For Quick Alerts
ALLOW NOTIFICATIONS  
For Daily Alerts

ಸಾಯಲು ಗುಂಡು ಹಾರಿಸಿಕೊಂಡ ವ್ಯಕ್ತಿ, ಕೊನೆಗೆ ಮುಖ ಕಸಿ ಮಾಡಿಕೊಂಡು ಹೊಸ ಜೀವನ ಪಡೆದ!

|

ಜೀವನದಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಎರಡನೇ ಅವಕಾಶ ಸಿಗುವುದು ಕಡಿಮೆ. ಆದರೆ ಕೆಲವು ಮಂದಿ ಖಿನ್ನತೆಯಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೂ ಸುಂದರ ಜೀವನವನ್ನು ಮುಗಿಸಲು ಹೋಗುವರು. ಈ ಸಮಯದಲ್ಲಿ ಅವರು ಸಾವಿನಿಂದ ಪಾರಾಗುವರು. ಇದು ಅವರಿಗೆ ಪುನರ್ಜನ್ಮ ಸಿಕ್ಕಿದಂತೆ. ಇಂತಹ ಹಲವಾರು ಘಟನೆಗಳನ್ನು ನಾವು ಕೇಳಿರಬಹುದು ಅಥವಾ ನಮ್ಮ ಸುತ್ತಲು ನೋಡಿರಬಹುದು. ದೊಡ್ಡ ಮಟ್ಟದ ಅಪಾಯದಿಂದ ಪಾರಾಗಿ ಬಂದವರು ಜೀವನದಲ್ಲಿ ಎರಡನೇ ಅವಕಾಶ ಪಡೆದುಕೊಳ್ಳುವರು. ಇದು ದೇವರು ನೀಡುವಂತಹ ವರವೆಂದರೂ ತಪ್ಪಾಗದು.

ಈ ಲೇಖನದಲ್ಲಿ ಹೇಳಲು ಹೊರಟಿರುವುದು ವ್ಯಕ್ತಿಯೊಬ್ಬ ಸಾಯಲು ಗುಂಡು ಹಾರಿಸಿಕೊಂಡರೂ ಬದುಕುಳಿಯುತ್ತಾನೆ. ಆದರೆ ಆತನ ಮುಖ ಮಾತ್ರ ಛಿದ್ರವಾಗುತ್ತದೆ. ಇಂತಹ ಸಮಯದಲ್ಲಿ ಮುಖಕ್ಕೆ ಕಸಿ ಮಾಡಿಕೊಂಡು ಮತ್ತೆ ಸಾಮಾನ್ಯ ಜೀವನ ನಡೆಸುತ್ತಿದ್ದಾನೆ. ಜೀವ ಕಳೆಯಲು ಹೋಗಿದ್ದವ ಮತ್ತೆ ತನ್ನ ಹೊಸ ಜೀವನ ಪಡೆದಿದ್ದಾನೆ. ಖಿನ್ನತೆಯಲ್ಲಿದ್ದ ಈ ವ್ಯಕ್ತಿಯ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ. ಜೀವನವೇ ಬೇಡವೆಂದು ಹೋಗಿದ್ದವನ ಜೀವ ಬದಲಾದ ರೀತಿಯನ್ನು ನೀವು ಓದಿಕೊಳ್ಳಿ.

ಖಿನ್ನತೆಗೆ ಒಳಗಾದ ವ್ಯಕ್ತಿ

ಖಿನ್ನತೆಗೆ ಒಳಗಾದ ವ್ಯಕ್ತಿ

ಕ್ಯಾಮರೊನ್ ಅಂಡರ್ ವುಡ್ ಎಂಬ ವ್ಯಕ್ತಿ ತುಂಬಾ ಖಿನ್ನತೆಯಿಂದ ಬಳಲುತ್ತಿದ್ದ. ಜೀವನದಲ್ಲಿನ ಹಲವಾರು ಸಮಸ್ಯೆಗಳಿಂದ ಖಿನ್ನತೆಗೆ ಹೋಗುವುದು ಸಹಜವೆನ್ನಬಹುದು. ಆದರೆ ಕ್ಯಾಮರೊನ್ ಗೆ ಖಿನ್ನತೆ ಎಷ್ಟು ಆವರಿಸಿತ್ತು ಎಂದರೆ ಆತ ತನ್ನ ಪ್ರಾಣ ಕಳೆದುಕೊಳ್ಳಲು ಬಯಸಿದ್ದ. ಇದರಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ. ಗುಂಡು ಹಾರಿಸಲ್ಪಟ್ಟ ಕಾರಣಕ್ಕೆ ಆತನ ಮೂಗು, ದವಡೆ ಮತ್ತು ಹಲ್ಲುಗಳು ಸಂಪೂರ್ಣವಾಗಿ ಧ್ವಂಸವಾದವು.

