For Quick Alerts
ALLOW NOTIFICATIONS  
For Daily Alerts

ಪ್ರತಿಯೊಂದು ರಾಶಿಚಕ್ರದವರು ಒಂದೊಂದು ವಿಶೇಷವಾದ ಪ್ರೇರಣೆಗೆ ಒಳಗಾಗಿರುತ್ತಾರೆ

|

ಯಾವುದೇ ವ್ಯಕ್ತಿಗಾಗಲಿ ಒಂದು ನಿಯಂತ್ರಣಕ್ಕೆ ಒಳಗಾಗಲಿಲ್ಲ ಎಂದಾದರೆ ಎಲ್ಲೆ ಮೀರಿ ವರ್ತಿಸುತ್ತಾನೆ. ಸಮಾಜದ ರೀತಿ-ನೀತಿಗೆ ವಿರುದ್ಧವಾಗಿ ಹೋಗಬಹುದು. ಯಾವುದೇ ಸಂಬಂಧಗಳಿಗೆ ಬೆಲೆ ಕೊಡದೆ ಮನಸ್ಸಿಗೆ ಬಂದಂತೆ ವರ್ತಿಸಬಹುದು. ಅನುಚಿತ ವರ್ತನೆಯಿಂದಾಗಿ ಎಲ್ಲರ ಮನಸ್ಸು ಬೇಸರಕ್ಕೆ ಅಥವಾ ಗೊಂದಲಕ್ಕೂ ಒಳಗಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅದೇ ವ್ಯಕ್ತಿಗೆ ಒಂದು ನಿರ್ಭಂಧವಿದೆ ಎಂದಾಗ ಅವನಲ್ಲಿ ಒಂದು ಬಗೆಯ ಶಿಸ್ತನ್ನು ಕಾಣಬಹುದು. ಹಾಗೆಯೇ ಅವನಿಗಿರುವ ಒಂದು ಪ್ರಭಲವಾದ ಪ್ರೇರಣೆ ಇರಬೇಕು. ಅಂತಹ ಒಂದು ಪ್ರೇರಣೆಯಿಂದಲೇ ಕೆಲಸವನ್ನು ಸುಲಭವಾಗಿ ನೆರವೇರಿಸುವರು.

ನಿರ್ಭಂಧ ಎನ್ನುವ ಶಬ್ದ ಕೇಳಿದಾಗ ಒಂದು ಬಗೆಯ ಬೇಸರ ಅಥವಾ ತಾತ್ಸಾರದ ಭಾವನೆ ಬರಬಹುದು. ಪ್ರೇರಣೆ ಎನ್ನುವ ಶಬ್ದವು ಒಂದಿಷ್ಟು ಸಂತೋಷ ಹಾಗೂ ಸಂತೋಷವನ್ನು ನೀಡುವುದು. ಆ ಎರಡು ಶಬ್ಧಗಳು ವ್ಯಕ್ತಿಯ ಜೀವನದಲ್ಲಿ ಅನ್ವಯಿಸಿದಾಗ ಅವನು ಮಾಡುವ ಕೆಲಸದಲ್ಲಿ ಶಿಸ್ತನ್ನು ಹಾಗೂ ಕ್ರಮಬದ್ಧತೆ ಮೂಡಿಬರುವುದು. ಅಲ್ಲದೆ ತೋರುವ ವರ್ತನೆಯಲ್ಲಿ ಸಭ್ಯತೆಗಳಿರುತ್ತವೆ. ಜೊತೆಗೆ ತನ್ನಂತೆಯೇ ಇತರರು. ಅವರಿಗೂ ತಮ್ಮದೇ ಆದ ಪ್ರೇರಣೆ ಇರುತ್ತದೆ ಎನ್ನುವ ಅರಿವನ್ನು ಹೊಂದಿರುತ್ತಾರೆ. ಇಲ್ಲವಾದರೆ ಯಾವುದೇ ಚಿಂತನೆಗಳ ಬಗ್ಗೆ ಕಾಳಜಿ ತೋರುವುದಿಲ್ಲ.

