ದುರ್ವಾಸರು ಅಪ್ಸರೆಯನ್ನು ಹಕ್ಕಿಯಾಗಲು ಏಕೆ ಶಪಿಸಿದರು?

Subscribe to Boldsky

ಒಂದೊಮ್ಮೆ ಇಂದ್ರನ ಅರಮನೆ ನಂದನವನದಲ್ಲಿ ಎಲ್ಲಾ ದೇವತೆಗಳು ತಮ್ಮ ಕಲೆ ಮತ್ತು ತಮಗಿರುವ ಬುದ್ಧಿವಂತಿಕೆಯ ಪ್ರದರ್ಶನವನ್ನು ಮಾಡುತ್ತಿದ್ದರು. ಹಾಡು, ನೃತ್ಯ, ಸಂಗೀತ ಕಲೆಯನ್ನು ಅವರು ಪ್ರದರ್ಶಿಸುತ್ತಿದ್ದರು. ಆ ಸಮಯದಲ್ಲಿ ದೇವರ್ಷಿ ನಾರದರು ಪ್ರತ್ಯಕ್ಷಗೊಳ್ಳುತ್ತಾರೆ. ಅವರನ್ನು ಸ್ವಾಗತಿಸುವ ಸಲುವಾಗಿ ಇಂದ್ರ ದೇವರು ಆಸನದಿಂದ ಎದ್ದು ನಿಲ್ಲುತ್ತಾರೆ.

ಎಲ್ಲರೂ ನಾರದರಿಗೆ ತಲೆಬಾಗಿ ನಮಸ್ಕಾರವನ್ನು ಮಾಡುತ್ತಾರೆ. ಆದರೂ ಕೆಲವೊಮ್ಮೆ ತಮ್ಮ ಚಾಣಾಕ್ಯತನವನ್ನು ತೋರಿಸುವ ನಾರದರು ಆ ಸಂದರ್ಭಕ್ಕಾಗಿ ಕಾಯುತ್ತಿದ್ದರು. ಇವರೆಲ್ಲರಿಗೂ ಒಂದು ಪರೀಕ್ಷೆಯನ್ನು ನಡೆಸಬೇಕೆಂದು ನಾರದರು ತೀರ್ಮಾನಿಸುತ್ತಾರೆ.

ಅವರೆಲ್ಲರೂ ಉತ್ತಮ ಕಲೆಯನ್ನು ಪ್ರದರ್ಶಿಸುತ್ತಿದ್ದರೂ ಯಾರು ಚೆನ್ನಾಗಿ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ತೀರ್ಮಾನಿಸುವುದು ಕಷ್ಟವೆಂದು ಹೇಳುತ್ತಾರೆ. ಇವರಲ್ಲಿ ಯಾರು ಉತ್ತಮರು ಎಂಬುದನ್ನು ತೀರ್ಮಾನಿಸಲು ಇನ್ನೊಂದು ಪರೀಕ್ಷೆಯನ್ನು ನಡೆಸಬೇಕೆಂದು ಅವರು ಹೇಳುತ್ತಾರೆ.

ನಾರದರು ಇನ್ನೊಂದು ಪರೀಕ್ಷೆಯನ್ನು ನಡೆಸುತ್ತಾರೆ

ಸ್ವಲ್ಪ ಹೊತ್ತಿನ ಬಳಿಕ ಒಂದು ಉಪಾಯದೊಂದಿಗೆ ನಾರದರು ಬರುತ್ತಾರೆ. ಋಷಿ ದುರ್ವಾಸರು ಕೋಪವನ್ನು ಯಾರು ಭಂಗ ಮಾಡುತ್ತಾರೋ ಅವರೇ ವಿಜಯಿಗಳು ಎಂದು ನಾರದರು ಹೇಳುತ್ತಾರೆ. ದುರ್ವಾಸ ಮುನಿಗಳನ್ನು ಶಿವನ ಅವತಾರವೆಂದು ಕರೆಯಲಾಗಿದೆ ಮತ್ತು ತ್ವರಿತ ಮನೋಧರ್ಮಕ್ಕಾಗಿ ಅವರು ಹೆಸರುವಾಸಿಯಾಗಿದ್ದರು. ಅಂತೆಯೇ ಶೀಘ್ರ ಕೋಪಿ ಕೂಡ ಹೌದು.

