For Quick Alerts
ALLOW NOTIFICATIONS  
For Daily Alerts

ಈ ರಾಶಿಚಕ್ರದವರು ಅಪಾಯಕಾರಿ ಸ್ವಭಾವದವರು-ಸರ್ವಾಧಿಕಾರಿಯಂತೆ ವರ್ತಿಸುವರು!

By Deepu
|

ತಪ್ಪು ಮಾಡುವುದು ಸಹಜ. ಹಾಗೆಯೇ ಆ ತಪ್ಪಿನ ಅರಿವಾದಾಗ ಮತ್ತೆ ಮತ್ತೆ ಅದೇ ತಪ್ಪನ್ನು ಎಸಗಬಾರದು. ಹೌದು, ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆಯಿರುತ್ತದೆ. ಅದೇ ತಿಳಿದು ತಿಳಿದು ಮಾಡುವ ತಪ್ಪುಗಳನ್ನು ತಪ್ಪು ಎನ್ನುವುದಿಲ್ಲ. ಬದಲಿಗೆ ಅದು ಅಪರಾಧ ಎನಿಸಿಕೊಳ್ಳುವುದು. ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿದಾಗ ಅದು ಅಪಾಯಕಾರಿ ವಿಚಾರ ಎನಿಸಿಕೊಳ್ಳುವುದು.

ಎಫ್ ಬಿ ಐ ನಡೆಸಿರುವ ಕೆಲವು ಸಂಶೋಧನೆಗಳ ಆಧಾರದ ಮೇಲೆ ಪ್ರತಿಯೊಂದು ರಾಶಿಚಕ್ರದವರಲ್ಲೂ ಅಪಾಯಕಾರಿ ಗುಣಗಳು ಇರುತ್ತವೆ. ಅದರಲ್ಲೂ ಕೆಲವು ರಾಶಿಚಕ್ರದವರಲ್ಲಿ ಅಂತಹ ಗುಣಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗಿದೆ. ನಿಮಗೂ ನಿಮ್ಮ ರಾಶಿಚಕ್ರವು ಅಪಾಯಕಾರಿ ವಿಚಾರದಲ್ಲಿ ಯಾವ ಸ್ಥಾನವನ್ನು ಪಡೆದುಕೊಳ್ಳುವುದು ಎನ್ನುವುದನ್ನು ತಿಳಿದುಕೊಳ್ಳುವ ಬಯಕೆ ಇದ್ದರೆ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ...

ಕರ್ಕ

ಕರ್ಕ

ಎಫ್‍ಬಿಐ ಪ್ರಕಾರ ಈ ರಾಶಿಚಕ್ರವು ಅತ್ಯಂತ ಪ್ರಾಣಾಂತಿಕ ರಾಶಿಚಕ್ರ ಎಂದು ಹೇಳಲಾಗುತ್ತದೆ. ಈ ರಾಶಿಯ ವ್ಯಕ್ತಿಗಳೇ ಅತಿಹೆಚ್ಚು ಅಪರಾಧಗಳಲ್ಲಿ ತೊಡಗಿರುತ್ತಾರೆ ಎಂದು ಹೇಳಲಾಗುವುದು. ಇವರು ಸಾಮಾನ್ಯವಾಗಿ ಮಾನಸಿಕ ಅಸ್ಥಿರತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಎಫ್‍ಬಿಐ ಪ್ರಕಾರ ಈ ರಾಶಿಚಕ್ರದವರು ಹೆಚ್ಚಾಗಿ ಭಾವಾವೇಶದ ಅಪರಾಧಗಳನ್ನು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಇವರು ಸಾಮಾನ್ಯವಾಗಿ ಕೊಲೆಯ ಕೆಲಸಕ್ಕೆ ಮುಂದಾಗುತ್ತಾರೆ. ಜೊತೆಗೆ ಕೊಲೆಗೈದ ವ್ಯಕ್ತಿಯ ಮೇಲೆ ವಿಶಿಷ್ಟ ಚಿಹ್ನೆಯೊಂದನ್ನು ಬಿಟ್ಟಿರುತ್ತಾರೆ ಎನ್ನಲಾಗುತ್ತದೆ.