Most Read: ಅಚ್ಚರಿ ಜಗತ್ತು: ಹಣೆಗೆ ನಾಲಿಗೆ ತಾಗಿಸುವ ನೇಪಾಳದ ವ್ಯಕ್ತಿ!

ಆತ ಮತ್ತೆ ನಗುತ್ತಿದ್ದಾನೆ

ಆತ ಮತ್ತೆ ನಗುತ್ತಿದ್ದಾನೆ

ಗುಂಡು ಹಾರಿಸಲ್ಪಟ್ಟ ಕಾರಣದಿಂದ ಕಾಮರೊನ್ ಮುಖವು ಸಂಪೂರ್ಣವಾಗಿ ಛಿದ್ರವಾಗಿದೆ. ಇದರಿಂದ ಆತನ ಮುಖವನ್ನು ನೋಡಲು ಸಾಧ್ಯವಿಲ್ಲದಂತಾಗಿದೆ. ಆದರೆ ಇದನ್ನು ಆತನಿಗೂ ಸಹಿಸಿಕೊಳ್ಳಲು ಆಗುತ್ತಿಲ್ಲ. ವೈದ್ಯರು ಆತನಿಗೆ ಕೆಲವೊಂದು ಶಸ್ತ್ರಚಿಕಿತ್ಸೆ ನಡೆಸಿ ಹಿಂದಿನಂತೆ ಮುಖವನ್ನು ಮರಳಿ ತರಲು ಪ್ರಯತ್ನಿಸುತ್ತಿದ್ದಾರೆ. 25 ಗಂಟೆಗಳ ಕಾಲ ನಡೆದ ಮುಖ ಕಸಿ ಶಸ್ತ್ರಚಿಕಿತ್ಸೆ ಬಳಿಕ ಆತ ಮತ್ತೆ ನಗುತ್ತಿದ್ದಾನೆ. ತಿನ್ನುವುದು ಮತ್ತು ಮಾತನಾಡಲು ಕೂಡ ಸಾಧ್ಯವಾಗಿದೆ.

ಕ್ಯಾಮರೊನ್ ಅಂಡರ್ ವುಡ್ ನ ತಾಯಿ ಆತನನ್ನು ಮುಖ ಕಸಿ ಆಸ್ಪತ್ರೆಗೆ ದಾಖಲಿಸಲು ಅರ್ಜಿ ಸಲ್ಲಿಸಿದರು…

ಕ್ಯಾಮರೊನ್ ಅಂಡರ್ ವುಡ್ ನ ತಾಯಿ ಆತನನ್ನು ಮುಖ ಕಸಿ ಆಸ್ಪತ್ರೆಗೆ ದಾಖಲಿಸಲು ಅರ್ಜಿ ಸಲ್ಲಿಸಿದರು…

ಕ್ಯಾಮರೊನ್ ಬದುಕಿ ಉಳಿಯುವುದಿಲ್ಲವೆಂದು ವೈದ್ಯರು ಹೇಳಿದರು. ಆದರೆ ಆತ ವೈದ್ಯರ ಮಾತನ್ನು ಸುಳ್ಳಾಗಿಸಿದ್ದಾನೆ. ಆತ ಹೋರಾಟಗಾರನೆಂದು ತಿಳಿದಿದ್ದ ಆತನ ತಾಯಿ, ಎನ್ ವೈಯು ಲ್ಯಾಂಗೊನ್ ನಲ್ಲಿರುವ ವೈದ್ಯಕೀಯ ಕೇಂದ್ರದಲ್ಲಿರುವಂತಹ ಮುಖ ಕಸಿ ವಿಭಾಗಕ್ಕೆ ದಾಖಲಿಸಲು ಅರ್ಜಿ ಸಲ್ಲಿಸಿದರು.

Most Read: ಈ ಮಹಿಳೆಯ ಬಾಲ್ಯವನ್ನೇ ನುಂಗಿದ ಜನ್ಮ ಗುರುತು!

ದಾನಿಯ ಬಗ್ಗೆ…

ದಾನಿಯ ಬಗ್ಗೆ…

ಒಂದು ತಿಂಗಳ ಬಳಿಕ ಅವರಿಗೆ ಆಸ್ಪತ್ರೆಯಿಂದ ಒಂದು ಕರೆ ಬಂತು ಮತ್ತು ವಿಲ್ ಪಿಶರ್ ಎನ್ನುವ ದಾನಿ ಇದ್ದಾರೆ ಎಂದು ಅವರು ಮಾಹಿತಿ ನೀಡಿದರು. ವಿಲ್ ಫಿಷರ್ ಒಬ್ಬರು ನೋಂದಾಯಿತ ದಾನಿಯಾಗಿದ್ದರು. ಇವರು ನ್ಯೂಯಾರ್ಕ್ ನಗರದಲ್ಲಿನ ಯುವ ಲೇಖಕ ಮತ್ತು ಮತ್ತು ಸಿನಿಮಾ ನಿರ್ಮಾಪಕ. ಇವರು ಜಾನ್ಸ್ ಹೊಪ್ಕಿನ್ಸ್ ಯೂನಿವರ್ಸಿಟಿಯಲ್ಲಿ ಓದಿದ್ದರು. ಮಾನಸಿಕ ಕಾಯಿಲೆಯಿಂದಾಗಿ ಅವರು ಸಾವನ್ನಪ್ಪಿದ್ದರು. ಇವರ ಮುಖವನ್ನು ಕ್ಯಾಮರೊನ್ ಗೆ ಕಸಿ ಮಾಡಲು ನಿರ್ಧಾರ ಮಾಡಲಾಯಿತು.

