For Quick Alerts
ALLOW NOTIFICATIONS  
For Daily Alerts

ಗರ್ಭಪಾತ ಮಾಡಿಸದೆ ಕುರೂಪಿ ಮಗುವಿಗೆ ಜನ್ಮ ನೀಡಿದ ತಾಯಿ!

|

ಮದುವೆಯಾದ ಪ್ರತಿಯೊಂದು ದಂಪತಿಯು ಮಗುವಿಗಾಗಿ ಆಸೆ ಪಡುವರು. ಮಗುವಿನ ಬಯಕೆಯಲ್ಲಿ ಇರುವಂತಹ ದಂಪತಿಯು ಇದಕ್ಕಾಗಿ ಬೇಕಾದ ಎಲ್ಲಾ ವ್ಯವಸ್ಥೆ ಮಾಡುವರು. ಒಮ್ಮೆ ಮಹಿಳೆ ಗರ್ಭಿಣಿಯಾದ ಬಳಿಕ ಆಕೆ ಮಗುವಿನ ಬಗ್ಗೆ ಹಲವಾರು ಕನಸು ಕಾಣಲು ಆರಂಭಿಸುವಳು. ಈ ಕನಸು ಆಕೆಯ ಬದುಕನ್ನೇ ಬದಲಾಯಿಸುವುದು ಎನ್ನುವುದು ಆಕೆಯ ನಂಬಿಕೆಯಾಗಿರುವುದು. ಆದರೆ ಗರ್ಭ ಧರಿಸಿದ ಬಳಿಕ ಹಲವಾರು ರೀತಿಯ ಪರೀಕ್ಷೆಗಳನ್ನು ಮಾಡಿಕೊಳ್ಳಬೇಕು.

deformed baby after birth

ಯಾಕೆಂದರೆ ಆರೋಗ್ಯವಂತ ಮಗು ಕೂಡ ಮೊದಲ ಆದ್ಯತೆಯಾಗಿರುವುದು. ಆದರೆ ಕೆಲವೊಂದು ವೈದ್ಯಕೀಯ ತಪ್ಪು ಮತ್ತು ಔಷಧಿಗಳಿಂದ ಭ್ರೂಣದಲ್ಲಿರುವ ಶಿಶುವಿನಲ್ಲಿ ಕೆಲವೊಂದು ವೈಕಲ್ಯಗಳು ಕಂಡುಬರಬಹುದು. ಈ ಸಮಯದಲ್ಲಿ ಗರ್ಭಪಾತ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡುವರು. ಇದು ಆ ತಾಯಿ ಹೃದಯಕ್ಕೆ ಖಂಡಿತವಾಗಿಯೂ ಸಹಿಸಿಕೊಳ್ಳಲು ಆಗದ ನೋವು. ಇಂತಹ ಆಘಾತವನ್ನು ಕೆಲವರು ಸಹಿಸಿಕೊಂಡು ಗಟ್ಟಿ ಮನಸ್ಸು ಮಾಡಿ ಗರ್ಭಪಾತ ಮಾಡಿಕೊಳ್ಳುವರು. ಭ್ರೂಣದಲ್ಲಿರುವ ಶಿಶುವಿನ ಕುರೂಪತೆ ಇದೆ ಮತ್ತು ಗರ್ಭಪಾತ ಮಾಡಿಕೊಳ್ಳಬೇಕು ಎಂದು ವೈದ್ಯರು ಹೇಳಿದ ವೇಳೆ ದಂಪತಿಯು ಏನು ಮಾಡಿತು ಎಂದು ನೀವು ಈ ಲೇಖನ ಓದುತ್ತಾ ತಿಳಿಯಿರಿ.