ಪ್ರತಿಯೊಂದು ವಿಚಾರದಲ್ಲೂ ನಿರ್ಭಂಧ ಎನ್ನುವುದು ಇರಬೇಕು

ಪ್ರತಿಯೊಂದು ವಿಚಾರದಲ್ಲೂ ನಿರ್ಭಂಧ ಎನ್ನುವುದು ಇರಬೇಕು

ಮನುಷ್ಯನಿಗೆ ಪ್ರತಿಯೊಂದು ವಿಚಾರದಲ್ಲೂ ನಿರ್ಬಂಧ ಎನ್ನುವುದು ಇರಬೇಕು. ಮಿತಿಯಲ್ಲಿ ಇರುವ ನಿರ್ಬಂಧವು ವಿಲಕ್ಷಣದ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ವ್ಯಕ್ತಿ ತಪ್ಪು ಕೆಲಸ ಮಾಡುವ ಮುನ್ನ ಅರಿವಿನ ಪಾಠ ಕಲಿಸುವುದು. ಜೊತೆಗೆ ತಪ್ಪು ಹೆಜ್ಜೆಯಿಡುವಾಗ ಸಾಕಷ್ಟು ಎಚ್ಚರಿಕೆಯನ್ನು ತೋರುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರಿಗೆ ವಿಭಿನ್ನವಾದ ನಿರ್ಭಂಧಗಳಿರುತ್ತವೆ. ಅವುಗಳ ಅನ್ವಯದಂತೆ ಅವರ ವರ್ತನೆ ಹಾಗೂ ನಿಯಂತ್ರಣ ಇರುತ್ತದೆ ಎಂದು ಹೇಳಲಾಗುವುದು.