ಶಸ್ತ್ರಚಿಕಿತ್ಸೆಯು ಯಶಸ್ವಿಯಾಯಿತು

ಶಸ್ತ್ರಚಿಕಿತ್ಸೆಯು ಯಶಸ್ವಿಯಾಯಿತು

25 ಗಂಟೆಗಳ ಕಾಲ ನಡೆದ ಮುಖ ಕಸಿ ಶಸ್ತ್ರಚಿಕಿತ್ಸೆಯು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿತು. ಕ್ಯಾಮರೊನ್ ಗೆ ಮತ್ತು ಮುಖ ಮತ್ತು ಹಲ್ಲುಗಳನ್ನು ಜೋಡಿಸಲಾಯಿತು. ಅದಾಗ್ಯೂ, ಹೊಸ ಮುಖಕ್ಕೆ ಹೊಂದಿಕೊಳ್ಳಲು ಆತನಿಗೆ ಹೆಚ್ಚಿನ ಸಮಯ ಬೇಕಾಯಿತು. ಯಾಕೆಂದರೆ ಮುಖದ ಚಲನವಲನ ಮತ್ತು ಭಾವನೆಗೆ ಹೊಂದಿಕೊಳ್ಳಬೇಕಾಯಿತು. ಇದೊಂದು ವೈದ್ಯಕೀಯ ಲೋಕದ ಮರುಸೃಷ್ಟಿ ಎಂದರೂ ತಪ್ಪಾಗದು.

ಕ್ಯಾಮರೊನ್ ಈಗ ತುಂಬಾ ಸಂತೋಷದಲ್ಲಿರುವ ವ್ಯಕ್ತಿ

ಕ್ಯಾಮರೊನ್ ಈಗ ತುಂಬಾ ಸಂತೋಷದಲ್ಲಿರುವ ವ್ಯಕ್ತಿ

ಗುಂಡು ಹಾರಿಸಿಕೊಂಡು ಮುಖ ಛಿದ್ರ ಮಾಡಿಕೊಂಡ ಬಳಿಕ ಕ್ಯಾಮರೊನ್ ಮಾಸ್ಕ್ ಧರಿಸಿ ಕೊಂಡು ಹೊರಗಡೆ ಹೋಗುತ್ತಿದ್ದ. ಆದರೆ ಇದರಿಂದ ಆತನಿಗೆ ತುಂಬಾ ಬೇಸರವಾಗುತ್ತಿತ್ತು. ಆದರೆ ಈಗ ಆತನ ಮುಖಕ್ಕೆ ಕಸಿ ಮಾಡಿಕೊಂಡಿರುವ ಕಾರಣದಿಂದ ತುಂಬಾ ಖುಷಿಯಿಂದ ಹೊರಗಡೆ ಹೋಗಿ ಸುತ್ತಾಡಿಕೊಂಡು ಬರುತ್ತದ್ದಾನೆ ಮತ್ತು ಆತನಿಗೆ ಯಾವುದೇ ರೀತಿಯ ಬೇಸರವು ಇಲ್ಲ. ಕ್ಯಾಮರೊನ್ ವೈದ್ಯಕೀಯ ಲೋಕದ ಕರಾಮತ್ತಿನಿಂದ ಹೊಸ ಹಾಗೂ ಸಾಮಾನ್ಯ ಜೀವನ ಸಾಗಿಸುತ್ತಿದ್ದಾನೆ. ಆದರೆ ತನ್ನ ಹಳೆ ಮುಖವನ್ನು ಮರೆಯಲು ಸಾಧ್ಯವಿಲ್ಲವೆಂದು ಆತ ಹೇಳುತ್ತಿದ್ದಾನೆ.ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ತಿಳಿಸಲು ಮರೆಯಬೇಡಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.

All Image Source

English summary

Story Of A Man Who Got A Face Transplant

Cameron Underwood had tried to take his own life with a shotgun in June 2016. He had been battling depression for years and had been drinking all day. He had surgery at NYU Langone Medical Center's and got a new face transplant unit. His donor was 23-year-old Will Fisher, an upcoming filmmaker and writer who studied at Johns Hopkins University.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more