For Quick Alerts
ALLOW NOTIFICATIONS  
For Daily Alerts

ರಾಶಿ ಭವಿಷ್ಯ: ಪ್ರತಿಯೊಂದು ರಾಶಿಯ ಎರಡು ಮುಖಗಳು

By Hemanth
|

ಸುಖದುಃಖ, ಸೋಲು ಗೆಲುವು ಇವುಗಳು ಇದ್ದರೇನೇ ಜೀವನ. ಒಂದೇ ಕಡೆ ಪ್ರತೀ ದಿನ ಪ್ರವಾಸ ಹೋದರೆ ಹೇಗೆ ಬೇಸರ ಆಗುತ್ತದೆಯಾ ಅದೇ ರೀತಿ ಜೀವನದಲ್ಲಿ ಕೇವಲ ದುಃಖ ಅಥವಾ ಸುಖ ಮಾತ್ರ ಇದ್ದರೆ ಆಗ ಮನುಷ್ಯನಿಗೆ ಅನುಭವ ಎನ್ನುವುದು ಸಿಗುವುದಿಲ್ಲ. ನೋವಿಲ್ಲದೆ ನಮಗೆ ಸಂತೋಷ ಸಿಗಲ್ಲ,ಸಾವಿಲ್ಲದೆ ಜೀವನ ಬರಲ್ಲ, ಸೋಲಿಲ್ಲದೆ ಗೆಲುವು ಸಿಗಲ್ಲ, ಕೆಟ್ಟದು ಇಲ್ಲದೆ ಒಳ್ಳೆಯದು ಬರಲ್ಲ. ಇದು ಏನೆಂದು ನಿಮಗೆ ಅರ್ಥವಾಗಿರಬಹುದು.

ಅದೇ ರೀತಿ ಪ್ರತೀ ಹನ್ನೆರಡು ರಾಶಿಗಳಲ್ಲೂ ಕೆಡುಕು ಮತ್ತು ಒಳಿತುಗಳು ಇದ್ದೇ ಇರುವುದು. ಪ್ರತಿಯೊಬ್ಬರಲ್ಲೂ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಇರುವುದು. ಆದರೆ ನಾವು ಬಲ ಹಾಗೂ ದುರ್ಬಲತೆಗಳನ್ನು ತಿಳಿದುಕೊಂಡು ಸಮೃದ್ಧ ಜೀವನ ನಡೆಸಬೇಕು. ಈ ಲೇಖನದಲ್ಲಿ ನಾವು ನಿಮಗೆ ಪ್ರತಿಯೊಂದು ರಾಶಿಗಳ ಎರಡು ಮುಖಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಪ್ರತಿಯೊಂದು ರಾಶಿಯವರು ಬೆಳಕು ಹಾಗೂ ನೆರಳು ಕೂಡ ಎನ್ನಬಹುದು.

ನೀವು ರಾಶಿಚಕ್ರಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಇದರಲ್ಲಿ ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ರಾಶಿಚಕ್ರದ ಬಗ್ಗೆ ತಿಳಿದು ಮುಂದೆ ಜೀವನದಲ್ಲಿ ಒಳ್ಳೆಯ ದಾರಿ ಹಿಡಿಯಬಹುದು. ಪ್ರತಿಯೊಬ್ಬರಲ್ಲೂ ದೌರ್ಬಲ್ಯಗಳು ಎನ್ನುವುದು ಇದ್ದೇ ಇರುತ್ತದೆ. ಆದರೆ ಅದನ್ನು ಮೀರಿ ಮುನ್ನಡೆಯಬೇಕು....

