For Quick Alerts
ALLOW NOTIFICATIONS  
For Daily Alerts

ಈ ಆರು ರಾಶಿಚಕ್ರದವರು ಹೆಚ್ಚು ಬಿಗುಮಾನ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ

|

ಕೆಲವರು ಇರುವುದೇ ಹಾಗೆ. ಅವರದ್ದೇ ಆದ ಬಿಗುಮಾನ, ಗಂಭೀರವಾದ ಸ್ವಭಾವ, ತಮ್ಮನ್ನು ಹೊರತಾಗಿ ಇನ್ಯಾರೂ ಸಭ್ಯರು ಎನ್ನುವ ರೀತಿಯ ವರ್ತನೆ ತೋರುತ್ತಾರೆ. ಅವರಿಗಾಗಿ ಅವರೇ ಒಂದು ಸೀಮಿತವಾದ ಬೇಲಿಯನ್ನು ಹಾಕಿಕೊಂಡಿರುತ್ತಾರೆ. ಅವರು ಇತರರೊಂದಿಗೆ ಬರೆಯುವುದಾಗಲೀ, ಇತರರೇ ಇವರ ಬಳಿ ಒಂದಿಷ್ಟು ಸಮಯ ಕಳೆಯುವ ಇಚ್ಛೆಯನ್ನು ಹೊಂದುವಂತಿಲ್ಲ. ತಮ್ಮ ಮನೋಭಾವಕ್ಕೆ ತಕ್ಕಂತೆ ತಮ್ಮದೇ ಆದ ಸ್ವಂತ ಚಿಂತನೆ ಹಾಗೂ ಕೆಲಸದಲ್ಲಿ ತೊಡಗಿರುತ್ತಾರೆ. ಇವರಿಗೆ ಯಾರಾದರೂ ಪ್ರಶ್ನೆ ಮಾಡಿದರೆ ಅಥವಾ ಅವರದ್ದೇ ಆದ ಒಂದು ಮೀಸಲು ಗಡಿಯನ್ನು ಮೀರಿದರೆ ಅವರು ಅದನ್ನು ಸಹಿಸುವುದಿಲ್ಲ. ಒಂದಿಷ್ಟು ಬೇಸರ ಹಾಗೂ ಕೋಪವನ್ನು ವ್ಯಕ್ತಪಡಿಸಬಹುದು.

ಇನ್ನೂ ಕೆಲವರು ತಮ್ಮ ಸ್ನೇಹಕ್ಕೆ ಅಥವಾ ಅಭಿಪ್ರಾಯಕ್ಕೆ ಯಾವುದೇ ಗಡಿಯನ್ನು ಹೊಂದಿರುವುದಿಲ್ಲ. ಬದಲಿಗೆ ಅವರಲ್ಲಿ ಇರುವ ಮುಜುಗರ ಅಥವಾ ನಾಚಿಕೆ ಸ್ವಭಾವವು ಅವರನ್ನು ತಡೆಯುವುದು. ಅವರಲ್ಲಿರುವ ಅಂತರ್ಮುಖಿ ಸ್ವಭಾವವು ಅವರನ್ನು ಸಾಕಷ್ಟು ಕೆಲಸ ಹಾಗೂ ವಿಷಯಗಳಲ್ಲಿ ಹಿಂದಕ್ಕೆ ಸರಿಯುವಂತೆ ಮಾಡುವುದು. ಅವರಿಗೆ ಬಹುತೇಕ ಸಂದರ್ಭದಲ್ಲಿ ಮನಸ್ಸು ಬಯಸಿದ್ದು ಅಥವಾ ಆಸೆ ಪಟ್ಟ ವಿಷಯಗಳನ್ನು ಕೈಗೊಳ್ಳುವುದರಲ್ಲಿ ಭಯವನ್ನು ವ್ಯಕ್ತಪಡಿಸುವರು...

ನಕಾರಾತ್ಮಕ ಫಲಿತಾಂಶ ಎದುರಾಗಬಹುದು!

ನಕಾರಾತ್ಮಕ ಫಲಿತಾಂಶ ಎದುರಾಗಬಹುದು!

