For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ಮುಂದಿನ ದಿನಗಳಲ್ಲಿ ಈ ನಾಲ್ಕು ರಾಶಿಯವರಿಗೆ ಒಳ್ಳೆಯದಾಗಲಿದೆ

  |

  ಅದೃಷ್ಟ ಎನ್ನುವುದು ಹೇಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅನಾಮಿಕದಂತೆ ಬರುವ ಅದೃಷ್ಟವು ಒಂದಿಷ್ಟು ಸಂತೋಷ, ಆರ್ಥಿಕ ನೆರವು, ಉದ್ಯೋಗಾವಕಾಶ, ವಿವಾಹ, ಉದ್ಯೋಗದಲ್ಲಿ ಉನ್ನತ ಸ್ಥಾನ ಸೇರಿದಂತೆ ವಿವಿಧ ಬಗೆಯಲ್ಲಿ ಒದಗಿ ಬರಬಹುದು. ಹಾಗಾಗಿ ಬಂದ ಅದೃಷ್ಟವನ್ನು ಸೂಕ್ತ ರೀತಿಯಲ್ಲಿ ಅನುಭವಿಸಬೇಕು. ಜೊತೆಗೆ ನಮಗೆ ಒಳ್ಳೆಯದಾಗಿದೆ ಎನ್ನುವ ನಿಟ್ಟಿನಲ್ಲಿ ಇತರರನ್ನು ಕೀಳಾಗಿ ಅಥವಾ ಕೆಳಮಟ್ಟದಲ್ಲಿ ನೋಡಬಾರದು.

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದಿನ ದಿನಗಳಲ್ಲಿ ಮೂರು ಗ್ರಹಗಳ ವಿಸ್ಮಯಕಾರಿ ಪರಿವರ್ತನೆಗಳು ಕಾಣುತ್ತವೆ. ಅಂದರೆ ಮಂಗಳ ಗ್ರಹವು ತುಲಾ ರಾಶಿಯಿಂದ ಹಾಗೂ ಶನಿಯು ವೃಶ್ಚಿಕ ರಾಶಿಯಿಂದ ನಿರ್ಗಮನವಾಗುವುದು. ಮಂಗಳ ಮತ್ತು ಗುರು ಗ್ರಹವು ವೃಶ್ಚಿಕ ರಾಶಿಗೆ ಆಗಮಿಸುತ್ತವೆ.

  ಈ ಗ್ರಹಗತಿಗಳ ಚಲನ ವಲವನವು ಪ್ರತಿಯೊಂದು ರಾಶಿಚಕ್ರಗಳ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತವೆ ಎಂದು ಹೇಳಲಾಗುವುದು. ಅದರಲ್ಲಿ ಕೆಲವು ರಾಶಿಚಕ್ರದವರು ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುವರು. ಬನ್ನಿ ಮುಂದಿನ ದಿನಗಳಲ್ಲಿ ಯಾವ ರಾಶಿಯವರು ಅತ್ಯಂತ ಅದೃಷ್ಟವಂತರಾಗಿ ಹೊರ ಹೊಮ್ಮಲಿದ್ದಾರೆ ಎಂದು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ... 

  ಮೇಷ

  ಮೇಷ

  ಮಂಗಳ ಗ್ರಹವು ಮೇಷರಾಶಿಯ ಮೇಲೆ ಗಣನೀಯವಾದ ಪರಿಣಾಮವನ್ನು ಬೀರುತ್ತದೆ. ಮಂಗಳ ಗ್ರಹದ ಚಲನೆಯಿಂದಾಗಿ ಮೇಷರಾಶಿಯವರು ಹಣಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಜನಗಳನ್ನು ಹಾಗೂ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.