ಮೇಷ

ಮೇಷ

ಮೇಷ ರಾಶಿಯವರು ಜೀವನದ ಶಕ್ತಿಯ ಹರಿಕಾರ ಹಾಗೂ ರುಚಿಕಾರ. ಇವರು ತುಂಬಾ ಅತ್ಯುತ್ಸಾಹಿಗಳು, ಪ್ರೇರಣಾತ್ಮಕವಾಗಿರುವ ಮತ್ತು ಮಹತ್ವಾಕಾಂಕ್ಷೆ ಹೊಂದಿರುವವರು. ಇವರು ನಡೆದುಕೊಂಡು ಹೋದರೆ ಕೋಣೆಯು ಬೆಳಕಾಗುವುದು. ಇವರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಬಲವಾದ ಆತ್ಮಸ್ಥೈರ್ಯ ಹೊಂದಿರುವ ವ್ಯಕ್ತಿಗಳು. ಇವರು ತಮಗಾಗಿ ಸಾಧನೆ ಮಾಡುವರು ಮತ್ತು ಸವಾಲುಗಳಿಗೆ ಹಿಂಜರಿಯಲ್ಲ. ಇನ್ನೊಂದು ಕಡೆಯಲ್ಲಿ ಇವರಿಗೆ ಬೇಗನೆ ಕಿರಿಕಿರಿಯಾಗುವುದು, ತುಂಬಾ ಮನಸ್ಥಿತಿ ಬದಲಾಗುವ, ಸೊಕ್ಕಿನ ಮತ್ತು ಆಕ್ರಮಣಕಾರಿ ಪ್ರವೃತ್ತಿಯವರು. ಇವರು ತಮ್ಮದೇ ಆದ ದಾರಿಯಲ್ಲಿ ಸಾಗದೇ ಇದ್ದರೆ ಆಗ ಇವರು ಕೋಪ ಗೊಳ್ಳುವರು ಮತ್ತು ಬೇರೆಯವರ ಮಾತು ಕೇಳಲು ಇವರಿಗೆ ತುಂಬಾ ಸಮಸ್ಯೆ ಯಾಗುವುದು. ಈ ನಡವಳಿಕೆಗಳನ್ನು ಇವರು ಸರಿಪಡಿಸಿಕೊಂಡರೆ ಮೇಷ ರಾಶಿಯವರು ಬೇರೆಯವರಿಗೆ ಬೆಳಕಾಗಬಲ್ಲರು.

ವೃಷಭ

ವೃಷಭ

ವೃಷಭ ರಾಶಿಯವರು ತಮ್ಮ ಜೀವನದಲ್ಲಿ ಸ್ಥಿರತೆ ಸಾಧಿಸಲು ಎತ್ತಿನಂತೆ ದುಡಿಯುವರು. ಇವರು ಒಳ್ಳೆಯ ಸಂಬಳ ಬರುವ ಉದ್ಯೋಗದಿಂದ ಹಿಡಿದು ತಮಗೆ ಹೊಂದುವ ಸಂಗಾತಿಗಾಗಿ ತುಂಬಾ ಪರಿಶ್ರಮಪಡುವರು. ತಮ್ಮನ್ನು ಪ್ರೀತಿ ಸುವವರಿಗೆ ಇವರು ಬದ್ಧರಾಗಿರುವರು ಮತ್ತು ದೀರ್ಘಕಾಲದ ಸಂಬಂಧದಲ್ಲಿ ಇವರು ನಂಬಿಕೆಯುಳ್ಳವರು. ಇವರು ತಮಗಾಗಿ ಮತ್ತು ತಮ್ಮ ಪ್ರೀತಿಪಾತ್ರರಿಗಾಗಿ ತುಂಬಾ ಕಠಿಣವಾಗಿ ಕೆಲಸ ಮಾಡುವರು. ಇವರು ತುಂಬಾ ಪ್ರೀತಿಪಾತ್ರರು, ವಿಶ್ವಾಸಾರ್ಹ ಮತ್ತು ಸರಳ ವ್ಯಕ್ತಿಯಾಗಿರುವರು.ಸಾಮಾನ್ಯ ಎತ್ತಿನಂತೆ ವೃಷಭ ರಾಶಿಯವರು ತುಂಬಾ ಹಠಮಾರಿ, ಕಠಿಣ ಮತ್ತು ಹೊಂದಾಣಿಕೆಯಾಗದವರು. ಇವರು ಸಂಬಂಧದಲ್ಲಿ ಸೌಮ್ಯಸೂಚಕರಾಗಿರುವರು ಮತ್ತು ಸಮಯಕ್ಕೆ ತಕ್ಕಂತೆ ಮೇಲುಗೈ ಪಡೆಯುವರು.

