For Quick Alerts
ALLOW NOTIFICATIONS  
For Daily Alerts

  ಜೀವನದಲ್ಲಿ ಚಿಕ್ಕ ಪುಟ್ಟ ವಿಚಾರಗಳನ್ನು ಇಷ್ಟಪಡುವಂತಹ ರಾಶಿಚಕ್ರಗಳು

  By Manohar Shetty
  |

  ಕೃತಜ್ಞತೆಯ ಗುಣ ನಮ್ಮಲ್ಲಿದ್ದರೆ ನಾವು ಸದಾ ಸಂತೋಷದ ಜೀವನವನ್ನು ನಡೆಸಬಹುದು. ಪ್ರಪಂಚದಲ್ಲಿ ನಮ್ಮದು ಎನ್ನುವುದು ಯಾವುದೂ ಇಲ್ಲ. ಎಲ್ಲವೂ ಇತರರ ಸಹಾಯದಿಂದ ಪಡೆದುಕೊಂಡಿರುವ ವಸ್ತುಗಳೇ. ಹಾಗಾಗಿ ನಾವು ಏನನ್ನಾದರೂ ಪಡೆದರೆ ಅದಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕು. ಆಗಲೇ ನಾವೂ ಸಮಾಜದಲ್ಲೊಬ್ಬ ಉತ್ತಮ ವ್ಯಕ್ತಿಯಾಗಿ ನಿಲ್ಲಬಹುದು.

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ಬಗೆಯ ವಿಶೇಷ ಗುಣಗಳಿರುತ್ತವೆ. ಅದರಲ್ಲಿ ಕೃತಜ್ಞತೆ ಸಲ್ಲಿಸುವ ಗುಣವು ಶ್ರೇಷ್ಠವಾದದ್ದು. ಕೆಲವು ರಾಶಿಚಕ್ರದವರು ತಾವು ಜೀವನದಲ್ಲಿ ಯಾವುದೇ ಚಿಕ್ಕ-ಪುಟ್ಟ ವಿಷಯಗಳನ್ನು ಪಡೆದುಕೊಂಡರೂ ಸಹ ಅದಕ್ಕೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಅಂತಹ ರಾಶಿಚಕ್ರಗಳ ಪಟ್ಟಿಯಲ್ಲಿ ನೀವು ಇದ್ದೀರಾ? ಎನ್ನುವುದನ್ನು ಪರಿಶೀಲಿಸಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

  ವೃಷಭ

  ವೃಷಭ

  ಈ ರಾಶಿಚಕ್ರದವರು ತಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಐಷಾರಾಮಿ ವಸ್ತುಗಳಿಗೆ ಕೊಡುವಷ್ಟೇ ಮಹತ್ವವನ್ನು ಚಿಕ್ಕ ಪುಟ್ಟ ವಸ್ತುಗಳಿಗೂ ನೀಡುತ್ತಾರೆ. ಇವರು ವಾಸ್ತವ ವಾದಿಗಳು ಆದ ಇವರು ಉತ್ತಮ ವಿಚಾರಗಳಿಗೆ ಹೆಚ್ಚು ಮಹತ್ವವನ್ನು ನೀಡುವರು. ಹಾಗಾಗಿ ಯಾವ ವಸ್ತು ಮತ್ತು ವ್ಯಕ್ತಿ ಸಕಾರಾತ್ಮಕ ಚಿಂತನೆಗಳಿಗೆ ಉತ್ತೇಜನ ನೀಡುವುದೋ ಅವುಗಳನ್ನು ಮಹತ್ವದ ಸಂಗತಿಗಳಾಗಿ ಪರಿಗಣಿಸುವರು.

  ಇನ್ನು ಈ ರಾಶಿಯವರು ಇವರು ಅತ್ಯುತ್ತಮ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಪ್ರಾಯೋಗಿಕವಾಗಿ ಚಿಂತನೆ ನಡೆಸುವ ಇವರು ಸ್ಥಿರವಾದ ಗುಣವನ್ನು ಹೊಂದಿದವರು. ಮೊಂಡುತನದವರಾದ ಇವರು ಅಷ್ಟು ಸುಲಭವಾಗಿ ರಾಜಿಯಾಗದ ಸ್ವಭಾವದವರು. ಇವರು ಸಕಾರಾತ್ಮಕ ಗುಣಗಳಿಂದ ಹಣ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ.

