For Quick Alerts
ALLOW NOTIFICATIONS  
For Daily Alerts

ಈ 9 ರಾಶಿಯವರು ತುಂಬಾನೇ ದುರಾಸೆಯನ್ನು ಹೊಂದಿರುವ ವ್ಯಕ್ತಿಗಳು

|

ಆಸೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕಾದ ಗುಣ. ಈ ಗುಣವು ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಆಸೆ ಎನ್ನುವುದು ಇಲ್ಲದೆಯೇ ಯಾವ ವ್ಯಕ್ತಿಯೂ ಸಾಧನೆ ಅಥವಾ ಒಂದು ಗುರಿಯನ್ನು ಹೊಂದಿರುವುದಿಲ್ಲ. ಜೀವನದಲ್ಲಿ ಒಂದು ಗುರಿ ಸಾಧಿಸುವ ಆಸೆ ಇದ್ದರೆ ತನ್ನ ಜೀವನದಲ್ಲಿ ಮುಂದೆ ಬರುತ್ತಾನೆ. ಆಸೆಯನ್ನು ನೆರವೇರಿಸಿಕೊಳ್ಳುವ ಉದ್ದೇಶದಿಂದ ಸಾಕಷ್ಟು ಶ್ರಮವನ್ನು ವಹಿಸುತ್ತಾನೆ. ಜೀವನದಲ್ಲಿ ಆಸೆ ಎನ್ನುವುದು ಇಲ್ಲದೆ ಹೋದರೆ ವ್ಯಕ್ತಿಯ ಬದುಕು ಬರಿದಾಗಿರುತ್ತದೆ. ಜೊತೆಗೆ ನಿರಸದಿಂದಲೂ ಜೀವನ ಸಾಕೆನಿಸುವ ಅಭಿಪ್ರಾಯಕ್ಕೆ ಬಂದುಬಿಡುವುದು.

ಜೀವನಕ್ಕೆ ಆಸೆ ಎನ್ನುವುದು ಇರಬೇಕು. ಆದರೆ ದುರಾಸೆ ಇರಬಾರದು. ವ್ಯಕ್ತಿ ದುರಾಸೆ ಶರಣಾದಾಗ ಕ್ರೂರಿಯಾಗುತ್ತಾನೆ. ಜೊತೆಗೆ ಅವನಲ್ಲಿ ಸ್ವಾರ್ಥವು ಹೆಚ್ಚಾಗಿ ಸಮಾಜಕ್ಕೆ ಅಪಾಯಕಾರಿ ವ್ಯಕ್ತಿಯಾಗಿಯೂ ಪರಿವರ್ತನೆ ಹೊಂದುವನು. ದುರಾಸೆಯಿಂದ ಕೂಡಿರುವ ವ್ಯಕ್ತಿಗಳು ಮನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಆತಂಕವನ್ನುಂಟುಮಾಡುವರು. ಈ ದುರಾಸೆ ಎನ್ನುವುದು ಕೆಲವು ರಾಶಿಚಕ್ರದವರ ಹುಟ್ಟುಗುಣವಾಗಿರುತ್ತದೆ. ಅದಕ್ಕೆ ಗ್ರಹಗತಿಗಳ ಪರಿಣಾಮವೇ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ದುರಾಸೆಯ ಸುಳಿಯಲ್ಲಿ ತೇಲುವ ರಾಶಿಚಕ್ರಗಳು ಯಾವವು? ಅವು ಯಾವ ಕ್ರಮ ಸಂಖ್ಯೆಯಲ್ಲಿ ನಿಲ್ಲುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.....