ಮಿಥುನ

ಮಿಥುನ

ಒಬ್ಬ ವ್ಯಕ್ತಿಯ ಎರಡು ಮುಖಗಳಿಗೆ ಈ ರಾಶಿಯವರು ಸಾಕ್ಷಿ. ಅವಳಿಗಳೆಂದು ಕರೆಯಲ್ಪಡುವ ಕಾರಣದಿಂದಾಗಿ ಮಿಥುನ ರಾಶಿಯವರು ಕೆಲವೊಂದು ಸಲ ಎರಡು ರೀತಿಯ ವ್ಯಕ್ತಿತ್ವ ಪ್ರದರ್ಶಿಸುವರು. ಒಂದು ಕಡೆಯಲ್ಲಿ ಮಿಥುನ ರಾಶಿಯವರು ತುಂಬಾ ಸ್ನೇಹಪರ, ಮುಕ್ತಮನಸ್ಸಿನ, ತಿರುಗಾಡುವ, ಸಾಮಾಜಿಕವಾಗಿ ಮುಖ ಗಂಟಿಕ್ಕಿಕೊಳ್ಳುವ ವ್ಯಕ್ತಿಗಳೆಂದು ಪರಿಗಣಿಸಲ್ಪಟ್ಟಿರುವರು. ಮಿಥುನ ರಾಶಿಯವರದ್ದು ಗಾಳಿಯ ರಾಶಿಯಾಗಿರುವ ಕಾರಣದಿಂದಾಗಿ ಇವರಿಗೆ ಯಾವತ್ತೂ ಜೀವನದಲ್ಲಿ ತಡೆ ಇರಲ್ಲ.ಅದಾಗ್ಯೂ ಅವಳಿಗಳು ಬೇಗನೆ ಆಯಾಸಗೊಳ್ಳುವರು. ಇದೇ ವೇಳೆ ಬಾಹ್ಯವಾಗುವರು ಮತ್ತು ಹಿಂದುಮುಂದೆ ನೋಡದೆ ನಿರ್ಧಾರ ತೆಗೆದುಕೊಳ್ಳುವರು. ಇವರು ತುಂಬಾ ಒತ್ತಡ, ಖಿನ್ನತೆ ಅಥವಾ ಆತಂಕಕ್ಕೆ ಒಳಗಾದಾಗ ಇವರ ಕಪ್ಪು ಮುಖವು ಕಂಡುಬರುವುದು. ಇವರ ನಡವಳಿಕೆ ಎರಡು ವಿಧದಲ್ಲಿರುವ ಕಾರಣದಿಂದ ಬೇಗನೆ ಆಯಾಸಗೊಳ್ಳುವರು.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರು ಕಡಿಮೆ ಸ್ವಾಭಿಮಾನ ಮತ್ತು ತಮ್ಮನ್ನು ಯಾವುದು ಅದ್ಭುತ ವ್ಯಕ್ತಿಗಳನ್ನಾಗಿ ಮಾಡಬಹುದು ಎನ್ನುವುದನ್ನು ಮರೆತ್ತಿದ್ದರೂ ಇವರು ತುಂಬಾ ಧನಾತ್ಮಕ ಲಕ್ಷಣಗಳನ್ನು ಹೊಂದಿರುವರು. ಇವರು ಕಾಳಜಿ ಇರುವ, ದಯಾಮಯಿ, ನಿಷ್ಠ, ಪ್ರಾಮಾಣಿಕ ಮತ್ತು ಆಳ ಆತ್ಮವುಳ್ಳವರು. ಇವರು ಒಳ್ಳೆಯ ಕೇಳುಗರಾಗಿರುವ ಮತ್ತು ನಿಮ್ಮ ಬಗ್ಗೆ ತಿಳಿದಿದ್ದರೆ ಅಳಲು ಭುಜ ಕೂಡ ನೀಡುವರು. ಇವರು ಜನರ ಮುಂದೆ ತಮ್ಮನ್ನು ಮುಕ್ತವಾಗಿ ಹೇಳಿಕೊಳ್ಳಲ್ಲ. ಇವರು ತುಂಬಾ

