For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಆರೋಗ್ಯ ಸಮಸ್ಯೆ ಕಾಡಲಿದೆ ನೋಡಿ...

By Deepu
|

ಆರೋಗ್ಯ ಎನ್ನುವುದು ವ್ಯಕ್ತಿಯ ಅತ್ಯಅಮೂಲ್ಯವಾದ ಆಸ್ತಿ. ಆರೋಗ್ಯ ಎನ್ನುವ ಆಸ್ತಿ ಇಲ್ಲವಾದರೆ ವ್ಯಕ್ತಿಯ ಅಸ್ತಿತ್ವವೇ ಇರುವುದಿಲ್ಲ ಎನ್ನಬಹುದು. ಒಮ್ಮೆ ಆರೋಗ್ಯ ಸಮಸ್ಯೆ ಕಾಡಲು ಪ್ರಾರಂಭವಾಯಿತು ಎಂದಾದರೆ ಒಂದಾದಮೇಲೊಂದರಂತೆ ಅನೇಕ ಸಮಸ್ಯೆಗಳು ಕಾಡಬಹುದು. ಉದಾಹರಣೆಗೆ ಆರೋಗ್ಯ ಸಮಸ್ಯೆ ಆರಂಭವಾದಂತೆ ಮಾನಸಿಕ ಒತ್ತಡ ಉಂಟಾಗುವುದು. ಆರ್ಥಿಕ ವ್ಯಯದಿಂದಾಗಿ ಒಂದಿಷ್ಟು ಸಮಸ್ಯೆ ಉಂಟಾಗಬಹುದು. ಇತರ ವ್ಯಕ್ತಿಗಳೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಗದೆ ಇರುವುದು.

ಹಾಗಾಗಿಯೇ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುವುದು. ವ್ಯಕ್ತಿಗೆ ಕಾಡುವ ಆರೋಗ್ಯ ಸಮಸ್ಯೆಯು ಆತನ ರಾಶಿಚಕ್ರವನ್ನು ಅನುಸರಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತ್ರವಲ್ಲ, ವಿಜ್ಞಾನದ ಆಧಾರದ ಮೇಲೆ ಊಹಿಸಲಾಗುವುದು. ಮಿದುಳು ಮತ್ತು ದೇಹವು ಅಂತರ್ಗತವಾಗಿ ಗ್ರಹಗತಿಗಳ ಪ್ರಭಾವದಿಂದ ಬದಲಾವಣೆಯನ್ನು ಅನುಭವಿಸಲಾಗುವುದು. ಈ ನಿಟ್ಟಿನಲ್ಲಿಯೇ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ರಾಶಿಚಕ್ರಗಳು ನಿರ್ಧರಿಸುತ್ತದೆ. ನಿಮಗೂ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ಆರೋಗ್ಯ ಸಮಸ್ಯೆ ಕಾಡುವುದು? ಎನ್ನುವುದನ್ನು ಪರಿಶೀಲಿಸಿ....

ಮೇಷ

ಮೇಷ

ಇವರು ಆಗಾಗ ತಲೆನೋವು ಹಾಗೂ ಮೈಗ್ರೇನ್ ಗಳಂತಹ ಸಮಸ್ಯೆಗಳನ್ನು ಅನುಭವಿಸ ಬೇಕಾಗುವುದು. ಇದು ಅವರ ಮಾನಸಿಕ ಒತ್ತಡದ ಪರಿಣಾಮವಾಗಿ ಕಾಡುವುದು. ಅನಗತ್ಯ ವಿಷಯಗಳ ಬಗ್ಗೆ ಚಿಂತಿಸುವುದನ್ನು ಇವರು ಬಿಡಬೇಕು. ಅಲ್ಲದೆ ಎಂತಹದ್ದೇ ಸಮಸ್ಯೆಗಳು ಎದುರಾದರೂ ಅದನ್ನು ಭಾವನಾತ್ಮಕವಾಗಿ ಸ್ವೀಕರಿಸಬಾರದು ಎಂದು ಸಲಹೆ ನೀಡಲಾಗುವುದು. ಇನ್ನು ಕೆಲವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಆದರೆ ವರ್ಷವಿಡೀ ದೈಹಿಕ ಒತ್ತಡದಿಂದ ದೂರವಿರುತ್ತೀರಿ. ನೀವು ಮಾನಸಿಕ ಅನಾರೋಗ್ಯದಿಂದ ಮತ್ತು ಮಧ್ಯ ವರ್ಷದ ಅವಧಿಯಲ್ಲಿ ಜಂಟಿ ನೋವಿನಿಂದ ಬಳಲುತ್ತೀರಿ. ಲೈಂಗಿಕ ಅನಾರೋಗ್ಯದಿಂದ ಅಥವಾ ಯಾವುದೇ ವಿಷಪೂರಿತ ಕಾಯಿಲೆಯಿಂದ ಬಳಲುತ್ತಿರುವ ಸಾಧ್ಯತೆಗಳು ಸಹ ಇವೆ. ಹವಾಮಾನದಲ್ಲಿ ಉಂಟಾಗುವ ಸೋಂಕುಗಳು ನಿಮಗೆ ತೊಂದರೆ ಉಂಟುಮಾಡಬಹುದು.

