For Quick Alerts
ALLOW NOTIFICATIONS  
For Daily Alerts

ನೀವು ಶ್ರೀಮಂತರಾಗುತ್ತೀರಾ? ನಿಮ್ಮ ರಾಶಿಚಕ್ರಗಳು ಏನು ಹೇಳುತ್ತವೆ?

By Hemanth
|

ಹಣ ಯಾರಿಗೆ ತಾನೇ ಬೇಡ ಹೇಳಿ? ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಕೆಲವರು ದೈನಂದಿನ ಖರ್ಚಿಗಾಗಿ ಹಣ ಸಂಪಾದನೆ ಮಾಡಿದರೆ, ಇನ್ನುಳಿದವರು ದೊಡ್ಡ ಮಟ್ಟದಲ್ಲಿ ಸಂಪಾದಿಸಿ ತಮ್ಮ ಮುಂದಿನ ಪೀಳಿಗೆಗೆ ಆಗುವಷ್ಟು ಹಣ ಮಾಡಿಡುವರು. ಹಣವನ್ನು ಖರ್ಚು ಮಾಡದೇ ಇರುವಂತಹ ವ್ಯಕ್ತಿಯನ್ನು ನಾವು ದೊಡ್ಡ ಜಿಪುಣ ಎಂದು ಕರೆಯುತ್ತೇವೆ. ಅದೇ ರೀತಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುವ ವ್ಯಕ್ತಿಯನ್ನು ದುಂದುವೆಚ್ಚಗಾರನೆನ್ನುತ್ತೇವೆ. ಆದರೆ ಹಣ ಖರ್ಚು ಮಾಡುವ ಅಥವಾ ಅದನ್ನು ಕೂಡಿಡುವ ಗುಣಗಳು ನಮಗೆ ಎಲ್ಲಿಂದ ಬಂದಿರುವುದು?

ಹಣವನ್ನು ತುಂಬಾ ಜೋಪಾನವಾಗಿ, ಮಿತದಲ್ಲಿ ಖರ್ಚು ಮಾಡಬೇಕೆಂದು ಬಾಲ್ಯದಲ್ಲಿ ತಂದೆತಾಯಿ ಹೇಳಿಕೊಡುವರು. ಆದರೆ ಇದೆಲ್ಲವೂ ಸಲಹೆಗಳು ಮಾತ್ರ. ಕೆಲವರು ತುಂಬಾ ಖರ್ಚು ಮಾಡಿದರೆ, ಇನ್ನು ಕೆಲವರು ತಮ್ಮ ಮಿತಿಯಲ್ಲೇ ಖರ್ಚು ಮಾಡುವರು. ಇದಕ್ಕೆಲ್ಲಾ ಕಾರಣ ನಮ್ಮ ರಾಶಿಚಕ್ರಗಳು. ಹೌದು, ನಮಗೆ ಹಣದ ಬಗ್ಗೆ ವ್ಯಾಮೋಹ, ಖರ್ಚು ಮಾಡುವುದು ಇದೆಲ್ಲವೂ ಬಂದಿರುವುದು ರಾಶಿ ಚಕ್ರದಿಂದ.

ಒಬ್ಬ ವ್ಯಕ್ತಿ ತನ್ನಲ್ಲಿರುವಂತಹ ಯಾವುದೇ ಪ್ರತಿಭೆಯನ್ನು ಇಟ್ಟುಕೊಂಡು ದೊಡ್ಡ ಸಂಪಾದನೆ ಮಾಡಿದರೆ ಅದಕ್ಕೆ ಪ್ರಮುಖ ಕಾರಣ ಆತನ ರಾಶಿಚಕ್ರಗಳು ಎಂದು ಜ್ಯೋತಿಷ್ಯವು ಹೇಳುತ್ತದೆ. ಕೆಲವು ಹಣ ಸಂಪಾದನೆ ಮಾಡಿಕೊಂಡು ಶ್ರೀಮಂತರಾಗುವುದು, ಇನ್ನು ಕೆಲವರು ದಿನದ ಖರ್ಚಿಗೆ ಹಣವಿಲ್ಲದೆ ಕೊರಗುವುದು, ಇದೆಲ್ಲವೂ ಜನ್ಮರಾಶಿಯ ಫಲ. ಇದು ಹೇಗೆ ಮತ್ತು ಪ್ರತೀ ರಾಶಿಯವರು ಹಣದ ನಿರ್ವಹಣೆ ಹೇಗೆ ಮಾಡಬಹುದು ಎಂದು ನೀವು ಈ ಲೇಖನ ಓದುತ್ತಾ ತಿಳಿಯಿರಿ....