ಪ್ರೇರಣಾತ್ಮಕ ಕೆಲಸ

ಪ್ರೇರಣಾತ್ಮಕ ಕೆಲಸ

ವ್ಯಕ್ತಿಗೆ ಸೂಕ್ತ ನಿರ್ಭಂಧಗಳನ್ನು ಹೊಂದಿರುವ ಒಂದು ಒಳ್ಳೆಯ ಪ್ರೇರಣೆಯೂ ಇದೆ ಎಂದಾದರೆ ಅದನ್ನು ಸಾಧಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಾನೆ. ಜೀವನದಲ್ಲಿ ತಾನು ಹೊಂದಿರುವ ಕೆಲವು ಪ್ರೇರಣಾತ್ಮಕ ಕೆಲಸದಿಂದಲೇ ಮುಂದೆ ಬರುವನು. ಜೊತೆಗೆ ಜೀವನದಲ್ಲಿ ಒಂದು ಸಾರ್ಥಕ ಭಾವನೆಯನ್ನು ಪಡೆದು ಕೊಳ್ಳುವನು. ವ್ಯಕ್ತಿಯ ಉತ್ತಮವಾದ ಒಂದು ಪ್ರೇರಣೆಯು ಅವನನ್ನು ಸಮಾಜದಲ್ಲಿ ಆಕರ್ಷಕ ವ್ಯಕ್ತಿಯನ್ನಾಗಿ ಮಾಡುವುದು. ಪ್ರತಿಯೊಬ್ಬ ವ್ಯಕ್ತಿಗೂ ಅವರ ರಾಶಿಚಕ್ರಕ್ಕೆ ಅನುಗುಣವಾಗಿ ಒಂದೊಂದು ಉತ್ತಮವಾದ ಪ್ರೇರಣಾತ್ಮಕ ಗುಣಗಳಿರುತ್ತವೆ ಎಂದು ಹೇಳಲಾಗುವುದು. ನಿಮಗೆ ನಿಮ್ಮ ರಾಶಿಚಕ್ರದ ಪ್ರಕಾರ ಯಾವ ಪ್ರೇರಣೆಯನ್ನು ಹೊಂದಿದ್ದೀರಿ? ನಿಮ್ಮವರು ಯಾವ ರೀತಿಯ ನಿರ್ಭಂಧಕ್ಕೆ ಒಳಗಾಗುವರು? ಅವರಿಗೆ ಇರುವ ಪ್ರೇರಣಾ ಗುಣಗಳು ಯಾವವು? ಅವರ ಪ್ರೇರಣಾ ಗುಣಗಳಿಗೆ ಅನುಗುಣವಾಗಿ ವರ್ತನೆಗಳು ಹೇಗಿರುತ್ತವೆ? ಅವರಲ್ಲಿ ಉಂಟಾಗುವ ಬದಲಾವಣೆಗಳು ಏನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಅಥವಾ ಆಸಕ್ತಿ ಇದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮೇಷ ರಾಶಿಯ ವ್ಯಕ್ತಿಗಳು ಯಾವುದೇ ವಿಷಯಗಳನ್ನು ಇದ್ದ ಹಾಗೇ ಸ್ವೀಕರಿಸುವುದಿಲ್ಲ. ಮೇಲ್ನೋಟಕ್ಕೆ ಇದ್ದ ವಸ್ತುವಿನ ಗುಣ ಅಥವಾ ವ್ಯಕ್ತಿಯ ವರ್ತನೆಗಳೇ ಅಂತಿಮವಾದ ಸಂಗತಿ ಎಂದು ಪರಿಗಣಿಸುವುದಿಲ್ಲ. ಇವರು ಯಾವುದೇ ವಿಷಯ ಅಥವಾ ವ್ಯಕ್ತಿಯನ್ನು ನಂಬಬೇಕು ಎಂದರೆ ಆ ವಿಷಯ ಅಥವಾ ವ್ಯಕ್ತಿಯ ಬಗ್ಗೆ ಸಾಕಷ್ಟು ವಾದಗಳನ್ನು ಮತ್ತು ಚರ್ಚೆಗಳನ್ನು ಕೈಗೊಳ್ಳುತ್ತಾನೆ. ಅದು ಮೇಷ ರಾಶಿಯವರಿಗಿರುವ ಪ್ರೇರಣಾ ಗುಣ ಎಂದು ಹೇಳಬಹುದು. ಸ್ವಾಭಾವಿಕವಾಗಿಯೇ ಅವರಿಗೊಂದು ಪ್ರೇರಣಾ ಗುಣ ಇರುವುದರಿಂದ ಎಲ್ಲಾ ವಿಷಯದಲ್ಲೂ ಅದೇ ನಿಯಮವನ್ನು ಅನುಸರಿಸಿ ಮುಂದೆ ಸಾಗುತ್ತಾರೆ ಎಂದು ಹೇಳಲಾಗುವುದು.

ವೃಷಭ

ವೃಷಭ

ಶಾಂತ ಸ್ವಭಾವದವರಾದ ವೃಷಭ ರಾಶಿಯ ವ್ಯಕ್ತಿಗಳು ತಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ. ಸ್ವಭಾವತಃ ತಳ್ಳುವ ಪ್ರವೃತ್ತಿಯ ವ್ಯಕ್ತಿಗಳು ಎನ್ನಲಾಗುವುದು. ಇವರು ಇತರರಿಗೆ ಸಾಕಷ್ಟು ಸಹಾಯ ಮಾಡುತ್ತಾರೆ. ನರಗಳಲ್ಲಿಯೇ ತಳ್ಳುವಂತಹ ಪ್ರೇರಣಾ ಗುಣ ಇರುವುದರಿಂದ ಇತರರಿಗೆ ಹಾಗೂ ತಮ್ಮ ಆಸಕ್ತಿಗಳಿಗೆ ಸಾಕಷ್ಟು ತಳ್ಳುವ ಹಾಗೂ ಪ್ರೋತ್ಸಾಹ ನೀಡುವ ಸ್ವಭಾವ ಹೊಂದಿರುತ್ತಾರೆ. ಇದು ಇವರಿಗೆ ಇರುವ ವಿಶೇಷವಾದ ಪ್ರೇರಣಾ ಸಾಮಥ್ರ್ಯ ಇದು ಎನ್ನಲಾಗುವುದು.