ವೃಷಭ

ವೃಷಭ

ಇವರು ಸಾಮಾನ್ಯವಾಗಿ ಗಂಟಲು ಮತ್ತು ಕಿವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸುವರು. ಪದೇ ಪದೇ ಈ ಸಮಸ್ಯೆಗಳು ಕಾಡುವುದರಿಂದ ಇವರು ಆದಷ್ಟು ಗಂಟಲು ವಿಶ್ರಾಂತಿ ಹಾಗೂ ಆಳವಾದ ಉಸಿರಾಟ ಕ್ರಿಯೆಯನ್ನು ಅನುಸರಿಸಬೇಕು. ಕೆಲವೊಮ್ಮೆ ಮಾನಸಿಕ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ಆದಷ್ಟು ಶಾಂತವಾದ ಸ್ವಭಾವವನ್ನು ಅನುಸರಿಸಬೇಕಾಗುವುದು. ಇನ್ನು ಈ ರಾಶಿಯವರು ಕೆಲಸದಲ್ಲಿಯೇ ಹೆಚ್ಚಿನ ಸಮಯ ಹಾಗೂ ಶ್ರದ್ಧೆಯನ್ನು ಹೊಂದಿರುವುದರಿಂದ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಧನಾತ್ಮಕ ಶಕ್ತಿ ಮತ್ತು ವರ್ತನೆ ನಿಮಗೆ ಅಗತ್ಯವಿರುವ ಎಲ್ಲಾ ಬಗೆಯ ಮಾನಸಿಕ ಶಕ್ತಿಯನ್ನು ನೀಡುತ್ತದೆ. ಸೂಕ್ತ ಆಹಾರಗಳನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಜೀರ್ಣಕ್ರಿಯೆಗೆ ಕಷ್ಟವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು, ಎಣ್ಣೆ ಹಾಗೂ ಮಸಾಲ ಭರಿತ ಆಹಾರದಿಂದ ಆದಷ್ಟು ದೂರವಿರಿ. ಇಲ್ಲವಾದರೆ ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗಬಹುದು. ಪೋಷಕಾಂಶಗಳಿಂದ ಭರಿತವಾದ ಆಹಾರವು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎನ್ನುವುದನ್ನು ಮರೆಯದಿರಿ. ತಿಂಗಳ ಮಧ್ಯ ಭಾಗದಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳು ಉಂಟಾದಾಗ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಸೂಕ್ತ. ಆರೋಗ್ಯದ ಸಮಸ್ಯೆಯು ನಿಮಗೆ ಆತಂಕವನ್ನು ಉಂಟುಮಾಡಬಹುದು. ಕೋಪಗಳನ್ನು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮ ಕೋಪವು ಭುಗಿಲೇಳುವ ಸಾಧ್ಯತೆಗಳಿವೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುವುದು.