ಮೇಷ ಮತ್ತು ಹಣ

ಮೇಷ ಮತ್ತು ಹಣ

ನೀವು ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ನಿಮಗೆ ಆರ್ಥಿಕ ಭದ್ರತೆಯ ಅಗತ್ಯವು ಬಲವಾಗಿರುವುದು. ನೀವು ಗಳಿಸಿದಷ್ಟೇ ವೇಗವಾಗಿ ಹಣ ವ್ಯಯಿಸುತ್ತೀರಿ.

ಮೇಷ ರಾಶಿಯವರಿಗೆ ಹಣ ನಿರ್ವಹಣೆ ಸಲಹೆಗಳು

ನೀವು ಮಾಡಬೇಕಾಗಿರುವ ಅತ್ಯುತ್ತಮ ಕೆಲಸವೆಂದರೆ ನೀವೊಬ್ಬ ವೈಯಕ್ತಿಕ ಆರ್ಥಿಕ ಸಲಹೆಗಾರನನ್ನು ನೇಮಿಸಬೇಕು. ಕ್ರೆಡಿಟ್ ಕಾರ್ಡ್ ಅತಿಯಾಗಿ ಬಳಸಬೇಡಿ. ಹಣದ ಬಜೆಟ್ ಮಾಡಿಕೊಂಡು ಅತಿಯಾದ ಖರೀದಿ ಕಡಿಮೆ ಮಾಡಿಕೊಳ್ಳಿ.

ವೃಷಭ ಮತ್ತು ಹಣ

ವೃಷಭ ಮತ್ತು ಹಣ

ವೃಷಭ ರಾಶಿಯವರಿಗೆ ಹಣದ ಬಗ್ಗೆಯೇ ಯಾವಾಗಲೂ ಚಿಂತೆ. ಹಣವಿದ್ದರೂ ಇದನ್ನು ಹೇಗೆ ಉಳಿಸಿಕೊಳ್ಳುವುದು ಎನ್ನುವ ಚಿಂತೆ ಇವರಿಗೆ. ನೀವು ಅತಿಯಾಗಿ ಹಣ ಸಂಪಾದನೆ ಮಾಡುವ ಕಾರಣ ದಿಂದಾಗಿ ಐಷಾರಾಮಿ ಜೀವನ ಸಾಗಿಸುವಿರಿ. ಇದೇ ವೇಳೆ ನೀವು ಹಣವನ್ನು ಹೂಡಿಕೆ ಮಾಡಿ ಆರ್ಥಿಕ ಭದ್ರತೆಗಾಗಿ ವಿನಿ ಯೋಗಿಸುತ್ತೀರಿ.

ವೃಷಭ ರಾಶಿಯವರಿಗೆ ಹಣ ನಿರ್ವಹಣೆ ಸಲಹೆಗಳು

ನೀವು ಹಣಕ್ಕೆ ಅತಿಯಾಗಿ ಮಹತ್ವ ನೀಡುತ್ತೀರಿ ಮತ್ತು ಇದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ನೀವು ಒಳ್ಳೆಯ ರೀತಿ ಹಣ ಸಂಪಾದನೆ ಮಾಡಿದಂತೆ ಸಂಬಂಧ ಹಾಗೂ ಭಾವನೆಗಳಲ್ಲೂ ಇದನ್ನು ಹೂಡಿಕೆ ಮಾಡಬೇಕು.