ಆಲೋಚನೆ ಮಾಡಿ ನಿಮಗೆ ನೆರವಾಗಲು ಏನು ಮಾಡಬಹುದು ಎಂದು ಹೇಳುವರು. ಇವರು ತುಂಬಾ ಕ್ರಿಯಾತ್ಮಕ, ತುಂಬಾ ಪ್ರಾಮಾಣಿಕ, ಸೂಕ್ಷ್ಮ ಮತ್ತು ಸುಂದರ ವ್ಯಕ್ತಿಗಳು. ಆದರೆ ಇವರನ್ನು ಯಾವಾಗಲೂ ಪರಿಶುದ್ಧ ಮತ್ತು ದಾನಮಾಡುವ ಗುಣದಿಂದ ತಪ್ಪಾಗಿ ಅರ್ಥ ಮಾಡಿ ಕೊಳ್ಳುವರು.ಈ ರಾಶಿಯವರಲ್ಲಿ ಕೂಡ ಕೆಲವೊಂದು ಕೆಟ್ಟ ಗುಣಗಳು ಇವೆ ಮತ್ತು ಇದರ ಬಗ್ಗೆ ಜನರಿಗೆ ತಿಳಿದಿಲ್ಲ. ಇವರು ತಮ್ಮ ಸುತ್ತಲಿನವರ ಮುಂದೆ ತುಂಬಾ ಸಿಟ್ಟಾಗುವ ಕಾರಣದಿಂದಾಗಿ ಬೇಗನೆ ಆತಂಕ, ಖಿನ್ನತೆ ಮತ್ತು ಇತರ ಮಾನಸಿಕ ಕಾಯಿಲೆಗಳಿಗೆ ಗುರಿಯಾಗುವರು. ಇವರನ್ನು ಯಾರೂ ಅರ್ಥ ಮಾಡಿಕೊಳ್ಳಲ್ಲ ಎನ್ನುವ ಭಾವನೆ ಕಾಡುವ ಕಾರಣದಿಂದಾಗಿ ಇವರು ತುಂಬಾ ಏಕಾಂಗಿಯಾದಂತೆ ಭಾವಿಸುವರು. ಇವರು ಸ್ವಾರ್ಥಿಗಳೆಂದು ಬೇರೆಯವರು ಭಾವಿಸುವರು. ಒಂದು ಹಂತದಲ್ಲಿ ಇದು ನಿಜ ಕೂಡ.

ಸಿಂಹ

ಸಿಂಹ

ಸಿಂಹವು ಜನ್ಮತಃ ನಾಯಕನ ಗುಣ ಹೊಂದಿದೆ ಮತ್ತು ಗುರುತಿಸಿಕೊಳ್ಳಲು ಇವರು ಏನು ಬೇಕಾದರೂ ಮಾಡಬಹುದು. ಇವರು ತುಂಬಾ ಮಹತ್ವಾಕಾಂಕ್ಷಿ, ತಿರುಗಾಡುವ, ತಮಾಷೆ, ಆಕರ್ಷಣೀಯ, ಆತ್ಮವಿಶ್ವಾಸದ ಜನರಾಗಿರುವರು. ಇವರು ಮೇಷ ರಾಶಿಯವರಂತೆ ಗುಣಗಳನ್ನು ಹೊಂದಿರುವರು.ಸಿಂಹ ರಾಶಿಯವರು ಇನ್ನೊಂದು ಕಡೆಯಲ್ಲಿ ತುಂಬಾ ಸ್ವಾರ್ಥಿಗಳು, ಧೈರ್ಯಶಾಲಿಗಳು, ಅತಿಯಾಗಿ ನಾಟಕ ಮಾಡುವ ಮತ್ತು ಇತರರೊಂದಿಗೆ ಕೆಲಸ ಮಾಡಲು ಕಲಿಯದೆ ಇರುವಾಗ ತುಂಬಾ ಸೋಗಿನ ವ್ಯಕ್ತಿಗಳಾಗುವರು. ಸಿಂಹ ರಾಶಿಯವರು ತುಂಬಾ ಸ್ನೇಹಪರ ವ್ಯಕ್ತಿಗಳಾಗಿರುವರು ಮತ್ತು ಕೆಲವೊಂದು ಸಲ ಬಾಹ್ಯವಾಗಿರುವರು.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ತುಂಬಾ ವಿವರಣಾತ್ಮಕ ವ್ಯಕ್ತಿಗಳು ಮತ್ತು ಪರಿಹಾರ ಕಂಡುಕೊಳ್ಳಲು ಇವರು ಸಾವಿಗೆ ಹತ್ತಿರವಾಗಲ್ಲರು. ಕ್ರಮಬದ್ಧ, ನಿಖರ, ವಿಶ್ಲೇಷಣಾತ್ಮಕ ಮತ್ತು ತಾರ್ಕಿಕವಾಗಿರುವರು. ಇವರು ಸಮಸ್ಯೆಗಳನ್ನು ಬೇಗನೆ ಪರಿಹರಿಸುವರು ಮತ್ತು ಒಳ್ಳೆಯ ಕೇಳುಗರು. ಇವರು ಅದ್ಭುತವಾದ ತಾಳ್ಮೆ ಉಳ್ಳವರು.ಆದರೆ ಇವರು ಯಾವುದೇ ವಿಚಾರವನ್ನು ಅತಿಯಾಗಿ ವಿಶ್ಲೇಷಿಸುವರು ಮತ್ತು ಜೀವನವನ್ನು ತುಂಬಾ ಗಂಭೀರವಾಗಿ ಸ್ವೀಕರಿಸುವರು. ಇವರು ಸೋಲುವುದನ್ನು