ತಮಗೆ ತಾವು ಒಂದು ಮಿತಿಯನ್ನು ತಂದುಕೊಳ್ಳುವುದು ಅಥವಾ ಅಂತರವನ್ನು ಕಾಯ್ದುಕೊಳ್ಳುವುದು ಒಂದು ನಕಾರಾತ್ಮಕ ಸಂಗತಿ ಎನ್ನುವ ರೀತಿಯಲ್ಲಿ ವ್ಯಕ್ತವಾಗಬಹುದು. ಆದರೆ ಈ ರೀತಿಯ ಹಣೆಪಟ್ಟಿಯನ್ನು ಹಾಕಿಕೊಳ್ಳುವುದರಿಂದ ಒಂದಷ್ಟು ಬೇಸರ ಉಂಟಾಗಬಹುದು. ಅಥವಾ ಅಂತಹವರನ್ನು ಆದಷ್ಟು ದೂರ ಇಡಲು ಬಯಸುತ್ತಾರೆ. ಈ ರೀತಿಯ ವರ್ತನೆಗಳು ಕೆಲವು ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ನೀಡಬಹುದು. ಅದೇ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕೆಟ್ಟದನ್ನುಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಬಹುತೇಕ ಸಂದರ್ಭದಲ್ಲಿ ಈ ರೀತಿಯ ವರ್ತನೆಗಳು ಅಥವಾ ಸ್ವಭಾವದಿಂದ ಒಂದಷ್ಟು ನಕಾರಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳಬೇಕಾಗುವುದು. ಸಾಮಾನ್ಯವವಾಗಿ ವ್ಯಕ್ತಿ ತನಗೆ ತಾನೇ ನಾಚಿಕೆ ಅಥವಾ ಬಿಗುಮಾನಕ್ಕೆ ಒಳಗಾಗುತ್ತಾನೆ ಎಂದರೆ ಅವನಲ್ಲಿ ಸಾಕಷ್ಟು ವಿಷಯವನ್ನು ಹಂಚಿಕೊಳ್ಳಲು ಮಂದಿ ಬಯಸುವುದಿಲ್ಲ. ಅಲ್ಲದೆ ಅದೇ ವ್ಯಕ್ತಿಯು ಸಹ ಇತರರೊಂದಿಗೆ ಬಹಳ ಮುಕ್ತವಾಗಿ ಬೆರೆತು ಸಂತೋಷ ಪಡೆಯಲು ಸಾಧ್ಯವಾಗದು. ಆಗ ಒಂದಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಅಲ್ಲದೆ ಅಂತಹವ್ಯಕ್ತಿಗಳನ್ನು ಸಾಮಾನ್ಯವಾಗಿ ನಂಬಿಕೆಗೆ ಅರ್ಹರಲ್ಲ ಎನ್ನುವ ಭಾವನೆಯನ್ನು ತಳೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ನಕಾರಾತ್ಮಕ ಫಲಿತಾಂಶ ಎದುರಾಗಬಹುದು!

ನಕಾರಾತ್ಮಕ ಫಲಿತಾಂಶ ಎದುರಾಗಬಹುದು!

ಸಾಮಾನ್ಯವವಾಗಿ ವ್ಯಕ್ತಿ ತನಗೆ ತಾನೇ ನಾಚಿಕೆ ಅಥವಾ ಬಿಗುಮಾನಕ್ಕೆ ಒಳಗಾಗುತ್ತಾನೆ ಎಂದರೆ ಅವನಲ್ಲಿ ಸಾಕಷ್ಟು ವಿಷಯವನ್ನು ಹಂಚಿಕೊಳ್ಳಲು ಮಂದಿ ಬಯಸುವುದಿಲ್ಲ. ಅಲ್ಲದೆ ಅದೇ ವ್ಯಕ್ತಿಯು ಸಹ ಇತರರೊಂದಿಗೆ ಬಹಳ ಮುಕ್ತವಾಗಿ ಬೆರೆತು ಸಂತೋಷ ಪಡೆಯಲು ಸಾಧ್ಯವಾಗದು. ಆಗ ಒಂದಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಅಲ್ಲದೆ ಅಂತಹವ್ಯಕ್ತಿಗಳನ್ನು ಸಾಮಾನ್ಯವಾಗಿ ನಂಬಿಕೆಗೆ ಅರ್ಹರಲ್ಲ ಎನ್ನುವ ಭಾವನೆಯನ್ನು ತಳೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರು ರಾಶಿಚಕ್ರದವರು ಸ್ವಭಾವತಹ ಒಂದಿಷ್ಟು ಬಿಗುಮಾನ ಅಥವಾ ನಾಚಿಕೆಗೆ ಒಳಗಾಗಿರುತ್ತಾರೆ. ಅವರು ತಮ್ಮನ್ನು ತಾವು ಇತರರಿಂದ ಒಂದಿಷ್ಟು ಅಂತರದಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಅವರನ್ನು ಇತರರು ಅಸುರಕ್ಷಿತ ವ್ಯಕ್ತಿಗಳು ಎನ್ನುವ ತೀರ್ಮಾನಕ್ಕೂ ಬರುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಆ ಆರು ರಾಶಿಚಕ್ರಗಳು ಯಾವವು? ಆ ರಾಶಿಚಕ್ರದ ವ್ಯಕ್ತಿಗಳಲ್ಲಿ ಯಾವ ರೀತಿಯ ಭಾವನೆಗಳು ಅವರನ್ನು ಗೊಂದಲಕ್ಕೆ ಎಡೆಮಾಡುವುದು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಕನ್ಯಾ

