For Quick Alerts
ALLOW NOTIFICATIONS  
For Daily Alerts

ವಿವಿಧ ಭಂಗಿಯಲ್ಲಿ ಕುಳಿತುಕೊಳ್ಳುವ ಶೈಲಿ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ!

By Sindhushree Mahesh
|

ಸೃಷ್ಟಿಯ ರಚನೆಯಲ್ಲಿ ಮನುಷ್ಯನೂ ಒಂದು ಭಾಗ. ಮನುಷ್ಯ ಸ್ನೇಹಜೀವಿ, ಸಂಘಜೀವಿ. ಸಂಬಂಧಗಳನ್ನು ಬೆಸೆದುಕೊಳ್ಳುತ್ತಾ ಇರುತ್ತಾನೆ. ಆದರೆ ಸಂಬಂಧಗಳನ್ನು ಉಳಿಸಿ-ಬೆಳೆಸಿಕೊಳ್ಳುವುದರಲ್ಲಿ ಎಷ್ಟೋ ಜನ ವಿಫಲರಾಗುತ್ತಾರೆ. "ಸಂಬಂಧಗಳು ಎಂದೂ ಅದಾಗದೇ ಕೊನೆಗೊಳ್ಳುವುದಿಲ್ಲ, ಅದು ನಮ್ಮ ನಮ್ಮ ವ್ಯಕ್ತಿತ್ವಗಳಿಂದಲೇ ಹಾಳಾಗುವುದು". "ನಮ್ಮ ಸೌಂದರ್ಯಕ್ಕೆ ಆಗಲಿ, ಮತ್ತೊಂದಕ್ಕೆ ಆಗಲಿ ಯಾರು ಬೇಕಾದರೂ ಮಾರುಹೋಗಬಹುದು, ಆದರೆ ಅವರು ನಮ್ಮೊಂದಿಗೆ ಕೊನೆಯವರೆಗೂ ಉಳಿದುಕೊಳ್ಳುತ್ತಾರಾ ಎಂಬುದು ನಿಮ್ಮ ವ್ಯಕ್ತಿತ್ವ ನಿರ್ಧರಿಸುತ್ತದೆ".

ಹೀಗಾಗಿ ನಾವು ನಮ್ಮ ವ್ಯಕ್ತಿತ್ವದ ಕಡೆ ಗಮನ ಹರಿಸಬೇಕು. ನಮ್ಮ ನಡೆನುಡಿಗಳಷ್ಟೇ ಅಲ್ಲದೇ ಹಾವಭಾವಗಳು, ಅಡೆ-ತಡೆ ಅಂದರೆ ಮೈ ಮಾತುಗಳು ಹಾಗೂ ನಾವು ಕುಳಿತುಕೊಳ್ಳುವ ಭಂಗಿ ಗಳು ಕೂಡ ನಮ್ಮ ಮನಸ್ಸಿನ ಕನ್ನಡಿ ಇದ್ದಂತೆ, ನಮ್ಮ ಮನಸ್ಸಿನ ಮಾತುಗಳನ್ನು ಹೊರಹಾಕುತ್ತದೆ. ಕುಳಿತುಕೊಳ್ಳುವ ಶೈಲಿಗಳು ಮತ್ತು ವ್ಯಕ್ತಿಯ ಮೈ ಮಾತುಗಳು ಕೇವಲ ಭಂಗಿಗಳಷ್ಟೇ ಅಲ್ಲ, ಅದರಲ್ಲಡಗಿರುವ ಅರ್ಥಗಳನ್ನು ಹೊರಹೊಮ್ಮುತ್ತವೆ.

