For Quick Alerts
ALLOW NOTIFICATIONS  
For Daily Alerts

ನೈಜ ಘಟನೆ: ಸಾಕಿದ ನಾಯಿಗಳಿಗಾಗಿ ತನ್ನ ಗಂಡನನ್ನೇ ಬಿಟ್ಟ ಮಹಿಳೆ!

By Deepu
|

ದಂಪತಿಗಳು ಬೇರ್ಪಡಬೇಕಾದರೆ ಇದಕ್ಕೆ ಅತ್ಯಂತ ಗುರುತರವಾದ ಕಾರಣವೇ ಇರಬೇಕಾಗುತ್ತದೆ. ಇಂತಹ ಒಂದು ಕಾರಣವನ್ನು ಸಾಕು ಪ್ರಾಣಿ ಪ್ರಿಯರು ತಮ್ಮ ಸಾಕು ಪ್ರಾಣಿಗಾಗಿ ತಮ್ಮ ಸಂಗಾತಿಯನ್ನೂ ತೊರೆಯಲು ಸಿದ್ಧ ಎಂದು ಹೇಳಬಹುದು. ಆದರೆ ಯಾರೇ ಆಗಲಿ, ದಾಂಪತ್ಯವನ್ನು ಕೊನೆಗಾಣಿಸಲು ಸಾಕುಪ್ರಾಣಿಗಳ ಒಲವನ್ನು ಒಂದು ಗುರುತರ ಕಾರಣವೆಂದು ಒಪ್ಪಲು ಸಾಧ್ಯವಿಲ್ಲ. ಆದರೆ ಹೀಗೊಂದು ಪ್ರಕರಣ ನಮ್ಮ ಓದುಗರ ಅಚ್ಚರಿಗೆ ಕಾರಣವಾಗಬಹುದು.

ಓರ್ವ ಮಹಿಳೆ ತನ್ನ ಸಾಕು ನಾಯಿಗಳಿಗಾಗಿ ತನ್ನೊಂದಿಗೆ ಇಪ್ಪತ್ತೈದು ವರ್ಷ ಸಂಸಾರ ನಡೆಸಿದ ಪತಿಯನ್ನೇ ತ್ಯಜಿಸಿದ್ದಾಳೆ. ಈ ದಂಪತಿಗಳಿಗೆ ಇಪ್ಪತ್ತೆರಡು ವರ್ಷ ವಯಸ್ಸಿನ ಮಗನೂ ಇದ್ದು ಈತ ನಾಯಿಗಳಿಗಾಗಿ ತನ್ನ ತಾಯಿ ತಂದೆಯನ್ನೇ ನಾಯಿಪಾಡು ಮಾಡಿರುವುದನ್ನು ಕಂಡು ದಿಗ್ಭ್ರಾಂತನಾಗಿದ್ದಾನೆ. ಬನ್ನಿ, ಈ ಕಥೆ ಏನು ಎಂದು ವಿಚಾರಿಸೋಣ...

ಆಕೆಯ ನಾಯಿಗಳ ಮೇಲಿನ ಪ್ರೀತಿಯಿಂದ ರೋಸಿ ಹೋದ ಪತಿ

ಆಕೆಯ ನಾಯಿಗಳ ಮೇಲಿನ ಪ್ರೀತಿಯಿಂದ ರೋಸಿ ಹೋದ ಪತಿ

ಮೈಕ್ ಹಸ್ಲಾಂ ಎಂಬ 53 ವರ್ಷ ವಯಸ್ಸಿನ ಪುರುಷನ ಪತ್ನಿ ಲಿಜ಼್ ರಿಗೆ ಪರಿತ್ಯಕ್ತ ಬೀದಿನಾಯಿಗಳನ್ನು ಹಿಡಿದು ತಂದು ಸಾಕುವುದರಲ್ಲಿ ಏನೋ ಆನಂದ ದೊರಕುತ್ತಿತ್ತು ಹಾಗೂ ಈ ಸಮಯ ಆಕೆ ಸಾಕುತ್ತಿರುವ ನಾಯಿ ಪಂಜರದಲ್ಲಿ ಮೂವತ್ತಕ್ಕೂ ಹೆಚ್ಚು ನಾಯಿಗಳಿದ್ದವು. ಈಕೆ ಈ ನಾಯಿಗಳಿಗಾಗಿ ತನ್ನೆಲ್ಲಾ ಸಮಯ, ಹಣ ಮತ್ತು ಶ್ರಮವನ್ನು ಪೋಲು ಮಾಡುತ್ತಿರುವುದನ್ನು ಕಂಡು ಸಹಿಸದ ಆಕೆಯ ಪತಿ ರೋಸಿ ಹೋಗಿದ್ದ ಹಾಗೂ ಒಂದು ದಿನ ತಾಳ್ಮೆ ಕಳೆದುಕೊಂಡು ಒಂದೇ ನಿನಗೆ ಪತಿ ಬೇಕೋ ಅಥವಾ ಸಾಕಿದ ನಾಯಿ ಬೇಕೋ ನಿರ್ಧರಿಸು ಎಂದು ಬೆದರಿಕೆಯೊಡ್ಡಿದ್ದ. ಆದರೆ ಆತ ಅವಾಕ್ಕಾಗುವಂತೆ ಆಕೆ ತನ್ನ ಸಾಕುನಾಯಿಗಳಿಗೆ ಸಮಯ ನೀಡುವುದನ್ನೇ ಅರಿಸಿಕೊಂಡಳು.

