For Quick Alerts
ALLOW NOTIFICATIONS  
For Daily Alerts

  ವಾರ ಭವಿಷ್ಯ: 10ನೇ ಜೂನ್ 2018 ರಿಂದ 16 ನೇ ಜೂನ್ 2018ರ ವರೆಗೆ....

  By Sushma Charhra
  |

  ನಿಮ್ಮ ಈ ವಾರವನ್ನು ಹೀಗೆ ಆರಂಭಿಸಿ. ಯಾಕೆಂದರೆ ನಿಮ್ಮ ದಿನಚರಿ ಈ ವಾರದಲ್ಲಿ ಹೇಗಿರುತ್ತೆ ಅನ್ನುವ ಲೆಕ್ಕಾಚಾರವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಈ ಮಾಹಿತಿಗಳು ನಿಮ್ಮ ಕರಿಯರ್, ಮದುವೆ, ಸಂಬಂಧ, ಗೆಲುವು,ಆರೋಗ್ಯ ಹಾಗೂ ಇತರೆ ಹಲವಾರು ಅಂಶಗಳನ್ನು ಒಳಗೊಂಡಿರುತ್ತೆ.

  ಉದಾಹರಣೆಗೆ ನಕ್ಷತ್ರಗಳು ಹೇಳುವ ಪ್ರಕಾರ ಪ್ರತಿ ರಾಶಿಯವರ ಜೀವನದಲ್ಲಿ ಈ ವಾರ ಬರುವ ಬರುವ ಘಟನೆಗಳನ್ನು ವಿವರಿಸುತ್ತೆ. ಈ ಲೇಖನದಲ್ಲಿ ನಾವು ಪ್ರತಿಯೊಂದು ರಾಶಿಯವರ ಜೀವನದಲ್ಲಿ ಈ ವಾರ ಏನನ್ನು ನಿರೀಕ್ಷಿಸಬಹುದು ಅನ್ನುವ ಮಾಹಿತಿಯನ್ನು ನೀಡಲಾಗಿದೆ. ಮುಂದೆ ಓದಿ...

  ಮೇಷ

  ಮೇಷ

  ಈ ವಾರವು ವ್ಯಾಪಾರಸ್ಥರಿಗೆ ಭಾರೀ ಲಾಭದಾಯಕವಾಗಿರುವಂತೆ ಕಾಣುತ್ತದೆ. ಕೆಲಸವನ್ನು ಇನ್ನಷ್ಟು ವಿಸ್ತರಿಸಲು ಮತ್ತು ವಿದೇಶಿ ಗ್ರಾಹಕರೊಂದಿಗೆ ವ್ಯಾಪಾರ ಹೆಚ್ಚಿಸಿಕೊಳ್ಳಲು ಅನುಕೂಲಕರವಾಗಿದೆ. ನೀವು ಅಂದುಕೊಂಡಿದ್ದಕ್ಕಿಂತ ಬ್ಯೂಸಿನೆಸ್ ನ ವೇಗ ಸ್ವಲ್ಪ ಮಟ್ಟಿಗೆ ಕಡಿಮೆ ಇರಬಹುದು..! 10 ನೇ ಮನೆಯಲ್ಲಿ ಶನಿಯು ಅಡ್ಡಗಾಲು ಹಾಕುವುದರಿಂದಾಗಿ ಇದು ಹೀಗಾಗುತ್ತದೆ.ಆದರೆ ಉತ್ತಮ ಹಣಕಾಸು ವಹಿವಾಟು ನಡೆದು ಆದಾಯ ಬರುತ್ತದೆ. ಇದು ನಿಮ್ಮನ್ನು ಮತ್ತೆ ಇನ್ನಷ್ಟು

  ಲಾಭಗಳಿಕೆಗೆ ಉತ್ಪಾದಕ ಮಾರ್ಗಗಳನ್ನು ಅನುಸರಿಸುವಂತೆ ಮಾಡುತ್ತದೆ ಮತ್ತು ಹೆಚ್ಚು ಉಳಿತಾಯಕ್ಕೂ ಕಾರಣವಾಗುತ್ತದೆ. ಉದ್ಯಮಿಗಳು ಮತ್ತು ವೃತ್ತಿಪರರು ನಿಮ್ಮ ದಾರಿಯಲ್ಲಿ ಬರುವ ಹೊಸ ಅವಕಾಶ ಅಥವಾ ಪ್ರೊಜೆಕ್ಟ್ ಬಗ್ಗೆ ಜಾಗೃತರಾಗಿರುವುದು ಒಳಿತು. ಇದನ್ನು ಪರಿಗಣಿಸುವ ಮೊದಲು ಯಾರಾದರು ಪರಿಣಿತರ ಬಳಿ ಸಲಹೆ ಪಡೆಯಿರಿ. ಈ ವಾರದ ಅಂತ್ಯದಲ್ಲಿ ಶುಕ್ರನು 5 ನೇ ಮನೆಯಲ್ಲಿ ಉರಿಯುತ್ತಿರುವ ಬೆಂಕಿಯಂತಾಗುತ್ತಾನೆ,. ಗಣೇಶನ ಪ್ರಕಾರ, ಒಬ್ಬಂಟಿಗರಿಗೆ ನಿಮ್ಮ ಗೆಳೆತನ ಇನ್ನಷ್ಟು ನಿಕಟಗೊಳ್ಳುವ ಸಾಧ್ಯತೆಗಳಿದೆ.ಮಕ್ಕಳ ಜೊತೆ ಆಟವಾಡುವುದು ಮತ್ತು ಕ್ರಿಯಾಶೀಲ ಕಾರ್ಯಗಳಲ್ಲಿ ತೊಡಗುವುದರಿಂದಾಗಿ ನೀವು ಹೆಚ್ಚು ಧನಾತ್ಮಕವಾಗಿರುವ ಸಾಧ್ಯವಾಗುತ್ತೆ.

