For Quick Alerts
ALLOW NOTIFICATIONS  
For Daily Alerts

ತನ್ನದೇ ಸಾಕ್ಸ್ ಮೂಸಿ ನೋಡಿದ ತಪ್ಪಿಗೆ, ವ್ಯಕ್ತಿಗೆ ಶ್ವಾಸಕೋಶದ ಸೋಂಕು, ಬಂತಂತೆ!

|

ಶೂ ಜತೆಗೆ ಧರಿಸುವಂತಹ ಸಾಕ್ಸ್ ಒಂದೆರಡು ದಿನಗಳಲ್ಲಿ ವಾಸನೆ ಬರಲು ಆರಂಭಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಕಾಲು ಬೆವರುವುದು ಮತ್ತು ಅಲ್ಲಿ ಬ್ಯಾಕ್ಟೀರಿಯಾಗಳು, ಶಿಲೀಂಧ್ರಿಯಗಳು ನಿರ್ಮಾಣವಾಗಿ ವಾಸನೆ ಬರಲು ಆರಂಭವಾಗುವುದು. ಇನ್ನು ಕೆಲವರು ಪ್ರತನಿತ್ಯ ಬೇರೆ ಬೇರೆ ಸಾಕ್ಸ್ ಗಳನ್ನು ಧರಿಸಿದರೂ ಅವರ ಸಾಕ್ಸ್ ಮಾತ್ರ ಭಾರೀ ವಾಸನೆ ಬರುತ್ತಲೇ ಇರುವುದು. ಪಾದದ ಅಡಿಭಾಗದಲ್ಲಿ ಅತಿಯಾಗಿ ಬೆವರುವುದೇ ಇದಕ್ಕೆ ಕಾರಣವಾಗಿದೆ. ಇಂತಹ ವ್ಯಕ್ತಿಗಳು ಶೂ ತೆಗೆದರೆ ಅವರ ಬದಿಯಲ್ಲಿ ನಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುವುದು.

ಆದರೆ ಇಲ್ಲಿ ಹೇಳಲು ಹೊರಟಿರುವುದು ಮನುಷ್ಯನ ಕೆಲವು ವಿಚಿತ್ರವಾಗಿರುವಂತಹ ಚಟಗಳ ಬಗ್ಗೆ. ಅದು ಕೂಡ ನಶೆ ಏರಿಸಿಕೊಳ್ಳಲು ಕೆಲವರು ಏನೆಲ್ಲಾ ವಿಧಗಳನ್ನು ಕಂಡುಕೊಳ್ಳುತ್ತಾರೆ ಎಂದರೆ ಅದನ್ನು ನೋಡಿ ನಮಗೆ ದಿಗಿಲಾಗುವುದು. ಇಂತಹ ಒಂದು ಸುದ್ದಿ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಯಾಕೆಂದರೆ ಆರಂಭದಲ್ಲಿ ಇದರಿಂದ ಯಾವುದೇ ಅಪಾಯವಿಲ್ಲವೆಂದು ನಿಮಗೆ ಅನಿಸಿದರೂ ಬಳಿಕ ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ.

ಇಲ್ಲೊಬ್ಬ ವ್ಯಕ್ತಿ ತನ್ನ ಸಾಕ್ಸ್ ನ ವಾಸನೆಯನ್ನು ಪ್ರತಿನಿತ್ಯ ತೆಗೆದುಕೊಳ್ಳುತ್ತಲಿದ್ದ. ಆದರೆ ಅದರಿಂದ ಆತ ಅನಾರೋಗ್ಯಕ್ಕೆ ಒಳಗಾಗಿ ಸಾವಿನ ಕದತಟ್ಟಿ ಬಂದಿದ್ದಾನೆ. ಪ್ರತಿನಿತ್ಯ ಮಾಡುವಂತಹ ಕೆಲವೊಂದು ಅಸಾಮಾನ್ಯ ವಿಷಯಗಳು ನಮ್ಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ಈ ಲೇಖನದ ಮೂಲಕ ತಿಳಿಯಿರಿ....