ಈಗ ಈಕೆ ತುಂಬಾ ಸಂತೋಷದಿಂದಿದ್ದಾಳಂತೆ

ಈಗ ಈಕೆ ತುಂಬಾ ಸಂತೋಷದಿಂದಿದ್ದಾಳಂತೆ

ಆಕೆಯ ನಿರ್ಧಾರ ಅಚಲವಾಗಿರುವ ಕಾರಣ ಪತಿಯೇ ದೂರಹೋಗಬೇಕಾಗಿ ಬಂದಿತ್ತು. ಆದರೆ ಈ ದಾಂಪತ್ಯ ಮುರಿದಿದ್ದು ಲಿಜ್ ರಿಗೇನೂ ಬೇಸರ ತರಲಿಲ್ಲ. ಇಪ್ಪತ್ತೈದು ವರ್ಷಗಳ ದಾಂಪತ್ಯದಲ್ಲಿ ಇವರೊಗೊಬ್ಬ ಇಪ್ಪತ್ತೆರಡು ವರ್ಷ ವಯಸ್ಸಿನ ಮಗನೂ ಇದ್ದಾನೆ. ಯಾವಾಗ ನಾಯಿಗಾಗಿ ಈಕೆ ಪತಿಯನ್ನು ಬಿಟ್ಟಳೋ, ಪತಿರಾಯ ಅಲ್ಲಿಂದ ಅಂತರ್ಧಾನನಾಗಿದ್ದಾನೆ. ಅಂದಿನಿಂದ ಆತನ ಮುಖ ನೋಡಿಲ್ಲ, ಆದರೆ ಈಗ ಪೂರ್ಣ ಸಮಯ ನಾಯಿಗಳಿಗೆ ನೀಡಲು ಸಾಧ್ಯವಾಗುತ್ತದೆ, ಇದು ನನಗೆ ಸಂತೋಷ ನೀಡಿದೆ ಎಂದು ಲಿಜ್ ತಿಳಿಸುತ್ತಾರೆ.

ಇವರಿಬ್ಬರೂ ಹದಿಹರೆಯದಿಂದಲು ಪರಸ್ಪರ ಪ್ರೀತಿಸುತ್ತಿದ್ದರು

ಇವರಿಬ್ಬರೂ ಹದಿಹರೆಯದಿಂದಲು ಪರಸ್ಪರ ಪ್ರೀತಿಸುತ್ತಿದ್ದರು

ಲಿಜ್ ರಿಗೆ ಕೇವಲ ಹದಿನಾರು ವರ್ಷವಾಗಿದ್ದಾಗ ಶಾಲೆ ಮುಗಿಸಿದ ಬಳಿಕ ಮನೆಯನ್ನು ತೊರೆದು ಪತಿಯೊಂದಿಗೆ ಹೊಸ ಸಂಸಾರವನ್ನು ಪ್ರಾರಂಭಿಸಿದ್ದಳು. ಆಕೆಯ ತಂದೆ ಸಾಕುಪ್ರಾಣಿಗಳ ಆಹಾರದ ಅಂಗಡಿ ನಡೆಸುತ್ತಿದ್ದರು ಹಾಗೂ ತಾಯಿ ವೆಸ್ಟ್ ಹೈಲ್ಯಾಂಡ್ ಎಂಬ ತಳಿಯ ನಾಯಿಗಳನ್ನು ಬೆಳೆಸಿ ಮಾರುವ ಉದ್ದಿಮೆಯನ್ನು ನಡೆಸುತ್ತಿದ್ದಳು. ಚಿಕ್ಕಂದಿನಿಂದಲೇ ನಾಯಿಗಳೊಂದಿಗಿನ ಒಡನಾಟ ಆಕೆಯಲ್ಲಿ ನಾಯಿಗಳ ಬಗ್ಗೆ ಅತೀವ ಪ್ರೇಮವನ್ನು ಸ್ಥಾಪಿಸಿತ್ತು.