ಮಗುವಿಗೆ ಎರಡು ಸೀಳುತುಟಿಯಿತ್ತು

ಮಗುವಿಗೆ ಎರಡು ಸೀಳುತುಟಿಯಿತ್ತು

24 ವಾರಗಳ ಭ್ರೂಣದಲ್ಲಿ ಎರಡು ಸೀಳುತುಟಿ ಮತ್ತು ತಟ್ಟೆ ಇದೆ ಎಂದು ವೈದ್ಯರು ದಂಪತಿಗೆ ತಿಳಿಸಿದೆ. ಮಗುವಿಗೆ ವಿರೂಪತೆಯಿಂದಾಗಿ ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ವೈದ್ಯರು ದಂಪತಿಗೆ ಸೂಚಿಸಿದ್ದರು.

Most Read: ಆಘಾತಕಾರಿ! ಹೇರ್ ಡೈ ಬಳಸಿ ತಲೆ ಊದಿಸಿಕೊಂಡ ಮಹಿಳೆ

ಮಗುವನ್ನು ಉಳಿಸಿಕೊಳ್ಳಲು ಬಯಸಿದ್ದೀರಾ ಎಂದು ವೈದ್ಯರು ಕೇಳಿದರು

ಮಗುವನ್ನು ಉಳಿಸಿಕೊಳ್ಳಲು ಬಯಸಿದ್ದೀರಾ ಎಂದು ವೈದ್ಯರು ಕೇಳಿದರು

ಗರ್ಭದಲ್ಲಿರುವಂತಹ ಮಗುವಿಗೆ ಕುರೂಪತೆ ಇದೆ ಎಂದ ಮೇಲೆ ಯಾರಾದರೂ ಗರ್ಭಪಾತ ಮಾಡಿಕೊಳ್ಳಲು ಮುಂದಾಗುವರು. ಈ ವೇಳೆ ವೈದ್ಯರು ನೀವು ಗರ್ಭವನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸುತ್ತೀರಾ ಎಂದು ಕೇಳಿದರು. ಅಲ್ಟ್ರಾಸೌಂಡ್ ನ ಫೋಟೊದ ಪ್ರಕಾರ ಮಗು ತುಂಬಾ ಸುಂದರವಾಗಿತ್ತು ಮತ್ತು ಈ ಫೋಟೊವನ್ನು ಕೂಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ನಿರ್ಧಾರ ಮಾಡಿದರು.

ಮಗು ಜನಿಸಿತು

ಮಗು ಜನಿಸಿತು

ಹುಟ್ಟಿದ ಮಗುವಿಗೆ ಬ್ರೂಡಿ ಎಂದು ಹೆಸರಿಡಲಾಯಿತು. ತನ್ನ ಮಗುವಿನ ಫೋಟೊವನ್ನು ಸಾರಾ ಹೆಲ್ಲೆರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಇದರಿಂದ ವಿಶ್ವವೇ ಮಗುವಿನ ಸ್ಥಿತಿಯ ಬಗ್ಗೆ ತಿಳಿದುಕೊಂಡಿತು. ಮಗುವಿಗೆ ಕುರೂಪತೆ ಇದ್ದರೂ ಗರ್ಭಪಾತ ಮಾಡಿಕೊಳ್ಳಬಾರದು ಮತ್ತು ಮಗುವಿಗೆ ತನ್ನ ಜೀವನ ಸಾಗಿಸುವಂತಹ ಅವಕಾಶ ನೀಡಬೇಕು ಎಂದು ಆಕೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ವಿಶ್ವದಲ್ಲಿ ಒಳ್ಳೆಯ ಜನರು ಕೂಡ ಇದ್ದಾರೆಂದು ಸಾರಾ ನಂಬಿದ್ದಾರೆ

ವಿಶ್ವದಲ್ಲಿ ಒಳ್ಳೆಯ ಜನರು ಕೂಡ ಇದ್ದಾರೆಂದು ಸಾರಾ ನಂಬಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಬ್ರೂಡಿಯ ಫೋಟೊವನ್ನು ಹಂಚಿಕೊಂಡ ವೇಳೆ ಸ್ನೇಹಿತರು, ಕುಟುಂಬದವರು ಮತ್ತು ಇತರರಿಂದ ಬಂದ ಪ್ರತಿಕ್ರಿಯೆಯಿಂದ ಆಕೆ ತುಂಬಾ ಸಂತೋಷಗೊಂಡರು.