  ಹಾಗೆಯೇ ನಕಾರಾತ್ಮಕ ಗುಣಗಳಿಂದ ತಮ್ಮ ಅದೃಷ್ಟವನ್ನು ಕಳೆದುಕೊಳ್ಳುವರು. ಆದರೆ ಈ ರಾಶಿಯವರು ಜೀವನದಲ್ಲಿ ವೃಷಭ ರಾಶಿಯವರು ಅನೇಕ ಸವಾಲುಗಳನ್ನು ಎದುರಿಸ ಬೇಕಾಗುವುದು. ನೀವು ನಿರೀಕ್ಷಿಸಿದ ಮಟ್ಟದಲ್ಲಿ ನಿಮ್ಮ ವ್ಯಾಪಾರ ವಹಿವಾಟುಗಳು ನಡೆಯಲಾರವು. ಹಾಗಾಗಿ ನೀವು ಉನ್ನತ ಮಟ್ಟ ಏರಲು ಹಾಗೂ ನಿಮ್ಮ ಗುರಿಯನ್ನು ತಲುಪಲು ಅಧಿಕ ಶ್ರಮವನ್ನು ವಹಿಸಬೇಕು ಎಂದು ಹೇಳಲಾಗುತ್ತದೆ. ಕೆಲಸದ ಆರಂಭದಲ್ಲಿ ತಂದೆ ಅಥವಾ ಮನೆಯ ಹಿರಿಯ ಜನರಿಂದ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ.

  ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ.

  ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ.

  MOST READ:ನೋಡಿ ಈ ಐದು ರಾಶಿಯವರಿಗೆ ಸ್ವಲ್ಪ ಜಂಭ ಜಾಸ್ತಿಯಂತೆ!

  ತುಲಾ

  ತುಲಾ

  ಇವರು ಪ್ರತಿಯೊಂದು ಕ್ಷಣ ಹಾಗೂ ವಸ್ತುವನ್ನು ಬಹಳ ಪ್ರಮುಖವಾದದ್ದು ಎಂದು ನಂಬುತ್ತಾರೆ. ಇವರು ಜೀವನದಲ್ಲಿ ಸಣ್ಣ ಸಂತೋಷವನ್ನೂ ಸಹ ಕಳೆದುಕೊಳ್ಳಲು ಬಯಸುವುದಿಲ್ಲ. ಇವರು ಕೆಲವು ವಿಚಾರಗಳಿಗೆ ಅವರದ್ದೇ ಆದ ಸ್ಥಾನ ಮಾನವನ್ನು ನೀಡಲು ಬಯಸುವರು. ಹಾಗಾಗಿ ತಾವು ಅನುಭವಿಸಿದ ಅಥವಾ ತಮಗೆ ಸಿಕ್ಕ ಪ್ರತಿಯೊಂದು ಸಕಾರಾತ್ಮಕ ಚಿಂತನೆ ಹಾಗೂ ವಸ್ತುಗಳಿಗೂ ಬಹುಮುಖ್ಯವಾದ ಪ್ರಾಮುಖ್ಯತೆ ನೀಡುವರು.

  ಇನ್ನು ತುಲಾ ರಾಶಿಯಲ್ಲಿ ಜನಿಸಿದವರು ರಾಜತಾಂತ್ರಿಕ, ಗೌರವಯುತ, ನ್ಯಾಯಯುತ, ಸಾಮಾಜಿಕ ಮತ್ತು ಸಹಕಾರಿಯಾಗಿರುವರು. ಯಶಸ್ಸು ಪಡೆಯಲು ಇವರಿಗೆ ಹೆಚ್ಚು ಸಮಯ ಬೇಕಿಲ್ಲ. ಇವರು ದ್ವೇಷ ಕಟ್ಟಿಕೊಳ್ಳುವರು. ಆದರೆ ಯಾವುದೇ ಜಗಳದಲ್ಲಿ ತೊಡಗಲ್ಲ. ಇದರಿಂದ ಅವರು ತಾವು ಯೋಚಿಸದೆ ಇರುವ ವಿಚಾರದಲ್ಲಿ ಸಂಕಷ್ಟದಲ್ಲಿ ಸಿಲುಕುವರು.

  ಮಿಥುನ

  ಮಿಥುನ

  ಇವರು ಸಣ್ಣ ಪುಟ್ಟ ವಿಚಾರಗಳೊಂದಿಗೆ ಸ್ನೇಹಿತರು ಹಾಗೂ ಬಂಧುಗಳ ಪ್ರೀತಿಯನ್ನು ಗಳಿಸುತ್ತಾರೆ. ಇವರು ವ್ಯಕ್ತಿಯಲ್ಲಿರುವ ಸಣ್ಣ ಪುಟ್ಟ ಒಳ್ಳೆಯ ಗುಣಗಳನ್ನು ಗೌರವಿಸುವರು. ಇಂತಹ ಗುಣದಿಂದಲೇ ಇವರ ಸಂಬಂಧ ಪ್ರಬಲಗೊಳ್ಳುವುದು. ಈ ವಿಷಯವು ಇವರಿಗೆ ದಿನವನ್ನು ಉತ್ತಮಗೊಳಿಸುವುದು ಮತ್ತು ಒಳ್ಳೆಯ ಭಾವನೆಗಳನ್ನು ಉತ್ತೇಜಿಸುವುದು. ಇನ್ನು ಮಿಥುನ ರಾಶಿಚಕ್ರದವರು ಸಾಮಾನ್ಯವಾಗಿ ಇತರರಲ್ಲಿ ತಮ್ಮನ್ನು ಹುಡುಕುತ್ತಾರೆ.