ಮಿಥುನ ಮತ್ತು ಹಣ

ಮಿಥುನ ಮತ್ತು ಹಣ

ಜೀವನದ ಇತರ ಕೆಲವೊಂದು ಆದ್ಯತೆಗಳಂತೆ ನೀವು ಹಿಂದೆ ಹೋಗಿ ಹಣದೊಂದಿಗೆ ಮುಂದುವರಿಯಲಿದ್ದೀರಿ. ಕೆಲವೊಂದು ಸಲ ನಿಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣವಿರುವುದು ಮತ್ತು ಇನ್ನು ಕೆಲವೊಮ್ಮೆ ನೀವು ಇದನ್ನು ಹೆಚ್ಚಾಗಿ ಖರ್ಚು ಮಾಡುವಿರಿ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹಣ ಸಂಪಾದಿಸುವಿರಿ. ಹಣವು ಸರಳವಾಗಿ ಕೊನೆಯಾಗುವ ವಿಧಾನ.

ಮಿಥುನ ರಾಶಿಯವರಿಗೆ ಹಣ ನಿರ್ವಹಣೆ ಸಲಹೆಗಳು

ಹಣ ಸಂಪಾದನೆಯಲ್ಲಿ ನೀವು ಅತ್ಯುತ್ತಮವಾಗಿದ್ದೀರಿ. ಆದರೆ ಇದರ ನಿರ್ವಹಣೆಯನ್ನು ನೀವು ಕಲಿಯಬೇಕಾಗಿದೆ. ನಿಮ್ಮ

ಹಣದ ನಿರ್ವಹಣೆಗಾಗಿ ದೀರ್ಘಕಾಲದ ಯೋಜನೆ ಹಾಕಿಕೊಳ್ಳಿ ಮತ್ತು ಇದಕ್ಕೆ ಬದ್ಧರಾಗಿರಿ. ಹಣದ ನಿರ್ವಹಣೆಯು ತುಂಬಾ

ಬೋರಿಂಗ್ ವಿಚಾರ. ಆದರೆ ನೀವು ಯೋಜನೆಗೆ ಬದ್ಧರಾಗಿದ್ದರೆ ಮುಂದೆ ನಿಮಗೆ ಇದರ ಲಾಭವಾಗಲಿದೆ.

ಕರ್ಕಾಟಕ ಮತ್ತು ಹಣ

ಕರ್ಕಾಟಕ ಮತ್ತು ಹಣ

ನೀವು ಹಣ ಸಂಗ್ರಹಣೆಗಾರ. ನಿಮ್ಮ ಬ್ಯಾಂಕ್ ನಲ್ಲಿ ತುಂಬಾ ಹಣವಿದೆಯೆಂದು ನಿಮಗೆ ಖಾತರಿಯಾದ ಬಳಿಕವಷ್ಟೇ ನಿಮಗೆ ಭದ್ರತೆಯ ಭಾವನೆಯಾಗುವುದು. ಹಣ ಖರ್ಚು ಮಾಡುವುದು ನಿಮಗೆ ಅನಾನುಕೂಲ ಉಂಟು ಮಾಡುವುದು ಮತ್ತು ಇದನ್ನು ನೀವು ಆದಷ್ಟು ಕಡೆಗಣಿಸಲು ಪ್ರಯತ್ನಿಸುತ್ತೀರಿ. ತುಂಬಾ ಹಿಂಜರಿಕೆಯಿಂದ ಹಣ ಖರ್ಚು ಮಾಡುತ್ತೀರಿ ಮತ್ತು ಇದು ನಿಮ್ಮ ಕುಟುಂಬದವರಿಗಾಗಿ ಮಾತ್ರ.

ಕರ್ಕಾಟಕ ರಾಶಿಯವರಿಗೆ ಹಣ ನಿರ್ವಹಣೆ ಸಲಹೆಗಳು

ನಿಮಗೆ ಹಣ ನಿರ್ವಹಣೆ ಬಗ್ಗೆ ಸಲಹೆಗಳು ಬೇಕಿಲ್ಲ. ಇನ್ನೊಂದು ಕಡೆಯಲ್ಲಿ ನೀವು ಸ್ವಲ್ಪ ಹಣವನ್ನು ವಿನಿಯೋಗಿಸಿ ಅದರಿಂದ ಖುಷಿ ಪಟ್ಟುಕೊಳ್ಳಬೇಕು.

