For Quick Alerts
ALLOW NOTIFICATIONS  
For Daily Alerts

  ಜೂನ್ 25 ರಿಂದ ಜುಲೈ 1ರ ವಾರ ಭವಿಷ್ಯ- ನಿಮ್ಮದೂ ಪರಿಶೀಲಿಸಿಕೊಳ್ಳಿ

  By Deepu
  |

  ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಬ್ಬರು ಸುಖ, ಸಂತೋಷ ಹಾಗೂ ಸುಂದರವಾಗಿರುವುದನ್ನು ಪಡೆದುಕೊಳ್ಳಲು ಇಷ್ಟಪಡುತ್ತಾರೆ. ಈ ಪ್ರಯತ್ನದಿಂದ ಜೀವನ ಯಾವ ರೀತಿಯಲ್ಲಿ ಬದಲಾವಣೆಯನ್ನು ಹೊಂದುವುದು? ಅಥವಾ ಯಾವ ಬಗೆಯ ಸಮಸ್ಯೆ ಎದುರಾಗಬಹುದು? ಎನ್ನುವುದರ ಬಗ್ಗೆ ಕೊಂಚವೂ ಚಿಂತಿಸುವುದಿಲ್ಲ. ಸುಂದರವಾಗಿರುವುದನ್ನು ಪಡೆದುಕೊಳ್ಳಲು ಪ್ರಯತ್ನಿಸುವುದರ ಬದಲು ಬದುಕನ್ನೇ ಸುಂದರವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಆಗಲೇ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಖುಷಿಯನ್ನು ಪಡೆದುಕೊಳ್ಳಲು ಸಾಧ್ಯ.

  ನಿಮ್ಮ ಉತ್ತಮ ಪ್ರಯತ್ನಗಳಿಗೆ ಈ ವಾರ ಅಂದರೆ ಜೂನ್ 25ರಿಂದ ಜುಲೈ1ರ ಒಳಗೆ ವಿವಿಧ ಬಗೆಯ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ. ಈ ಫಲಿತಾಂಶದಿಂದ ನಿಮ್ಮ ಬದುಕು ಹೇಗೆ ಬದಲಾವಣೆ ಹೊಂದುವುದು ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ನೋಡಿ ತಿಳಿಯಿರಿ....

  ಮೇಷ

  ಮೇಷ

  ಬೇಡದ ಸಂಗತಿಗಳಿಗಾಗಿ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡದಿರಿ. ಹಿಂದಿನ ವಾರದಲ್ಲಿ ಬಾಕಿ ಉಳಿದ ಕೆಲಸವನ್ನು ಈ ವಾರ ಪೂರ್ತಿಗೊಳಿಸಲು ಅತ್ಯುತ್ತಮವಾದ ಸಮಯಾಗುವುದು. ಈ ವಾರ ನೀವು ನಿಮ್ಮ ಗುರಿಯೆಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಿದರೆ ಯಶಸ್ಸು ಖಚಿತವಾಗಿ ದೊರೆಯುವುದು ಎಂದು ಹೇಳಲಾಗುತ್ತದೆ.

  ವೃಷಭ

  ವೃಷಭ

  ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿರುವ ಇವರಿಗೆ ವಾರದ ಆರಂಭವು ಯಶಸ್ಸನ್ನು ತಂದುಕೊಡುವುದು. ಋಣಾತ್ಮಕ ಶಕ್ತಿಯು ಸಹ ಇವರಿಂದ ದೂರ ನಿಲ್ಲುವುದು. ಸಂಬಂಧಗಳ ನಡುವೆ ಅಂದರೆ ಸಂಗಾತಿಯೊಂದಿಗೆ ಪ್ರಣಯ ಹಾಗೂ ಪ್ರೀತಿಯನ್ನು ಪಡೆದುಕೊಳ್ಳುವರು ಎಂದು ಹೇಳಿಕೊಳ್ಳಲಾಗುವುದು.

  ಮಿಥುನ

  ಮಿಥುನ

  ಈ ರಾಶಿಯವರಿಗೆ ತಮ್ಮ ಹಣಕಾಸಿನ ಹಿಡಿತವನ್ನು ಪಡೆಯಲು ಸೂಕ್ತ ಸಮಯವಾಗಿರುತ್ತದೆ. ಇವರು ತಮ್ಮ ಆಲೋಚನೆ ಮತ್ತು ಯೋಜನೆಗಳನ್ನು ಪುನರ್ ರಚನೆ ಮಾಡಬೇಕಿದೆ. ಈ ವಾರ ಇವರು ತಮ್ಮ ಆಸ್ತಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಹೊಸ ಬಂಡವಾಳಕ್ಕೆ ಹಣವನ್ನು ಹೂಡಬಹುದು. ಆದರೆ ವಸ್ತುಗಳಿಗಾಗಿ ಹಣವನ್ನು ವ್ಯರ್ಥಮಾಡದಿರಿ ಎಂದು ಸಲಹೆ ನೀಡಲಾಗುವುದು.

