಕತೆಯನ್ನು ತಂದುಕೊಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2018ರ ಜೂನ್ ತಿಂಗಳಲ್ಲಿ ಇವರಿಗೆ ಆರೋಗ್ಯವು ದುರ್ಬಲವಾಗಿರುತ್ತದೆ. ಆರೋಗ್ಯ ಎನ್ನುವ ಆಸ್ತಿಯು ದುರ್ಬಲವಾಗಿರುತ್ತದೆ. ಜೂನ್ 21ರ ತನಕವೂ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕಾಗುವುದು. ಜೊತೆಗೆ ಆರೋಗ್ಯಕರವಾದ ಆಹಾರವನ್ನೇ ಸೇವಿಸಬೇಕು. ಆಗ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆರೋಗ್ಯದ ಸಮಸ್ಯೆಯಿಂದ ಚಿಂತಿಸುವುದನ್ನು ತಡೆಯಬಹುದು. ಈ ತಿಂಗಳಲ್ಲಿ ನಿಮಗೆ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿರುತ್ತದೆ ಎಂದರ್ಥವಲ್ಲ. ಸೂಕ್ತ ಮುನ್ನೆಚ್ಚರಿಕೆ ಹಾಗೂ ಆರೈಕೆ ಮಾಡಿಕೊಳ್ಳುವುದರಿಂದ ನಿಮ್ಮ ಉತ್ಸಾಹದ ಪ್ರವೃತ್ತಿಗೆ ಒಂದಿಷ್ಟು ಸಹಾಯವಾಗುವುದು. ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚುವುದು. ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಂದ ಮುಕ್ತರಾಗಬಹುದು. ಮಾನಸಿಕ ಒತ್ತಡವು ಕಡಿಮೆಯಾಗುವುದು.

2. ಕರ್ಕ

2. ಕರ್ಕ

ಈ ರಾಶಿಯವರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇವರು ರಹಸ್ಯವಾದ ಗುಣಗಳನ್ನು ಹೊಂದಿರುವುದಕ್ಕಿಂತ ಅತ್ಯಂತ ಕಾಳಜಿಯನ್ನು ತೋರುವರು. ನಿರ್ಗತಿಕರು ಎಂದಾದರೆ ಅಂತಹವರಿಗೆ ಮೊದಲು ಸಹಾಯ ಮಾಡಲು ಮುಂದಾಗುವರು. ಉತ್ತಮ ಆಲೋಚನೆಗಳನ್ನು ಹೊಂದಿರುವ ಇವರು ತಮ್ಮ ಕೈಗಳನ್ನು ಸದಾ ಸಹಾಯಕ್ಕಾಗಿಯೇ ಮುಂದಿಡುವರು. ಹಾಗಾಗಿ ಇವರು ಅತ್ಯಂತ ವಿಶಾಲ ಮನಸ್ಸಿನವರು ಎಂದು ಹೇಳಲಾಗುವುದು. ಈ ರಾಶಿಚಕ್ರದವರು ತಮ್ಮ ಸುತ್ತಲಲ್ಲಿ ಇರುವ ವ್ಯಕ್ತಿಗಳಿಗೆ ಸದಾ ಒಳಿತನ್ನು ಬಯಸುತ್ತಾರೆ. ಕೆಲವರು ಇವರ ಒಳ್ಳೆತನವನ್ನು ತಮ್ಮ ಲಾಭಕ್ಕೆ ಅಥವಾ ಸ್ವಾರ್ಥಕ್ಕೆ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ರಾಶಿಚಕ್ರದವರು ಅತ್ಯಂತ ಸಂವೇದನಾಶೀಲರು ಎಂದು ಹೇಳಬಹುದು. ಇವರ ಈ ಗುಣವೇ ಇತರರಿಗೆ ಅಧಿಕ ಪ್ರಮಾಣದಲ್ಲಿ ಸಹಾಯ ಮಾಡಲು ಸಹಕರಿಸುವುದು. ಇತರರಿಗೆ ಸಹಾಯ ಮಾಡುವುದನ್ನು ಇವರು ದೈನಂದಿನ ದಿನಚರಿಯಂತೆ ಕಾಣುವರು.