ಮಿಥುನ

ಮಿಥುನ

ಇವರು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಹೇಳಲಾಗುವುದು. ಅತಿಯಾದ ಚಿಂತಕರು ಹಾಗೂ ಒಮ್ಮೆಲೇ ಅಧಿಕ ಕೆಲಸಗಳನ್ನು ನಿರ್ವಹಿಸುವ ಇವರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುವುದು. ಹಾಗಾಗಿ ಇವರು ಆದಷ್ಟು ಸೂಕ್ತ ಯೋಜನೆಗಳನ್ನು ಹೊಂದುವುದರ ಮೂಲಕ ಆದಷ್ಟು ವಿಶ್ರಾಂತಿಯನ್ನು ಪಡೆಯಬೇಕು. ತಮ್ಮ ಆರೈಕೆ ಮಾಡಿಕೊಳ್ಳಬೇಕು. ಇನ್ನು ಈ ರಾಶಿಯವರಿಗೆ ಜೂನ್ ತಿಂಗಳಲ್ಲಿ ಗ್ರಹಗತಿಗಳು ಆರೋಗ್ಯದ ವಿಚಾರದಲ್ಲಿ ನಿಮ್ಮ ಪರವಾಗಿಯೇ ಇರುತ್ತವೆ ಎಂದು ಹೇಳಬಹುದು. ಈ ವರ್ಷವಿಡೀ ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ ಎಂದು ಹೇಳಲಾಗುವುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿದ್ದರೂ ಅವು ಒಂದು ಹಿಡಿತಕ್ಕೆ ಬರಬಹುದು ಅಥವಾ ಆರೋಗ್ಯ ಸ್ಥಿತಿ ಶಾಶ್ವತವಾಗಿ ಬಿಡುಗಡೆಯಾಗಬಹುದು. ಹಾಗಾಗಿ ಆದಷ್ಟು ಆರೋಗ್ಯದ ಕುರಿತು ಸಾಕಷ್ಟು ಕಾಳಜಿಯನ್ನು ವಹಿಸುವುದು ಸೂಕ್ತ.

ಕರ್ಕ

ಕರ್ಕ

ಈ ವ್ಯಕ್ತಿಗಳು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಹೇಳಲಾಗುವುದು. ಈ ವ್ಯಕ್ತಿಗಳು ತಮ್ಮ ಭಾವನೆಯನ್ನು ನಿಗ್ರಹಿಸುತ್ತಿರುತ್ತಾರೆ. ಪಿತ್ತ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಹೇಳಲಾಗುವುದು. ಹಾಗಾಗಿ ಇವರು ಸೂಕ್ತ ಸಮಯದಲ್ಲಿ ಆರೋಗ್ಯ ಸೇವನೆ, ಸ್ವಯಂ ಆರೋಗ್ಯ ಪಾಲನೆ ಮಾಡಿಕೊಳ್ಳಬೇಕು. ಜೊತೆಗೆ ಎಲ್ಲಾ ಕೆಲಸದಲ್ಲೂ ಭಾವನಾತ್ಮಕವಾಗಿ ವ್ಯವಹರಿಸಬಾರದು. ಕರ್ಕ ರಾಶಿಯವರು ಈ ತಿಂಗಳಲ್ಲಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ

ಗಮನವನ್ನು ನೀಡಬೇಕು. ವಿಶೇಷವಾಗಿ ಕೆಲಸದ ಹೊರೆ ಅಥವಾ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ. ಬಿಡುವಿಲ್ಲದ ಜೀವನ ಶೈಲಿಯು ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುವುದು. ಅನುಚಿತವಾದ ಆರೋಗ್ಯ ಪದ್ಧತಿಯಿಂದಾಗಿ ಕ್ಯಾಲ್ಸಿಯಂ ಕೊರತೆ ಹಾಗೂ ಪೋಷಕಾಂಶಗಳ ಕೊರತೆಯನ್ನು ನೀವು ಅನುಭವಿಸಬೇಕಾಗುವುದು. ಕೆಲಸದ ಸಮಯ ಹಾಗೂ ಆರೋಗ್ಯ ಸೇವನೆಯ ಸಮಯವನ್ನು ಒಂದು ಸೂಕ್ತ ಸಮಯಕ್ಕೆ ಮೀಸಲಿಡಿ. ಆಗ ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರವನ್ನು ಸೇವಿಸಬಹುದು. ಜೊತೆಗೆ ಕ್ರಮಬದ್ಧವಾದ ವ್ಯಾಯಾಮವು ಅಗತ್ಯವಾಗಿರುತ್ತದೆ.

