Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ಮೂರು ರಾಶಿಯವರು ಹುಟ್ಟಿನಿಂದಲೇ ಅತೀಂದ್ರಿಯ ಗುಣ ಹೊಂದಿದ್ದಾರೆ!
ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಅಲ್ಲಿ ನಡೆಯುವ ಬದಲಾವಣೆಯನ್ನು ಸಾಮಾನ್ಯವಾಗಿ ನಮ್ಮ ಪಂಚೇಂದ್ರಿಯಗಳ ಸಹಾಯದಿಂದ ವೀಕ್ಷಿಸುತ್ತೇವೆ. ಪ್ರತಿಯೊಂದು ಇಂದ್ರಿಯಗಳು ಸಮನಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ನಾವು ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುವುದು. ಇಂದ್ರೀಯಗಳಲ್ಲಿ ಒಂದು ಇಂದ್ರಿಯ ಕೆಲಸ ನಿರ್ವಹಿಸುವಲ್ಲಿ ಎಡವುತ್ತದೆ ಅಥವಾ ಕಾರ್ಯನಿರ್ವಹಿಸುವುದಿಲ್ಲ ಎಂದಾದರೆ ನಾವು ಅಂಗವಿಕಲತೆಯನ್ನು ಅನುಭವಿಸಬೇಕಾಗುವುದು.
ಆದರೆ ಕೆಲವು ವ್ಯಕ್ತಿಗಳಿಗೆ ಪಂಚೇಂದ್ರಿಯಗಳಲ್ಲದೆ ವಿಶೇಷವಾದ ಆರನೇ ಇಂದ್ರಿಯ ಕೆಲಸ ಮಾಡುತ್ತದೆ. ಆ ಆರನೇ ಅತೀಂದ್ರಿಯದ ಸಹಾಯದಿಂದ ಮುಂದೆ ನಡೆಯಬಹುದಾದ ಸನ್ನಿವೇಶಗಳು ಅಥವಾ ಸಂಕಷ್ಟಗಳನ್ನು ಅರಿಯುತ್ತಾರೆ. ಇವರು ತಮ್ಮ ಬುದ್ಧಿವಂತಿಕೆ ಹಾಗೂ ಸೂಕ್ಷ್ಮ ಗುಣಗಳ ಸಹಾಯದಿಂದ ಈಗ ಕೈಗೊಂಡ ಕಾರ್ಯದ ಪರಿಣಾಮ ಹೀಗೇ ಇರುತ್ತದೆ ಎಂದು ಊಹಿಸಬಲ್ಲವರಾಗಿರುತ್ತಾರೆ ಎನ್ನಲಾಗುವದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರಿಗೆ ಹುಟ್ಟಿನಿಂದಲೇ ಅತೀಂದ್ರಿಯ ಗುಣವು ಇರುತ್ತದೆ. ಅದಕ್ಕೆ ಅವರ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವ ಎಂದು ಹೇಳಲಾಗುವುದು. ನಿಮಗೂ ಅತೀಂದಿಯ ಗುಣಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ....

ಮೀನ
ಮೀನರಾಶಿಯವರು ಅತೀಂದ್ರಿಯ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಈ ರಾಶಿಯಲ್ಲಿ ಜನಿಸಿದವರಿಗೆ ಇದೊಂದು ಅಮೋಘವಾದ ಶಕ್ತಿ ಅಥವಾ ವರದಾನ ಎನ್ನಬಹುದು. ಸೂಕ್ಷ್ಮ ಗ್ರಹಿಕೆ ಹಾಗೂ ಸುಲಭವಾಗಿ ವಿಷಯಗಳನ್ನು ವಿಮರ್ಶೆ ಮಾಡಬಲ್ಲರು. ಸನ್ನಿವೇಶಗಳಿಗೆ ತಕ್ಕಂತೆ ಹೀಗೆ ಆಗಬಹುದು ಎಂದು ಸುಲಭವಾಗಿ ಊಹಿಸಬಲ್ಲರು.