3. ಮೇಷ

3. ಮೇಷ

ಈ ರಾಶಿಯ ವ್ಯಕ್ತಿಗಳು ಸದಾ ಕಾಳಜಿಯನ್ನು ತೋರುವುದರಲ್ಲಿ ನಿರತರಾಗಿರುತ್ತಾರೆ ಎಂದು ಹೇಳಬಹುದು. ಇವರು ಹೃತ್ಪೂರ್ವಕವಾಗಿಯೆ ಜನರಿಗೆ ಕಾಳಜಿ ತೋರುತ್ತಾರೆ. ಸ್ಪರ್ಧಾತ್ಮಕ ಗುಣ ಇವರದ್ದಾದರೂ ಅಸಹಾಯಕರಿಗೆ ಅಥವಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುವರು. ಜೊತೆಗೆ ಅಗತ್ಯ ಬಿದ್ದಾಗ ತಾವೇ ಸ್ವತಹ ಸ್ವಯಂ ಸೇವಕರಾಗಿ ಕೆಲಸಮಾಡಬಲ್ಲರು. ಇನ್ನು ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ನಡೆಯುವ ಕೆಲವು ಗ್ರಹಗತಿಗಳ ಚಲನೆ ಹಾಗೂ ಬದಲಾವಣೆಗಳು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 2018ರ ಜೂನ್ ತಿಂಗಳು ಈ ರಾಶಿಯವರಿಗೆ ಸಿನಿಮಾದ ರೀತಿಯಲ್ಲಿ ಬದಲಾವಣೆಯನ್ನು ಕಾಣುವರು ಎಂದು ಹೇಳಲಾಗುತ್ತದೆ. ನಿಮ್ಮ ಆಕ್ರಮಣ ಶೀಲ ಗುಣವು ಹಿಮ್ಮುಖ ಚಲನೆಗೆ ಎಡೆಮಾಡಿಕೊಡುವುದು. ಅಲೆಗಳು ಅದೆಷ್ಟು ಏರಿಳಿತಗಳ ಅಬ್ಬರ ತಂದರು ಕಾಲನ್ನು ಗಟ್ಟಿಯಾಗಿ ಮಣ್ಣಿನಲ್ಲಿ ಹಿಡಿದಿಟ್ಟು ಕೊಳ್ಳಬೇಕು. ಹಾಗೆಯೇ ಸನ್ನಿವೇಶಗಳು ಯಾವ ಪರಿ ಅಥವಾ ಪರಿವರ್ತನೆಯನ್ನು ತಂದರೂ ಸಹ ಅದನ್ನು ಎದುರಿಸುವ ಹಾಗೂ ನಿಭಾಯಿಸುವ ಸಾಮರ್ಥ್ಯವನ್ನು ಮೇಷ ರಾಶಿಯವರು ಅರಿತಿರಬೇಕು.

4. ಕನ್ಯಾ

4. ಕನ್ಯಾ

ಇವರು ಪ್ರಾಯೋಗಿಕವಾಗಿ ಮತ್ತು ವಿಶ್ಲೇಷಣಾತ್ಮಕವಾಗಿ ಪ್ರಸ್ತುತಪಡಿಸಲು ಇಷ್ಟಪಡುತ್ತಾರೆ. ಆದರೆ ಮಾನಸಿಕವಾಗಿ ಇವರು ಅತ್ಯಂತ ಮೃದು ಸ್ವಭಾವದವರು ಎಂದು ಹೇಳಲಾಗುವುದು. ಇವರು ತಮ್ಮ ಭಾವನೆಯನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಇಷ್ಟಪಡುವರು. ಇವರ ಭಾವನೆಗಳೆಲ್ಲವೂ ಆಂತರಿಕವಾಗಿಯೇ ಇರುತ್ತದೆ ಎಂದು ಹೇಳಲಾಗುವುದು. ಶಾಂತ ಸ್ವಭಾವದವರಾದ ಇವರು ಇತರರಿಗೆ ಸಹಾಯ ಮಾಡಲು ಸದಾ ಮುಂದಾಗುತ್ತಾರೆ. ಕಷ್ಟ ಎಂದವರಿಗೆ ತಮ್ಮ ಕೈಲಾಸ ಸಹಾಯ ಮಾಡದೆ ಇರರು. ಇನ್ನು ಈ ರಾಶಿಯವರು ಈ ರಾಶಿಚಕ್ರದವರು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇವರನ್ನು ಸಹಾಯ ಮಾಡುವ ಅತ್ಯುತ್ತಮ ಗೆಳೆಯ ಎಂದು ಸಹ ಪರಿಗಣಿಸಬಹುದು. ಇವರು ಇತರರಿಗೆ ಒಳ್ಳೆತನದಿಂದಲೇ ಲಾಭವನ್ನು ತಂದುಕೊಡಲು ಮುಂದಾಗುತ್ತಾರೆ. ಇತರರಿಗೆ ಸಹಾಯ ಮಾಡುವುದು ಎಂದರೆ ಇವರಿಗೊಂದು ಸಂತೋಷದ ವಿಚಾರವಾಗಿರುವುದು. ಹಾಗಾಗಿಯೇ ಈ ರಾಶಿಚಕ್ರದವರು ಮೂರನೇ ವ್ಯಕ್ತಿಗೂ ಸಹ ಅತ್ಯುತ್ತಮ ಸ್ನೇಹಿತನಾಗಬಹುದು. ಇವರು ತಾವು ಕಷ್ಟದಲ್ಲಿದ್ದರೂ ಸಹ ಇತರರಿಗೆ ಸಹಾಯ ಮಾಡಲು ಮುಂದಾಗುವ ಉತ್ತಮ ಗುಣವನ್ನು ಹೊಂದಿರುತ್ತಾರೆ.