ಸಿಂಹ

ಸಿಂಹ

ಈ ವ್ಯಕ್ತಿಗಳು ಸಾಮಾನ್ಯವಾಗಿ ತೀವ್ರವಾದ ಭಾವನೆಗಳನ್ನು ಹೊಂದಿರುತ್ತಾರೆ. ಇವರು ಎಲ್ಲಾ ರಾಶಿಚಕ್ರದವರಿಗಿಂತ ಹೆಚ್ಚು ಮನೋವ್ಯಥೆ ಅನುಭವಿಸುತ್ತಾರೆ. ಅದು ಅವರ ಅಹಂಗೆ ಅಡ್ಡಿಯನ್ನುಂಟುಮಾಡುವುದು. ಅತಿಯಾದ ಮಾನಸಿಕ ಒತ್ತಡದಿಂದ ಖಿನ್ನತೆ ಹಾಗೂ ಹೃದಯಘಾತಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಹಾಗಾಗಿ ಇವರು ಆದಷ್ಟು ಶಾಂತ ಹಾಗೂ ಆಳವಾದ ಉಸಿರಾಟದಿಂದ ಇರಬೇಕು ಎಂದು ಹೇಳಲಾಗುವುದು. ಇನ್ನು ಜೂನ್ ತಿಂಗಳಲ್ಲಿ ಈ ರಾಶಿಯವರು ಆರೋಗ್ಯ ಸಮಸ್ಯೆಗಳಿಂದಾಗಿ ಒಂದಿಷ್ಟು ವೈದ್ಯಕೀಯ ಖರ್ಚುಗಳನ್ನು ಮಾಡುವಿರಿ. ಇದಕ್ಕೆ ಮೂಲ ಕಾರಣವು ಮಾನಸಿಕ ಹಾಗೂ ದೈಹಿಕ ಒತ್ತಡ ಎನ್ನಲಾಗುತ್ತದೆ. ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಸಾಕಷ್ಟು ವ್ಯಾಯಾಮ ಹಾಗೂ ಉತ್ತಮ ದಿನಚರಿಯನ್ನು ಅನುಸರಿಸಬೇಕು. ಸದೃಢ ದೇಹಕ್ಕಾಗಿ ಒಂದಿಷ್ಟು ಹಣವನ್ನು ವ್ಯಯ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು. ಮಿದುಳು ಉತ್ತಮ ಕಾರ್ಯ ನಿರ್ವಹಿಸಲು ಸಾಕಷ್ಟು ಮಾನಸಿಕ ಕೆಲಸಗಳನ್ನು ನಿರ್ವಹಿಸಿ. ಮನೆಯಿಂದಾಚೆ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ಉತ್ತಮ. ಅಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಇರಬಹುದು. ದೇಹದ ತೂಕದ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸುವುದು ಸೂಕ್ತ. ಆಹಾರದಿಂದ ಅಲರ್ಜಿ ಉಂಟಾಗುವ ಸಾಧ್ಯತೆಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ತಿಂಗಳು ಮಾನಸಿಕ ಒತ್ತಡ ಅಥವಾ ಅಸ್ವಸ್ಥತೆಗೆ ಒಳಗಾಗುವ ಸಾಧ್ಯತೆಗಳಿವೆ. ಹಾಗಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಸೂಕ್ತ ತಪಾಸಣೆ ಹಾಗೂ ಆರೈಕೆಗೆ ಒಳಗಾಗುವುದನ್ನು ಮರೆಯದಿರಿ.