ವೃಷಭ

ವೃಷಭ

ಈ ರಾಶಿಚಕ್ರದ ವ್ಯಕ್ತಿಗಳು ತೀರಾ ಉದ್ವೇಗಕ್ಕೆ ಒಳಗಾಗಿರುತ್ತಾರೆ. ಇವರು ಸ್ವಾಮ್ಯ ಸೂಚಕ ಹಾಗೂ ಮೊಂಡುತನದವರು. ಈ ರಾಶಿಚಕ್ರವು ಅತ್ಯಂತ ಅಪಾಯಕಾರಿ ನಕ್ಷತ್ರದ ಚಿಹ್ನೆಯಾಗಿದೆ ಎಂದು ಹೇಳಲಾಗುವುದು. ಉಗ್ರ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಇವರ ಕೆಲವು ಗುಣಗಳು ಹೆಚ್ಚು ತಪ್ಪುಗಳನ್ನು ಮಾಡಲು ಪ್ರೇರೇಪಿಸುವುದು.

ಧನು

ಧನು

ಈ ವ್ಯಕ್ತಿಗಳು ಕೋಪಗೊಂಡಾಗ ಕ್ಷಮಿಸಲಾರದ ವ್ಯಕ್ತಿಗಳಾಗಿರುತ್ತಾರೆ. ಇವರ ಕಠಿಣ ಗುಣಗಳಿಂದ ನೋವುಂಟುಮಾಡುವರು. ಕಳ್ಳತನದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗುತ್ತದೆ. ಕುಖ್ಯಾತ ಅಪರಾಧಿಗಳ ಪಟ್ಟಿಯಲ್ಲಿ ಇವರು ಮೇಲಕ್ಕೆ ಇರುತ್ತಾರೆ. ಇವರು ಅನಾವಶ್ಯಕವಾಗಿ ತಮ್ಮ ಜೀವನವನ್ನು ಅಪಾಯದ ಅಂಚಿನಲ್ಲಿ ನಿಲ್ಲಿಸಿಕೊಳ್ಳುತ್ತಾರೆ.

ಮೇಷ

ಮೇಷ

ಈ ರಾಶಿಯವರು ಹಠಮಾರಿ ವ್ಯಕ್ತಿಗಳು. ಕ್ರಿಮಿನಲ್ ಚಟುವಟಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಕೆಲವೊಮ್ಮೆ ಏನುಮಾಡುತ್ತಾರೆ ಎನ್ನುವುದರ ಬಗ್ಗೆ ಅವರಿಗೇ ಅರಿವಿರುವುದಿಲ್ಲ. ಸ್ಪರ್ಧಾತ್ಮಕ ಜೀವನವನ್ನು ತಪ್ಪಿಸಲು ಆಕ್ರಮಣ ಪ್ರವೃತ್ತಿಯನ್ನು ತೋರುವರು. ತಮ್ಮ ಅಧಿಕಾರವನ್ನು ಪ್ರಶ್ನಿಸುವವರನ್ನು ದ್ವೇಷಿಸುವರು ಇವರು. ಕಾನೂನು ಬಾಹಿರ ಚಟುವಟಿಕೆಯಲ್ಲಿ ಯಾವುದೇ ಅಂಜಿಕೆಯಿಲ್ಲದೆ ಮುನ್ನುಗ್ಗುತ್ತಾರೆ. ಅಲ್ಲದೆ ತಮ್ಮ ಬಳಿ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಮಕರ

ಮಕರ

ಈ ರಾಶಿಯ ವ್ಯಕ್ತಿಗಳು ಮರಣದಂಡನೆ ವಿಧಿಸುವಂತಹ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಾರೆ. ಇವರು ಅತ್ಯಂತ ಅಪಾಯಕಾರಿ ವ್ಯಕ್ತಿಗಳು. ತಮ್ಮ ಮಾರ್ಗವನ್ನು ಸುಲಭ ಗೊಳಿಸಲು ಬಲು ಸುಲಭವಾಗಿ ಮುನ್ನುಗ್ಗುತ್ತಾರೆ. ಇವರು ಸ್ವಲ್ಪ ಅಸುರಕ್ಷಿತ ಮಾರ್ಗವನ್ನು ಅನುಸರಿಸುತ್ತಾರೆ ಎಂದು ಹೇಳಬಹುದು.