  ವೃಷಭ

  ವೃಷಭ

  ಈ ವಾರ ಆರಂಭವಾಗುತ್ತಿದ್ದಂತೆ ನೀವು ನಿಮ್ಮ ವಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ಸ್ಥಾನಮಾನದ ಬಗ್ಗೆ ಸಾಕಷ್ಟು ಯೋಚಿಸುತ್ತೀರಿ. ಎಲ್ಲರ ಗಮನ ಸೆಳೆಯಲು, ಎಲ್ಲರ ಮಧ್ಯೆ ನೀವು ಗುರುತಿಸಿಕೊಳ್ಳಲು ಸಾಕಷ್ಟು ದಾರಿಗಳನ್ನು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಸಾಮಾಜಿಕ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಹೊಗಳಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತೀರಿ.. ಬುಧವಾರದ ಹೊತ್ತಿಗೆ ಬುಧನು ನಿಮ್ಮ 3ನೇ ಮನೆಯಲ್ಲಿ ಕರ್ಕಾಟಕ ರಾಶಿಯೆಡೆಗೆ ವರ್ಗಾವಣೆ ಯಾಗುವುದರಿಂದಾಗಿ, ಗಣೇಶನ ಪ್ರಕಾರ, ಇದರಿಂದ ನಮ್ಮ ಸಂಬಂಧದಲ್ಲಿ , ನೆಂಟರಿಷ್ಟರಲ್ಲಿ, ಅಕ್ಕತಂಗಿಯರಲ್ಲಿ ಹೆಚ್ಚು ಬಾಂಧವ್ಯ ಬೆಳೆಯುತ್ತೆ. ನೀವು ಅವರ ಅಗತ್ಯತೆ ಮತ್ತು ಆಕಾಂಕ್ಷೆಗಳನ್ನು ಅರಿತುಕೊಳ್ಳುತ್ತೀರಿ.ನಿಮ್ಮ ರಾಶಿಯ ಅಧಿಪತಿ ಶುಕ್ರನು 4 ನೇ ಮನೆಯಲ್ಲಿದ್ದು ಸಿಂಹರಾಶಿಗೆ ಸಂಚರಿಸಲಿದ್ದಾನೆ. ಮಂಗಳು ಪರಸ್ಪರ ವಿರೋಧವಾಗಿರುವುದರಿಂದ ನೀವು ಯಶಸ್ಸಿನ ಏಣಿ ಹತ್ತಲಿದ್ದಾರೆ. ವ್ಯಾಪಾರಸ್ಥರು ಮತ್ತು ಉದ್ಯೋಗಿಗಳು ಡೀಲ್ ಗಳನ್ನು ಮಾಡುವುದರಲ್ಲಿ ಗ್ರಾಹಕರ ಜೊತೆ ಬ್ಯೂಸಿಯಾಗಿರುತಾರೆ. ಪ್ರೀತಿಸುವವರಿಗೆ ಇದು ಸರಿಯಾದ ಸಮಯವೆಂದು ಗಣೇಶ ಅಭಿಪ್ರಾಯ ಪಡುತ್ತಾನೆ ಮತ್ತು ಮದುವೆಯೆಂಬ ಬಂಧನಕ್ಕೆ ಒಳಪಟ್ಟು ಹೊಸ ಸಂಬಂಧವನ್ನು ಅವರು ಆರಂಭಿಸಬಹುದು.ಜೂನ್ ತಿಂಗಳ ಎರಡನೇ ವಾರದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಾಯಿಸುವ ಬಗ್ಗೆ ಹೆಚ್ಚು ಸಾಧ್ಯತೆಗಳಿವೆ. ನೀವು ಆ ಕೆಲಸವನ್ನು ಬದಲಾಯಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಮಾಹಿತಿ ಪಡೆಯಿರಿ

  ಮಿಥುನ

  ಮಿಥುನ

  ನೀವು ಹೆಚ್ಚು ಪ್ರೀತಿಸುವ ಯಾವುದನ್ನೋ ನೀವು ಈ ವಾರ ಮಾಡಲಿದ್ದೀರಿ.. ಶಾಪಿಂಗ್! ನೀವು ಈ ವಾರ ಕಾಸ್ಮೆಟಿಕ್, ಹಸ್ತಕೃತಿಗಳು, ಐಷಾರಾಮಿ ವಸ್ತುಗಳನ್ನು ನಿಮ್ಮ ಮನೆಗೆ ಖರೀದಿಸಲಿದ್ದೀರಿ ಅಥವಾ ವಿಶ್ರಾಂತಿ ಚಟುವಟಿಕೆಗಳಲ್ಲಿ ತೊಡಗಲಿದ್ದೀರಿ. 12 ನೇ ಮನೆಗೆ ಚಂದ್ರನು ತೆರಳುವುದರಿಂದಾಗಿ ಖರ್ಚು ಮತ್ತು ವೆಚ್ಚದ ಬಗ್ಗೆ ನಿಗಾ ಇರಲಿ. ಅನಗತ್ಯ ವಸ್ತುಗಳನ್ನು ಖರೀದಿಸುವ ಮುನ್ನ ಯೋಚಿಸಿ. ಉಳಿತಾಯದ ಬಗ್ಗೆ ಹೆಚ್ಚು ಯೋಚಿಸಲು ಗಣೇಶ ಸಲಹೆ ನೀಡುತ್ತಿದ್ದಾನೆ. ಹಣಕಾಸು ನಿರ್ಧಾರಗಳನ್ನು ಸದ್ಯ ತೆಗೆದುಕೊಳ್ಳುವುದು ಬೇಡ.,ದೈನಂದನ ಖರ್ಚುಗಳಿಗೆ ನಿಮ್ಮ ನಕ್ಷತ್ರಗಳು ಯಾವುದೇ ತೊಂದರೆ ನೀಡದೆ ಗಟ್ಟಿ ಬೆಂಬಲ ನೀಡುತ್ತಿರುವುದಕ್ಕೆ ನಿಮ್ಮ ನಕ್ಷತ್ರಗಳಿಗೆ ನೀವು ಧನ್ಯವಾದ ಸಲ್ಲಿಸಬೇಕು. ನಿಮ್ಮ ಕೌಂಟುಬಿಕ ಸದಸ್ಯರೊಂದಿಗೆ ಹಾಸ್ಯಾಸ್ಪದ ಸಂದರ್ಬವನ್ನು ಕಳೆಯುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಈ ವಾರ ಕಳೆಯುವ ಅವಕಾಶವಿದೆ. ಬುಧವಾರ ನಿಮ್ಮನಾಳುವ ಗ್ರಹ ಬುಧನು ಎರಡನೇ ಮನೆಯಿಂದ ಕರ್ಕಾಟಕ ರಾಶಿಗೆ ಸಂಚರಿಸಲಿದ್ದಾನೆ. ವಿದೇಶಿ