ಕನ್ಯಾ

ಕನ್ಯಾ

ಇವರು ಹುಣ್ಣುಗಳಿಂದ ಬಳಲುತ್ತಾರೆ ಎಂದು ಹೇಳಲಾಗುವುದು. ಹೆಚ್ಚಿನ ಓಡಾಟ ನಡೆಸುವುದರಿಂದ ಇವರಿಗೆ ಹೊಟ್ಟೆಯಲ್ಲೂ ಕಿರಿಕಿರಿ ಉಂಟಾಗುವುದು. ಇವರು ಮಾಡಬೇಕಾದ ಸರಳ ವಿಧಾನ ಅಥವಾ ಪರಿಹಾರ ಎಂದರೆ ದೇಹಕ್ಕೆ ಒಂದಿಷ್ಟು ವಿಶ್ರಾಂತಿಯನ್ನು ಪಡೆಯುವುದು. ಸೂಕ್ತ ವ್ಯಾಯಾಮ ಮತ್ತು ಧ್ಯಾನಗಳ ಮೊರೆ ಹೋದರೆ ಗಮನವನ್ನು ಕೇಂದ್ರೀಕರಿಸಬಹುದು. ಆರೋಗ್ಯವೂ ಉತ್ತಮವಾಗಿರುವುದು. ಇನ್ನು ಕನ್ಯಾ ರಾಶಿಯವರಿಗೆ ಈ ತಿಂಗಳು ಸಮಸ್ಯೆಗಳಿಂದ ಉಂಟಾಗುವ ಒತ್ತಡ ಹಾಗೂ ಆತಂಕವು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ಬಿಡುವಿಲ್ಲದ ಪರಿಸ್ಥಿತಿಯ ನಡುವೆಯೂ ನೀವು ಆರೋಗ್ಯಕರ ಆಹಾರಗಳ ಸೇವನೆಯನ್ನು ಮರೆಯಬಾರದು. ಸ್ವಯಂ ಔಷಧಿಗಳಿಂದ ಆರೋಗ್ಯ ಸಮಸ್ಯೆ ಗುಣಮುಖವಾಗದೆ ಇದ್ದರೆ ವೈದ್ಯರ ತಪಾಸಣೆಗೆ ಮೊರೆ ಹೋಗಲೇ ಬೇಕು. ಏಕೆಂದರೆ ಸಮಸ್ಯೆ ಎಂದಿಗೂ ನೀವು ಅಂದುಕೊಂಡಂತೆ ಇರುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ತುಲಾ

ತುಲಾ

ಇವರು ಗಾಳಿಗುಳ್ಳೆಯ ಸಮಸ್ಯೆಗಳಿಂದ ಬಳಲುತ್ತಾರೆ. ಅನೌಪಚಾರಿಕ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಸೂಕ್ತವಾದ ಅಥವಾ ಪೌಷ್ಟಿಕಾಂಶದಿಂದ ಕೂಡಿರುವ ಆಹಾರವನ್ನು ಸ್ವೀಕರಿಸಬೇಕು. ಇದರಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಇನ್ನು ಜೂನ್ ತಿಂಗಳಲ್ಲಿ ಈ ರಾಶಿಯವರು ದೈಹಿಕ ಆರೋಗ್ಯಕ್ಕಿಂತ ಆಧ್ಯಾತ್ಮಿಕ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ಇರಿಸುವಿರಿ. ಆಧ್ಯಾತ್ಮಿಕ ವಿಚಾರದಲ್ಲಿ ಜ್ಞಾನೋದಯ ಪಡೆದ ನೀವು ದೈನಂದಿನ ಜೀವನದ ಮೇಲೆ ಗಮನಾರ್ಹ ಬದಲಾವಣೆ ಹಾಗೂ ಪರಿಣಾಮವನ್ನು ಅನುಭವಿಸುವಿರಿ. ಈ ತಿಂಗಳು ನೀವು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿಲ್ಲವಾದರೂ ನಿಮ್ಮ ಆಹಾರ ಪದ್ಧತಿ ಮತ್ತು ನಿಯಮಿತವಾದ ವ್ಯಾಯಾಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಹೊಂದಿದವರು ಕೊಂಚ ಪರಿಹಾರವನ್ನು ಕಂಡುಕೊಳ್ಳುವರು. ಹೊಸ ಲೈಂಗಿಕ ಅನುಭವಗಳಿಗೆ ನೀವು ತೆರೆದುಕೊಳ್ಳುವಿರಿ. ತಿಂಗಳ ಕೊನೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೆರೆದುಕೊಳ್ಳುವಿರಿ. ನಿಮ್ಮ ಈ ಪರಿಯ ವರ್ತನೆ ಅಥವಾ ಬದಲಾವಣೆಗಳು ನಿಮಗೆ ಮಾನಸಿಕವಾಗಿ ಒತ್ತಡವನ್ನು ಉಂಟುಮಾಡುವುದು.