ಮಿಥುನ

ಮಿಥುನ

ಈ ರಾಶಿಚಕ್ರದವರು ಸಾಮಾಜಿಕ ಜನಪ್ರಿಯತೆಯನ್ನು ಬಯಸುವ ವ್ಯಕ್ತಿಗಳು. ಆದರೆ ಜನರಿಂದಲೇ ಸಾಕಷ್ಟು ಪ್ರೇರಣೆಗೆ ಒಳಗಾಗುವರು ಎನ್ನಲಾಗುವುದು. ಮಾಡುವ ಕೆಲಸದ ಬಗ್ಗೆ ಸಾಕಷ್ಟು ಅಭಿಪ್ರಾಯಗಳ ಕೊರತೆಯನ್ನು ಅನುಭವಿಸುವರು. ಇತರರಿಂದ ಒಂದಿಷ್ಟು ಸಲಹೆ ಅಥವಾ ಪ್ರೋತ್ಸಾಹಗಳು ದೊರೆತರೆ ತಾವಾಗಿಯೇ ಮುಂದೆ ಸಾಗುವರು. ಇದು ಮಿಥುನ ರಾಶಿಯವರಿಗೆ ಅಗತ್ಯ ಇರುವ ಪ್ರೇರಣೆ ಎಂದು ಹೇಳಲಾಗುವುದು.

ಕರ್ಕ

ಕರ್ಕ

ಭಾವನಾ ಜೀವಿಗಳಾದ ಇವರು ಸಾಕಷ್ಟು ವಿಷಯ ಹಾಗೂ ಸಂಗತಿಗಳ ಬಗ್ಗೆ ತಮ್ಮದೇ ಆದ ಪ್ರೇರಣೆಯನ್ನು ವಿಧಿಸಿಕೊಳ್ಳುವರು. ಇವರು ಸಮಯಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡುವರು. ಅದೇ ಅವರಿಗಿರುವ ಪ್ರೇರಣೆ ಎನ್ನಬಹುದು. ಇವರು ಒಂದು ಕೆಲಸಕ್ಕೆ ನಿಯೋಜಿಸಿದ ಸಮಯದಲ್ಲಿಯೇ ಮುಗಿಯಬೇಕು ಎಂದು ಬಯಸುವರು. ಇವರ ಈ ಪ್ರೇರಣಾ ಸಾಮಥ್ರ್ಯವು ಇವರಿಗೆ ಶಿಸ್ತಿನ ಜೀವನವನ್ನು ಕಲ್ಪಿಸಿಕೊಡುವುದು.

ಸಿಂಹ

ಸಿಂಹ

ಈ ರಾಶಿಯವರು ಸದಾ ರಾಜನಂತೆ ಇರಲು ಬಯಸುತ್ತಾರೆ. ರಾಜನಾಗುವುದು ಸುಲಭವಲ್ಲ. ಅದಕ್ಕಾಗಿ ಸಾಕಷ್ಟು ಶ್ರಮವಹಿಸಬೇಕು ಎನ್ನುವುದನ್ನು ಅರಿತಿರುತ್ತಾರೆ. ಜಗತ್ತಿಗೆ ಸಾಕಷ್ಟು ಒಳ್ಳೆಯದನ್ನು ಮಾಡುವುದರ ಮೂಲಕ ತಮ್ಮ ಪ್ರೇರಣೆಯ ಅಥವಾ ಆಸೆಯ ಸಂಗತಿಗಳನ್ನು ನೆರವೇರಿಸಿಕೊಳ್ಳುವರು.