ಕನ್ಯಾ

ಈ ರಾಶಿಚಕ್ರದವರು ಸಾಮಾನ್ಯವಾಗಿ ವಿಶೇಷವಾದ ಕೇಳುಗರು ಎಂದು ಹೇಳಲಾಗುವುದು. ಅದರಲ್ಲೂ ಅವರೊಂದು ಗುಂಪಿನಲ್ಲಿ ಇರುವಾಗ ಅಥವಾ ಸಮೂಹದಲ್ಲಿ ಇರುವಾಗ ಅಲ್ಲಿ ನಡೆಯುವ ಸಂಗತಿಗಳನ್ನು ಉತ್ತಮ ರೀತಿಯಲ್ಲಿ ಆಲಿಸುವವರು ಹಾಗೂ ಕೇಳುಗರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಅದರ ಬಗ್ಗೆ ಬಹುಬೇಗ ವ್ಯಕ್ತಪಡಿಸುವುದಿಲ್ಲ. ಅದು ಹಾಸವೇ ಆಗಿರಲಿ ಅಥವಾ ಗಂಭೀರ ವಿಚಾರಗಳೇ ಆಗಿರಲಿ ಎಲ್ಲವನ್ನೂ ಮೊದಲು ಆಲಿಸಿ ತಮ್ಮಲ್ಲಿಯೇ ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡುತ್ತಾರೆ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ಅತ್ಯಂತ ಬುದ್ಧಿವಂತ ವ್ಯಕ್ತಿಗಳು ಎಂದು ಪರಿಗಣಿಸಲಾಗುವುದು. ಇವರು ತಮ್ಮ ಸರದಿ ಬರುವವರೆಗೂ ಕಾಯುತ್ತಾರೆ. ತಮ್ಮ ಮೌಖಿಕ ಸರದಿಯಲ್ಲಿ ಮಾತ್ರ ವಿಷಯಗಳನ್ನು ವಿಶ್ಲೇಷಿಸುತ್ತಾರೆ. ಕೆಲವೊಮ್ಮೆ ತಮ್ಮ ಮಾತನ್ನು ವ್ಯಕ್ತಪಡಿಸುವಾಗ ಕಿರುಚುವ ಸಾಧ್ಯತೆಗಳು ಇರುತ್ತವೆ. ಬಹುತೇಕ ಸಂದರ್ಭದಲ್ಲಿ ಸಾಕಷ್ಟು ಮೌನ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ಇರುವುದರಿಂದ ಬಹಳ ಬಿಗುಮಾನದ ವ್ಯಕ್ತಿಗಳು ಹಾಗೂ ಅಂತರವನ್ನು ಕಾಯ್ದುಕೊಳ್ಳುವ ವ್ಯಕ್ತಿಗಳು ಎಂದು ಸಹ ಪರಿಗಣಿಸಲಾಗುವುದು.