ಇಷ್ಟಪಡಲ್ಲ ಮತ್ತು ಹರಿವಿನೊಂದಿಗೆ ಹೋಗುವರು. ಇವರು ಸಮತೋಲನ ಮತ್ತು ಸ್ಥಿರವಾಗಿರಲು ಇವರಿಗೆ ಒಂದು ಯೋಜನೆ ಮತ್ತು ದೈನಂದಿನ ಚಟುವಟಿಕೆ ಬೇಕಾಗಿರುವುದು. ಇದರಿಂದಾಗಿ ಇವರು ತುಂಬಾ ಕಠಿಣ ಹಾಗೂ ಜಗ್ಗದ ವ್ಯಕ್ತಿಗಳಾಗುವರು. ಇವರ ತಲೆಯಲ್ಲಿ ಸೊಕ್ಕಿನಂತೆ ಇರುವ ಕಾರಣದಿಂದಾಗಿ ಇವರು ತುಂಬಾ ಕಾಳಜಿ ಇಲ್ಲದೇ ಇರುವ ವ್ಯಕ್ತಿಗಳಾಗುವರು. ಇವರು ತಮಗೋಸ್ಕರ ಮತ್ತು ಇತರರಿಗೆ ತುಂಬಾ ಟೀಕಿಸುವರು.