  ಸಂಬಂಧದೊಂದಿಗೆ ವಯಕ್ತಿಕ ಮತ್ತು ವೃತ್ತಿಪರ ಲಾಭಗಳು ದೊರೆಯುವ ಸೂಚನೆಯನ್ನು ನೀಡುತ್ತದೆ. ಜೂನ್ ತಿಂಗಳ ಅಂತ್ಯದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಕೇಳಿ ತಿಳಿದುಕೊಳ್ಳಿ.

  ಕರ್ಕಾಟಕ

  ಕರ್ಕಾಟಕ

  ಒಂದು ಬಹುಮಾನ ಸಿಗುವ ವಾ ನಿಮ್ಮ ಮುಂದೆ ಇರುತ್ತದೆ ಎಂದು ಗಣೇಶ ಸೂಚಿಸುತ್ತಿದ್ದಾನೆ. ನಿಮ್ಮ ಅದೃಷ್ಟದ ನಕ್ಷತ್ರವು ನಿಮ್ಮೆಡೆಗೆ ಸಂಚರಿಸಲಿದೆ. ಇದು ನಿಮಗೆ ಆರ್ಥಿಕವಾಗಿ ಹಲವು ಲಾಭಗಳನ್ನು ತಂದೊಡ್ಡಲಿದೆ. ಪ್ರಭಾವಿ ವ್ಯಕ್ತಿಗಳ ಜೊತೆಗೆ ಸಂಬಂಧ ಬೆಳೆಯುವುದರಿಂದಾಗಿ ನಿಮಗೆ ಹಣದ ಹರಿವು ಹೆಚ್ಚುತ್ತದೆ.ಬುಧವಾರದ ಹೊತ್ತಿದೆ ಬುಧನು ನಿಮ್ಮ ರಾಶಿಯನ್ನು ಪ್ರವೇಶಿಸಲಿದ್ದು, ಇದು ನಿಮಗೆ ವಿದೇಶಿ ಸಂಬಂಧದಿಂದ ಲಾಭದ ಸೂಚ್ಯಂಕವಾಗಿದೆ. ನೀವು ಹಣಕಾಸು ವ್ಯವಹಾರವನ್ನು ಸಂತೋಷಿಸಲಿದ್ದು, ನಿಮ್ಮ ಹಣಕಾಸು ಸುಸ್ಥಿರತೆಯು ನಿಮ್ಮನ್ನು ಖುಷಿಯಾಗಿರುವಂತೆ ಮಾಡುತ್ತೆ.ಸಿಂಹರಾಶಿಯ ಅಧಿಪತಿ ಸೂರ್ಯನು ಶುಕ್ರನೆಡೆಗೆ ನಿಮ್ಮ ಎರಡನೇ ಮನೆಯಲ್ಲಿ ಸಂಚರಿಸಲಿದ್ದು, ನಿಮ್ಮ ಸಂತೋಷವನ್ನು ಹಂಚಿಕೊಳ್ಳಲಿದ್ದೀರಿ ಮತ್ತು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಲಿದ್ದೀರಿ. ಪ್ರೀತಿ ಮಾಡುವ ಜೋಡಿ ಹಕ್ಕಿಗಳು ಸೌಮ್ಯ ಮಾತುಕತೆಯಲ್ಲಿ ತೊಡಗಲಿದ್ದಾರೆ. ಮದುವೆ ಜೀವನದಲ್ಲಿ ಅಸಂಗತತೆ ಇರುವುದರ ಪರಿಣಾಮ ನೀವು ಖುಷಿಯಾಗಿ ಇಲ್ಲದೇ ಇರಬಹುದು. ಮನಸ್ಸಿನ ಶಾಂತಿಗಾಗಿ ಧ್ಯಾನ ಮಾಡಿ ಮತ್ತು ಆದಷ್ಟು ತಾಳ್ಮೆಯಿಂದ ಇರುವುದು ಒಳಿತು. ಜೂನ್ ತಿಂಗಳ ಮೂರನೇ ವಾರದ ಅಂತ್ಯದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಕೇಳಿ ತಿಳಿದುಕೊಳ್ಳಿ.