ಮಕರ ರಾಶಿ

ಮಕರ ರಾಶಿ

ಈ ರಾಶಿಚಕ್ರದವರು ಸಿಂಹ ರಾಶಿಯವರಂತೆ ಐಷಾರಾಮಿ ಜೀವನವನ್ನು ಪ್ರೀತಿಸುತ್ತಾರೆ. ಇವರು ಅಲಂಕಾರಿ ವಸ್ತುಗಳು, ಕಾರು, ಆಧುನಿಕ ಶೈಲಿಯ ಮನೆ ಸೇರಿದಂತೆ ಎಲ್ಲಾ ವಸ್ತು ವಿಷಯಗಳ ಬಗ್ಗೆ ಕನಸು ಕಾಣುತ್ತಾರೆ. ಇವರ ಕನಸನ್ನು ಪೂರೈಸಲು ಹಣ ಏಕೆ ಬೇಕು? ಎನ್ನುವುದಕ್ಕೆ ಇವು ಮುಖ್ಯ ಕಾರಣ ಎನಿಸಿಕೊಳ್ಳುತ್ತವೆ. ಮನೆಗೆ ಅಗತ್ಯವಿರುವಾಗ ಸಾಲ ನೀಡಲು ಅಥವಾ ಸಹಾಯ ಮಾಡಲು ಸಾಕಷ್ಟು ಉದಾರತೆಯನ್ನು ತೋರುತ್ತಾರೆ. ಆದರೆ ಇವರು ಜೀವನದ ಬಹುಪಾಲು ವಿಚಾರದಲ್ಲಿ ದುರಾಸೆಯಿಂದ ಕೂಡಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಈ ರಾಶಿಯವರಿಗೆ ತಮ್ಮ ವ್ಯವಹಾರವನ್ನು ಹೇಗೆ ನಿರ್ವಹಿಸಬೇಕು? ಹೆಚ್ಚು ಶ್ರಮವಹಿಸದೆ ಹಣವನ್ನು ಹೇಗೆ ಗಳಿಸಬಹುದು? ಎನ್ನುವ ವಿಚಾರಗಳನ್ನು ಚೆನ್ನಾಗಿ ತಿಳಿದಿದ್ದಾರೆ. ಇವರು ತಮ್ಮ ಹಣಕಾಸಿನ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಕನ್ಯಾರಾಶಿಯ ಮಹಿಳೆಯರಿಗಿಂತ ಪುರುಷರು ಹೆಚ್ಚು ಉತ್ಸಾಹದಲ್ಲಿ ಇರುತ್ತಾರೆ. ಇವರು ತಮ್ಮ ಸಂಗಾತಿಗಾಗಿ ವಸ್ತುಗಳನ್ನು ಖರೀದಿಸುವುದರಲ್ಲಿ ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಅಂತೆಯೇ ತಮಗಾಗಿ ಮಾಡಿಕೊಳ್ಳುವಾಗ ಹಾಗೂ ಬಯಸುವಾಗ ಸಾಕಷ್ಟು ದುರಾಸೆಯನ್ನು ಹೊಂದಿರುತ್ತಾರೆ.

ಕರ್ಕ

ಕರ್ಕ

ಈ ರಾಶಿಯವರು ತಮ್ಮ ಕುಟುಂಬದವರಿಗೆ ಸಹಾಯ ಮಾಡಲು ಅಥವಾ ಉಡುಗೊರೆ ನೀಡಲು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ಬದಲಿಗೆ ಉದಾರ ಭಾವವನ್ನು ಹೊಂದಿರುತ್ತಾರೆ. ಐಷಾರಾಮಿ ಜೀವನವನ್ನು ಅನುಭವಿಸುವ ಬದಲು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಜಮಾಮಾಡಲು ಬಯಸುತ್ತಾರೆ. ಭದ್ರತೆಗೆ ಹೆಚ್ಚು ಆಧ್ಯತೆ ನೀಡುವ ಇವರು ಹಣವಿದ್ದರೆ ಭದ್ರತೆ ಎಂದು ಭಾವಿಸುತ್ತಾರೆ. ಹಣವನ್ನು ಗಳಿಸುವುದರಲ್ಲಿ ಅತ್ಯಂತ ದುರಾಸೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ವೃಷಭ ರಾಶಿ