  ಅವರು ಇತರರಲ್ಲಿ ತಮ್ಮ ತನವನ್ನು ಹುಡುಕುವ ಪ್ರವೃತ್ತಿ ಹೊಂದಿರುವುದರಿಂದ ಬಹು ಬೇಗ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿವೆ. ಇವರು ಮೆಚ್ಚಿರುವ ವ್ಯಕ್ತಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಬದಲಿಸಿಕೊಳ್ಳಲು ಸಹ ಸಿದ್ಧರಾಗಿರುತ್ತಾರೆ.

  ಇನ್ನು ಈ ವರ್ಷ ಮಿಥುನ ರಾಶಿಯವರು ಹೇಗೆ ತಮ್ಮನ್ನು ತಾವು ಸಂಪೂರ್ಣವಾದ ವ್ಯಕ್ತಿತ್ವವನ್ನು ಹೊಂದಬೇಕು. ಬೇರೆಯವರಲ್ಲಿ ಹೇಗೆ ತಮ್ಮ ಪ್ರೀತಿಯನ್ನು ಕಾಣಬೇಕು ಎನ್ನುವುದನ್ನು ತಿಳಿದುಕೊಳ್ಳುವಿರಿ.

  ಈ ವರ್ಷ ಕೆಲವರು ತಮ್ಮ ಪ್ರೀತಿಯನ್ನು ಕಳೆದುಕೊಳ್ಳಬಹುದು. ಪ್ರೀತಿಯ ಹುಡುಕಾಟದಲ್ಲಿರುವವರು ನಿಮ್ಮ ಪ್ರೀತಿಯನ್ನು ಪಡೆಯಲು ಸೂಕ್ತ ದಾರಿಯನ್ನು ಅನುಸರಿಸಿ. ಆದರೆ ಈ ವರ್ಷ ಅದು ನಿಮಗೆ ಲಭಿಸದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

  ಕರ್ಕ

  ಕರ್ಕ

  ಈ ವ್ಯಕ್ತಿಗಳು ಮನೆಯಲ್ಲಿ ಊಟಕ್ಕೆ ಕುಳಿತಾಗ ಬಹಳ ಸಂತೋಷದಿಂದ ಊಟ ಮಾಡಲು ಬಯಸುವರು. ಅಂತೆಯೇ ಸಣ್ಣ ವಸ್ತುಗಳನ್ನು ಸಹ ಪ್ರಶಂಸಿಸಲು ಇಷ್ಟಪಡುವರು. ಇವರು ತಾವು ಸುರಕ್ಷಿತರಾಗಿರುವುದಕ್ಕೆ ಹೆಚ್ಚು ಕೃತಜ್ಞತೆಯನ್ನು ಸಲ್ಲಿಸುವರು. ಇವರಿಗೆ ಅಸಮಧಾನ ಉಂಟಾದಾಗ ಅಥವಾ ಕೋಪಗೊಂಡಾಗ ಭಾವನೆಗಳಿಗೆ ಹೆಚ್ಚು ಬೆಲೆಯನ್ನು ನೀಡುವರು. ಮನಸ್ಸನ್ನು ಧನಾತ್ಮಕ ವಿಚಾರದ ಕಡೆಗೆ ಕೇಂದ್ರೀಕರಿಸುವರು. ಸಾಮಾನ್ಯವಾಗಿ ಇವರು ಸದಾ ಉತ್ತಮ ಭಾವನೆಯೊಂದಿಗೆ ಕೂಡಿರುತ್ತಾರೆ. ಇನ್ನು ಈ ರಾಶಿಚಕ್ರದವರು ತಮ್ಮ ಸುತ್ತಲಲ್ಲಿ ಇರುವ ವ್ಯಕ್ತಿಗಳಿಗೆ ಸದಾ ಒಳಿತನ್ನು ಬಯಸುತ್ತಾರೆ. ಕೆಲವರು ಇವರ ಒಳ್ಳೆತನವನ್ನು ತಮ್ಮ ಲಾಭಕ್ಕೆ ಅಥವಾ ಸ್ವಾರ್ಥಕ್ಕೆ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ರಾಶಿಚಕ್ರದವರು ಅತ್ಯಂತ ಸಂವೇದನಾಶೀಲರು ಎಂದು ಹೇಳಬಹುದು. ಇವರ ಈ ಗುಣವೇ ಇತರರಿಗೆ ಅಧಿಕ ಪ್ರಮಾಣದಲ್ಲಿ ಸಹಾಯ ಮಾಡಲು ಸಹಕರಿಸುವುದು. ಇತರರಿಗೆ ಸಹಾಯ ಮಾಡುವುದನ್ನು ಇವರು ದೈನಂದಿನ ದಿನಚರಿಯಂತೆ ಕಾಣುವರು.