  ಕರ್ಕ

  ಕರ್ಕ

  ಇವರು ಈ ವಾರ ತಮ್ಮ ಗುರಿಯನ್ನು ಮುಂದುವರಿಸಬಹುದು. ವಾರದ ಮಧ್ಯಂತರದ ಅವಧಿಯಲ್ಲಿ ಸಾಕಷ್ಟು ಸ್ಫೂರ್ತಿಯನ್ನು ಪಡೆದುಕೊಳ್ಳುವಿರಿ. ಸಂಬಂಧಗಳ ಮುಂಭಾಗದಲ್ಲಿ ತಮ್ಮ ಪಾಲುದಾರರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ಅನುಭವಿಸುತ್ತಾರೆ. ಇವರು ನಿರ್ದಿಷ್ಟ ಗುಣಮಟ್ಟದ ಸಮಯಕ್ಕೆ ಎದುರು ನೋಡಬಹುದು.

  ಸಿಂಹ

  ಸಿಂಹ

  ಇವರು ತಾವು ಮಾಡುವ ಕೆಲಸದ ಸ್ಥಳದಲ್ಲಿ ಶಾಂತಿಯನ್ನು ಪಡೆಯಲು ಬಯಸುತ್ತಾರೆ. ಇವರು ಈ ವಾರ ಸಾಕಷ್ಟು ತಾಳ್ಮೆಯನ್ನು ಹೊಂದಿರಬೇಕಾಗುವುದು. ಸಂಬಂಧಗಳಲ್ಲಿ ಹೆಚ್ಚಿನ ಪ್ರೀತಿ ಹಾಗೂ ಪ್ರಣಯವನ್ನು ಹೊಂದುವುದರ ಮೂಲಕ ಒಂದಷ್ಟು ನಿರಾಳ ಭಾವನೆಯನ್ನು ಪಡೆದುಕೊಳ್ಳುವಿರಿ.

   ಕನ್ಯಾ

  ಕನ್ಯಾ

  ವಾರದ ಆರಂಭದಲ್ಲಿ ಹಠಾತ್ ಭಾವನೆಗಳ ಬದಲಾವಣೆಯನ್ನು ಅನುಭವಿಸುವಿರಿ. ಬೇಡದ ವಿಚಾರಗಳಿಗೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಇದರಿಂದ ಕೋಪ ಮತ್ತು ಖಿನ್ನತೆ ಉಂಟಾಗಬಹುದು. ಇವರು ಮಾಡಬೇಕಾಗಿರುವುದೆಲ್ಲವೂ ಶಾಂತಿ ಮತ್ತು ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ವಿಷಯವು ಕಠಿಣವಾದಂತೆ ಶಾಂತಿಯನ್ನು ಪಡೆದುಕೊಳ್ಳಲು ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಲಾಗುವುದು.

  ತುಲಾ

  ತುಲಾ

  ಇವರು ಕೆಲವು ಸಂಘರ್ಷಗಳನ್ನು ಎದುರಿಸಬೇಕಾಗುವುದು. ಅನಿರೀಕ್ಷಿತ ಕಾರಣಗಳಿಂದ ಅಸಮಧಾನಗೊಳ್ಳುವರು. ಇವರು ವಸ್ತು, ವಾಹನ ಮತ್ತು ಪ್ರಯಾಣವನ್ನು ಕೈಗೊಂಡಾಗ ಆದಷ್ಟು ಜಾಗರೂಕರಾಗಿರಬೇಕು. ಅಲ್ಲದೆ ಅನಗತ್ಯವಾಗಿ ಮಾಡುವ ವಾದಗಳನ್ನು ನಿಲ್ಲಿಸಬೇಕು. ಈ ವಾರ ನಿಮ್ಮ ಸಮಯದಲ್ಲಿ ಸೃಜನಾತ್ಮಕ ಕಲ್ಪನೆ ಮತ್ತು ಸ್ಫೂರ್ತಿಯನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದು ಹೇಳಲಾಗುವುದು.

  ವೃಶ್ಚಿಕ

  ವೃಶ್ಚಿಕ

  ಈ ವಾರವು ಹಣಕಾಸಿನ ವಿಚಾರದಲ್ಲಿ ಒಂದಿಷ್ಟು ತೊಂದರೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅದೃಷ್ಟ ಉತ್ತಮವಾಗಿರುವುದರಿಂದ ಅವಕಾಶಗಳ ಬಾಗಿಲು ನಿಮಗಾಗಿ ತೆರೆದುಕೊಳ್ಳುವುದು. ಬಿಕ್ಕಟ್ಟಿನ ಸಮಯದಲ್ಲಿ ಸೂಕ್ತ ರೀತಿಯಲ್ಲಿ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರೀತಿಪಾತ್ರರೊಂದಿಗೆ ಭರವಸೆಯನ್ನು ಹಂಚಿಕೊಳ್ಳಬೇಕು.