 ಕನ್ಯಾ

ಕನ್ಯಾ

ಕನ್ಯಾ ರಾಶಿಯವರ ಪ್ರೇರಣಾ ವಿಚಾರ ಎಂದರೆ ತಿನ್ನುವುದು. ಇವರಿಗೆ ತಿನ್ನುವುದು ಎಷ್ಟು ಪ್ರೇರಣಾ ಪೂರಕವಾಗಿರುತ್ತದೆ ಎಂದರೆ ಇತರರು ಏನಾದರೂ ತಿನ್ನುವುದನ್ನು ನೋಡಿದರೆ ಇವರಿಗೂ ಅದನ್ನು ತಿನ್ನಬೇಕು ಎನ್ನುವ ಪ್ರೇರಣೆ ಆಥವಾ ಆಸೆ ಕಾಡುವುದು. ಇವರು ಊಟ ತಿಂಡಿಯ ವಿಚಾರದಲ್ಲಿ ಸಾಕಷ್ಟು ಉತ್ಸಾಹ ಹಾಗೂ ಆಸೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು.

 ತುಲಾ

ತುಲಾ

ಈ ರಾಶಿಯ ವ್ಯಕ್ತಿಗಳು ಪುಸ್ತಕಗಳಿಂದ ಸಾಕಷ್ಟು ಪ್ರೇರಣಾತ್ಮಕ ಚಿಂತನೆಗೆ ಒಳಗಾಗಿರುತ್ತಾರೆ. ಅದರಲ್ಲೂ ನೀತಿ-ನಿಯಮ ಎಂದರೆ ಇವರಿಗೆ ಅತ್ಯಂತ ಪ್ರಮುಖವಾದ ವಿಚಾರವಾಗಿರುತ್ತದೆ. ಎಲ್ಲಾ ಸಂಗತಿಗಳಲ್ಲೂ ನೀತಿ-ನಿಯಮಗಳು ಸರಿಯಾಗಿ ಇರಬೇಕು ಎಂದು ಬಯಸುವರು. ಇವರ ನಿರ್ಧಾರಗಳು ಸಹ ನಿಯಮಗಳಿಗೆ ಅನುಸಾರವಾಗಿಯೇ ಇರುತ್ತದೆ ಎಂದು ಹೇಳಲಾಗುತ್ತದೆ.

ವೃಶ್ಚಿಕ

ವೃಶ್ಚಿಕ

ಶ್ರಮ ಜೀವಿಗಳಾದ ಇವರು ಎಲ್ಲಾ ವಿಷಯದಲ್ಲೂ ಕ್ರಮಬದ್ಧತೆ ಹಾಗೂ ಶ್ರಮವಿರಬೇಕು ಎಂದು ಬಯಸುವರು. ಅದೇ ವರ ಜೀವನದ ಪ್ರಮುಖ ಪ್ರೇರಣೆ ಎನ್ನಲಾಗುವುದು. ತಾವು ಕೈಗೊಂಡ ಅಥವಾ ಯೋಜಿಸಲಿರುವ ಕೆಲಸ ಕಾರ್ಯಗಳು ಒಂದು ಕ್ರಮಬದ್ಧತೆಯನ್ನು ಹೊಂದಿದ್ದರೆ ಎಲ್ಲವೂ ಸುಲಭವಾಗಿ ನೆರವೇರುವುದು ಎಂದು ಬಯಸುತ್ತಾರೆ.

ಧನು

ಧನು

ಧನು ರಾಶಿಯ ವ್ಯಕ್ತಿಗಳಿಗೆ ಕೆಲವು ವಿಷಯದ ಬಗ್ಗೆ ಸಾಕಷ್ಟು ಉನ್ಮತ್ತತೆ ಇರುತ್ತದೆ. ಇವರ ಆಸಕ್ತಿ ಅಥವಾ ಪ್ರೇರಣೆಯು ಒಂದು ಬಗೆಯ ಗೀಳಿನಂತೆ ಇರುತ್ತದೆ ಎನ್ನಲಾಗುವುದು. ಇವರು ಆಸೆ ಪಟ್ಟ ಎಲ್ಲಾ ಸಂಗತಿಯನ್ನು ಪಡೆದುಕೊಳ್ಳಬೇಕು ಎನ್ನುವ ಆಸೆ ಅಥವಾ ಪ್ರೇರಣೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಒಂದೇ ಶಬ್ದದಲ್ಲಿ ಹೇಳಬೇಕೆಂದರೆ ಅವರು ಬಯಸಿದ್ದನ್ನು ಅವರ ವಸ್ತುವನ್ನಾಗಿ ಮಾಡಿಕೊಳ್ಳುವರು.