Rishi Durvasa

ಋಷಿಯನ್ನು ದೇವತೆಗಳು ಗೌರವಿಸುತ್ತಿದ್ದರು

ಅವರ ಕೋಪದ ತಾಪಕ್ಕೆ ತಾವೆಲ್ಲರೂ ತರಗೆಲೆಗಳಂತೆ ಉರಿಯುವುದು ಖಂಡಿತ ಎಂದು ದೇವತೆಗಳು ಭಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ತಪಸ್ಸನ್ನು ಮುರಿಯುವುದು ಅಸಾಧ್ಯವಾದ ಮಾತು ಎಂಬುದು ದೇವತೆಗಳ ನಿರ್ಧಾರವಾಗಿರುತ್ತದೆ. ದುರ್ವಾಸರು ಶಿವನ ಇನ್ನೊಂದು ಅವತಾರ ಕೂಡ ಆಗಿರುತ್ತಾರೆ. ಪ್ರತಿಯೊಬ್ಬರೂ ಅವರಿಗೆ ಗೌರವವನ್ನು ನೀಡುತ್ತಿದ್ದರು ಮತ್ತು ಯಾರೂ ಕೂಡ ತಪಸ್ಸನ್ನು ಮುರಿಯುವ ನಿರ್ಧಾರವನ್ನು ಬೆಂಬಲಿಸುವುದಿಲ್ಲ. ಅಂತೆಯೇ ಶೀಘ್ರ ಕೋಪಿಯಾದ ಅವರ ಕೋಪವನ್ನು ಮುರಿಯುವುದು ಎಂದರೆ ತಮಗೆ ಅಪಚಾರ ಎಂದೇ ದೇವತೆಗಳು ಭಾವಿಸುತ್ತಾರೆ.

ವಪು ನಾರದರ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸುತ್ತಾಳೆ

ತನ್ನ ಸಾಮರ್ಥ್ಯಗಳ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಇರಿಸಿದ್ದ ವಪು ನಾರದರ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸುತ್ತಾಳೆ. ದುರ್ವಾಸ ಮುನಿಯ ಕೋಪವನ್ನು ತಾನು ಮುರಿಯುತ್ತೇನೆ ಎಂದು ಆಕೆ ನಾರದರಿಗೆ ಹೇಳುತ್ತಾಳೆ. ಹೀಗೆ ಆಕೆ ದುರ್ವಾಸರು ತಪ್ಪಸ್ಸು ಮಾಡುತ್ತಿದ್ದೆಡೆಗೆ ಬರುತ್ತಾಳೆ.