ಬೀದಿನಾಯಿಗಳಿಗೊಂದು ಆಶ್ರಯಧಾಮವನ್ನೂ ಪ್ರಾರಂಭಿಸಿದ್ದಳು

ಬೀದಿನಾಯಿಗಳಿಗೊಂದು ಆಶ್ರಯಧಾಮವನ್ನೂ ಪ್ರಾರಂಭಿಸಿದ್ದಳು

ಬೆಡ್ ಫ಼ಾರ್ ಬುಲ್ಲೀಸ್ ಎಂಬ ಹೆಸರಿನ, ನಾಯಿಗಳಿಗಾಗಿಯೇ ಒಂದು ಚಿಕ್ಕ ಆಶ್ರಯಧಾವನ್ನೂ ಆಕೆ ಪ್ರಾರಂಭಿಸಿ ನಡೆಸುತ್ತಿದ್ದಳು ಹಾಗೂ ವಿಶೇಷವಾಗಿ 'ಬುಲ್ ಟೆರಿಯರ್' ಎಂಬ ತಳಿಯ ನಾಯಿಗಳನ್ನು ಕಾಪಾಡಿ ಸಾಕತೊಡಗಿದ್ದಳು. ಆದರೆ ಪತಿರಾಯ ಹೆಚ್ಚಿನ ಸಮಯವನ್ನು ಹೊರಗೇ ಕಳೆಯುತ್ತಿದ್ದರಿಂದ ಹಾಗೂ ಸಂಸಾರದೊಂದಿಗೆ ಸಮಯ ಕಳೆಯಲು ಬಂದಾಗಲೂ ಲಿಜ್ ಹೆಚ್ಚಿನ ಸಮಯ ನಾಯಿಗಳೊಂದಿಗೇ ಇರುತ್ತಿದ್ದಿದ್ದರಿಂಲೂ ಆಕೆಯ ಮನಸ್ಸು ಪತಿಗಿಂತಲೂ ಹೆಚ್ಚಾಗಿ ನಾಯಿಗಳತ್ತಲೇ ವಾಲಿತ್ತು. ಹಾಗಾಗಿ ಆಯ್ಕೆಯ ಸಮಯ ಬಂದಾಗ ಆಕೆ ಯಾವುದೇ ಅಳುಕಿಲ್ಲದೇ ನಾಯಿಗಳನ್ನು ಸಾಕುವುದನ್ನೇ ಆಯ್ದುಕೊಂಡಿದ್ದಳು.

ಈಕೆ ಈಗ ಸಂತುಷ್ಠೆಯಾಗಿದ್ದಾಳೆ!

ಈಕೆ ಈಗ ಸಂತುಷ್ಠೆಯಾಗಿದ್ದಾಳೆ!

ಪತಿಯಿಂದ ಬೇರೆಯಾಗಿ ಈಗ ಒಂದೂವರೆ ವರ್ಷಗಳೇ ಕಳೆದಿವೆ. ಈ ಅವಧಿ ಹಿಂದೆಂದೂ ಇಲ್ಲದಷ್ಟು ಸುಖವಾಗಿ, ಸಂತೋಷವಾಗಿ ಕಳೆದಿದ್ದೇನೆ, ಒಮ್ಮೆಯೋ ಪತಿಯನ್ನು ಸಂಪರ್ಕಿಸಿಲ್ಲ ಎಂದು ಆಕೆ ತಿಳಿಸಿದ್ದಾಳೆ. ಒಂದು ವೇಳೆ ಇಂತಹ ಸಂದರ್ಭ ನಿಮಗೆ ಎದುರಾಗಿದ್ದರೆ ನಿಮ್ಮ ನಿರ್ಧಾರ ಯಾವ ಪರಿಯಾಗಿರುತ್ತಿತ್ತು? ಸಾಕುಪ್ರಾಣಿಗಾಗಿ ಸಂಗಾತಿಯನ್ನು ತ್ಯಜಿಸಲು ತಯಾರಿರುತ್ತಿದ್ದೀರೋ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

woman-left-her-husband-of-25-years-for-her-adopted-dogs

What is the one thing that your partner can leave you for? Well, most of the pet lovers would definitely swear by their pets and claim that they would leave their partners for the sake of pets! Though many wouldn't actually leave their partners for the sake of their pets, a case took many readers by surprise where a woman left her partner for the sake of her pets! Well, check out this bizarre yet crazy incident where the woman who was married for 25 years and had a 22-year-old son, left her husband for the sake of her dogs! Know more details about her...
Story first published: Saturday, June 9, 2018, 12:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more