  ಸಿಂಹ

  ಸಿಂಹ

  ಕಳೆದ ವಾರ ಪ್ರಯಾಸದ ನಂತರ ಈ ವಾರವು ನಿಮಗೆ ವಯಕ್ತಿವಾಗಿ ಮತ್ತು ವೃತ್ತಿಪರವಾಗಿ ಸಾಕಷ್ಟು ಒಳಿತನ್ನು ಮಾಡಲಿದೆ. ಬ್ಯುಸಿನೆಸ್ ಮಾಡುವವರು ಅಂತರರಾಷ್ಟ್ರೀಯ ಕಂಪೆನಿಯೊಂದಿಗೆ ಸಹಯೋಗ ಮಾಡಿ ಉದ್ಯಮಿಗಳು ಚಿನ್ನವನ್ನು ಮುಷ್ಕರ ಮಾಡಬಹುದು. ನಿಮ್ಮ ಜೇಬಿಗೆ ಹಣವನ್ನು ಸೇರಿಸುವುದರ ಜೊತೆಗೆ, ನಿಮ್ಮ ಮಾರುಕಟ್ಟೆ ಮೌಲ್ಯಕ್ಕೆ ನೀವು ಖ್ಯಾತಿಯನ್ನು ಕೊಡುವಿರಿ. ಬುಧ ತನ್ನದೇ ಆದ ರಾಶಿ ಮಿಥುನ ಮತ್ತು ಹನ್ನೊಂದನೇ ಮನೆಯ ಮೂಲಕ ಹಾದುಹೋಗುವುದರೊಂದಿಗೆ ನಿಮ್ಮ ಬಯಕೆಯ ನೆರವೇರಿಕೆಗೆ ಸಹಾಯ ಮಾಡಲಿದೆ.. ನಿಮ್ಮ ರಾಶಿಯು ಆಡಳಿತಗಾರ ಕಂಪೆನಿಯೊಂದಿಗೆ 11 ನೇ ಮನೆಯಲ್ಲಿ ಬುಧವನ್ನು ಇರಿಸಿಕೊಳ್ಳುತ್ತಾನೆ. ಹಲವು ದಿನಗಳಂದ ಇರುವ ನಿಮ್ಮ ಆಸೆಯೊಂದು ಪೂರ್ಣವಾಗಬಹುದು ಮತ್ತು ಗಟ್ಟಿಯಾದ ಹಣಕಾಸು ಸ್ಥಾನಮಾನವು ನಿಮ್ಮನ್ನು ಖುಷಿಗೊಳಿಸುತ್ತದೆ. ಬುಧವಾರವು, ಬುಧ ತನ್ನ ಸ್ವಂತ ರಾಶಿ ಮಿಥುನವನ್ನು ಬಿಟ್ಟು ಕರ್ಕಾಟಕ ರಾಶಿಗೆ ನಿಮ್ಮ 12 ನೇ ಮನೆಯಲ್ಲಿ ಸಂಚರಿಸುತ್ತಾನೆ. ಇದು ನಿಮಗೆ ದೊಡ್ಡ ವಿದೇಶಿ ನೆಟ್ ವರ್ಕ್ ಸಿಗಲು ನೆರವು ನೀಡುತ್ತದೆ.ಈ ವಾರವೂ ನಿಮ್ಮೆಲ್ಲ ಕನಸುಗಳು ಪೂರ್ಣಗೊಳ್ಳುವ ವಾರವೆಂದು ಗಣೇಶ ಅಭಿಪ್ರಾಯ ಪಡುತ್ತಿದ್ದಾನೆ.ಮುಂದಿನ ದಿನಗಳಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸಬೇಕು ಎಂದು ನಿಮ್ಮ ಜೀವನದ ಕೆಲವು ಪ್ರಮುಖ ಕಾರಣಗಳಿಂದಾಗಿ ಇಚ್ಛಿಸುತ್ತೀರಿ. ಇದು ಸರಿಯಾದ ನಿರ್ಧಾರವೇ ಎಂದು ಮುಂದಿನ ದಿನಗಳಲ್ಲಿ ನೋಡೋಣ.

  ಕನ್ಯಾ

  ಕನ್ಯಾ

  ಈ ವಾರ ಆರಂಭವಾಗುತ್ತಿದ್ದಂತೆ ನೀವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಆದ್ಯಾತ್ಮಿಕವನ್ನು ಅಭ್ಯಾಸ ಮಾಡಬಹುದು. ಇದು ನಿಮ್ಮ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ನಿಮಗೆ ಮಾನಸಿಕವಾಗಿ ಮತ್ತಷ್ಟು ರಿಫ್ರೆಶ್ ಆಗಲು ಸಹಕಾರಿಯಾಗಿರುತ್ತದೆ. ಇದು ನಿಮಗೆ ಕೇವಲ ಕೆಲಸವನ್ನು ಕಷ್ಟ ಪಟ್ಟು ಮಾಡಲು ಮಾತ್ರವಲ್ಲ ಬದಲಾಗಿ ಕ್ರಿಯಾಶೀಲವಾಗಿ ಮಾಡಲು ಕೂಡ ಸಹಕರಿಸುತ್ತದೆ. ನಿಮ್ಮ 11 ನೇ ಮನೆಯಲ್ಲಿ ಅಧಿಪತಿ ಬುಧನು ಕರ್ಕಾಟಕ ರಾಶಿಗೆ ಚಲಿಸುತ್ತಿದ್ದಾನೆ. ದೊಡ್ಡ ಮಟ್ಟದ ಅಧಾಕಾರಿಗಳನ್ನು ಭೇಟಿ ಮಾಡಿ ಅವರೊಂದಿಗೆ ಸಂಬಂಧ ಬೆಳೆಸಿಕೊಳ್ಳುವ ಸಾಧ್ಯತೆಗಳಿವೆ. ಇದು ನಿಮ್ಮ ಭವಿಷ್ಯಕ್ಕೆ ಉತ್ತಮ ಸಹಕಾರ ನೀಡಲಿದೆ.

