Latest Updates
-
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ
ಬಿಹಾರದಲ್ಲಿನ ಸಮುದಾಯವೊಂದು ಎರಡು ಹೊತ್ತಿನ ಊಟ ಸಿಗದೇ, ಇಲಿಗಳನ್ನು ತಿಂದು ಬದುಕುತ್ತಿದ್ದಾರಂತೆ!
ನಾವು ಸಾಕಷ್ಟು ಆಹಾರ ಸೇವನೆ ಮಾಡಿ ಕೆಲವೊಂದು ಸಲ ಹೆಚ್ಚಾದರೆ ಅದನ್ನು ಕಸದ ಡಬ್ಬಕ್ಕೆ ಎಸೆಯುತ್ತೇವೆ. ಇಂದಿನ ದಿನಗಳಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಕೂಡ ಒಂದು ರೀತಿಯ ಫ್ಯಾಶನ್ ಎನ್ನುವಂತಾಗಿದೆ. ಹೋಟೆಲ್ ಗಳಿಗೆ ಹೋಗಿ ಅಲ್ಲಿ ಅತಿಯಾಗಿ ಆಹಾರವನ್ನು ತರಿಸಿಕೊಂಡು ಬಳಿಕ ವೆಚ್ಚ ಮಾಡುತ್ತೇವೆ. ಆದರೆ ಭೂಮಿ ಮೇಲೆ ನೂರಾರು ಮಂದಿ ತಿನ್ನಲು ಒಂದು ಹೊತ್ತಿನ ಆಹಾರವಿಲ್ಲದೆ ಪರದಾಡುತ್ತಿದ್ದಾರೆ ಎಂದು ನಮಗೆ ಅನಿಸುವುದೇ ಇಲ್ಲ. ಎಷ್ಟೋ ಮಕ್ಕಳು ಪೌಷ್ಠಿಕಾಂಶವಿರುವ ಆಹಾರದ ಕೊರತೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬಡ ದೇಶಗಳ ಪರಿಸ್ಥಿತಿಯಂತೂ ಇನ್ನೂ ದುಸ್ಥರವಾಗಿದೆ. ಯಾಕೆಂದರೆ ಅಲ್ಲಿಒಬ್ಬರನೊಬ್ಬರು ಕಿತ್ತು ತಿನ್ನುವಷ್ಟರ ಮಟ್ಟಿಗೆ ಬಡತವನವಿದೆ.

ಅಲ್ಲಿ ಬಲವಿದ್ದವನಿಗೆ ಮಾತ್ರ ಅನ್ನ ಎನ್ನುವಂತಾಗಿದೆ. ಭಾರತದಲ್ಲೂ ಈಗ ಹಲವಾರು ರಾಜ್ಯಗಳಲ್ಲಿನ ಕೆಲವು ಕುಗ್ರಾಮಗಳಲ್ಲಿ ಆಹಾರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲಿ ಕೂಲಿ ಕೆಲಸ ಮಾಡುವಂತಹ ಜನರಿಗೆ ತಮ್ಮ ಎರಡು ಹೊತ್ತಿನ ಊಟಕ್ಕೆ ಬೇಕಾದ ಆಹಾರ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಕ್ಕಿದೆಲ್ಲವನ್ನು ತಿಂದು ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಬಿಹಾರದಲ್ಲಿನ ಸಮುದಾಯವೊಂದು ಇಲಿಗಳನ್ನು ತಿಂದು ಬದುಕುತ್ತಿರುವುದೆ. ಯಾಕೆಂದರೆ ಅವರಿಗೆ ಸರಿಯಾಗಿ ಎರಡು ಹೊತ್ತಿನ ಊಟಕ್ಕೂ ಕೊರತೆ ಇರುವ ಕಾರಣ ಇವರಿಗೆ ಇಲಿಯೇ ಭೋಜನವಾಗಿದೆ.

ಮುಸಹಾರ್ ಎನ್ನುವ ಸಮುದಾಯ
ಮುಸಹಾರ್ ಎನ್ನುವ ಸಮುದಾಯದ ಸುಮಾರು 2.5 ಮಿಲಿಯನ್ ಜನರು ಉತ್ತರ ಪ್ರದೇ, ಬಿಹಾರ, ಪಶ್ವಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂನಲ್ಲಿದ್ದಾರೆ. ಈ ಸಮುದಾಯದ ಹೆಚ್ಚಿನವರು ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದರಿಂದಾಗಿ ಇವರಿಗೆ ದಿನದ ಎರಡು ಹೊತ್ತಿನ ಊಟವೂ ಸರಿಯಾಗಿ ಸಿಗುತ್ತಿಲ್ಲ.

ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ!!
ಇಲಿಗಳ ಬಿಲಗಳನ್ನು ಕೊರೆದು ಅದರಲ್ಲಿರುವ ಇಲಿಗಳನ್ನು ಹಿಡಿದು, ಕೊಂದು, ಚರ್ಮ ಸುಳಿದು ಅದನ್ನು ನಿಧಾನವಾಗಿ ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಶತಮಾನಗಳಿಂದಲೂ ಇಲಿಯನ್ನು ತಮ್ಮ ಆಹಾರವನ್ನಾಗಿ ಮಾಡಿಕೊಂಡಿರುವ ಈ ಸಮುದಾಯದವರಿಗೆ ಇಲಿಯ ರುಚಿಯು ಚೆನ್ನಾಗಿ ಒಗ್ಗಿಕೊಂಡಿದೆ. ಇಂದಿನ ದಿನಗಳಲ್ಲಿ ಇಲಿಯನ್ನು ತಿನ್ನುತ್ತಿರುವ ಕಾರಣದಿಂದಾಗಿ ಇವರ ಆರೋಗ್ಯದ ಮೇಲೆಯೂ ದೊಡ್ಡ ಮಟ್ಟಿನ ಪರಿಣಾಮ ಬೀರಿದೆ.

ಮಲೇರಿಯಾ, ಹಾಗೂ ಕಾಲರ ರೋಗ ಈ ಊರಿನಲ್ಲಿ ಕಾಮನ್!
ಮುಸಹಾರ್ ಸಮುದಾಯದವರು ಹೆಚ್ಚಾಗಿ ಪೋಷಕಾಂಶಗಳು ಇರುವಂತಹ ಆಹಾರ ಸೇವನೆ ಮಾಡದೆ ಇರುವ ಕಾರಣದಿಂದಾಗಿ ಹೆಚ್ಚಿನವರು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇವರಿಗೆ ಮಲೇರಿಯಾ, ಕಾಲರ ಮುಂತಾದ ಅಪಾಯಕಾರಿ ರೋಗಗಳು ಕಾಡುತ್ತಲಿರುವುದು.

ತಜ್ಞರ ಪ್ರಕಾರ
ಬಿಹಾರದ ಮುಸಹಾರ್ ಸಮುದಾಯದ ಜೀವನಕ್ರಮ, ಅವರ ಆಹಾರ ಶೈಲಿ ಇತ್ಯಾದಿಗಳನ್ನು ತಿಳಿದುಕೊಂಡಿರುವ ತಜ್ಞರು ಹೇಳುವ ಪ್ರಕಾರ...``ಇವರು ಬಡವರಲ್ಲಿಯೂ ಕಡು ಬಡವರು ಮತ್ತು ಇವರ ಬಗ್ಗೆ ಯಾರಿಗೂ ಕಾಳಜಿಯಿಲ್ಲ ಮತ್ತು ಸರ್ಕಾರದ ಯೋಜನೆಗಳನ್ನು ಇವರನ್ನು ತಲುಪುವುದೇ ಇಲ್ಲ. ಇವರು ಮುಂದಿನ ಊಟಕ್ಕಾಗಿ ಪ್ರತಿನಿತ್ಯವೂ ಹೋರಾಟ ಮಾಡಬೇಕು ಮತ್ತು ಕುಷ್ಠರೋಗದಂತಹ ಕಾಯಿಲೆಗಳು ಪ್ರತನಿತ್ಯದ ವಾಸ್ತವವಾಗಿದೆ.''

ರಾಕೇಶ್ ಮಾಂಜಿ ಹೇಳುವ ಪ್ರಕಾರ
ಮುಸಹಾರ್ ಸಮುದಾಯದವರಾಗಿ 28ರ ಹರೆಯದ ರಾಕೇಶ್ ಮಾಂಜಿ ಹೇಳುವ ಪ್ರಕಾರ, ``ನಾವು ಇಡೀ ದಿನ ಮನೆಯಲ್ಲಿ ಕುಳಿತುಕೊಂಡಿರುತ್ತೇವೆ. ಮಾಡಲು ಏನು ಕೆಲಸವಿರುವುದಿಲ್ಲ. ಕೆಲವೊಂದು ದಿನ ಗದ್ದೆಗಳಲ್ಲಿ ಕೆಲಸ ಸಿಗುವುದು. ಇನ್ನು ಕೆಲವು ದಿನ ನಾವು ತುಂಬಾ ಹಸಿವಿನಿಂದ ಬಳಲುತ್ತಿರುತ್ತೇವೆ ಅಥವಾ ಇಲಿಗಳನ್ನು ಹಿಡಿದು ಅದನ್ನು ತಿನ್ನುತ್ತೇವೆ. ಅಲ್ಪಸ್ವಲ್ಪ ಧಾನ್ಯವನ್ನು ನಾವು ತಿನ್ನುತ್ತೇವೆ.'' ಶಿಕ್ಷಣದ ಪ್ರಮಾಣವು ತುಂಬಾ ಕಡಿಮೆ ಇರುವ ಕಾರಣ ಮತ್ತು ಸರ್ಕಾರವು ಇವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವ ಕಾರಣದಿಂದಾಗಿ ಮುಸಹಾರ್ ಸಮುದಾಯದವರು ಭಾರತದಲ್ಲಿ ಅತೀ ಹೆಚ್ಚು ವಲಸೆ ಹೋದ ಸಮುದಾಯದವರಾಗಿದ್ದಾರೆ.



Click it and Unblock the Notifications