ತುಲಾ

ತುಲಾ

ತುಲಾ ರಾಶಿಯು ಮತ್ತೊಂದು ಗಾಳಿಯ ಚಿಹ್ನೆ. ಇವರು ಜೀವನದಲ್ಲಿ ಶಾಂತಿ ಮತ್ತು ತಾವು ಭೇಟಿಯಾಗುವ ಪ್ರತಿಯೊಬ್ಬರಿಗೂ ಗೌರವ ಹಾಗೂ ದಯೆ ತೋರಿಸುವರು. ಇವರು ಬೇರೆಯವರಿಗೆ ನೆರವಾಗುವುದನ್ನು ಇಷ್ಟಪಡುವರು ಮತ್ತು ಇವರು ಶ್ರೇಷ್ಠ ಮಾನವತವಾದಿಗಳು. ಇವರ ಚಿಹ್ನೆಯಾಗಿರುವ ತೂಕದಂತೆ ಇವರು ಜೀವನದಲ್ಲಿ ಸಮತೋಲನ ಕಾಯ್ದುಕೊಂಡು ದಯೆಯ ಸ್ವಭಾವ ಜೀವನದಲ್ಲಿ ಮುನ್ನಡೆಯುವಂತೆ ಮಾಡುವುದು. ಎಲ್ಲಾ ಸಮಯದಲ್ಲಿ ತೂಕವನ್ನು ಸಮತೋಲನದಲ್ಲಿ ಇಡುವುದು ಪ್ರಾಯೋಗಿಕವಲ್ಲ. ತುಲಾ ರಾಶಿಯವರು ತಮ್ಮ ಶಾಂತಿಯ ಮನೋಭಾವದಿಂದಾಗಿ ಯಾವುದೇ ಕಾರಣಕ್ಕೂ ಜಗಳ ಕಡೆಗಣಿಸುವರು. ಕೆಲವೊಂದು ಸಂದರ್ಭದಲ್ಲಿ ಇದು ಶ್ರೇಷ್ಠ ಗುಣವಾಗಿರುವುದು. ಆದರೆ ಕೆಲವೊಂದು ಸಲ ವಾಗ್ವಾದಗಳು ಜೀವನದಲ್ಲಿ ನಡೆಯುತ್ತದೆ. ಇತರರಿಗೋಸ್ಕರ ಹೇಗೆ ಮಾತನಾಡಬೇಕೆಂದು ತುಲಾ ರಾಶಿಯವರು ಕಲಿಯಬೇಕು. ಇವರು ತುಂಬಾ ಪ್ರತ್ಯೇಕವಾಗಿರುವ ಕಾರಣದಿಂದ ಇವರ ಹತ್ತಿರ ಹೋಗುವುದು ಅಷ್ಟು ಸುಲಭವಲ್ಲ.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ಪಟ್ಟಿಯಲ್ಲಿರುವ ಮತ್ತೊಂದು ನೀರಿನ ಚಿಹ್ನೆ ವೃಶ್ಚಿಕ. ಇವರ ಮನಸ್ಸು ಅರ್ಥ ಮಾಡಿಕೊಂಡಿರುವ ಜನರಿಗೆ ಇವರಲ್ಲಿ ತಡೆಯಿಲ್ಲದ ಹಾಸ್ಯ ಮತ್ತು ಚುರುಕಾದ ಭಾವನೆಯಿರುವುದು. ಇವರು ತುಂಬಾ ಭಾವನಾತ್ಮಕವಾಗಿರುವ ವ್ಯಕ್ತಿಯಾಗಿದ್ದರೂ ಜನರು ಇದರ ಲಾಭ ಪಡೆಯಬಾರದು ಎನ್ನುವ ಕಾರಣಕ್ಕಾಗಿ ಇದನ್ನು ತಡೆ ಯಿಡಿಯುವರು. ವೃಶ್ಚಿಕ ರಾಶಿಯವರು ಅತ್ಯುತ್ಸಾಹಿ, ಸಂಘಟಿತ, ಸಂಪನ್ಮೂಲ ಮತ್ತು ಸ್ವತಂತ್ರ ವ್ಯಕ್ತಿಯಾಗಿರುವರು. ಇವರು ಒಳ್ಳೆಯ ಸ್ಥಿತಿ ಪಡೆದರೆ ತುಂಬಾ ಪ್ರಾಮಾಣಿಕ ಹಾಗೂ ಅಲವಂಬಿಯಾಗಿರುವರು. ಇನ್ನೊಂದು ಕಡೆಯಲ್ಲಿ ವೃಶ್ಚಿಕ ರಾಶಿಯವರು ಕುಶಲ, ಪ್ರತೀಕಾರ ಸ್ವಭಾವವು ಇದೆ. ಇವರಿಗೆ ಮೋಸ ಮಾಡುವುದು ಮತ್ತು ಸವಾಲೊಡ್ಡುವುದು ಇಷ್ಟವಿಲ್ಲ. ಇವರು ತಾಳ್ಮೆ ಕಳೆದುಕೊಂಡು, ಬೊಬ್ಬೆ ಹಾಕುವ ಬದಲು ಅಲ್ಲಿಂದ ಮುಂದೆ ಸಾಗಿ ಪ್ರತೀಕಾರದ ಬಗ್ಗೆ ಯೋಚನೆ ಮಾಡುವರು. ವೃಶ್ಚಿಕ ರಾಶಿಯವರು ನಿಮಗೆ ತಿಳಿದಿದ್ದರೆ ಅವರು ಹಿಂದಿನದನ್ನು ಮರೆಯುವುದಿಲ್ಲವೆನ್ನುವುದು ನೆನಪಿರಲಿ.