  ಶುಕ್ರನು ಸಿಂಹರಾಶಿಗೆ 12 ನೇ ಮನೆಯಲ್ಲಿ ಪ್ರವೇಶಿಸುತ್ತಾನೆ. ಇದು ನಿಮಗೆ ನಿಮ್ಮ ಆಸೆಗಳನ್ನು ಈಡೇರಿಸಲು ನೆರವು ನೀಡಿ ಜೀವನ ಶೈಲಿಯನ್ನು ಉತ್ತಮಗೊಳಿಸುತ್ತದೆ. ಕೆಲವು ಸಿರಿವಂತ ವಸ್ತುಗಳು ಮತ್ತು ಪುನರ್ಯೌವನ ಗೊಳಿಸುವ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿರುತ್ತೀರಿ. ಗಣೇಶನ ಸಲಹೆ ಏನೆಂದರೆ, ವಿವೇಚನೆ ಇಲ್ಲದೇ ವೆಚ್ಚ ಮಾಡಬೇಡಿ. ಉಳಿತಾಯದ ಬಗ್ಗೆ ಗಮನವಿರಲಿ. ಸದ್ಯದ ಮಟ್ಟಿಗೆ ಹಣಕಾಸು ವ್ಯವಹಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಹಲವು ಬಾರಿ ಯೋಚಿಸಿ. ಜೂನ್ ತಿಂಗಳ ಎರಡನೇ ವಾರದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಹೀಗೆ ನೀವು ನಿಮ್ಮ

  ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಚರ್ಚಿಸಿ ತಿಳಿದುಕೊಳ್ಳಿ.

  ತುಲಾ

  ತುಲಾ

  ಧನಾತ್ಮಕ ಪರಿಣಾಮಗಳು ಈ ವಾರವೂ ಮುಂದುವರಿಯಲಿದೆ.ಇದರ ಫಲಿತಾಂಶವಾಗಿ ಬ್ಯೂಸಿನೆಸ್ ಮಾಡುವವರಿಗೆ ನಿಷ್ಠಾವಂತ ಮತ್ತು ಯೋಗ್ಯ ಗ್ರಾಹಕರು ಲಭ್ಯವಾಗಲಿದ್ದಾರೆ. ಬಾಕಿ ಇರುವ ಆರ್ಡರ್ ಗಳನ್ನು ತಲುಪಿಸುವುದನ್ನು ನಿಧಾನ ಮಾಡಬೇಡಿ. ಬುಧ ಮತ್ತು ಸೂರ್ಯ ಗ್ರಹಗಳ ಸಂಚಾರವು ನಿಮಗೆ ಅದೃಷ್ಟ ತಂದುಕೊಡಲಿದೆ. ಬುಧವಾರವು ಬುಧನು ಕರ್ಕಾಟಕ ರಾಶಿಗೆ ಸಂಚರಿಸಲಿದ್ದಾನೆ -ನಿಮ್ಮ 10 ನೇ ಮನೆಯ ಪ್ರಕಾರ, ವಿದೇಶಿ ನೆಟ್ ವರ್ಕ್ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಜೀವನದ ಬೇರೆಬೇರೆ ಹಂತಗಳಿಂದ ಹಲವು ವ್ಯಕ್ತಿಗಳ ಜೊತೆ ಈ ವಾರ ಸಂಬಂಧ ಬೆಳೆಯಲಿದೆ. ಹೊಸ ಸಂಬಂಧಕ್ಕೆ ಬೆಲೆ ಕೊಡುವ ಮುನ್ನ ಅಧಿಕವಾಗಿ ಜಾಗೃತರಾಗಿರಿ.. ಆರೋಗ್ಯದಲ್ಲಿ ಹೆಚ್ಚು ಜಾಗೃತರಾಗಿರುವುದು ಒಳಿತು. ವಯಸ್ಸಾದವರು ಗಂಟುಗಳ ನೋವು , ಹಲ್ಲುನೋವಿನ ಸಮಸ್ಯೆಯಿಂದ ಬಳಲಬಹುದು. ಕೇವಲ ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಬದಲು ವೈದ್ಯರ ಬಳಿ ತೆರಳಿ. ಜೂನ್ ತಿಂಗಳ ಅಂತ್ಯದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆಗಳು ಹೆಚ್ಚಿದೆ. ಹೀಗೆ ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಚರ್ಚಿಸಿ ತಿಳಿದುಕೊಳ್ಳಿ.