5. ಮಕರ

5. ಮಕರ

ವ್ಯವಹಾರ ಚತುರರು ಹಾಗೂ ಸ್ವಲ್ಪ ಅಂತರ್ಮುಖಿ ಗುಣದವರು ಇವರು ಎನ್ನಬಹುದು. ಜೀವನದಲ್ಲಿ ತಮ್ಮದೇ ಆಸ ವಿಶೇಷತೆ ಹಾಗೂ ಶ್ರೇಷ್ಠತೆಯಿಂದ ಇರಬೇಕು ಎಂದು ಬಯಸುವರು. ಇವರು ತಮ್ಮ ಆಪ್ತರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ತಾವು ಮಾಡಿದ ಸಹಾಯಗಳಿಗೆ ಯಾವುದೇ ಪ್ರತ್ಯುಪಕಾರವನ್ನು ನಿರೀಕ್ಷೆ ಮಾಡರು. ಸೂಕ್ಷ್ಮ ಸ್ವಭಾವದವರಾದ ಇವರು ಇತರರ ಮನಸ್ಸಿಗೆ ನೋವುಂಟಾಗುವುದನ್ನು ಬಯಸುವುದಿಲ್ಲ. ತಮ್ಮ ಭಾವನೆಯನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು

ಎಂದು ಬಯಸುವ ವ್ಯಕ್ತಿಗಳು ಇವರು.

6. ಸಿಂಹ

6. ಸಿಂಹ

ಈ ರಾಶಿಯವರು ಭಾವನಾತ್ಮಕವಾಗಿ ಬಹಳ ಅಪಾಯಕಾರಿ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು. ಇತರರ ನಡುವೆ ಹೆಚ್ಚು ಆಕರ್ಷಕವಾಗಿ ಕಾಣುವಂತಿರಬೇಕು ಎಂದು ಬಯಸುವರು ಇವರು. ಆದರೆ ಸಂಕಷ್ಟ ಅಥವಾ ಸಹಾಯದ ಅಗತ್ಯ ಇರುವವರಿಗೆ ಸಾಕಷ್ಟು ಸಹಾಯ ಮಾಡುತ್ತಾರೆ. ಆ ಸಹಾಯ ಅವರ ಮನಸ್ಸಿಗೆ ಹತ್ತಿರವಾಗಿರುತ್ತದೆ. ಅಲ್ಲದೆ ಆ ಸಹಾಯದ ಹಿಂದೆ ಬೇರೆ ಯಾವುದೇ ದುರುದ್ದೇಶವು ಇರುವುದಿಲ್ಲ.

English summary

Zodiac Signs Who Are Secretly Huge Softies

You put on a brave face, but underneath that tough exterior, you’re just a ball of mush. It doesn't take much to make you cry and those aren’t just tears of sadness — you cry tears of joy, tears of relief, and sometimes tears of tiredness. If this sounds like you, you're probably one of the most kind-hearted zodiac \signs. And your horoscope is no different — it reveals just how sensitive you truly are, but how you’d prefer that everyone thinks of you as a hardass.
X
Desktop Bottom Promotion