ಮೀನ
ಇವರ ಆಲೋಚನೆ ಮತ್ತು ಕನಸುಗಳು ವಿಶೇಷವಾಗಿರುತ್ತವೆ. ಈ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ನಡೆಯುವ ಬಹುತೇಕ ಸಮಸ್ಯೆಗಳನ್ನು ಹಾಗೂ ಅದೃಷ್ಟವನ್ನು ಮೊದಲೇ ಊಹಿಸಿರುತ್ತಾರೆ ಎಂದು ಹೇಳಲಾಗುವುದು.

ವೃಶ್ಚಿಕ
ಇವರು ಜೀವನದಲ್ಲಿ ಎಷ್ಟೇ ಸಂಕಷ್ಟಗಳನ್ನು ಅನುಭಿಸಿದರೂ ಅದನ್ನು ಸಹಿಸಿಕೊಂಡು ಮುನ್ನಡೆಯುವ ಹಾಗೂ ಯಶಸ್ಸನ್ನು ತಲುಪುವಂತಹ ಬುದ್ಧಿವಂತಿಕೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ಬಹಳ ಧೈರ್ಯದಿಂದ ಎದುರಿಸಬಲ್ಲ ಕಠಿಣ ಮನಸ್ಸಿನವರು ಎನ್ನಲಾಗುವುದು. ಇವರು ಮಾನಸಿಕವಾಗಿ ಅಪಾರ ಜ್ಞಾನವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಅದನ್ನು ನಿಭಾಯಿಸುವ ಅಥವಾ ನಿವಾರಿಸುವ ಕಲೆ ನಮಗಿರಬೇಕು ಎಂದು ಹೇಳುವವರು ಇವರು. ಇವರಿಗೆ ತಮ್ಮ ನಿಷ್ಠ ಹಾಗೂ ಕೆಲಸದಲ್ಲಿ ಅಪಾರ ನಂಬಿಕೆಯಿರುತ್ತದೆ. ಜೊತೆಗೆ ಅತೀಂದ್ರಿಯ ಶಕ್ತಿಯಿಂದಾಗಿ ಸಮಸ್ಯೆಗಳಿಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವರು.

ಕರ್ಕ
ಇವರು ಸಾಮಾನ್ಯವಾಗಿ ವ್ಯಕ್ತಿಯ ಮನಸ್ಸಿನಲ್ಲಿ ಅಥವಾ ಆಂತರ್ಯದಲ್ಲಿ ಏನಿದೆ ಎನ್ನುವದನ್ನು ನೇರವಾಗಿ ಹೇಳುತ್ತಾರೆ. ನಿಮ್ಮ ಸುತ್ತಲಿನ ಪರಿಸರದ ಪ್ರಭಾವದಿಂದ ನೀವು ಯಾವ ರೀತಿಯ ಅನುಭವವನ್ನು ತಳೆಯುವಿರಿ ಹಾಗೂ ನಿಮ್ಮ ಭಾವನೆ ಹೇಗಿರುತ್ತದೆ ಎನ್ನುವುದನ್ನು ಇವರು ಬಹಳ ಸುಲಭವಾಗಿ ಹೇಳಬಲ್ಲರು. ಇವರಲ್ಲಿ ಅನುಭೂತಿ ಮತ್ತು ಅಂತಃಪ್ರಜ್ಞೆ ಆಕಾಶದಂತೆ ವಿಸ್ತಾರವಾಗಿರುತ್ತದೆ ಎನ್ನಲಾಗುವುದು. ಪ್ರತಿಯೊಬ್ಬರಿಗೂ ಇವರು ಸಹಕಾರ ಹಾಗೂ ಸಹಾಯ ಮಾಡುವುದರ ಮೂಲಕ ಒಳಿತನ್ನು ಬಯಸುವರು. ಇವರು ಸಮಯ ಹಾಗೂ ಕಂಪನಗಳನ್ನು ಸಹ ಬಲು ಸುಲಭವಾಗಿ ಗ್ರಹಿಸಬಲ್ಲರು. ತಮ್ಮ ಅತೀಂದ್ರಿಯ ಗುಣದಿಂದಾಗಿಯೇ ಎಲ್ಲರಲ್ಲೂ ಪ್ರೀತಿ ಹಾಗೂ ವಿಶ್ವಾಸದ ವರ್ತನೆಯನ್ನು ತೋರುವರು.



Click it and Unblock the Notifications