  ಮೇಷ: (ಮುಂದುವರಿದ ಭಾಗ)

  ದೀರ್ಘ ಸಮಯದವರೆಗೆ ಕೆಲಸ ಮಾಡುತ್ತಿರುವವರು ಅಥವಾ ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಮಾಡಿ ನಿರಾಶೆಗೆ ಒಳಗಾದವರು ಇದೀಗ ಅತ್ಯುತ್ತಮ ಫಲಿತಾಂಶ ಪಡೆದುಕೊಳ್ಳುವರು. ಇದು ಅವರಿಗೆ ಪರಿಪೂರ್ಣವಾದ ಸಮಯ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದಲು ಹೊಸ ಅವಕಾಶಗಳು ದೊರೆಯುವುದು. ಒಟ್ಟಿನಲ್ಲಿ ಈ ವರ್ಷ ಮೇಷ ರಾಶಿಯವರಿಗೆ ಅತ್ಯುತ್ತಮ ಅದೃಷ್ಟವನ್ನು ಪಡೆದುಕೊಳ್ಳುವ ಸಾಧ್ಯತೆಗಳಿಗೆ ಎಂದು ಹೇಳಲಾಗುವುದು.

  ಮಕರ

  ಮಕರ

  ಮಂಗಳ ಗ್ರಹದ ಬದಲಾವಣೆಯು ಮಕರ ರಾಶಿಯವರಿಗೂ ಅತ್ಯುತ್ತಮ ಫಲಿತಾಂಶವನ್ನು ನೀಡಲಿದೆ. ಮಾರ್ಚ್ 2018ರ ನಂತರದಲ್ಲಿ ವೃಶ್ಚಿಕ ರಾಶಿಯಲ್ಲಿ ಪರಿವರ್ತನೆ ಕಾಣುವುದರಿಂದ ಮಕರ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಅದ್ಭುತ ಲಾಭವನ್ನು ತಂದುಕೊಡುವುದು ಅಥವಾ ಇನ್ನಿತರ ಶುಭಕರ ಆಸ್ತಿಯು ಲಭಿಸುವುದು.

  ಮಕರ: (ಮುಂದುವರಿದ ಭಾಗ)

  ಈ ಗ್ರಹಗಳ ಬದಲಾವಣೆಯು ವ್ಯಾಪಾರಸ್ಥರಿಗೆ ಬಹಳ ಪ್ರಯೋಜನಕಾರಿ ಯಾಗಿರುತ್ತದೆ. ಹೊಸ ಸ್ಥಳಗಳಲ್ಲೂ ಯಶಸ್ವಿಯಾಗಿ ವ್ಯಾಪಾರವನ್ನು ವಿಸ್ತರಿಸುವರು. ಕೆಲಸದಲ್ಲಿ ತೇರ್ಗಡೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಳ್ಳುವರು.

  ಶನಿಯು ವೃಶ್ಚಿಕ ರಾಶಿಯಿಂದ ಹೊರ ಬಂದಿರುವ ಪರಿಣಾಮ:

  ಶನಿಯು ವೃಶ್ಚಿಕ ರಾಶಿಯಿಂದ ಹೊರ ಬಂದಿರುವ ಪರಿಣಾಮ:

  ಈ ವರ್ಷದ ಇನ್ನೊಂದು ಗಣನೀಯವಾದ ಬದಲಾವಣೆ ಎಂದರೆ ಶನಿ ಗ್ರಹದ ಬದಲಾವಣೆ. ಶನಿಯು ವೃಶ್ಚಿಕ ರಾಶಿಯಿಂದ ಹೊರ ಬಂದಿರುವ ಪರಿಣಾಮದಿಂದ ಎರಡು ರಾಶಿಚಕ್ರದ ಮೇಲೆ ಗಣನೀಯ ಪರಿಣಾಮ ಉಂಟಾಗುವುದು.

  ಸಿಂಹ

  ಸಿಂಹ

  ಕುಟುಂಬಕ್ಕೆ ಸಂಬಂಧಿಸಿದಂತೆ ಉಂಟಾದ ಕಲಹ ಹಾಗೂ ಗೊಂದಲಗಳೆಲ್ಲಾ ಈ ವರ್ಷ ಅಂತ್ಯಗೊಳ್ಳಲಿದೆ. ಮುಂದಿನ ವರ್ಷದ ಮಧ್ಯದಲ್ಲಿ ಇನ್ನಷ್ಟು ಶಾಂತಿ ದೊರೆಯುವುದು. ಮುಂಬರುವ ದಿನಗಳಲ್ಲಿ ಒಂದಿಷ್ಟು ಹಣವನ್ನು ವ್ಯಯಿಸಬೇಕಾಗುವುದು. ಆದರೆ ಈ ಕುರಿತು ಚಿಂತಿಸದಿರಿ. ಏಕೆಂದರೆ ನಿಮ್ಮ ಸಂತೋಷವು ನಿಮ್ಮದೇ ರೀತಿಯಲ್ಲಿ ಒದಗಿ ಬರುವುದು.