ಕನ್ಯಾ

ಕನ್ಯಾ

ಇವರು ಅತ್ಯಂತ ಬುದ್ಧಿವಂತರು. ಹಾಗೆಯೇ ಕ್ರಿಮಿನಲ್ ಅಪರಾಧಗಳನ್ನು ಎಸಗುವುದರಲ್ಲೂ ಬಹಳ ಜಾಣ್ಮೆಯನ್ನು ತೋರುವರು. ಹ್ಯಾಕಿಂಗ್ ಹಾಗೂ ಕಳ್ಳತನದ ಅಪರಾಧಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿರುತ್ತಾರೆ. ಇವರು ಸಂಪತ್ತನ್ನು ಗಳಿಸುವುದರಲ್ಲಿ ಹೆಚ್ಚಿನ ಒಲವು ತೋರುತ್ತಾರೆ. ಕದಿಯುವಿಕೆಯಲ್ಲಿಯೇ ಹೆಚ್ಚು ಅಪರಾಧ ಮಾಡಿರುತ್ತಾರೆ ಎಂದು ಎಫ್‍ಬಿ ಐ ತಿಳಿಸಿದೆ.

ತುಲಾ

ತುಲಾ

ಈ ರಾಶಿಯವರು ಅಷ್ಟು ಸುಲಭವಾಗಿ ಕಾನೂನು ಬಾಹಿರ ಕೃತ್ಯಗಳನ್ನು ಎಸಗುವುದಿಲ್ಲ. ಆದರೆ ಬ್ಯಾಂಕಿಂಗ್ ಹಗರಣ, ವಿತ್ತೀಯ ಲಾಭ ಪಡೆದುಕೊಳ್ಳುವುದರಲ್ಲಿ ಹೆಚ್ಚಿನ ಅಪರಾಧ ಮಾಡುತ್ತಾರೆ. ತಮ್ಮ ಅಪರಾಧಗಳನ್ನು ಮರೆಮಾಚಲು ದೊಡ್ಡ ಸಂಸ್ಥೆಗಳ ಸಹಾಯವನ್ನು ಪಡೆದುಕೊಳ್ಳುವರು.

ಮೀನ

ಮೀನ

ಈ ರಾಶಿಯವರು ಮರೆಯಲ್ಲಿ ಅಧಿಕ ಅಪರಾಧಗಳನ್ನು ಮಾಡುತ್ತಾರೆ. ಇವರು ತಾವು ಮಾದಕ ದ್ರವ್ಯಗಳನ್ನು ಸೇವಿಸುವುದರ ಮೂಲಕ ಅಪರಾಧ ಕೈಗೊಳ್ಳುವರು. ಅಲ್ಲದೆ ಸರಣಿ ಕೊಲೆ ಮಾಡುವುದರ ಮೂಲಕ ತಮ್ಮ ಅಪರಾಧಗೈವ ಗುಣವನ್ನು ತೋರುತ್ತಾರೆ. ಇವರು ಅತ್ಯಂತ ಅಪಾಯಕಾರಿ ವ್ಯಕ್ತಿಗಳು. ಇವರಲ್ಲಿ ಅಷ್ಟು ಸುಲಭವಾಗಿ ಭರವಸೆಯನ್ನು ಇಡಲು ಸಾಧ್ಯವಿಲ್ಲ. ಅಪರಾಧಿಗಳ ಪಟ್ಟಿಯಲ್ಲಿ ಇವರ ಹೆಸರನ್ನು ಮೇಲ್ಭಾಗದಲ್ಲಿಯೇ ನೋಡಬಹುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಚಕ್ರದವರು ಅತ್ಯಂತ ಅಸೂಯೆ ಹಾಗೂ ಆಕ್ರಮಣಶೀಲ ವ್ಯಕ್ತಿತ್ವದವರು. ಇವರು ಕೆಲವು ಸಂದರ್ಭದಲ್ಲಿ ಅತ್ಯಂತ ಹಿಂಸಾತ್ಮಕ ಪ್ರವೃತ್ತಿಯನ್ನು ತೋರಬಹುದು. ಭೀಕರ ಸಂಯೋಜನೆಯಿಂದ ಕೊಲೆಯನ್ನು ಗೈಯುವರು. ಕುತಂತ್ರದ ಗುಣಗಳನ್ನು ಇವರು ಹೊಂದಿರುತ್ತಾರೆ. ಇವರು ಯಾವುದೇ ಅಪರಾಧಗಳನ್ನು ಸಹ ಬಲು ಸುಲಭವಾಗಿ ಕೈಗೊಳ್ಳುವರು.

