For Quick Alerts
ALLOW NOTIFICATIONS  
For Daily Alerts

ಜೂನ್ ತಿಂಗಳ ಹುಣ್ಣಿಮೆಯಿಂದ ಯಾವ ರಾಶಿಯವರಿಗೆ ಏನೇನು ಫಲ?

|

ಬ್ರಹ್ಮಾಂಡದಲ್ಲಿ ನಡೆಯುವಂತಹ ಪ್ರತಿಯೊಂದು ವಿದ್ಯಮಾನಗಳು ಕೂಡ ನಮ್ಮ ರಾಶಿ ಚಕ್ರದ ಮೇಲೆ ಪರಿಣಾಮ ಬೀರುವುದು ಎಂದು ತಿಳಿದಿರುವ ವಿಚಾರ. ಈ ತಿಂಗಳ ಕೊನೆಗೆ ಬಂದ ಮಕರ ರಾಶಿಯ ಹುಣ್ಣಿಮೆ. ಇದು ರಾಶಿ ಚಕ್ರಗಳಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಉಂಟು ಮಾಡಲಿದೆ. ಈ ಹುಣ್ಣಿಮೆಯ ದಿನದಂದು ನಾವು ಮಕರದ ಪ್ರಬಲ ಇಚ್ಛಾಶಕ್ತಿ ಹಾಗೂ ದೃಢಸಂಕಲ್ಪದ ಶಕ್ತಿಯನ್ನು ಪಡೆಯಲಿದ್ದೇವೆ.

zodiacs getting affected by full moon

ನಮ್ಮ ಶಕ್ತಿ ಮತ್ತು ಬದ್ಧತೆಯು ಮುಂದುವರಿಯುವಂತೆ ನೋಡಿಕೊಳ್ಳಬೇಕು. ಹುಣ್ಣಿಮೆಯ ದಿನದಂದು ಸ್ಥಿರ ಮತ್ತು ಕಠಿಣ ಪರಿಶ್ರಮವನ್ನು ಪ್ರತಿಯೊಬ್ಬರು ಎದುರು ನೋಡುತ್ತಲಿರುವರು. ಈ ಶಕ್ತಿಯಿಂದ ಇವೆರಡು ನಿಮಗೆ ಲಭ್ಯವಾಗಲಿದೆ. ಕಠಿಣ ಪರಿಸ್ಥಿತಿಯಲ್ಲೂ ಜೀವನದಲ್ಲಿ ಸಾಧಿಸುತ್ತೇವೆನ್ನುವುದು ಮುನ್ನುಗ್ಗುವುದು ಇದೇ ಮಕರ ಶಕ್ತಿಯಿಂದಾಗಿ ಎನ್ನುವುದನ್ನು ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಈ ಹಂತದಲ್ಲಿ ಪ್ರತಿಯೊಂದು ರಾಶಿಯಲ್ಲಿ ಯಾವ್ಯಾವ ಬದಲಾವಣೆಗಳು ಆಗಲಿದೆ ಎಂದು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

ಮೇಷ: ಮಾರ್ಚ್ 21- ಎಪ್ರಿಲ್ 19

ಮೇಷ: ಮಾರ್ಚ್ 21- ಎಪ್ರಿಲ್ 19

ಇತ್ತೀಚಿನ ತಿಂಗಳಲ್ಲಿ ತಮ್ಮ ವೃತ್ತಿಯಲ್ಲಿ ಇವರಿಗೆ ತುಂಬಾ ನೋವಾಗಿರುವ ಕಾರಣದಿಂದಾಗಿ ಮೇಷ ರಾಶಿಯವರು ಈ ಶಕ್ತಿ ಮತ್ತು ಕೋಪವನ್ನು ಚಲಾಯಿಸುವರು. ಇವರ ಜೀವನದಲ್ಲಿ ಅಧಿಕಾರದ ಸ್ಥಾನವನ್ನು ಪಡೆದಿರುವವರಿಗಾಗಿ ಇವರು ತಮ್ಮ ಸಾಮಾಜಿಕ ಸ್ಥಾನಮಾನ ಸುಧಾರಿಸಿಕೊಳ್ಳಬೇಕು. ಈ ಹುಣ್ಣಿಮೆಯು ಇವರ ಜೀವನವನ್ನು ಒಂದು ಹೊಸ ದಿಶೆ ಒದಗಿಸಲಿದೆ. ಸಂಪೂರ್ಣವಾಗಿ ವೃತ್ತಿರಂಗದಲ್ಲಿ ಬದಲಾವಣೆ ಅಥವಾ ಜವಾಬ್ದಾರಿಗಳು ಮತ್ತು ಪಾತ್ರಗಳು ಬದಲಾಗಬಹುದು. ವೃತ್ತಿ, ಗಣತೆ, ಸಾರ್ವಜನಿಕ ಸ್ಥಾನಮಾನ, ಜವಾಬ್ದಾರಿ ಮತ್ತು ಪೋಷಕರಾಗಿರುವವರಿಗೂ ಈ ಹಂತದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರಲಿದೆ.