ಮಕರ

ಮಕರ

ಸಾಕಷ್ಟು ಪರಿಶ್ರಮ ಹಾಗೂ ಬುದ್ಧಿಯನ್ನು ಉಪಯೋಗಿಸಿ ಕೆಲಸ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಇವರ ಪ್ರೇರಣಾ ವಿಚಾರವು ಒಂದು ಕ್ರಮಬದ್ಧತೆಯನ್ನು ಹಾಗೂ ಮಿತಿಯನ್ನು ಹೊಂದಿರಬೇಕೆಂದು ಚಿಂತಿಸುವರು. ತಾವು ಕೈಗೊಳ್ಳುವ ಕೆಲಸದಲ್ಲಿ ತಪ್ಪಾಗದಂತೆ ಹಾಗೂ ಅದು ಇತರರಿಗೆ ಮಾದರಿಯಾಗಿರಬೇಕು ಎನ್ನುವಂತಹ ಪ್ರೇರಣೆಯನ್ನು ಹೊಂದಿರುತ್ತಾರೆ.

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಗಳು ತಮ್ಮ ಕಲ್ಪನೆ ಅಥವಾ ಕನಸಿನ ಲೋಕದಲ್ಲಿಯೇ ಹೆಚ್ಚು ಪ್ರೇರೇಪಿತರಾಗಿರುತ್ತಾರೆ. ಇವರ ಕನಸಿನ ಪ್ರೇರಣೆಯಿಂದಲೇ ಕೆಲಸವನ್ನು ಹಾಗೂ ಜೀವನದ ಪ್ರಮುಖ ಕಾರ್ಯವನ್ನು ನಿರ್ವಹಿಸಲು ಮುಂದಾಗುವರು. ಸ್ವತಂತ್ರರಾಗಿ ಇದ್ದು, ತಮ್ಮ ಕನಸಿನ ಕೆಲಸವನ್ನು ನಿರ್ವಹಿಸಲು ಬಯಸುವರು. ಜೊತೆಗೆ ಹಾಗೆಯೇ ಬಾಳುವರು ಎಂದು ಹೇಳಲಾಗುವುದು.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ಮಿತಿಮೀರಿದ ಮತ್ತು ಅತಿಯಾದ ಚಿಂತನೆಯನ್ನು ನಡೆಸುವರು. ಸಾಮಾನ್ಯವಾಗಿ ಬಹುಬೇಗ ದುಃಖಕ್ಕೆ ಹಾಗೂಅಳುವ ಪ್ರತಿಕ್ರಿಯೆಯನ್ನು ತೋರುವರು. ವಿರಳವಾಗಿರುವ ವಿಶೇಷ ಸಂಗತಿಯನ್ನು ಮಾಡುವ ಉತ್ಸಾಹ ಹಾಗೂ ಪ್ರೇರಣೆಯನ್ನು ಹೊಂದಿರುತ್ತಾರೆ. ವಿರಳವಾದ ಹಾಗೂ ವಿಶೇಷವಾದ ಸಂಗತಿಯನ್ನು ಕೈಗೊಳ್ಳುವುದರಿಂದ ಬಹುಬೇಗ ಆಕರ್ಷಣೆ ಹಾಗೂ ಮನ್ನಣೆ ದೊರೆಯುವುದು ಎಂದು ಭಾವಿಸುವರು.

English summary

the Most Compulsive Thing Each Zodiac Sign Does

Compulsive behavior is when we perform actions that we feel are necessary, no matter how weird or unnecessary these actions are. Like facing a knife away from you at a restaurant table, or checking to see if you have your keys, even though you've just locked your door and have the keys in your hand. Compulsion is not about thinking — it's about acting in way that personally works with your own mental condition. Translation: we're all nuts.
X
Desktop Bottom Promotion