ಧನು

ಧನು

ಬೇರೆ ಬೆಂಕಿಯ ಚಿಹ್ನೆಗಳಂತೆ ಧನು ರಾಶಿಯವರು ಕೂಡ ಜನರನ್ನು ಬೆಂಕಿಯ ಕಡೆಗೆ ಪತಂಗವು ಸೆಳೆಯುವಂತೆ ಸೆಳೆಯಲು ಪ್ರಯತ್ನಿಸುವರು. ಇವರು ಅವಕಾಶವಾದಿಗಳು, ಸಾಹಸಪ್ರವೃತ್ತಿಯವರು, ತಮಾಷೆಯ ಮತ್ತು ಪ್ರೇರಣಾತ್ಮಕವಾಗಿರುವರು. ಅದಾಗ್ಯೂ ಇವರು ತಮ್ಮ ಕೆಲಸದ ಕಡೆ ಗಮನಹರಿಸಲು ತುಂಬಾ ಕಷ್ಟಪಡುವರು ಮತ್ತು ಯಾವುದೇ ನಿರ್ದೇಶನವಿಲ್ಲದೆ ಒಂದರಿಂದ ಮತ್ತೊಂದಕ್ಕೆ ಹಾರುತ್ತಲಿರುವರು. ಇವರು ಬೇಗನೆ ಸಿಟ್ಟಿ ಗೊಳಗಾಗುವರು ಮತ್ತು ಸುಲಭವಾಗಿ ಕೆರಳುವರು. ಸ್ಪಷ್ಟವಾದ ಗುರಿಯಿಲ್ಲದೆ ಇವರು ವಿಶ್ರಾಂತಿಯಿಲ್ಲದಂತೆ ಮತ್ತು ಬೇಸರಗೊಳ್ಳುವರು. ಕ್ಷೋಭೆಗೊಳಗಾದಾಗ ಏನು ಮಾಡಬೇಕೆಂದು ಇವರಿಗೆ ತಿಳಿದಿರುವುದಿಲ್ಲ.

ಮಕರ

ಮಕರ

ರಾಶಿಚಕ್ರಗಳಲ್ಲಿ ಮಕರ ರಾಶಿಯವರು ತುಂಬಾ ಕಠಿಣ ಪರಿಶ್ರಮಿಗಳು. ಇವರಿಗೆ ಸಂಪತ್ತು ಹಾಗೂ ಯಶಸ್ಸು ಸಿಗುವುದು. ಜೀವನದಲ್ಲಿ ಶ್ರೇಷ್ಠವಾಗಿರುವುದನ್ನು ಮಾಡಲು ಛಲ ಹೊಂದಿರುವರು. ಇವರು ತುಂಬಾ ಜಾಣ, ಪ್ರೇರಣಾತ್ಮಕ, ತಾತ್ವಿಕ, ತಾರ್ತಿಕ, ಪ್ರಾಯೋಗಿಕ ಮತ್ತು ಸಂಘಟನಾತ್ಮಕ ವಾಗಿರುವರು. ಇವರು ದೊಡ್ಡದಾಗಿ ಆಲೋಚನೆ ಮಾಡುವ ಮತ್ತು ಭರವಸೆ ಈಡೇರಿಸುವ ಗುಣದಿಂದಾಗಿ ಇವರಲ್ಲಿ ಶ್ರೇಷ್ಠ ನಾಯಕನಾಗುವ ಗುಣಗಳು ಇರುವುದು. ಜೀವನದಲ್ಲಿ ಇವರಿಗೆ ಕೆಲಸವು ಅತೀ ಮುಖ್ಯ ವಿಚಾರವಾಗಿರುವುದು. ಅದಾಗ್ಯೂ, ಮಕರ ರಾಶಿಯವರು ಹಠಮಾರಿ, ಹೊಂದಾಣಿಕೆಯಾಗದ, ಬಡಾಯಿಕೊಚ್ಚಿಕೊಳ್ಳುವ ಮತ್ತು ಅತಿರೇಕಿಗಳಾಗಿರುವರು. ಇವರು ತಮ್ಮ ಘನತೆಗೆ ಕುಂದು ಬರುವ ಕಾರಣದಿಂದಾಗಿ ಬೇರೆಯವರ ಮಾತನ್ನು ಕೇಳುವುದು ತುಂಬಾ ಕಡಿಮೆ. ಇವರು ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ವಿಫಲರಾದರೆ ಆಗ ಕಾರ್ಯ ವ್ಯಸನಿಯಾಗುವರು. ಇವರಿಗೆ ತಾಳ್ಮೆ ಕಡಿಮೆ ಮತ್ತು ಸುಲಭವಾಗಿ ಕೆರಳುವರು.