ಘಟನೆಯು ನಡೆದಿರುವುದು ನಮ್ಮ ನೆರೆ ರಾಷ್ಟ್ರ ಚೀನಾದಲ್ಲಿ…

ಘಟನೆಯು ನಡೆದಿರುವುದು ನಮ್ಮ ನೆರೆ ರಾಷ್ಟ್ರ ಚೀನಾದಲ್ಲಿ…

ಈ ಘಟನೆಯು ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ವ್ಯಕ್ತಿಯನ್ನು ಆತನ ಅಡ್ಡ ಹೆಸರಿನಿಂದ ಮಾತ್ರ ಗುರುತಿಸಲಾಗಿದೆ. ಆತನನ್ನು ಪೆಂಗ್ ಎಂದು ಗುರುತಿಸಲಾಗಿದೆ. ಪೆಂಗ್ ಶ್ವಾಸಕೋಶವು ಹಲವಾರು ಶಿಲೀಂಧ್ರ ಸೋಂಕಿಗೆ ಒಳಗಾಗಿತ್ತು.

ಆತನಿಗೆ ಎದೆ ನೋವು ಕಾಣಿಸಿಕೊಂಡಿತ್ತು

ಆತನಿಗೆ ಎದೆ ನೋವು ಕಾಣಿಸಿಕೊಂಡಿತ್ತು

ಪೆಂಗ್ ಎನ್ನುವಾತ ತನಗೆ ತೀವ್ರವಾಗಿ ಎದೆ ಕಟ್ಟಿದಂತೆ ಆಗಿದೆ ಎಂದು ಹೇಳಿಕೊಂಡು ವೈದ್ಯರ ಬಳಿಗೆ ತೆರಳಿದ್ದ. ಆತ ತನಗೆ ಕೆಮ್ಮು ಮತ್ತು ಎದೆ ನೋವು ಕೂಡ ಇರುವುದಾಗಿ ವೈದ್ಯರ ಬಳಿ ಹೇಳಿದ್ದ. ಆತ ನ್ಯುಮೋನಿಯಾದಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಭಾವಿಸಿದ್ದರು. ಆದರೆ ಆತನ ಪರಿಸ್ಥಿತಿ ತುಂಬಾ ಹದಗೆಟ್ಟ ಪರಿಣಾಮ ವೈದ್ಯರು ಆತನ ಮತ್ತಷ್ಟು ಪರೀಕ್ಷೆಗಳನ್ನು ಮಾಡಿಸಿದರು.

Most Read: ರಿಯಲ್ ಸ್ಟೋರಿ: ಮಾವನ ಹಿಂಸೆಯ ವಿಡಿಯೋ ಮಾಡಿ, ಸರಿಯಾಗಿ ಬುದ್ಧಿ ಕಲಿಸಿದ ಸೊಸೆ!

ಆತನ ಜೀವನಶೈಲಿ ಪರಿಶೀಲಿಸಿದಾಗ ಅವರಿಗೆ ಎಲ್ಲಾವೂ ತಿಳಿಯಿತು!

ಆತನ ಜೀವನಶೈಲಿ ಪರಿಶೀಲಿಸಿದಾಗ ಅವರಿಗೆ ಎಲ್ಲಾವೂ ತಿಳಿಯಿತು!

ಪೆಂಗ್ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಲು ಆರಂಭಿಸಿತು ಮತ್ತು ಆತ ಸುಧಾರಣೆಯಾಗುವ ಯಾವ ಲಕ್ಷಣವನ್ನೂ ತೋರಿಸಲಿಲ್ಲ. ಸಮಯ ಕಳೆದಂತೆ ಇದು ಮತ್ತಷ್ಟು ಕೆಡುತ್ತಾ ಹೋಯಿತು. ಈ ವೇಳೆ ಪೆಂಗ್ ಗೆ ತುಂಬಾ ವಿಚಿತ್ರವಾದ ತನ್ನದೇ ಸಾಕ್ಸ್ ನ್ನು ಮೂಸಿ ನೋಡಿಕೊಳ್ಳುವ ಅಭ್ಯಾಸವಿತ್ತು ಎಂದು ತಿಳಿದುಬಂತು. ಪೆಂಗ್ ಪ್ರತಿನಿತ್ಯವೂ ತನ್ನ ಸಾಕ್ಸ್ ನ್ನು ಮೂಸಿ ನೋಡುತ್ತಲಿದ್ದ.