ಸಿಂಹ ಮತ್ತು ಹಣ

ಸಿಂಹ ಮತ್ತು ಹಣ

ನೀವು ರಾಜನಂತೆ ಜೀವನ ಸಾಗಿಸುವ ವ್ಯಕ್ತಿತ್ವದವರು. ಜೀವನದಲ್ಲಿರುವ ಎಲ್ಲಾ ಒಳ್ಳೆಯ ವಸ್ತುಗಳು ಸಿಗಬೇಕೆಂದು ನೀವು ಬಯಸುತ್ತೀರಿ ಮತ್ತು ಇದಕ್ಕಾಗಿ ಕಠಿಣಶ್ರಮ ವಹಿಸುತ್ತೀರಿ. ನೀವು ಬಯಸಿದ್ದಕ್ಕಿಂತ ಹೆಚ್ಚಿನ ಹಣ ವ್ಯಯಿಸುತ್ತೀರಿ.

ಸಿಂಹ ರಾಶಿಯವರಿಗೆ ಹಣ ನಿರ್ವಹಣೆ ಪಾಠ

ಅನಗತ್ಯ ಖರ್ಚಿನ ಬಗ್ಗೆ ಎಚ್ಚರಿಕೆ ವಹಿಸಬೇಕು.ಮಿತಗೊಳಿಸುವುದು ನಿಮ್ಮ ಪ್ರಮುಖ ಪದವಾಗಬೇಕು. ಹಣದ ಕಡೆಗೆ ಸ್ಥಿರವಾದ ಮನಸ್ಥಿತಿ ಅಭಿವೃದ್ಧಿಪಡಿಸುವತ್ತ ಗಮನಹರಿಸಿದರೆ ಆಗ ನಿಮಗೆ ಇದರಿಂದ ಸಿಗುವ ಸಂತೋಷವನ್ನು ಅರ್ಥ ಮಾಡಿಕೊಳ್ಳುವ ದಾರಿ ಸಿಗುವುದು.

ಕನ್ಯಾ ರಾಶಿ ಮತ್ತು ಹಣ

ಕನ್ಯಾ ರಾಶಿ ಮತ್ತು ಹಣ

ನೀವು ಜೀವನದಲ್ಲಿ ಪ್ರತಿಯೊಂದು ವಿಚಾರದ ಬಗ್ಗೆಯೂ ತುಂಬಾ ನಿರ್ದಿಷ್ಟವಾಗಿರುತ್ತೀರಿ ಮತ್ತು ಅದೇ ರೀತಿ ಹಣ ಬಗ್ಗೆ ಕೂಡ. ಇತರ ಯಾವುದೇ ವಿಚಾರಕ್ಕಿಂತಲೂ ಜೀವನದಲ್ಲಿ ತುರ್ತು ನಿಧಿಯ ಅಗತ್ಯವಿರುತ್ತದೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕ ಸಹಾಯಕ್ಕಾಗಿ ನೀವು ಕೇಳಬಹುದು. ನೀವು ಯಾವಾಗಲೂ ಚೌಕಾಶಿಯಲ್ಲಿ ತೊಡಗುವಿರಿ.

ಹಣ ನಿರ್ವಹಣೆ ಹೇಗೆ

ನೀವು ತುಂಬಾ ಯೋಗ್ಯವಾಗಿ ಹಣದ ನಿರ್ವಹಣೆ ಮಾಡಲಿದ್ದೀರಿ. ನೀವು ಅತಿಯಾಗಿ ಜಿಪುಣತನ ಮಾಡುವಾಗ ನಿಮ್ಮನ್ನು

ನೀವು ಪರೀಕ್ಷಿಸಿಕೊಳ್ಳುತ್ತೀರಿ ಮತ್ತು ಕಠಿಣವಾಗಿ ಸಂಪಾದಿಸಿದ ಹಣದಿಂದ ಖುಷಿ ಪಡುತ್ತೀರಿ.

ತುಲಾ ಮತ್ತು ಹಣ

ತುಲಾ ಮತ್ತು ಹಣ

ನೀವು ಒಂದು ತೀವ್ರತೆಯಿಂದ ಇನ್ನೊಂದಕ್ಕೆ ಜಿಗಿಯಬಹುದು. ನೀವು ಸಾಮಾಜಿಕ ಪರಿಸ್ಥಿತಿಗಳಲ್ಲಿ ಅತಿಯಾಗಿ ಖರ್ಚು ಮಾಡುತ್ತೀರಿ. ಅಗತ್ಯಬಿದ್ದಾಗ ನೀವು ಮಿತವ್ಯಯಿಯಾಗುವಿರಿ. ನಿಮ್ಮಲ್ಲಿ ಅತ್ಯುತ್ತಮ ವಾಗಿರುವುದನ್ನು ಪಡೆಯುವ ಆಕಾಂಕ್ಷೆಯು ಇರುವ ಕಾರಣದಿಂದಾಗಿ ಐಷಾರಾಮಿ ವಸ್ತುಗಳ ಕಡೆಗೆ ಹೆಚ್ಚು ಹಣ ವ್ಯಯಿಸುವಿರಿ.