  ಕನ್ಯಾ

  ಕನ್ಯಾ

  ಈ ರಾಶಿಯ ವ್ಯಕ್ತಿಗಳು ಸಣ್ಣ ಪುಟ್ಟ ವಿಚಾರಗಳಿಗೂ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ತಮ್ಮ ಹಾಗೂ ಪ್ರಪಂಚದ ಬಗ್ಗೆ ಸರಿಹೊಂದುವ ವಿಚಾರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸಣ್ಣ ಸಣ್ಣ ವಿಚಾರಗಳ ಕಡೆಗೆ ಗಮನ ಹರಿಸುವುದರ ಮೂಲಕ ವಿಷಯಗಳನ್ನು ನಿರ್ವಹಣಾ ಪರಿಹಾರಗಳಾಗಿ ವಿಭಜಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಜೊತೆಗೆ ಜೀವನದ ಪ್ರತಿಯೊಂದು ಹಂತದ ಬಗ್ಗೆಯೂ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ.

  ಇನ್ನು ಈ ರಾಶಿಚಕ್ರದವರು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇವರನ್ನು ಸಹಾಯ ಮಾಡುವ ಅತ್ಯುತ್ತಮ ಗೆಳೆಯ ಎಂದು ಸಹ ಪರಿಗಣಿಸಬಹುದು. ಇವರು ಇತರರಿಗೆ ಒಳ್ಳೆತನದಿಂದಲೇ ಲಾಭವನ್ನು ತಂದುಕೊಡಲು ಮುಂದಾಗುತ್ತಾರೆ.

  ಇತರರಿಗೆ ಸಹಾಯ ಮಾಡುವುದು ಎಂದರೆ ಇವರಿಗೊಂದು ಸಂತೋಷದ ವಿಚಾರವಾಗಿರುವುದು. ಹಾಗಾಗಿಯೇ ಈ ರಾಶಿಚಕ್ರದವರು ಮೂರನೇ ವ್ಯಕ್ತಿಗೂ ಸಹ ಅತ್ಯುತ್ತಮ ಸ್ನೇಹಿತನಾಗಬಹುದು. ಇವರು ತಾವು ಕಷ್ಟದಲ್ಲಿದ್ದರೂ ಸಹ ಇತರರಿಗೆ ಸಹಾಯ ಮಾಡಲು ಮುಂದಾಗುವ ಉತ್ತಮ ಗುಣವನ್ನು ಹೊಂದಿರುತ್ತಾರೆ.

  MOST READ:ಶನಿದೋಷ ಇದ್ದವರು ಶ್ರಾವಣ ಶನಿವಾರ ಶನಿ ಹಾಗೂ ಶಿವನಿಗೆ ಪೂಜೆ ಮಾಡಿ- ಎಲ್ಲವೂ ಒಳ್ಳೆಯದಾಗುವುದು

  ಮೀನ

  ಮೀನ

  ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅತ್ಯುತ್ತಮ ಗುಣಗಳನ್ನು ಗಮನಿಸುತ್ತಾರೆ. ಜೊತೆಗೆ ಅದನ್ನು ಸ್ಫೂರ್ತಿಗಾಗಿ ಬಳಸುತ್ತಾರೆ. ಇವರು ತಮಗೆ ತಿಳಿದಿರುವ ಎಲ್ಲಾ ಕೆಟ್ಟ ವಿಷಯಗಳಿಗೂ ಸಂಬಂಧಿಸಿದಂತೆ ಬಹಳಷ್ಟು ಒಳ್ಳೆಯ ಸಂಗತಿಗಳನ್ನು ಪರಿಗಣಿಸುವರು. ಸೌಹಾರ್ದದಿಂದ ಕಾಣುವ ಅಸಾಧಾರಣ ಸಾಮಥ್ರ್ಯವನ್ನು ಅವರು ಹೊಂದಿದ್ದಾರೆ. ಜೀವನದಲ್ಲಿ ಇವರಿಗೆ ಉತ್ತಮ ಅನುಭವ ನೀಡಿರುವ ಎಲ್ಲಾ ವಿಚಾರಗಳಿಗೂ ಗೌರವ ನೀಡುವರು.

  English summary

  Zodiac Signs That Love Little Things In Life

  There are certain zodiac sign individuals who are known to be grateful for everything in their lives. From the little surprises to simple gestures, these zodiac signs are known to be thankful at every given point of time. With the help of Astro experts, we reveal to you the details of some of the most grateful zodiac signs. Find out if your zodiac sign is listed here
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more