ವೃಶ್ಚಿಕ

ವೃಶ್ಚಿಕ

ಇವರು ನಿರ್ಜಲೀಕರಣ ಸಮಸ್ಯೆಗಳಿಂದ ಬಳಲುತ್ತಾರೆ. ಸಮತೋಲಿತವಾದ, ಶಕ್ತಿಯುತವಾದ, ಆರೋಗ್ಯಕರವಾದ ದೈಹಿಕ ಆರೋಗ್ಯವನ್ನು ಪಡೆದುಕೊಳ್ಳಲು ದಿನವಿಡೀ ಸಾಕಷ್ಟು ನೀರನ್ನು ಹಾಗೂ ದ್ರವ ಪದಾರ್ಥಗಳನ್ನು ಸೇವಿಸಬೇಕು. ಇನ್ನು ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಆರೋಗ್ಯ ಸ್ಥಿತಿಯು ಲ್ಪ ಮಟ್ಟಿಗೆ ಕುಸಿತವನ್ನು ಕಾಣುತ್ತದೆ ಎನ್ನಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಮನೆಯವರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆಯೂ ಚಿಂತೆ ಮಾಡುವ ಅವಶ್ಯಕತೆ ಇರುವುದು. ಎಲ್ಲರಿಗೂ ನಿಯಮಿತವಾದ ಆರೋಗ್ಯ ತಪಾಸಣೆ ಮಾಡಿಸುವುದು ಸೂಕ್ತ. ಆದಷ್ಟು ದೈಹಿಕ ವಿಶ್ರಾಂತಿ ಪಡೆದುಕೊಳ್ಳುವುದರ ಬಗ್ಗೆ ಚಿಂತಿಸಿ. ಬಹಳ ಒತ್ತಡದ ಕೆಲಸದ ವೇಳಾಪಟ್ಟಿಯನ್ನು ಹೊಂದಿದ್ದರೆ ಸ್ವಲ್ಪ ಮಟ್ಟಿಗೆ ಸಡಿಲ ಅಥವಾ ವಿಶ್ರಾಂತಿ ಪಡೆಯಲು ಮರೆಯದಿರಿ. ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದವರು ಕೆಲವು ಪರಿಹಾರಗಳನ್ನು ಕಂಡುಕೊಳ್ಳುವರು. ನೀವು ಕೆಲವು ನೈಜ ಕಾಳಜಿಗಳ ಬಗ್ಗೆ ಸೂಕ್ತ ಗಮನ ನೀಡಬೇಕು. ಆಗ ಸ್ವಲ್ಪ ಚೇತರಿಕೆ ಕಾಣುವಿರಿ. ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ನಿಮಗೊಂದು ಆಸ್ತಿ ಎನ್ನುವುದನ್ನು ಮರೆಯದಿರಿ. ಈ ನಿಟ್ಟಿನಲ್ಲಿ ಸಮಸ್ಯೆ ಇರುವಾಗ ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ಹಾಗೂ ಆರೈಕೆಗೆ ಒಳಗಾಗುವುದು ಉತ್ತಮ.

ಧನು

ಧನು

ಈ ರಾಶಿಯ ವ್ಯಕ್ತಿಗಳು ಬೆನ್ನುನೋವು ಮತ್ತು ತಲೆನೋವು ಸಮಸ್ಯೆಗಳಿಂದ ಬಳಲುತ್ತಾರೆ. ಈ ವ್ಯಕ್ತಿಗಳು ತಲೆ, ಕುತ್ತಿಗೆ ಹಾಗೂ ಹಿಂಭಾಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿಟ್ಟುಕೊಂಡ ಒತ್ತಡವನ್ನು ಬಿಡಬೇಕು. ಕಹಿ ವಿಚಾರಗಳನ್ನು ಮನಸ್ಸಿನಿಂದ ತೆಗೆದುಹಾಕಿದರೆ ಉತ್ತಮ ಪರಿಹಾರ ದೊರೆಯುವುದು. ಇನ್ನು ಈ ರಾಶಿಯವರು ಜೂನ್ ತಿಂಗಳಲ್ಲಿ ಸಾಮಾನ್ಯವಾದ ಆರೋಗ್ಯವನ್ನು ಅನುಭವಿಸುತ್ತಾರೆ. ಹಾಗಂತ ಅಧಿಕ ಚಿಂತನೆ ನಡೆಸುವ ಅಗತ್ಯವಿಲ್ಲ. ಜೂನ್ 21ರ ನಂತರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಉಂಟಾಗುವುದು. ಬಳಲುತ್ತಿರುವ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕು. ಕೆಲವೊಂದು ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕಾಗುವುದು. ಆರೋಗ್ಯದ ಸಮಸ್ಯೆ ದೊಡ್ಡದೇ ಆಗಿರಲಿ ಅಥವಾ ಚಿಕ್ಕದೇ ಆಗಿರಲಿ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಬೇಕು. ಆರೋಗ್ಯದ ಕುರಿತು ಹೆಚ್ಚು ಗಮನ ನೀಡಬೇಕು ಎಂದು ಅತಿಯಾದ ಬೆಡ್‍ರೆಸ್ಟ್ ಕೂಡ ಒಳ್ಳೆಯದಲ್ಲ. ಕುಟುಂಬದವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಲು ಪ್ರಯತ್ನಿಸಿ. ಸಮಯಗಳ ಪರಿವಿಲ್ಲದಂತೆ ಕೆಲಸದಲ್ಲಿ ತಲ್ಲೀನರಾಗುವುದನ್ನು ನಿಲ್ಲಿಸಿ. ನಿಮ್ಮ ಆರೋಗ್ಯದ ಉತ್ತಮ ಸ್ಥಿತಿಗೆ ಭಾವನೆಗಳು ಪ್ರಮುಖವಾಗಿರುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