ಸಿಂಹ

ಸಿಂಹ

ಇವರು ಕುಖ್ಯಾತ ಮತ್ತು ಉತ್ಸಾಹ ಪೂರ್ಣ ಅಪರಾಧಿಗಳಾಗಿರುತ್ತಾರೆ. ಇವರಲ್ಲಿ ಅನೇಕ ಧನಾತ್ಮಕ ಗುಣಲಕ್ಷಣಗಳಿದ್ದರೂ ಕೆಲವು ಮನೋವಿಕೃತ ಮನಃಸ್ಥಿತಿಯನ್ನು ಒಳಗೊಂಡಿರುತ್ತಾರೆ. ಇವರು ಕೋಪಗೊಂಡಾಗ ಅಥವಾ ಒತ್ತಡಕ್ಕೆ ಒಳಗಾದ ಸಂದರ್ಭದಲ್ಲಿ ವಿಚಿತ್ರವಾದ ವರ್ತನೆಯನ್ನು ತೋರುವರು. ಬೆಂಕಿಯ ಸಂಕೇತವನ್ನು ಹೊಂದಿರುವ ಈ ವ್ಯಕ್ತಿಗಳು ಖ್ಯಾತಿಗಾಗಿ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಕೊಳ್ಳುವರು.

ಕುಂಭ

ಕುಂಭ

ಇವರು ಮೋಸ ಹೊಂದುವವರೆಗೂ ಉತ್ತಮ ಸ್ವಭಾವವನ್ನೇ ತೋರುವರು. ಸೇಡು ತೀರಿಸಿಕೊಳ್ಳುವ ಸಂದರ್ಭ ಬಂದಾಗ ಬಹಳ ಕಠಿಣ ವ್ಯಕ್ತಿಗಳಾಗಿ ಪರಿವರ್ತನೆ ಹೊಂದುವರು. ಬುದ್ಧಿವಂತರು ಹಾಗೂ ಕುಶಲತೆಯ ಗುಣವನ್ನು ಹೊಂದಿರುವ ವ್ಯಕ್ತಿಗಳು ಆದ ಇವರು ಮಹಾನ್ ಹ್ಯಾಕರ್ಸ್ ಹಾಗೂ ಕಳ್ಳತನದ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.

ಮಿಥುನ

ಮಿಥುನ

ಈ ರಾಶಿಚಕ್ರದವರನ್ನು ಕನಿಷ್ಠ ಅಪಾಯಕಾರಿ ರಾಶಿಚಕ್ರದವರು ಎಂದು ಪರಿಗಣಿಸಲಾಗಿದೆ. ಈ ವ್ಯಕ್ತಿಗಳು ಅಪರಾಧದಲ್ಲಿ ತೊಡಗಿಕೊಳ್ಳಲು ಮುಂದಾದರೆ ಬಹುಶಃ ಮೋಸ ಅಥವಾ ಕಳ್ಳತನದ ಕೇಂದ್ರಬಿಂದುವಾಗಿರುತ್ತದೆ. ಈ ವ್ಯಕ್ತಿಗಳ ಋಣಾತ್ಮಕ ಲಕ್ಷಣಗಳು ಆತಂಕಕ್ಕೆ ಒಳಗಾಗುವುದು ಮತ್ತು ಅಸಂಗತತೆಯನ್ನು ಒಳಗೊಂಡಿರುವುದು. ಒಟ್ಟಾರೆಯಾಗಿ ಈ ವ್ಯಕ್ತಿಗಳು ಅಷ್ಟು ಅಪಾಯಕಾರಿ ವ್ಯಕ್ತಿಗಳಲ್ಲ ಎಂದೇ ಹೇಳಬಹುದು.

English summary

These are the most Dangerous Zodiac Signs

These signs are known to be listed based on the data of the prisoners and the crimes that they have done as per the records! Check out at what number is your zodiac sign present at when it comes to being dangerous.
X
Desktop Bottom Promotion