For Quick Alerts
ALLOW NOTIFICATIONS  
For Daily Alerts

ಈ 4 ರಾಶಿಯವರು, ತಾವು ಒಳ್ಳೆಯವರು ಎಂದು ತೋರಿಸುವುದಕ್ಕಾಗಿ ತುಂಬಾನೇ ನಾಟಕ ಮಾಡುತ್ತಾರಂತೆ!

By Divya Pandith
|

ಪ್ರತಿಯೊಬ್ಬರು ಪ್ರತಿಕ್ಷಣವೂ ತಮ್ಮ ಸ್ಥಾನ ಮಾನಗಳಿಗೆ ಅನುಗುಣವಾಗಿ ಪಾತ್ರ ನಿರ್ವಹಣೆ ಮಾಡುತ್ತಾರೆ. ತಂದೆ ತಾಯಿಗಳಿಗೆ ಮಕ್ಕಳಾಗಿ, ಪಾಲುದಾರರಿಗೆ ಸಂಗಾತಿಯಾಗಿ, ನೆರೆಹೊರೆಯರಿಗೆ ಸ್ನೇಹಿತರಾಗಿ ಹೀಗೆ ತಮ್ಮ ಪಾತ್ರಗಳಿಗೆ ಅನುಗುಣವಾಗಿ ವ್ಯಕ್ತಿ ವರ್ತನೆಯು ಬದಲಾಗಿರುತ್ತದೆ. ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಬದಲಾದ ಗುಣ ಹಾಗೂ ವರ್ತನೆಯನ್ನು ತೋರುತ್ತಾರೆ. ಅದನ್ನು ನಾವು ವ್ಯಕ್ತಿಯ ಸಾಮಾನ್ಯವಾದ ವರ್ತನೆ ಎಂದು ಕರೆಯಬಹುದು.

ಆದರೆ ಕೆಲವು ವ್ಯಕ್ತಿಗಳು ಸಂಬಂಧಗಳನ್ನು ಅಥವಾ ಸ್ನೇಹವನ್ನು ದುರುಪಯೋಗ ಪಡಿಸಿಕೊಳ್ಳುವರು. ತಮ್ಮನ್ನು ತಾವು ಎಲ್ಲರೆದುರು ಅತಿಶಯೋಕ್ತಿಯ ರೀತಿಯಲ್ಲಿ ತೋರ್ಪಡಿಸಿಕೊಳ್ಳಲು ಹಾಗೂ ನಾಯಕಾರಗಿ ಉಳಿಯುವ ಉದ್ದೇಶಕ್ಕಾಗಿ ಸಾಕಷ್ಟು ನಾಟಕಗಳನ್ನು ಮಾಡುತ್ತಾರೆ ಎಂದು ಹೇಳಲಾಗುವುದು. ವಿವಿಧ ರಾಶಿಚಕ್ರಗಳಲ್ಲಿ ಕೆಲವು ರಾಶಿ ಚಕ್ರದವರು ತಾವು ಕೇಂದ್ರ ವ್ಯಕ್ತಿಗಳಾಗಿ ತೋರಿಸಿಕೊಳ್ಳಲು ನಾಟಕ ಮಾಡುವರು. ಆ ಪ್ರವೃತ್ತಿಯು ಅವರಿಗೆ ಬಹಳ ಸಂತೋಷವನ್ನು ನೀಡುವುದು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಗುಣಗಳೇನು? ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ....