  ವೃಶ್ಚಿಕ

  ವೃಶ್ಚಿಕ

  ಶುಕ್ರನು ನಿಮ್ಮ 9 ನೇ ಮನೆಯಲ್ಲಿ ಸಂಚರಿಸಲಿದ್ದಾನೆ. ವಿರೋಧಾಭಾಸದ ಮನೋಭಾವದಲ್ಲಿರುವ ಶನಿಗ್ರಹವು ನೇರ ವಿರೋಧದಲ್ಲಿ ಶುಕ್ರನೆಡೆದೆ ಚಲಿಸುತ್ತದೆ. ಇದು ನಿಮ್ಮ ಮದುವೆಯ ಜೀವನದಲ್ಲಿ ಏರುತಗ್ಗುಗಳಿಗೆ ಕಾರಣವಾಗಬಹುದು. ನಿಮ್ಮ ಸಂಗಾತಿಯಾಂದಿಗೆ ವಾದ ಮತ್ತು ಘರ್ಷಣೆಗಳಲ್ಲಿ ತೊಡಗುವುದು ನಿಮ್ಮ ವೈವಾಹಿಕ ಸಾಮರಸ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಸಾಕಷ್ಟು ತಾಳ್ಮೆಯಿಂದಿರಿ ಮತ್ತು ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಸಂಬಂಧದಲ್ಲಿ ಮುಂದೆ ತೊಂದರೆಯಾಗುವುದನ್ನು ತಪ್ಪಿಸಿಕೊಳ್ಳಿ.ಬುಧವಾರದ ಹೊತ್ತಿಗೆ ನಿಮ್ಮ 9 ನೇ ಮನೆಯಲ್ಲಿ. ಬುಧನು ಕರ್ಕಾಟಕ ರಾಶಿಗೆ ಸಂಚರಿಸುತ್ತಾನೆ. ವಿದೇಶಿ ನೆಟ್ ವರ್ಕ್ ನ ಸಹಾಯದಿಂದ ನೀವು ಸಾಕಷ್ಟು ಡೀಲ್ ಗಳನ್ನು ಇದರಿಂದ ಪಡೆಯಬಹುದಾಗಿದೆ. ಶೀಘ್ರದಲ್ಲೇ, ಶುಕ್ರನು ಸೂರ್ಯನು ಅಧಿಪತಿಯಾಗಿರುವಸಿಂಹರಾಶಿಗೆ ಸಂಚರಿಸುತ್ತಾನೆ. ಕೆಲಸದಲ್ಲಿ ಕ್ರಮಬದ್ಧವಾಗಿರಲು ಇದು ನೆರವಾಗುತ್ತದೆ. ಕೆಲಸದ ಜೊತೆಗೆ ಇರುವ ಸಹದ್ಯೋಗಿಯನ್ನು ಏಕಾಂಗಿಗಳು ಇಷ್ಟಪಡುವ ಸಾಧ್ಯತೆಗಳಿಗೆ. ಯಾವುದೇ ವಿಚಾರಕ್ಕೆ ಕೂಡಲೇ ನುಗ್ಗುವ ಬದಲು ಸ್ವಲ್ಪ ಯೋಚಸಿ ಮುನ್ನಡೆಯುವುದು ಒಳಿತು. ಜೂನ್ ತಿಂಗಳ ಮೂರನೇ ವಾರದ ಅಂತ್ಯದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಇದೆ. ಹೀಗೆ ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಚರ್ಚಿಸಿ ತಿಳಿದುಕೊಳ್ಳಿ.

  ಧನು

  ಧನು

  ನೀವು ಐಷರಾಮಿ ವಸ್ತುಗಳನ್ನು ಖರೀದಿಸುವ ಮುನ್ನ ಯೋಚಿಸಬೇಕಾದ ಸಮಯ ಈ ವರ್ಷದ ಈ ಸಮಯವಾಗಿರುತ್ತದೆ. ನೀವು ನಿಮ್ಮ ಉಳಿತಾಯದ ಬಗ್ಗೆ ಹೆಚ್ಚು ಗಮನ ನೀಡಬೇಕು.,ದೀರ್ಘಾವಧಿ ಉಳಿತಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲು ಗಣೇಶ ಸಲಹೆ ನೀಡುತ್ತಿದ್ದಾನೆ. ಕೆಲಸದ ವಿಚಾರದಲ್ಲಿ ತುಂಭಾ ಭದ್ರತಾ ಭಾವನೆ ಸದ್ಯ ಈ ರಾಶಿಯವರಿಗಿರುತ್ತದೆ. ಬುಧವಾರದ ಹೊತ್ತಿಗೆ ಬುಧನು 8 ನೇ ಮನೆಯಲ್ಲಿ ಕರ್ಕಾಟಕ ರಾಶಿಗೆ ಸಂಚರಿಸುತ್ತಿದ್ದಾನೆ. ಯಾರು ಮದುವ ಆದವರಿದ್ದೀರೋ ಅವರು ತಮ್ಮ ಸಂಗಾತಿಯಿಂದ ದುಬಾರಿ ಕೊಡುಗೆಯನ್ನು ನಿರೀಕ್ಷಿಸಬಹುದು.ಶುಕ್ರನು ಸಿಂಹರಾಶಿಗೆ ಸಂಚರಿಸುತ್ತಿದ್ದು, ಸೂರ್ಯನ ಅಧಿಪತಿಯಾಗಿದ್ದಾನೆ. ನಿಧಾನವಾಗಿ 9 ನೇ ಪ್ರವೇಶಿಸುವುದರಿಂದಾಗಿ ಅದೃಷ್ಟ ಒಲಿಯಲಿದೆ.ನೀವು ನಿಮ್ಮ ಅದೃಷ್ಟ ದೇವತೆಯನ್ನು ಪಡೆಯಲಿದ್ದೀರಿ, ಮಾರಾಟದಲ್ಲಿ

  ಹೆಚ್ಚಳವಿರುವುದರಿಂದಾಗಿ ವ್ಯಾಪಾರಸ್ಥರಿಗೂ ಪ್ರಶಸ್ತವಾಗಿರುವ ಕಾಲವಾಗಿದೆ. ಯಾರು ಕಷ್ಟಪಟ್ಟು ದುಡಿಯುತ್ತಾರೋ ಅವರಿಗೆ ಉತ್ತಮ ಸಮಯ, ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.ಜೂನ್ ತಿಂಗಳ ಕೊನೆಯ ವಾರದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಹೀಗೆ ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಚರ್ಚಿಸಿ ತಿಳಿದುಕೊಳ್ಳಿ.