ಹಣ ನಿರ್ವಹಿಸುವುದು ಹೇಗೆ

ಪದೇ ಪದೇ ದೊಡ್ಡ ದೊಡ್ಡ ಹೋಟೆಲ್ ಗಳಿಗೆ ಊಟಕ್ಕೆ ಹೋಗುವುದನ್ನು ಕಡೆಗಣಿಸಿ. ಸಾಮಾನ್ಯವಾಗಿ ಇಂತಹ ನಿರ್ಧಾರ

ತೆಗೆದುಕೊಳ್ಳಲು ನಿಮಗೆ ಕಷ್ಟವಾಗಬಹುದು. ಹಣದ ವಿಚಾರದಲ್ಲಿ ಇದು ತುಂಬಾ ಕೆಟ್ಟದಾಗಿರುವುದು. ಆರ್ಥಿಕ ಜವಾಬ್ದಾರಿ ಯಿರುವ ವ್ಯಕ್ತಿ ಜತೆಗೆ ನೀವು ಇದ್ದರೆ ಆಗ ಆರ್ಥಿಕ ಸಮಸ್ಯೆಗಳಿಂದ ದೂರವಾಗಲು ನಿಮಗೆ ನೆರವಾಗುವುದು. ಒಮ್ಮೆ ನೀವು ಉಳಿಸಲು ಆರಂಭಿಸಿದರೆ, ಆಗ ತುಂಬಾ ವ್ಯವಸ್ಥಿತವಾಗಿ ಹಣ ಉಳಿತಾಯ ಮಾಡುವಿರಿ.

ವೃಶ್ಚಿಕ ಮತ್ತು ಹಣ

ವೃಶ್ಚಿಕ ಮತ್ತು ಹಣ

ನಿಮ್ಮಲ್ಲಿ ಬೇರೆಯವರಿಗಿಂತ ಹೆಚ್ಚಾಗಿ ಹಣದ ರಹಸ್ಯ ಖಜಾನೆಯು ಇರುವುದು. ಸ್ವಾಭಾವಿಕವಾಗಿ ನೀವು ಲೆಕ್ಕಾಚಾರ ಮಾಡಿಕೊಂಡು ಹಣ ನೀಡಿರುವಂತಹ ಅಧಿಕಾರ ಮತ್ತು ನಿಯಂತ್ರಣವನ್ನು ಆನಂದಿಸುವಿರಿ. ಹಣ ಸಂಪಾದನೆ ಮತ್ತು ಅದರ ಉಳಿತಾಯದಲ್ಲಿ ನೀವು ಉತ್ತಮವಾಗಿರುತ್ತೀರಿ. ಸಮಯಾನುಸಾರವಾಗಿ ನೀವು ಹಣ ಖರ್ಚು ಮಾಡುತ್ತೀರಿ. ಹಣದ ದುಂದುವೆಚ್ಚ ನಿಮಗೆ ಇಷ್ಟವಿಲ್ಲ.

ವೃಶ್ಚಿಕ ರಾಶಿಯವರಿಗೆ ಹಣದ ನಿರ್ವಹಣೆ ಸಲಹೆಗಳು

ನಿಮಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯು ಬರುವುದಿಲ್ಲ. ಸಮಸ್ಯೆ ಬಂದರೂ ಅದರಿಂದ ನೀವು ಸುಲಭವಾಗಿ ಮೇಲೆ ಬರುವಿರಿ.