ವೃಷಭ

ವೃಷಭ

ಸಾಮಾಜಿಕವಾಗಿ ತೆರೆದುಕೊಳ್ಳದ ವ್ಯಕ್ತಿಗಳು ಎಂದು ಕರೆಯಲಾಗುವ ವ್ಯಕ್ತಿಗಳಿಗೆ ವೃಷಭ ರಾಶಿಯ ವ್ಯಕ್ತಿಗಳು ಅತ್ಯುತ್ತಮ ಉದಾರಣೆಯ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುವುದು. ಸಾಮಾಜಿಕ ಪಕ್ಷಗಳನ್ನು ಹಾಗೂ ವ್ಯಕ್ತಿಗಳನ್ನು ಪ್ರೀತಿಸುತ್ತಾರೆ. ಆದರೆ ಅವರು ಹೇಳುವ ಎಲ್ಲಾ ವಿಷಯಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಅಗತ್ಯವಿಲ್ಲ ಎಂದು ಪರಿಗಣಿಸುವರು. ಇವರು ಇತರರೊಂದಿಗೆ ಅತ್ಯುತ್ತಮವಾಗಿ ಬೆರೆಯುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಎಲ್ಲವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಇವರು ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ ಅನಿವಾರ್ಯತೆ ಇರುವುದಿಲ್ಲ ಎಂದು ಬಯಸುತ್ತಾರೆ.

ವೃಷಭ

ವೃಷಭ

ಇವರು ಬಹಳ ವಿರಳವಾದ ವಿಶೇಷ ಸ್ವಭಾವದ ವ್ಯಕ್ತಿಗಳು ಎಂದು ಹೇಳಬಹುದು. ಇವರು ಬಲವಾದ ಮೂಕ ಸ್ವಭಾವದವರು. ಎಲ್ಲಾ ಸಂಗತಿಯಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿರುವುದಿಲ್ಲ. ಅಂತೆಯೇ ಎಲ್ಲವನ್ನು ಎಲ್ಲರೆದುರೂ ಹೇಳಿಕೊಳ್ಳಲೇ ಬೇಕು ಎನ್ನುವ ಚಿಂತನೆಗೂ ಒಳಗಾಗುವುದಿಲ್ಲ. ಇವರ ವಿಶೇಷ ಸಾಮಥ್ರ್ಯವು ಇವರನ್ನು ಗಂಭೀರ ವ್ಯಕ್ತಿ ಅಥವಾ ಬಿಗುಮಾನದ ವ್ಯಕ್ತಿ ಎಂದು ಪರಿಗಣಿಸುವಂತೆ ಮಾಡುವುದು.

 ಮಕರ

ಮಕರ

ಕಾಯ್ದಿರಿಸುವ ವ್ಯಕ್ತಿ ಅಥವಾ ಭಿಗುಮಾನ ಹೊಂದಿರುವ ವ್ಯಕ್ತಿಗಳಲ್ಲಿ ಮಕರ ರಾಶಿಯವರು ಸಹ ಒಬ್ಬರಾಗಿರುತ್ತಾರೆ. ಇವರು ಯಾವುದೇ ಕೆಲಸವನ್ನು ನಿರ್ವಹಿಸುವಾಗಲೂ ಅದರ ಬಗ್ಗೆ ಸಾಕಷ್ಟು ಯೋಚನೆ ಹಾಗೂ ಚಿಂತನೆ ನಡೆಸುತ್ತಾರೆ. ತಪ್ಪು ನಿರ್ಧಾರವನ್ನು ಕೈಗೊಳ್ಳಬಾರದು ಎನ್ನುವ ಎಚ್ಚರಿಕೆಯ ಸ್ವಭಾವವು ಇವರನ್ನು ಗಂಭೀರ ವ್ಯಕ್ತಿಯನ್ನಾಗಿ ತೋರುವುದು. ಅವಸರದಲ್ಲಿ ತಪ್ಪು ನಿರ್ಧಾರ ಕೈಗೊಳ್ಳುವ ಬದಲು ಒಂದಿಷ್ಟು ಒಳ್ಳೆಯ ಚಿಂತನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಭಾವಿಸುವರು.

ಮಕರ

ಮಕರ

ಸಾಮಾಜಿಕವಾಗಿ ಇವರು ಅತ್ಯುತ್ತಮವಾದ ವ್ಯಕ್ತಿಗಳು. ಸಾಮಾಜಿಕ ಚಟುವಟಿಕೆಯಲ್ಲೂ ಬಹಳ ಸುಲಭವಾಗಿ ತೆರೆದುಕೊಳ್ಳುತ್ತಾರೆ. ಮೂರ್ಖ ಭಾವನೆಯನ್ನು ಇಷ್ಟಪಡದೆ ಇರುವುದರಿಂದ ಸಾಕಷ್ಟು ವಿಶ್ಲೇಷಣೆ ಹಾಗೂ ವಿಶ್ರಾಂತಿಯ ಮನೋಭಾವ ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುವುದು. ಯಾವುದೇ ನಿರ್ಧಾರ ಅಥವಾ ವಿಷಯಗಳ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಾಗ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಭಾವಿಸುವರು. ಅನುಚಿತವಾದ ಹಾಸ್ಯ ಪ್ರಜ್ಞೆ ಸೂಕ್ತವಲ್ಲ ಎಂದು ಭಾವಿಸುವರು.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರು ಯಾವುದೇ ವ್ಯಕ್ತಿಗೆಅವರನ್ನು ಅಸಮಧಾನಗೊಳಿಸುವುದು ಅಥವಾ ಮನ್ಸಸಿಗೆ ನೋವುಂಟು ಮಾಡುವ ಕೆಲಸದಲ್ಲಿ ಮುಂದಾಗಲು ಬಯಸುವುದಿಲ್ಲ. ಕೆಲವು ಸಂಗತಿಗಳ ವಿಷಯದಲ್ಲಿ ಮೀನ ರಾಶಿಯವರು ಶಾಂತವಾಗಿರಲು ಬಯಸುತ್ತಾರೆ. ಆ ವಿಷಯಗಳ ಬಗ್ಗೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಜನರು ಅವರನ್ನು ಅತೃಪ್ತಮನಸ್ಸಿನ ವ್ಯಕ್ತಿಗಳು ಎಂದು ಊಹಿಸುವರು.

ಮೀನ

ಮೀನ

ಯಾವುದೇ ವಿಷಯಗಳ ಕುರಿತು ಬಲವಂತವಾದ ಸಂಭಾಷಣೆ ಅಥವಾ ಮಾತುಕತೆಯನ್ನು ನಡೆಸಲು ಬಯಸುವುದಿಲ್ಲ. ಇವರಿಗೆ ಕೆಲವೊಮ್ಮೆ ಇತರೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವ ಗೊಂದಲವಿರುತ್ತದೆ. ಅಂತಹ ಸಮಯದಲ್ಲಿ ಮೌನವನ್ನು ತಾಳುವರು. ಅದು ಇತರರಿಗೆ ನಕಾರಾತ್ಮಕ ವಿಷಯವನ್ನಾಗಿ ತೋರುವುದು. ಹಾಗಾಗಿಯೇ ಇವರೊಬ್ಬ ಗಂಭೀರ ಹಾಗೂ ಬಿಗುಮಾನ ಹೊಂದಿರುವ ವ್ಯಕ್ತಿಗಳಂತೆ ತೋರುವರು.

ವೃಶ್ಚಿಕ

ವೃಶ್ಚಿಕ

ಅತ್ಯಂತ ಶ್ರಮ ಜೀವಿಗಳು ಹಾಗೂ ತಮ್ಮದೇ ಆದ ವಿಶೇಷ ಚಿಂತನೆಯನ್ನು ಹೊಂದಿರುವ ವ್ಯಕ್ತಿಗಳಲ್ಲಿ ವೃಶ್ಚಿಕ ರಾಶಿಯವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿ ಹಾದುಹೋಗುವ ಚಿಂತನೆಗಳ ಬಗ್ಗೆ ವಿಶೇಷ ಪ್ರಾಮುಖ್ಯತೆ ನೀಡುವರು. ತಮ್ಮನ್ನು ತಾವು ಒಂದು ಸೀಮಿತ ರೇಖೆಯ ಒಳಗೆ ಇರಿಸಿಕೊಳ್ಳಲು ಬಯಸುವರು. ಯಾವುದೇ ವಿಷಯಗಳ ಬಗ್ಗೆ ಒಂದು ಅಭಿಪ್ರಾಯ ಹೊಂದಲು ಅಥವಾ ನಿರ್ಧಾರ ಕೈಗೊಳ್ಳಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುವರು.