  ಮಕರ

  ಮಕರ

  ಈ ವಾರ ಸಿಂಗಲ್ ಆಗಿರುವವರಿಗೆ ಅದೃಷ್ಟ ತರಬಹುದು. ವಾಸ್ತವವಾಗಿ, ಗಣೇಶನು ಸ್ನೇಹಿತನೊಂದಿಗೆ ಸಂಬಂಧ ಹೊಂದಲು ಸಿದ್ಧರಿರುವವರಿಗೆ ಮುಂದೆ ಹೋಗುಲು ನೆರವು ನೀಡುತ್ತಾನೆ.ವಿವಾಹಿತ ಜೋಡಿಗಳು ರೋಮ್ಯಾಂಟಿಕ್ ಕ್ಷಣಗಳನ್ನು ಅನುಭವಿಸಬಹುದು. ಮಳೆಗಾಲದ ಸಂಜೆ ಒಂದು ಬೈಕು ಸವಾರಿ ಒಳ್ಳೆಯದು! ವ್ಯಾಪಾರಿಗಳಿಗೆ, ವ್ಯವಹಾರಕ್ಕೆ ಸಂಬಂಧಿಸಿದ ಒಂದು ಕಾರ್ಯತಂತ್ರದ ಚಲನೆ ಮಾಡುವ ಮೂಲಕ ಸ್ಪರ್ಧಿಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ. ! ವೃತ್ತಿಪರರು ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆತ್ಮವಿಶ್ವಾಸ ಮತ್ತು ಪ್ರೇರಣೆ ಬೇಕಾಗುತ್ತದೆ.. ಮುಂಚಿತವಾಗಿ, ಅನಿರೀಕ್ಷಿತ ವಿತ್ತೀಯ ಲಾಭಗಳಿಲ್ಲವಾದರೂ, ನೀವು ಸ್ಥಿರವಾಗಿ, ಆರ್ಥಿಕವಾಗಿ ಬಲವಾಗಿರುತ್ತೀರಿ. ಬುಧವಾರದ ಹೊತ್ತಿಗೆ , ನಿಮ್ಮ ಏಳನೆ ಮನೆಯ ಬುಧ ಗ್ರಹವು ಚಂದ್ರನೆಡೆಗೆ ಸಂಚರಿಸುತ್ತದೆ ಮತ್ತು ಕರ್ಕಟಕಯನ್ನು ಪ್ರವೇಶಿಸುತ್ತದೆ.. ಈ ಬದಲಾವಣೆಯು ನಿಮ್ಮ ಮದುವೆಗೆ ಶಾಂತಿ ಮತ್ತು ಸಾಮರಸ್ಯವನ್ನು ಅಡ್ಡಿಪಡಿಸಬಹುದು. ಗಣೇಶನು ನಿಮ್ಮ ಮನಸ್ಸನ್ನು ತಿರುಗಿಸಲು ಸಲಹೆ ನೀಡುತ್ತಾನೆ ಮತ್ತು ನಿಮ್ಮ ವೃತ್ತಿಜೀವನದ ಮೇಲೆ ಗಮನ ನೀಡಲು ಸಲಹೆ ನೀಡುತ್ತಿದ್ದಾನೆ.ನೀವು ನಿಮ್ಮ ಆದ್ಯತೆ ನೋಡಿಕೊಂಡು ಕೆಲಸ ನಿರ್ವಹಿಸಿ. ಜೂನ್ ತಿಂಗಳ ಮೂರನೇ ವಾರದ ಅಂತ್ಯದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಇದೆ. ಹೀಗೆ ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಚರ್ಚಿಸಿ ತಿಳಿದುಕೊಳ್ಳಿ

  ಕುಂಭ

  ಕುಂಭ

  ಕೆಲವೊಮ್ಮೆ ಕನಸು ಕಾಣುವುದು ಒಳ್ಳೆಯದೇ..ಸಾಲ ಪಡೆದು ಆ ಕನಸು ಗಳನ್ನು ನನಸು ಮಾಡಲು ಹಣ ತೊಡಗಿಸುವುದು ಕೂಡ ಸೂಕ್ತವೇ. ನೀವು ಕೂಡ ಈ ವಾರ ಇದನ್ನೇ ಮಾಡಬಹುದು. ಹೊಸ ಗೆಡ್ಜೆಟ್ ಅಥವಾ ನೂತನ ಟೆಕ್ನಾಲಜಿ ಇರುವ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ನೀವು ಈ ವಾರ ಮುಂದಾಗುವ ಸಾಧ್ಯತೆ ಇದೆ.ಇದನ್ನ ಮಾಡುವುದು ನಿಮಗೆ ಒಳ್ಳೆಯದೇ ಇರಬಹುದು.ಅನಗತ್ಯ ಖರ್ಚುಗಳು ಅತಿಯಾಗುತ್ತಿರುವಾಗ ಸಾಲದ ಮೇಲೆ ಸ್ವಲ್ಪ ಎಚ್ಚರಿಕೆ ಇಟ್ಟುಕೊಳ್ಳುವುದು ಸೂಕ್ತವಾದದ್ದು. ಮತ್ತು ಎಲೆಕ್ಟ್ರಾನಿಕ್ ಸರಕುಗಳ ಖರೀದಿಯಿಂದಾಗಿ ನಿಮ್ಮ ಸಾಲ ಇನ್ನಷ್ಟು ಹೆಚ್ಚಳವಾಗಬಹುದು..ಈ ವಾರದ ಮಧ್ಯದಲ್ಲಿ ನಿಮ್ಮ 6ನೇ ಮನೆಯಲ್ಲಿ ಬುಧನು ಕರ್ಕಾಟಕ ರಾಶಿಯ ಅಧಿಪತಿ ಚಂದ್ರನೆಡೆಗೆ ಸಂಚರಿಸುತ್ತಿದ್ದಾನೆ. ದುರದೃಷ್ಟವಶಾತ್ , ಕೆಲಸದಲ್ಲಿ ಅಥವಾ ಮನೆಯಲ್ಲಿ ಉತ್ತಮ ಆರೋಗ್ಯ ಮತ್ತು ಸಂತೋಷದ ವಾತಾವರಣವನ್ನು ಅನುಭವಿಸಲು ನಿಮಗೆ ಈ ಗ್ರಹಗತಿಗಳು ನಿಮಗೆ ಅವಕಾಶ ಮಾಡಿಕೊಡುವುದುಲ್ಲ. ಜೂನ್ ತಿಂಗಳ ಕೊನೆಯ ವಾರದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಹೀಗೆ ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಚರ್ಚಿಸಿ ತಿಳಿದುಕೊಳ್ಳಿ.