ಒಬ್ಬ ವ್ಯಕ್ತಿಯು ಹೇಗೆ ಭಾವಿಸುತ್ತಿರಬಹುದು ಎಂಬುವುದರ ಉಪಪ್ರಜ್ಞೆ ಬಗ್ಗೆ ಮತ್ತು ಅವರ ಕ್ರಿಯೆಗಳನ್ನು ಪ್ರತಿಬಿಂಬಿಸುತ್ತದೆ. ಕೆಲವು ಭಂಗಿಗಳು ನಮಗೆ ಆಯಾ ವ್ಯಕ್ತಿಗಳ ವ್ಯಕ್ತಿತ್ವದ ಬಗ್ಗೆ ಪತ್ತೆಹಚ್ಚಲು ಮತ್ತು ಭವಿಷ್ಯದಲ್ಲಿ ಆಯಾ ವ್ಯಕ್ತಿಗಳಿಂದ ಏನೇನು ನಿರೀಕ್ಷಿಸಬಹುದು ಎಂಬುವುದನ್ನು ಕಂಡು ಹಿಡಿದು ಕೊಳ್ಳುವಲ್ಲಿ ಸ್ಪಷ್ಟ ಚಿತ್ರಣ ನೀಡುತ್ತದೆ. ನಮ್ಮ ನಮ್ಮ ನಡವಳಿಕೆಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಬಹಿರಂಗಪಡಿಸಬಹುದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಮನೋವಿಜ್ಞಾನದ ಪ್ರಕಾರ ಕುಳಿತುಕೊಳ್ಳುವ ಶೈಲಿಗಳು ಮತ್ತು ದೇಹ ಭಾಷೆಗಳು ಕೇವಲ ಭಂಗಿ ಗಳಷ್ಟೇ ಅಲ್ಲ, ಅದಕ್ಕಿಂತ ಹೆಚ್ಚಿನ ವಿಷಯಗಳನ್ನು ಹೊರಸೂಸುತ್ತದೆ. ಹಾಗಿದ್ದಲ್ಲಿ ಯಾವ ಯಾವ ರೀತಿಯ ಭಂಗಿಗಳಲ್ಲಿ ಕುಳಿತರೆ ಯಾವ ಮನೋಭಾವನೆಯ ವ್ಯಕ್ತಿತ್ವದವರಾಗಿರುತ್ತಾರೆ ಎಂದು ಹೇಳುವ ಈ ಲೇಖನದ ಕೆಲವು ವಿಶ್ಲೇಷಣೆಗಳನ್ನು ನೋಡೋಣ...

Sitting position

ಕಾಲು ಮೇಲೆ ಕಾಲು ಹಾಕಿ ಕೂರುವ ಶೈಲಿ
ನೆಲದ ಮೇಲಾಗಲೀ ಅಥವಾ ಕುರ್ಚಿಯ ಮೇಲಾಗಲಿ ಒಬ್ಬ ವ್ಯಕ್ತಿ ಕಾಲು ಮೇಲೆ ಕಾಲು ಹಾಕಿ ಕೂತ ಎಂದಾದಲ್ಲಿ, ಆ ವ್ಯಕ್ತಿ ನೆಮ್ಮದಿಯ, ನಿರಾತಂಕದ ಮತ್ತು ಮುಕ್ತ ಮನಸ್ಸಿನವ ಎಂಬುದನ್ನು ಹೇಳುತ್ತದೆ. ಹೀಗೆ ಕುಳಿತುಕೊಳ್ಳುವಾಗ ಮಂಡಿಯ ಸ್ಥಾನವೇನಾದರೂ ಬದಿಗೆ ಇದ್ದಲ್ಲಿ,ಆ ವ್ಯಕ್ತಿ ಹೊಸ ಹೊಸ ವಿಷಯಗಳನ್ನು ಪ್ರಯತ್ನಿಸುವಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಪಕವಾಗಿ ಇರುತ್ತಾರೆ ಎಂದರ್ಥ. ಮತ್ತೊಂದು ಕಡೆ ಈ ಭಂಗಿಗೆ ಹೊಂದಿಕೊಳ್ಳುವವರ ಭಾವನಾತ್ಮಕ ಸ್ಥಿರತೆಯನ್ನು ಕೂಡ ಸೂಚಿಸುತ್ತದೆ.

ನೇರವಾಗಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು
ಯಾವುದೇ ಒಬ್ಬ ವ್ಯಕ್ತಿಯು ಯಥಾರ್ಥವಾಗಿ ನೇರ ಹಾಗೂ ಸರಿಯಾದ ಭಂಗಿಯಲ್ಲಿ ಕುಳಿತಲ್ಲಿ ಅವರು ಆತ್ಮವಿಶ್ವಾಸವನ್ನು ಹೊಂದಿದವರು ಎಂದು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಈ ಭಂಗಿಯಲ್ಲಿ ಕುಳಿತುಕೊಳ್ಳುವರು ಪ್ರಬಲರಾದವರು, ನಂಬಿಕೆಗೆ ಅರ್ಹ ಮತ್ತು ಅಗತ್ಯ ಬಿದ್ದಾಗ ಇತರರಿಗೆ ಸಹಾಯ ಮಾಡಲು ಸಿದ್ಧರಿರುವವರು ಎಂದೂ ಪ್ರಕಟಿಸುತ್ತದೆ. ಮತ್ತೊಂದು ಕಡೆ ಈ ರೀತಿ ಕುಳಿತುಕೊಳ್ಳುವ ವ್ಯಕ್ತಿಯು ಹೊಸ ಅನುಭವಗಳಿಗೆ ಸಜ್ಜಾಗಿರುತ್ತಾನೆ ಮತ್ತು ಯಾವುದೇ ರೀತಿಯ ಸವಾಲುಗಳಿಂದ ಪಲಾಯನ ಮಾಡುವವನಲ್ಲ ಎಂದೂ ಸೂಚಿಸುತ್ತದೆ.

ಯಾವುದಕ್ಕಾದರೂ ಒರಗಿ ಕುಳಿತುಕೊಳ್ಳುವವರು
ಬೆನ್ನನ್ನು ಒರಗಿಸಿ ಕೂತುಕೊಳ್ಳುವುದು ಹಾಗೂ ಕೈಗಳನ್ನು ಊರಲು ಅವಲಂಬಿಸಲು ಪ್ರೀತಿಸುವ ವ್ಯಕ್ತಿಗಳಾದ ಲ್ಲಿ, ಆ ವ್ಯಕ್ತಿ ಪರಿಸ್ಥಿತಿಗಳನ್ನು ಗಮನಿಸಲು ಇಷ್ಟಪಡುತ್ತಾರೆ. ಈ ರೀತಿ ಕುಳಿತುಕೊಳ್ಳುವವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಹಾಗೂ ಪಾಲ್ಗೊಳ್ಳುವ ಮೂಲಕ ಪ್ರತಿ ಪರಿಸ್ಥಿತಿಯನ್ನು ನಿರ್ಣಯಿಸಲು ಬಯಸುತ್ತಾರೆ. ಈ ಭಂಗಿಯು ನಿಮ್ಮನ್ನು ನಿರೂಪಿಸುತ್ತಿದ್ದರೆ, ನೀವು ವಾಸ್ತವಿಕತೆಯನ್ನು ನಿಮ್ಮ ಕಣ್ಣಲ್ಲೇ ನೋಡಲು ಬಯಸುವವರು ಎಂದೂ, ನಿಮ್ಮ ತಿಳುವಳಿಕೆಯ ವಿವೇಚನೆಯ ಮೇರೆಗೆ ಅನುಗುಣವಾಗಿ ಪರಿಸ್ಥಿತಿಯನ್ನು ವಿಮರ್ಶಿಸುವವರು ಎಂದರ್ಥ. ಈ ಭಂಗಿಯಲ್ಲಿ ಕುಳಿತುಕೊಳ್ಳುವರು ಬೇರೆಯವರ ಭಾವನೆಗಳಿಗೆ ಸ್ಪಂದಿಸುವುದು ಮುಖ್ಯವೆಂಬ ಅನಿಸಿಕೆಯನ್ನು ಹೊಂದಿರುತ್ತಾರೆ.