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

ವೃಷಭ ರಾಶಿಯವರಲ್ಲಿ ಇರುವಂತಹ ದೀರ್ಘಕಾಲದ ಕೋಪ ಮತ್ತು ನೋವು ಇವರ ಜೀವನದ ತತ್ವವನ್ನೇ ಬದಲಾಯಿಸಲಿದೆ. ಇವರು ಪ್ರವಾಸ ಅಥವಾ ಬೌದ್ಧಿಕ ಚಟುವಟಿಕೆಗಳಿಂದ ಹೊರಗೊಂದು ಸ್ಥಾನ ಕಂಡುಕೊಳ್ಳುವರು. ಹುಣ್ಣಿಮೆಯ ಕಾರಣದಿಂದಾಗಿ ಪ್ರವಾಸ, ಶೈಕ್ಷಣಿಕ, ತತ್ವ ಮತ್ತು ಧಾರ್ಮಿಕತೆ ಹಾಗೂ ಭವಿಷ್ಯದ ಬಗ್ಗೆ ಈ ವಾರ ಗಮನಹರಿಸಲಿರುವರು.

ಮಿಥುನ: ಮೇ 21- ಜೂನ್ 20

ಮಿಥುನ: ಮೇ 21- ಜೂನ್ 20

ಇವರೆಡೆಗೆ ಬರುವಂತಹ ವ್ಯಾಪಾರ ಅಥವಾ ಆರ್ಥಿಕತೆ ಜತೆಗಾರಿಕೆ ಬಗ್ಗೆ ಮಿಥುನ ರಾಶಿಯವರಿಗೆ ತುಂಬಾ ಚಿಂತೆಯಾಗಲಿದೆ. ಇವರು ತಮ್ಮ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಇದು ಸರಿಯಾದ ಸಮಯ ಅಥವಾ ತಮ್ಮ ಪಾತ್ರವನ್ನು ಸ್ನೇಹಪರವಾಗಿ ಒಪ್ಪಿಕೊಳ್ಳಬೇಕು. ಇದು ಅವರ ನಂಬಿಕೆ ಮತ್ತು ಸಂಬಂಧದ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಲಿದೆ. ಮುಕ್ತವಾಗಿ ಮಾತನಾಡುವ ಮೂಲಕ ತಮ್ಮ ಸಂಬಂಧದಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು. ಜತೆಗಾರಿಕೆಯ ಆರ್ಥಿಕತೆ, ಸಾಲ, ತೆರಿಗೆ, ಪ್ರಾಯೋಜಕತ್ವ ಮತ್ತು ವಿಮೆಯು ಇವರ ಪ್ರಮುಖ ವಿಚಾರವಾಗಿರುವುದು.

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ ರಾಶಿಯವರಿಗೆ ಈ ಹುಣ್ಣಿಮೆಯು ಇವರ ಸಂಬಂಧದಲ್ಲಿ ಪ್ರಖರ ಬೆಳಕಾಗಿ ಮಿಂಚಲಿದೆ. ಸಂಬಂಧದಲ್ಲಿನ ಭಾವನಾತ್ಮಕ ಬೇಡಿಕೆ ಮತ್ತು ಜೀವನದಲ್ಲಿನ ಇತರರ ನಡುವಿನ ಸಮತೋಲನ ಕಾಪಾಡಲು ಇವರು ಬದ್ಧತೆ ಪ್ರದರ್ಶಿಸಬೇಕು. ಹುಣ್ಣೆಮೆಯಿಂದಾಗಿ ಮದುವೆ, ಸಂಬಂಧಗಳು, ಉದ್ಯಮದ ಜತೆಗಾರಿಕೆ, ವೈರತ್ವ, ಸ್ಪರ್ಧಿಗಳು ಮತ್ತು ಇತರ ವಿಚಾರಗಳ ಬಗ್ಗೆ ಗಮನಹರಿಸಬೇಕು.