ವೃಷಭ ರಾಶಿ

ನಾವು ಸುರಕ್ಷಿತವಾಗಿರಲು ಹಣದ ಅಗತ್ಯವಿದೆ ಎಂದು ಇವರು ಭಯಸುತ್ತಾರೆ. ಏಕೆಂದರೆ ಹಣವು ಇವರಿಗೆ ಹೆಚ್ಚಿನ ವಿಶ್ವಾಸ ನೀಡುತ್ತದೆ. ಇವರು ಯಾವುದೇ ಅನಿರೀಕ್ಷಿತ ಹಣಗಳ ಬಗ್ಗೆ ಚಿಂತನೆ ನಡೆಸುವುದಿಲ್ಲ. ಇವರು ಹಣವನ್ನು ಖರ್ಚುಮಾಡುವ ಬದಲು ಉಳಿತಾಯ ಮಾಡುವುದಕ್ಕೆ ಬಯಸುತ್ತಾರೆ. ಹಾಗಂತ ಇವರು ಉದಾರಗುಣವನ್ನು ಹೊಂದಿಲ್ಲ ಎಂದರ್ಥವಲ್ಲ. ವ್ಯಕ್ತಿಗೆ ಸಮಸ್ಯೆ ಇದ್ದಾಗ ಸಹಾಯ ಮಾಡಲು ಇವರು ಎಂದಿಗೂ ನಿರಾಕರಿಸುವುದಿಲ್ಲ. ಬಹಳ ಬುದ್ಧಿವಂತರಾದ ಇವರು ತಮ್ಮ ಪ್ರೀತಿ ಪಾತ್ರರಿಂದ ಸದಾ ಹಣವನ್ನು ಎರವಲು ಪಡೆದುಕೊಳ್ಳುತ್ತಿರುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ರಾಜನಂತೆ ಇರಲು ಬಯಸುವ ಇವರು ಐಷಾರಾಮಿ ಜೀವನವನ್ನು ಕಳೆಯಲು ಬಯಸುತ್ತಾರೆ. ಇವರು ಸದಾ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ. ಅವು ಬಟ್ಟೆ, ಕಾರು, ಆಭರಣ, ಮನೆಗಳಾಗಿರುತ್ತವೆ. ಇವುಗಳಲ್ಲಿಯೇ ಅತಿಯಾದ ದುರಾಸೆಯನ್ನು ಹೊಂದಿರುತ್ತಾರೆ ಎಂದು ಹೇಳಬಹುದು. ಉತ್ತಮ ಉದ್ಯಮಿಯಾಗಲು ಏನುಮಾಡಬೇಕು? ಹೇಗೆ ಹಣವನ್ನು ಮಾಡಬಹುದು ಎನ್ನುವುದನ್ನು ಇವರು ತಿಳಿದಿದ್ದಾರೆ. ಆದರೆ ಇತರರಿಗೆ ಸಹಾಯ ಮಾಡುವುದು ಎಂದರೆ ಇವರಿಗೆ ಬೇಸರದ ಸಂಗತಿಯಾಗಿರುತ್ತದೆ.

ಮಿಥುನ ರಾಶಿ

ಮಿಥುನ ರಾಶಿ

ದುರಾಸೆಯನ್ನು ಹೊಂದಿರುವ ರಾಶಿಚಕ್ರದಲ್ಲಿ ಈ ರಾಶಿಚಕ್ರವೂ ಸಹ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಉತ್ತಮ ವ್ಯವಹಾರ ಹಾಗೂ ವ್ಯಾಪಾರ ಕೌಶಲ್ಯವನ್ನು ಇವರು ಪಡೆದುಕೊಂಡಿರುತ್ತಾರೆ. ಇವರು ವ್ಯಾಪಾರ ಮಾಡುವ ಉತ್ಪನ್ನ ಅಗ್ಗದ ಉತ್ಪನ್ನವಾಗಿರಬಹುದು ಆದರೆ ಸೂಕ್ತ ರೀತಿಯಲ್ಲಿಯೇ ವ್ಯಾಪಾರ ನಡೆಸುತ್ತಾರೆ.ಆದರೆ ಇನ್ನೊಂದೆಡೆ ಇವರಿಗೆ ಹೇಗೆ ಮತ್ತು ಎಲ್ಲಿ ವ್ಯಾಪಾರ ನಡೆಸಬೇಕು ಎನ್ನುವುದು ತಿಳಿಯುವುದಿಲ್ಲ. ಪರಿಣಾಮಗಳ ಬಗ್ಗೆ ವಿರಳವಾಗಿ ಯೋಚಿಸುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇವರು ತಮ್ಮ ಶ್ರಮದಾಯಕ ಕೆಲಸಗಳಿಗೆ ಹಣವನ್ನು ವ್ಯಯಿಸಲು ಇಷ್ಟಪಡುವುದಿಲ್ಲ. ಇವರಿಗೆ ವಿಭಿನ್ನವಾದ ಭಾವೋದ್ರೇಕಗಳಿರುತ್ತವೆ. ಇವರು ತಮ್ಮ ಗುರಿಯ ಕಡೆಗೆ ನಿರ್ದೇಶನವನ್ನು ಪಡೆದುಕೊಳ್ಳುತ್ತಾರೆ. ಯಾರಲ್ಲಾದರೂ ಹಣದ ಸಾಲ ಕೇಳಿದಾಗ ಅವರು ನಿರಾಕರಿಸಿದರೆ ಅದನ್ನು ದೀರ್ಘಾವಧಿಯವರೆಗೂ ನೆನಪಿನಲ್ಲಿಟ್ಟು ಕೊಳ್ಳುತ್ತಾರೆ. ಮುಂದೊಂದು ದಿನ ಆ ವ್ಯಕ್ತಿ ಇವರಲ್ಲಿ ಹಣದ ಸಾಲ ಕೇಳಿದರೆ ಕೊಡುವುದಿಲ್ಲ. ಬದಲಿಗೆ ಹಿಂದಿನ ಸನ್ನಿವೇಶಗಳನ್ನು ನೆನಪಿಸಿಕೊಡುತ್ತಾರೆ.