ಪಾದಗಳನ್ನು ಅಡ್ಡವಾಗಿ ಹಾಕಿ ಕುಳಿತುಕೊಳ್ಳುವರು
ಈ ರೀತಿ ಕುಳಿತುಕೊಳ್ಳಲು ಇಷ್ಟಪಡುವವರು ಉತ್ತಮ ಅಭಿರುಚಿ ಹೊಂದಿದವರು ಹಾಗೂ ನುರಿತ ರಾಗಿರುತ್ತಾರೆ. ಇನ್ನೂ ಹೇಳಬೇಕೆಂದರೆ,ಹೀಗೆ ಕುಳಿತುಕೊಳ್ಳುವವರು ಪ್ರಾಮಾಣಿಕರು ಹಾಗೂ ಹೊಸ ಆಲೋಚನೆಗಳು, ವಿಚಾರಗಳಿಗೆ ತಮ್ಮನ್ನು ತಾವು ಯಾವಾಗಲೂ ತೆರೆದಿಟ್ಟುಕೊಂಡು ಇರುತ್ತಾರೆ. ಇದು ವಿಶ್ರಾಂತಿಯ ಭಂಗಿ ಆಗಿರುವುದರಿಂದ ಹೊಸ ಹೊಸ ಅನುಭವಗಳನ್ನು ಬಯಸುವವರು ಎಂದು ಸೂಚಿಸುತ್ತದೆ.

ಕೈಗಳನ್ನು ಜೋಡಿಸಿ ಕುಳಿತುಕೊಳ್ಳುವವರು
ತಮ್ಮ ತೋಳುಗಳನ್ನು ಹಿಡಿದುಕೊಂಡು ಕುಳಿತುಕೊಳ್ಳುವವರು ಸಾಮರ್ಥ್ಯ, ವಿಶ್ವಾಸವುಳ್ಳವರು ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಿದ್ಧರಿರುತ್ತಾರೆ. ಈ ಭಂಗಿಯಲ್ಲಿ ಕುಳಿತು ಕೊಳ್ಳುವವರು ತಮ್ಮನ್ನು ತಾವು ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ಜನರ ರಕ್ಷಣೆಯ ಬಗ್ಗೆ ಭಾವನೆಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಸೂಕ್ಷ್ಮ ಲಕ್ಷದ ವರಾಗಿರುವ ಮೂಲಕ ವಿಚಾರ ಮಗ್ನರಾಗಿರುತ್ತಾರೆ.

ಆಸನಗಳ ಮೇಲೆ ಕೂರುವಾಗ ಕಾಲುಗಳನ್ನು ಬೇರ್ಪಡಿಸದೇ ಒಂದೇ ಬದಿಗೆ ಹಾಕಿ ಕೂರುವ ಭಂಗಿ
ಈ ರೀತಿ ಕುಳಿತುಕೊಳ್ಳಲು ಇಚ್ಛಿಸುವವರು ತಮಾಷೆಯ ಪ್ರವೃತ್ತಿ ಹೊಂದಿದವರಾಗಿರುತ್ತಾರೆ. ಇವರು ನೈಜ ಮಧುರತೆ ಉಳ್ಳವರು,ಕೋಮಲರು ಹಾಗೂ ಕಾಳಜಿಯ ಸ್ವಭಾವವನ್ನು ಹೊಂದಿರುವವರು ಎಂಬ ಭಾವವನ್ನು ಸೂಸುತ್ತದೆ. ಈ ಶೈಲಿಯಲ್ಲಿ ಕುಳಿತುಕೊಳ್ಳುವವರು ಹೊಸ ಅನುಭವಗಳನ್ನು ಹೊಂದಲು ಅಣಿಯಾಗಿರುತ್ತಾರೆ ಮತ್ತು ಮುಂಬರುವ ಸವಾಲುಗಳಿಗೆ ಇತರರನ್ನು ಆಹ್ವಾನಿಸುತ್ತಾರೆ.