  ಧನು

  ಧನು

  ಈ ವಾರ ನಿಮಗೆ ಸಂಪೂರ್ಣವಾಗಿ ಉತ್ತಮ ಫಲಿತಾಂಶದಿಂದ ಕೂಡಿದೆ ಎಂದು ಹೇಳಲು ಸಾಧ್ಯವಿಲ್ಲ. ತಮ್ಮ ಕೆಲಸ ಹಾಗೂ ಶ್ರಮವನ್ನು ವಿನಿಯೋಗಿಸುವುದರ ಮೂಲಕ ಜೀವನದಲ್ಲಿ ಹೊಸ ವಿಷಯಗಳ ಕುರಿತು ಪ್ರಯೋಗ ಕೈಗೊಳ್ಳಬೇಕು. ಆಗ ಈ ವಾರ ಉತ್ತಮ ವಾರದಂತೆ ತೋರುವುದು. ವೃತ್ತಿ ಜೀವನದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಯೋಚಿಸಬೇಕು ಎಂದು ಹೇಳಲಾಗುವುದು.

  ಮಕರ

  ಮಕರ

  ಇವರು ಈ ವಾರದಲ್ಲಿ ಸಂವಹನ ಮತ್ತು ಸಮಾಲೋಚನೆಯ ಕ್ಷೇತ್ರದಲ್ಲಿ ತಜ್ಞರಾಗುವಿರಿ. ಬಯಸಿದಂತೆ ಸಂಭವಿಸುತ್ತಿದೆ ಎಂದು ತೋರುವುದು. ಭಾವನಾತ್ಮಕವಾಗಿ ಬೇರ್ಪಡಿಸುವಿಕೆ ಮತ್ತು ಸ್ವಯಂ ನಿಯಂತ್ರಣದೊಂದಿಗೆ ವ್ಯಕ್ತಿ ಸಕ್ರಿಯವಾಗಿ ತಮ್ಮ ಸುತ್ತಲಿನ ವಿಷಯಗಳನ್ನು ಮಾರ್ಪಡಿಸಲು ಪ್ರಾರಂಭಿಸುತ್ತಾರೆ. ವಾರದ ಎಲ್ಲಾ ಅಂಶಗಳಿಗೂ ಸಂಬಂಧಿಸಿದಂತೆ ಉತ್ತಮ ಫಲಿತಾಂಶವನ್ನು ಪಡೆಯುವರು.

  ಕುಂಭ

  ಕುಂಭ

  ಇವರು ಎಲ್ಲಾ ಕೆಲಸವನ್ನು ತಮ್ಮ ರೀತಿಯಲ್ಲಿಯೇ ಮಾಡಲು ಪ್ರಯತ್ನಿಸುವರು. ಕೆಲಸದಲ್ಲಿ ಕೆಲವು ಅನಾಹುತಗಳನ್ನು ಎದುರಿಸುವ ಸಾಧ್ಯತೆಗಳಿವೆ. ಇವರು ಕೆಲಸವನ್ನು ನಿರ್ವಹಿಸುವಾಗ ಆದಷ್ಟು ಶಾಂತ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಬೇಕಾಗುವುದು. ಪಾಲುದಾರರಿಗೆ ಸುಳ್ಳು ಹೇಳುವುದರಿಂದ ದೂರ ಇರಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

  ಮೀನ

  ಮೀನ

  ಈ ವಾರ ಒಂದಿಷ್ಟು ತೊಂದರೆಗಳನ್ನು ಅನುಭವಿಸಬೇಕಾಗುವುದು. ಇತರರಿಗೆ ಅನುಕೂಲವಾಗುವಂತೆ ಪರಿಸ್ಥಿತಿಯನ್ನು ನಿಭಾಯಿಸುವರು. ಸಾಕಷ್ಟು ತಾಳ್ಮೆಯನ್ನು ಹೊಂದಿರಬೇಕು. ಸಂಗಾತಿಯಿಂದ ಕೆಲವು ಸುವಾರ್ತೆಯನ್ನು ಕೇಳುವ ಸಾಧ್ಯತೆಗಳಿವೆ. ಅನಿರೀಕ್ಷಿತವಾಗಿ ಕೆಲವು ಸಂದರ್ಭಗಳನ್ನು ಎದುರಿಸಬೇಕಾಗುವುದು.

  English summary

  Weekly Horoscope Predictions For 25th June-1st July

  Weekly predictions seem to be the most important thing for those who start their weekday by checking the weekly horoscope. At Boldsky, we bring in the details of the weekly horoscope for the week of June 25th to July 1st. These weekly predictions based on the sun sign reveal about the oncoming events for the whole week.
  Story first published: Monday, June 25, 2018, 18:40 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more