ಮೇಷ
 

ಮೇಷ

ಈ ರಾಶಿಯವರು ಎಲ್ಲಾ ವಿಚಾರಕ್ಕೂ ಸಾಮಾನ್ಯವಾಗಿ ವಾದಗಳನ್ನು ಮಾಡುತ್ತಾರೆ. ನಕಾರಾತ್ಮಕ ವಿಚಾರಗಳನ್ನು ಬದಿಗೊತ್ತಿ ಮುಂದೆ ಸಾಗುವುದು ಸೂಕ್ತ. ಆದರೆ ಇವರು ಅದನ್ನು ಅತಿಯಾಗಿ ಪರಿಗಣಿಸುವುದು ಹಾಗೂ ಅದರ ಬಗ್ಗೆ ವಾದ ಮಾಡುವುದರ ಮೂಲಕ ತೊಂದರೆಯನ್ನು ಎಳೆದುಕೊಳ್ಳುತ್ತಾರೆ. ತಮ್ಮಲ್ಲಿ ಯಾವುದೇ ಕುಂದುಕೊರತೆ ಇಲ್ಲ ಎನ್ನುವುದನ್ನು ತೋರಿಸಿಕೊಳ್ಳುವ ಸಲುವಾಗಿ ಇವರು ಸಾಕಷ್ಟು ನಾಟಕ ಅಥವಾ ಮರೆ ಮಾಚುವಿಕೆಯ ಕೆಲಸ ಮಾಡುವರು. ಇನ್ನು ರಾಶಿಚಕ್ರಗಳಲ್ಲಿ ಮೇಷ ರಾಶಿಯು ತುಂಬಾ ಶಕ್ತಿಶಾಲಿ ರಾಶಿಯಾಗಿದೆ. ಇವರಲ್ಲಿ ಶಕ್ತಿ ಹಾಗೂ ಅತ್ಯುತ್ಸಾಹವು ಕುದಿಯುತ್ತಿರುವುದು. ಇವರು ತುಂಬಾ ತೀಕ್ಷ್ಣ ಹಾಗೂ ಅನ್ವೇಷಿಸುವವರು. ಇವರಲ್ಲಿ ಇರುವಂತಹ ಅದಮ್ಯ ಸ್ಫೂರ್ತಿಯು ಯಾವುದೇ ರೀತಿಯ ಅಡೆತಡೆಗಳನ್ನು ಪುಡಿ ಮಾಡಬಲ್ಲದು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಸ್ವಾವಲಂಬಿಗಳು ಮತ್ತು ಇದರಿಂದಾಗಿ ಅವರಿಗೆ ಸ್ವರಕ್ಷಣೆಯು ತಿಳಿದಿರುವುದು. ಮೇಷ ರಾಶಿಯವರು ಶಕ್ತಿಯು ಅವರ ನಾಯಕತ್ವದ ಗುಣಗಳು,ನಿರ್ಭೀತಿಯ ಸ್ವಭಾವ ಮತ್ತು ಕೆಲಸ ಮಾಡುವ ಶಕ್ತಿಯನ್ನು ಅವಲಂಬಿಸಿದೆ.