ತೊಡೆಯ ಮೇಲೆ ಕೈಗಳನ್ನು ಇಟ್ಟು ಕೂತು ಕೊಳ್ಳುವವರು
ಕೈಗಳನ್ನು ತೊಡೆಯ ಮೇಲೆ ಇಟ್ಟು ಕುಳಿತುಕೊಳ್ಳುವವರು ಸಂಕೋಚ ಸ್ವಭಾವದ ಪ್ರಕೃತಿ ಹೊಂದಿರುವವರಾಗಿರುತ್ತಾರೆ. ಇವರು ಹೊಸ ಅನುಭವಗಳನ್ನು ಸ್ವೀಕರಿಸಲು ಹಿಂಜರಿಯುತ್ತಾರೆ ಮತ್ತು ಒಂಟಿಯಾಗಿರಲು ಇಷ್ಟ ಪಡುತ್ತಾರೆ. ಈ ಭಂಗಿಯಲ್ಲಿ ಕುಳಿತು ಕೊಳ್ಳುವವರು ಮೃದು ಸ್ವಭಾವದವರು ಹಾಗೂ ಸಹಾನುಭೂತಿ ಉಳ್ಳವರಾಗಿರುತ್ತಾರೆ. ಅದಷ್ಟೇ ಅಲ್ಲದೆ ಇವರು ಬೇರೆಯವರ ಭಾವನೆಗಳಿಗೆ ಅಥವಾ ಅಭಿಪ್ರಾಯಗಳಿಗೆ ಸ್ಪಂದಿಸಲು ಬಯಸುವುದಿಲ್ಲ.

ಕಾಲುಗಳನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳುವವರು
ಕಾಲುಗಳನ್ನು ಅಡ್ಡವಾಗಿ ಹಾಕಿ ಅವುಗಳನ್ನು ಅಲ್ಲಾಡಿಸುತ್ತಾ ಕುಳಿತುಕೊಳ್ಳುವರು ವ್ಯವಸ್ಥಿತ ಕ್ರಮವನ್ನು ಅನುಸರಿಸುವವರು, ಸಮಯ ಪ್ರಜ್ಞೆ ಉಳ್ಳವರು ಹಾಗೂ ಕಾಲ ನಿಷ್ಠೆ ಉಳ್ಳವರಾಗಿರುತ್ತಾರೆ. ಈ ರೀತಿ ಕುಳಿತುಕೊಳ್ಳುವ ವ್ಯಕ್ತಿಯು ಬೇರೆಯವರ ಬೇಕು-ಬೇಡಗಳನ್ನು ಪರಿಗಣಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಬೇರೆಯವರಿಂದ ಕೆಲಸ ವನ್ನು ಪಡೆಯುವುದು ಹೇಗೆ ಎಂಬುದನ್ನು ಇವರು ನಿಖರವಾಗಿ ಅರಿತಿರುತ್ತಾರೆ.

ಪ್ರಿಯ ಓದುಗರೇ,
ನೀವು ಯಾವ ಭಂಗಿಯಲ್ಲಿ ಕುಳಿತು ಕೊಳ್ಳುತ್ತೀರಿ? ನಿಮ್ಮ ಆಪ್ತರು ಯಾವ ಭಂಗಿಯಲ್ಲಿ ಕುಳಿತು ಕೊಳ್ಳುತ್ತಾರೆ? ಈಗ ಪರಿಶೀಲಿಸಿಕೊಂಡು ನೋಡಿ!!
ಈ ಅಚ್ಚರಿಯ ಅರಿವನ್ನು ನೀವು ಒಪ್ಪುತ್ತೀರಾ?
"ಸೌಂದರ್ಯ ಕಣ್ಣುಗಳನ್ನು ಆಕರ್ಷಿಸುತ್ತದೆ,ಒಳ್ಳೆಯ ಹಾವಭಾವ, ನಡೆ ನುಡಿಗಳನ್ನು ಒಳಗೊಂಡ ವ್ಯಕ್ತಿತ್ವ ಹೃದಯವನ್ನು ಸೆರೆಹಿಡಿಯುತ್ತದೆ" ಅಂತಾರೆ. ನೀವೇನಂತೀರಾ? ನಿಮ್ಮ ಅನಿಸಿಕೆ_ ಅಭಿಪ್ರಾಯಗಳನ್ನು ಈ ಕೆಳಕಂಡ ಕಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.

English summary

Your Sitting Position Reveals A Lot About You

Do you believe that our mannerisms can reveal a lot about our personality? Well, according to psychology, it is revealed that the sitting styles and the body language reveal a lot more than just being postures. The way we sit, talk and walk can all reveal a lot about our personality. In this article, we bring in the details of the way we sit can reveal a lot about us. Several positions help us identify a lot about a person and what can be expected from that person in the future.Check on to find out about how your sitting position reveals a lot about your personality…
X
Desktop Bottom Promotion