ವೃಶ್ಚಿಕ

ವೃಶ್ಚಿಕ

ಇವರು ಇತರರು ತಮ್ಮ ಬಗ್ಗೆ ಎಷ್ಟು ಸುಂದರವಾದ ಅಭಿಪ್ರಾಯವನ್ನು ಹೊಂದಿದ್ದಾರೆ? ಅಥವಾ ಯಾವ ಭಾವನೆಗಳನ್ನು ಹೊಂದಬಹುದು ಎನ್ನುವುದರ ಬಗ್ಗೆ ಯಾವುದೇ ಚಿಂತನೆ ನಡೆಸುವುದಿಲ್ಲ. ಬದಲಿಗೆ ತಮ್ಮ ಮನಸ್ಸಿನಲ್ಲಿ ಇರುವ ವಿಷಯಗಳ ಸಾಧನೆ ಅಥವಾ ಕಾರ್ಯರೂಪಕ್ಕೆ ತರಲು ಯಾವೆಲ್ಲಾ ಪ್ರಯತ್ನ ಮಾಡಬೇಕು ಎನ್ನುವುದರ ಬಗ್ಗೆಯೇ ಹೆಚ್ಚಿನ ಚಿಂತನೆ ನಡೆಸುವರು. ಇದು ಇತರರಿಗೆ ಒಂದುಬಗೆಯ ಗಂಭೀರ ಸ್ವಭಾವ ಹಾಗೂ ಬಿಗುಮಾನದ ಸಂಗತಿಯಂತೆ ತೋರುವುದು.

ತುಲಾ

ತುಲಾ

ಎಲ್ಲಾ ಸಂಗತಿಯಲ್ಲೂ ಸಮಾನತೆಯನ್ನು ಕಾಣಲು ಬಯಸುವ ವ್ಯಕ್ತಿಗಳು ತುಲಾ ರಾಶಿಯ ವ್ಯಕ್ತಿಗಳು. ಇವರಿಗೆ ಒಗ್ಗ ಪರಿಸ್ಥಿತಿ ಅಥವಾ ವಿಷಯಗಳು ಎದುರಾದರೆ ಇವರು ತಮ್ಮನ್ನು ತಾವು ಒಂದು ಅಂತರದಲ್ಲಿ ಇರಿಸಿಕೊಳ್ಳಲು ಬಯಸುವರು. ಒಂದು ಬಗೆಯ ಬಿಗುಮಾನಕ್ಕೆ ಒಳಗಾಗುತ್ತಾರೆ ಎಂದು ಹೇಳಬಹುದು. ಇವರು ತಮಗೆ ಅನುಚಿತ ಸಂಗತಿ ಎಂದು ಭಾವಿಸಿದರೆ ಅದರ ಕುರಿತು ಕಿರುಚಾಡಬಹುದು. ಸೂಕ್ತ ಎನಿಸದ ಸಂಗತಿಯಲ್ಲಿ ಇರುವ ತಮ್ಮನ್ನು ತಾವು ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳುತ್ತಾರೆ.

ತುಲಾ

ತುಲಾ

ಇವರು ಸಾಕಷ್ಟು ಸಮಯ ಹೊರಗೆ ಹೋಗುವ ಹಾಗೂ ಇತರೊಂದಿಗೆ ಬೆರೆಯುವ ವ್ಯಕ್ತಿಗಳಾಗಿರುತ್ತಾರೆ. ಕೆಲವೊಮ್ಮೆ ತಮ್ಮ ಭಾವನಾತ್ಮಕ ಪ್ರಕೋಪಗಳನ್ನು ಹಿಡಿದಿಟ್ಟುಕೊಳ್ಳಲು ಬಯಸುವರು. ಎಲ್ಲಾ ವಿಷಯದಲ್ಲಿ ಸ್ಪಷ್ಟತೆ ಹಾಗೂ ಸಮಾನತೆ ಬಯಸುವರು. ಅದು ಅವರ ಚಿಂತನೆಗೆ ಸೂಕ್ತವಾಗಿ ನೆರವೇರದಂತೆ ಕಂಡುಬಂದರೆ ಆ ಕ್ಷಣಕ್ಕೆ ದೂರ ಸರಿಯಲು ಬಯಸುವರು. ಅದು ಕೆಲವೊಮ್ಮೆ ಇತರರಿಗೆ ಅವಿವೇಕತನ ಎಂದು ತೋರುವುದು. ಅಲ್ಲದೆ ಸಾಕಷ್ಟು ಬಿಗುಮಾನದ ವ್ಯಕ್ತಿ ಎನ್ನುವ ರೀತಿಯಲ್ಲಿ ಶೋಭಿಸುವುದು.

English summary

these 6 Zodiac Signs Who Are Cautious And Reserved

When people hold something back, it gives them an air of mystery and makes us want to know more about them. They’re okay not being the center of attention because they’re comfortable enough in their own skin. And though some people feel unnerved by reserved people because it makes them feel insecure, it doesn't mean the cautious zodiac signs are judgmental about it.
X
Desktop Bottom Promotion