ಅಪ್ಸರೆಯನ್ನು ಶಪಿಸಿದ ದುರ್ವಾಸ

ಉಗ್ರ ತಪ್ಪಸ್ಸಿನಲ್ಲಿದ್ದ ಋಷಿ ಪಕ್ಕದಲ್ಲಿ ಕೇಳಿ ಬಂದ ಸುಮಧುರ ಧ್ವನಿಗೆ ತಲೆಬಾಗುತ್ತಾರೆ. ಆಕೆಯ ಮಧುರ ಸ್ವರ ಯಾರನ್ನೂ ಬೇಕಾದರೂ ಸೆಳೆಯುತ್ತಿತ್ತು. ದಿವ್ಯ ಜ್ಞಾನವನ್ನು ಹೊಂದಿದ್ದ ದುರ್ವಾಸರು ಇದು ಅಪ್ಸರೆಯ ಸ್ವರ ಎಂಬುದನ್ನು ಮನಗಾಣುತ್ತಾರೆ ಮತ್ತು ತನ್ನ ತಪಸ್ಸನ್ನು ಭಂಗಪಡಿಸಲು ಆಕೆ ಬಂದಿರುವಳೆಂದೇ ಋಷಿ ಭಾವಿಸುತ್ತಾರೆ. ಇದನ್ನು ಅರಿತ ಋಷಿ ಅಪ್ಸರೆಯ ಮುಂದೆ ಪ್ರತ್ಯಕ್ಷಗೊಳ್ಳುತ್ತಾರೆ. ತನ್ನ ಮುಂದೆ ಪ್ರತ್ಯಕ್ಷ ಗೊಂಡಿರುವ ಋಷಿಯನ್ನು ನೋಡಿ ಅಪ್ಸರೆಗೆ ಆಶ್ಚರ್ಯ ಮತ್ತು ಸಂತೋಷ ಉಂಟಾಗುತ್ತದೆ. ಆದರೆ ತನ್ನ ಕೋಪದ ಕಣ್ಣುಗಳಿಂದ ಆತ ಅಪ್ಸರೆಯನ್ನು ನೋಡುತ್ತಿದ್ದರು. ತನ್ನನ್ನು ಇದೀಗ ಅವರು ಶಪಿಸುತ್ತಾರೆ ಎಂಬುದನ್ನರಿಯಲು ಅಪ್ಸರೆಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಆಕೆ ಪಕ್ಷಿಯಾಗಲಿ ಎಂದು ಋಷಿ ಶಪಿಸುತ್ತಾರೆ. ಅಂತೆಯೇ ಆ ಹಕ್ಕಿ ನಾಲ್ವರು ಪುತ್ರರಿಗೆ ಜನ್ಮ ನೀಡುತ್ತದೆ ಎಂದು ಹೇಳುತ್ತಾರೆ. ಅರ್ಜುನನ ಬಾಣದಿಂದ ಆಕೆಗೆ ಶಾಪ ಮುಕ್ತಿ ಎಂದು ದುರ್ವಾಸರು ಶಪಿಸುತ್ತಾರೆ.

ಶಾಪದಿಂದ ಅಪ್ಸರೆಗೆ ಮುಕ್ತಿ

ಶಾಪದ ಪ್ರಕಾರವಾಗಿ ಅಪ್ಸರೆಯು ಹಕ್ಕಿಯಾಗಿ ಮಾರ್ಪಡುತ್ತಾರೆ. ಮಹಾಭಾರತ ಯುದ್ಧದಲ್ಲಿ ಅರ್ಜುನನ ಬಾಣವು ಹಕ್ಕಿಯನ್ನು ಸ್ಪರ್ಶಿಸುತ್ತದೆ. ಕೂಡಲೇ ಆಕೆ ಭೂಮಿಯ ಮೇಲೆ ಬೀಳುತ್ತಾಳೆ. ಈ ಸಮಯದಲ್ಲಿ ತನ್ನ ಗರ್ಭದಲ್ಲಿ ಆಕೆ ನಾಲ್ಕು ಮರಿಗಳನ್ನು ಹೊತ್ತೊಯ್ಯುತ್ತಿದ್ದಳು. ಆಕೆ ಮರಣವನ್ನು ಹೊಂದಿದ್ದರೂ ಯುದ್ಧದಲ್ಲಿದ್ದ ಆನೆಯ ಕುತ್ತಿಗೆಯಲ್ಲಿದ್ದ ಗಂಟೆಯು ಒಳಗೆ ಮರಿಗಳು ಬಿದ್ದು ಅವುಗಳು ಬದುಕುತ್ತವೆ. ಹೀಗೆ ಅಪ್ಸರೆಯು ಶಾಪದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾಳೆ. ತನ್ನ ಅಹಂಕಾರವೇ ಆಕೆಗೆ ಮದ್ದಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Why Rishi Durvasa Cursed Apsara Vapu

    Rishi Durvasa was a quick tempered but highly respected sage. When, as per the challenge from Narad Muni, Vapu the nymph tried to break his meditation, sage Durvasa cursed her to become a bird, who would get liberation from it only when she would be killed by the arrow from Arjuna's bow. Thus, her overconfidence resulted into a curse.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more