ಮಿಥುನ

ಮಿಥುನ

ಈ ರಾಶಿಚಕ್ರದವರು ಕೆಲವೊಮ್ಮೆ ಅವ್ಯವಸ್ಥೆಯನ್ನು ಸೃಷ್ಟಿಸುತ್ತಾರೆ. ನಂತರ ಅದರಿಂದಾಗುವ ಪರಿಣಾಮವನ್ನು ವೀಕ್ಷಿಸುತ್ತಾರೆ. ಈ ವ್ಯಕ್ತಿಗಳು ನಾಟಕವನ್ನು ನೇರವಾಗಿ ಪ್ರಾರಂಭಿಸುವುದಿಲ್ಲ. ಬದಲಾಗಿ ತೆರೆಮರೆಯಲ್ಲಿ ನಾಟಕ ಮಾಡಲು ಮುಂದಾಗುವರು. ಗಾಸಿಪ್‍ಗಳನ್ನು ಹರಡಲು ಬಹಳ ಇಷ್ಟಪಡುವರು. ದ್ವಿಮುಖ ವ್ಯಕ್ತಿತ್ವವವನ್ನು ಹೊಂದಿರುವ ಇವರು ಪರಿಸ್ಥಿತಿಯಲ್ಲಿ ಸಿಕ್ಕಿ ಬಿದ್ದಾಗ ಸಾಕಷ್ಟು ಉತ್ತಮ ರೀತಿಯಲ್ಲಿಯೇ ನಟಿಸುವರು. ಇನ್ನು ಮಿಥುನ ರಾಶಿಯವರು ಮೌನಿಗಳು, ಭಾವನಾತ್ಮಕ ಜೀವಿಗಳು, ಪ್ರಬುದ್ಧ ವ್ಯಕ್ತಿತ್ವವನ್ನು ಹೊಂದಿರುವವರೇ ಆಗಿದ್ದರೂ ಕೂಡ ಇವರ ಭಾವನೆಗಳು ಏರುಪೇರಾಗುತ್ತಿರುತ್ತೆ. ಸೂಕ್ಷ್ಮ ವಿಚಾರಗಳನ್ನು ಇವರೊಡನೆ ಮಾತನಾಡುವಾಗ ಬಹಳ ಜಾಗರೂಕತೆ ಬೇಕು ಯಾಕೆಂದರೆ ಒಂದು ವೇಳೆ ಇವರ ಭಾವನೆಗಳಿಗೆ ನೀವು ಧಕ್ಕೆ ತಂದರೆ ಅದನ್ನು ಅವರು ಸೀರಿಯಸ್ ಆಗಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ತಿಂಗಳಾಗಿರಲಿ, ವರ್ಷವಾಗಿರಲಿ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಮುಂದೊಂದು ದಿನ ಇವರು ನಿಮ್ಮೊಡನೆ ಜಗಳಕ್ಕಿಳಬಹುದು. ಹಾಗಾಗಿ ಮಿಥುನ ರಾಶಿಯವರೊಡನೆ ಜಾಗರೂಕತೆಯಿಂದ ವರ್ತಿಸುವುದು ಬಹಳ ಒಳಿತು.

ಕರ್ಕ
 

ಕರ್ಕ

ಈ ರಾಶಿಚಕ್ರದವರ ಭಾವನೆಗಳು ಕಾಮನಬಿಲ್ಲಿನಂತೆ ಬದಲಾವಣೆಯನ್ನು ಹೊಂದುತ್ತಲೇ ಇರುತ್ತದೆ ಎಂದು ಹೇಳಲಾಗುವುದು. ಇವರು ತೀಕ್ಷ್ಣ ಹಾಗೂ ನಾಟಕೀಯ ಪ್ರವೃತ್ತಿಯನ್ನು ಆಳವಾಗಿ ಹೊಂದಿರುತ್ತಾರೆ ಎಂದು ಹೇಳಲಾಗುವುದು. ಒಮ್ಮೆ ಬಹಳ ಸಂತೋಷದಿಂದ ಇರುವಂತೆ ಕಂಡು ಬಂದರೆ ಸ್ವಲ್ಪ ಸಮಯದಲ್ಲಿಯೇ ಇವರು ಸಿಟ್ಟಿನಲ್ಲಿ ಇರುವ ಸಾಧ್ಯತೆಗಳು ಇರುತ್ತವೆ. ತಮ್ಮ ಭಾವನೆಯಲ್ಲಿ ತೀವ್ರವಾದ ಭಿನ್ನತೆಯನ್ನು ಹೊಂದಿರುವುದರಿಂದ ತಮ್ಮ ಚಿತ್ತಸ್ಥಿತಿಯೊಂದಿಗೆ ಸಾಕಷ್ಟು ನಾಟಕವನ್ನು ಮಾಡುವರು. ಇನ್ನು ಕರ್ಕಾಟಕ ರಾಶಿಯವರು ಜಗಳವಾಡುವವರಲ್ಲ, ಬದಲಾಗಿ ಜೂಜಾಡುವವರು. ಅಂದರೆ ತಮ್ಮ ಉತ್ತರಗಳನ್ನು ನೀಡುವಾಗ ತೂಗುಯ್ಯಾಲೆ ಮಾಡುವುದು ಜಾಸ್ತಿ. ಇವರ ವರ್ತನೆಗಳು, ಉತ್ತರಗಳು ಎಲ್ಲವೂ ಅವರ ಆಗಿನ ಮನಸ್ಥಿತಿಯನ್ನು ಆಧರಿಸುತ್ತದೆ. ಒಂದೇ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಇವರು ಉತ್ತರಿಸಿಬಿಡುತ್ತಾರೆ. ಹಾಗಾಗಿ ಇವರೊಡನೆ ಯಾವುದಾದರೂ ಪ್ರಮುಖ ವಿಚಾರ ಪ್ರಸ್ತಾಪಿಸುವಾಗ ಎರಡು ಭಿನ್ನ ಪ್ರತಿಕ್ರಿಯೆಗಳನ್ನು ನಿರೀಕ್ಷೆಯಲ್ಲಿಟ್ಟು ಕೊಂಡೇ ಮಾತನಾಡಬೇಕು. ಹಾಗಾಗಿ ಅವರೊಡನೆ ವಾದಕ್ಕಿಳುವಾಗ ಜಾಗೃತರಾಗಿರಿ.