ಧನು ಮತ್ತು ಹಣ

ಧನು ಮತ್ತು ಹಣ

ನೀವು ತುಂಬಾ ಅದೃಷ್ಟವಂತ ಮತ್ತು ಸಾಹಸಿ ಎಂದು ಭಾವಿಸಿಕೊಂಡಿದ್ದೀರಿ. ಹಣದ ಬಗ್ಗೆ ನೀವು ಚಿಂತೆ ಮಾಡುವುದಿಲ್ಲ. ನಿಮ್ಮ ಅಗತ್ಯಕ್ಕೆ ಬೇಕಾದಷ್ಟು ಹಣವಿದೆ ಎಂದು ನಿಮಗೆ ತಿಳಿದಿದೆ.

ಧನು ರಾಶಿಯವರಿಗೆ ಹಣ ನಿರ್ವಹಣೆ ಸಲಹೆಗಳು

ಅದೃಷ್ಟವನ್ನು ಅತಿಯಾಗಿ ಪರೀಕ್ಷೆಗೊಡ್ಡಲು ಹೋದರೆ ಆಗ ನೀವು ಸಾಲದಲ್ಲಿ ಮುಳುಗಬಹುದು. ಹಣಕಾಸಿನ ಯೋಜನೆ ಬಗ್ಗೆ

ನೀವು ದೃಢವಾಗಿರಬೇಕು ಮತ್ತು ಇದನ್ನು ಅರ್ಧದಲ್ಲೇ ಬಿಟ್ಟುಬಿಡಬಾರದು.

ಮಕರ ಮತ್ತು ಹಣ

ಮಕರ ಮತ್ತು ಹಣ

ಆರ್ಥಿಕ ಭದ್ರತೆ ಸಾಧಿಸುವತ್ತ ನೀವು ಗಮನಹರಿಸಿದ್ದೀರಿ. ಹಣ ಖರ್ಚು ಮಾಡಿ, ಅದನ್ನು ವ್ಯರ್ಥ ಮಾಡುವುದು ನಿಮಗೆ ಇಷ್ಟವಿಲ್ಲ. ನೀವು ಮುಂದಿನ ದಿನಗಳಿಗಾಗಿ ಹಣವನ್ನು ನಿಯಮಿತವಾಗಿ ಉಳಿಸುತ್ತೀರಿ. `ನಿಧಾನ ಮತ್ತು ಸ್ಥಿರ' ನಿಮ್ಮ ಮಂತ್ರವಾಗಿದೆ. ಹಣ ಮತ್ತಷ್ಟು ಉಳಿಸಲು ನೀವು ನಿಧಾನವಾಗಿ ಪ್ರಯತ್ನಿಸುವಿರಿ.

ಮಕರ ರಾಶಿಯವರಿಗೆ ಹಣ ನಿರ್ವಹಣೆ ಸಲಹೆಗಳು

ಹಣ ನಿರ್ವಹಣೆ ಮಾಡುವುದು ಹೇಗೆ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ನೀವು ಅತಿಯಾಗಿ ಇದನ್ನು ಮಾಡಬೇಡಿ ಮತ್ತು ಎಲ್ಲರ ಮುಂದೆ ನೀವು ಇದರಿಂದ ಸಣ್ಣವರಾಗದಂತೆ ನೋಡಿಕೊಳ್ಳಿ.

ಕುಂಭ ಮತ್ತು ಹಣ

ಕುಂಭ ಮತ್ತು ಹಣ

ಉಪಯುಕ್ತ ವಿಚಾರಗಳತ್ತ ನೀವು ದೃಷ್ಟಿಹರಿಸುತ್ತೀರಿ ಮತ್ತು ಹಣದ ಬಗ್ಗೆ ಹೆಚ್ಚು ಚಿಂತೆ ಮಾಡಲ್ಲ. ಆದರೆ ಚತುರತೆಯಿಂದ ನೀವು ಹಣವನ್ನು ಪಡೆಯುವಿರಿ. ಉನ್ನತ ಗುಣಮಟ್ಟದ ಉತ್ಪನ್ನಗಳ ಖರೀದಿಗೆ ನೀವು ಹೆಚ್ಚಿನ ಹಣ ವ್ಯಯಿಸುತ್ತೀರಿ. ಹಣ ಉಳಿತಾಯದ ಬಗ್ಗೆ ನೀವು ಅಷ್ಟಾಗಿ ಯೋಚನೆ ಮಾಡಲ್ಲ. ಕೆಲಸ ಮಾಡಬೇಕೆಂದು ಹಣವು ನಿಮ್ಮನ್ನು ಪ್ರೇರೇಪಿಸಲ್ಲ. ಆರೋಗ್ಯಕರವಾದ ಬ್ಯಾಂಕ್ ಬ್ಯಾಲೆನ್ಸ್ ನಿಂದ ನೀವು ಯಶಸ್ಸನ್ನು ಅಳೆಯುವಿರಿ.