  ಮೀನ

  ಮೀನ

  ಈ ವಾರವು ಏಕಾಂಗಿಯಾಗಿರುವವರೆಗೆ ಭಾಷೆ ನೀಡುವ ವಾರವಾಗಬಹುದು. ನಿಮ್ಮ ಬಾಲ್ಯದ ಅಥವಾ ಟೀನೇಜ್ ಕ್ರಷ್ ಗೆ ನೀವು ಹತ್ತಿರವಾಗುವ ಸಾಧ್ಯತೆ ಇದೆ. ಒಂದು ಲೋಟ ಕಾಫಿ ನೆಪದಲ್ಲಿ ನೀವಿಬ್ಬರು ಮತ್ತೆ ಭೇಟಿ ಮಾಡಿ ಒಂದು ಹೊಸ ಸಂಬಂಧಕ್ಕೆ ಕಮಿಟ್ ಆಗುವ ಸಾಧ್ಯತೆ ಇದೆ..! ಯಾರು ಈಗಾಗಲೇ ಕಮಿಟ್ ಆಗಿದ್ದೀರೋ ಅವರು ರಿಂಗ್ ಬದಲಾಯಿಸಿಕೊಂಡು ನಿಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಲು ಇದು ಯೋಗ್ಯವಾದ ಸಮಯವಾಗಿದೆ. ಬುಧವಾರದ ಹೊತ್ತಿಗೆ, ಬುಧನು ಕರ್ಕಾಟಕ ರಾಶಿಯ ಅಧಿಪತಿ ಚಂದ್ರನ ಸ್ಥಾನಕ್ಕೆ ತೆರಳುತ್ತಾನೆ -, ಒಂದಕ್ಕಿಂತ ಹೆಚ್ಚು ಮಾರ್ಗದಲ್ಲಿ ನಿಮ್ಮ ವಿದೇಶಿ ಸಂಬಂಧಗಳು ನಿಮಗೆ ಹೆಚ್ಚು ಲಾಭಗಳನ್ನು ತಂದುಕೊಂಡುವ ಸೂಚನೆಯನ್ನು ಇದು ನೀಡುತ್ತದೆ. ವಾರದ ಕೊನೆಯಲ್ಲಿ ಶುಕ್ರನು ಸಿಂಹ ರಾಶಿಗೆ 6 ನೇ ಮನೆಯಲ್ಲಿ ಸಂಚರಿಸುತ್ತಾನೆ. ಉದ್ಯೋಗಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ಇದು ಬಹಳ ಇಷ್ಟವಾದ ಸಮಯವಾಗಿರುತ್ತದೆ. ಬೆಳವಣಿಗೆಯ ದೃಷ್ಟಿಯಿಂದ ಇದು ನಿಮ್ಮನ್ನ ಆದಷ್ಟು ಆರಾಮದಾಯಕವಾಗಿರಿಸುತ್ತದೆ ಮತ್ತು ಬೆಂಬಲದಾಯವಾಗಿರುತ್ತದೆ. ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟು ಹೇಳುವುದಾದರೆ, ಡಯಾಬಿಟೀಸ್ ಸಮಸ್ಯೆಯನ್ನು ಗಮನಿಸಬೇಕಾಗುತ್ತದೆ ಮತ್ತು ಸಕ್ಕರೆ ಅಂಶವಿರುವ ಆಹಾರಗಳ ಬಗ್ಗೆ ನಿಗಾವಿರಲಿ. ಚಾಕಲೇಟ್, ಸಿಹಿ ತಿನಿಸು, ದ್ರವ ಪದಾರ್ಥಗಳನ್ನು ಸೇವಿಸುವಾಗ ಎಚ್ಚರವಿರಲಿ.ಜೂನ್ ತಿಂಗಳ ಕೊನೆಯ ವಾರದಲ್ಲಿ ನೀವು ನಿಮ್ಮ ಕೆಲಸವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಹೀಗೆ ನೀವು ನಿಮ್ಮ ಕೆಲಸವನ್ನು ಬದಲಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪರಿಣಿತರ ಬಳಿ ಚರ್ಚಿಸಿ ತಿಳಿದುಕೊಳ್ಳಿ.

  English summary

  Weekly Predictions For Each Zodiac Sign:10-16th June 2018

  The weekly predictions can help us get forewarned about a positive or negative aspect of the stars on our zodiacs. These predictions are based on our sun signs. So, go ahead and check out on what does your zodiac sign have in store for you.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more