ಶಿಲೀಂಧ್ರದಿಂದ ಸೋಂಕು ಶ್ವಾಸಕೋಶದಲ್ಲಿ ಬೆಳವಣಿಗೆಯಾಗಿತ್ತು!

ಶಿಲೀಂಧ್ರದಿಂದ ಸೋಂಕು ಶ್ವಾಸಕೋಶದಲ್ಲಿ ಬೆಳವಣಿಗೆಯಾಗಿತ್ತು!

ಆತನ ಸಾಕ್ಸ್ ನಲ್ಲಿ ಬೆಳೆದಿದ್ದ ಶಿಲೀಂಧ್ರಗಳು ಮೂಗಿನ ಮೂಲಕ ಒಳಗೆ ಹೋಗಿ ಅಲ್ಲಿ ಶ್ವಾಸಕೋಶದಲ್ಲಿ ಸೋಂಕನ್ನು ಉಂಟು ಮಾಡಿತ್ತು. ಆತ ಪ್ರತೀ ಸಲ ಮೂಸಿ ನೋಡಿದಾಗ ಶಿಲೀಂಧ್ರಗಳು ಶ್ವಾಸಕೋಶದೊಳಗೆ ಹೋಗುತ್ತಲಿದ್ದವು. ಪೆಂಗ್ ನ ಪ್ರತಿರೋಧಕ ವ್ಯವಸ್ಥೆಯು ತುಂಬಾ ದುರ್ಬಲವಾಗಿದ್ದ ಕಾರಣದಿಂದಾಗಿ ಆತನಿಗೆ ಹೆಚ್ಚಿನ ವಿಶ್ರಾಂತಿಯು ಸಿಗಲಿಲ್ಲ ಮತ್ತು ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿತು.

 ಆ ವ್ಯಕ್ತಿ ಚೇತರಿಸಿಕೊಂಡ

ಆ ವ್ಯಕ್ತಿ ಚೇತರಿಸಿಕೊಂಡ

ವೈದ್ಯರು ಹಲವಾರು ಪರೀಕ್ಷೆಗಳನ್ನು ಮಾಡಿಕೊಂಡು ಇದಕ್ಕೆ ಮೂಲ ಕಾರಣವನ್ನು ಹುಡುಕಿಕೊಂಡ ಬಳಿಕ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ವೈದ್ಯರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಾಕೆಂದರೆ ಈ ಸುದ್ದಿಯನ್ನು ಹಲವಾರು ಮಂದಿ ಬೆಚ್ಚಿ ಬಿದ್ದರು. ಯಾಕೆಂದರೆ ಹೆಚ್ಚಿನವರಿಗೆ ಪ್ರತಿನಿತ್ಯ ಸಾಕ್ಸ್ ಧರಿಸುವ ಮೊದಲು ಅದನ್ನು ಮೂಸಿ ನೋಡುವಂತಹ ಅಭ್ಯಾಸವಿದೆ.

Most Read: ಕೇವಲ ಸ್ನಾನ ಮಾಡಿದರೇ ಸಾಲದು! ದೇಹದ ಈ ಅಂಗಗಳನ್ನು ಸರಿಯಾಗಿ ಸ್ವಚ್ಛ ಮಾಡುತ್ತಿದ್ದೀರಾ?

 ಆ ವ್ಯಕ್ತಿ ಚೇತರಿಸಿಕೊಂಡ

ಆ ವ್ಯಕ್ತಿ ಚೇತರಿಸಿಕೊಂಡ

ಈ ಸುದ್ದಿ ಓದಿದ ಬಳಿಕ ಅವರು ಇದನ್ನು ಬಿಟ್ಟು ಬಿಟ್ಟಿದ್ದಾರೆ. ನಿಮಗೂ ಇಂತಹ ಅಭ್ಯಾಸವಿದ್ದರೆ ಅದನ್ನು ಈಗಿಂದಲೇ ಬಿಟ್ಟುಬಿಡಿ. ಈ ವಿಚಿತ್ರ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

English summary

Smelling His Own Socks Gave This Man Lung Infection!

There are so many weird things that people get addicted to and initially when one looks at these things they tend to seem harmless, but over a period of time, these things prove to be harmful. Here is an example of such a case where a man almost lost his life after it was discovered that he loved smelling his socks every day.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more