ಸಿಂಹ: ಜುಲೈ 23-ಆ.23

ಸಿಂಹ: ಜುಲೈ 23-ಆ.23

ತಮ್ಮ ಆಹಾರ ಕ್ರಮ ಮತ್ತು ವ್ಯಾಯಾಮದ ಬಗ್ಗೆ ಪುನರ್ರಚನೆ ಮಾಡಲು ಇದು ಸಿಂಹ ರಾಶಿಯವರಿಗೆ ಸರಿಯಾದ ಸಮಯ. ಇವರು ಒಂದು ಸಲ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇನ್ನೊಂದು ಕಡೆಯಲ್ಲಿ ತಮ್ಮ ಉದ್ಯೋಗದಲ್ಲಿ ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಸಮಯವು ಪ್ರತಿಯೊಂದಕ್ಕೂ ಸೂಕ್ತವಾಗಿದೆ. ನೀವು ಹೊಸ ಉದ್ಯೋಗ ಅಥವಾ ಹೊಸ ದಾರಿಯಲ್ಲಿ ನಡೆಯಲು ಇದು ಸೂಕ್ತವಾಗಿದೆ. ವೃತ್ತಿ, ಆರೋಗ್ಯ, ದೈನಂದಿನ ಚಟುವಟಿಕೆ ಮತ್ತು ವೇಳಾಪಟ್ಟಿ ಮೇಲೆ ಗಮನವಿರಬೇಕು.

ಕನ್ಯಾ: ಆ.24-ಸೆ.23

ಕನ್ಯಾ: ಆ.24-ಸೆ.23

ಕನ್ಯಾ ರಾಶಿಯವರು ತಮ್ಮ ಪ್ರೇಮಿ ಅಥವಾ ಮಕ್ಕಳಿಂದ ಸಂಕಷ್ಟ ಎದುರಿಸುವರು. ಇನ್ನೊಂದು ಬದಿಯಲ್ಲಿ ಇವರಿಗೆ ತಮ್ಮ ಕ್ರಿಯಾತ್ಮಕತೆ ತೋರಿಸಲು ಇದು ಅದ್ಭುತ ಸಮಯ. ಜೀವನದಲ್ಲಿ ಮನರಂಜನೆ ಪಡೆಯದೆ ಕೇವಲ ಕೆಲಸದ ಕಡೆ ಮಾತ್ರ ಗಮನಹರಿಸುತ್ತಲಿದ್ದರೆ ಆಗ ಜೀವನದಲ್ಲಿ ಆನಂದ ಮತ್ತು ಮನರಂಜನೆ ಪಡೆಯಲು ಇದು ಸರಿಯಾದ ಸಮಯ. ಕ್ರಿಯಾತ್ಮಕತೆ, ಹವ್ಯಾಸಗಳು, ಪ್ರೀತಿ ಮತ್ತು ರೋಮ್ಯಾನ್ಸ್ ಕಡೆ ಹುಣ್ಣಿಮೆಯಂದು ಗಮನಹರಿಸಬೇಕು. ಅಪಾಯವನ್ನು ತೆಗೆದುಕೊಂಡು ಜೀವನದಲ್ಲಿ ಆನಂದ ಪಡೆಯಬೇಕು.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ಹುಣ್ಣಿಮೆಯಂದು ತುಲಾ ರಾಶಿಯವರು ಮನೆ ಹಾಗೂ ಕುಟುಂಬದ ಕಡೆ ಹೆಚ್ಚಿನ ಗಮನಹರಿಸಬೇಕು. ಇದು ವಾತಾವರಣವನ್ನು ತುಂಬಾ ಪರಿಣಾಮಕಾರಿಯಾಗಿಸಲು ಸರಿಯಾದ ಸಮಯ. ವಿಷಯಗಳು ಸುಗಮವಾಗಲು ಯಾವುದೇ ರೀತಿಯ ಪ್ರಮುಖ ಬದಲಾವಣೆ ಮಾಡಬಹುದು. ನೋವಿನ ಪರಿಸ್ಥಿತಿಯು ಅಂತ್ಯ ಕಾಣಲಿದೆ. ಹುಣ್ಣಿಮೆಯಂದು ಇವರು ಮನೆ ಹಾಗೂ ಕುಟುಂಬದ ಕಡೆ ದೃಷ್ಟಿಹರಿಸಬೇಕು.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ವೃಶ್ಚಿಕ ರಾಶಿಯವರಿಗೆ ಒಂದು ಪ್ರಮುಖವಾದ ಸಂವಹನವು ಅವರೆಡೆಗೆ ಬರಲಿದೆ ಮತ್ತು ಇದರಿಂದ ಅವರು ಚಿಂತಿಸುವ ಮತ್ತು ಬೇರೆಯವರೊಂದಿಗೆ ಮಾತನಾಡುವ ರೀತಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ಇವರಲ್ಲಿರುವಂತಹ ಶಕ್ತಿಯು ಅಂತಿಮವಾಗಿ ಹೊರಬರಲಿದೆ. ಸಭೆ, ಮಾತುಕತೆ ಮತ್ತು ಪ್ರವಾಸವು ಇವರ ಶಕ್ತಿಯನ್ನು ರಚನಾತ್ಮಕವಾಗಿ ಸಾಗಿಸಲು ನೆರವಾಗಲಿದೆ. ಸಣ್ಣ ಪ್ರವಾಸ, ನೆರೆಮನೆ, ಸೋದರಸೋದರಿಯರು, ಸಭೆ, ಸಂವಹನ ಮತ್ತು ಸಾರಿಗೆಯು ಪ್ರಮುಖ ವಿಚಾರವಾಗಿರಲಿದೆ.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಮಕರ ರಾಶಿಯವರು ಆಕರ್ಷಣೆಯಾಗಿರುವರು. ಇವರಿಗೆ ನಿರ್ಧಾರ ತೆಗೆದುಕೊಳ್ಳುವ ಸಮಯ ಇದಾಗಿದೆ. ಇದನ್ನು ಹೊರತುಪಡಿಸಿ ಅಪಾರ ವೈಯಕ್ತಿಕ ಸಬಲೀಕರಣ, ಪುನರುಜ್ಜೀವನ ಮತ್ತು ರೂಪಾಂತರದ ಸಮಯವಾಗಿರಲಿದೆ. ತಮ್ಮ ದೇಹ, ನೋಟ, ಸ್ವಪ್ರತಿಷ್ಠೆ ಬಗ್ಗೆ ಗಮನಹರಿಸಬೇಕು. ಇನ್ನೊಂದು ಬದಿಯಲ್ಲಿ ಇವರ ಆಕಾಂಕ್ಎ, ಗುರಿಗಳು ಮತ್ತು ಜೀವನದ ಬಗ್ಗೆ ಇರುವ ನೋಟವು ಸರಿಯಾದ ಮಾರ್ಗದಲ್ಲಿ ಸಾಗಲಿದೆ.