  ಸಿಂಹ: (ಮುಂದುವರಿದ ಭಾಗ)

  ಈ ವರೆಗೆ ತಡೆ ಹಿಡಿಯಲ್ಪಟ್ಟ ಹಣಕಾಸಿನ ಲಾಭವಗಳು ಇದೀಗ ನಿಮಗೆ ಅನುಕೂಲವಾಗುವಂತೆ ಸುಲಭವಾಗಿ ಬಿಡುಗಡೆಯಾಗುತ್ತವೆ. ನಿಮ್ಮ ಮೇಲಾಧಿಕಾರಿಗಳು

  ಮತ್ತು ಹಿರಿಯರು ನಿಮ್ಮೊಂದಿಗೆ ಸಾಕಷ್ಟು ಪ್ರಭಾವಿತರಾಗಿರುತ್ತಾರೆ. ನಿಮ್ಮ ಆಕ್ರೋಶವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಇಲ್ಲವಾದರೆ ಜೀವನದ ಎಲ್ಲಾ ಸಂತೋಷವನ್ನು ಕಳೆದುಕೊಳ್ಳಬೇಕಾಗುವುದು.

  ತುಲಾ

  ತುಲಾ

  ಇಷ್ಟು ದಿನಗಳ ಕಾಲ ಅನುಭವಿಸುತ್ತಿದ್ದ ಸಾಡೇ ಸಾತ್ ಶನಿಯ ಬಿಡುಗಡೆಯನ್ನು ನೀವು ಅನುಭವಿಸುವಿರಿ. ಹಾಗಾಗಿ ನೀವು ದೀರ್ಘ ಉಸಿರಾಟವನ್ನು ಮಾಡುವುದರ ಮೂಲಕ ಶಾಂತಿಯನ್ನು ಆನಂದಿಸಬಹುದು. ಇದೀಗ ನೀವು ಸಾಕಷ್ಟು ಒಳ್ಳೆಯ ಅನುಭವವನ್ನು ಪಡೆದುಕೊಳ್ಳುವ ಸಮಯ ಎಂದು ಹೇಳಲಾಗುತ್ತದೆ. ಪ್ರಚಾರಗಳು, ಜೀವನದಲ್ಲಿ ಏರಿಕೆ ಹಾಗೂ ವೈಯಕ್ತಿಕವಾಗಿ ಒಂದಿಷ್ಟು ಹರ್ಷವನ್ನು ಅನುಭವಿಸುವಿರಿ.

  ತುಲಾ:(ಮುಂದುವರಿದ ಭಾಗ)

  ತುಲಾ:(ಮುಂದುವರಿದ ಭಾಗ)

  ನಿಮ್ಮ ಪಾಲುದಾರರೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಸೂಕ್ತವಾದ ಸಮಯ. ನಿಮ್ಮ ಸುತ್ತಲಿನ ಜನರು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಈ ವರ್ಷ ಭಾರೀ ನಗದು ವೆಚ್ಚವನ್ನು ನೀವು ನಿರೀಕ್ಷಿಸಬಹುದು. ಒಟ್ಟಿನಲ್ಲಿ ಸಮತೋಷವನ್ನು ಅನುಭವಿಸುವ ಸಮಯ ಇದಾಗಿದೆ.

  English summary

  These zodiac sign going to lucky in upcoming days

  This year will see three most astonishing transitions of astrological planets- Mars would be leaving Libra and Saturn would be moving out of Scorpio and Mars and Jupiter both entering Scorpio.Therefore, this time of 3 months will be important for some zodiac signs in many ways to bring significant changes.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more