ಕುಂಭ

ಕುಂಭ

ರಾಶಿಗಳಲ್ಲಿ ಕುಂಭ ರಾಶಿಯು ತುಂಬಾ ಆಸಕ್ತಿದಾಯಕ ರಾಶಿಯಾಗಿದೆ. ಇವರಿಗೆ ಪ್ರಯಾಣಿಸುವುದು ಇಷ್ಟ, ಹೊಸ ಸಂಸ್ಕೃತಿ, ಹೊಸ ಜನರನ್ನು ಭೇಟಿಯಾಗುವುದು ಮತ್ತು ಇವರ ಜಾಣ್ಮೆಗೆ ಸವಾಲು ಒಡ್ಡುವ ವಿಷಯವು ಇವರಿಗೆ ಇಷ್ಟ. ಇವರು ಗಂಟೆಗಟ್ಟಲೆ ಮಾತನಾಡಬಲ್ಲರು. ಯಾಕೆಂದರೆ ಇವರಿಗೆ ಅದರಲ್ಲಿ ಆಸಕ್ತಿಯಿದೆ ಮತ್ತು ವಿವಿಧ ಚಟುವಟಿಕೆಗಳನ್ನು ಪ್ರಯತ್ನಿಸುವುದನ್ನು ಆನಂದಿಸುವರು. ಇವರು ಮಾನವತವಾದಿಗಳು. ಇವರಲ್ಲಿ ಒಳ್ಳೆಯ ಧ್ಯೇಯವಿದೆ ಮತ್ತು ನಾಯಕರಾಗಬಲ್ಲರು.ಪ್ರತ್ಯೇಕ, ಹಾಸ್ಯಾಸ್ಪದ ಮತ್ತು ಭಾವನಾತ್ಮಕವಾಗಿ ಇವರು ಸಿಗುವುದಿಲ್ಲ. ಇವರು ಯಾವುದೇ ವಿಚಾರವನ್ನು ತುಂಬಾ ಪ್ರಾಯೋಗಿಕವಾಗಿ ನೋಡುವರು. ಭಾವನಾತ್ಮಕವಾಗಿ ಇವರು ಸ್ವಲ್ಪ ಹಿಡಿತ ಹಾಕದಿದ್ದರೆ ಇವರಿಗೆ ಸಂಬಂಧವು ತುಂಬಾ ಕಠಿಣವಾಗಿರಲಿದೆ.

ಮೀನ

ಮೀನ

ಕರ್ಕಾಟಕ ರಾಶಿಯವರಂತೆ ಮೀನ ರಾಶಿಯವರು ತುಂಬಾ ಭಾವನಾತ್ಮಕ, ಸೂಕ್ಷ್ಮ ಮತ್ತು ಕ್ರಿಯಾತ್ಮಕತೆಯುಳ್ಳ ಕಾಳಜಿಯುಳ್ಳ ವ್ಯಕ್ತಿತ್ವದವರು. ಸಹಾನೂಭೂತಿ ಹೊಂದಿರುವಂತಹ ಮೀನ ರಾಶಿಯವರು ಒಳ್ಳೆಯ ಸ್ನೇಹಿತರು ಮತ್ತು ಸಂಗಾತಿಗಳನ್ನು ಪಡೆಯುವರು. ತಮ್ಮ ಪ್ರೀತಿಪಾತ್ರರಿಗೆ ಇವರು ತುಂಬಾ ಪ್ರಾಮಾಣಿಕವಾಗಿರುವರು ಮತ್ತು ಅವರಿಗೋಸ್ಕರ ಏನು ಬೇಕಾದರೂ ಮಾಡುವರು. ಅದಾಗ್ಯೂ, ವಾಸ್ತವದೊಂದಿಗೆ ವ್ಯವಹರಿಸಲು ಮೀನ ರಾಶಿಯವರಿಗೆ ತುಂಬಾ ಕಠಿಣವಾಗುವುದು ಮತ್ತು ಇದರಿಂದ ದೂರ ಹೋಗಲು ಪ್ರಯತ್ನಿಸುವರು. ಇವರು ಏಕಾಂಗಿಯಾಗಿರಲು ಇಷ್ಟಪಡುವರು. ಇದರಿಂದಾಗಿ ಹೆಚ್ಚಿನ ಸಮಯವನ್ನು ಏಕಾಂತದಲ್ಲಿ ಕಳೆಯುವರು.

English summary

The Two Faces Of Each Zodiac Sign

Throughout this article, we will call the two sides to each zodiac sign either “the two faces of each zodiac sign” or the “light and shadow traits” of each sign. So, let’s get to it! We hope you will learn some valuable information about your sign so that you can use your strengths to shine some much-needed light in the world. As for your weaknesses, we all have them, but it’s what we choose to do about them that matters in the end.
Story first published: Friday, June 22, 2018, 7:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more