ಕುಂಭ ರಾಶಿಯವರು ಹಣ ನಿರ್ವಹಣೆ ಹೇಗೆ ಮಾಡಬೇಕು

ತುರ್ತು ಸಂದರ್ಭಕ್ಕಾಗಿ ನೀವು ನಿಯಮಿತವಾಗಿ ಹಣ ಬದಿಗೆ ತೆಗೆದಿಡಬೇಕು. ಕ್ರೆಡಿಟ್ ಕಾರ್ಡ್ ಬಳಕೆ ನಿಯಂತ್ರಿಸಬೇಕು. ನೀವು ಯಾವುದಕ್ಕೆ ಅತಿಯಾಗಿ ಹಣ ವಿನಿಯೋಗಿಸುತ್ತೀರಿ ಎಂದು ತಿಳಿದು, ಅದನ್ನು ಸ್ವಲ್ಪ ಕಡಿಮೆಗೊಳಿಸಬೇಕು.

ಮೀನ ಮತ್ತು ಹಣ

ಮೀನ ಮತ್ತು ಹಣ

ನಿಮ್ಮಲ್ಲಿ ಎರಡು ಮುಖಗಳಿವೆ. ಒಂದು ನೀವು ಹಣದಂತಹ ಸಣ್ಣ ವಿಚಾರಗಳ ಬಗ್ಗೆ ಚಿಂತೆ ಮಾಡಲ್ಲ. ತುಂಬಾ ಹಣ ಸಂಪಾದನೆ ಮಾಡುವಲ್ಲಿ ಮುಳುಗುವಿರಿ. ನೀವು ಹಣ ಸಂಪಾದನೆ ಮಾಡಬೇಕೆಂದು ಒಂದು ಸಲ ನಿರ್ಧರಿಸಿದರೆ ಆಗ ನಿಮ್ಮ

ಶಕ್ತಿ ಹಾಗೂ ಕ್ರಿಯಾತ್ಮಕ ಶಕ್ತಿ ಬಳಕೆ ಮಾಡುವಿರಿ. ಕುಟುಂಬದ ಅಗತ್ಯಕ್ಕೆ ಬೇಕಿರುವ ಹಣ ಒದಗಿಸುವುದನ್ನು ನೀವು ದೃಢಪಡಿಸಿಕೊಳ್ಳಿ.

ಮೀನ ರಾಶಿಯವರಿಗೆ ಹಣ ನಿರ್ವಹಣೆ ಸಲಹೆಗಳು

ಅತಿಯಾದ ಖರ್ಚಿಗೆ ನೀವು ಕಡಿವಾಣ ಹಾಕಬೇಕು. ದಿಢೀರ್ ಶ್ರೀಮಂತರಾಗುವ ಸ್ಕೀಮ್ ಗಳಿಗೆ ನೀವು ಮಾರು ಹೋಗಬಾರದು. ಹಣಕಾಸಿನ ಒಳ್ಳೆಯ ಜ್ಞಾನವಿರುವವರ ಜತೆಗೆ ನೀವು ಆರ್ಥಿಕತೆ ಬಗ್ಗೆ ಚರ್ಚೆ ಮಾಡಿದರೆ ಇದರಿಂದ ನಿಮಗೆ ತುಂಬಾ ನೆರವಾಗುವುದು.

English summary

What your Zodiac Sign says about your Money Profile

A lot of our financial habits get developed early in life. Parents try and teach their children to handle money when they are young, in the hope that they become financial experts some day. But some of our characteristics are a part of us right from birth and don’t really change, including the way we manage our finances. Ever wondered why some people hoard money while some are spend-thrifts? Why does someone perform very badly in a particular field and as soon after he decides to follow his passion he ‘suddenly’ does well and earns a lot of money?
X
Desktop Bottom Promotion