ಕುಂಭ: ಜ.21-ಫೆ.18

ಕುಂಭ: ಜ.21-ಫೆ.18

ಕುಂಭ ರಾಶಿಯವರು ಜೀವನದಲ್ಲಿ ಹಿಂದಿನದ್ದನ್ನು ಮರೆತು ಮುಂದೆ ಸಾಗಬೇಕಾಗಿದೆ. ಹುಣ್ಣಿಮೆಯ ಶಕ್ತಿಯು ಇವರ ನಿಯಂತ್ರಣಕ್ಕೆ ಸಿಗದಂತೆ ಕೆಲವೊಂದು ಅನಿರೀಕ್ಷಿತ ಕಾರ್ಯಕ್ರಮಗಳನ್ನು ತರಲಿದೆ. ಇವರು ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆದು ತಮ್ಮ ಶಕ್ತಿ ಹೆಚ್ಚಿಸಬೇಕು. ಮಕರ ರಾಶಿಯ ಹುಣ್ಣಿಮೆಯಿಂದ ದೊಡ್ಡ ಸಂಸ್ಥೆಗಳು, ರಾಜಕೀಯ, ಪರದೆ ಹಿಂದಿನ ಚಟುವಟಿಕೆಗಳು ಅಥವಾ ಅಡಗಿರುವ ವೈರಿಗಳ ಕಡೆ ಗಮನಹರಿಸಬೇಕು.

ಮೀನ: ಫೆ.19-ಮಾ.20

ಮೀನ: ಫೆ.19-ಮಾ.20

ಶಕ್ತಿಶಾಲಿ ಸ್ನೇಹವು ಇವರ ಜೀವನದ ಮೇಲೆ ಪರಿಣಾಮ ಬೀರಲಿದೆ. ಇವರ ಪ್ರಮುಖ ಮಹಾತ್ವಕಾಂಕ್ಷೆಯು ಸರಿಯಾದ ಮಾರ್ಗದಲ್ಲಿ ಸಾಗಲಿದೆ ಮತ್ತು ಇದು ಇವರ ಜೀವನ ಬದಲಾಯಿಸಬಹುದು. ಹುದುಗಿರುವಂತಹ ಕೋಪ, ಒತ್ತಡ, ನೋವು ಮತ್ತು ಸಮಸ್ಯೆಗಳು ಸ್ನೇಹದಿಂದಾಗಿ ಕಡಿಮೆಯಾಗಲಿದೆ. ಸ್ನೇಹಿತರು, ಮೈತ್ರಿ, ಸಾಮಾಜಿಕ ಸಂಪರ್ಕ ಮತ್ತು ಸದಸ್ಯತ್ವದ ಕಡೆ ಗಮನಹರಿಸಬೇಕು.

English summary

These month end Full Moon’s Impact On The Zodiacs

Since the Full Moon is said to fall on the 28th of June in the earth sign of Capricorn, it is said to cause a major impact on zodiacs. On this Full Moon day, we are all going to get influenced by the Capricorn energy of being strong-willed and determined. We can find our strength and determination in keeping ourselves going. On this Full Moon day, being grounded, stable, and hard working is something that one needs to look out for during this event. We reveal to you the details on how each of the zodiac signs will also undergo a drastic change during this phase. Check it out.
Story first published: Thursday, June 28, 2018, 17:24 [IST]
X
Desktop Bottom Promotion