ಸಿಂಹ

ಸಿಂಹ

ಈ ರಾಶಿಯವರು ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಹಳ ನಾಟಕೀಯ ರೀತಿಯಲ್ಲಿದೊಡ್ಡ ಸಮಸ್ಯೆಗಳನ್ನಾಗಿ ಪರಿವರ್ತಿಸಬಲ್ಲರು. ಇವರ ಜೀವನ ಒಂದು ರೀತಿಯ

ಚಲನಚಿತ್ರದಂತೆ. ನಾಟಕಗಳನ್ನು ಮಾಡುತ್ತಲೇ ಇರುತ್ತಾರೆ. ಇತರರಿಗೆ ಸಾಮಾನ್ಯ ಎನ್ನುವಂತಹ ಸಂಗತಿಗಳನ್ನು ವಿಪರೀತ ಎನ್ನುವ ರೀತಿಯಲ್ಲಿ ತೋರಿಸಲು ಮುಂದಾಗುವರು. ಎಲ್ಲರೆದುರೂ ಕೇಂದ್ರ ವ್ಯಕ್ತಿಗಳಾಗಿ ತೋರಿಸಿಕೊಳ್ಳಲು ಬೇಕಾದಹಾಗೆ ನಾಟಕವನ್ನು ಮಾಡುವರು ಎನ್ನಲಾಗುವುದು. ಇನ್ನು ಸಿಂಹ ರಾಶಿಯವರು ಸೂಕ್ಷ್ಮವಾದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ಯಾವುದಾದರೂ ವಿಚಾರದಲ್ಲಿ ಭಿನ್ನಾಭಿಪ್ರಾಯ ಎದುರಾದರೆ ಗಂಟೆಗಳ ಕಾಲ ವಾದ ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಇವರ ವ್ಯಕ್ತಿತ್ವ ತೀವ್ರತೆಯ ವಿಚಾರಗಳನ್ನು ವಿರೋಧಿಸುತ್ತದೆ. ಇವರೊಂದಿಗೆ ಸಂಭವನೀಯವಾಗಿ ಅಥವಾ ಆಕಸ್ಮಿಕವಾಗಿ ವಾದಗಳು ಪ್ರಾರಂಭವಾದರೆ ಅದು ಗಂಭೀರ ಸ್ಥಿತಿಗೆ ತಲುಪಬಹುದು. ನಂತರದಲ್ಲಿ ಅದು ಬಿಸಿ ಬಿಸಿಯಾದ ಚರ್ಚೆಯಾಗಿ ಪರಿಣಮಿಸುವುದು. ಇವರೊಂದಿಗೆ ವಾದವನ್ನು ನಿಲ್ಲಿಸಬೇಕು ಎಂದರೆ ಅವರಲ್ಲಿ ಕ್ಷಮೆಯಾಚಿಸುವುದು ಒಳಿತು ಎಂದು ಹೇಳಲಾಗುತ್ತದೆ.

English summary

These Zodiac Individuals Love All The Attention & Drama

What is the best thing that you can think of regarding any zodiac sign? From being the most practical to the ones who create the maximum drama out of nothing, each zodiac reveals certain definite traits. In this article, we are letting you know of those zodiac signs, the individuals of which love all the attention and are called "drama kings and queens" for nothing.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more