ತುಲಾ ರಾಶಿ

ತುಲಾ ರಾಶಿ

ಇವರಿಗೆ ಆರಾಮದಾಯಕ ಬದುಕನ್ನು ಸಾಗಿಸಲು ಸಾಕಷ್ಟು ಹಣಬೇಕಾಗುವುದು. ಐಷಾರಾಮಿ ಮತ್ತು ಸೌಕರ್ಯದ ಜೀವನವನ್ನು ಮೆಚ್ಚುವ ವ್ಯಕ್ತಿಯೂ ಹೌದು. ಜೀವನವನ್ನು ಸುಲಭ ಹಾಗೂ ಆಹ್ಲಾದಿಸಲು ಅನುಕೂಲ ಮಾಡುವಂತಹ ವಿಷಯಗಳಿಗೆ ಸಾಕಷ್ಟು ಖರ್ಚುಮಾಡುತ್ತಾರೆ. ಹಣದ ಗಳಿಕೆಯಲ್ಲಿ ದುರಾಸೆಯನ್ನು ಹೊಂದಿರುತ್ತಾರೆ. ಜೊತೆಗೆ ಉತ್ತಮ ಆರಾಮದಾಯಕ ಜೀವನವನ್ನು ಸಹ ಬಯಸುತ್ತಾರೆ.

ಮೇಷ ರಾಶಿ

ಮೇಷ ರಾಶಿ

ಈ ರಾಶಿಯ ವ್ಯಕ್ತಿಗಳು ಯಾವಾಗಲೂ ಎಲ್ಲವನ್ನೂ ಉತ್ತಮ ಎಂದೇ ಬಯಸುತ್ತಾರೆ. ಇವರು ಜೀವನದಲ್ಲಿ ಬಯಸಿದ ವಸ್ತುಗಳೆಲ್ಲವನ್ನು ಖರೀದಿಸಲು ಪ್ರಯತ್ನಿಸಿದರೆ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಸಾಲ ಪಡೆಯಲು ಬೇರೆಯವರ ಮುಂದೆ ಕೈಚಾಚಬೇಕಾಗುತ್ತದೆ. ಉಡುಗೊರೆಯನ್ನು ನೀಡುವ ವಿಚಾರಕ್ಕೆ ಬಂದಾಗ ಇವರು ಅತ್ಯಂತ ಉದಾರ ವ್ಯಕ್ತಿಗಳಾಗಿರುತ್ತಾರೆ.

English summary

Ranking Of The Most Greedy Signs Of The Zodiac

Zodiac signs predict almost everything and understanding about an individual gets no easy than this! In today's article, we bring to you the details of the 9 zodiac signs that are listed as being the most greedy signs. These zodiac signs are ranked according to the individuals being the most greedy ones and it is quite interesting to find out about where we are ranked in the list of being greedy! Check it out...
X
Desktop Bottom Promotion