ಮಕರ

ಮಕರ

ಈ ರಾಶಿಯ ವ್ಯಕ್ತಿಗಳು ಮೊಣಕಾಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಇವರ ವ್ಯಕ್ತಿತ್ವದ ಪ್ರಕಾರ ಇವರು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎನ್ನಲಾಗುವುದು. ಮಂಡಿ ಸಮಸ್ಯೆ ಅಧಿಕವಾಗಿ ಕಾಡುವುದು. ಹಾಗಾಗಿ ಸಾಕಷ್ಟು ವಿಶ್ರಾಂತಿಯನ್ನು ಪಡೆಯಬೇಕು.

ಕುಂಭ

ಕುಂಭ

ಈ ರಾಶಿಯವರು ತೋಳು ಮತ್ತು ಕಾಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಇವರು ಸದಾ ಕೆಲಸದಲ್ಲಿ ನಿರತರಾಗಿರುವುದು ಹಾಗೂ ಭಾರವಾದ ವಸ್ತುವನ್ನು ಎತ್ತುತ್ತಿರುತ್ತಾರೆ. ಈ ನಿಟ್ಟಿನಲ್ಲಿಯೇ ತೋಳು ಹಾಗೂ ಕಾಲಿಗೆ ಸಂಬಂಧಿಸಿದ ನೋವು ಹಾಗೂ ಆರೋಗ್ಯ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುತ್ತದೆ. ಅಲ್ಲದೆ ಇವರು ಅಲರ್ಜಿ ಹಾಗೂ ಅಸ್ತಮದಂತಹ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುವುದು. ಹಾಗಾಗಿ ಇವರು ಭಾರ ಎತ್ತುವುದು ಹಾಗೂ

ಕೆಲಸದಲ್ಲಿ ನಿಯಮಿತವಾಗಿ ತೊಡಗಿಕೊಳ್ಳಬೇಕು. ಜೊತೆಗೆ ಸೂಕ್ತ ವ್ಯಾಯಾಯಮ ಮತ್ತು ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಣೆ ಹೊಂದುವುದು.

ಮೀನ

ಮೀನ

ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಜೊತೆಗೆ ಶೀತದಿಂದ ಆರೋಗ್ಯ ಸಮಸ್ಯೆಯನ್ನು ಅನುಭವಿಸುವರು. ಶೀತದ ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಲು ಸೂಕ್ತ ಆರೈಕೆಗೆ ಒಳಗಾಗಬೇಕು. ಆರೋಗ್ಯ ಸಮಸ್ಯೆ ಉಂಟಾಗುವ ಮೊದಲೇ ಸೂಕ್ತ ಆರೋಗ್ಯ ಕ್ರಮವನ್ನು ಅನುಸರಿಸಬೇಕು.

English summary

The Health Problem, Each Person, Will Face As Per Zodiac

Astrology is not only used to find out about the personality of an individual but also for other things that can be predicted based on the science. Since our brain and body are said to be intrinsically linked, certain things will make you the person you are. Figuring out health problems for each zodiac sign is not a difficult task, but it is a way in which you get to know your mind and body.
X
Desktop Bottom Promotion