ಆಕೆಯ ಇಚ್ಛೆಯು ಮತ್ತಷ್ಟು ದೃಢವಾಯಿತು

ಆಕೆಯ ಇಚ್ಛೆಯು ಮತ್ತಷ್ಟು ದೃಢವಾಯಿತು

ಕುರೂಪತೆ ಬಗ್ಗೆ ಮತ್ತೊಂದು ಘಟನೆಯು ಆಕೆಯ ಇಚ್ಛಾಶಕ್ತಿಯನ್ನು ಮತ್ತಷ್ಟು ಬಲಗೊಳಿಸಿತು. ಅದೇನೆಂದರೆ ಒಂದು ಸಲ ಆಕೆ ತನ್ನ ಗೆಳತಿ ಜತೆಗೆ ಮಗುವನ್ನು ಹಿಡಿದುಕೊಂಡು ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದ ವೇಳೆ ಅಲ್ಲೊಬ್ಬ ಅಜ್ಞಾತ ವ್ಯಕ್ತಿಯು ಒಂದು ಸಾವಿರ ಡಾಲರ್ ಚೆಕ್ ನ್ನು ಆಕೆಗೆ ನೀಡಿದ್ದ. ಸುಂದರ ಮಗುವಿಗಾಗಿ ಈ ಚೆಕ್ ಎಂದು ಅದರಲ್ಲಿ ಬರೆಯಲಾಗಿತ್ತು.

Most Read: ಡಿಸೆಂಬರ್ ತಿಂಗಳ ಸಂಖ್ಯಾಶಾಸ್ತ್ರದ ಕಂಪ್ಲೀಟ್ ಡಿಟೇಲ್ಸ್: ನಿಮ್ಮ ಭವಿಷ್ಯ ಹೇಗಿರಲಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ

ಮಗುವಿಗೆ ಇನ್ನು ಕೆಲವು ಶಸ್ತ್ರಚಿಕಿತ್ಸೆಗಳು ಬೇಕಾಗಿದೆ

ಮಗುವಿಗೆ ಇನ್ನು ಕೆಲವು ಶಸ್ತ್ರಚಿಕಿತ್ಸೆಗಳು ಬೇಕಾಗಿದೆ

ಬ್ರೂಡಿಯ ದುಬಾರಿ ಮೂರು ಶಸ್ತ್ರಚಿಕಿತ್ಸೆಗಾಗಿ ಹಣ ವೆಚ್ಚ ಮಾಡಿದ್ದೇನೆ ಮತ್ತು ಆತನಿಗೆ ಇನ್ನು 8-9 ಶಸ್ತ್ರಚಿಕಿತ್ಸೆ ಮಾಡಿದರೆ ಆಗ ಆರೋಗ್ಯವಾಗಿ ಇರಬಹುದು ಎಂದು ಆಕೆ ಹೇಳಿದ್ದಾಳೆ. ಬ್ರೂಡಿಗೆ ಇನ್ನು ಹೆಚ್ಚಿನ ಶಕ್ತಿ ನೀಡಲಿ ಮತ್ತು ಆತನ ಬೇರೆ ಮಕ್ಕಳಂತೆ ಆಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುವ. ಸಣ್ಣ ಮಗುವಿಗೆ ನಾವು ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಗಳು ಇದ್ದರೆ ಅದನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.

English summary

Parents Refused To Abort ‘Deformed’ Baby

When Sara Heller was 24 weeks pregnant, during an ultrasound scan, it was revealed that Brody had a cleft lip and palate. The doctors asked Heller and her partner Chris Eidam, of Omaha, Nebraska, if they wanted to abort the baby due to the deformity. But the couple refused and looks like they did the right thing as now the baby looks beautiful.
Story first published: Saturday, December 8, 2018, 13:39 [IST]
X
Desktop Bottom Promotion